translationCore-Create-BCS_.../translate/guidelines-faithful/01.md

11 KiB

ವಿಶ್ವಾಸಾರ್ಹ ಭಾಷಾಂತರಗಳು

ಸತ್ಯವೇದದ ವಿಶ್ವಾಸಾರ್ಹ ವಾದ ಭಾಷಾಂತರವಾಗ ಬೇಕೆಂದರೆ ನೀವು ರಾಜಕೀಯ, ಮತಾನುಸಾರ, ಭಾವನಾತ್ಮಕ, ಸಾಮಾಜಿಕ, ಸಾಂಸ್ಕೃತಿಕ ಅಥವಾ ದೈವಜ್ಞಾನ ಶಾಸ್ತ್ರವು ಯಾವುದರಿಂದಲೂ ಪ್ರಭಾವಿತರಾಗದೆ, ಪುರ್ವಾಗ್ರಹ ಪೀಡಿತರಾಗದೇ ಭಾಷಾಂತರ ಮಾಡಬೇಕು. ಮೂಲ ಸತ್ಯವೇದದಂತೆ ಭಾಷೆಯು ಮುಖ್ಯ ಪದಗಳನ್ನು ಬಳಸಿ ವಿಶ್ವಾಸಾರ್ಹ ಭಾಷಾಂತರಮಾಡಿ. ತಂದೆ ದೇವರು ಮತ್ತು ತಂದೆ ಮಗ ಇವರ ನಡುವಿನ ಸಂಬಂಧವನ್ನು ವಿವರಿಸಲು ಸತ್ಯವೇದದ ಪರಿಭಾಷೆಯನ್ನು ಬಳಸುವಾಗ ಅದಕ್ಕೆ ಸಮಾನವಾದ ಪದಗಳನ್ನು ಭಾಷಾಂತರಿಸುವ ಭಾಷೆಯಲ್ಲಿ ಬಳಸಬೇಕು.

ಇವುಗಳ ವಿವರವನ್ನು ಅಡಿ ಟಿಪ್ಪಣಿಯಲ್ಲಿ ಅಥವಾ ಪೂರಕ ಸಂಪನ್ಮೂಲಗಳಾಗಿ ಬಳಸಬಹುದು. ಸತ್ಯವೇದ ಭಾಷಾಂತರಗಾರರಾಗಿ ನಿಮ್ಮ ಉದ್ದೇಶವೇನೆಂದರೆ ಮೂಲ ಪ್ರತಿಯಲ್ಲಿ ಬರಹಗಾರರು ಬರೆದಿರುವ ಸಂದೇಶವನ್ನು ಯಾವ ಬದಲಾವಣೆಯೂ ಇಲ್ಲದೆ ತಿಳಿಸುವುದೇ ಆಗಿರುತ್ತದೆ. ಅಂದರೆ ನೀವು ಅರ್ಥಮಾಡಿಕೊಂಡಂತೆ ನಿಮ್ಮದೇ ಆದ ಸಂದೇಶವನ್ನು ಬರೆಯಬಾರದು, ಹಾಗೆಯೇ ನಿಮ್ಮ ಆಲೋಚನೆಯಂತೆ ಸತ್ಯವೇದದ ಸಂದೇಶವನ್ನು ತಿಳಿಸಬಾರದುನಿಮ್ಮ ಸಭೆ /ಚರ್ಚ್ ನಿಮ್ಮಂತೆ ಯೋಚಿಸಬೇಕೆಂದು ನಿರೀಕ್ಷಿಸಬಾರದು. ಯಾವುದೇ ಸತ್ಯವೇದದ ವಾಕ್ಯಭಾಗವನ್ನು, ಅದರ ಅರ್ಥವನ್ನು ಸರಿಯಾಗಿ ನಿಖರವಾಗವಾಗಿ ತಿಳಿಸುವ, ಅದು ಏನು ಹೇಳುತ್ತದೆ,ಅದರ ಅರ್ಥವೇನು ಎಂಬುದನ್ನು ಮಾತ್ರ ಮಾಡಬೇಕು.

