translationCore-Create-BCS_.../translate/translate-chapverse/01.md

10 KiB

ವಿವರಣೆ.

ಪ್ರಾರಂಭದಲ್ಲಿ ಸತ್ಯವೇದವನ್ನು ಬರೆದಾಗ ಅಧ್ಯಾಯಗಳಾಗಲಿ, ವಾಕ್ಯಗಳಾಗಲಿ ಯಾವ ಅಂತರವೂ ಇಲ್ಲದೆ ಹಾಗೆ ಬರೆಯಲಾಗಿತ್ತು

ಕ್ರಮೇಣ ಜನರು ಪ್ರತ್ಯೇಕ ಪುಸ್ತಕಗಳು, ಅಧ್ಯಾಯಗಳನ್ನು ಸಂಖ್ಯೆಯ ಮೂಲಕ ಗುರುತಿಸಿದರು. ನಂತರ ಪ್ರತಿಯೊಂದು ವಾಕ್ಯವನ್ನು ಸಂಖ್ಯೆಗೆ ಅನುಗುಣವಾಗಿ ಗುರುತಿಸಿದರು. ಇದರಿಂದ ಬದಲು, ಸತ್ಯವೇದದ ಯಾವಭಾಗ ಓದುತ್ತಿದ್ದೇವೆ ಎಂದು ಗುರುತಿಸಿಕೊಳ್ಳಲು ಸಹಾಯವಾಯಿತು. ಸತ್ಯವೇದವನ್ನು ಅನೇಕರು ಬರೆದಿರುವುದರಿಂದ ಸಂಖ್ಯೆಗಳನ್ನು ಕೊಡುವ ಪದ್ಧತಿಯಲ್ಲಿ ವ್ಯತ್ಯಾಸಗಳು ಕಂಡುಬಂದಿರಲು ಸಾಧ್ಯ ಹಾಗೆಯೇ ವಿವಿಧ ಭಾಷಾಂತರಗಾರರು ಸಹ ತಮ್ಮದೇ ರೀತಿಯಲ್ಲಿ ಸಂಖ್ಯೆನೀಡಿದ್ದಧಾರೆ. ULB ಸತ್ಯವೇದದಲ್ಲಿ ಒಂದು ರೀತಿಯ ಸಂಖ್ಯಾನುಕ್ರಮ ಪದ್ಧತಿ ಇದ್ದರೆ,ಇತರ ಸತ್ಯವೇದದಲ್ಲಿ ಮತ್ತು ನೀವು ಬಳಸುವ ಸತ್ಯವೇದದಲ್ಲಿ ಈ ಪದ್ಧತಿ ಭಿನ್ನವಾಗಿರುತ್ತದೆ. ನೀವು ಬಳಸುತ್ತಿರುವ ಸತ್ಯವೇದವನ್ನೇ, ಅದರ ಸಂಖ್ಯಾನು ಕ್ರಮವನ್ನೇ ಬಳಸಬಹುದು

ಕಾರಣ ಇದೊಂದು ಭಾಷಾಂತರ ತೊಡಕುಗಳು.

ನಿಮ್ಮ ಭಾಷೆ ಮಾತನಾಡುವ ಜನರು ಬೇರೆ ಭಾಷೆಯಲ್ಲಿ ಬರೆದಿರುವ ಸತ್ಯವೇದವನ್ನು ಬಳಸುತ್ತಿರಬಹುದು. ನೀವು ಭಾಷಾಂತರ ಮಾಡುವಾಗ ನೀವು ಬಳಸುವ ಸತ್ಯವೇದಕ್ಕೂ ಅವರು ಬಳಸುತ್ತಿರುವ ಸತ್ಯವೇದಕ್ಕೂ. ಅಧ್ಯಾಯಗಳಲ್ಲಿ, ವಾಕ್ಯಗಳ ಸಂಖ್ಯೆಯಲ್ಲಿ ವ್ಯತ್ಯಾಸವಿದ್ದರೆ ಜನರಿಗೆ ಅರ್ಥಮಾಡಿಕೊಳ್ಳಲು, ಯಾವ. ಅಧ್ಯಾಯ ಯಾವ ವಾಕ್ಯದ ಬಗ್ಗೆ ನೀವು ಹೇಳುತ್ತಿರುವಿರಿ ಎಂದು ತಿಳಿಯದೆ ಗೊಂದಲವಾಗಬಹುದು.

