ಈ ಕೆಳಗೆ ಕೊಟ್ಟಿರುವ ಪದಗಳು ಸತ್ಯವೇದದಲ್ಲಿ ಬರುವ ಸಾಮಾನ್ಯ ತೂಕದ ಅಂಶಗಳು. "ಶೆಕಲ್" ಎಂದರೆ "ತೂಕ," (11.5 ಗ್ರಾಂ ತೂಕದ ಬೆಳ್ಳಿ) ಇದರಲ್ಲಿ ತೂಕವನ್ನು ವಿವರಿಸಿದೆ. ಕೆಲವು ತೂಕಗಳನ್ನು ಹಣದ ರೂಪದಲ್ಲಿ ಬಳಸಲಾಗಿದೆ. ಕೆಳಗೆಕೊಟ್ಟಿರುವ ಮೆಟ್ರಿಕ್ ಮೌಲ್ಯಗಳನ್ನು ಕೆಳಗೆ ಕೊಟ್ಟಿರುವ ಸತ್ಯವೇದ ಆಧಾರಿತ ತೂಕಕ್ಕೆ ಅಷ್ಟೇನು ಸಮಾನವಾಗಿಲ್ಲ. ಸತ್ಯವೇದದ ಅಳತೆಗಳು ಮೌಲ್ಯ / ಹಣದ ರೂಪದಲ್ಲಿ ಕಾಲಕಾಲಕ್ಕೆ, ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಭಿನ್ನವಾಗಿರುತ್ತದೆ. ಕೆಳಗೆ ನೀಡಿರುವ ಸಮಾನ ಅಳತೆಯ ಪ್ರಯತ್ನ ಸರಾಸರಿ ಅಳತೆ ಪ್ರಮಾಣವಾಗಿದೆ.
1. ಸತ್ಯವೇದದಲ್ಲಿ ಬರುವ ಜನರು ಮೀಟರ್ ಗಳು, ಲೀಟರ್ ಗಳು ಮತ್ತು ಕಿಲೋಗ್ರಾಂಗಳಂತಹ ಆಧುನಿಕ ಅಳತೆಗಳನ್ನು ಬಳಸಲಿಲ್ಲ. ಮೂಲ ಅಳತೆಗಳನ್ನು ಬಳಸುವುದರಿಂದ ಓದುಗರು ಸತ್ಯವೇದವು ನಿಜವಾಗಲೂ ತುಂಬಾ ಹಿಂದೆ ಬರೆಯಲ್ಪಟ್ಟದ್ದು ಎಂದು ತಿಳಿಯುವುದಲ್ಲದೆ ಅಂದಿನ ಜನರು ಇಂದಿನ ಅಳತೆಗಳನ್ನು ಬಳಸುತ್ತಿರಲಿಲ್ಲ ಎಂಬುದನ್ನು ತಿಳಿಯುತ್ತಾರೆ.
4. ನೀವು ಸತ್ಯವೇದದ ಅಳತೆಗಳನ್ನು ಬಳಸದಿದ್ದರೆ ಅದಕ್ಕೆ ಸಮಾನ ಅಳತೆಗಳನ್ನು ಓದುಗರಿಗೆ ನೀಡುವ ಪ್ರಯತ್ನ ಮಾಡಬೇಡಿ. ಉದಾಹರಣೆಗೆ, ಒಂದು ಗೇರಾ ಎಂಬುದನ್ನು ಭಾಷಾಂತರಿಸುವಾಗ ".57 ಗ್ರಾಂಗಳು," ಎಂದು ತಿಳಿಸಿದರೆ ಓದುಗರು ಇದು ನಿಖರವಾದ ಅಳತೆ ಎಂದು ತಿಳಿಯಬಹುದು. ಅದರ ಬದಲು "ಅರ್ಧ ಗ್ರಾಂ" ಎಂದು ಹೇಳುವುದು ಸರಿಯಾಗಿರಬಹುದು.
5. ಕೆಲವೊಮ್ಮೆ ಅಳತೆಯು ನಿಖರವಾಗಿಲ್ಲ ಎಂದು ತೋರಿಸಲು "ಸುಮಾರು" ಎಂಬ ಪದವನ್ನು ಬಳಸುವುದು ಸಹಾಯಕವಾಗಬಹುದು. ಉದಾಹರಣೆಗೆ, 2 ಸಮುವೇಲ 21:16ರಲ್ಲಿ ಹೇಳಿರುವಂತೆ, ಗೊಲಿಯಾತನ ಭರ್ಜಿ 300 ಶೆಕಲ್ಸ್ ತೂಕದ್ದಾಗಿತ್ತು. ಇದನ್ನು "3300 ಗ್ರಾಂಗಳು" ಅಥವಾ "3.3 ಕಿಲೋಗ್ರಾಂಗಳು" ಎಂದು ಭಾಷಾಂತರಿಸುವ ಬದಲು "ಸುಮಾರು ಮೂರುವರೆ ಕಿಲೋಗ್ರಾಂಗಳು" ಎಂದು ಭಾಷಾಂತರಿಸಬಹುದು.
