translationCore-Create-BCS_.../translate/translate-versebridge/01.md

10 KiB

ವಿವರಣೆಗಳು.

ಕೆಲವು ವಿರಳವಾದ ಸನ್ನಿವೇಶಗಳಲ್ಲಿ Unlocked Literal Bible (ULB) ಅಥವಾ Unlocked Dynamic Bible (UDB) ಸತ್ಯವೇದಗಳಲ್ಲಿ ಎರಡು ಅಥವಾ ಮೂರು ಒಟ್ಟಾಗಿ ಸೇರಿಸಿ ಬರೆಯಲಾಗಿದೆ. ಉದಾಹರಣೆಗೆ 17-18.

ಇದನ್ನು ವಾಕ್ಯಬಂಧ / ವಾಕ್ಯ ಸೇತುವೆ ಎಂದು ಕರೆಯುತ್ತಾರೆ. ಇದರ ಅರ್ಥ ವಾಕ್ಯಭಾಗಗಳಲ್ಲಿರುವ ಮಾಹಿತಿಗಳನ್ನು ಪುನರ್ ರಚಿಸಿ ಕತೆ ಅಥವಾ ಸಂದೇಶಗಳನ್ನು ಹೆಚ್ಚು ಅರ್ಥಪೂರ್ಣವಾಗಿಸಲು ಪ್ರಯತ್ನಿಸುವುದು.

29ಕೆಳಗೆ ನಮೂದಿಸಿರುವ ಕುಲಗಳು ಹೋರಿಯರ ಕುಲಗಳು. ಲೋಟಾನ್,ಶೊಬಾಲ, ಸಿಬೆಯೋನ್, ಅನಾಹ, ದಿಶೋನ್,ಏಚರ್, ದಿಶಾನ್, ಇವರು ಹೋರಿಯರಿಂದ ಹುಟ್ಟಿದವರಾಗಿ ಸೇಯಿಯರ್ ಸೀಮೆಯಲ್ಲಿ ಅಧಿಪತ್ಯ ನಡೆಸಿದವರು.30 (ಆದಿಕಾಂಡ 26:29-30 ULB)

<>29-30ಹೋರಿಯರ ಕುಲದವರು, ಜನಾಂಗದವರು ಸೇಯಿರ್ ಸೀಮೆಯಲ್ಲಿ ವಾಸಿಸುತ್ತಿದ್ದರು. ಕುಲದವರ / ಜನಾಂಗದವರ ಹೆಸರು ಲೋಟಾನ್, ಶೊಬಾಲ, ಸಿಬೆಯೋನ್, ಅನಾಹ, ದಿಶೋನ್,ಏಚರ್, ದಿಶಾನ್ ಎಂಬುದು. (ಆದಿಕಾಂಡ 26:29-30 UDB)</>

ULB ಬೈಬಲ್ ನ ವಾಕ್ಯಭಾಗದ 29 ಮತ್ತು 30ನೇ ವಾಕ್ಯಗಳು ಪ್ರತ್ಯೇಕವಾಗಿವೆ.ಮತ್ತು ಸೇಯಿರ್ ಸೀಮೆಯಲ್ಲಿ ವಾಸಿಸುತ್ತಿರುವ ಜನರ ಬಗೆಗಿನ ಮಾಹಿತಿ 30ನೇ ವಾಕ್ಯದ ಕೊನೆಯಲ್ಲಿ ಬರುತ್ತದೆ. UDB ಬೈಬಲ್ ನ ವಾಕ್ಯಭಾಗದಲ್ಲಿ ವಾಕ್ಯಗಳು ಸೇರಿಸಲ್ಪಟ್ಟಿವೆ. ಮತ್ತು ಸೇಯಿರ್ ಸೀಮೆಯಲ್ಲಿ ವಾಸಿಸುವ ಜನರ ಬಗೆಗಿನ ಸತ್ಯವೇದದಲ್ಲಿನ ಉದಾಹರಣೆಗಳು ಮಾಹಿತಿ ಪ್ರಾರಂಭದಲ್ಲೇ ನೀಡಲಾಗಿದೆ. ಅನೇಕ ಭಾಷೆಯಲ್ಲಿ ಈ ಕ್ರಮವೇ ತರ್ಕಬದ್ಧವಾದ ಕ್ರಮದ ಮಾಹಿತಿ.

