translationCore-Create-BCS_.../checking/verses/01.md

5.3 KiB
Raw Blame History

ನಿಮ್ಮ ಉದ್ದೇಶಿತ ಭಾಷೆಯ ಅನುವಾದವು ಮೂಲ ಭಾಷೆಯ ಸತ್ಯವೇದದಲ್ಲಿ ರುವ ಎಲ್ಲಾ ವಚನವನ್ನು ಒಳಗೊಂಡಿರುವುದು ಮುಖ್ಯ. ಯಾವುದೇ ವಚನಗಳು ಕಾಣೆಯಾಗಿರುವುದನ್ನು ನಾವು ಬಯಸುವುದಿಲ್ಲ. ಆದರೆ ಕೆಲವು ಸತ್ಯವೇದಗಳಲ್ಲಿ ಇತರ ಸತ್ಯವೇದದಲ್ಲಿಲ್ಲದ ವಚನಗಳನ್ನು ಹೊಂದಲು ಉತ್ತಮ ಕಾರಣಗಳಿವೆ ಎಂದು ನೆನಪಿಡಿ.

ವಚನಗಳು ಬಿಟ್ಟುಹೋಗಿರಲು ಕಾರಣಗಳು

  1. ಪಠ್ಯ ರೂಪಾಂತರಗಳು ನಂತರ ಸೇರಿಸಲಾದ ಕೆಲವು ವಚನಗಳು ಸತ್ಯವೇದದ ಮೂಲವಾಗಿದ್ದವು ಎಂದು ಅನೇಕ ಸತ್ಯವೇದದ ವಿದ್ವಾಂಸರು ನಂಬುವುದಿಲ್ಲ. ಆದುದರಿಂದ ಕೆಲವು ಸತ್ಯವೇದದ ಅನುವಾದಕರು ಈ ವಚನಗಳನ್ನು ಸೇರಿಸುವುದಿಲ್ಲ ಅಥವ ಅಡಿಪಟ್ಟಿಗಳಾಗಿ ಮಾತ್ರ ಸೇರಿಸುತ್ತಾರೆ. (ಈ ಬಗ್ಗೆ ಹೆಚ್ಚಿನ ಮಾಹಿತಿಗಾಗೆ ಪಾಠ್ಯ ರೂಪಾಂತರ ನೋಡಿರಿ.) ಈ ವಚನಗಳನ್ನು ಸೇರಿಸುತ್ತೀರೋ ಅಥವಾ ಇಲ್ಲವೋ ಎಂಬುವುದನ್ನು ನಿಮ್ಮ ಅನುವಾದ ತಂಡವು ನಿರ್ಧರಿಸಬೇಕು
  2. ವಿಭಿನ್ನ ಸಂಖ್ಯೆ- ಕೆಲವು ಸತ್ಯವೇದವು ಇತರ ಸತ್ಯವೇದಗಿಂತ ಬೇರೆ ವಚನ ಸಂಖ್ಯೆಯ ವ್ಯವಸ್ಥೆಯನ್ನು ಬಳಸುತ್ತದೆ. (ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ,ಅಧ್ಯಾಯ ಮತ್ತು ವಚನ ಸಂಖ್ಯ) ನೋಡಿರಿ. ನಿಮ್ಮ ಅನುವಾದ ತಂಡವು ಯಾವ ವ್ಯವಸ್ಥೆಯನ್ನು ಬಳಸಬೇಕೆಂದು ನಿರ್ಧರಿಸುವ ಅಗತ್ಯವಿದೆ.
  3. ವಚನಗಳ ಸೇತುವೆಗಳು ಸತ್ಯವೇದದ ಕೆಲವು ಅನುವಾದದಲ್ಲಿ, ಎರಡು ಅಥವ ಹೆಚ್ಚಿನ ವಚನಗಳನ್ನು ಮರುಜೋಡಿಸಲಾಗಿದೆ ಇದರಿಂದ ಮಾಹಿತಿಯ ಕ್ರಮವು ಹೆಚ್ಚು ತಾರ್ಕಿಕ ಮತ್ತು ಅರ್ಥಮಾಡಿಕೊಳ್ಳಲು ಸುಲಭವಾಗುತ್ತದೆ. ಇದು ಸಂಭವಿಸಿದಾಗ ವಚನ ಸಂಖ್ಯೆಗಳು 4-5 ಅಥವ 4-6 ಹಾಗೆ ಸಂಯೋಜಿಸಲಾಗುತ್ತದೆ. ಕೆಲೆವೊಮ್ಮೆ UST ಇದನ್ನು ಮಾಡುತ್ತದೆ. ಏಕೆಂದರೆ ಎಲ್ಲಾ ವಚನ ಸಂಖ್ಯೆಗಳು ಗೋಚರಿಸುವುದಿಲ್ಲ ಅಥವಾ ಅವು ಎಲ್ಲಿ ಇರಬೇಕೆಂದು ನೀವು ನಿರೀಕ್ಷಿಸುತ್ತೀರೋ ಅಲ್ಲಿ ಅವು ಗೋಚರವಾಗುವುದಿಲ್ಲ, ಕೆಲವು ವಚನಗಳು ಕಾಣೆಯಾಗಿರುವಂತೆ ಕಾಣಿಸಬಹುದು. ಆದರೆ ಆ ವಚನಗಳಲ್ಲಿನ ವಿಷಯಗಳು ಹಾಗೆ ಇರುತ್ತದೆ.(ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ,ವಚನಗಳ ಸೇತುವೆಗಳು) ನೋಡಿರಿ. ನಿಮ್ಮ ಅನುವಾದ ತಂಡವು ವಚನ ಸೇತುವೆಗಳನ್ನು ಬಳಸಬೇಕೆ ಅಥವಾ ಬೇಡವೇ ಎಂಬುವುದನ್ನು ನಿರ್ಧರಿಸುವ ಅಗತ್ಯವಿದೆ.