6. ಸತ್ಯವೇದದಲ್ಲಿ ದೇವರು ಜನರಿಗೆ ಏನಾದರೂ ಎಷ್ಟು ತೂಕವಿರಬೇಕು ಎಂದು ಹೇಳಿದಾಗ ಮತ್ತು ಜನರು ಆ ತೂಕಗಳನ್ನು ಬಳಸಿದಾಗ, ಅನುವಾದದಲ್ಲಿ "ಸುಮಾರು" ಎಂಬ ಪದವನ್ನು ಬಳಸಿ ತೂಕದ ಅಳತೆಯನ್ನು ಹೇಳಬೇಡಿ. ಹೀಗೆ ಬಳಸಿದರೆ, ಆ ವಸ್ತುವು ಎಷ್ಟು ತೂಕವನ್ನು ಹೊಂದಿರಬೇಕು ಎಂಬುದರ ಬಗ್ಗೆ ದೇವರು ನಿಖರವಾಗಿ ಗಮನವಹಿಸಲಿಲ್ಲ ಎಂಬ ಅಭಿಪ್ರಾಯ ಮೂಡುತ್ತದೆ.
### ಭಾಷಾಂತರ ತಂತ್ರಗಳು/ಕೌಶಲ್ಯಗಳು
(1) ULTಯಲ್ಲಿರುವ ಅಳತೆಗಳನ್ನು ಬಳಸಿ. ಇದರಲ್ಲಿ ಬಳಸಿರುವ ಅಳತೆಗಳು ಮೂಲ ಲೇಖಕರು ಸತ್ಯವೇದದಲ್ಲಿ ಬಳಸಿದವುಗಳು. ULT ಯಲ್ಲಿ ಬಳಸಿದ ಅಕ್ಷರಗಳು ಮತ್ತು ಅವುಗಳ ಧ್ವನಿ ಉಚ್ಛಾರಣೆಗಳು ಒಂದೇ ರೀತಿಯಾಗಿರಬೇಕೆಂದು ಗಮನವಹಿಸಬೇಕು. (ನೋಡಿ [Copy or Borrow Words](../translate-transliterate/01.md).)
(2) USTಯಲ್ಲಿರುವ ಮೆಟ್ರಿಕ್ ಪದ್ಧತಿಯ ಅಳತೆಗಳನ್ನು ಬಳಸಿ. USTಯಂತೆ ಭಾಷಾಂತರ ಮಾಡುವವರು ಈಗಾಗಲೇ ಮೆಟ್ರಿಕ್ ಪದ್ಧತಿಯಲ್ಲಿ ಮೊತ್ತವನ್ನು ಹೇಗೆ ಪ್ರತಿನಿಧಿಸುವುದು ಎಂದು ಕಂಡುಹಿಡಿದಿದ್ದಾರೆ.
(3) ಈಗಾಗಲೇ ನಿಮ್ಮ ಭಾಷೆಯಲ್ಲಿ ಬಳಸಿರುವ ಅಳತೆಗಳನ್ನು ಬಳಸಿಕೊಳ್ಳಿ. ಇದನ್ನು ಮಾಡಲು, ನಿಮ್ಮ ಅಳತೆಗಳು ಮೆಟ್ರಿಕ್ ಪದ್ಧತಿಗೆ ಹೇಗೆ ಸಂಬಂಧಿಸಿವೆ ಎಂಬುದನ್ನು ನೀವು ತಿಳಿದುಕೊಳ್ಳಬೇಕು ಮತ್ತು ಪ್ರತಿ ಅಳತೆಯನ್ನು ಕಂಡುಹಿಡಿಯಬೇಕು.

(4) ULTಯಲ್ಲಿರುವ ಅಳತೆಗಳನ್ನು ಬಳಸಿ ಮತ್ತು ನಿಮ್ಮ ಜನರಿಗೆ ತಿಳಿದಿರುವ ಅಳತೆಗಳನ್ನು ವಾಕ್ಯಭಾಗದಲ್ಲಿ ಅಥವಾ ಟಿಪ್ಪಣಿಯಲ್ಲಿ ಸೇರಿಸಿ. ಈ ಕೆಳಗಿನ ವಾಕ್ಯಭಾಗದಲ್ಲಿ ಎರಡೂ ಅಳತೆಗಳನ್ನು ಕಾಣಬಹುದು.
(5) ನಿಮ್ಮ ಜನರಿಗೆ ತಿಳಿದಿರುವ ಅಳತೆಗಳನ್ನು ಬಳಸಿ ಮತ್ತು ULTಯಲ್ಲಿರುವ ಅಳತೆಗಳನ್ನು ವಾಕ್ಯಭಾಗ ಅಥವಾ ಟಿಪ್ಪಣಿಯಲ್ಲಿ ಸೇರಿಸಿ. ಈ ಕೆಳಗಿನ ಟಿಪ್ಪಣಿಗಳಲ್ಲಿ ULT ಅಳತೆಗಳನ್ನು ಕಾಣಬಹುದು.