translationCore-Create-BCS_.../translate/writing-intro/01.md

12 KiB
Raw Permalink Blame History

###ವಿವರಣೆಗಳು

ಬರವಣಿಗೆಗಳಲ್ಲಿ ಅನೇಕ ವಿಧಗಳಿವೆ ಮತ್ತು ಪ್ರತಿಯೊಂದು ವಿಧದಲ್ಲೂ ಅದರದೇ ಆದ ಉದ್ದೇಶವಿರುತ್ತದೆ. ಬರವಣಿಗೆಗೆ ವಿವಿಧ ಉದ್ದೇಶವಿರುವುದರಿಂದ, ವಿವಿಧ ರೀತಿಯ ಬರವಣಿಗೆಗಳನ್ನು ವಿವಿಧರೀತಿಯಲ್ಲಿ ಸಂಯೋಜಿಸಲಾಗುತ್ತದೆ. ಅವುಗಳಲ್ಲಿ ವಿವಿಧ ಕ್ರಿಯಾಪದಗಳು ವಿವಿಧ ರೀತಿಯ ವಾಕ್ಯಗಳು, ವಿವಿಧ ಜನರು ಮತ್ತು ವಸ್ತುಗಳ ಬಗ್ಗೆ ವಿವಿಧ ರೀತಿಯಲ್ಲಿ ಬರವಣಿಗೆಗಳು ಆಗಿವೆ. ಇಂತಹ ವ್ಯತ್ಯಾಸಗಳು ವಿಭಿನ್ನತೆಗಳು ಓದುಗರಿಗೆ ವಾಕ್ಯಭಾಗಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಹಕಾರಿಯಾಗಿರುತ್ತದೆ ಮತ್ತು ಲೇಖಕರ ಮೂಲಉದ್ದೇಶವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯಕವಾಗಿವೆ.

ಬರವಣಿಗೆಯ ವಿಧಗಳು.

ಎಲ್ಲಾ ಭಾಷೆಗಳಲ್ಲಿ ಕಂಡುಬರುವ ನಾಲ್ಕು ಪ್ರಮುಖ ಮೂಲಭೂತ ಬರವಣಿಗೆಯ ವಿಧಗಳು. ಪ್ರತಿಯೊಂದು ಬರವಣಿಗೆಯಲ್ಲಿ ಅದರದೇ ಆದ ವಿಭಿನ್ನ ಉದ್ದೇಶಗಳಿವೆ.

  • ಕಥನ ರೂಪ- ಅಥವಾ (ನಿರೂಪಣೆ) ಸಾಮ್ಯಗಳ ಕಥೆ ರೂಪ ನಡೆದ ಘಟನೆ ಅಥವಾ ವಿಷಯವನ್ನು ಇರುವ ವಿಷಯವನ್ನು ಕಥೆಯ ರೂಪದಲ್ಲಿ ಹೇಳುವುದು
  • ವಿವರಣೆಯ ರೂಪ ಇರುವ ವಿಷಯವನ್ನು ವಿವರಿಸಿ ಹೇಳುವುದು ಇಲ್ಲವೇ ತತ್ವಗಳನ್ನು ಬೋಧಿಸುವುದು.
  • Procedural - ಕ್ರಮಾನುಸಾರವಾಗಿ ವಿವರಿಸುವುದು ಯಾವ ವಿಷಯವನ್ನು ಹೇಗೆ ಕ್ರಮವಾಗಿ ಮಾಡಬೇಕು ಎಂದು ವಿವರಿಸುವುದು.
  • ವಿವಾದಾತ್ಮಕ ಮಾದರಿ ಯಾವುದಾದರೂ ಒಂದು ವಿಷಯದ ಬಗ್ಗೆ ಚರ್ಚೆಮಾಡಿ ಅದರಂತೆ ಮಾಡುವಂತೆ ಹೇಳುವುದು.

