translationCore-Create-BCS_.../translate/writing-symlanguage/01.md

12 KiB

ವಿವರಣೆ

ಸಾಂಕೇತಿಕ ಭಾಷೆಯ ಭಾಷಣದಲ್ಲಿ ಮತ್ತು ಬರವಣಿಗೆಯಲ್ಲಿ ಇಲ್ಲವೆ ಭಾಷೆಯನ್ನು ಬಳಸುವಾಗ ಕೆಲವು ಗುರುತುಗಳನ್ನು ಬಳಸಿ ಬೇರೆ ವಸ್ತುಗಳು ಮತ್ತು ಘಟನೆಗಳನ್ನು ಪ್ರತಿನಿಧಿಸುತ್ತವೆ. ಸತ್ಯವೇದದಲ್ಲಿ ಇದು ಪ್ರವಾದನೆಗಳಲ್ಲಿ, ಪದ್ಯಗಳಲ್ಲಿ ಕಾಣಬಹುದು. ದರ್ಶನಗಳಲ್ಲಿ ಮತ್ತು ಕನಸಿನ ಬಗ್ಗೆ ಹೇಳುವಾಗ ಮತ್ತು ನಡೆಯಬೇಕಾದ ಘಟನೆಗಳ ಬಗ್ಗೆ ಹೇಳುವಾಗ ಇದನ್ನು ವಿಶೇಷವಾಗಿ ಬಳಸಲಾಗುತ್ತದೆ. ಓದುಗರು, ಜನರು ಇದನ್ನು ತಕ್ಷಣವೇ ಈ ಸಂಕೇತಗಳ ಅರ್ಥವನ್ನು ತಿಳಿದುಕೊಳ್ಳಲು ಸಾಧ್ಯವಾಗದಿದ್ದರೂ ಭಾಷಾಂತರದಲ್ಲಿ ಈ ಸಾಂಕೇತಗಳನ್ನು ಉಳಿಸಿಕೊಳ್ಳಲೇ ಬೇಕು.

" ನರಪುತ್ರನೇ, ನಿನಗೆ ಸಿಕ್ಕಿದ ಸುರುಳಿಯನ್ನು ತಿನ್ನು, ಇದರಲ್ಲಿರುವ ಸಂಗತಿಗಳನ್ನು ಇಸ್ರಾಯೇಲ್ ವಂಶದವರಿಗೆ ಸಾರು " (ಯೆಹೆಜ್ಕೇಲ 3:1 ULB)

ಇದು ನಡೆದದ್ದು ದರ್ಶನದಲ್ಲಿ. ಯೆಹೆಜ್ಕೇಲನು ಸುರುಳಿಯನ್ನು ತಿನ್ನು ಎನ್ನುವುದು ಸುರುಳಿಯ ಮೇಲೆ ಬರೆದಿರುವುದನ್ನು ಚೆನ್ನಾಗಿ ಓದಿ ಅರ್ಥಮಾಡಿಕೊಳ್ಳುವುದು ಮತ್ತು ಇದರಲ್ಲಿ ಬರೆದಿರುವುದು ದೇವರಿಂದ ಬಂದ ಮಾತುಗಳು ತನ್ನೊಳಗೆ ಅಳವಡಿಸಿಕೊಳ್ಳುವುದು ಎಂದು ಅರ್ಥ.

