translationCore-Create-BCS_.../translate/writing-newevent/01.md

21 KiB
Raw Permalink Blame History

ವಿವರಣೆಗಳು

ಜನರು ಕಥೆಯನ್ನು ಹೇಳಿದಾಗ ಅವರು ಅದರಲ್ಲಿ ಒಂದು ಘಟನೆಯ ಬಗ್ಗೆ ಹೇಳಬಹುದು ಇಲ್ಲವೆ ಅನೇಕ ಘಟನೆಗಳ ಬಗ್ಗೆ ಹೇಳಬಹುದು. ಹಲವು ಸಲ ಜನರು ಕೆಲವು ಮಾಹಿತಿಯನ್ನು ಕಥೆಯ ಪ್ರಾರಂಭದಲ್ಲಿ ಹೇಳಲು ಪ್ರಯತ್ನಿಸುತ್ತಾರೆ. ಉದಾಹರಣೆಗೆ ಕಥೆ ಯಾರ ಬಗ್ಗೆ, ಯಾವಾಗ ನಡೆಯಿತು ಮತ್ತು ಎಲ್ಲಿ ನಡೆಯಿತು ಎಂಬುದರ ಬಗ್ಗೆ ಹೇಳುತ್ತಾರೆ. ಹೀಗೆ ಕಥೆಯಲ್ಲಿನ ಘಟನೆಗಳ ಮೊದಲೇ ಲೇಖಕನು ಮಾಹಿತಿಯನ್ನು ನೀಡಿದರೆ, ಕಥೆಯ ಸನ್ನಿವೇಶ, ಕಥೆಯ ಹಂದರ ಸಿದ್ಧವಾಗುತ್ತಿದೆ ಎಂದು ಅರ್ಥ. ಕೆಲವು ಹೊಸ ಘಟನೆಗಳು ಕಥೆಯಲ್ಲಿ ಸನ್ನಿವೇಶಗಳನ್ನು ಹೊಂದಿರುತ್ತವೆ. ಏಕೆಂದರೆ ಅವುಗಳಲ್ಲಿ ಹೊಸಜನರು, ಹೊಸ ಸಮಯ, ಹೊಸ ಸ್ಥಳಗಳು, ಹೊಸ ಸನ್ನಿವೇಶಗಳನ್ನು ಹೊಂದಿರುತ್ತವೆ.

ಇನ್ನು ಕೆಲವು ಭಾಷೆಗಳಲ್ಲಿ ಜನರು ತಾವು ನೋಡಿದ ಘಟನೆಗಳ ಬಗ್ಗೆ ಇನ್ನೊಬ್ಬರಿಂದ ಕೇಳಿದ ಘಟನೆಗಳ ಬಗ್ಗೆ ಹೇಳುತ್ತಾರೆ. ನಿಮ್ಮ ಜನರು ಘಟನೆಗಳ ಬಗ್ಗೆ ಹೇಳಿದಾಗ, ಪ್ರಾರಂಭದಲ್ಲಿ ಯಾವ ಮಾಹಿತಿಯನ್ನು ನೀಡುತ್ತಾರೆ ? ಅವುಗಳಿಗೆ ಯಾವುದಾದರು ನಿರ್ಧಿಷ್ಟ ಕ್ರಮವಿದೆಯೇ, ಅದನ್ನು ಅವರು ಹೇಗೆ ತಮ್ಮ ಕಥೆಯಲ್ಲಿ ಬಳಸುತ್ತಾರೆ? ನಿಮ್ಮ ಭಾಷೆಯಲ್ಲಿ ಭಾಷಾಂತರ ಮಾಡುವಾಗ ನಿಮ್ಮ ಭಾಷೆಯಲ್ಲಿ ಮಾಹಿತಿಯನ್ನು ಕಥೆಯ ಪ್ರಾರಂಭದಲ್ಲಿ ಪರಿಚಯಿಸಿದರೆ ಅಥವಾ ಮೂಲ ಭಾಷೆಯಲ್ಲಿ ಹೊಸ ಘಟನೆಗಳನ್ನು ಹೇಗೆ ಉಪಯೋಗಿಸಿದ್ದಾರೆ ಎಂಬುದನ್ನು ಗಮನಿಸಿ ಅನುಸರಿಸುವುದು ಅಗತ್ಯ. ಈ ರೀತಿ ಮಾಡುವುದರಿಂದ ನಿಮ್ಮ ಭಾಷಾಂತರ ಹೆಚ್ಚು ಸಹಜವಾಗಿ ಧ್ವನಿಸುತ್ತದೆ ಮತ್ತು ನಿಮ್ಮ ಭಾಷೆಯಲ್ಲಿ ಸ್ಪಷ್ಟವಾಗಿ ವಿಷಯವನ್ನು ತಿಳಿಸುತ್ತದೆ.