###ಸತ್ಯವೇದದಿಂದ ಉದಾಹರಣೆಗಳು

14ನಾನು ನಿನ್ನನ್ನು ಬೇಗನೆ ನೋಡುತ್ತೇನೆ ಎಂದು ನಿರೀಕ್ಷಿಸುತ್ತೇನೆ ಆಗ ಮುಖಾಮುಖಿಯಾಗಿ ಮಾತನಾಡೋಣ 15ನಿನಗೆ ಶಾಂತಿ ಇರಲಿ ;. ಸ್ನೇಹಿತರು ನಿನಗೆ ವಂದನೆ ತಿಳಿಸಿದ್ದಾರೆ. ಸ್ನೇಹಿತರನ್ನು ಹೆಸರೆಸರಾಗಿ ವಂದಿಸು. (3 ಯೋಹಾನ 1:14-15 ULB)

3ನೇ ಯೋಹಾನದಲ್ಲಿ ಒಂದೇ ಒಂದು ಅಧ್ಯಾಯವಿರುವುದರಿಂದ ಕೆಲವು ಪ್ರತಿಗಳಲ್ಲಿ ಅಧ್ಯಾಯವನ್ನು ಗುರುತಿಸಿಲ್ಲ. ULB ಮತ್ತು UDB ಸತ್ಯವೇದಗಳಲ್ಲಿ ಅಧ್ಯಾಯ 1.ಎಂದೇ ಗುರುತಿಸಲಾಗಿದೆ. ಇದರೊಂದಿಗೆ ಕೆಲವು ಪ್ರತಿಗಳಲ್ಲಿ 14 ಮತ್ತು 15ನೇ ಎರಡು ವಾಕ್ಯಗಳಾಗಿ ವಿಂಗಡಿಸಿಲ್ಲ. ಅದರ ಬದಲು 14ನೇ ವಾಕ್ಯದಲ್ಲೇ ಎಲ್ಲವನ್ನೂ ತಿಳಿಸಿದ್ದಾರೆ.

ದಾವೀದನು ತನ್ನ ಮಗನಾದ ಅಬ್ಷಾಲೋಮನಿಂದ ಓಡಿಹೋದಾಗ ಬರೆದದ್ದು 1ಯೆಹೋವನೆ ನನ್ನ ಶತ್ರಗಳು ಎಷ್ಟೋ ಜನರು ಹೆಚ್ಚಾಗಿದ್ದಾರೆ. (ದಾ.ಕೀ. 3:1 ULB)

ಕೆಲವು ಕೀರ್ತನೆಗಳ ಪ್ರಾರಂಭದಲ್ಲಿ ಅದರ ವಿವರ ನೀಡಲಾಗಿದೆ. ULB ಮತ್ತು UDB ಸತ್ಯವೇದಗಳಲ್ಲಿ ನೀಡಿದಂತೆ ಕೆಲವು ಪ್ರತಿಗಳಲ್ಲಿ ವಿವರಗಳಿಗೆ ವಾಕ್ಯದ ಸಂಖ್ಯೆಯನ್ನು ನೀಡಿರುವುದಿಲ್ಲ. ಕೆಲವು ಪ್ರತಿಗಳಲ್ಲಿ ಕೀರ್ತನೆಯ ಪರಿಚಯ ಪ್ರಾರಂಭದಲ್ಲಿ ಬಂದು ವಾಕ್ಯ ಒಂದು ಎಂದು ನಮೂದಿಸಿರುತ್ತದೆ. ಹಾಗೂ ಕೀರ್ತನೆಯ ಪ್ರಾರಂಭ ವಾಕ್ಯಕ್ಕೆ ಎರಡು ಎಂಬ ಸಂಖ್ಯೆ ನೀಡಲಾಗಿರುತ್ತದೆ.

