translationCore-Create-BCS_.../translate/writing-apocalypticwriting/01.md

20 KiB
Raw Permalink Blame History

ವಿವರಣೆಗಳು

ಸಾಂಕೇತಿಕವಾದ ಪ್ರವಾದನೆಗಳು.ದೇವರು ಪ್ರವಾದಿಗಳಿಗೆ ನೀಡಿದ್ದ ಸಂದೇಶವಾಗಿದ್ದು. ಪ್ರವಾದಿಗಳು ಅದನ್ನು ಜನರಿಗೆ ತಿಳಿಸುತ್ತಿದ್ದರು. ಈ ಸಂದೇಶದಲ್ಲಿ ಕಾವ್ಯಪ್ರತಿಮೆಗಳು ಹಾಗೂ ಸಂಕೇತಗಳನ್ನು ಬಳಸಿ ಭವಿಷ್ಯದಲ್ಲಿ ದೇವರು ಏನು ಮಾಡುತ್ತಾನೆ ಎಂಬುದನ್ನು ತಿಳಿಸುವಂತದ್ದು.

ಇಂತಹ ಪ್ರವಾದನೆಗಳನ್ನು ಹೊಂದಿರುವ ಪ್ರಮುಖ ಪುಸ್ತಕಗಳು: ಯೆಶಾಯ, ಯೆಹೆಜ್ಕೇಲ, ದಾನಿಯೇಲ, ಜೆಕರ್ಯ ಮತ್ತು ಪ್ರಕಟಣೆಗಳು ಸಂಕ್ಷಿಪ್ತವಾದ ಸಾಂಕೇತಿಕ ಪ್ರವಾದನೆಗಳು ಇನ್ನೂ ಇತರ ಪುಸ್ತಕಗಳಲ್ಲೂ ಕಂಡುಬರುತ್ತದೆ. ದಾಹರಣೆಗೆ ಮತ್ತಾಯ 24ನೇ ಅಧ್ಯಾಯ, ಮಾರ್ಕ 13, ಮತ್ತು ಲೂಕ 21.ನೇ ಅಧ್ಯಾಯಗಳಲ್ಲಿ ಕಂಡುಬರುತ್ತದೆ.

ಸತ್ಯವೇದದಲ್ಲಿ ದೇವರು ನೀಡಿದ ಪ್ರತಿಯೊಂದು ಸಂದೇಶ ಹಾಗೂ ಆ ಸಂದೇಶ ಯಾವುದು ಎಂದು ಎರಡನ್ನು ಕುರಿತು ಹೇಳಿದೆ. ದೇವರು ಇಂತಹ ಸಂದೇಶಗಳನ್ನು ನೀಡಿದಾಗ ಇಂತಹ ವಿಚಾರಗಳನ್ನು ಪವಾಡ ಪೂರ್ವಕವಾಗಿ ಕನಸ್ಸಿನಲ್ಲಿ, ವಿಶೇಷ ದೃಷ್ಟಿಯನ್ನು / ಕಾಣ್ಕೆ ನೀಡುವುದರ ಮೂಲಕ ತೋರಿಸಿಕೊಟ್ಟಿದ್ದಾನೆ. (See dream and vision for help translating "dream" and "vision.") When prophets saw these dreams and visions, they often saw images and symbols about God and heaven. ಪ್ರವಾದಿಗಳು ಇಂತಹ ದರ್ಶನಗಳನ್ನು, ಕನಸ್ಸುಗಳನ್ನು ನೋಡಿದಾಗ ದೇವರು ಮತ್ತು ಪರಲೋಕದ ಬಗ್ಗೆ ಕಾವ್ಯಪ್ರತಿಮೆ ಹಾಗೂ ಸಾಂಕೇತಿಕವಾದ ದೃಶ್ಯಗಳನ್ನು ಕಂಡಿದ್ದಾರೆ.