ಸಾಂಕೇತಿಕವಾಗಿ ಹೇಳುವ ಉದ್ದೇಶಗಳು

  • ಈ ಸಾಂಕೇತಿಕತೆಯ ಉದ್ದೇಶವೆಂದರೆ ಜನರು ಅದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುವುದು ಅಥವಾ ಒಂದು ಘಟನೆಯ ಮಹತ್ವವನ್ನು ಅರ್ಥವಾಗುವಂತೆ ತಿಳಿಸಲು ಬೇಕಾದ ಪದಗಳನ್ನು ಬಳಸಬೇಕು.
  • ಕೆಲವೊಮ್ಮೆ ಈ ಸಾಂಕೇತಿಕವಾದ ಉದ್ದೇಶವನ್ನು ಅರ್ಥಮಾಡಿಕೊಳ್ಳಲು ಮತ್ತು ನಿಜವಾದ ಅರ್ಥವನ್ನು ಗೌಣವಾಗಿಡಲು ಮತ್ತು ಅರ್ಥವಾಗದೇ ಇರುವವರಿಗೆ ತಿಳಿಸಲು ಪ್ರಯತ್ನಿಸುವುದು

ಕಾರಣ ಇದೊಂದು ಭಾಷಾಂತರ ವಿಷಯ

ಇಂದು ಸತ್ಯವೇದವನ್ನು ಓದುತ್ತಿರುವಾಗ ಸಾಂಕೇತಿಕವಾದ ಭಾಷೆಯನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗಬಹುದು ಮತ್ತು ಈ ಸಂಕೇತಗಳು ಯಾವ ಅರ್ಥವನ್ನುತಿಳಿಸುತ್ತದೆ ಎಂದು ತಿಳಿದುಕೊಳ್ಳಲು ಕಷ್ಟವಾಗಬಹುದು.

ಭಾಷಾಂತರದ ತತ್ವಗಳು

  • ಸಾಂಕೇತಿಕ ಭಾಷೆಯನ್ನು ಉಪಯೋಗಿಸಿದಾಗ ಸಂಕೇತಗಳನ್ನು ಭಾಷಾಂತರದ ಉಳಿಸಿಕೊಳ್ಳುವುದು ಮುಖ್ಯ.
  • ಮೂಲ ಭಾಷೆಯ ಲೇಖಕ ಅಥವಾ ಮಾತುಗಾರ ಹೇಳಿರುವುದಕ್ಕಿಂತ ಹೆಚ್ಚಾಗಿ ಸಂಕೇತಗಳನ್ನು ವಿವರಿಸಬಾರದು. ಅವರ ಉದ್ದೇಶ, ಅರ್ಥವನ್ನು ಪ್ರತಿಯೊಬ್ಬರೂ ಸುಲಭವಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು.

ಸತ್ಯವೇದದ ಉದಾಹರಣೆಗಳು

ಇದಾದ ನಂತರ ನಾನು ರಾತ್ರಿ ಕಂಡ ಕನಸಿನಲ್ಲಿ ನಾಲ್ಕನೆಯ ಮೃಗವು ಕಾಣಿಸಿತು, ಅದು ಭಯಂಕರವಾದದ್ದು, ಎದುರಿಸುವಂತದ್ದು, ಮತ್ತು ಅಧಿಕ ಬಲವುಳ್ಳದ್ದು. ಅದಕ್ಕೆ ಕಬ್ಬಿಣದ ದೊಡ್ಡ ಹಲ್ಲುಗಳಿದ್ದವು; ಅದು ನುಂಗುತ್ತಾ, ಚೂರುಚೂರು ಮಾಡುತ್ತಾ, ಮಿಕ್ಕದ್ದನ್ನು ಕಾಲುಗಳಿಂದ ತುಳಿಯುತ್ತಾ ಇತ್ತು. ಅದು ಎಲ್ಲಾ ಮೃಗಗಳಿಗಿಂತ ಭಿನ್ನವಾಗಿ ವಿಲಕ್ಷಣವಾಗಿತ್ತು, ಮತ್ತು ಅದಕ್ಕೆ ಹತ್ತು ಕೊಂಬುಗಳಿದ್ದವು. (ದಾನಿಯೇಲ 7:7 ULB)