ಸತ್ಯವೇದದಿಂದ ಉದಾಹರಣೆಗಳು

ಕೆಲವೊಮ್ಮೆ ULB ಯಲ್ಲಿ ವಾಕ್ಯಗಳು ಪ್ರತ್ಯೇಕವಾಗಿ ಬರುತ್ತವೆ. ಆದರೆ UDB ಯಲ್ಲಿ ವಾಕ್ಯಗಳು ಒಟ್ಟಾಗಿ ಸೇರಿ ಬರುತ್ತವೆ

4ಆದರೆ ನೀವು ನಿಮ್ಮ ದೇವರಾದ ಯೆಹೋವನ ಮಾತಿಗೆ ಕಿವಿಗೊಟ್ಟು ನಾನೀಗ ನಿಮಗೆ ಬೋಧಿಸುವ ಈ5ಧರ್ಮೋಪದೇಶವನ್ನೆಲ್ಲಾ ಅನುಸರಿಸಿದರೆ ಯೆಹೋವನು ತಾನು ನಿಮಗೆ ಸ್ವದೇಶವಾಗಿ ಕೊಡುವ ದೇಶದಲ್ಲಿ ನಿಮ್ಮನ್ನು ಅಭಿವೃದ್ಧಿಪಡಿಸುವುದರಿಂದ ನಿಮ್ಮಲ್ಲಿ ಬಡವರೇ ಇರುವುದಿಲ್ಲ. (ಧರ್ಮೋಪದೇಶಕಾಂಡ 15:4-5 ULB)

<>4-5ಯೆಹೋವನು ತಾನು ನಿಮಗೆ ಸ್ವದೇಶವಾಗಿ ಕೊಡುವ ದೇಶದಲ್ಲಿ ನಿಮ್ಮ ಅಭಿವೃದ್ಧಿ ಪಡಿಸುವನು. ನೀವು ನಿಮ್ಮ ದೇವರಾದ ಯೆಹೋವನ ಮಾತಿಗೆ ಕಿವಿಗೊಟ್ಟು ನಾನೀಗ ನಿಮಗೆ ಬೋಧಿಸುವ ಧರ್ಮೋಪದೇಶವನ್ನು ಅನುಸರಿಸಿದರೆ ನಿಮ್ಮಲ್ಲಿ ಬಡವರೇ ಇರುವುದಿಲ್ಲ. (ಧರ್ಮೋಪದೇಶಕಾಂಡ 15:4-5 UDB))</>

ULBಯಲ್ಲಿ ಕೆಲವು ವಾಕ್ಯಬಂಧ / ಸೇತುವೆ ಇದೆ.

17-18ಎಜ್ರನ ಮಕ್ಕಳು ಯೆತೆರ್, ಮೆರೆದ್, ಏಫೆರ್ ಮತ್ತು ಯಾಲೋನ್. ಎಂಬುವವರು. ಮೆರೆದನು ಫರೋಹನ ಮಗಳಾದ ಬಿತ್ಯಳನ್ನು ಮದುವೆ ಮಾಡಿಕೋಡನು.ಇವರಿಂದ ಮಿರ್ಯಾಮ್, ಶಮ್ಮೈ, ಇಷಬಾದವರ ಮೂಲಪುರುಷನಾದ ಇಷ್ಟಹ ವರನ್ನು ಪಡೆದರು. ಯೆಹೂದ್ಯಳಾದ ಅವನ ಇನ್ನೊಬ್ಬ ಹೆಂಡತಿ ಗೆದೆರ್ಯೋರ ಮೂಲಪುರುಷನಾದ ಯೆರೆದ್, ಸೋಕೋವಿನವರ ಮೂಲಪುರುಷನಾದ ಹೆಬೆರ್,ಜಾನೋಹದವರ ಮೂಲಪುರುಷನಾದ ಯೆಕೊತೀಯೆಲ್ ಇವರನ್ನು ಹೆತ್ತಳು. (1 ನೇ ಪೂರ್ವಕಾಲ ವೃತ್ತಾಂತ 4:17-18 ULB)