ಸತ್ಯವೇದದಲ್ಲಿನ ಉದಾಹರಣೆಗಳು

ಯೂದಾಯದ ಅರಸನಾಗಿದ್ದ ಹೆರೋದನ ಕಾಲದಲ್ಲಿ , ಅಭೀಯನ ವರ್ಗಕ್ಕೆ ಸೇರಿದ ಜಕರೀಯನೆಂಬ ಒಬ್ಬ ಯಾಜಕನಿದ್ದನು , ಅವನ ಹೆಂಡತಿಯು ಆರೋನನ ವಂಶದವಳು ಅವಳ ಹೆಸರು ಎಲಿಜೆಬೆತ್. (ಲೂಕ 1:5 ULB)

ಮೇಲಿನ ವಾಕ್ಯಗಳು ಜಕರೀಯನನನ್ನು ಕುರಿತು ಕಥೆಯ ಮೂಲಕ ಪರಿಚಯಿಸುತ್ತದೆ. ಮೊದಲ ಅಡ್ಡಗೆರೆ (underlined) ಎಳೆದ ವಾಕ್ಯ / ಪದಗುಚ್ಛ ಘಟನೆಯಾವಾಗ ನಡೆಯಿತು ಎಂಬುದನ್ನು ಹೇಳುತ್ತದೆ ಮುಂದಿನ ಅಡ್ಡಗೆರೆ ಎಳೆದ ಪದಗುಚ್ಛಗಳು ಕಥೆಯಲ್ಲಿನ ಮುಖ್ಯ ವ್ಯಕ್ತಿಗಳನ್ನು ಪರಿಚಯಿಸುತ್ತದೆ. ಮುಂದಿನ ಎರಡು ವಾಕ್ಯಗಳು ಜಕರೀಯ ಮತ್ತು ಎಲಿಜೆಬೆತ್ ವೃದ್ಧವಯಸ್ಸಿನವರಾಗಿದ್ದು ಅವರಿಗೆ ಮಕ್ಕಳಿರಲಿಲ್ಲ ಎಂಬುದನ್ನು ತಿಳಿಸುತ್ತದೆ. ಇವೆಲ್ಲವೂ ಸನ್ನಿವೇಶಗಳು. ಈಗ ಪದಗುಚ್ಛ " ಒಂದು ದಿನ " ಎಂಬುದನ್ನು ಲೂಕ 1:8 ವಾಕ್ಯವು ಮೊದಲ ಘಟನೆಯನ್ನು ಈ ಕಥೆಯಲ್ಲಿ ಪರಿಚಯಿಸಲು ಸಹಾಯ ಮಾಡುತ್ತದೆ.

ಒಂದು ದಿನ ಜಕರೀಯನ ವರ್ಗದ ಸರತಿ ಬಂದಾಗ, ಅವನು ದೇವರ ಸನ್ನಿಧಿಯಲ್ಲಿ ಯಾಜಕಧರ್ಮವನ್ನು ನಡೆಸುತ್ತಿರಲು, ದೇವಾಲಯದೊಳಗೆ ಹೋಗಿ ಧೂಪವನ್ನು ಅರ್ಪಿಸುವ ಯಾಜಕರ ಮರ್ಯದೆಯ ಸರತಿ ಅವನ ಪಾಲಿಗೆ ಬಂತು. (ಲೂಕ 1:8-9 ULB)

