translationCore-Create-BCS_.../translate/guidelines-equal/01.md

16 KiB

ಸಮಾನ ಭಾಷಾಂತರದಲ್ಲಿ ಮೂಲಭಾಷೆಯಲ್ಲಿನ ಅಭಿವ್ಯಕ್ತಿಸುವ ಅರ್ಥವನ್ನು ಭಾಷಾಂತರಮಾಡುವ ಭಾಷೆಯಲ್ಲಿ ಸರಿಯಾದ ರೀತಿಯಲ್ಲಿ ತಿಳಿಸುತ್ತದೆ. ಮೂಲಭಾಷೆಯಲ್ಲಿನ ಕೆಲವು ವಿಚಾರಗಳು ಮತ್ತು ಭಾವನೆಗಳನ್ನು ಭಾಷಾಂತರಮಾಡುವ ಭಾಷೆಯಲ್ಲಿ ಸ್ವಲ್ಪವೂ ಬದಲಾವಣೆ ಇಲ್ಲದೆ ಸಮಾನ ಅರ್ಥ ಬರುವಂತೆ, ಭಾವನೆಗಳು ವ್ಯಕ್ತವಾಗುವಂತೆ ಉಳಿಸಿಕೊಳ್ಳಲು ಪ್ರಯತ್ನಿಸುವುದು ಬಹು ಮುಖ್ಯ. ಇದಕ್ಕೆ ಉದಾಹರಣೆಯಾಗಿ ಕೆಲವು ಮಾದರಿಗಳನ್ನು ಕೆಳಗೆ ನೀಡಿದೆ.

ನುಡಿಗಟ್ಟುಗಳು

ವ್ಯಾಖ್ಯಾನ --ನುಡಿಗಟ್ಟು ಎಂಬುದು ಪದಗಳ ಗುಂಪು. ಪ್ರತಿಯೊಂದು ಪದವನ್ನು ನೋಡಿದಾಗ ಅದರದೇ ಅರ್ಥವಿರುತ್ತದೆ. ಆದರೆ ಗುಂಪಾಗಿ ನುಡಿಗಟ್ಟಾದಾಗ ಅದರ ಅರ್ಥ ವಿಭಿನ್ನವಾಗಿರುತ್ತದೆ. ನುಡಿಗಟ್ಟುಗಳು, ಗಾದೆ, ನಾಣ್ಣುಡಿ, ಅಲಂಕಾರಗಳು ಇವುಗಳ ಅರ್ಥವನ್ನು ತಿಳಿದು ಅವುಗಳ ಭಾವನೆ, ಅಭಿವ್ಯಕ್ತಿಗೆ ಕುಂದಿಲ್ಲದಂತೆ ನಿಮ್ಮ ಭಾಷೆಯಲ್ಲಿ ಸಮಾನ ಅರ್ಥಕೊಡುವ ಪದಗಳನ್ನು ಬಳಸಿ ಭಾಷಾಂತರಿಸಿ.

ವಿವರಣೆ -ಸಾಮಾನ್ಯವಾಗಿ ನುಡಿಗಟ್ಟುಗಳನ್ನು ಇನ್ನೊಂದು ಭಾಷೆಗೆ ಅಕ್ಷರಷಃ ಭಾಷಾಂತರಮಾಡಲು ಸಾಧ್ಯವಿಲ್ಲ. ಬೇರೆ ಭಾಷೆಯಲ್ಲಿ ಸಹಜವಾಗಿರುವಂತೆ ನುಡಿಗಟ್ಟು ಗಳ ಅರ್ಥವನ್ನು ಅಭಿವ್ಯಕ್ತವಾಗುವಂತೆ ಭಾಷಾಂತರಿಸಬೇಕು. ಇಲ್ಲಿ ಮೂರು ಭಾಷಾಂತರಗಳನ್ನು ಕಾಣಬಹುದು.ಎಲ್ಲವೂ ಒಂದೇರೀತಿಯ ಅರ್ಥವನ್ನು ಕೊಡುವಂತದ್ದು ಅಪೋಸ್ತಲ ಕೃತ್ಯಗಳು 18:6:ರಲ್ಲಿ ಬಂದಿರುವುದು.

