translationCore-Create-BCS_.../translate/guidelines-natural/01.md

12 KiB

ಸ್ವಾಭಾವಿಕ / ಸಾಮಾನ್ಯವಾದ ಭಾಷಾಂತರ

ಸತ್ಯವೇದವನ್ನು ಸಹಜವಾಗಿ ಭಾಷಾಂತರಿಸುವುದು ಎಂದರೆ ಅದು ಸರಳವಾಗಿ ಇರುವಂತೆ ನೋಡಿಕೊಳ್ಳುವುದು:

ಇಲ್ಲಿ ಭಾಷಾಂತರ ಎಂದರೆ ಯಾವ ಭಾಷೆಗೆ ಭಾಷಾಂತರಿಸುತ್ತಿದ್ದೆವೋ ಆ ಭಾಷೆಯಲ್ಲಿ ಬರೆಯಲ್ಪಟ್ಟಿದೆ ಎಂಬ ಅರ್ಥಬರುತ್ತದೆಯೋ ಹೊರತು ಅನ್ಯ ಭಾಷೆಯವರು / ವಿದೇಶಿಯರು ಬರೆದಂತೆ ಅನಿಸುವುದಿಲ್ಲ. ಸಾಮಾನ್ಯವಾದ ಭಾಷಾಂತರ ಮಾಡಲು ಕೆಲವು ಸಲಹೆಗಳಿವೆ.

ಚಿಕ್ಕ ಚಿಕ್ಕ ವಾಕ್ಯಗಳನ್ನು ಬಳಸಿ.

ನಾವು ಮಾಡುವ ಭಾಷಾಂತರ ಸಹಜ ಸಾಮಾನ್ಯವಾಗಿ ಕಾಣಬೇಕೆಂದು ಅಂದುಕೊಂಡರೆ ಉದ್ದುದ್ದ ಸಂಕೀರ್ಣ ವಾಕ್ಯಗಳನ್ನು ಬಿಟ್ಟು ಚಿಕ್ಕ ಸರಳ ವಾಕ್ಯಗಳನ್ನು ಬಳಸಬೇಕು. ಗ್ರೀಕ್ ಭಾಷೆಯಲ್ಲಿ ಅಲ್ಲಲ್ಲಿ ಉದ್ದುದ್ದ ಮತ್ತು ವ್ಯಾಕರಣಬದ್ಧವಾದ ಕ್ಲಿಷ್ಟವಾಕ್ಯಗಳು ಇರುತ್ತವೆ. ಕೆಲವು ಸತ್ಯವೇದ ಭಾಷಾಂತರಗಳು ಇಂತಹ ಗ್ರೀಕ್ ವಾಕ್ಯರಚನೆಗಳನ್ನು ಬಳಸಿವೆ ಹಾಗೆಯೇ ಉದ್ದುದ್ದ ವಾಕ್ಯಗಳನ್ನು ಬಳಸಿವೆ. ಸಹಜವಾಗಿ ಸರಳವಾಗಿ ಇರುವ ವಾಕ್ಯಗಳನ್ನು ಬಳಸದೆ ಭಾಷಾಂತರ ಆಗುತ್ತಿರುವ ಭಾಷೆಯಲ್ಲಿ ಗೊಂದಲ ಉಂಟುಮಾಡಿವೆ. ಭಾಷಾಂತರಕ್ಕೆ ಸಿದ್ಧತೆ ಮಾಡಿಕೊಳ್ಳುವ ಮೊದಲು ವಾಕ್ಯಭಾಗವನ್ನು ಮೊದಲು ಓದಿ ಚಿಕ್ಕ ಚಿಕ್ಕ ವಾಕ್ಯಗಳಂತೆ ದೊಡ್ಡವಾಕ್ಯಗಳನ್ನು ಬದಲಾಯಿಸಿಬರೆದುಕೊಳ್ಳಬೇಕು.