ಯೇಸುಕ್ರಿಸ್ತನ ಜನನವು ಈ ಕೆಳಗೆ ತಿಳಿಸಿರುವಂತೆ ಆಯಿತು.ಆತನ ತಾಯಿಯಾದ ಮರಿಯಳನ್ನು ಯೋಸೇಫನಿಗೆ ನಿಶ್ಚಯ ಮಾಡಲಾಗಿತ್ತು, ಆದರೆ ಅವರು ಮದುವೆಯ ಮೂಲಕ ಒಂದುಗೂಡುವ ಮೊದಲೇ ಆಕೆಯ ಪವಿತ್ರಾತ್ಮನಿಂದ ಬಸುರಾದುದು ತಿಳಿದುಬಂತು. (ಮತ್ತಾಯ 1:18 ULB)

ಮೇಲಿನ ವಾಕ್ಯ ಯೇಸುಕ್ರಿಸ್ತನ ಕಥೆಯನ್ನು ಸ್ಪಷ್ಟವಾಗಿ ಮುಕ್ತರೀತಿಯಲ್ಲಿ ಪರಿಚಯಿಸುತ್ತಿರುವುದು ಕಂಡುಬರುತ್ತದೆ. ಈ ಕಥೆಯ ಮೂಲಕ ಯೇಸುವಿನ ಜನನ ಹೇಗಾಯಿತು ಎಂಬುದನ್ನು ತಿಳಿಸುತ್ತದೆ.

ಅರಸನಾದ ಹೆರೋದನ ದಿನಗಳಲ್ಲಿ ಯುದಾಯ ಸೀಮೆಯ ಬೇತ್ಲೆಹೆಮ್ ಎಂಬ ಊರಲ್ಲಿ ಯೇಸು ಹುಟ್ಟಿದಾಗ ಮೂಡಣ ದೇಶದ ಜೋಯಿಸರು , ಯೆರೂಸಲೇಮಿಗೆ ಬಂದರು. (ಮತ್ತಾಯ 2:1 ULB)

ಮೇಲೆ ತಿಳಿಸಿರುವ ಪದಗುಚ್ಛಗಳು ಜೋಯಿಸರ ಬಗ್ಗೆ ನಡೆದ ಘಟನೆ ಯೇಸುವಿನ ಜನನ ನಂತರ ನಡೆಯಿತು.

ಆ ದಿನಗಳಲ್ಲಿ ಸ್ನಾನಿಕನಾದ ಯೋಹಾನನು ಪರಲೋಕ ರಾಜ್ಯವು ಸಮೀಪಿಸಿತು, ದೇವರ ಕಡೆಗೆ ತಿಳಿಸಿಕೊಳ್ಳಿರಿ ಎಂದು ಯುದಾಯದಲ್ಲಿ ಅಡವಿಯಲ್ಲಿ ಸಾರಿ ಹೇಳುತ್ತಾ ಬಂದನು.… (ಮತ್ತಾಯ 3:1-22 ULB)

ಮೇಲಿನ ವಾಕ್ಯಗಳಲ್ಲಿ ಇರುವ ಪದಗುಚ್ಛಗಳು ಸ್ನಾನಿಕನಾದ ಯೋಹಾನನು ಉಪದೇಶ ಮಾಡುತ್ತಾ ಹಿಂದಿನ ಘಟನೆಗಳನ್ನು ನೆನಪಿಸುತ್ತಾಬಂದನು ಎಂಬುದನ್ನು ತಿಳಿಸುತ್ತದೆ. ಬಹುಷಃ ಇದು ತುಂಬಾ ಸಾಮಾನ್ಯವಾದುದು ಮತ್ತು ಯೇಸು ನಜರೇತಿನಲ್ಲಿ ಆ ಕಾಲದಲ್ಲಿ / ಆಗ ವಾಸಿಸುತ್ತಿದ್ದ ಕಾಲವನ್ನು ಕುರಿತು ಹೇಳುತ್ತದೆ.