ಇಂತಹ ಕೆಲವು ಕಾವ್ಯಪ್ರತಿಮೆಗಳು ಯಾವುವೆಂದರೆ ಸಿಂಹಾಸನ, ಬಂಗಾರದ ದೀಪಸ್ತಂಭಗಳು, ಬಿಳಿವಸ್ತ್ರಧಾರಿ ಮತ್ತು ಬಿಳಿಕೂದಲುಳ್ಳ ಮನುಷ್ಯನ ಕಣ್ಣುಗಳು ಬೆಂಕಿಯುಂಡೆಯಂತೆ ಉರಿಯುತ್ತಾ ಕಾಲುಗಳು ತಾಮ್ರದಿಂದ ಮಾಡಿದಂತೆ ಇರುವುದು. ಇಂತಹ ಕೆಲವು ಕಾವ್ಯಪ್ರತಿಮೆಗಳನ್ನು ಒಬ್ಬ ಪ್ರವಾದಿಗಿಂತ ಹೆಚ್ಚಿನ ಪ್ರವಾದಿಗಳು ಕಂಡಿದ್ದಾರೆ. ಈ ಲೋಕದ ಬಗ್ಗೆ ಹೇಳಿರುವ ಪ್ರವಾದನೆಗಳು ಕಾವ್ಯಪ್ರತಿಮೆಗಳನ್ನು, ಸಂಕೇತಗಳನ್ನು ಒಳಗೊಂಡಿದೆ. ಉದಾಹರಣೆಗೆ ಕೆಲವು ಬಲಶಾಲಿಯಾದ ಪ್ರಾಣಿಗಳು ಸಾಮ್ರಾಜ್ಯಗಳನ್ನು ಪ್ರತಿನಿಧಿಸುತ್ತವೆ. ಕೊಂಬುಗಳು ರಾಜ್ಯಗಳನ್ನು, ರಾಜರನ್ನು ಪ್ರತಿನಿಧಿಸುತ್ತವೆ. ಡ್ರಾಗನ್ ಅಥವಾ ಹಾವು ಸೈತಾನನ್ನು ಪ್ರತಿನಿಧಿಸುತ್ತದೆ. ಸಮುದ್ರವು ದೊಡ್ಡ ಸಾಮ್ರಾಜ್ಯವನ್ನು ಮತ್ತು ವಾರಗಳು ದೀರ್ಘಕಾಲವನ್ನು,ಸಮಯವನ್ನು ಪ್ರತಿನಿಧಿಸುತ್ತದೆ.

ಇಂತಹ ಕೆಲವು ಕಾವ್ಯಪ್ರತಿಮೆಗಳನ್ನು, ಕನಸ್ಸುಗಳನ್ನು ಅನೇಕ ಪ್ರವಾದಿಗಳು ಕಂಡಿದ್ದಾರೆ. ಪ್ರವಾದಿಗಳು ಈ ಲೋಕದಲ್ಲಿರುವ ಕೆಟ್ಟ ವಿಚಾರಗಳನ್ನು, ದೇವರು ಇಂತಹವುಗಳಿಗೆ ಹೇಗೆ ತೀರ್ಪು ಕೊಡುತ್ತಾನೆ, ಯಾವ ಶಿಕ್ಷೆ ಕೊಡುತ್ತಾನೆ, ಹಾಗೆಯೇ ಈ ನೂತನ ಲೋಕದಲ್ಲಿ ದೇವರು ನೀತಿಯುಕ್ತ ರಾಜ್ಯವನ್ನು ಹೇಗೆ ಸ್ಥಾಪಿಸುತ್ತಾನೆ ಎಂಬುದನ್ನು ತಿಳಿಸುತ್ತದೆ. ನರಕ ಮತ್ತು ಸ್ವರ್ಗ (ಪರಲೋಕ) ಕ್ಕೆ ಸಂಬಂಧಿಸಿದಂತಹ ವಿಚಾರಗಳನ್ನು ದೇವರು ತಿಳಿಸುತ್ತಾನೆ. ಬಹು ಮಟ್ಟಿನ ಪ್ರವಾದನೆಗಳೆಲ್ಲವು ಸತ್ಯವೇದದಲ್ಲಿ ಪದ್ಯದ ರೂಪದಲ್ಲಿವೆ. ಕೆಲವು ಸಂಸ್ಕೃತಿಯಲ್ಲಿ ಜನರು ಪದ್ಯದ ರೂಪದಲ್ಲಿ ಏನಾದರೂ ಹೇಳಿದರೆ, ಅದು ನಿಜವಲ್ಲ ಅಥವಾ ತುಂಬಾ ಮುಖ್ಯವಾದುದು ಎಂದು ತಿಳಿಯುತ್ತಾರೆ. ಆದರೆ ಸತ್ಯವೇದದಲ್ಲಿನ ಕೆಲವು ಪ್ರವಾದನೆಗಳು ನಿಜವಾದುದು ಮತ್ತು ತುಂಬಾ ಪ್ರಮುಖವಾದುದು. ಅವು ಪದ್ಯದ ರೂಪದಲ್ಲಾದರೂ ಇರಲಿ ಗದ್ಯ ರೂಪದಲ್ಲಾದರೂ ಇರಲಿ ಅವು ಮುಖ್ಯವಾದುದು.