** ಏಕೆಂದರೆ ಇದೊಂದು ಭಾಷಾಂತರ ವಿಷಯವಾದುದರಿಂದ.

ಪ್ರತಿಯೊಂದು ಭಾಷೆಯಲ್ಲೂ ಅದರದೇ ಆದ ವ್ಯವಸ್ಥೆ ವಿವಿಧ ರೀತಿಯ ಬರವಣಿಗೆಗಳಲ್ಲಿ ಇರುತ್ತದೆ. ಭಾಷಾಂತರಗಾರನಿಗೆ ತಾನು ಯಾವ ರೀತಿ ಬರವಣಿಗೆಯನ್ನು ಭಾಷಾಂತರಿಸುತ್ತಿದ್ದೇನೆ ಎಂಬುದು ತಿಳಿದಿರಬೇಕು. ಮೂಲ ಭಾಷೆಯಲ್ಲಿ ಇವುಗಳನ್ನು ಯಾವ ಕ್ರಮದಲ್ಲಿ ಇಡಲಾಗಿದೆ ಮತ್ತು ತನ್ನ ಭಾಷೆಯಲ್ಲಿ ತಾನು ಭಾಷಾಂತರ ಮಾಡುತ್ತಿರುವ ಭಾಷೆಯಲ್ಲಿ ಯಾವ ಕ್ರಮದಲ್ಲಿ ಬಳಸಲಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕು. ಭಾಷಾಂತರಗಾರನು ತನ್ನ ಜನರು ತಾನು ಮಾಡಿದ ಭಾಷಾಂತರವನ್ನು ಮೂಲವಾಕ್ಯಭಾಗಕ್ಕೆಒಂದು ಒಳ್ಳೆಯ ರೂಪವನ್ನು ಕೊಟ್ಟು ಓದುಗರು ಅದನ್ನು ಅರ್ಥಮಾಡಿಕೊಳ್ಳುವಂತೆ ಎಚ್ಚರವಹಿಸಿ ಮಾಡಬೇಕು. ಪ್ರತಿಯೊಂದು ಭಾಷಾಂತರದಲ್ಲೂ ಬಳಸುವ ಪದಗಳು, ವಾಕ್ಯಗಳು, ವಾಕ್ಯಬಂಧಗಳು,ಪ್ಯಾರಾಗಳು ಓದುಗರಿಗೆ ಅರ್ಥವಾಗುವ ರೀತಿಯಲ್ಲಿ ಸಂಯೋಜಿಸಿ ಇಡಬೇಕು.

ಬರವಣಿಗೆಯ ಶೈಲಿ.

ಈ ಕೆಳಗೆ ಕೊಟ್ಟಿರುವ ಬರವಣಿಗೆಯ ಶೈಲಿಯು ಮೇಲೆ ಕೊಟ್ಟಿರುವ ನಾಲ್ಕು ಬರವಣಿಗೆಯ ವಿಧಗಳೊಂದಿಗೆ ಸೇರಿಸಿ ಹೇಳಿದೆ. ಈ ಬರವಣಿಗೆಯ ಶೈಲಿಯು ಆಗಾಗ್ಗೆ ಭಾಷಾಂತರದಲ್ಲಿ ಸವಾಲಾಗಿ ಬರುತ್ತವೆ.

  • ಪದ್ಯ - - ಈ ಶೈಲಿಯಲ್ಲಿ ವಿಷಯವನ್ನು ಸುಂದರವಾಗಿ ಮತ್ತು ಸೊಗಸಾಗಿ ಅರ್ಥಪೂರ್ಣವಾಗಿ ಭಾವನೆಗಳನ್ನು ವ್ಯಕ್ತಪಡಿಸುತ್ತದೆ.
  • ಜ್ಞಾನೋಕ್ತಿಗಳು - ಜ್ಞಾನವನ್ನು ಅಥವಾ ಸತ್ಯದರ್ಶನದ ಬೋಧನೆಯನ್ನು ಸಂಕ್ಷಿಪ್ತರೀತಿಯಲ್ಲಿ ಹೇಳುತ್ತದೆ.
  • ಸಾಂಕೇತಿಕ ಭಾಷೆ - ಸಾಂಕೇತಿಕ ಭಾಷೆ ಎಂಬುದು ಕೆಲವು ಘಟನೆಗಳು ಮತ್ತು ವಸ್ತುಗಳನ್ನು ಪ್ರತಿನಿಧಿಸುತ್ತದೆ.
  • ಸಾಂಕೇತಿಕ ಪ್ರವಾದನೆ - ಸಾಂಕೇತಿಕ ಪ್ರವಾದನೆ ಎಂಬುದು ಭವಿಷ್ಯದಲ್ಲಿ ಏನು ನಡೆಯುತ್ತದೆ ಎಂಬುದನ್ನು ತಿಳಿಸುತ್ತದೆ.
  • ಕಲ್ಪಿತ ಸನ್ನಿವೇಶಗಳು - ನಿಜವಾದ ವಿಷಯದ ಬಗ್ಗೆ ಹೇಳುವಾಗ ನಡೆದದ್ದೇನು ಎಂದು ಮೊದಲೇ ಕಲ್ಪಿಸಿ ಹೇಳುವುದು ಇಲ್ಲವೇ ನಿಜವಾಗಿ ನಡೆಯದೆ ಇದ್ದರೂ ನಡೆದಂತೆ ಊಹಿಸಿ ಭಾವನೆಗಳನ್ನು ವ್ಯಕ್ತಪಡಿಸುವುದು.