ಇದರಿಂದ ಉತ್ತಮ ಹಾಗೂ ಅರ್ಥಪೂರ್ಣ ಭಾಷಾಂತರ ಮಾಡಲು ಸಾಧ್ಯವಾಗುತ್ತದೆ. ಅನೇಕ ಭಾಷೆಯಲ್ಲಿ ಈ ರೀತಿಯ ಚಿಕ್ಕ ಚಿಕ್ಕ ವಾಕ್ಯಗಳನ್ನು ಬಳಸಿ ಉದ್ದುದ್ದ ವಾಕ್ಯಗಳನ್ನು ಮತ್ತು ವಾಕ್ಯದಲ್ಲಿ ಗೊಂದಲವನ್ನು ತಡೆಯುವ ಉತ್ತಮ ಶೈಲಿಯನ್ನು ರೂಢಿಸಿಕೊಂಡಿದ್ದಾರೆ. ಭಾಷಾಂತರ ಮಾಡುತ್ತಿರುವ ಭಾಷೆಯಲ್ಲಿ ಇಂತಹ ಪ್ರಯೋಗ, ದೊಡ್ಡವಾಕ್ಯಗಳನ್ನು ಅನೇಕ ಚಿಕ್ಕ ವಾಕ್ಯಗಳಾಗಿ ಪರಿವರ್ತಿಸುವುದರಿಂದ ಹೆಚ್ಚಿನ ಅನುಕೂಲವಿದೆ. ಅನೇಕ ಭಾಷೆಯಲ್ಲಿ ಸರಳವಾದ, ಒಂದು ಅಥವಾ ಎರಡು ಕೃದಂತಪದಗಳನ್ನು ಬಳಸಿ ವಾಕ್ಯಮಾಡುವುದರಿಂದ ಸಹಜವಾಗಿ ಸುಲಭವಾಗಿ ಅರ್ಥವಾಗುತ್ತದೆ. ಚಿಕ್ಕ ವಾಕ್ಯಗಳು ಓದುಗರು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಹಾಯಮಾಡುವುದಲ್ಲದೆ ಸ್ಪಷ್ಟವಾಗಿಯೂ ಇರುತ್ತದೆ.

ಈ ರೀತಿಯ ಚಿಕ್ಕ ವಾಕ್ಯಗಳನ್ನು ಮಾಡುವಾಗ ವಾಕ್ಯಗಳು ಪದಗಳ ನಡುವೆ ಸ್ಪಷ್ಟ ಸಂಬಂಧ, ಹೊಂದಾಣಿಕೆ ಇರುವಂತೆ ನೋಡಿಕೊಳ್ಳಬೇಕು. ಉದ್ದುದ್ದ ವಾಕ್ಯಗಳು, ಸಂಕೀರ್ಣವಾಕ್ಯಗಳನ್ನು ಚಿಕ್ಕ ವಾಕ್ಯವಾಗಿ ಪರಿವರ್ತಿಸುವಾಗ ಮುಖ್ಯಪದಗಳನ್ನು ಸರಿಯಾಗಿ ಗುರುತಿಸಿ, ನೇರವಾಗಿ ವಾಕ್ಯಗಳ ನಡುವೆ ಸಂಬಂಧ ಕಲ್ಪಿಸುವಂತೆ ಎಚ್ಚರ ವಹಿಸಬೇಕು. ಸಾಮಾನ್ಯವಾಗಿ ಕ್ರಿಯಾಪದ ಅಥವಾ ಕ್ರಿಯೆಯನ್ನು ಸೂಚಿಸುವ ಪದದಎರಡೂ ಕಡೆಯಲ್ಲಿ ಪದಗಳಿದ್ದು ಅದು ಕ್ರೀಯಾಪದದ ಕ್ರಿಯೆಯನ್ನು ಸೂಚಿಸುತ್ತದೆ. ಈ ತರದ ಪದಗುಚ್ಛಗಳು ತಮ್ಮದೇ ಆದ ಸ್ಥಾನವನ್ನು ಪಡೆದಿರುತ್ತವೆ ಮತ್ತು ಇವುಗಳನ್ನು ಸರಳವಾಕ್ಯಗಳ ಮೂಲಕ ಸ್ವತಂತ್ರ ಪದಗಳನ್ನಾಗಿ ಬಳಸಬೇಕು.