  • " ನಿಮ್ಮ ರಕ್ತಪಾತವು ನಿಮ್ಮ ತಲೆಯ ಮೇಲೆ ಕಾದಿದೆ! ನಾನು ನಿರ್ದೋಷಿ." (RSV)
  • " ನಿಮ್ಮ, ನಾಶಕ್ಕೆ ನೀವೇ ಕಾರಣ, ನೀವೇ ಇದರ ಹೊಣೆಯನ್ನು ಹೊರಬೇಕು! ಇದಕ್ಕೆ ನಾನು ಹೊಣೆಯಲ್ಲ." (GNB)
  • " ದೇವರು ನಿಮ್ಮನ್ನು ಶಿಕ್ಷಿಸಿದರೆ ಅದಕ್ಕೆ ಕಾರಣ ನೀವು ಹೊರತು ನಾನಲ್ಲ !" (TFT)

ಇವೆಲ್ಲವೂ ಪಾಪಗಳನ್ನು ದೂಷಿಸುವ ವಿಚಾರಗಳು. ಇಲ್ಲಿ ಕೆಲವರು ಬೇರೆ ಪದಗಳನ್ನು ಬಳಸಿದ್ದಾರೆ,ಬಳಸಿರುವ ನುಡಿಗಟ್ಟುಗಳು "ರಕ್ತ "ಅಥವಾ " ಶಿಕ್ಷಿಸುವುದು " ಎಂಬ ನೇರವಾದ ಪದವನ್ನು ಬಳಸಲಾಗಿದೆ. ನಿಮ್ಮ ಭಾಷಾಂತರ ಸಮಾನವಾಗಿದೆ ಬೇಕಾದರೆಅದು ತಪ್ಪು ಹೊರಿಸುವಿಕೆಯನ್ನು ಭಾವನಾತ್ಮಕವಾದ ರೀತಿಯಲ್ಲಿ ವ್ಯಕ್ತಪಡಿಸಲಾಗುವುದು

ಅಲಂಕಾರಗಳು

ವ್ಯಾಖ್ಯಾನ --ಅಲಂಕಾರಗಳು ಎಂದರೆ ಅರ್ಥದ ಚಮತ್ಕಾರದಿಂದಲೂ ಮಾತಿನ ಸೌಂದರ್ಯವನ್ನು ಹೆಚ್ಚುಮಾಡಿ, ಭಾವನೆಗಳನ್ನು ಪರಿಣಾಮಕಾರಿಯಾಗಿ, ಮನಸೆಳೆಯುವಂತೆ ಬಳಸುವ ಪದಗಳು.

ವಿವರಣೆಗಳು - ಪ್ರತಿಯೊಂದು ಪದದ ಸಹಜವಾದ ಅರ್ಥ ಅಲಂಕಾರ ಪದಗಳ ಅರ್ಥಕ್ಕಿಂತ ಭಿನ್ನವಾಗಿರುತ್ತದೆ. ಇಲ್ಲಿ ಕೆಲವು ಉದಾಹರಣೆಗಳನ್ನು ನೀಡಲಾಗಿದೆ.

  • ನಾನು ಒಡೆದು ನುಚ್ಚುನೂರಾದೆ ! ಇಲ್ಲಿ ಮಾತನಾಡುತ್ತಿರುವ ವ್ಯಕ್ತಿ ‘ಒಡೆದು ನುಚ್ಚುನೂರಾದೆ’ ಎಂದು ಹೇಳುತ್ತಿರುವುದು, ಅಕ್ಷರಷಃ ಅರ್ಥದಲ್ಲಿ ಅಲ್ಲ, ತನ್ನ ಸ್ಥಿತಿ ತುಂಬಾ ಹೀನಾಯವಾಗಿದೆ ಎಂದು ಹೇಳಲು ಈ ಪದ ಬಳಸಿದ್ದಾನೆ.
  • ಅವನು ನಾನು ಮಾತನಾಡುತ್ತಿರುವುದನ್ನು ನೋಡಿ ಕಿವಿ ಮುಚ್ಚಿಕೊಂಡ.ಇದರ ಅರ್ಥ ನಾನು ಏನು ಹೇಳುತ್ತಿದ್ದೇನೆ ಎಂಬುದನ್ನು ಕೇಳಲು ಇಷ್ಟವಿಲ್ಲ ಎಂದು ತಿಳಿಸುವುದಕ್ಕಾಗಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
  • ಗಾಳಿಯು ಮರಗಳಲ್ಲಿ ನರಳುತ್ತಿತ್ತು. ಇದರ ಅರ್ಥ ಮರಗಳ ಮೂಲಕ ಬೀಸುತ್ತಿರುವ ಗಾಳಿಯ ಶಬ್ದ ಮನುಷ್ಯರು ನರಳುವಂತೆ ಕೇಳಿಸುತ್ತಿತ್ತು.
  • ಇಡೀ ವಿಶ್ವವೇ ಸಭೆ ಸೇರಿ ಬಂದಿತ್ತು. ಅಂದರೆ ವಿಶ್ವದ ಪ್ರತಿಯೊಬ್ಬರು ಬಂದಿರಲಿಲ್ಲ. ಬಹುಶಃ ಬಹುತೇಕ ಜನರು ಈ ಸಭೆಯಲ್ಲಿ ಇದ್ದರು.