ಕೆಳಗೆ ನೀಡಿರುವ ಸಂಕೇತಗಳ ಅರ್ಥವನ್ನು ದಾನಿಯೇಲ 7:23-24ರಲ್ಲಿ ವಿವರಿಸಲಾಗಿದೆ. ಮೃಗಗಳು ರಾಜ್ಯವನ್ನು ಪ್ರತಿನಿಧಿಸುತ್ತದೆ, ಕಬ್ಬಿಣದ ಹಲ್ಲುಗಳು ಶಕ್ತಿಶಾಲಿಯಾದ ಸೈನ್ಯವನ್ನು ಕೊಂಬುಗಳು ಬಲಶಾಲಿಯಾದ ನಾಯಕರನ್ನು ಪ್ರತಿನಿಧಿಸುತ್ತವೆ.

ಆಗ ದಾನಿಯೇಲನಿಗೆ ಅವನು ಆ ನಾಲ್ಕನೆಯ ಮೃಗವು ಲೋಕದಲ್ಲಿ ಮುಂಬರುವ ನಾಲ್ಕನೆಯ ರಾಜ್ಯ ಅದು ಮಿಕ್ಕ ರಾಜ್ಯಗಳಿಗಿಂತ ವಿಲಕ್ಷಣವಾಗಿ ಇರುತ್ತದೆ. ಅದು ಲೋಕವನ್ನೆಲ್ಲಾ ನುಂಗಿ ತುಳಿದು ಚೂರು ಚೂರು ಮಾಡುವುದು. ಆ ಹತ್ತು ಕೊಂಬುಗಳು ಎಂದರೆ ಆ ರಾಜ್ಯದಲ್ಲಿ ಹತ್ತು ಮಂದಿ ಅರಸರು ಉದ್ಭವಿಸುವರು ಮತ್ತು ಅವರ ತರುವಾಯ ಮತ್ತೊಬ್ಬನು ಬರುವನು. ಅವನು ಮೊದಲ ಅರಸರಿಗಿಂತ ವಿಭಿನ್ನವಾಗಿ ಇತರ ಮೂವರು ಅರಸರನ್ನು ಅಡಗಿಸಿ ಬಿಡುವನು (ದಾನಿಯೇಲ 7:23-24 ULB)

ನನ್ನ ಸಂಗಡ ಮಾತನಾಡುತ್ತಿದ್ದ ಶಬ್ದವು ಯಾರದು ಎಂದು ನೋಡುವುದಕ್ಕೆ ಹಿಂದಕ್ಕೆ ತಿರುಗಿದೆನು, ತಿರುಗಿದಾಗ ಏಳು ಚಿನ್ನದ ದೀಪಸ್ಥಂಭಗಳನ್ನು ನೋಡಿದೆ. ಆ ದೀಪಸ್ಥಂಭಗಳ ಮಧ್ಯದಲ್ಲಿ ಮನುಷ್ಯಕುಮಾರನಂತೆ ಇರುವವನನ್ನು ನಾನು ಕಂಡೆನು ... ಆತನ ಬಲಗೈಯಲ್ಲಿ ಏಳು ನಕ್ಷತ್ರಗಳಿದ್ದವು, ಆತನ ಬಾಯೊಳಗಿಂದ ಹದವಾದ ಇಬ್ಬಾಯಿ ಕತ್ತಿಯು ಹೊರಡುತ್ತಿತ್ತು…. ನನ್ನ ಬಲಗೈಯಲ್ಲಿ ನೀನು ಕಂಡ ಏಳು ನಕ್ಷತ್ರಗಳ ಮತ್ತು ಏಳು ಚಿನ್ನದ ದೀಪಸ್ಥಂಭಗಳ ಗೂಢಾರ್ಥವನ್ನು ವಿವರಿಸುತ್ತೇನೆ ಆ ಏಳು ನಕ್ಷತ್ರಗಳು ಅಂದರೆ ಏಳು ಸಭೆಗಳ ದೂತರು, ಮತ್ತು ಆ ಏಳು ದೀಪಸ್ಥಂಭಗಳು ಅಂದರೆ ಏಳು ಸಭೆಗಳು. (ಪ್ರಕಟಣೆ 1:12,13a 16a, 20 ULB)

