translationCore-Create-BCS_.../intro/translation-guidelines/01.md

13 KiB

ಈ ದಾಖಲೆಯ ಅಧಿಕೃತ ಪ್ರತಿಯನ್ನು ಈ ಲಿಂಕ್ ನಲ್ಲಿ ಪಡೆಯಬಹುದು. http://ufw.io/guidelines/.

ಈ ಕೆಳಗೆ ನೀಡಿರುವ ತತ್ವಗಳು ಮತ್ತು ವಿಧಾನಗಳನ್ನು ಭಾಷಾಂತರ ಮಾಡುವಾಗ ಉಪಯೋಗಿಸಲಾಗು -ತ್ತದೆ.ಇವುಗಳನ್ನು ಸಂಸ್ಥೆಯ ಸದಸ್ಯರು ಮತ್ತು ಕೊಡುಗೆದಾರರು ಪದ ಅನಾವರಣ ಪ್ರಾಜೆಕ್ಟ್ /ಯೋಜನೆಗೆ ಒಪ್ಪಿಗೆ ನೀಡುವವರಿದ್ದಾರೆ.(see https://unfoldingword.org). ಎಲ್ಲಾ ಭಾಷಾಂತರ ಪ್ರಕ್ರಿಯೆಗಳು ಈ ಸಾಮಾನ್ಯ ಮಾರ್ಗದರ್ಶನಗಳನ್ನು ಅನುಸರಿಸಿ ನಡೆಯುತ್ತವೆ.

