translationCore-Create-BCS_.../checking/accuracy-check/01.md

22 KiB

ಸಭಾಪಾಲಕರ ಮೂಲಕ ಮತ್ತು ಸಭೆಯ ನಾಯಕರುಗಳ ಮೂಲಕ ನಿಖರತೆಗಾಗಿ ಅನುವಾದವನ್ನು ಪರಿಶೀಲನೆ ಮಾಡಬಹದು

ಹೊಸ ಅನುವಾದವು ನಿಖರವಾಗಿದೆಯೋ ಇಲ್ಲವೋ ಎಂದು ನೋಡುವುದು ತುಂಬಾ ಪ್ರಾಮುಖ್ಯವಾದ ವಿಷಯ. ಮೂಲ ಭಾಷೆಯಲ್ಲಿ ಇರುವ ಅರ್ಥವನ್ನೇ ಅನುವಾದದಲ್ಲಿ ಉಪಯೋಗಿಸಿರುವದಾದರೆ ಆ ಅನುವಾದವು ನಿಖರತೆಯಾಗಿದೆಯೆಂದರ್ಥ. ಬೇರೊಂದು ಮಾತುಗಳಲ್ಲಿ ಹೇಳಬೇಕಾದರೆ, ಮೂಲ ರಚನಾಕಾರರು ಉದ್ದೇಶಿಸಿ ಹೇಳಬೇಕಾದ ಸಂದೇಶವನ್ನೇ ನಿಖರತೆಯ ಅನುವಾದವು ಕೂಡ ಅದೇ ಸಂದೇಶವನ್ನೇ ಹೇಳಿರುತ್ತದೆ. ಅನುವಾದದಲ್ಲಿ ಹೆಚ್ಚಿನ ಪದಗಳು ಬಳಸುವದರಿಂದಲೂ ಅಥವಾ ಕಡಿಮೆ ಪದಗಳು ಬಳಸುವದರಿಂದಲೂ ಅಥವಾ ಬೇರೊಂದು ಕ್ರಮದಲ್ಲಿ ಆಲೋಚನೆಗಳನ್ನು ಇಡುವುದರಿಂದಲೂ ಅದು ನಿಖರತವಾಗಿರಲು ಸಾಧ್ಯವಿದೆ. ಅನುವಾದ ಮಾಡಬೇಕಾದ ಭಾಷೆಯಲ್ಲಿ ಸ್ಪಷ್ಟವಾಗಿ ಮೂಲ ಸಂದೇಶವನ್ನು ತಿಳಿಸುವ ಕ್ರಮದಲ್ಲಿ ಇದು ಅನೇಕಬಾರಿ ತುಂಬ ಅವಶ್ಯಕವಾಗಿರುತ್ತದೆ.

