translationCore-Create-BCS_.../translate/writing-proverbs/01.md

11 KiB

###ವಿವರಣೆ

ಜ್ಞಾನೋಕ್ತಿಗಳು ಚಿಕ್ಕ,ಚೊಕ್ಕ ರೀತಿಯಲ್ಲಿ ಹೇಳುವಂತಹ ನಾಣ್ನುಡಿಗಳಂತೆ. ಇವು ಜ್ಞಾನವನ್ನು ಕೊಡುವುದು ಮತ್ತು ಸತ್ಯಸಂಗತಿಗಳನ್ನು ಬೋಧಿಸುತ್ತದೆ. ಜ್ಞಾನೋಕ್ತಿಗಳನ್ನು ಜನರು ಬಹು ಮೆಚ್ಚಿಗೆಯಿಂದ ಸ್ವೀಕರಿಸುತ್ತಾರೆ ಏಕೆಂದರೆ ಇವು ಸಂಕ್ಷಿಪ್ತವಾಗಿ, ಕೆಲವೇ ಪದಗಳಿಂದ ಅಗಾಧವಾದ ಅರ್ಥವನ್ನು ಒಳಗೊಂಡಿರುತ್ತವೆ. ಸತ್ಯವೇದದಲ್ಲಿ ಬರುವ ಜ್ಞಾನೋಕ್ತಿಗಳು ಹೆಚ್ಚಾಗಿ ರೂಪಕ ಅಲಂಕಾರವನ್ನು ಮತ್ತು ಸಮಾನಾಂತರ ಅರ್ಥವನ್ನು ನೀಡುವ ಪದಗಳನ್ನು ಬಳಸುತ್ತವೆ.

ದ್ವೇಷವು ಜಗಳವನ್ನು ಉಂಟುಮಾಡುತ್ತದೆ. ಆದರೆ ಪ್ರೀತಿ ಎಲ್ಲಾ ಪಾಪಗಳನ್ನು ಮುಚ್ಚಿಹಾಕುತ್ತದೆ. (ಜ್ಞಾನೋಕ್ತಿಗಳು 10:12 ULB)

ಜ್ಞಾನೋಕ್ತಿಗಳಿಂದ ಇನ್ನೊಂದು ಉದಾಹರಣೆ.

ಸೋಮಾರಿಯೇ, ಇರುವೆ ಹತ್ತಿರ ಹೋಗಿ ಅದರ ನಡವಳಿಕೆಯನ್ನು ನೋಡಿ ಜ್ಞಾನವನ್ನು ಪಡೆದುಕೋ. ಅದಕ್ಕೆ ನಾಯಕ, ಅಧಿಕಾರಿ, ಪ್ರಭುಗಳು ಇಲ್ಲದಿದ್ದರೂ. ಬೇಸಿಗೆಯಲ್ಲಿ ತನ್ನ ತೀನಿಯನ್ನು ಕೂಡಿಡುವುದು. ಸುಗ್ಗಿಯ, ಕೊಯ್ಲಿನ ಕಾಲದಲ್ಲಿ ತನಗೆ ಬೇಕಾದಷ್ಟು ಆಹಾರವನ್ನು ಸಂಗ್ರಹಿಸಿ ಇಟ್ಟುಕೊಳ್ಳುವುದು. (ಜ್ಞಾನೋಕ್ತಿಗಳು 6:6-8 ULB)

ಕಾರಣ ಇದೊಂದು ಭಾಷಾಂತರ ವಿಷಯ

ಪ್ರತಿಯೊಂದು ಭಾಷೆಯಲ್ಲಿ ಇಂತಹ ಜ್ಞಾನೋಕ್ತಿಗಳನ್ನು ಅದರದೇ ಆದಶೈಲಿಯಲ್ಲಿ ಹೇಳುವ ಪದ್ಧತಿ ಇದೆ. ಸತ್ಯವೇದದಲ್ಲಿ ಅನೇಕ ಜ್ಞಾನೋಕ್ತಿಗಳಿವೆ. ನಿಮ್ಮ ಭಾಷೆಯ ಜನರು ಅವುಗಳನ್ನು ಹೇಗೆ ಹೇಳುತ್ತಾರೋ ಹಾಗೆ ಜ್ಞಾನೋಕ್ತಿಗಳನ್ನು ಭಾಷಾಂತರಿಸಬೇಕು.ಇದರಿಂದ ಅವು ಜ್ಞಾನೋಕ್ತಿಗಳು/ನಾಣ್ನುಡಿಗಳು ಮತ್ತು ಅವು ಏನನ್ನು ಬೋಧಿಸಲು/ಹೇಳಲು ಪ್ರಯತ್ನಿಸುತ್ತಿವೆ.ಎಂಬುದನ್ನು ಸುಲಭವಾಗಿ ಅರ್ಥಮಾಡಿಕೊಳ್ಳುತ್ತಾರೆ.