  1. ನಿರ್ದಿಷ್ಟವಾದ — ಮೂಲಪಠ್ಯ /ವಿಷಯಗಳನ್ನು ನಿರ್ದಿಷ್ಟವಾಗಿ, ವಿಷಯವನ್ನು ಬಿಟ್ಟು ಬೇರೆಯದನ್ನು ಸೇರಿಸದೆ, ಬದಲಾಯಿಸದೆ ಇರುವ ಅರ್ಥವನ್ನು ಬಿಟ್ಟು ನಿಮ್ಮದೇ ಆದ ವಿವರವನ್ನು ನೀಡುವುದು ಇವು ಯಾವುದನ್ನೂ ಮಾಡದೆ ನಿರ್ದಿಷ್ಟವಾದ ಭಾಷಾಂತರ ಮಾಡಬೇಕು. ಭಾಷಾಂತರಿಸಿದ ವಿಷಯ ಪ್ರಾಮಾಣಿಕವಾಗಿ ಎಷ್ಟು ಸಂಕ್ಷಿಪ್ತವಾಗಿ ತಿಳಿಸಬಹುದೋ ಅಷ್ಟು ಸಂಕ್ಷಿಪ್ತವಾಗಿ, ಮೂಲ ವಿಷಯದ ಅರ್ಥಕೆಡದಂತೆ ಮೂಲ ಓದುಗರು ಅರ್ಥಮಾಡಿಕೊಂಡಂತೆ ತಿಳಿಸಲು ಭಾಷಾಂತರ ಮಾಡಬೇಕು. (see Create Accurate Translations)
  2. ಸ್ಪಷ್ಟವಾದ — ಭಾಷಾಂತರಿಸುವಾಗ ಅತ್ಯನ್ನತ ಮಟ್ಟದ ಗ್ರಹಿಕೆಗೆ ಅನುಗುಣವಾಗಿ ಯಾವ ಭಾಷಾರಚನೆಯನ್ನಾದರೂ ಅವಶ್ಯಕತೆಗೆ ತಕ್ಕಂತೆ ಬಳಸಬಹುದು. ಮೂಲ ವಿಷಯವನ್ನು ಸ್ಪಷ್ಟವಾಗಿ ತಿಳಿಸಲು ಎಷ್ಟು ಸಾಧ್ಯವೋ ಅಷ್ಟು ನಿಖರವಾಗಿ ಅವಶ್ಯವಿರುವ ಪದಗಳನ್ನು ಬಳಸಿ ಪುನರ್ ರಚಿಸಬಹುದು.. (see Create Clear Translations)
  3. ಸಹಜವಾದ — ನಿಮ್ಮ ಭಾಷೆಯಲ್ಲಿ ಬಳಸಿರುವ ಅನುರೂಪ ವಿಷಯವನ್ನು ಸಹಜವಾಗಿ ತಿಳಿಸಲು ಭಾಷೆಯ ವಿವಿಧ ರೂಪವನ್ನು ಪರಿಣಾಮಕಾರಿಯಾಗಿ ಬಳಸುವುದರೊಂದಿಗೆ ಅದು ನಿಮ್ಮ ಭಾಷೆಯಲ್ಲಿ ಪ್ರತಿಬಿಂಬಿತವಾಗಿರಬೇಕು. (see Create Natural Translations)
  4. ವಿಶ್ವಾಸಪೂರ್ಣ — ನಿಮ್ಮ ಭಾಷಾಂತರದಲ್ಲಿ ಯಾವುದೇ ರಾಜಕೀಯ ವಿಷಯವನ್ನಾಗಲೀ ಪಂಗಡವನ್ನಾಗಲೀ ಸಿದ್ಧಾಂತಗಳನ್ನಾಗಲೀ, ಸಾಮಾಜಿಕ ಸಾಂಸ್ಕೃತಿಕ ಅಥವಾ ದೈವಶಾಸ್ತ್ರವಾಗಲೀ ಬರದಂತೆ ತಡೆಹಿಡಿಯಬೇಕು. ಮೂಲಸತ್ಯವೇದ ಆಧಾರಿತ ಭಾಷೆಗಳಲ್ಲಿ ಬರುವ ಭಾಷಾ ಸಂಪತ್ತಿಗೆ ನಿಷ್ಠೆಯುಳ್ಳ ಮುಖ್ಯಪದಗಳನ್ನು ಬಳಸಿಕೊಳ್ಳಿ. ತಂದೆ ದೇವರು ಮತ್ತು ದೇವಕುಮಾರನ ನಡುವೆ ಇರುವ ಸಂಬಂಧವನ್ನು ವಿವರಿಸಲು ಸಾಮಾನ್ಯವಾಗಿ ಬಳಸುವ ಭಾಷಾ ಪದಗಳನ್ನು ಸತ್ಯವೇದದಲ್ಲಿ ಬರುವ ಪದಗಳಿಗೆ ಪರ್ಯಾಯವಾಗಿ ಬಳಸಿಕೊಳ್ಳಿ. ಇವುಗಳನ್ನು ಅಡಿಟಿಪ್ಪಣಿಯಲ್ಲಿ ಅಥವಾ ಪೂರಕ ಸಂಪನ್ಮೂಲಗಳೊಂದಿಗೆ ಅವಶ್ಯವಿದ್ದರೆ (see ನಿಷ್ಠೆಯುಳ್ಳ ಭಾಷಾಂತರವನ್ನು ಸೃಷ್ಟಿಸಿ)
  5. ಅಧಿಕಾರವುಳ್ಳ — ಮೂಲ ಸತ್ಯವೇದ ವಾಕ್ಯದ ಭಾಷೆಯು ಸತ್ಯವೇದದ ವಿಷಯವನ್ನು ಭಾಷಾಂತರ ಮಾಡಲು ಉನ್ನತ ಅಧಿಕಾರವನ್ನು ಹೊಂದಿದೆ. ಇದನ್ನೇ ನಿಮ್ಮ ಭಾಷಾಂತರದಲ್ಲಿ ಬಳಸಬೇಕು. ನಂಬಲರ್ಹವಾದ ಸತ್ಯವೇದದ ವಿಷಯವನ್ನು ಇತರ ಭಾಷೆಗಳಲ್ಲಿ ಬಳಸುತ್ತಾರೆ. ಏಕೆಂದರೆ ಇದರ ನಿಖರತೆ ಮತ್ತು ಆಕರಗ್ರಂಥಗಳ ತಾತ್ಪೂರ್ತಿಕತೆಯನ್ನು ಕಂಡುಕೊಳ್ಳಲು ಬಳಸುತ್ತಾರೆ. (see Create Authoritative Translations)
  6. ಐತಿಹಾಸಿಕ — ಐತಿಹಾಸಿಕವಾಗಿ ನಡೆದ ಘಟನೆಗಳು ಮತ್ತು ವಾಸ್ತವಾಂಶಗಳನ್ನು ನಿಖರವಾಗಿ ತಿಳಿಸಬೇಕು, ಇದರೊಂದಿಗೆ ನಿಖರವಾಗಿ ತಿಳಿಸಬೇಕಾದ ಹೆಚ್ಚಿನ ಮಾಹಿತಿಗಳನ್ನು ತಿಳಿಸಲು ಉದ್ದೇಶಿಸಿರುವ ಮಾಹಿತಿಗಳನ್ನು ಮೂಲವಿಷಯವನ್ನು ತಿಳಿದಿರುವವರೊಂದಿಗೆ ಕೆಲವೊಮ್ಮೆ ಜನರು ಅದೇ ವಿಷಯವನ್ನ ಮತ್ತು ಸಂಸ್ಕೃತಿಯನ್ನು ಸರಿಯಾಗಿ ಹಂಚಿಕೊಳ್ಳತಕ್ಕದ್ದು. (see Create Historical Translations
  7. ಸಮಾನ — ಆಕರ ಗ್ರಂಥಗಳಲ್ಲಿ ಇರುವ ವಿಷಯದ ಜೊತೆಗೆ ಭಾವನೆಗಳನ್ನು ಮತ್ತು ಮನೋದೋರಣೆಗಳನ್ನು ಸಂವಹನ ಮಾಡತಕ್ಕದ್ದು. ಮೂಲ ವಾಕ್ಯಭಾಗದಲ್ಲಿರುವ ವಿವಿಧ ಸಾಹಿತ್ಯ ಪ್ರಕಾರಗಳನ್ನು ಯಥಾವತ್ತಾಗಿ ಇಡಲು ಪ್ರಯತ್ನಿಸಬೇಕು. ಇವುಗಳಲ್ಲಿ ನಿರೂಪಣಾ ಮಾದರಿಯ ವಿಷಯ, ಪದ್ಯರೂಪ , ಪ್ರವಾದನೆಗಳು, ಎಚ್ಚರಿಕೆಗಳು ಮುಂತಾದವುಗಳು ನೀಡುವ ಪರಿಣಾಮವನ್ನು ನಿಮ್ಮ ಭಾಷೆಯಲ್ಲೂ ಬಳಸಿ ಸಮಾನ ಭಾಷಾಂತರವನ್ನು ಕಾಯ್ದುಕೊಳ್ಳಬೇಕು. (see Create Equal Translations)