ಆ ಕಾಲದಲ್ಲಿ ಯೇಸು ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಗಲಿಲಾಯದಿಂದ ಯೋರ್ದಾನ್ ನದಿಯ ಬಳಿಗೆ ಬಂದನು. (ಮತ್ತಾಯ 3:13 ULB)

ಇಲ್ಲಿ "ಆಗ " " ಆ ಕಾಲದಲ್ಲಿ " ಪದ ಹಿಂದಿನ ವಾಕ್ಯಗಳಲ್ಲಿ ತಿಳಿಸಿರುವ ಘಟನೆಗಳ ನಂತರ ಯೇಸು ಯೋರ್ದಾನ್ ನದಿಯ ಬಳಿ ಬಂದನು ಎಂಬುದನ್ನು ತಿಳಿಸುತ್ತದೆ.

ಪರಿಸಾಯರಲ್ಲಿ ಯೆಹೂದ್ಯರ ಹಿರಿಸಭೆಯವನಾದ ನಿಕೋದೇಮನೆಂಬ ಒಬ್ಬ ಮನುಷ್ಯನಿದ್ದನು . ಅವನು ರಾತ್ರಿಯಲ್ಲಿ ಯೇಸುವಿನ ಬಳಿ ಬಂದನು (ಯೊಹಾನ 3:1-2 ULB)

ಇಲ್ಲಿ ಲೇಖಕನು ಮೊದಲು ಹೊಸ ವ್ಯಕ್ತಿಯನ್ನು ಪರಿಚಯಿಸಿದ್ದಾನೆ ನಂತರ ಅವನು ಏನು ಮಾಡಿದನು ಮತ್ತು ಯಾವಾಗ ಮಾಡಿದನು ಎಂಬುದರ ಬಗ್ಗೆ ಹೇಳಿದ್ದಾನೆ. ಕೆಲವು ಭಾಷೆಯಲ್ಲಿ ವಾಕ್ಯದ ಮೊದಲು ಸಮಯ, ಕಾಲದ ಬಗ್ಗೆ ಹೇಳುವುದು ಹೆಚ್ಚು ಸಹಜವಾಗಿ ಮೂಡಿಬರಬಹುದು.

6ಭೂಮಿಯ ಮೇಲೆ ಜಲಪ್ರಳಯ ಉಂಟಾದಾಗ ನೋಹನು ಆರುನೂರು ವರ್ಷದವ ನಾಗಿದ್ದನು 7ಆಗ ನೋಹನು ಪ್ರಳಯದಿಮದ ತಪ್ಪಿಸಿಕೊಳ್ಳಲು ಹೆಂಡತಿ, ಮಕ್ಕಳು, ಸೊಸೆಯರು ಸಹಿತವಾಗಿ ನಾವೆಯೊಳಗೆ ಸೇರಿದನು. (ಆದಿಕಾಂಡ 7:6-7 ULB)

6ನೇ ವಾಕ್ಯ ಘಟನೆಗಳ ಭಾವಾನುವಾದ ಇದು ಮುಂದಿನ ಘಟನೆಗಳು 7.ನೇ ಅಧ್ಯಾಯದಲ್ಲಿ ತಿಳಿಸಲಾಗಿದೆ. 6ನೇ ಅಧ್ಯಾಯದಲ್ಲಿ ನೋಹನಿಗೆ ದೇವರು ಏನು ಹೇಳಿದನು ಎಂದರೆ ಮುಂದೆ ಜಲಪ್ರಳಯವಾಗುತ್ತದೆ.ಮತ್ತು ನೋಹನು ಅದಕ್ಕಾಗಿ ಯಾವ ಸಿದ್ಧತೆ ಮಾಡಬೇಕು ಎಂಬುದನ್ನು ತಿಳಿಸಲಾಗಿದೆ. 7.ನೇ ಅಧ್ಯಾಯದ 6ನೇ ವಾಕ್ಯದಲ್ಲಿ ನೋಹನು ತನ್ನ ಕುಟುಂಬ ಮತ್ತು ಪ್ರಾಣಿಗಳು ನಾವೆಯೊಳಗೆ ಹೋಗುವುದನ್ನು, ಮಳೆಪ್ರಾರಂಭವಾದ ಬಗ್ಗೆ, ಮಳೆಯಿಂದ ಜಲಪ್ರವಾಹ ವಾದುದನ್ನು ಕಥೆಯಂತೆ ನಿರೂಪಣೆ ಆಗಿದೆ. ಕೆಲವು ಭಾಷೆಯಲ್ಲಿ ಈ ವಾಕ್ಯವು ನಡೆದ ಘಟನೆಯನ್ನು ಸರಳವಾಗಿ ಪರಿಚಯಿಸುತ್ತದೆ. ಮತ್ತು ಮುಂದೆ 7ನೇ ವಾಕ್ಯದ ವರೆಗೆ ಮುಂದುವರೆಯುತ್ತದೆ. 6ನೇ ವಾಕ್ಯ ಇಲ್ಲಿರುವ ಕಥೆಯು ಒಂದು ಘಟನೆಯ ಬಗ್ಗೆ ಹೇಳುತ್ತಿಲ್ಲ. ಜಲಪ್ರಳಯವಾಗುವ ಮೊದಲೇ ಎಲ್ಲಾ ಜನರು ನಾವೆಯೊಳಗೆ ಹೋದರು