###ಸತ್ಯವೇದದಲ್ಲಿನ ಕೆಲವು ಉದಾಹರಣೆಗಳು

ಬಹು ಐಶ್ವರ್ಯಕ್ಕಿಂತಲೂ ಒಳ್ಳೆಯ ಹೆಸರು ಉತ್ತಮ, ಬೆಳ್ಳಿ ಬಂಗಾರಕ್ಕಿಂತಲೂ ಸತ್ಕೀರ್ತಿಯು ಅಮೂಲ್ಯವಾದುದು. (ಜ್ಞಾನೋಕ್ತಿಗಳು 22:1 ULB)

ಇದರ ಅರ್ಥ ಐಶ್ವರ್ಯ, ಬೆಳ್ಳಿ ಬಂಗಾರವನ್ನು ಹೊಂದುವುದಕ್ಕಿಂತ ಒಳ್ಳೆ ವ್ಯಕ್ತಿಯಾಗಿ ಒಳ್ಳೆಯಹೆಸರನ್ನು ಪಡೆಯಲು ಪ್ರಯತ್ನಿಸುವುದೇ ಉತ್ತಮವಾದುದು.

ಹಲ್ಲುಗಳಿಗೆ ಹುಳಿಯೂ, ಕಣ್ಣುಗಳಿಗೆ ಹೊಗೆಯು ಹೇಗೋ ಹಾಗೆ ಯಜಮಾನನಿಗೆ ಸೋಮಾರಿಯು. (ಜ್ಞಾನೋಕ್ತಿಗಳು 10:26 ULB)

ಇದರ ಅರ್ಥ ಸೋಮಾರಿಯಾದ ಆಳು ಯಜಮಾನನಿಗೆ ನಿಷ್ಪ್ರಯೋಜಕ.

ಯೆಹೋವನು ಸನ್ಮಾರ್ಗಿಗೆ ಆಶ್ರಯ. ಕೆಡುಕನಿಗೆ ನಾಶ ನೀಡುತ್ತಾನೆ. (ಜ್ಞಾನೋಕ್ತಿಗಳು 10:29 ULB)

ಇದರ ಅರ್ಥ ಯಾರು ಉತ್ತಮ ನಡತೆಯಿಂದ ನಡೆಯುತ್ತಾರೋ ಅವರನ್ನು ದೇವರು ಆಶೀರ್ವದಿಸಿ ರಕ್ಷಿಸುತ್ತಾನೆ ಆದರೆ ದುಷ್ಟ ಮಾರ್ಗದಲ್ಲಿ ನಡೆಯುವವರಿಗೆ ನಷ್ಟವನ್ನು ನಾಶವನ್ನು ತರುತ್ತಾನೆ.

ಭಾಷಾಂತರ ತಂತ್ರಗಳು

ನಿಮ್ಮ ಭಾಷೆಯಲ್ಲಿ ಜ್ಞಾನೋಕ್ತಿಗಳನ್ನು ಅಕ್ಷರಷಃ ಭಾಷಾಂತರಿಸಿದರೆ ಸರಿಯಾದ ಅರ್ಥವನ್ನು ಸಹಜವಾಗಿ ನೀಡುವುದಾದರೆ ಅದನ್ನೇ ಉಪಯೋಗಿಸಿ ಇದಾಗದಿದ್ದರೆ ಇಲ್ಲಿ ಕೆಲವು ಅಂಶಗಳನ್ನು ನೀಡಿದೆ.