ULB ಬೈಬಲ್ ನಲ್ಲಿ ಅಡ್ಡಗೆರೆಯಿಂದ ಗುರುತಿಸಿದ ವಾಕ್ಯಗಳು 18 ನೇ ವಾಕ್ಯದಿಂದ 17ನೇ ವಾಕ್ಯದವರೆಗೆ ಸ್ಪಷ್ಟವಾಗಿ ತೋರಿಸುತ್ತದೆ ಮತ್ತು ಅವರೆಲ್ಲ ಬಿತ್ಯಳ ಮಗಂದಿರು ಎಂದು ಸೂಚಿಸುತ್ತದೆ. ಇಲ್ಲಿರುವ ಮೂಲಕ್ರಮ ಮೂಲಕ್ರಮ ಓದುಗರಿಗೆ ಗೊಂದಲ ಉಂಟುಮಾಡುತ್ತದೆ.

17ನೇ ವಾಕ್ಯದಲ್ಲಿ ಎಜ್ರನ ಮಕ್ಕಳ ಬಗ್ಗೆ ಇದೆ. ಯೆತೆರ್, ಮೆರೆದ್, ಏಫೆರ್ ಮತ್ತು ಯಾಲೋನ್. ಅವಳು ಗರ್ಭಿಣಿಯಾಗಿ ಮಿರ್ಯಾಮ್, ಶಮ್ಮೈ, ಇಷಬಾದವರ ಮೂಲಪುರುಷನಾದ ಇಷ್ಟಹನನ್ನು ಪಡೆದಳು 18ನೇ ವಾಕ್ಯದಲ್ಲಿ ಅವನ ಯೆಹೂದ್ಯಳಾದ ಇನ್ನೊಬ್ಬ ಹೆಂಡತಿಯು ಗೆದೆರ್ಯೋರ ಮೂಲಪುರುಷನಾದ ಯೆರೆದ್, ಸೋಕೋವಿನವ ಮೂಲಪುರುಷನಾದ ಹೆಬೆರ್,ಜಾನೋಹದವರ ಮೂಲಪುರುಷನಾದ ಯೆಕೊತೀಯೆಲ್ ಇವರನ್ನು ಹಡೆದಳು. ಇವರೆಲ್ಲರೂ ಫರೋಹನ ಮಗಳಾದ ಬಿತ್ಯಳಿಂದ ಮೆರೆದನನ್ನು ಮದುವೆಯಾದುದರಿಂದ ಪಡೆದಳು. (1 ನೇ ಪೂರ್ವಕಾಲ ವೃತ್ತಾಂತ 4:17-18 TNK)

ಭಾಷಾಂತರ

ಮಾಹಿತಿಗಳನ್ನು ಕ್ರಮವಾಗಿ ಇಟ್ಟರೆ ಅವು ಓದುಗರಿಗೆ ಅರ್ಥವಾಗುವುದು ಸುಲಭವಾಗುತ್ತದೆ.

  1. ನೀವು ಮಾಹಿತಿಯನ್ನು ಒಂದು ವಾಕ್ಯದ ಮೊದಲು ಬರೆದು ಮೊದಲ ವಾಕ್ಯಕ್ಕೂ ಎರಡನೇ ವಾಕ್ಯಕ್ಕೂ ನಡುವೆ ಒಂದು ಸಣ್ಣ ಅಡ್ಡಗೆರೆ ಹಾಕಿ ಎರಡು ವಾಕ್ಯಗಳ ಸಂಖ್ಯೆಯನ್ನು ಕ್ರಮವಾಗಿ ಬರೆಯಬೇಕು.
  2. ULBಯಲ್ಲಿ ಈ ರೀತಿಯ ವಾಕ್ಯಬಂಧ / ಸೇತುವೆ ಇದ್ದು, ನೀವು ಬಳಸುತ್ತಿರುವ ಸತ್ಯವೇದದಲ್ಲಿ ಇಲ್ಲದಿದ್ದರೆ ನೀವು ನಿಮ್ಮ ಭಾಷೆಯಲ್ಲಿ ಯಾವುದು ಉತ್ತಮವೋ ಆ ಕ್ರಮವನ್ನು ಆಯ್ಕೆ ಮಾಡಬಹುದು. translationStudio APP.ನೋಡಿ

ಭಾಷಾಂತರ ಅಳವಡಿಸಿರುವ ಬಗ್ಗೆ ಉದಾಹರಣೆಗಳು.