ಇಂತಹ ಪದಗುಚ್ಛಗಳನ್ನು ಒಂದೆಡೆ ಇಟ್ಟು ಸರಳ ವಾಕ್ಯಗಳನ್ನಾಗಿ ಮಾಡಿ ಒಂದೊಂದು ಉದ್ಧೇಶ ಅಥವಾ ಭಾಗವನ್ನು ಒಂದೊಂದು ಚಿಕ್ಕ ವಾಕ್ಯಗಳ ಮೂಲಕ ತಿಳಿಸಬಹುದು. ನೀವು ಈ ರೀತಿ ಮಾಡಿದ ವಾಕ್ಯಗಳನ್ನು ಮತ್ತೊಮ್ಮೆ ಓದಿ ಅವು ಸರಿಯಾ ಅರ್ಥ ನೀಡುತ್ತಿದೆಯೇ ಎಂದು ಪರಿಶೀಲಿಸಿ. ಇಂತಹ ಸಮಯದಲ್ಲಿ ಸಮಸ್ಯೆ ಎದುರಾದರೆ ದೊಡ್ಡವಾಕ್ಯವನ್ನು ಬೇರೆ ರೀತಿಯಲ್ಲಿ ಸರಳವಾಗಿ ಹೇಳಲು ಪ್ರಯತ್ನಿಸಬೇಕು. ನೀವು ಮಾಡಿದ ಹೊಸ ವಾಕ್ಯಗಳಲ್ಲಿನ ವಿಷಯ ನಿಮಗೆ ಚೆನ್ನಾಗಿ ಅರ್ಥವಾದರೆ ನೀವು ಭಾಷಾಂತರ ಮಾಡುತ್ತಿರುವ ಭಾಷೆಯಲ್ಲಿ ಸರಳ, ಚಿಕ್ಕ,ಸಾಮಾನ್ಯವಾದ ರೀತಿಯಲ್ಲಿ ಅರ್ಥಕೊಡುವಂತೆ ಭಾಷಾಂತರಿಸಿ. ಇದಾದ ಮೇಲೆ ಭಾಷಾಂತರವಾಗಿರುವ ಭಾಷೆಯ ಸಮುದಾಯದಿಂದ ಭಾಷೆಯನ್ನು ಚೆನ್ನಾಗಿ ಬಲ್ಲವರ ಮುಂದೆ ಓದಿ ಎಲ್ಲವೂ ಸರಿಯಾಗಿದೆಯೇ, ಪ್ರತಿಯೊಂದು ಪದದ ಧ್ವನಿ (ಸನ್ನಿವೇಶಕ್ಕೆ ತಕ್ಕ ಸ್ವರ ಉಚ್ಛಾರಣ ಶಬ್ಧವಿದೆಯೇ) ಸರಿಯಾಗಿದೆಯೇ ಎಂದು ದೃಢಪಡಿಸಿಕೊಳ್ಳಿ.

####ನಿಮ್ಮ ಜನರು ಮಾತನಾಡುವ ಸ್ವರ ಉಚ್ಛಾರಣೆಯಂತೆ ಬರೆಯಿರಿ, ಭಾಷಾಂತರ ಮಾಡಿ.

ಸತ್ಯವೇದದ ಪ್ರತಿಯೊಂದು ವಾಕ್ಯಭಾಗವನ್ನು ಚೆನ್ನಾಗಿ ಓದಿ “ಈ ವಾಕ್ಯದಲ್ಲಿ ಬರುವ ಸಂದೇಶ ಎಂತದ್ದು ?” ಎಂದು ತಿಳಿದುಕೊಳ್ಳಿ. ನಂತರ ನಿಮ್ಮ ಭಾಷಾಂತರ ಭಾಷೆಯಲ್ಲಿ ಈ ಸಂದೇಶವನ್ನು ಪರಿಣಾಮಕಾರಿಯಾಗಿ ತಿಳಿಸಲು ಸಾಧ್ಯವಾಗುವಂತೆ ವಾಕ್ಯಭಾಗಗಳು ಅಥವಾ ಅಧ್ಯಾಯಗಳನ್ನು ಭಾಷಾಂತರಿಸಿ

