ನಿಮ್ಮ ಉದ್ದೇಶಿತ ಭಾಷೆಯ ಅನುವಾದವು ಮೂಲ ಭಾಷೆಯ ಸತ್ಯವೇದದಲ್ಲಿ ರುವ ಎಲ್ಲಾ ವಚನವನ್ನು ಒಳಗೊಂಡಿರುವುದು ಮುಖ್ಯ. ಯಾವುದೇ ವಚನಗಳು ಕಾಣೆಯಾಗಿರುವುದನ್ನು ನಾವು ಬಯಸುವುದಿಲ್ಲ. ಆದರೆ ಕೆಲವು ಸತ್ಯವೇದಗಳಲ್ಲಿ ಇತರ ಸತ್ಯವೇದದಲ್ಲಿಲ್ಲದ ವಚನಗಳನ್ನು ಹೊಂದಲು ಉತ್ತಮ ಕಾರಣಗಳಿವೆ ಎಂದು ನೆನಪಿಡಿ. ### ವಚನಗಳು ಬಿಟ್ಟುಹೋಗಿರಲು ಕಾರಣಗಳು 1. **ಪಠ್ಯ ರೂಪಾಂತರಗಳು** – ನಂತರ ಸೇರಿಸಲಾದ ಕೆಲವು ವಚನಗಳು ಸತ್ಯವೇದದ ಮೂಲವಾಗಿದ್ದವು ಎಂದು ಅನೇಕ ಸತ್ಯವೇದದ ವಿದ್ವಾಂಸರು ನಂಬುವುದಿಲ್ಲ. ಆದುದರಿಂದ ಕೆಲವು ಸತ್ಯವೇದದ ಅನುವಾದಕರು ಈ ವಚನಗಳನ್ನು ಸೇರಿಸುವುದಿಲ್ಲ ಅಥವ ಅಡಿಪಟ್ಟಿಗಳಾಗಿ ಮಾತ್ರ ಸೇರಿಸುತ್ತಾರೆ. (ಈ ಬಗ್ಗೆ ಹೆಚ್ಚಿನ ಮಾಹಿತಿಗಾಗೆ [ಪಾಠ್ಯ ರೂಪಾಂತರ](../../translate/translate-textvariants/01.md) ನೋಡಿರಿ.) ಈ ವಚನಗಳನ್ನು ಸೇರಿಸುತ್ತೀರೋ ಅಥವಾ ಇಲ್ಲವೋ ಎಂಬುವುದನ್ನು ನಿಮ್ಮ ಅನುವಾದ ತಂಡವು ನಿರ್ಧರಿಸಬೇಕು 1. **ವಿಭಿನ್ನ ಸಂಖ್ಯೆ**- ಕೆಲವು ಸತ್ಯವೇದವು ಇತರ ಸತ್ಯವೇದಗಿಂತ ಬೇರೆ ವಚನ ಸಂಖ್ಯೆಯ ವ್ಯವಸ್ಥೆಯನ್ನು ಬಳಸುತ್ತದೆ. (ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ,[ಅಧ್ಯಾಯ ಮತ್ತು ವಚನ ಸಂಖ್ಯ](../../translate/translate-chapverse/01.md)) ನೋಡಿರಿ. ನಿಮ್ಮ ಅನುವಾದ ತಂಡವು ಯಾವ ವ್ಯವಸ್ಥೆಯನ್ನು ಬಳಸಬೇಕೆಂದು ನಿರ್ಧರಿಸುವ ಅಗತ್ಯವಿದೆ. 