ಕಾಣೆಯಾದ ವಚನಗಳಿಗಾಗಿ ಪರಿಶೀಸಲಾಗುತ್ತದೆ

ನಿಮ್ಮ ಅನುವಾದದಲ್ಲಿ ಬಿಟ್ಟು ಹೋಗಿರುವ ವಚನಗಳನ್ನು ಪರಿಶಿಲಿಸಲು, ಪುಸ್ತಕವನ್ನು ಪರಿಶೀಲಿಸಿದ ನಂತರ, ಅನುವಾದವನ್ನು ಪ್ಯಾರಟೆಕ್ಸ್ಟ್ಗ್ ಗೆ ಅಮದಮಾಡಿ. ನಂತರ “ಅಧ್ಯಾಯ/ವಚನಗಳ ಸಂಖ್ಯೆಗಳು” ಪರಿಶೀಲಿಸಿ .ಪ್ಯಾರಟೆಕ್ಸ್ಟ್ ಬಿಟ್ಟುಹೋಗಿರುವ ವಚನಗಳನ್ನು ನಿಮಗೆ ತೋರಿಸಿಕೊಡುತ್ತದೆ , ಪುಸ್ತಕದ ಎಲ್ಲೆಡಯ ಪಟ್ಟಿಯನ್ನು ನೀಡುತ್ತದೆ. ಮೇಲಿನ ಮೂರು ಕಾರಣಗಳಲ್ಲಿ ಒಂದಾದ ಕಾರಣ ನೀವು ಆ ಪ್ರತಿಯೊಂದು ಸ್ಥಳಗಳನ್ನು ನೋಡಬಹುದು ಮತ್ತು ವಚನದ ಉದ್ದೇಶಪೂರ್ವಕವಾಗಿ ಕಾಣೆಯಾಗಿದೆ ಎಂದು ನಿರ್ಧರಿಸಬಹುದು, ಅಥವಾ ವಚನವು ತಪ್ಪಾಗಿ ಬಿಟ್ಟುಹೋಗಿದ್ದರೆ ನೀವು ಮತ್ತೆ ವಚನವನ್ನು ಅನುವಾದಿಸಬೇಕಾಗಿದೆ.