  1. ಜನರು ನಿಮ್ಮ ಭಾಷೆಯಲ್ಲಿ ಜ್ಞಾನೋಕ್ತಿಗಳನ್ನು/ ಹೇಗೆ ಬಳಸುತ್ತಾರೆ ಎಂಬುದನ್ನು ಗಮನಿಸಿ ಅದನ್ನೇ ಉಪಯೋಗಿಸಿ.
  2. ನಿಮ್ಮ ಭಾಷೆಯಲ್ಲಿ ಜ್ಞಾನೋಕ್ತಿಗಳು/ನಾಣ್ನುಡಿಗಳು ಅನೇಕ ಜನರಿಗೆ ಪರಿಚಯವಿದ್ದರೆ ಜನರಿಗೆ ಗೊತ್ತಿರುವ ಭಾಷೆಯ ಪದಗಳನ್ನು ಬಳಸಿ ಮೂಲಭಾಷೆಯಲ್ಲಿನ ಪದಗಳ ಅರ್ಥಕೆಡದಂತೆ ಬಳಸಬೇಕು.
  3. ಸತ್ಯವೇದದ ಜ್ಞಾನೋಕ್ತಿ ಅರ್ಥಕ್ಕೆ ಸಮಾನವಾದ ಅರ್ಥಕೊಡುವ, ಬೋಧನೆ ನೀಡುವ ಪದವನ್ನು ನೀವು ಭಾಷಾಂತರಿಸುವ ಭಾಷೆಯಲ್ಲಿ ಸೂಕ್ತ ಪದವನ್ನು ಹುಡುಕಿ ಸರಿಹೊಂದಿಸಬೇಕು.
  4. ಮೂಲಭಾಷೆಯ ಬೋಧನೆಯ ಅರ್ಥವನ್ನು ನೀಡಬೇಕೆ ಹೊರತು ಜ್ಞಾನೋಕ್ತಿಯ ಮಾದರಿಯಲ್ಲಿ ಅಲ್ಲ.

ಭಾಷಾಂತರ ಕೌಶಲ್ಯಗಳನ್ನು ಅಳವಡಿಸಿರುವ ಬಗ್ಗೆ ಉದಾಹರಣೆಗಳು.