1. **ವಚನಗಳ ಸೇತುವೆಗಳು** – ಸತ್ಯವೇದದ ಕೆಲವು ಅನುವಾದದಲ್ಲಿ, ಎರಡು ಅಥವ ಹೆಚ್ಚಿನ ವಚನಗಳನ್ನು ಮರುಜೋಡಿಸಲಾಗಿದೆ ಇದರಿಂದ ಮಾಹಿತಿಯ ಕ್ರಮವು ಹೆಚ್ಚು ತಾರ್ಕಿಕ ಮತ್ತು ಅರ್ಥಮಾಡಿಕೊಳ್ಳಲು ಸುಲಭವಾಗುತ್ತದೆ. ಇದು ಸಂಭವಿಸಿದಾಗ ವಚನ ಸಂಖ್ಯೆಗಳು 4-5 ಅಥವ 4-6 ಹಾಗೆ ಸಂಯೋಜಿಸಲಾಗುತ್ತದೆ. ಕೆಲೆವೊಮ್ಮೆ UST ಇದನ್ನು ಮಾಡುತ್ತದೆ. ಏಕೆಂದರೆ ಎಲ್ಲಾ ವಚನ ಸಂಖ್ಯೆಗಳು ಗೋಚರಿಸುವುದಿಲ್ಲ ಅಥವಾ ಅವು ಎಲ್ಲಿ ಇರಬೇಕೆಂದು ನೀವು ನಿರೀಕ್ಷಿಸುತ್ತೀರೋ ಅಲ್ಲಿ ಅವು ಗೋಚರವಾಗುವುದಿಲ್ಲ, ಕೆಲವು ವಚನಗಳು ಕಾಣೆಯಾಗಿರುವಂತೆ ಕಾಣಿಸಬಹುದು. ಆದರೆ ಆ ವಚನಗಳಲ್ಲಿನ ವಿಷಯಗಳು ಹಾಗೆ ಇರುತ್ತದೆ.(ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ,[ವಚನಗಳ ಸೇತುವೆಗಳು](../../translate/translate-versebridge/01.md)) ನೋಡಿರಿ. ನಿಮ್ಮ ಅನುವಾದ ತಂಡವು ವಚನ ಸೇತುವೆಗಳನ್ನು ಬಳಸಬೇಕೆ ಅಥವಾ ಬೇಡವೇ ಎಂಬುವುದನ್ನು ನಿರ್ಧರಿಸುವ ಅಗತ್ಯವಿದೆ. #### ಕಾಣೆಯಾದ ವಚನಗಳಿಗಾಗಿ ಪರಿಶೀಸಲಾಗುತ್ತದೆ ನಿಮ್ಮ ಅನುವಾದದಲ್ಲಿ ಬಿಟ್ಟು ಹೋಗಿರುವ ವಚನಗಳನ್ನು ಪರಿಶಿಲಿಸಲು, ಪುಸ್ತಕವನ್ನು ಪರಿಶೀಲಿಸಿದ ನಂತರ, ಅನುವಾದವನ್ನು ಪ್ಯಾರಟೆಕ್ಸ್ಟ್ಗ್ ಗೆ ಅಮದಮಾಡಿ. ನಂತರ “ಅಧ್ಯಾಯ/ವಚನಗಳ ಸಂಖ್ಯೆಗಳು” ಪರಿಶೀಲಿಸಿ .ಪ್ಯಾರಟೆಕ್ಸ್ಟ್ ಬಿಟ್ಟುಹೋಗಿರುವ ವಚನಗಳನ್ನು ನಿಮಗೆ ತೋರಿಸಿಕೊಡುತ್ತದೆ , ಪುಸ್ತಕದ ಎಲ್ಲೆಡಯ ಪಟ್ಟಿಯನ್ನು ನೀಡುತ್ತದೆ. ಮೇಲಿನ ಮೂರು ಕಾರಣಗಳಲ್ಲಿ ಒಂದಾದ ಕಾರಣ ನೀವು ಆ ಪ್ರತಿಯೊಂದು ಸ್ಥಳಗಳನ್ನು ನೋಡಬಹುದು ಮತ್ತು ವಚನದ ಉದ್ದೇಶಪೂರ್ವಕವಾಗಿ ಕಾಣೆಯಾಗಿದೆ ಎಂದು ನಿರ್ಧರಿಸಬಹುದು, ಅಥವಾ ವಚನವು ತಪ್ಪಾಗಿ ಬಿಟ್ಟುಹೋಗಿದ್ದರೆ ನೀವು ಮತ್ತೆ ವಚನವನ್ನು ಅನುವಾದಿಸಬೇಕಾಗಿದೆ.