ಭಾಷಾಂತರದ ಗುಣಮಟ್ಟವನ್ನು ಗುರುತಿಸುವುದು ಮತ್ತು ಅದನ್ನು ನಿರ್ವಹಣೆ ಮಾಡುವುದು

ಭಾಷಾಂತರದ ಗುಣಮಟ್ಟವನ್ನು ಸಾಮಾನ್ಯವಾಗಿ ಮೂಲಪ್ರತಿಯ ಯಥಾವತ್ತು ಭಾಷಾಂತರ ಆಗಿದೆಯೇ ಎಂಬುದನ್ನು ಆಧರಿಸಿ ನಿರ್ಧರಿಸಲಾಗುತ್ತದೆ. ಇದರೊಂದಿಗೆ ಭಾಷಾಂತರ ಮಾಡಿರುವ ವಿಷಯವು ಆ ಭಾಷೆಯನ್ನು ಮಾತನಾಡುವ ಜನರಿಗೆ ಎಷ್ಟು ಪರಿಣಾಮಕಾರಿಯಾಗಿ ಅರ್ಥವಾಗುತ್ತದೆ ಎಂಬುದರ ಮೇಲೆ ಅವಲಂಭಿತವಾಗಿದೆ. ಭಾಷಾ ಸಮುದಾಯದೊಂದಿಗೆ ಭಾಷಾಂತರದ ಗುಣಮಟ್ಟವನ್ನು ಪರಿಶೀಲಿಸಲು ನಾವು ನೀಡುವ ಸಲಹೆ ಎಂದರೆ ಆ ಭಾಷೆಯ ಜನರಿಗೆ ಸುಲಭವಾಗಿ ಅರ್ಥವಾಗಬೆಕು ಮತ್ತು ಆ ಭಾಷೆಯಜನರ ಸಮೂಹವು ಮೂಲವಿಷಯದ ಯಥಾವತ್ತಾದ ಭಾಷಾಂತರ ಆಗಿರುವ ಬಗ್ಗೆ ಪರಿಶೀಲಿಸಿ ದೃಢಪಡಿಸಬೇಕು. ಭಾಷಾಂತರ ಯೋಜನೆಯ ಪ್ರಕ್ರಿಯೆಯಲ್ಲಿ ಭಾಷೆಯನ್ನು ಆಧಾರದ ಮೇಲೆ ನಿರ್ದಿಷ್ಟವಾದ ಹಂತಗಳು ಕೆಲವೊಮ್ಮೆ ವಿಶೇಷರೀತಿಯಲ್ಲಿ ಭಿನ್ನವಾಗಿರಬಹುದು.

ಸಾಮಾನ್ಯವಾಗಿ ಭಾಷಾಂತರ ಉತ್ತಮವಾಗಿದೆ ಎಂದು ನಿರ್ಧರಿಸಲು ಭಾಷಾಂತರ ಉತ್ತಮವಾಗಿದೆ ಎಂದು ನಿರ್ಧರಿಸಲು ಭಾಷಾಂತರ ಆಗಿರುವ ವಿಷಯ್ನ್ನು ಆ ಭಾಷೆಯನ್ನು ನಿರ್ಧರಿಸಲು ಭಾಷಾಂತರ ಆಗಿರುವ ವಿಷಯವನ್ನು ಆ ಭಾಷೆಯನ್ನು ಮಾತನಾಡುವ ಸಮುದಾಯದ ಜನರು ಮತ್ತು ಅದೇ ಭಾಷೆ ಮಾತನಾಡುವ ಚರ್ಚ್ ನ ನಾಯಕರು ಪುನರ್ ಪರಿಶೀಲನೆ ಮಾಡಿರಬೇಕು.

  1. ನಿಖರವಾದ, ಸಷ್ಟವಾದ, ಸಹಜವಾದ, ಮತ್ತು, ಸಮಾನವಾದ — ಮೂಲ ವಿಷಯಕ್ಕೆ ವಿಶ್ವಾಸಾರ್ಹವಾದ , ಅರ್ಥಪೂರ್ಣ ಭಾಷಾಂತರ ಉದ್ದೇಶದೊಂದಿಗೆ , ಸಭಾ ಜನರ ಗುಂಪು ನಿರ್ಧರಿಸಿದಂತೆ ಜಾಗತಿಕ ಮಟ್ಟದ ಚರ್ಚ್ ಮತ್ತು ಐತಿಹಾಸಿಕ ಮತ್ತು ಪರಿಣಾಮಕಾರಿಯಾಗಿ ಒಪ್ಪಂದ ಮಾಡಿಕೊಳ್ಳುವುದು .
  2. ಚರ್ಚ್ ನಿಂದ ದೃಢಪಡಿಸಿದ್ದು - ಚರ್ಚ್ ನಿಂದ ಬಳಸಿ ಮತ್ತು ದೃಢಪಡಿಸಿದ್ದು (ನೋಡಿ Create Church-Approved Translations)

ನಾವು ಇದರೊಂದಿಗೆ ಈ ಕೆಳಗಿನಂತೆ ಭಾಷಾಂತರ ಕಾರ್ಯ ಇರಬೇಕೆಂದು ಶಿಫಾರಸ್ಸು ಮಾಡುತ್ತೇವೆ:

  1. ಸಹಕಾರ — ಹೆಚ್ಚಿನ ಗುಣಮಟ್ಟವನ್ನು ಹೊಂದಿದ ಮತ್ತು ಎಷ್ಟು ಸಾಧ್ಯವೋ ಅಷ್ಟು ಜನರಿಗೆ ಹಂಚಬಹುದಾದ ಈ ಭಾಷಾಂತರ ಮಾಡಿದ ವಿಷಯವನ್ನು ನಿಮ್ಮ ಭಾಷೆ ಮಾತನಾಡುವ ಇತರ ವಿಶ್ವಾಸಿಗಳೊಂದಿಗೆ ಸೇರಿ ಭಾಷಾಂತರ ಕಾರ್ಯವನ್ನು ಮಾಡಿ ಪರಿಶೀಲಿಸಿ ದೃಢಪಡಿಸಿ .(ನೋಡಿ Create Collaborative Translations)
  2. ನಿರಂತರವಾಗಿ ನಡೆಯುವ - ಭಾಷಾಂತರ ಕಾರ್ಯವು ನಿರಂತರವಾಗಿ ನಡೆಯುವ ಪ್ರಕ್ರಿಯೆ, ಎಂದಿಗೂ ಮುಗಿಯುವುದಿಲ್ಲ. ಭಾಷೆ ಮತ್ತು ಭಾಷಾಂತರದಲ್ಲಿ ವಿಶೇಷ ಕೌಶಲ ಹೊಂದಿರುವ ಜನರು ಭಾಷಾಂತರವಾಗಿರುವ ವಿಷಯವನ್ನು ಪರಿಶೀಲಿಸಿ ಅದನ್ನು ಉತ್ತಮಪಡಿಸಲು ಸಲಹೆನೀಡುವುದಾದರೆ ಅವನನ್ನು ಪ್ರೋತ್ಸಾಹಿಸಿ ಸಲಹೆ ಪಡೆಯಬಹುದು. ಭಾಷಾಂತರದಲ್ಲಿ ಕಂಡುಬರುವ ತಪ್ಪುಗಳನ್ನು ಆಗಿಂದಾಗ್ಗೆ ತಿದ್ದುಪಡಿ ಮಾಡಬೇಕು. ಆಗಾಗ ನಡೆಯುವ ಭಾಷಾಂತರದ ಪುನರ್ ಪರಿಶಿಲನೆಯನ್ನು ಉತ್ತೇಜಿಸುವುದಲ್ಲದೆ ಭಾಷಾಂತರ ಪುನರ್ ಕಾರ್ಯ ಅಥವಾ ಹೊಸ ಭಾಷಾಂತರ ಮಾಡಬೇಕಾದ ಪರಿಸ್ಥಿತಿ ಬಂದರೆ ಮುಕ್ತವಾಗಿ ಸ್ವೀಕರಿಸಿ ಮಾಡಬೇಕು. ಭಾಷಾ ಸಮುದಾಯದವರು ಭಾಷಾಂತರ ತಂಡವನ್ನು ರಚಿಸಿ ನಿರಂತರವಾಗಿ ನಡೆಯುತ್ತಿರುವ ಭಾಷಾಂತರ ಕಾರ್ಯದ ಮೇಲ್ವಿಚಾರಣೆ ಮಾಡಲು ನಾವು ಶಿಫಾರಸ್ಸು ಮಾಡುತ್ತೇವೆ. ಪದ ಅನಾವರಣ ಆನ್ ಲೈನ್ ಸಾಧನಗಳನ್ನು ಬಳಸಿ ಭಾಷಾಂತರದಲ್ಲಿ ನಡೆಯುವ ಈ ಬದಲಾವಣೆಗಳನ್ನು ಸುಲಭವಾಗಿ ಮತ್ತು ತ್ವರಿತವಾಗಿ ಮಾಡಬಹುದು. (ನೋಡಿ Create Ongoing Translations).