ಅನುವಾದ ತಂಡದ ಸದಸ್ಯರೆಲ್ಲರೂ ಒಬ್ಬರಿಗೊಬ್ಬರು ಮೌಖಿಕ ಪಾಲುದಾರ ಪರಿಶೀಲನೆಯಲ್ಲಿ ಅನುವಾದವನ್ನು ನಿಖರತೆಗಾಗಿ ಪರಿಶೀಲನೆ ಮಾಡಿದಾಗ್ಯೂ, ಅನೇಕ ಜನರಿಂದ, ವಿಶೇಷವಾಗಿ ಸಭಾಪಾಲಕರಿಂದ ಮತ್ತು ಸಭೆಯ ನಾಯಕರುಗಳಿಂದ ಪರಿಶೀಲನೆ ಮಾಡಲ್ಪಡುವಾಗ ಆ ಅನುವಾದವನ್ನು ಇನ್ನೂ ಹೆಚ್ಚಾಗಿ ಉತ್ತಮವಾಗಿರಲು ಸಾಧ್ಯವಾಗುತ್ತದೆ, ಪ್ರತಿಯೊಂದು ವಾಕ್ಯಭಾಗವನ್ನು ಅಥವಾ ಪುಸ್ತಕವನ್ನು ಒಬ್ಬ ಸಭಾ ನಾಯಕನಿಂದ ಪರಿಶೀಲನೆ ಮಾಡಿಸಬಹುದು, ಅಥವಾ, ಅನೇಕಮಂದಿ ನಾಯಕರು ಲಭ್ಯವಿರುವದಾದರೆ, ಪ್ರತಿಯೊಂದು ವಾಕ್ಯಭಾಗವನ್ನು ಅಥವಾ ಪುಸ್ತಕವನ್ನು ಅನೇಕಮಂದಿ ಸಭಾ ನಾಯಕರುಗಳಿಂದ ಪರಿಶೀಲನೆ ಮಾಡಿಸಬಹುದು. ಒಬ್ಬ ವ್ಯಕ್ತಿಗಿಂತಲೂ ಹೆಚ್ಚಾದ ಜನರು ಒಂದು ಕಥೆಯನ್ನು ಅಥವಾ ಒಂದು ವಾಕ್ಯಭಾಗವನ್ನು ಪರಿಶೀಲನೆ ಮಾಡಿದಾಗ ಅದು ತುಂಬಾ ಸಹಾಯಕರವಾಗಿರುತ್ತದೆ, ಯಾಕಂದರೆ ಅನೇಕಬಾರಿ ಬೇರೆ ಬೇರೆ ಜನರು ಬೇರೆ ಬೇರೆ ವಿಷಯಗಳನ್ನು ಕಂಡುಹಿಡಿಯುತ್ತಾರೆ.

ನಿಖರತೆಯ ಪರಿಶೀಲನೆಯನ್ನು ಮಾಡುವ ಸಭೆಯ ನಾಯಕರು ಅನುವಾದ ಭಾಷೆಯನ್ನು ಮಾತನಾಡುವವರಾಗಿರಬೇಕು, ಆ ಸಮುದಾಯದಲ್ಲಿ ಗೌರವವನ್ನು ಪಡೆದಿರುವವರಾಗಿರಬೇಕು, ಮತ್ತು ಅವರ ಭಾಷೆಯಲ್ಲಿ ಸತ್ಯವೇದದ ಕುರಿತಾಗಿ ಚೆನ್ನಾಗಿ ಗೊತ್ತಿರಬೇಕು .ವಾಕ್ಯಭಾಗವನ್ನಾಗಲಿ ಅಥವಾ ಪುಸ್ತಕವನ್ನಾಗಲಿ ಅನುವಾದ ಮಾಡಿದವರು ಮತ್ತು ಪರಿಶೀಲನೆ ಮಾಡುವವರು ಒಂದೇಯಾಗಿರಬಾರದು. ಅನುವಾದ ತಂಡಕ್ಕೆ ಸಹಾಯಕರಾಗಿರುವ ನಿಖರತೆಯ ಪರಿಶೀಲಕರು ಮೂಲ ರಚನೆಯಲ್ಲಿರುವುದೇ ಅನುವಾದವು ಕೂಡ ಹೇಳುತ್ತಿದೆಯೆಂದು ಮತ್ತು ಮೂಲ ಸಂದೇಶದಲ್ಲಿರದ ವಿಷಯಗಳು ಯೂವುದೇ ಸೇರಿಸಲ್ಪಟ್ಟಿಲ್ಲವೆಂದು ಧೃಡೀಕರಣೆ ಮಾಡಬೇಕು. ಏನೇಯಾಗಲಿ, ನಿಖರತೆಯ ಅನುವಾದಗಳು ಕೂಡ [ಸ್ಪಷ್ಟತೆಯ ಮಾಹಿತಿಯನ್ನು] ಒಳಗೊಂಡಿರಬೇಕೆಂದು ಮನಸ್ಸಿನಲ್ಲಿಟ್ಟುಕೊಂಡಿರಬೇಕು (../../translate/figs-explicit/01.md).