ಪ್ರತಿಯೊಂದು ಭಾಷೆಯು ವಿವಿಧ ಅಲಂಕಾರಗಳನ್ನು ಬಳಸುತ್ತದೆ. ಇವುಗಳನ್ನು ನೀವು ಖಚಿತ ಪಡಿಸಿಕೊಳ್ಳಿ:

  • ಅಲಂಕಾರ ಪದಗಳನ್ನು ವಾಕ್ಯದಲ್ಲಿ ಬಳಸಿರುವುದನ್ನು ಗುರುತಿಸಿ.
  • ಅಲಂಕಾರ ಪದ ಬಳಕೆಯ ಉದ್ದೇಶವನ್ನು ಗುರುತಿಸಿ ತಿಳಿದುಕೊಳ್ಳಿ.
  • ಬಳಸಿರುವ ಅಲಂಕಾರಪದದ ನಿಜವಾದ ಅರ್ಥವನ್ನು ತಿಳಿದುಕೊಳ್ಳಿ.

ಅಲಂಕಾರಪದದ ನಿಜವಾದ ಅರ್ಥ ನೀಡುವ ಪದವನ್ನು ನೀವು ಭಾಷಾಂತರ ಮಾಡುವ ಭಾಷೆಯಲ್ಲಿ ಭಾಷಾಂತರ ಮಾಡಬೇಕು. ಇಲ್ಲಿ ಪ್ರತಿಯೊಂದು ಪದಕ್ಕೂ ಪ್ರತ್ಯೇಕ ಅರ್ಥ ನಿಡುವ ಅವಶ್ಯಕತೆ ಇಲ್ಲ.

ಒಮ್ಮೆ ನೀವು ನಿಜವಾದ ಪದದ ಅರ್ಥವನ್ನು ತಿಳಿದುಕೊಂಡರೆ ಭಾಷಾಂತರ ಭಾಷೆಯಲ್ಲಿ ಪರಿಣಾಮಕಾರಿಯಾಗಿ ವ್ಯಕ್ತಪಡಿಸಲು ಬೇಕಾದಪದವನ್ನು ಆಯ್ಕೆ ಮಾಡಿಕೊಳ್ಳಬಹುದು., ಈ ಪದವು ಮೂಲಪದಕ್ಕಿರುವ ಅರ್ಥ ಮತ್ತು ಭಾವನೆಗಳನ್ನು ತಿಳಿಸುವಂತದ್ದಾಗಿರಬೇಕು.

(ಹೆಚ್ಚಿನ ಮಾಹಿತಿಗಾಗಿ ಅಲಂಕಾರಗಳು ಅಧ್ಯಾಯದಲ್ಲಿರುವ ಮಾಹಿತಿಯನ್ನು ನೋಡಬಹುದು.)

ಅಲಂಕಾರಿಕ ಪ್ರಶ್ನೆಗಳು.

ವ್ಯಾಖ್ಯಾನ -- ಅಲಂಕಾರಿಕ ಪ್ರಶ್ನೆಗಳು.ಒಂದು ರೀತಿಯ ಪ್ರಶ್ನೆಯ ಮಾದರಿಯಾಗಿ ಮಾತನಾಡುವವರು ಲೇಖಕರು ಓದುಗರ ಗಮನವನ್ನು ಸೆಳೆಯಲು ಪ್ರಯತ್ನಿಸಲು ಬಳಸುವಂತದ್ದು.