ಕೆಲವೊಮ್ಮೆ ಈ ಪುಸ್ತಕಗಳಲ್ಲಿ ಘಟನೆಗಳನ್ನು ಕುರಿತು ಹೇಳುವಾಗ ಭೂತಕಾಲ ಬಳಸಿದೆ, ಏಕೆಂದರೆ ಈ ಘಟನೆಗಳು ಭೂತಕಾಲದಲ್ಲಿ ಘಟಿಸಿದಂತವುಗಳು. ಕೆಲವೊಮ್ಮೆ ಈ ಭೂತಕಾಲ ಕ್ರಿಯಾಪದವನ್ನು ಭವಿಷ್ಯದಲ್ಲಿ ನಡೆಯುವ ಘಟನೆಗಳ ಬಗ್ಗೆಯೂ ಹೇಳಲು ಬಳಸಿದೆ. ಇದಕ್ಕೆ ಎರಡು ಕಾರಣಗಳಿವೆ. ಪ್ರವಾದಿಗಳು ತಾವು ತಮ್ಮ ಕನಸಿನ ಮೂಲಕ ಅಥವಾ ವಿಶೇಷ ದರ್ಶನ ಅಥವಾ ಕನಸ್ಸುಗಳ ಮೂಲಕ ಕಂಡ ವಿಚಾರಗಳ ಬಗ್ಗೆ ಹೇಳುವಾಗ ಭೂತಕಾಲವನ್ನು ಬಳಸುತ್ತಾರೆ ಏಕೆಂದರೆ ಅವರ ಕನಸ್ಸುಗಳು ಭೂತಕಾಲದಲ್ಲೇ ಕಂಡದ್ದು. ಈ ಭೂತಕಾಲದ ಪ್ರಯೋಗ ಭವಿಷ್ಯತ್ ಕಾಲದ ಬಗ್ಗೆ ಹೇಳುವಾಗ ಕೆಲವೊಮ್ಮೆ ಬಳಸುತ್ತಾರೆ. ಭವಿಷ್ಯದಲ್ಲಿ ಖಂಡಿತ ನಡೆದೇ ನಡೆಯುತ್ತದೆ ಎಂದು ಘಟನೆಗಳ ಬಗ್ಗೆ ಹೇಳುವಾಗ ಭೂತಕಾಲವನ್ನು ಬಳಸುತ್ತಾರೆ.