  1. ಒಂದು ವಾಕ್ಯದ ಮೊದಲು ಮಾಹಿತಿ ಬಂದರೆ ಅದು ವಾಕ್ಯದ ಮೊದಲು ವಾಕ್ಯದ ಸಂಖ್ಯೆಯನ್ನು ಬರೆದು ಅದರ ಮೊದಲು ಮತ್ತು ವಾಕ್ಯಪ್ರಾರಂಭವಾಗುವ ಮಧ್ಯೆ ಒಂದು ಚಿಕ್ಕ ಅಡ್ಡ ಗೆರೆ hyphen ಹಾಕಬೇಕು
  • 2ಆ ದೇಶದ ಮಧ್ಯದಲ್ಲಿ ನೀವು ಮೂರು ಆಶ್ರಯ ನಗರಗಳನ್ನು ಗೊತ್ತು ಮಾಡಬೇಕು 3ನರಹತ್ಯೆ ಮಾಡಿದವರು ಆ ಪಟ್ಟಣಗಳಿಗೆ ಓಡಿಹೋಗುವುದಕ್ಕೆ ಅನುಕೂಲವಾಗುವಂತೆ ನೀವು ಅವುಗಳ ದಾರಿಗಳನ್ನು ಸರಿಪಡಿಸಬೇಕು ಮತ್ತು ನೀವು ನಿಮ್ಮ ದೇವರಾದ ಯೆಹೋವನು ನಿಮಗೆ ಸ್ವಧೇಶವಾಗುವುದಕ್ಕೆ ಕೊಡುವ ಆ ದೇಶವನ್ನು ಮೂರುಭಾಗ ಮಾಡಬೇಕು. (ಧರ್ಮೋಪದೇಶಕಾಂಡ 19:2-3)
    • 2-3ನಿಮಗೆ ಸ್ವಧೇಶವಾಗುವುದಕ್ಕೆ ಕೊಡುವ ಆ ದೇಶವನ್ನು ಮೂರುಭಾಗ ಮಾಡಬೇಕು ಅನಂತರ ಪ್ರತಿಭಾಗಗಳಿಗೆ ಸೂಕ್ತವಾದ ನಗರವನ್ನು ಆಯ್ಕೆ ಮಾಡಬೇಕು. ಈ ನಗರಗಳಿಗೆ ಸೂಕ್ತವಾದ ಒಳ್ಳೆಯ ರಸ್ತೆಗಳನ್ನು ನಿರ್ಮಿಸಬೇಕು ಇದರಿಂದ ಜನರು ಈ ನಗರಗಳಿಗೆ ಸುಲಭವಾಗಿ ಬಂದುಹೋಗಲು ಅನುಕೂಲವಾಗಿರುತ್ತದೆ. ಯಾವ ವ್ಯಕ್ತಿಯಾದರೂ ಯಾರನ್ನಾದರೂ ಕೊಂದರೆ ಈ ನಗರಗಳಿಗೆ ಓಡಿಹೋಗಲು ಅನುಕೂಲವಾಗಿರುತ್ತದೆ. (ಧರ್ಮೋಪದೇಶಕಾಂಡ 19:2-3 UDB)
  1. ULB ಸತ್ಯವೇದದಲ್ಲಿ ವಾಕ್ಯಬಂಧವಿದ್ದರೆ ನೀವು ಬಳಸುವ ಸತ್ಯವೇದದಲ್ಲಿ ಈ ವಾಕ್ಯಬಂಧ ಇಲ್ಲದಿದ್ದರೆ ನಿಮ್ಮ ಭಾಷೆಯ ಭಾಷಾಂತರಕ್ಕೆ ಸೂಕ್ತವಾದ ಉತ್ತಮವಾದ ಕ್ರಮವನ್ನು ಆಯ್ಕೆ ಮಾಡಬಹುದು.