ಭಾಷೆಯ ಸಮುದಾಯ ಪರಿಶೀಲನೆ ಮಾಡುವ ಭಾಷೆಯ ಸಮುದಾಯ ಸದಸ್ಯರು ಅನುವಾದವನ್ನು ಪರಿಶೀಲನೆ ಮಾಡುವಾಗ ಸಹಜ ಅನುವಾದಕ್ಕಾಗಿ ಮತ್ತು ಸ್ಪಷ್ಟತೆಗೋಸ್ಕರ ಖಂಡಿತವಾಗಿ ಮೂಲ ವಾಕ್ಯಗಳನ್ನು ನೋಡಬಾರದು. ಆದರೆ ನಿಖರತೆಯ ಪರೀಕ್ಷೆಗೋಸ್ಕರ, ನಿಖರತೆಯ ಪರಿಶೀಲಕರು ತಪ್ಪದೇ ಮೂಲ ವಾಕ್ಯಗಳನ್ನು ನೋಡಲೇಬೇಕು, ಇದರಿಂದ ಅವರು ಹೊಸ ಅನುವಾದದೊಂದಿಗೆ ಹೋಲಿಸಿಕೊಳ್ಳಬಹುದು.

ಸಭೆಯ ನಾಯಕರು ಮಾಡುವ ನಿಖರತೆಯ ಪರಿಶೀಲನೆಯು ಈ ಕೆಳಗಿನ ಹಂತಗಳನ್ನು ಪರಿಶೀಲನೆ ಮಾಡಬೇಕು:

  1. ಸಾಧ್ಯವಾದರೆ ನೀವು ಪರಿಶೀಲನೆ ಮಾಡುವ ಬೈಬಲ್ ವಾಕ್ಯಭಾಗಗಳಿಗಾಗಿ ಅಥವಾ ಕಥೆಗಳಿಗಾಗಿ ಮೊದಲೇ ಆರಿಸಿಕೊಳ್ಳಿರಿ ನೀವು ಅರ್ಥಮಾಡಿಕೊಳ್ಳುವ ಯಾವುದೇ ಭಾಷೆಯಲ್ಲಿನ ಅನೇಕ ವಿಧವಾದ ಅನುವಾದಗಳನ್ನು ಓದಿರಿ. ಯುಎಲ್.ಟಿ ಮತ್ತು ಯುಎಸ್.ಟಿಗಳಲ್ಲಿನ ಭಾಗಗಳನ್ನು ಓದಿರಿ, ಅದರ ಜೊತೆಯಲ್ಲಿ ಅನುವಾದದ ಪದಗಳನ್ನು ಮತ್ತು ವಿಷಯದ ಅಂಶಗಳನ್ನು ಓದಿರಿ. ನೀವು ಇವುಗಳನ್ನು ಟ್ರಾನ್ಸ್.ಲೇಶನ್ ಸ್ಟುಡಿಯೋನಲ್ಲಿ ಅಥವಾ ಬೈಬಲ್ ವೀವರ್.ನಲ್ಲಿ ಇವುಗಳನ್ನು ಓದಿರಿ.