ಅಂದರೆ ಈ ಘಟನೆಗಳು ಖಡಾಖಂಡಿತವಾಗಿ ನಡೆದೇ ನಡೆಯುತ್ತದೆ ಮತ್ತು ಈ ಘಟನೆ ಈಗಾಗಲೇ ನಡೆದು ಹೋಗಿದೆ ಎಂದು ಅರ್ಥಬರುವಂತೆ ಬಳಸುತ್ತಾರೆ. ನಾವು ಇಂತಹ ಭೂತಕಾಲದ ಎರಡನೇ ಬಳಕೆ ಬಗ್ಗೆ "the predictive past." "ಪ್ರತಿಪಾದಕ ಭೂತಕಾಲ / ಭವಿಷ್ಯತ್ ಕಾಲ" ಎಂದು ಕರೆಯಲಾಗಿದೆ. See Predictive Past. ಕೆಲವೊಂದು ಪ್ರವಾದನೆಗಳು ಪ್ರವಾದಿಗಳು ಹೇಳಿದ ಮೇಲೆ ನಡೆದಿವೆ. ಕೆಲವೊಂದು ಈ ಪ್ರಪಂಚದ ಅಂತ್ಯಕಾಲಕ್ಕೆ ನಡೆಯುವಂತವು.

ಕಾರಣ ಇದೊಂದು ಭಾಷಾಂತರದ ವಿಷಯ.

  • ಇವುಗಳಲ್ಲಿ ಬರುವ ಕೆಲವು ಕಾವ್ಯಪ್ರತಿಮೆಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟ ಏಕೆಂದರೆ ಇಂತಹ ವಸ್ತುಗಳನ್ನು, ಪ್ರಾಣಿಗಳನ್ನು, ಸನ್ನಿವೇಶಗಳನ್ನು ನಾವು ಹಿಂದೆಂದೂ ನೋಡಿರುವುದಿಲ್ಲ.
  • ಇಂತಹ ವಸ್ತುಗಳ ಬಗ್ಗೆ ನೀಡುವ ವಿವರಣೆಗಳನ್ನೂ ನಾವು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಏಕೆಂದರೆ ನಾವು ಇವುಗಳನ್ನು ನೋಡಿರುವುದಿಲ್ಲ ಮತ್ತು ವಾಸ್ತವವಾಗಿ ಇವು ಈ ಲೋಕದಲ್ಲಿ ಇಲ್ಲದೇ ಇರುವಂತದ್ದು. ಆದುದರಿಂದ ಇವುಗಳನ್ನು ಭಾಷಾಂತರಿಸಲೂ ಸಹ ಕಷ್ಟವಾಗುತ್ತದೆ.
  • ದೇವರು ಅಥವಾ ಪ್ರವಾದಿ ಭೂತಕಾಲವನ್ನು ಬಳಸಿದರೆ ಓದುಗರಿಗೆ ಇವರು ಹೇಳುತ್ತಿರುವ ಸಂಗತಿಗಳು ಈಗಾಗಲೇ ನಡೆದವುಗಳೋ ಇಲ್ಲವೇ ಮುಂದೆ ನಡೆಯಬೇಕಾದವುಗಳೋ ಎಂಬ ಗೊಂದಲಕ್ಕೆ ಒಳಗಾಗುತ್ತಾರೆ.

ಭಾಷಾಂತರ ತತ್ವಗಳು.