ನಿಮ್ಮದೇ ಆದ ಅಭಿಪ್ರಾಯಗಳನ್ನು ಅನಿಸಿಕೆಗಳನ್ನು ಸೇರಿಸುವ ಯಾವುದೇ ಆಮಿಶಕ್ಕೆ ಒಳಗಾಗ ಬಾರದು. ಸತ್ಯವೇದದ ವಾಕ್ಯ ವಿಷಯಗಳನ್ನು ತಿಳಿಸುವಾಗ ಯಾವುದೇ ಹೊಸ ಅರ್ಥವನ್ನು ಸೇರಿಸುವುದಾಗಲೀ ವಾಕ್ಯಭಾಗದಲ್ಲಿ ಇಲ್ಲದೆ ಇರುವ ವಿಷಯಗಳನ್ನು, ಪದಗಳನ್ನು ಸೇರಿಸಬಾರದು. (ಸತ್ಯವೇದದಲ್ಲಿರುವ ಸಂದೇಶದ ವಾಕ್ಯ ಭಾಗವು ದೃಢ ವಿಶ್ವಾಸದ ಮಾಹಿತಿಗಳನ್ನು ಒಳಗೊಂಡಿರುತ್ತದೆ.) (ನೋಡಿ ಅಂಗೀಕರಿಸಿದ ಜ್ಞಾನ ಮತ್ತು ದೃಢ ವಿಶ್ವಾಸದ ಮಾಹಿತಿ)

ಸತ್ಯವೇದದ ಮೂಲ ಭಾಷೆಯ ಶಬ್ಧಕೋಶಕ್ಕೆ ನಿಷ್ಠವಾಗಿರುವ ಪ್ರಮುಖ ಪದಗಳನ್ನು ಸಹ ನೀವೇ ಬಳಸಬೇಕು. ಪದಗಳನ್ನು ಸರಿಯಾದ ರೀತಿಯಲ್ಲಿ ಅರ್ಥಮಾಡಿಕೊಳ್ಳಲು ಅದರ ವ್ಯಾಖ್ಯಾನವನ್ನು ಓದಬೇಕು. ಮುಖ್ಯ ಪದಗಳೆಲ್ಲವೂ ಒಂದೇ ಅರ್ಥ ನೀಡುವಂತೆ ಅದನ್ನು ಸರಿಯಾದ ರೀತಿಯಲ್ಲಿ ಅನುವಾದ ಮಾಡಿರಿ. ನಿಮ್ಮ ನಾಯಕರನ್ನು ಸಭೆಯ ಪಾಲಕರನ್ನು ಮೆಚ್ಚುಸುವ ಸಲುವಾಗಿ ಬೇರೆ ಬೇರೆ ರೀತಿಯಲ್ಲಿ ಅದನ್ನು ಭಾಷಾಂತರ ಮಾಡಬೇಡಿರಿ.

ಎಲ್ಲಾ ಸಮಯದಲ್ಲಿ ವಿಶ್ವಾಸಾರ್ಹ ಭಾಷಾಂತರ ಮಾಡುವುದು ಕಷ್ಟವಾಗಬಹುದು. ಅದಕ್ಕೆ ಕಾರಣಗಳು:

  1. ಕೇವಲ ನಿಮ್ಮ ಸಭೆಯಲ್ಲಿ ವಾಕ್ಯ ಭಾಗದ ಅರ್ಥೈಸುವಿಕೆಗೆ ನೀವು ಹೊಂದಿಕೊಂಡಿದ್ದು ಅದನ್ನು ಬೇರೆ ರೀತಿಯಲ್ಲಿ ಅರ್ಥೈಸಬಹುದು ಎಂಬ ಸಂಗತಿ ನಿಮಗೆ ತಿಳಿಯದಿರಬಹುದು

    • ಉದಾಹರಣೆ” ನೀವು ದೀಕ್ಷಾಸ್ನಾನ ಎಂಬ ಪದವನ್ನು ಅನುವಾದ ಮಾಡುವಾಗ ನೀವು ಅದನ್ನು “ಚಿಮುಕಿಸುವುದು” ಎಂಬ ಅರ್ಥವನ್ನು ನೀಡುವ ಪದವನ್ನು ಉಪಯೋಗಿಸಲು ಯೋಚಿಸಬೇಕು, ಇದಕ್ಕೆ ಕಾರಣ ಸಭೆಯಲ್ಲಿ ಅದನ್ನು ಹಾಗೆಯೇ ಅನುಸರಿಸುತ್ತಾರೆ. ಆದರೆ ಭಾಷಾಂತರದ ಇತರೆ ಪದಗಳನ್ನು ಅಂದರೆ “ಮುಳುಗುವುದು”, “ಮುಳುಗಿಸುವುದು”, ತೊಳೆಯುವುದು ಅಥವಾ “ಶುದ್ಧೀಕರಿಸುವುದು” ಎಂಬ ಬೇರೆಬೇರೆ ಅರ್ಥವನ್ನು ನೀಡುತ್ತದೆ ಎಂದು ತಿಳಿದುಬರುತ್ತದೆ
  2. ಸತ್ಯವೇದದ ವಾಖ್ಯಭಾಗವನ್ನು ಅದು ಬರೆಯಲಾದ ಅರ್ಥದ ಪ್ರಕಾರ ಅನುವಾದ ಮಾಡದೆ ನಿಮ್ಮ ಸಂಸ್ಕೃತಿಗೆ ಅನುಗುಣವಾಗಿ ಅನುವಾದ ಮಾಡಲು ಬಯಸಬಹುದು.