ಭಾಷಾಂತರ ಕೌಶಲ್ಯಗಳು

ಕೊಡಬೇಕಾದ ಮಾಹಿತಿಯನ್ನು ವಾಕ್ಯದ ಪ್ರಾರಂಭದಲ್ಲೇ ಹೊಸ ಘಟನೆಗಳನ್ನು ಸ್ಪಷ್ಟವಾಗಿಸಿದರೆ ಮತ್ತು ಓದುಗರಿಗೆ ಅರ್ಥಮಾಡಿಕೊಳ್ಳಲು ಸಹಜವಾಗಿದ್ದರೆ ಆಗ ULB ಅಥವಾ UDB ಯಲ್ಲಿರುವಂತೆ ಭಾಷಾಂತರವಾಗಿ ಪರಿಗಣಿಸಬೇಕು. ಅಲ್ಲದಿದ್ದರೆ ಯಾವುದಾದರೂ ತಂತ್ರವನ್ನು ಪರಿಗಣಿಸಿ.

  1. ನಿಮ್ಮ ಭಾಷೆಯ ಜನರು ಮಾಡುವಂತೆ ಘಟನೆಗಳನ್ನು ಪರಿಚಯಿಸುವ ಮಾಹಿತಿಯನ್ನು ಅವರ ಕ್ರಮದಲ್ಲಿ ಭಾಷಾಂತರಿಸಲು ಪ್ರಯತ್ನಿಸಿ.
  2. ಸತ್ಯವೇದದಲ್ಲಿ ಇಲ್ಲದ ನಿರ್ದಿಷ್ಟಮಾಹಿತಿಯನ್ನು ಓದುಗರು ನಿರೀಕ್ಷಿಸಿದರೆ, ನಿರೀಕ್ಷಿಸಿದ ಮಾಹಿತಿ ನೀಡಲು ಬೇಕಾದ ಪದ ಅಥವಾ ಪದಗುಚ್ಛ ಬಳಸಲು ಪರಿಗಣಿಸಿ, ಉದಾಹರಣೆಗೆ " ಮತ್ತೊಂದು ಸಮಯ " " ಕೆಲವರು " " ಯಾರೋ ಒಬ್ಬರು ".
  3. ಪೀಠಿಕೆಯ ಮೂಲಕ ಪರಿಚಯಿಸುವ ಘಟನೆಯು ಸಂಕ್ಷಿಪ್ತ ಸಾರಾಂಶವಾಗಿದ್ದರೆ ನಿಮ್ಮ ಭಾಷೆಯಲ್ಲಿ ಇದೊಂದು ಸಾರಾಂಶ ಎಂದು ತೋರಿಸುವ ಪದಗಳನ್ನು ಬಳಸಿ
  4. ನೀವು ಭಾಷಾಂತರಿಸುತ್ತಿರುವ ಭಾಷೆಯಲ್ಲಿ ಇದು ಅಸಹಜವಾಗಿ ಮೂಡಿಬಂದರೆ ಘಟನೆಯ ಸಾರಾಂಶವನ್ನು ಪ್ರಾರಂಭದಲ್ಲೇ ನೀಡಲಾಗುವುದು, ಆದುದರಿಂದ ಈ ಘಟನೆ ಕಥೆಯಲ್ಲಿ ಆಮೇಲೆ ನಡೆಯುತ್ತದೆ ಎಂದು ತಿಳಿಸಬೇಕು.