  • ವಾಕ್ಯಭಾಗದಲ್ಲಿ ಬರುವ ಕಾವ್ಯಪ್ರತಿಮೆಗಳನ್ನು ಭಾಷಾಂತರಿಸಿ. ಅವುಗಳನ್ನು ವ್ಯಾಖ್ಯಾನಿಸಿ, ಅವುಗಳ ಅರ್ಥವನ್ನು ಭಾಷಾಂತರ ಮಾಡಬಾರದು. ಸತ್ಯವೇದದಲ್ಲಿ ಕೆಲವು ಕಾವ್ಯಪ್ರತಿಮೆಗಳು ಅನೇಕ ಪುಸ್ತಕಗಳಲ್ಲಿ ಸನ್ನಿವೇಶಗಳಲ್ಲಿ ಬರುತ್ತವೆ ಮತ್ತು ಇವುಗಳ ಅರ್ಥ ಒಂದೇ ರೀತಿಯಾಗಿರುತ್ತದೆ. ಅಂತಹ ವಿಷಯವನ್ನು ಸತ್ಯವೇದ ಎಲ್ಲ ಕಡೆಯಲ್ಲೂ ಒಂದೇ ರೀತಿಯಲ್ಲಿ ಬಳಸಿ ಭಾಷಾಂತರಿಸಬೇಕು.
  • ಪ್ರವಾದನೆಗಳು ಪದ್ಯರೂಪದಲ್ಲಿ ಇಲ್ಲವೇ ಗದ್ಯರೂಪದಲ್ಲಿ ಇದ್ದು ಅವು ನಿಜವಾದಲ್ಲಿ ಅಥವಾ ಪ್ರಮುಖವಲ್ಲದ ವಿಚಾರಗಳು ಎಂದು ನಿಮ್ಮ ಓದುಗರು ಅರ್ಥಮಾಡಿಕೊಳ್ಳುವ ಸನ್ನಿವೇಶಬಂದರೆ ಅದನ್ನು ನಿವಾರಿಸಲು ಅಂತಹ ಪ್ರಯೋಗಗಳನ್ನು ಕೈಬಿಡುವುದು ಒಳ್ಳೆಯದು.
  • ಪ್ರವಾದನೆಗಳಂತೆ ನಡೆಯುವ ಘಟನೆಗಳನ್ನು ಯಾವ ಕ್ರಮದಲ್ಲಿ ವಿವರಿಸಲಾಗಿದೆ ಎಂಬುದನ್ನು ನೋಡಬೇಕು, ಕೆಲವೊಮ್ಮೆ ಇದನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾಗಬಹುದು. ಆದುದರಿಂದ ಯಾವ ಯಾವ ಪುಸ್ತಕದ ಭಾಗದಲ್ಲಿ ಬರುತ್ತದೋ ಅಲ್ಲಲ್ಲೇ ಪ್ರತಿ ಪ್ರವಾದನೆಯನ್ನು ಭಾಷಾಂತರಿಸಬೇಕು.
  • ಕಾಲವನ್ನು ಸೂಚಿಸುವ ಪದಗಳನ್ನು ಬಳಸುವಾಗ ಲೇಖಕರ ಉದ್ದೇಶ ಮತ್ತು ಯಾವ ಅರ್ಥದಲ್ಲಿ ಈ ಪದಗಳನ್ನು ಬಳಸಿದ್ದಾರೆ ಎಂಬುದನ್ನು ತಿಳಿದು ಭಾಷಾಂತರಿಸಿದರೆ ಓದುಗರಿಗೆ ಸುಲಭದಲ್ಲಿ ಅರ್ಥವಾಗುತ್ತದೆ. ಓದುಗರಿಗೆ predictive past / ಪ್ರತಿಪಾದಕ ಭೂತಕಾಲ / ಭವಿಷ್ಯದ ಭೂತಕಾಲದ ಪದಗಳನ್ನು ಬಳಸುವುದು ಉತ್ತಮ.
  • ಕೆಲವೊಮ್ಮೆ ಈ ಪ್ರವಾದನೆಗಳು ಪ್ರವಾದಿಗಳು ಈ ಬಗ್ಗೆ ಬರೆದು ಮುಗಿಸಿದ ಮೇಲೆ ನೆರವೇರಿದೆ. ಕೆಲವೊಂದು ಪ್ರವಾದನೆಗಳು ಇನ್ನು ನೆರವೇರಿಲ್ಲ. ಈ ಪ್ರವಾದನೆಗಳು ನೆರವೇರಿದ ಬಗ್ಗೆ ಅಥವಾ ಅವು ಹೇಗೆ ನೆರವೇರಬಹುದು ಎಂಬುದರ ಬಗ್ಗೆ ವಿವರಿಸುವ ಅಗತ್ಯವಿಲ್ಲ.