    • ಉದಾಹರಣೆ: 1 ಕೊರಿಂಥ 14:34 ರಲ್ಲಿ ಸ್ತ್ರೀಯರು ಸಭೆಯಲ್ಲಿ ಮಾತನಾಡಬಾರದು ಎಂದು ಪೌಲನು ತಿಳಿಸಿದ್ದಾನೆ. ಆದರೆ ಉತ್ತರ ಅಮೇರಿಕಾದಲ್ಲಿ ಸ್ತ್ರೀಯರು ಸಭೆಯಲ್ಲಿ ವಾಕ್ಯ ಹಂಚುವುದು ಸಹಜ. ಅವರಿಗೆ ಆ ಅಧಿಕಾರವಿದೆ. ಹೀಗಿರುವಾಗ ಅನುವಾದ ಮಾಡುವವನು ಆ ವಾಕ್ಯ ಭಾಗದ ಸರಿಯಾದ ಅರ್ಥ ಮತ್ತು ಅಂದಿನ ಸನ್ನಿವೇಶವನ್ನು ಸರಿಯಾಗಿ ವಿವರಿಸಿ ಅನುವಾದ ಮಾಡುತ್ತಾನೆ.
  3. ಸತ್ಯವೇದದಲ್ಲಿರುವ ಕೆಲವು ಸಂಗತಿಗಳು ನಿಮಗೆ ಸರಿ ಕಾಣದೆ ಇದ್ದು ಅದನ್ನು ಬದಲಾಯಿಸಬೇಕೆಂಬ ಯೋಚನೆ ಮೂಡಿಬರಬಹುದು

    • ಉದಾಹರಣೆ: ಯೋಹಾನ 6:53 ರಲ್ಲಿ ಇರುವ ಹಾಗೆ, “ನೀವು ಮನುಷ್ಯಕುಮಾರನ ಮಾಂಸವನ್ನು ತಿನ್ನದ ಮತ್ತು ಆತನ ರಕ್ತವನ್ನು ಕುಡಿಯದ ಹೊರತು ನಿಮ್ಮೊಳಗೆ ಜೀವವಿಲ್ಲ” ಎನ್ನುವ ಮಾತು ನಿಮಗೆ ಸರಿಕಾಣದೆ ಹೋಗಬಹುದು. ಇದು ನಿಮಗೆ ವಿಭಿನ್ನವಾಗಿ ಕಾಣಬಹುದು. ಆದರೆ ನೀವು ಅದನ್ನು ವಿಶ್ವಾಸರ್ಹವಾಗಿ ಅನುವಾದ ಮಾಡಬೇಕು.
  4. ನೀವು ಈ ರೀತಿಯಾಗಿ ಸತ್ಯವೇದದಲ್ಲಿ ಇರುವ ಸಂಗತಿಗಳನ್ನು ವಿಶ್ವಾಸಾರ್ಹವಾಗಿ ಮಾಡುವ ಅನುವಾದದ ನಿಮಿತ್ತ ನಿಮ್ಮ ಊರುಗಳಲ್ಲಿ ಜನರು ಏನನ್ನುತ್ತಾರೆ ಎಂದು ಭಯಪಡಬಹುದು.