ಭಾಷಾಂತರ ಕೌಶಲ್ಯಗಳನ್ನು ಅಳವಡಿಸಿರುವ ಬಗ್ಗೆ ಉದಾಹರಣೆಗಳು.

  1. ನಿಮ್ಮ ಭಾಷೆಯ ಜನರು ಮಾಡುವಂತೆ ಘಟನೆಗಳನ್ನು ಪರಿಚಯಿಸುವ ಮಾಹಿತಿಯನ್ನು ಅವರ ಕ್ರಮದಲ್ಲಿ ಭಾಷಾಂತರಿಸಲು ಪ್ರಯತ್ನಿಸಿ.
  • ಪರಿಸಾಯರಲ್ಲಿ ಯೆಹೂದ್ಯರ ಹಿರಿ ಸಭೆಯವನಾದ ನಿಕೋದೇಮನೆಂಬ ಒಬ್ಬ ಮನುಷ್ಯನಿದ್ದನು . ಆ ಮನುಷ್ಯನು ರಾತ್ರಿ ಸಮಯದಲ್ಲಿ ಯೇಸುವಿನ ಬಳಿಗೆ ಬಂದನು.. (ಯೊಹಾನ 3:1,2

    • ಅಲ್ಲಿ ಒಬ್ಬ ಮನುಷ್ಯನಿದ್ದನು ಅವನ ಹೆಸರು ನಿಕೋದೇಮನು ಅವನು ಪರಿಸಾಯರಲ್ಲಿ ಒಬ್ಬ ಯೆಹೂದ್ಯರ ಹಿರಿ ಸಭೆಯ ಸದಸ್ಯನಾಗಿದ್ದನು . ಒಂದು ರಾತ್ರಿ ಅವನು ಯೇಸುವಿನ ಬಳಿ ಬಂದು ಹೀಗೆ ಹೇಳಿದ....
    • ಒಂದು ರಾತ್ರಿ ಪರಿಸಾಯರಲ್ಲಿ ಯೆಹೂದ್ಯರ ಹಿರಿ ಸಭೆಯವನಾದ , ಅವನ ಹೆಸರು ನಿಕೋದೇಮನು ಯೇಸುವಿನ ಬಳಿ ಬಂದು ಹೀಗೆ ಹೇಳಿದ -----
  • ಆತನು ಅಲ್ಲಿಂದ ಹಾದುಹೋಗುತತ್ತಿರುವಾಗ ಸುಂಕವಸೂಲಿ ಮಾಡುವವ ಕುಳಿತಿದ್ದ ಅಲ್ಪಾಯಾನ ಮಗನಾದ ಲೇವಿಯನ್ನು ನೋಡಿ ನನ್ನನ್ನು ಹಿಂಬಾಲಿಸು ಎಂದನು .. (ಮಾರ್ಕ 2:14 ULB)