ಸಂಭಾಷಣಾ ಲಕ್ಷಣಗಳು / ವ್ಯಾಖ್ಯಾನ ಲಕ್ಷಣಗಳು.

ಭಾಷೆಯೊಂದರಲ್ಲಿ ವಿವಿಧ ರೀತಿಯ ಬರವಣಿಗೆಗಳ ನಡುವಿನ ವ್ಯತ್ಯಾಸಗಳನ್ನು ಸಂಭಾಷಣಾ ಮಾದರಿಯ ಲಕ್ಷಣಗಳನ್ನು ಹೊಂದಿವೆ ಎಂದು ಹೇಳಬಹುದು. ನಿರ್ದಿಷ್ಟ ರೀತಿಯ ವಾಕ್ಯಭಾಗಗಳು ಯಾವ ವಿಧದ ಸಂಭಾಷಣಾ / ಲಕ್ಷಣಗಳನ್ನು ಉಪಯೋಗಿಸಿದೆ ಅದರ ಉದ್ದೇಶವೇನು ? ಎಂದು ತಿಳಿಯಬೇಕು. ಉದಾಹರಣೆಗೆ ಕಥನಾ/ ನಿರೂಪಣಾ ರೂಪದಲ್ಲಿ ಸಂಭಾಷಣಾ ಲಕ್ಷಣಗಳು ಒಳಗೊಂಡಿರುತ್ತವೆ.

  • ಕೆಲವು ಘಟನೆಗಳ ಬಗ್ಗೆ ಅವು ನಡೆಯುವ ಮೊದಲು ಅಥವಾ ನಂತರ ನಡೆಯುವ ಘಟನೆಗಳ ಬಗ್ಗೆ ಹೇಳುವುದು.
  • ಜನರನ್ನು ಕತೆಗಳಲ್ಲಿ ಪರಿಚಯಿಸುವುದು.
  • ಹೊಸ ಘಟನೆಗಳನ್ನು ಕತೆಗಳ ಮಧ್ಯದಲ್ಲಿ ಪರಿಚಯಿಸುವುದು.
  • ಸಂಭಾಷಣೆಗಳನ್ನು ಮತ್ತು ಉದ್ಧರಣಾ ವಾಕ್ಯಗಳನ್ನು ಸೇರಿಸುವುದು.
  • ಜನರನ್ನು ಮತ್ತು ವಸ್ತುಗಳನ್ನು ನಾಮಪದ ಮತ್ತು ಸರ್ವನಾಮಗಳನ್ನು ಬಳಸಿ ಪ್ರಯೋಗಿಸುವುದು.

ವಿವಿಧ ಭಾಷೆಗಳಲ್ಲಿ ವಿವಿಧ ರೀತಿಯಲ್ಲಿ ಇಂತಹ ಸಂಭಾಷಣಾ ಲಕ್ಷಣಗಳನ್ನು ಬಳಸಲಾಗುತ್ತದೆ. ಪ್ರತಿಯೊಬ್ಬ ಭಾಷಾಂತರಗಾರರು ಈ ಎಲ್ಲಾ ಅವಶ್ಯಕ ಲಕ್ಷಣಗಳನ್ನು ಅಧ್ಯಯನ ಮಾಡಿ ಪ್ರತಿಯೊಂದು ಅಂಶದ ಪರಿಣಾಮಗಳು ಯಾವುವು ? ಮತ್ತು ಅವರು ಮಾಡಿದ ಭಾಷಾಂತರ ತಮ್ಮ ಓದುಗರಿಗೆ ಸೂಕ್ತ, ಸಹಜ ಮತ್ತು ಸ್ಪಷ್ಟವಾಗಿ ಅರ್ಥವಾಗುತ್ತದೆಯೇ ? ಎಂದು ಯೋಚಿಸಿ ಭಾಷಾಂತರ ಮಾಡಬೇಕು. ಇತರ ರೀತಿಯ ಬರವಣಿಗೆಗಳಲ್ಲಿನ ಸಂಭಾಷಣಾ / ವ್ಯಾಖ್ಯಾನ ಲಕ್ಷಣಗಳು