ಉದಾ : ನೀವು ಭಾಷಾಂತರಿಸುತ್ತಿರುವ ವಾಕ್ಯಬಾಗ ಪದ್ಯದ ರೂಪದಲ್ಲಿದ್ದರೆ, ಉದಾಹರಣೆಗೆ ದಾವೀದನ ಕೀರ್ತನೆಗಳು - ಆಗ ಅದೇ ರಚನೆಯ ಮಾದರಿಯಲ್ಲಿ ನಿಮ್ಮ ಭಾಷಾಂತರವಿದ್ದರೆ ನಿಮ್ಮ ಓದುಗರು ಇದೊಂದು ಪದ್ಯಭಾಗ ಎಂದು ಗುರುತಿಸಲು ಸಾಧ್ಯವಾಗುತ್ತದೆ.

ಅಥವಾ ವಾಕ್ಯಬಾಗವು ಜೀವನದ ಉತ್ತಮ ನಡವಳಿಕೆಯ ಬಗ್ಗೆ ಎಚ್ಚರಿಕೆ ಅಥವಾ ಬೋಧನೆಯ ರೂಪದಲ್ಲಿ ಇದ್ದರೆ ಉದಾ : ಹೊಸಒಡಂಬಡಿಕೆಯಲ್ಲಿನ ಪೌಲನ ಪತ್ರಗಳು ನಿಮ್ಮ ಜನರಿಗೆ ಸರಿಯಾದ ಸೂಕ್ತವಾದ ಮಾರ್ಗದರ್ಶನದ ಬೋಧನೆಯ ರೀತಿಯಲ್ಲಿ ಭಾಷಾಂತರಿಸಬೇಕು. ಅಥವಾ ವಾಕ್ಯಭಾಗವು ಗತಿಸಿಹೋದ ಸನ್ನಿವೇಶಗಳ ಕತೆಯಾಗಿದ್ದರೆ ಆಗ ನೀವು ಅದನ್ನು ನಿಜವಾಗಲೂ ನಡೆದ ಘಟನೆಯಂತೆ ಭಾಷಾಂತರಿಸಬೇಕು.