ವಿವರಣೆ -- ಅಲಂಕಾರಿಕ ಪ್ರಶ್ನೆಗಳು ಒಂದು ಮಾದರಿಯ ಪ್ರಶ್ನೆ ಆದರೆ ಈ ಪ್ರಶ್ನೆಗಳು ಉತ್ತರವಾಗಲೀ, ಮಾಹಿತಿಯನ್ನಾಗಲೀ ನಿರೀಕ್ಷಿಸುವುದಿಲ್ಲ. ಇವು ಸಾಮಾನ್ಯವಾಗಿ ಭಾವನೆಗಳನ್ನು ವ್ಯಕ್ತಪಡಿಸುವಂತದ್ದಾಗಿರುತ್ತದೆ. ಅಂದರೆ ಗದರಿಕೆ, ಎಚ್ಚರಿಕೆ,ಐಶ್ವರ್ಯ ಅಥವಾ ಇನ್ನು ಹೆಚ್ಚಿನದನ್ನು ತಿಳಿಸುತ್ತದೆ. ಉದಾಹರಣೆಗಾಗಿ ಮತ್ತಾಯ 3:7:ನೋಡಿ

"ಎಲೈ ಸರ್ಪಜಾತಿಯವರೇ ಮುಂದೆ ಕಾಣಬರುವ ದೈವಕೋಪದಿಂದ ತಪ್ಪಿಸಿಕೊಳ್ಳುವುದಕ್ಕೆ ನಿಮಗೆ ಉಪದೇಶ ಮಾಡಿದವರು ಯಾರು ?" ಇಲ್ಲಿ ಯಾವ ಉತ್ತರವನ್ನೂ ನಿರೀಕ್ಷಿಸಿಲ್ಲ. ಇಲ್ಲಿ ಯೊಹಾನನು ಮಾಹಿತಿಗಾಗಿ ಪ್ರಶ್ನಿಸಿಲ್ಲ; ಆದರೆ ಅವರನ್ನು ಗದರಿಸುತ್ತಿದ್ದಾನೆ.

ದೈವಕೋಪದ ಬಗ್ಗೆ ಈ ಜನರನ್ನು ಎಚ್ಚರಿಸಿ ಗದರಿಸುವುದರಿಂದ ಯಾವ ಒಳ್ಳೆಯ ಪರಿಣಾಮ ಬೀರುವುದಿಲ್ಲ.ಏಕೆಂದರೆ ಅವರು ನಿರಾಕರಿಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಬಹುದು, ಮತ್ತು ತಮ್ಮ ಪಾಪಗಳಿಗೆ ಪಶ್ಚಾತ್ತಾಪ ಪಡಲು ಪ್ರಯತ್ನಿಸದೆ ಇರಬಹುದು. ನಿಮ್ಮ ಭಾಷೆಯಲ್ಲಿ ಅಲಂಕಾರಿಕ ಪ್ರಶ್ನೆಗಳ ಬಳಕೆ ಇಲ್ಲದಿದ್ದರೆ ಭಾಷಾಂತರಿಸುವಾಗ ನೀವು ಈ ಅಲಂಕಾರಿಕ ಪ್ರಶ್ನೆಗಳನ್ನು ಸರಳ ವಾಕ್ಯವಾಗಿ ಪರಿವರ್ತಿಸಬೇಕು ಆದರೆ ನೀವು ನೆನಪಿನಲ್ಲಿಡಬೇಕಾದ ಸಂಗತಿ ಎಂದರೆ ಮೂಲ ಭಾಷೆಯಲ್ಲಿನ ಅಲಂಕಾರಿಕ ಪ್ರಶ್ನೆಗಳನ್ನುನಿಮ್ಮ ಭಾಷೆಯಲ್ಲಿ ಭಾಷಾಂತರಿಸುವಾಗ ಉದ್ದೇಶವನ್ನು ಮತ್ತು ಅರ್ಥವನ್ನು ಅದೇರೀತಿಯ ಭಾವನೆಯಲ್ಲಿ ವ್ಯಕ್ತಪಡಿಸುವಂತಿರಬೇಕು

ಅಲಂಕಾರಿಕ ಪ್ರಶ್ನೆಗಳ ಅರ್ಥ, ಉದ್ದೇಶ ಮತ್ತು ಭಾವನೆಗಳನ್ನು ನಿಮ್ಮ ಭಾಷೆಯಲ್ಲಿ ತಿಳಿಸುವಾಗ ವಿಭಿನ್ನವಾದ ಅಲಂಕಾರವನ್ನು ತಿಳಿಸುವಾಗ ಅಲಂಕಾರಗಳನ್ನು ಬಳಸಿಕೊಳ್ಳಬಹುದು. (ಅಲಂಕಾರಿಕ ಪ್ರಶ್ನೆಗಳನ್ನು. ನೋಡಿ.)