ನಿರ್ದಿಷ್ಟ ಸಂಭಾಷಣಾ / ವ್ಯಾಖ್ಯಾನ ಲಕ್ಷಣಗಳು

  1. ಹೊಸ ಘಟನೆಗಳ ಪರಿಚಯ ಪದಗುಚ್ಛಗಳು ಉದಾಹರಣೆಗೆ "ಒಂದು ದಿನ " ಅಥವಾ " ಇದು ಹೀಗೆ ನಡೆದುಬಂದ ಮೇಲೆ " ಅಥವಾ " ಕೆಲವೊಮ್ಮೆ ಇದಾದ ಮೇಲೆ " ಈ ಎಲ್ಲವೂ ಒಂದು ಘಟನೆಯ ಬಗ್ಗೆ ಹೇಳಲಾಗುತ್ತದೆ ಎಂಬುದನ್ನು ಸೂಚಿಸುತ್ತದೆ.
  2. ಹೊಸ ಮತ್ತು ಹಳೆಯ ಪಾತ್ರಧಾರಿಗಳ ಪರಿಚಯ - ಅನೇಕ ಭಾಷೆಗಳಲ್ಲಿ ಅನೇಕ ಪಾತ್ರಗಳನ್ನು, ಹೊಸ ಮತ್ತು ಹಳೆಯ ಜನರನ್ನು ಪರಿಚಯಿಸುತ್ತದೆ.
  3. ಮಾಹಿತಿ ಹಿನ್ನಲೆ - ಒಬ್ಬ ಲೇಖಕ ಮಾಹಿತಿಯ ಹಿನ್ನಲೆಯನ್ನು ಅನೇಕ ಕಾರಣಗಳಿಗೆ ಉಪಯೋಗಿಸಿಕೊಳ್ಳುತ್ತಾನೆ. 1) ಕತೆಯಲ್ಲಿ ಆಸಕ್ತಿಯನ್ನು ಹೆಚ್ಚಿಸಲು., 2) ಕತೆಯನ್ನು ಅರ್ಥಮಾಡಿಕೊಳ್ಳಲು ಸುಲಭವಾಗುವಂತೆ ಸಹಾಯಮಾಡುವ ಮುಖ್ಯಮಾಹಿತಿಗಳನ್ನು ಒದಗಿಸಲು 3) ಕತೆ ಮುಖ್ಯವಾದುದು ಎಂದು ವಿವರಿಸಲು ಬಳಸುತ್ತಾರೆ.
  4. -ಸರ್ವನಾಮಗಳನ್ನು ಯಾವಾಗ ಉಪಯೋಗಿಸಬೇಕು ಭಾಷೆಗಳಲ್ಲಿ ವಿವಿಧ ವಿನ್ಯಾಸಗಳು ಆಗಿಂದಾಗ್ಗೆ ಸರ್ವನಾಮಗಳನ್ನು ಹೇಗೆ ಉಪಯೋಗಿಸಬೇಕು ಎಂಬುದನ್ನು ತಿಳಿಸುತ್ತದೆ. ತಿಳಿಸಿದ ವಿನ್ಯಾಸವನ್ನು ಬಳಸದಿದ್ದರೆ ತಪ್ಪು ಅರ್ಥದ ಮೂಲಕ ವಾಕ್ಯವು ವಿಭಿನ್ನ ರೀತಿಯಲ್ಲಿ ಅರ್ಥ ನೀಡಬಹುದು.
  5. -. ಕತೆಯ ಮುಕ್ತಾಯ - ಕತೆಗಳು ವಿವಿಧ ರೀತಿಯ ಮಾಹಿತಿಗಳೊಂದಿಗೆ ಮುಕ್ತಾಯವಾಗಬಹುದು. ವಿವಿಧ ಭಾಷೆಯಲ್ಲಿ ವಿವಿಧ ರೀತಿಯ ಮಾಹಿತಿಗಳು ಕತೆಗಳೊಂದಿಗೆ ಸಂಬಂಧಿಸಿರುತ್ತದೆ
  6. ಸಂಯೋಜಿತ ಪದಗಳು ಎಲ್ಲಾ ಭಾಷೆಯಲ್ಲೂ ಸಂಯೋಜಿತ ಪದಗಳಿರುತ್ತವೆ. ಉದಾ :("and,ಮತ್ತು" "but,ಆದರೆ " or "then"ಆಮೇಲೆ / ನಂತರ).