..ಮೇದ್ಯನಾದ ದಾರ್ಯವೇಶನು ರಾಜ್ಯವನ್ನು ಪಡೆದುಕೊಂಡನು ಆಗ ಅವನ ವಯಸ್ಸು ಅರವತ್ತೆರಡು ಆಗಿತ್ತು (ದಾನಿಯೇಲ 5:31 ULB)

ಕೆಲವು ಪ್ರತಿಗಳಲ್ಲಿ ಈ ವಾಕ್ಯವು ಐದನೇ ಅಧ್ಯಾಯದ ಕೊನೆಯ ವಾಕ್ಯವಾಗಿರುತ್ತದೆ. ಕೆಲವು ಪ್ರತಿಗಳಲ್ಲಿ ಈ ವಾಕ್ಯವು ಆರನೇ ಅಧ್ಯಾಯದ ಪ್ರಾರಂಭದ ವಾಕ್ಯವಾಗಿರುತ್ತದೆ.

ಭಾಷಾಂತರ ಕೌಶಲ್ಯಗಳು

  1. ನಿಮ್ಮ ಭಾಷೆಯ ಜನರು ಬೇರೆ ಸತ್ಯವೇದವನ್ನು ಉಪಯೋಗಿಸುತ್ತಿದ್ದರೆ ಅದರಂತೆ ಅಧ್ಯಾಯ ಮತ್ತು ವಾಕ್ಯಗಳ ಸಂಖ್ಯಾನುಕ್ರಮವನ್ನು ಅನುಸರಿಸಬಹುದು. translationStudio APP.

ಭಾಷಾಂತರ ಕೌಶಲ್ಯಗಳನ್ನು ಅಳವಡಿಸಿರುವ ಬಗ್ಗೆ ಉದಾಹರಣೆಗಳು.

ನಿಮ್ಮ ಭಾಷೆಯ ಜನರು ಬೇರೆ ಸತ್ಯವೇದವನ್ನು ಉಪಯೋಗಿಸುತ್ತಿದ್ದರೆ ಅದರಂತೆ ಅಧ್ಯಾಯ ಮತ್ತು ವಾಕ್ಯಗಳ ಸಂಖ್ಯಾನುಕ್ರಮವನ್ನು ಅನುಸರಿಸಬಹುದು

ಕೆಳಗೆ ಕೊಟ್ಟಿರುವ ಉದಾಹರಣೆ 3 ನೇ ಯೋಹಾನ ಮೊದಲನೆ ಅಧ್ಯಾಯದಿಂದ ನೀಡಿದೆ. ಕೆಲವು ಸತ್ಯವೇದದಲ್ಲಿ 14 ಮತ್ತು 15ನೇ ವಾಕ್ಯಗಳನ್ನು ಪ್ರತ್ಯೇಕವಾಗಿ ಹೇಳಿದರೆ, ಕೆಲವು ಪ್ರತಿಗಳಲ್ಲಿ ಎರಡನ್ನು 14ನೇ ವಾಕ್ಯದಲ್ಲೇ ತಿಳಿಸಿದೆ. ನೀವು ನಿಮ್ಮ ಇತರ ಸತ್ಯವೇದದಲ್ಲಿ ವಾಕ್ಯ, ಅಧ್ಯಾಯವನ್ನು ಗುರುತಿಸಿದಂತೆ ಗುರುತಿಸಿ.

14ನಾನು ಆದಷ್ಟು ಬೇಗ ನಿಮ್ಮನ್ನು ನೋಡುತ್ತೇನೆ ಎಂದು ನಿರೀಕ್ಷಿಸುತ್ತೇನೆ. ಆಗ ಮುಖಾಮುಖಿಯಾಗಿ ಮಾತನಾಡೋಣ. 15

ನಿಮಗೆ ಶಾಂತಿ ಇರಲಿ. ಸ್ನೇಹಿತರು ನಿನಗೆ ವಂದನೆ ತಿಳಿಸಿದ್ದಾರೆ. ನೀನೂ ಅವರಿಗೆ. ಹೆಸರುಹೆಸರಾಗಿ ವಂದಿಸು (3ನೇ ಯೋಹಾನ 1 1:14-15 ULB)