  2. ನಿಖರತೆಯ ಪರಿಶೀಲಕರಾದ ಪ್ರತಿಯೊಬ್ಬರೂ ಅನುವಾದವನ್ನು ತಾವೇ ಮೂಲ ಭಾಷೆಯಲ್ಲಿರುವ ಕಥೆಯನ್ನು ಅಥವಾ ಬೈಬಲ್ ವಾಕ್ಯಭಾಗವನ್ನು ಹೋಲಿಸಿಕೊಳ್ಳುತ್ತಾ ಓದಲೇ ಬೇಕು (ಅಥವಾ ರಿಕಾರ್ಡ್ ಆಗಿರುವುದನ್ನು ಕೇಳಬೇಕು). ಪರಿಶೀಲಕರು ಇದನ್ನು ಟ್ರಾನ್ಸ್.ಲೇಶನ್ ಸ್ಟುಡಿಯೋನಲ್ಲಿ ಮಾಡಬಹುದು. ಅನುವಾದಕರಾಗಿ ಕೆಲವರಿಗೆ ಇದು ಉಪಯೋಗಕರವಾಗಿರಬಹುದು, ಯಾಕಂದರೆ ಅನುವಾದಕರು ಅನುವಾದವನ್ನು ಗಟ್ಟಿಯಾಗಿ ಬಾಯಿ ತೆರೆದು ಓದುತ್ತಿರುವಾಗ ಪರಿಶೀಲಕರು ಮೂಲ ಬೈಬಲ್ ಅಥವಾ ಬೈಬಲ್.ಗಳನ್ನು ನೋಡಿ ತಪ್ಪುಗಳನ್ನು ಕಂಡುಹಿಡಿಯಬಹುದು. ಪರಿಶೀಲಕರು ಅನುವಾದವನ್ನು ಓದುತ್ತಿರುವಾಗ (ಅಥವಾ ಕೇಳುತ್ತಿರುವಾಗ) ಮತ್ತು ಅದನ್ನು ಮೂಲ ಭಾಷೆಗೆ ಹೋಲಿಸಿಕೊಂಡು ನೋಡುತ್ತಿರುವಾಗ, ಆತನು ಈ ಕೆಳಗಿನ ಕೆಲವು ಪ್ರಶ್ನೆಗಳನ್ನು ತನ್ನ ಮನಸ್ಸಿನಲ್ಲಿಡಬೇಕು:

  • ಅನುವಾದದಲ್ಲಿ ಮೂಲ ಅರ್ಥಕ್ಕೆ ಬೇರೆ ಇತರ ಪದಗಳನ್ನು ಅಥವಾ ಮಾತುಗಳನ್ನು ಸೇರಿಸಿದ್ದಾರೋ? (ಮೂಲ ಅರ್ಥವು ಕೂಡ [ಸ್ಪಷ್ಟವಾದ ಮಾಹಿತಿ]ಯನ್ನು ಒಳಗೊಂಡಿರಬೇಕು] (../../translate/figs-explicit/01.md).)
  • ಅನುವಾದದಲ್ಲಿ ಮೂಲ ಅರ್ಥಕ್ಕೆ ಸಂಬಂಧಪಟ್ಟ ಯಾವುದೇ ಒಂದು ಭಾಗವು ಅನುವಾದ ಮಾಡದೇ ಬಿಡಲ್ಪಟ್ಟಿದಿಯೋ?
  • ಯಾವ ಕಾರಣದಿಂದಾಗಲಿ ಅನುವಾದದಲ್ಲಿ ಅರ್ಥವು ಬದಲಾಯಿಸಲ್ಪಟ್ಟಿದಿಯೋ?
  1. ಬೈಬಲ್ ವಾಕ್ಯಭಾಗದ ಅನುವಾದವನ್ನು ಅನೇಕಸಲ ಕೇಳುವುದಕ್ಕೆ ಅಥವಾ ಓದುವುದಕ್ಕೆ ಇದು ತುಂಬಾ ಸಹಾಯಕರವಾಗಿರುತ್ತದೆ. ನೀವು ಮೊದಲಬಾರಿಗೆ ವಾಕ್ಯವನ್ನಾಗಲಿ ಅಥವಾ ಬೈಬಲ್ ವಾಕ್ಯಭಾಗವನ್ನಾಗಲಿ ಓದುತ್ತಿರುವಾಗ ಎಲ್ಲವನ್ನು ಗಮನಿಸುವುದಕ್ಕೆ ಆಗದಿರಬಹುದು. ಇದು ವಿಶೇಷವಾಗಿ ಮೂಲ ಭಾಷೆಯಲ್ಲಿರುವುದಕ್ಕಿಂತಲೂ ವಿಭಿನ್ನವಾಗಿ ವಾಕ್ಯದ ಇತರ ಭಾಗಗಳು ಅಥವಾ ಆಲೋಚನೆಗಳನ್ನು ಅನುವಾದದಲ್ಲಿ ಸೇರಿಸಿದಾಗ ನಡೆಯುತ್ತದೆ. ನೀವು ವಾಕ್ಯದ ಒಂದು ಭಾಗಕ್ಕಾಗಿ ಪರಿಶೀಲನೆ ಮಾಡಿ, ಆದಮೇಲೆ ವಾಕ್ಯದ ಮತ್ತೊಂದು ಭಾಗವನ್ನು ಓದುವುದಾಗಲಿ ಅಥವಾ ಅದನ್ನು ಕೇಳುವುದಾಗಲಿ ಮಾಡಬೇಕಾಗಿರುತ್ತದೆ. ಎಲ್ಲಾ ಭಾಗಗಳನ್ನು ಕಂಡುಕೊಳ್ಳುವುದಕ್ಕೆ ಎಷ್ಟುಸಲ ಬೇಕಾದರೆ ಅಷ್ಟುಸಲ ವಾಕ್ಯವನ್ನು ಕೇಳುವುದಾಗಲಿ ಅಥವಾ ಓದುವುದಾಗಲಿ ಮಾಡಿದಾಗ, ತರುವಾಯ ಭಾಗಕ್ಕೆ ನೀವು ಮುಂದಕ್ಕೆ ಹೋಗಬಹುದು. ಅನುವಾದವು ಸಂಪೂರ್ಣವಾದಾಗ ಪರಿಶೀಲನೆ ಮಾಡುವುದಕ್ಕೆ ಹೆಚ್ಚಿನ ವಿಧಾನಗಳಿಗಾಗಿ, ಸಂಪೂರ್ಣ ಎನ್ನುವುದನ್ನು ನೋಡಿರಿ.