    • ಉದಾಹರಣೆ: ಮತ್ತಾಯ 3:17, “ಇವನು ಪ್ರೀಯನಾಗಿರುವ ನನ್ನ ಮಗನು ನಾನು ಇವನ್ನನ್ನು ಮೆಚ್ಚಿದ್ದೇನೆ” ಎನ್ನುವ ವಾಕ್ಯದಲ್ಲಿ “ಮಗನು” ಎಂಬ ಅರ್ಥ ನೀಡದ ಪದವನ್ನು ಬೇರೆ ರೀತಿಯಲ್ಲಿ ಅನುವಾದ ಮಾಡಲು ಮನಸ್ಸಾಗಬಹುದು. ಆದರೆ ಸತ್ಯವೆದದಲ್ಲಿ ಇರುವ ಸಂಗತಿಗ ಅರ್ಥಗಳನ್ನು ಬದಲಾಯಿಸಲು ನಿಮಗೆ ಯಾವ ಅಧಿಕಾರವಿಲ್ಲ ಎಂದು ಮರೆಯಬಾರದು.
  5. ವಾಕ್ಯ ಭಾಗಕ್ಕೆ ಸಂಬಂಧಿಸಿದಂತೆ ನಿಮಗೆ ಹೆಚ್ಚಿನ ಮಾಹಿತಿ ತಿಳಿದಿದ್ದು ಅನುವಾದ ಮಾಡುವಾಗ ಅದನ್ನು ಉಪಯೋಗಿಸಬಹುದು ಎಂದು ಅಂದುಕೊಳ್ಳಬಹುದು.

    • ಉದಾಹರಣೆ: ”ತನ್ನ ಹೆಂಡತಿಯನ್ನು ಬಿಟ್ಟು ಮತ್ತೊಬ್ಬಳನ್ನು ಮಾಡುವೆ ಮಾಡಿಕೊಳ್ಳುವವನು ವ್ಯಭಿಚಾರ ಮಾಡುವವನಾಗಿದ್ದಾನೆ ಎಂದು ಮಾರ್ಕ 10:11 ರಲ್ಲಿ ಕಾಣುತ್ತೇವೆ. ಅದೇ ರೀತಿಯಲ್ಲಿ “ಹಾದರದ ಕಾರಣದಿಂದಲ್ಲದೆ..” ಎನ್ನುವ ವಾಕ್ಯವು ಸಹ ನಿಮಗೆ ತಿಳಿದದೆ. ಆದರೆ ಅನುವಾದ ಮಾಡುವಾಗ ಮತ್ತಾಯನ ಸುವಾರ್ತೆಯ ವಾಕ್ಯಭಾಗವನ್ನು ಮಾರ್ಕನ ಸುವಾರ್ತೆಯಲ್ಲಿ ಸೇರಿಸಬೇಡಿರಿ. ನಿಮ್ಮ ಸಭೆಯ ಬೋಧನೆಗಳನ್ನು ಸಹ ಇಲ್ಲಿ ಸೇರಿಸುವುದು ಸೂಕ್ತವಲ್ಲ.

ಇವೆಲ್ಲವುಗಳನ್ನು ಅದರಲ್ಲೂ ಮುಖ್ಯವಾಗಿ ನೀವು ತಿಳಿಯದ ಸಂಗತಿಗಳನ್ನು ಅರ್ಥಮಾಡಿಕೊಳ್ಳಬೇಕಾಗಿದ್ದಲ್ಲಿ, ಅನುವಾದಕ್ಕೆ ಸಂಬಂಧಿಸಿದ ಟಿಪ್ಪಣಿಗಳನ್ನು ಓದತಕ್ಕದ್ದು. (ನೋಡಿ http://ufw.io/tn/), ಅನುವಾದದ ಪದಗಳಿಗಾಗಿ (ನೋಡಿ http://ufw.io/tw/), ಅನ್ ಫೋಲ್ಡಿಂಗ್ (ಪ್ರಕಟವಾಗುವ) ಪದಗಳ ಸರಳವಾದ ಪಠೄ (ನೋಡಿ http://ufw.io/udb) ಅಥವಾ ಅನುವಾದಗಳನ್ನು ಮಾಡಲು ಸಹಾಯ ಮಾಡುವ ಇತರ ಸಂಗತಿಗಳು. ಇವುಗಳ ಮೂಲಕವಾಗಿ ಸತ್ಯವೇದ ಭಾಗಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಬಹುದು. ಹೀಗೆ ನೀವು ಅನುವಾದವನ್ನು ಸ್ಪಷ್ಟವಾಗಿ ಮಾಡಲು ಅನುಕೂಲವಾಗುದು.

ನೀವು ಇದರ ವಿಡಿಯೋವನ್ನು ನೋದಬೇಕಾಗಿದ್ದಲ್ಲಿ (http://ufw.io/guidelines_faithful) ನೋಡಿ