14ಆದರೆ ನಾನು ಆದಷ್ಟು ಬೇಗ ನಿಮ್ಮನ್ನು ಭೇಟಿಮಾಡುತ್ತೇನೆ.ಆಗ ಮುಖಾಮುಖಿ ಯಾಗಿ ನಿಮ್ಮೊಡನೆ ಮಾತನಾಡುತ್ತೇನೆ. ನಿನಗೆ ಶಾಂತಿ ಇರಲಿ. ಸ್ನೇಹಿತರು ನಿನಗೆ ವಂದನೆ ತಿಳಿಸಿದ್ದಾರೆ. ನೀನು ಸಹ ಅವರಿಗೆ ಹೆಸರುಹೆಸರಾಗಿ ವಂದಿಸು (3 ನೇ ಯೆಹಾನ 14)

ಮುಂದಿನದು 3 ನೇ ದಾವೀದನ ಕೀರ್ತನೆಯಿಂದ ಉದಾಹರಣೆ. ಕೆಲವು ಸತ್ಯವೇದದಲ್ಲಿ ಕೀರ್ತನೆಯ ಪರಿಚಯವನ್ನು ವಾಕ್ಯ 1 ಎಂದು ಗುರುತಿಸುವುದಿಲ್ಲ ಆದರೆ ಕೆಲವು ಪ್ರತಿಯಲ್ಲಿ ವಾಕ್ಯ ಒಂದು ಎಂದು ಗುರುತಿಸುತ್ತಾರೆ. ನಿಮ್ಮ ಇತರ ಸತ್ಯವೇದದಲ್ಲಿ ಇರುವಂತೆ ನೀವು ವಾಕ್ಯಗಳ ಸಂಖ್ಯೆಯನ್ನು ಬರೆಯಬಹುದು.

  • ಇದೊಂದು ದಾವೀದನ ಕೀರ್ತನೆ ಅವನು ತನ್ನ ಮಗ ಅಬ್ಷಾಲೋಮನಿಂದ ತಪ್ಪಿಸಿಕೊಂಡು ಓಡಿಹೋದಾಗ ಬರೆದದ್ದು.

1ಯೆಹೋವನೇ ನನ್ನ ಶತ್ರುಗಳು ಹೆಚ್ಚಾಗಿದ್ದಾರೆ !, **ನನಗೆ ವೈರಿಗಳಾಗಿ ನಿಂತವರು ಬಹಳಮಂದಿ ನನ್ನ ವಿರುದ್ಧವಾಗಿ ನಿಂತಿದ್ದಾರೆ ** 2 ಅನೇಕರು ನನ್ನ ವಿಷಯದಲ್ಲಿ ಹೇಳುವುದೇನೆಂದರೆ, **" "ಅವನಿಗೆ ದೇವರಿಂದ ಸಹಾಯವೂ ಬರುವುದಿಲ್ಲ." ಸೆಲಾ

1ಇದೊಂದು ದಾವೀದನ ಕೀರ್ತನೆ ಅವನು ತನ್ನ ಮಗ ಅಬ್ಷಾಲೋಮನಿಂದ ತಪ್ಪಿಸಿಕೊಂಡು ಓಡಿಹೋಗುವಾಗ ರಚಿಸಿದ್ದು. 2ಯೆಹೋವನೇ ನನ್ನವೈರಿಗಳು ಎಷ್ಟೋ ಹೆಚ್ಚಿದ್ದಾರೆ. ಅನೇಕರು ನನ್ನ ವಿರುದ್ಧವಾಗಿ ತಿರುಗಿ ನನ್ನನ್ನು ಆಕ್ರಮಿಸಿದ್ದಾರೆ. 3ಅನೇಕರು ನನ್ನ ಬಗ್ಗೆ ಹೀಗೆ ಹೇಳುತ್ತಿದ್ದಾರೆ. "ಅವನಿಗೆ ದೇವರಿಂದ ಸಹಾಯವೂ ಬರುವುದಿಲ್ಲ ಸೆಲಾ