ಸತ್ಯವೇದದಲ್ಲಿನ ಉದಾಹರಣೆಗಳು.

ಕೆಳಗೆ ನಮೂದಿಸಿರುವ ವಾಕ್ಯಭಾಗದಲ್ಲಿ ಬರುವ ಬಲಶಾಲಿಯಾದ ಮೃಗಗಳನ್ನು ಯೆಹಜ್ಕೇಲ, ದಾನಿಯೇಲ ಮತ್ತು ಯೋಹಾನರು ನೋಡಿದ ಬಗ್ಗೆ ತಿಳಿಸುತ್ತದೆ. ಈ ದರ್ಶನದಲ್ಲಿ ಕಂಡುಬಂದ ಪ್ರಾಣಿಗಳಿಗೆ ಕೂದಲು ಉಣ್ಣೆಯಂತೆ ಬೆಳ್ಳಗೂ, ಜಲಪಾತದಂತಹ ಧ್ವನಿಯೂ, ಬಂಗಾರದ ಸೊಂಟಪಟ್ಟಿ ಮತ್ತು ಕಾಲುಗಳು ಅಥವಾ ಪಾದಗಳು ನಯವಾಗಿ ಪಾಲೀಶ್ ಮಾಡಿದ ತಾಮ್ರದಿಂದ ಮಾಡಿತ್ತು. ಪ್ರವಾದಿಗಳು ಅನೇಕ ವಿವರಗಳನ್ನು ನೋಡಿದ್ದರೂ, ಇವುಗಳನ್ನು ಇವುಗಳ ವಿವರವನ್ನೂ ಇದ್ದಂತೆಯೇ ಭಾಷಾಂತರಿಸುವುದು ಉತ್ತಮ. ಕೆಳಗೆ ಕೊಟ್ಟಿರುವ ಪ್ರಕಟಣೆಯಿಂದ ಆಯ್ಕೆಮಾಡಿದ ವಾಕ್ಯಭಾಗದಲ್ಲಿ ಅಡ್ಡಗೆರೆ ಹಾಕಿ ಗುರುತಿಸಿರುವ ಪದಗುಚ್ಛಗಳು ದಾನಿಯೇಲ ಮತ್ತು ಯೆಹೆಜ್ಕೇಲ ವಾಕ್ಯಭಾಗದಲ್ಲಿಯೂ ಬರುತ್ತದೆ.

ಏಳು ಚಿನ್ನದ ದೀಫಸ್ತಂಭಗಳ ಮಧ್ಯದಲ್ಲಿ ಮನುಷ್ಯಕುಮಾರನಂತೆ ಇರುವವನನ್ನು ಕಂಡೆನು, ಆತನು ನಿಲುವಂಗಿಯನ್ನು ತೊಟ್ಟು, ಚಿನ್ನದ ಪಟ್ಟಿಯನ್ನು ಎದೆಗೆಕಟ್ಟಿಕೊಂಡಿದ್ದನು ಆತನ ತಲೆಯ ಕೂದಲು ಬಿಳೀ ಉಣ್ಣೆಯಂತೆಯೂ — ಹಿಮದಂತೆ ಬೆಳ್ಳಗಿತ್ತು.ಆತನ ಕಣ್ಣುಗಳು ಬೆಂಕಿಯ ಉರಿಯಂತೆಯೂ ಆತನ ಪಾದಗಳು ಕುಲುಮೆಯಲ್ಲಿ ಕಾಯಿಸಿದ ತಾಮ್ರದಂತೆಯೂ , ಆತನ ಧ್ವನಿಯು ಜಲಪ್ರವಾಹದ ಘೋಷದಂತೆಯೂ ಇದ್ದವು . ಆತನ ಬಲಗೈಯಲ್ಲಿ ಏಳು ನಕ್ಷತ್ರಗಳಿದ್ದವು, ಆತನ ಬಾಯೊಳಗಿಂದ ಹದವಾದ ಇಬ್ಬಾಯಿ ಕತ್ತಿಯು ಹೊರಡುತ್ತಿತ್ತು. ಆತನ ಮುಖವು ಮಧ್ಯಾಹ್ನದಲ್ಲಿ ಪ್ರಕಾಶಿಸುವ ಸೂರ್ಯನಂತಿತ್ತು. (ಪ್ರಕಟಣೆ. 1:13-16 ULB)