  1. ಜನರು ನಿಮ್ಮ ಭಾಷೆಯಲ್ಲಿ ಜ್ಞಾನೋಕ್ತಿಗಳನ್ನು ಹೇಗೆ ಉಪಯೋಗಿಸುತ್ತಾರೆ ಎಂಬುದನ್ನು ತಿಳಿದು ಅದರಲ್ಲಿ ಒಂದು ವಿಧಾನವನ್ನು ಬಳಸಬಹುದು.
  • ಬಹು ಐಶ್ವರ್ಯಗಳಿಸುವುದಕ್ಕಿಂತ ಒಳ್ಳೆಯ ಹೆಸರು ಪಡೆಯುವುದನ್ನು ಆಯ್ಕೆ ಮಾಡಿಕೊಳ್ಳಬೇಕು. ಬೆಳ್ಳಿಬಂಗಾರಕ್ಕಿಂತ ಸತ್ಕೀರ್ತಿ ಪಡೆಯುವುದು ಅಮೂಲ್ಯವಾದುದು. (ಜ್ಞಾನೋಕ್ತಿಗಳು22:1 ULB) ಇಲ್ಲಿ ಜನರು ತಮ್ಮ ಭಾಷೆಯಲ್ಲಿ ಜ್ಞಾನೋಕ್ತಿಗಳನ್ನು ಯಾವ ರೀತಿ ಹೇಳಬಹುದು ಎಂಬುದನ್ನು ನೋಡೋಣ.
    • ಹೆಚ್ಚು ಐಶ್ವರ್ಯವನ್ನು ಪಡೆಯಲು ಬಯಸುವುದಕ್ಕಿಂತ ಒಳ್ಳೆಯ ಹೆಸರನ್ನು ಜನರ ಬೆಂಬಲ,ಆದರಣೆಯನ್ನು ಪಡೆಯುವುದು ಬೆಳ್ಳಿ ಬಂಗಾರಕ್ಕಿಂತ ಶ್ರೇಷ್ಠವಾದುದು.
    • ಬುದ್ಧಿವಂತ ಜನರು ಐಶ್ವರ್ಯಕ್ಕಿಂತ, ಬೆಳ್ಳಿ ಬಂಗಾರಕ್ಕಿಂತ ಜನರಿಂದ ಗೌರವ, ಮನ್ನಣೆ ಪಡೆಯಲು ಇಚ್ಛಿಸುತ್ತಾರೆ.
    • ಬಹು ಐಶ್ವರ್ಯ, ಸಂಪತ್ತಿಗಿಂತ ಒಳ್ಳೆಯ ಹೆಸರು ಪಡೆಯಲು ಬಯಸುತ್ತಾರೆ. ಐಶ್ವರ್ಯ ನಿಮಗೆ ನಿಜವಾಗಲೂ ಸಹಾಯ ಮಾಡುತ್ತದೆಯೇ? ನಾನು ಒಳ್ಳೆ ಹೆಸರನ್ನು ಪಡೆಯಲು ಬಯಸುತ್ತೇನೆ.
  1. ನಿಮ್ಮ ಭಾಷೆಯಲ್ಲಿ ಜ್ಞಾನೋಕ್ತಿಗಳು ಅನೇಕ ಜನರಿಗೆ ಪರಿಚಯವಿದ್ದರೆ ಜನರಿಗೆ ಗೊತ್ತಿರುವ ಭಾಷೆಯ ಪದಗಳನ್ನು ಬಳಸಿ ಮೂಲಭಾಷೆಯಲ್ಲಿನ ಪದಗಳ ಅರ್ಥಕೆಡದಂತೆ ಬಳಸಬೇಕು.
  • ಬೇಸಿಗೆಯಲ್ಲಿ ಹಿಮ ಸುಗ್ಗಿಯಲ್ಲಿ ಮಳೆ .ಹಾಗೇ ಮೂರ್ಖರಿಗೆ ಮನ್ನಣೆ ನೀಡುವುದು ತರವಲ್ಲ. (ಜ್ಞಾನೋಕ್ತಿಗಳು 26:1 ULB)
    • ಬೇಸಿಗೆಯ ಕಾಲದಲ್ಲಿ ಹಿಮ ಸುರಿಯುವುದು, ತಂಪಾದಗಾಳಿ ಬೀಸುವುದು ಸುಗ್ಗಿಯ ಕಾಲದಲ್ಲಿ ಮಳೆ ಬರುವುದು ಹೇಗೆ ಅಸಹಜವಾಗಿರುತ್ತದೋ ಹಾಗೆ ಮೂರ್ಖನನ್ನು ಗೌರವಿಸಿ ಮನ್ನಣೆ ನೀಡುವುದೂ ಅಸಹಜವಾಗಿರುತ್ತದೆ.
  1. ಸತ್ಯವೇದದ ಜ್ಞಾನೋಕ್ತಿ ಅರ್ಥಕ್ಕೆ ಸಮಾನವಾದ ಅರ್ಥಕೊಡುವ, ಬೋಧನೆ ನೀಡುವ ಪದವನ್ನು ನೀವು ಭಾಷಾಂತರಿಸುವ ಭಾಷೆಯಲ್ಲಿ ಸೂಕ್ತ ಪದವನ್ನು ಹುಡುಕಿ ಸರಿಹೊಂದಿಸಬೇಕು.
  • ನಾಳೆ ಎಂದು ಜಂಬ ಕೊಚ್ಚಿಕೊಳ್ಳಬೇಡ (ಜ್ಞಾನೋಕ್ತಿಗಳು 27:1 ULB)
    • ಕೋಳಿಮೊಟ್ಟೆಗೆ ಕಾವುಕೊಟ್ಟು ಮರಿಗಳು ಹೊರಬರುವ ಮೊದಲೇ ಕೋಳಿಮರಿಗಳನ್ನು ಲೆಕ್ಕಹಾಕಬೇಡ.
  1. ಮೂಲಭಾಷೆಯ ಬೋಧನೆಯ ಅರ್ಥವನ್ನು ನೀಡಬೇಕೆ ಹೊರತು ಜ್ಞಾನೋಕ್ತಿಯ ಮಾದರಿಯಲ್ಲಿ ಅಲ್ಲ.
  • ತಾಯಿಗೆ ಶುಭವನ್ನು ಕೋರದೆ ತಂದೆಯನ್ನು ಶಪಿಸುವ ಜನಾಂಗ ಉಂಟು
  • ತಮ್ಮ ಕೊಳೆಯನ್ನು ತೊಳಕೊಳ್ಳದೆ ತಾವೇ ಶುದ್ಧರೆಂದು,
  • ಹೇಳಿಕೊಳ್ಳುವ ಜನಾಂಗವೊಂದು ಉಂಟು(ಜ್ಞಾನೋಕ್ತಿಗಳು 30:11-12 ULB)
    • ಕೆಲವರು ತಮ್ಮತಂದೆತಾಯಿಗಳಿಗೆ ಗೌರವ ಕೊಡದೆ ತಾವೇ ನೀತಿವಂತರೆಂದು ಹೇಳುತ್ತಾ ತಮ್ಮ ಪಾಪಗಳಿಂದ ತಿದ್ದಿಕೊಂಡು ಬದಲಾಗುವುದಕ್ಕೆ ಒಪ್ಪುವುದಿಲ್ಲ.