ಸತ್ಯವೇದದಲ್ಲಿ ಇಂತಹ ಅನೇಕ ಕಥೆಗಳು ಇವೆ. ಸರಿಯಾದ ಭಾಷಾಂತರವಾದರೆ ಜನರು ಇದನ್ನು ಓದಿ ಅರ್ಥಮಾಡಿಕೊಂಡು ಪರಸ್ಪರ ಒಬ್ಬರಿಗೊಬ್ಬರು ಈ ಕಥೆಗಳನ್ನು ಹೇಳುವರು, ಕೆಲವೊಮ್ಮೆ ತಮ್ಮದೇ ಧಾಟಿ / ಶೈಲಿಯಲ್ಲಿ ನಿರೂಪಣೆ ಮಾಡಬಹುದು. ಉದಾಹರಣೆಗೆ ಕಥೆಯಲ್ಲಿ ಬರುವ ಸನ್ನಿವೇಶಗಳಿಗೆ ತಕ್ಕಂತೆ ಎಲ್ಲಾ ರೀತಿಯ ಉದ್ಘಾರಗಳು ಆಶ್ಚರ್ಯ, ಭಯ, ಎಚ್ಚರಿಕೆ, ಹೊಗಳಿಕೆ ಖಂಡನೆ ಮುಂತಾದವುಗಳನ್ನು ವ್ಯಕ್ತಪಡಿಸಬಹುದು. ನೀವು ಮಾಡುವ ಭಾಷಾಂತರ ಪರಿಣಾಮಕಾರಿಯಾಗಿ, ಸಹಜವಾಗಿ ನಿಮ್ಮ ಜನರನ್ನು ತಲುಪಬೇಕೆಂದರೆ ಈ ಎಲ್ಲಾ ರೀತಿಯ ಉದ್ಘಾರಗಳನ್ನು ಆಶ್ಚರ್ಯ, ಭಯ, ಎಚ್ಚರಿಕೆ, ಹೊಗಳಿಕೆ ಖಂಡನೆ, ಕೋಪ ಎಲ್ಲವೂ ಬರುವಂತೆ ನೋಡಿಕೊಳ್ಳಬೇಕು. ಇಲ್ಲಿರುವ ಎಲ್ಲಾ ಸಂಗತಿಗಳನ್ನು, ವಿಭಿನ್ನತೆಯನ್ನು ನಿಮ್ಮ ಭಾಷಾಂತರದಲ್ಲಿ ತರಬೇಕೆಂದರೆ ನಿಮ್ಮ ಸುತ್ತಲಿರುವ ಜನರು ಹೇಗೆ ಮಾತನಾಡುತ್ತಾರೆ ಎಂಬುದನ್ನು ಕೇಳಲು, ಬರೆಯಲು ಅಭ್ಯಾಸ ಮಾಡಿ, ಆಗ ಜನರು ಇಂತಹ ಪದಗಳನ್ನು ಯಾವ ಸಂದರ್ಭದಲ್ಲಿ ಮತ್ತು ಏಕೆ ಬಳಸುತ್ತಾರೆ ಎಂಬುದು ತಿಳಿಯುತ್ತದೆ. ಒಳ್ಳೆಯ ಭಾಷಾಂತರವೆಂದರೆ ಭಾಷಾಂತರ ಆಗುತ್ತಿರುವ ಭಾಷೆಯ ಜನರು ತಮ್ಮ ಭಾಷಾ ಸಂಪತ್ತು ಮತ್ತು ಅಭಿವ್ಯಕ್ತಿ ರೂಪಗಳನ್ನು ಸಹಜವಾಗಿ ಹೇಗೆ ಉಪಯೋಗಿಸುತ್ತಾರೆ ಎಂದು ತಿಳಿದಿರುವುದು. ಇಂತಹ ಭಾಷಾಂತರ ಅವರಿಗೆ ಓದಲು ಮತ್ತು ಕೇಳಲು ಸುಲಭವಾಗಿ ಇರುತ್ತದೆ. ಭಾಷಾಂತರದಲ್ಲಿ ಯಾವುದೇ ಅಪರಿಚಿತ ಪದಗಳು ಅಭಾಸವಾದ ಪದಗಳು, ಅಸಂಬದ್ಧ ಪದಗಳು ಇರಬಾರದು. ಉತ್ತಮ ಭಾಷಾಂತರ ನಿಮ್ಮ ಆಪ್ತ ಸ್ನೇಹಿತ/ಳು ಬರೆದ ಪತ್ರದಂತೆ ಸುಲಭವಾಗಿ ಓದಿ ಅರ್ಥಮಾಡಿಕೊಳ್ಳುವಂತೆ ಇರಬೇಕು.

ಆದರೆ ಇದನ್ನು ಗೇಟ್ ವೇ ಭಾಷಾಂತರಕ್ಕಾಗಿ ಮಾಡಬಾರದು.

ಈ ನಿಯಮ ULB ಮತ್ತು UDBಯ “” ಗೇಟ್ ವೇ ಭಾಷಾಂತರಕ್ಕೆ ಅನ್ವಯಿಸುವುದಿಲ್ಲ. ಸತ್ಯವೇದಗಳು ಭಾಷಾಂತರ ಆಗುತ್ತಿರುವ ಭಾಷೆಯು ಸಹಜವಾಗಿ ಇರುವಂತೆ ಕಾಪಾಡಿಕೊಳ್ಳಲು ಬೇಕಾದ ಲಕ್ಷಣಗಳನ್ನು ವಿನ್ಯಾಸಗೊಳಿಸಿದೆ. ಅವು ಸತ್ಯವೇದ ಭಾಷಾಂತರದ ಸಾಧನೆಗಳೇ ಹೊರತು ಅದೇ ಅಂತಿಮ ಸತ್ಯವೇದವಲ್ಲ.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ “Translating the ULB and "Translating the UDB" in the Gateway Languages” ಕೈಪಿಡಿಯನ್ನು ನೋಡಿ.