  2. ಪರಿಶೀಲಕರು ಏನಾದರೂ ತಿದ್ದುಪಡಿ ಮಾಡಬೇಕೆಂದರು ಅಥವಾ ಏನಾದರು ಸಮಸ್ಯೆ ಇರುವುದನ್ನು ಕಂಡುಕೊಂಡರು ಅಲ್ಲಿ ಆ ಲೋಚನೆಗಳನ್ನು ಬರೆದುಕೊಳ್ಳಬೇಕು. ಪ್ರತಿಯೊಬ್ಬ ಪರಿಶೀಲಕರು ಈ ಆಲೋಚನೆಗಳನ್ನು ಅನುವಾದ ತಂಡದೊಂದಿಗೆ ಚರ್ಚಿಸಬೇಕು. ಈ ಆಲೋಚನೆಗಳು ಅಥವಾ ತಿದ್ದುಪಡಿಗಳು ಮುದ್ರಿಸಿದ ಅನುವಾದ ಹಾಳೆಯ ಮೇಲೆಯೇ ಇರುವುದು ಒಳ್ಳೇಯದು, ಅಥವಾ ಅವುಗಳನ್ನು ಇನ್ನೊಂದು ಹಾಳೆಯ ಮೇಲೆ ಬರೆದುಕೊಳ್ಳಬಹುದು, ಅಥವಾ ಟ್ರಾನ್ಸ್.ಲೇಶನ್.ಕೋರ್ ಎನ್ನುವ ವ್ಯಾಖ್ಯೆಯ ಅಧಾರವನ್ನು ಉಪಯೋಗಿಸಿಕೊಳ್ಳಬಹುದು.

