translationCore-Create-BCS_.../translate/figs-pastforfuture/01.md

7.6 KiB

###ವಿವರಣೆಗಳು

"ಪ್ರಿಡಿಕ್ಟೀವ್ ಪಾಸ್ಟ್" ಇದೊಂದು ಅಲಂಕಾರ.ಇದರಲ್ಲಿ (ಮೊದಲೇ) ಭವಿಷ್ಯದಲ್ಲಿ ನಡೆಯುವ ವಿಚಾರಗಳನ್ನು ಭೂತಕಾಲದಲ್ಲೇ ಹೇಳಲಾಗುವುದು. ಇದು ಬಹುಪಾಲು ಪ್ರವಾದನೆಗಳಾಗಿದ್ದು ಭವಿಷ್ಯದಲ್ಲಿ ಖಂಡಿತವಾಗಿ ನಡೆದೇ ನಡೆಯುತ್ತದೆ ಎಂದು ಹೇಳಲು ಬಳಸುತ್ತಾರೆ. ಇದನ್ನು ನಿಶ್ಚಿತ ಪ್ರವಾದನೆ ಎಂದೂ ಕರೆಯಬಹುದು.

ನನ್ನ ಜನರು ಜ್ಞಾನಹೀನರಾಗಿ ಸೆರೆಗೆ ಹೋಗುವುದು ಖಂಡಿತ. ನಾಯಕರು ಹಸಿದು ದಣಿಯುವರು, ಜನರು ಬಾಯಾರಿಕೆಯಿಂದ ಕಂಗೆಡುವರು. (ಯೆಶಾಯ 5:13 ULB)

ಇಲ್ಲಿ ಉದಾಹರಿಸಿರುವ ವಾಕ್ಯಭಾಗದಲ್ಲಿ ಇಸ್ರಾಯೇಲ್ ಜನರು ಇನ್ನು ಸೆರೆಗೆ ಸಿಕ್ಕಿಲ್ಲ, ದರೆ ದೇವರು ಅವರ ಅವಿಧೇಯತನವನ್ನು ಸಹಿಸದೆ ಮುಂದೆ ಅವರಿಗೆ ಯಾವ ಶಿಕ್ಷಯನ್ನು ಕೊಡುತ್ತೇನೆ ಎಂಬುದನ್ನು ಮೊದಲೇ ನಿರ್ಧರಿಸಿ ಹೇಳಿರುವುದನ್ನು ಕಾಣುತ್ತಿದ್ದೇವೆ. ಇದು ಮುಂದೆ ಖಂಡಿತವಾಗಿ ನಡೆಯಿತು/ ನೆರವೇರಿತು.

####ಕಾರಣ ಇದೊಂದು ಭಾಷಾಂತರ ಪ್ರಕರಣ

ಕೆಲವು ಓದುಗರಿಗೆ ಭವಿಷ್ಯದಲ್ಲಿ ನಡೆಯುವ ಪ್ರವಾದನೆಗಳನ್ನು ಹೇಳಲು ಭೂತಕಾಲಪದವನ್ನು ಬಳಸುತ್ತಾರೆ ಎಂಬುದು ಗೊತ್ತಿಲ್ಲದೆ ಗೊಂದಲವಾಗಬಹುದು.

ಸತ್ಯವೇದದಲ್ಲಿನ ಉದಾಹರಣೆಗಳು.

ಈಗ ಯೆರಿಕೋ ನಗರದವರು ಇಸ್ರಾಯೇಲರಿಗೆ ಹೆದರಿ ತಮ್ಮ ಪಟ್ಟಣದ ಬಾಗಿಲುಗಳನ್ನು ಭದ್ರವಾಗಿ ಮುಚ್ಚಿಕೊಂಡರು. ಯಾರೂ ಹೊರಗೆ ಹೋಗಲಿಲ್ಲ ಯಾರೂ ಒಳಗೆ ಬರಲಿಲ್ಲ. ಯೆಹೋವನು ಯೆಹೋಶುವನಿಗೆ" ನೋಡು, ನಾನು ಯೆರಿಕೋವನ್ನೂ, ಅದರ ಅರಸನನ್ನೂ, ತರಬೇತಾದ ಯುದ್ಧ ವೀರರನ್ನು ನಿನ್ನ ಕೈಗೆ ಒಪ್ಪಿಸಿದ್ದೇನೆ." (ಯೆಹೋಶುವ 6:1-2 ULB)