ಆಶ್ಚರ್ಯಸೂಚಕ ಚಿನ್ಹೆ.

ವ್ಯಾಖ್ಯಾನ -- ಭಾಷೆಗಳಲ್ಲಿ ಭಾವಸೂಚಕ ಭಾವನೆಗಳನ್ನು ವ್ಯಕ್ತಪಡಿಸಲು ಚಿನ್ಹೆಗಳನ್ನು ಬಳಸಲಾಗುತ್ತದೆ. ಕೆಲವೊಮ್ಮೆ ಈ ಭಾವಸೂಚಕ ಪದ ಅಥವಾ ಪದಗಳು ಹೆಚ್ಚಾಗಿ ಭಾವನೆಗಳನ್ನು ವ್ಯಕ್ತಪಡಿಸಲು ಬಳಸಲಾಗುತ್ತದೆಯೇ ವಿನಃ ಅವುಗಳಿಗೆ ಅರ್ಥ ಇಲ್ಲದೇ ಇರಬಹುದು. ಉದಾಹರಣೆ ** ಅಯ್ಯೋ ಓಹ್ "alas" or "wow" ಇಂಗ್ಲೀಷ್ ಭಾಷೆಯಲ್ಲಿ.

ಉದಾಹರಣೆಗೆ ನೋಡಿ, 1 ಸಮುವೇಲ 4:8: ಅಯ್ಯೋ ಮುಂಚೆ ಹೀಗಿದ್ದಿಲ್ಲ ಅಯ್ಯೋ, ದೇವರುಗಳ ಕೈಯಿಂದ ನಮ್ಮನ್ನು ಬಿಡಿಸುವವರಾರು? (ULB) ಹಿಬ್ರೂ ಪದ "woe" (ಅಯ್ಯೋ) ಎಂದು ಭಾಷಾಂತರವಾಗುವಾಗ ಏನೋ ಕೆಟ್ಟದ್ದು ನಡೆಯುತ್ತದೆ ಎಂಬ ಬಲವಾದ ಭಾವನೆ ವ್ಯಕ್ತವಾಗುತ್ತದೆ. ನಿಮ್ಮ ಭಾಷೆಯಲ್ಲಿ ಇದೇ ರೀತಿ ಬಲವಾದ ಭಾವನೆಯನ್ನು ವ್ಯಕ್ತಪಡಿಸುವ ಭಾವ ಸೂಚಕಪದಗಳನ್ನು ಬಳಸಬಹುದು.

ಪದ್ಯ.

ವ್ಯಾಖ್ಯಾನ -- ಪದ್ಯದ ಒಂದು ಉದ್ದೇಶವೆಂದರೆ ಯಾವುದಾದರು ಒಂದು ಸಂಗತಿಯ ಕುರಿತು ಭಾವನೆಗಳನ್ನು ವ್ಯಕ್ತಪಡಿಸುವಂತದ್ದು.

ವಿವರಣೆ - ಪದ್ಯವು ಅನೇಕ ವಿಧಗಳ ಮೂಲಕ ಅನೇಕ ರೀತಿಯಲ್ಲಿ ಅನೇಕ ಭಾಷೆಗಳಲ್ಲಿ ವಿವರಿಸುತ್ತದೆ. ಇವುಗಳನ್ನು ಅನೇಕ ರೀತಿಯಲ್ಲಿ ವಿವರಿಸುವುದರೊಂದಿಗೆ ಅಲಂಕಾರಗಳು, ಭಾವಸೂಚಕಗಳ ಮೂಲಕ ತಿಳಿಸುತ್ತದೆ. ಪದವು ವ್ಯಾಕರಣವನ್ನು ಸಾಮಾನ್ಯ ಭಾಷೆಗಿಂತ ವಿಭಿನ್ನವಾಗಿ ಬಳಸುತ್ತದೆ. ಅಥವಾ ಪದಬಳಕೆಯನ್ನು ಅಥವಾ ನಮೂನೆಪದ ಉಚ್ಛಾರಣೆಯನ್ನು ನಿರ್ದಿಷ್ಟ ಲಯ ಮತ್ತು ಭಾವನೆಗಳ ಮೂಲಕ ತಿಳಿಸುತ್ತದೆ.