ಈ ವಾಕ್ಯಭಾಗವು ಏಳುದೀಪಸ್ಥಂಭಗಳು ಮತ್ತು ಏಳು ನಕ್ಷತ್ರಗಳ ಬಗ್ಗೆ ಅರ್ಥವನ್ನು ತಿಳಿಸುವಂತದ್ದು. ಇಬ್ಬಾಯಿ ಕತ್ತಿಯು ದೇವರವಾಕ್ಯವನ್ನು ಮತ್ತು ನ್ಯಾಯತೀರ್ಪನ್ನು ಪ್ರತಿನಿಧಿಸುತ್ತದೆ

ಭಾಷಾಂತರದ ಕೌಶಲ್ಯಗಳು

(1) ವಾಕ್ಯಭಾಗವನ್ನು ಸಂಕೇತಗಳೊಂದಿಗೆ ಭಾಷಾಂತರಿಸಿ, ಆಗಿಂದಾಗ್ಗೆ ಲೇಖಕನು ಇಲ್ಲಿ ವಾಕ್ಯಭಾಗದ ಅರ್ಥವನ್ನು ನಂತರ ವಿವರಿಸುತ್ತಾನೆ

(2) ವಾಕ್ಯಭಾಗವನ್ನು ಸಂಕೇತಗಳೊಂದಿಗೆ ಭಾಷಾಂತರಿಸಿ, ಸಂಕೇತಗಳ ಅರ್ಥವಿವರಣೆಯನ್ನು ಅಡಿಟಿಪ್ಪಣಿಯಲ್ಲಿ ನೀಡಬಹುದು.

ಭಾಷಾಂತರ ತತ್ವಗಳನ್ನು ಅಳವಡಿಸಿರುವ ಬಗ್ಗೆ ಉದಾಹರಣೆಗಳು.

(1) ವಾಕ್ಯಭಾಗವನ್ನು ಸಂಕೇತಗಳೊಂದಿಗೆ ಭಾಷಾಂತರಿಸಿ, ಆಗಿಂದಾಗ್ಗೆ ಲೇಖಕನು ಇಲ್ಲಿ ವಾಕ್ಯಭಾಗದ ಅರ್ಥವನ್ನು ನಂತರ ವಿವರಿಸುತ್ತಾನೆ.

ಆ ವ್ಯಕ್ತಿಯು ಹೇಳಿದ್ದು ಇದನ್ನೇ, ‘ನಾಲ್ಕನೆಯ ಮೃಗವು ಭೂಮಿಯ ಮೇಲಿನ ಆ ನಾಲ್ಕನೇ ರಾಜ್ಯ ಆಗಿರುತ್ತದೆ ಮತ್ತು ಅದು ಎಲ್ಲಾ ರಾಜ್ಯಗಳಿಗಿಂತ ಭಿನ್ನವಾಗಿರುತ್ತದೆ. ಅದು ಇಡೀ ಭೂಮಿಯನ್ನು ನುಂಗಿಬಿಡುತ್ತದೆ, ಮತ್ತು ಅದು ಅದನ್ನು ತುಳಿದು ತುಂಡುಗಳಾಗಿ ಒಡೆಯುತ್ತದೆ. ಹತ್ತು ಕೊಂಬುಗಳಿಗೆ ಸಂಬಂಧಿಸಿದಂತೆ, ಈ ರಾಜ್ಯದಿಂದ ಹತ್ತು ರಾಜರು ಉದಯಿಸುವರು ಮತ್ತು ಅವರ ನಂತರ ಇನ್ನೊಬ್ಬರು ಉದ್ಭವಿಸುವರು. ಅವನು ಹಿಂದಿನವರಿಗಿಂತ ಭಿನ್ನನಾಗಿ ಮೂರು ರಾಜರನ್ನು ವಶಪಡಿಸಿಕೊಳ್ಳುವನು.' (ದಾನಿಯೇಲ 7:23-24ULT) (2) ವಾಕ್ಯಭಾಗವನ್ನು ಸಂಕೇತಗಳೊಂದಿಗೆ ಭಾಷಾಂತರಿಸಿ, ಸಂಕೇತಗಳ ಅರ್ಥವಿವರಣೆಯನ್ನು ಅಡಿಟಿಪ್ಪಣಿಯಲ್ಲಿ ನೀಡಬಹುದು.