  3. ಪರಿಶೀಲಕರಾದ ಪ್ರತಿಯೊಬ್ಬರೂ ವ್ಯಕ್ತಿಗತವಾಗಿ ಅಧ್ಯಾಯವನ್ನು ಅಥವಾ ಬೈಬಲ್ ಪುಸ್ತಕವನ್ನು ಪರಿಶೀಲನೆ ಮಾಡಿದಮೇಲೆ, ಅವರೆಲ್ಲರು ಅನುವಾದಕರನ್ನು ಅಥವಾ ಅನುವಾದ ತಂಡವನ್ನು ಭೇಟಿ ಮಾಡಬೇಕು ಮತ್ತು ಎಲ್ಲರು ಸೇರಿ ಪುಸ್ತಕವನ್ನಾಗಲಿ ಅಥವಾ ಅಧ್ಯಾಯವನ್ನಾಗಲಿ ಪುನರಾವಲೋಕನ ಮಾಡಬೇಕು. ಸಾಧ್ಯವಾದರೆ, ಮಾಡಿದ ಅನುವಾದವನ್ನು ಪ್ರೊಜೆಕ್ಟ್ ಮಾಡಿ ಗೋಡೆಯ ಮೇಲೆ ತೋರಿಸಿದರೆ, ಎಲ್ಲರು ನೋಡುವುದಕ್ಕೆ ಅವಕಾಶವಿರುತ್ತದೆ. ಪ್ರತಿಯೊಬ್ಬ ಪರಿಶೀಲಕನು ಎತ್ತಿ ತೋರಿಸುವ ಸಮಸ್ಯೆಯಾಗಲಿ ಅಥವಾ ಯಾವುದೇ ಪ್ರಶ್ನೆಯಾಗಲಿ ಒಂದೇಯಾಗಿದ್ದಾರೆ, ತಿದ್ದುಪಡಿ ಮಾಡುವುದಕ್ಕೆ ಪರಿಶೀಲಕರು ಇತರ ಪರಿಶೀಲಕರ ಪ್ರಶ್ನೆಗಳನ್ನು ಅಥವಾ ಸಲಹೆಗಳನ್ನು ಕೇಳಿ ತಿಳಿದುಕೊಳ್ಳಬೇಕು, ಅವರು ಬಹುಶಃ ಇತರ ಪ್ರಶ್ನೆಗಳನ್ನು ಎತ್ತಿ ತೋರಿಸಬಹುದು ಅಥವಾ ಬೇರೊಂದು ಹೊಸ ವಿಧಾನಗಳಲ್ಲಿ ಆಲೋಚನೆಗಳು ಹೇಳಬಹುದು. ಇದು ಒಳ್ಳೇಯದು. ಪರಿಶೀಲಕರು ಮತ್ತು ಅನುವಾದ ತಂಡವು ಸೇರಿ ಕೆಲಸ ಮಾಡುವಾಗ, ಬೈಬಲ್ ವಾಕ್ಯಭಾಗದ ಅಥವಾ ಕಥೆಯ ಅರ್ಥವನ್ನು ತಿಳಿಸುವುದಕ್ಕೆ ಉತ್ತಮವಾದ ವಿಧಾನವನ್ನು ಕಂಡುಕೊಳ್ಳಲು ದೇವರು ಅವರಿಗೆ ಸಹಾಯ ಮಾಡಬಹುದು.

  4. ಪರಿಶೀಲಕರು ಮತ್ತು ಅನುವಾದ ತಂಡವು ಮಾಡಬೇಕಾದ ತಿದ್ದುಪಡಿಯನ್ನು ಮಾಡಬೇಕೆಂದು ನಿರ್ಣಯಿಸಿಕೊಂಡಾದ ಮೇಲೆ, ಅನುವಾದ ತಂಡವು ಅನುವಾದವನ್ನು ತಿದ್ದುಪಡಿ ಮಾಡುತ್ತಾರೆ. ಎಲ್ಲರು ಮಾರ್ಪಡಿಸುವದಕ್ಕೆ ಒಪ್ಪಿಕೊಳ್ಳುವ ಆ ಸಮಯದಲ್ಲೇ ಅವರು ಇದನ್ನು ಮಾಡಬಹುದು.