    • ಆತನು ಅಲ್ಲಿಂದ ಹಾದು ಹೋಗುವಾಗ ಅಲ್ಪಾಯಾನ ಮಗನಾದ ಲೇವಿಯು ಸುಂಕವಸೂಲಿ ಮಾಡುವ ಸ್ಥಳದಲ್ಲಿ ಕುಳಿತಿದ್ದನು . ಯೇಸು ಅವನನ್ನು ನೋಡಿ ಹೀಗೆ ಹೇಳಿದನು - - - -
    • ಆತನು ಅಲ್ಲಿಂದ ಹಾದು ಹೋಗುವಾಗ ಅಲ್ಲೊಬ್ಬ ಮನುಷ್ಯನು ಸುಂಕವಸೂಲಿ ಮಾಡುವ ಸ್ಥಳದಲ್ಲಿ ಕುಳಿತಿದ್ದನು ಅವನ ಹೆಸರು ಲೇವಿ, ಮತ್ತು ಅವನು ಅಲ್ಪಾಯಾನನ ಮಗ. ಯೇಸು ಅವನನ್ನು ನೋಡಿ ಹೀಗೆ ಹೇಳಿದನು - - - -
    • ಆತನು ಅಲ್ಲಿಂದ ಹಾದು ಹೋಗುವಾಗ ಅಲ್ಲೊಬ್ಬ ಸುಂಕವಸೂಲಿ ಮಾಡುವವನು ಸುಂಕವಸೂಲಿ ಮಾಡುವ ಸ್ಥಳದಲ್ಲಿ ಕುಳಿತಿದ್ದನು. ಅವನ ಹೆಸರು ಲೇವಿ, ಮತ್ತು ಅವನು ಅಲ್ಪಾಯಾನನ ಮಗ. ಯೇಸು ಅವನನ್ನು ನೋಡಿ ಹೀಗೆ ಹೇಳಿದನು - - - -
  1. ಸತ್ಯವೇದದಲ್ಲಿ ಇಲ್ಲದ ನಿರ್ದಿಷ್ಟಮಾಹಿತಿಯನ್ನು ಓದುಗರು ನಿರೀಕ್ಷಿಸಿದರೆ, ನಿರೀಕ್ಷಿಸಿದ ಮಾಹಿತಿ ನೀಡಲು ಬೇಕಾದ ಪದ ಅಥವಾ ಪದಗುಚ್ಛ ಬಳಸಲು ಪರಿಗಣಿಸಿ, ಉದಾಹರಣೆಗೆ " ಮತ್ತೊಂದು ಸಮಯ " " ಕೆಲವರು " " ಯಾರೋ ಒಬ್ಬರು ".
  • ಭೂಮಿಯ ಮೇಲೆ ಜಲಪ್ರಳಯವಾದಾಗ ನೋಹನು ಆರುನೂರು ವರ್ಷದವನಾಗಿದ್ದನು. (ಆದಿಕಾಂಡ 7:6 ULB) ಜನರು ತಮಗೆ ಯಾವುದಾದರೂ ಒಂದರ ಬಗ್ಗೆ ಹೊಸ ಘಟನೆ ನಡೆದಂತೆ ಹೇಳುವುದನ್ನು ನಿರೀಕ್ಷಿಸಿದರೆ ಪದಗುಚ್ಛ " ಅದಾದಮೇಲೆ " ಎಂಬುದನ್ನು ಬಳಸಿದರೆ ಅವರಿಗೆ ಈ ಘಟನೆಗಳು ಈಗಾಗಲೇ ಹೇಳಿದಂತೆ ನಡೆದಿದೆ ಎಂದು ತಿಳಿದುಕೊಳ್ಳಬಹುದು

    • ಅದಾದಮೇಲೆ ,ನೋಹನು ಆರುನೂರು ವರ್ಷದವನಾದ ಮೇಲೆ ಭೂಮಿಯ ಮೇಲೆ ಜಲಪ್ರಳಯವಾಯಿತು
  • ಆತನು ಸಮುದ್ರ ದಡದಲ್ಲಿ ನಿಂತು ಪುನಃ ಉಪದೇಶಮಾಡುತ್ತಿವುದಕ್ಕೆ ಪ್ರಾರಂಭಿಸಿದನು. (ಮಾರ್ಕ4:1 ULB) 3ನೇ ಅಧ್ಯಾಯದಲ್ಲಿ ಯೇಸು ಒಬ್ಬರ ಮನೆಯಲ್ಲಿ ಉಪದೇಶ ಮಾಡುತ್ತಿದ್ದನು. ಓದುಗರಿಗೆ ಈ ಘಟನೆಯ ಬಗ್ಗೆ ಹೇಳುವಾಗ ಒಂದು ಹೊಸ ಘಟನೆ ಇನ್ನೊಂದು ಸಮಯದಲ್ಲಿ ನಡೆಯಿತು ಅಥವಾ ಯೇಸು ನಿಜವಾಗಲೂ ಸಮುದ್ರದಡಕ್ಕೆ ಹೋದನು ಎಂದು ಹೇಳಬೇಕು.