ನಮಗಾಗಿ ಒಂದು ಮಗು ಹುಟ್ಟಿದೆಯಷ್ಟೆ, ವರದ ಮಗನು ನಮಗೆ ದೊರೆತನು. ಆಡಳಿತವು ಆತನ ಬಾಹುಗಳ ಮೇಲಿರುವುದು ; (ಯೆಶಾಯ 9:6 ULB)

ಈ ಉದಾಹರಣೆಗಳಲ್ಲಿ ಈ ಘಟನೆಗಳು ಭವಿಷ್ಯದಲ್ಲಿ ನಡೆಯಬೇಕಾದ ಘಟನೆಗಳಾದರೂ ಈಗ ನಡೆದ ಘಟನೆಯ ಹಾಗೆ ದೇವರು ಮಾತನಾಡುತ್ತಿದ್ದಾನೆ.

ಇಂತಹವರ ವಿಷಯದಲ್ಲೇ ಆದಮನಿಗೆ ಏಳನೇ ತಲೆಯವನಾದ ಹನೋಕನು,”ಇಗೋ ಕರ್ತನು ಲಕ್ಷಾಂತರ ಪರಿಶುದ್ಧ ದೂತರನ್ನು ಕೂಡಿಕೊಂಡು ಬಂದನು”, ಎಂದು ಮುಂಚಿತವಾಗಿ ಹೇಳಿದನು (ಯೂದ 1:14 ULB)

ಹನೋಕನು ಭವಿಷ್ಯತ್ ನಲ್ಲಿ ನಡೆಯುವ ಘಟನೆಯಬಗ್ಗೆ ಮಾತನಾಡುತ್ತಿದ್ದನು. ಆದರೆ ದೇವರ ಬಗ್ಗೆ ಹೇಳುವಾಗ "ಕರ್ತನಾದ ದೇವರು ಬಂದಿದ್ದನು.” ಎಂಬ ಭೂತಕಾಲ ಪದವನ್ನು ಬಳಸಿ ಹೇಳಿದ್ದಾನೆ.

ಭಾಷಾಂತರ ತಂತ್ರಗಳು.

ನಿಮ್ಮ ಭಾಷೆಯಲ್ಲಿ ಭೂತಕಾಲ ಪದವು ಸಹಜವಾಗಿ, ಅರ್ಥಪೂರ್ಣವಾಗಿ ಧ್ವನಿಸುವುದಾದರೆ ಅದನ್ನೇ ಬಳಸಿಕೊಳ್ಳಬಹುದು. ಇಲ್ಲದಿದ್ದರೆ ಕೆಲವು ಅವಕಾಶಗಳಿವೆ ನೋಡಿ.

  1. ಭವಿಷ್ಯದಲ್ಲಿ ನಡೆಯುವ ಘಟನೆಗಳಿಗೆ ಭವಿಷ್ಯತ್ ಕಾಲದ ಪದವನ್ನು ಬಳಸಿಕೊಳ್ಳಿ.
  2. ಕೆಲವೊಮ್ಮೆ ಕೆಲವು ಘಟನೆಗಳು ಕೆಲವೇ ಕ್ಷಣಗಳಲ್ಲಿ ನಡೆಯುವಂತದ್ದಾದರೆ ಅದನ್ನೇ ಬಳಸಿ.
  3. ಕೆಲವು ಭಾಷೆಯಲ್ಲಿ ವರ್ತಮಾನಕಾಲದಲ್ಲಿ ಮಾತನಾಡುವಾಗ ಕೆಲವು ಘಟನೆಗಳು ಅತಿ ಶೀಘ್ರವಾಗಿ ಘಟಿಸುತ್ತದೆ ಎಂದು ಹೇಳುತ್ತಾರೆ.