ನಾನು ನೋಡುತ್ತಿದ್ದ ಹಾಗೆ. ನ್ಯಾಯಾಸನಗಳು ಹಾಕಲ್ಪಟ್ಟವು. ಅದರಲ್ಲಿ ಮಹಾ ವೃದ್ಧನೊಬ್ಬನು ಆಸೀನನಾದನು. ಆತನ ಉಡುಪು ಹಿಮದಂತೆ ಶುಭ್ರವಾಗಿತ್ತು. ಮತ್ತು ಆತನ ತಲೆಯ ಕೂದಲು ನಿರ್ಮಲವಾದ ಬಿಳಿಯ ಉಣ್ಣೆಯಂತಿತ್ತು. (ದಾನಿಯೇಲ7:9 ULB)

ನಾನು ಕಣ್ಣೆತ್ತಿನೋಡಲು ಇಗೋ ನಾರಿನ ಬಟ್ಟೆಯನ್ನು ಹೊದ್ದು ಉಪಜಿನ ಅಪರಂಜಿಯ ಪಟ್ಟಿಯನ್ನು ಸೊಂಟಕ್ಕೆ ಬಿಗಿದುಕೊಂಡ ಒಬ್ಬ ಪುರುಷನು ನನಗೆ ಕಾಣಿಸಿದನು. ಆತನ ಶರೀರವು ಪೀತರತ್ನದಹಾಗೆ ಕಂಗೊಳಿಸಿತು. ಅವನ ಮುಖವು ಮಿಂಚಿನಂತೆ ಹೊಳೆಯಿತು. ಆತನ ಕಣ್ಣುಗಳು ಉರಿಯುವ ಪಂಜುಗಳೋಪಾದಿಯಲ್ಲಿ ನಿಗಿನಿಗಿಸಿದವು. ಆತನ ಕೈಕಾಲುಗಳು ಬೆಳಗಿದ ತಾಮ್ರದಂತೆ ಥಳಥಳಿಸಿದವು , ಆತನ ಮಾತಿನ ಶಬ್ದವು ಜನಸಂದಣಿಯ ಕೋಲಾಹಲದಂತೆ ಕೇಳಿಸಿತು (ದಾನಿಯೇಲ 10:5-6 ULB)

ಇಗೋ! ಇಸ್ರಾಯೇಲರ ದೇವರ ತೇಜಸ್ಸು ಮೂಢನ ಮಾರ್ಗವಾಗಿ ಬಂತು ಆತನ ಧ್ವನಿಯು ಜಲಪ್ರವಾಹದ ಘೋಷದಂತಿತ್ತು , ಆತನ ತೇಜಸ್ಸು ಭೂಮಿಯನ್ನು ಬೆಳಗಿತು (ಯೆಹಜ್ಕೆಲ 43:2 ULB)

ಕೆಳಗೆ ಕೊಟ್ಟಿರುವ ವಾಕ್ಯಭಾಗವು ಅಂದಿನ ದಿನಗಳಲ್ಲಿ ನಡೆದ ಘಟನೆಗಳನ್ನು ಭೂತಕಾಲದ ಪದಗಳಿಂದ ಬರೆಯಲಾಗಿದೆ. ಅಡ್ಡಗೆರೆ ಹಾಕಿ ಗುರುತಿಸಿರುವ ಪದಗಳು ಹಿಂದೆ ನಡೆದ ಘಟನೆಗಳ ಬಗ್ಗೆ ಹೇಳುತ್ತವೆ.