    • ಇನ್ನೊಂದು ಸಮಯದಲ್ಲಿ ಯೇಸು ಪುನಃ ನದಿಯ ದಡದಲ್ಲಿ ಜನರಿಗೆ ಉಪದೇಶ ಮಾಡುತ್ತಿದ್ದನು.
    • ಯೇಸು ನದಿಯ ಬಳಿಗೆ ಹೋಗಿ ಜನರಿಗೆ ಉಪದೇಶ ಮಾಡಲು ತೊಡಗಿದನು
  1. ಪೀಠಿಕೆಯ ಮೂಲಕ ಪರಿಚಯಿಸುವ ಘಟನೆಯು ಸಂಕ್ಷಿಪ್ತ ಸಾರಾಂಶವಾಗಿದ್ದರೆ ನಿಮ್ಮ ಭಾಷೆಯಲ್ಲಿ ಇದೊಂದು ಸಾರಾಂಶ ಎಂದು ತೋರಿಸುವ ಪದಗಳನ್ನು ಬಳಸಿ
  • ಭೂಮಿಯ ಮೇಲೆ ಜಲಪ್ರಳಯವಾದಾಗ ನೋಹನಿಗೆ ಆರುನೂರು ವರ್ಷವಾಗಿತ್ತು . (ಆದಿಕಾಂಡ 7:6 ULB)
    • ಈಗ ಇದೇ ನಡೆದದ್ದು ನೋಹನು ಆರುನೂರು ವರ್ಷದವನಾಗಿದ್ದಾಗ ಭೂಮಿಯ ಮೇಲೆ ಜಲಪ್ರಳಯವಾಯಿತು.
    • ಈ ಭಾಗದ ವಾಕ್ಯವು ಭೂಮಿಯ ಮೇಲೆ ಜಲಪ್ರಳಯವಾದಾಗ ಏನಾಯಿತು ಎಂಬುದನ್ನು ತಿಳಿಸುತ್ತದೆ. ಇದು ನೋಹನು ಆರುನೂರು ವರ್ಷದ ವೃದ್ಧನಾದಾಗ ನಡೆಯಿತು.
  1. ನೀವು ಭಾಷಾಂತರಿಸುತ್ತಿರುವ ಭಾಷೆಯಲ್ಲಿ ಇದು ಅಸಹಜವಾಗಿ ಮೂಡಿಬಂದರೆ ಘಟನೆಯ ಸಾರಾಂಶವನ್ನು ಪ್ರಾರಂಭದಲ್ಲೇ ನೀಡಲಾಗುವುದು, ಆದುದರಿಂದ ಈ ಘಟನೆ ಕಥೆಯಲ್ಲಿ ಆಮೇಲೆ ನಡೆಯುತ್ತದೆ ಎಂದು ತಿಳಿಸಬೇಕು.
  • ನೋಹನು ಆರುನೂರು ವರ್ಷದವನಾದಾಗ ಭೂಮಿಯ ಮೇಲೆ ಜಲಪ್ರಳಯವಾಯಿತು.. ನೋಹ, ಅವನ ಮಗಂದಿರು, ಅವನ ಹೆಂಡತಿ, ಅವನ ಸೊಸೆಯಂದಿರೂ ಎಲ್ಲರೂ ನಾವೆಯೊಳಗೆ ಒಟ್ಟಾಗಿ ಹೋದರು, ಏಕೆಂದರೆ ಅಲ್ಲಿ ಜಲಪ್ರಳಯವಾಗಿತ್ತು (ಆದಿಕಾಂಡ 7:6-7 ULB).
    • ನೋಹನು ಆರುನೂರು ವರ್ಷದವನಾದಾಗಈ ಘಟನೆ ನಡೆಯಿತು .
    • ನೋಹ, ಅವನ ಗಂಡು ಮಕ್ಕಳು, ಅವನ ಹೆಂಡತಿ, ಅವನ ಸೊಸೆಯಂದಿರೂ ಎಲ್ಲರೂ ನಾವೆಯೊಳಗೆ ಒಟ್ಟಾಗಿ ಹೋದರು ಏಕೆಂದರೆ ದೇವರ ಅವರಿಗೆ ಜಲಪ್ರಳಯವಾಗಿ ಭೂಮಿ ಎಲ್ಲಾ ನೀರಿನಿಂದ ತುಂಬಿಹೋಗುತ್ತದೆ.ಎಂದು ಹೇಳಿದನು.