ಭಾಷಾಂತರ ಕೌಶಲ್ಯಗಳನ್ನು ಅಳವಡಿಸಿದ ಬಗ್ಗೆ ಉದಾಹರಣೆಗಳು.

  1. ಭವಿಷ್ಯದಲ್ಲಿ ನಡೆಯುವ ಘಟನೆಗಳಿಗೆ ಭವಿಷ್ಯತ್ ಕಾಲದ ಪದಗಳನ್ನು ಬಳಸಿ
  • ನಮಗಾಗಿ ಒಂದು ಮಗು ಹುಟ್ಟಿದೆಯಷ್ಟೆ , ವರದ ಮಗನುನಮಗೆ ಕೊಡಲ್ಪಟ್ಟಿದೆ ; (ಯೆಶಾಯ9:6a ULB)

    • "ನಮಗಾಗಿ ಒಂದು ಮಗು ಹುಟ್ಟುವುದು, ವರದ ಮಗನನ್ನು ನಮಗೆ ಕೊಡಲ್ಪಡುವುದು;
  1. ಇದು ಆದಷ್ಟು ಬೇಗ ಏನೋ ನಡೆಯುತ್ತದೆ ಎಂಬುದನ್ನು ಸೂಚಿಸುತ್ತದೆ. ಇಲ್ಲಿ ಅದನ್ನು ತೋರಿಸುವಂತಹ ಪದಗಳನ್ನು ಬಳಸಿ.
  • ಯೆಹೋವನು ಯೆಹೋಶುವನನ್ನು ಕುರಿತು "ನೋಡು ನಾನು ಯೆರಿಕೋ ನಗರವನ್ನು ಅದರ ಅರಸನನ್ನುಅದರ ತರಬೇತಾದ ಯುದ್ಧವೀರರನ್ನು ನಿನ್ನ ಕೈಗೆ ಒಪ್ಪಿಸಿದ್ದೇನೆ." (ಯೆಹೋಶುವ 6:2 ULB)

    • ಯೆಹೋವನು ಯೆಹೋಶುವನಿಗೆ "ನೋಡು, ನಾನುಯೆರಿಕೋ ನಗರವನ್ನುಅದರ ಅರಸನನ್ನು, ತರಬೇತಾದ ಯುದ್ಧವೀರರನ್ನು ನಿನ್ನ ಕೈಗೆ ಒಪ್ಪಿಸುವವನಿದ್ದೇನೆ." ಎಂದು ಹೇಳಿದನು.
  1. ಕೆಲವು ಭಾಷೆಯಲ್ಲಿ ವರ್ತಮಾನಕಾಲದಲ್ಲಿ ಮಾತನಾಡುವಾಗ ಕೆಲವು ಘಟನೆಗಳು ಅತಿ ಶೀಘ್ರವಾಗಿ ನಡೆಯುತ್ತದೆ ಎಂದು ಹೇಳುತ್ತಾರೆ.
  • ಯೆಹೋವನು ಯೆಹೋಶುವನನ್ನು ಕುರಿತು ನೋಡು ನಾನು ಯೆರಿಕೋ ನಗರವನ್ನು ಅದರ ಅರಸನನ್ನುಅದರ ತರಬೇತಾದ ಯುದ್ಧವೀರರನ್ನು ನಿನ್ನ ಕೈಗೆ ಒಪ್ಪಿಸಿದ್ದೇನೆ." (ಯೆಹೋಶುವ 6:2 ULB)

    • ಯೆಹೋವನು ಯೆಹೋಶುವನಿಗೆ "ನೋಡು ನಾನು ಯೆರಿಕೋ ನಗರವನ್ನು ಅದರ ರಸನನ್ನುಅದರ ತರಬೇತಾದ ಯುದ್ಧವೀರರನ್ನು ನಿನ್ನ ಕೈಗೆ ಒಪ್ಪಿಸುತ್ತಿದ್ದೇನೆ."