ದಾ.ಕೀ. 36:5: ನ್ನು ಉದಾಹರಣೆಗಾಗಿ ನೋಡಿ. ಯೆಹೋವನೇ ವಿಶ್ವಾಸಪೂರ್ಣ ಹೊಸ ಒಡಂಬಡಿಕೆಯು, ನಿನ್ನ ಪ್ರೀತಿಯು ಆಕಾಶದಷ್ಟು ಉನ್ನತವಾಗಿದೆ [ಆಕಾಶವನ್ನು ಮುಟ್ಟುವಷ್ಟು] ನಿನ್ನ ನಂಬಿಕೆಯು ಮೇಘಮಾರ್ಗವನ್ನು [(ಮುಟ್ಟುವಷ್ಟು)] ಮುಟ್ಟುತ್ತದೆ. (ULB)

ಈ ಪದ್ಯಭಾಗದ ಸಾಲುಗಳು ಎರಡು ಸಾಲುಗಳಲ್ಲಿ ಸಮಾನವಾಗಿ ಹಿಬ್ರೂ ಭಾಷೆಯ ಪದ್ಯದ ಶೈಲಿಯಲ್ಲೂ ತಿಳಿಸಿದೆ. ಮೂಲ ಹಿಬ್ರೂ ಭಾಷೆಯಲ್ಲಿ ಕ್ರಿಯಾಪದಗಳಿಲ್ಲ, ಸಾಮಾನ್ಯ ಆಡುಭಾಷೆಯಲ್ಲಿ ಬಳಸುವ ವಿಭಿನ್ನ ರೀತಿಯ ವ್ಯಾಕರಣಪದಗಳಿವೆ. ನಿಮ್ಮ ಭಾಷೆಯಲ್ಲಿ ವಿಭಿನ್ನ ರೀತಿಯಲ್ಲಿ ಪದ್ಯವನ್ನು ಗುರುತಿಸಿ ಹೇಳಬಹುದು. ನೀವು ಪದ್ಯವನ್ನು ಭಾಷಾಂತರಿಸುವಾಗ ನಿಮ್ಮ ಭಾಷೆಯಲ್ಲಿನ ಪದ್ಯದ ಮಾದರಿಯನ್ನು ನಿಮ್ಮ ಓದುಗರಿಗೆ ಅರ್ಥವಾಗುವ ರೀತಿಯಲ್ಲಿ ತಿಳಿಸಬೇಕು. ಮತ್ತು ಮೂಲಪದ್ಯದಲ್ಲಿರುವ ಭಾವನೆಗಳನ್ನು ತಿಳಿಸಲು ಪ್ರಯತ್ನಿಸಬೇಕು.

ನೆನಪಿನಲ್ಲಿ ಇಟ್ಟುಕೊಳ್ಳಬೇಕಾದುದು ಮೂಲವಾಕ್ಯದಲ್ಲಿರುವ ಭಾವನೆಗಳು ಮತ್ತು ದೋರಣೆಗಳನ್ನು ಸ್ವಲ್ಪವೂ ಮುಕ್ಕಾಗದಂತೆ ತಿಳಿಸಬೇಕು. ನಿಮ್ಮ ಭಾಷೆಯಲ್ಲಿ ಸಮಾನವಾದ ಭಾವನೆಗಳನ್ನು ತಿಳಿಸುವ ಮಾದರಿಗಳನ್ನು ಸರಿಯಾದ ಅರ್ಥ ಬರುವಂತೆ ಭಾಷಾಂತರಿಸಬೇಕು. ಭಾಷಾಂತರವನ್ನು ಮಾಡುವ ಭಾಷೆಯಲ್ಲಿ ಅತ್ಯುತ್ತಮವಾದ, ನಿಖರವಾದ, ಸ್ಪಷ್ಟವಾದ, ಸಮಾನವಾದ, ಮತ್ತು ಸಹಜವಾದ ಅಭಿವ್ಯಕ್ತಿಯೊಂದಿಗೆ ಭಾಷಾಂತರವಾಗುವಂತೆ ಗಮನವಹಿಸಬೇಕು.