ಇದರ ನಂತರ ನಾನು ರಾತ್ರಿಯ ನನ್ನ ದರ್ಶನಗಳಲ್ಲಿ ನಾಲ್ಕನೇ ಪ್ರಾಣಿ, ಭಯಾನಕವಾದದ್ದು, ಭಯಾನಕವಾದದ್ದು ಮತ್ತು ತುಂಬಾ ಬಲಶಾಲಿ. ಇದು ದೊಡ್ಡ ಕಬ್ಬಿಣದ ಹಲ್ಲುಗಳನ್ನು ಹೊಂದಿತ್ತು; ಅದು ಕಬಳಿಸಿತು, ತುಂಡು ತುಂಡಾಯಿತು ಮತ್ತು ಉಳಿದಿದ್ದನ್ನು ಪಾದಗಳ ಕೆಳಗೆ ತುಳಿದಿತು. ಇದು ಇತರ ಪ್ರಾಣಿಗಳಿಗಿಂತ ಭಿನ್ನವಾಗಿತ್ತು ಮತ್ತು ಅದು ಹತ್ತು ಕೊಂಬುಗಳನ್ನು ಹೊಂದಿತ್ತು. (ದಾನಿಯೇಲl 7:7 ULB)

ಇದರ ನಂತರ ನಾನು ರಾತ್ರಿಯಲ್ಲಿ ನನ್ನ ಕನಸಿನಲ್ಲಿ ನಾಲ್ಕನೇ ಪ್ರಾಣಿಯನ್ನು ನೋಡಿದೆ, 1 ಭಯಾನಕವಾದದ್ದು, ಎದುರಿಸುವಂತದ್ದು ಮತ್ತು ತುಂಬಾ ಬಲಶಾಲಿ. ಇದು ದೊಡ್ಡ ಕಬ್ಬಿಣದ ಹಲ್ಲುಗಳನ್ನು ಹೊಂದಿತ್ತು; 2 ಅದು ನುಂಗಿ, ತುಂಡುಗಳಾಗಿ ಮುರಿದು, ಉಳಿದಿದ್ದನ್ನು ಪಾದದಡಿಯಲ್ಲಿ ತುಳಿದಿದೆ. ಇದು ಇತರ ಪ್ರಾಣಿಗಳಿಗಿಂತ ಭಿನ್ನವಾಗಿತ್ತು, ಮತ್ತು ಹತ್ತು ಕೊಂಬುಗಳನ್ನು ಹೊಂದಿತ್ತು.< sup>3

ಅಡಿ ಟಿಪ್ಪಣಿಯಲ್ಲಿ ಈ ರೀತಿ ಇರುತ್ತವೆ:

[1] ಆ ಮೃಗವು ರಾಜ್ಯದ ಸಂಕೇತವಾಗಿದೆ. [2] ಕಬ್ಬಿಣದ ಹಲ್ಲುಗಳು ಅತಿ ಬಲವುಳ್ಳ ರಾಜ್ಯದ ಸೈನ್ಯವನ್ನು ಪ್ರತಿನಿಧಿಸುತ್ತದೆ. [3] ಹತ್ತು ಕೊಂಬುಗಳು ಬಲಾಢ್ಯರಾದ ರಾಜರ ಸಂಕೇತವಾಗಿದೆ.