ಯೆಹೂದ ದೇಶದ ಅರಸರಾದ ಉಜ್ಜೀಯ, ಯೆಥೋಮ, ಅಹಾಜ, ಹಿಜ್ಕಿಯಾ ಇವರ ಕಾಲದಲ್ಲಿ ಯೆಹೂದದ ಮತ್ತು ಯೆರೂಸಲೇಮಿನ ವಿಷಯವಾಗಿ ಆಮೋಚನ ಮಗನಾದ ಯೆಶಾಯನಿಗೆ ಆದ ದೈವದರ್ಶನ. ಆಕಾಶ ಮಂಡಲವೇ ಆಲಿಸು ! ಭೂಮಂಡಲವೇ, ಕೇಳು ! ಯೆಹೋವನು ಮಾತನಾಡುತ್ತಿದ್ದಾನೆ : " ನಾನು ಸಾಕಿ ಸಲಹಿದ ಮಕ್ಕಳೇ ನನಗೆ ದ್ರೋಹ ಮಾಡಿದ್ದಾರೆ (ಯೆಶಾಯ1:1-2 ULB)

ಈ ಕೆಳಗಿನ ವಾಕ್ಯಭಾಗಗಳು ಭವಿಷ್ಯತ್ ಕಾಲವನ್ನು ಮತ್ತು ಭೂತಕಾಲದ ವಿವಿಧ ರೀತಿಯ ಬಳಕೆಯನ್ನು ತೋರಿಸುತ್ತದೆ. ಅಡ್ಡಗೆರೆ ಎಳೆದು ಗುರುತಿಸಿರುವ ಕ್ರಿಯಾಪದಗಳು predictive past,ಗೆ ಉದಾಹರಣೆಗಳು. ಇಲ್ಲಿ ಭೂತಕಾಲದಲ್ಲಿ ಹೇಳಿದ ಘಟನೆಗಳು ಭವಿಷ್ಯದಲ್ಲಿ ಖಂಡಿತವಾಗಿ ನಡೆದೇ ನಡೆಯುತ್ತದೆ ಎಂಬುದನ್ನು ಸೂಚಿಸುತ್ತದೆ.

ಆದರೆ ಸಂಕಟಪಟ್ಟ ದೇಶಕ್ಕೆ ಅಂಧಕಾರವಿನ್ನಿಲ್ಲ. ಪೂರ್ವಕಾಲದಲ್ಲಿ ಜೆಬುಲೋನ್ ಮತ್ತು ನಫ್ತಾಲಿ, ಸೀಮೆಗಳನ್ನು ಆತನು ಅವಮಾನಕ್ಕೆ ಗುರಿಮಾಡಿದನು ಅನಂತರದಲ್ಲಿ ಯೋರ್ದಾನಿನ ಆಚೆಯ ಸೀಮೆ. ಸಮುದ್ರದ ಕಡೆಗಿರುವ ಸೀಮೆ ಅನ್ಯ ಜನಗಳಿರುವ ಗಲಿಲಾಯ ಸೀಮೆ ಈ ಪ್ರಾಂತ್ಯಗಳನ್ನೆಲ್ಲಾ ಘನಪಡಿಸಿದ್ದಾನೆ ಕತ್ತಲಲ್ಲಿ ಸಂಚರಿಸುವ ಜನರಿಗೆ ದೊಡ್ಡ ಬೆಳಕು ಕಾಣಿಸಿತು ಕಾರ್ಗತ್ತಲಾದ ದೇಶದಲ್ಲಿ ಇದ್ದವರಿಗೆ ಪ್ರಕಾಶವು ಹೊಳೆಯಿತು (ಯೆಶಾಯ 9:1-2 ULB)