  5. ಅನುವಾದ ತಂಡ ಅನುವಾದವನ್ನು ತಿದ್ದುಪಡಿ ಮಾಡಿದನಂತರ, ಅದು ಆ ಭಾಷೆಯ ಸಮುದಾಯದ ಜನರಿಗೆ ಸ್ವಾಭಾವಿಕವಾಗಿ ಇದೆಯೋ ಇಲ್ಲವೋ ಎಂದು ಒಬ್ಬರಿಗೊಬ್ಬರು ಅದನ್ನು ಗಟ್ಟಿಯಾಗಿ ಓದಿಕೊಳ್ಳಬೇಕು ಅಥವಾ

  6. ಅರ್ಥಮಾಡಿಕೊಳ್ಳುವುದಕ್ಕೆ ಕಷ್ಟವಾಗಿರುವ ಬೈಬಲ್ ವಾಕ್ಯಭಾಗಗಳು ಅಥವಾ ವಾಕ್ಯಗಳು ಇರುವುದಾದರೆ, ಅನುವಾದ ತಂಡವು ಅಂಥ ಕ್ಲಿಷ್ಟಕರ ಭಾಗಗಳನ್ನು ಗುರುತಿಸಿಕೊಂಡಿರಬೇಕು. ಉತ್ತರವನ್ನು ಪಡೆದುಕೊಳ್ಳುವುದಕ್ಕೆ ಅನುವಾದವು ಅಥವಾ ವ್ಯಾಖ್ಯನಗಳು ಸಹಾಯವಾಗುವಂತೆ ಬೈಬಲ್.ನಲ್ಲಿ ಪರಿಶೋಧನೆ ಹೆಚ್ಚಾಗಿ ಮಾಡುವುದಕ್ಕೆ ಅನುವಾದ ತಂಡವು ಈ ಸಮಸ್ಯೆಗಳನ್ನು ಸದಸ್ಯರಿಗೆ ಒಪ್ಪಿಸಬೇಕು, ಅಥವಾ ಅವರು ಬೇರೆ ಪರಿಶೋಧಕರಿಂದ ಅಥವಾ ಸಲಹೆಗಾರರಿಂದ ಹೆಚ್ಚಿನ ಸಹಾಯಕ್ಕಾಗಿ ಕೇಳಿಕೊಳ್ಳಬಹುದು. ಸದಸ್ಯರು ಅರ್ಥವನ್ನು ಕಂಡುಕೊಂಡಾಗ, ಅವರ ಭಾಷೆಯಲ್ಲಿ ಆ ಅರ್ಥವನ್ನು ಸ್ವಾಭಾವಿಕವಾಗಿ ಮತ್ತು ಸ್ಪಷ್ಟವಾಗಿ ಹೇಗೆ ವ್ಯಕ್ತಪಡಿಸಬೇಕೆಂದು ನಿರ್ಣಯಿಸುವುದಕ್ಕೆ ಮತ್ತೊಮ್ಮೆ ಅನುವಾದ ತಂಡವು ಭೇಟಿ ಮಾಡಬಹುದು.

ಹೆಚ್ಚುವರಿ ಪ್ರಶ್ನೆಗಳು

ಅನುವಾದದಲ್ಲಿ ಅನಿಖರತೆಯು ಏನಾದರೂ ಇದ್ದರೆ ಅದನ್ನು ಕಂಡುಕೊಳ್ಳುವುದಕ್ಕೋಸ್ಕರ ಈ ಪ್ರಶ್ನೆಗಳು ಕೂಡ ತುಂಬಾ ಸಹಾಯಕರವಾಗಿರುತ್ತವೆ:

  • ಮೂಲ ಭಾಷೆಯ ಅನುವಾದದಲ್ಲಿರುವ ಪ್ರತಿಯೊಂದು ಅರ್ಥವು ಹೊಸ ಅನುವಾದ ಮಾಡುವ ಭಾಷೆಯಲ್ಲಿ (ಸ್ಥಳೀಯ ಭಾಷೆಯಲ್ಲಿ) ಸರಾಗವಾಗಿ ಕ್ರೋಡೀಕರಣ ಮಾಡಿದ್ದಾರೋ?
  • ಹೊಸ ಅನುವಾದದ ಅರ್ಥವು ಮೂಲ ಅನುವಾದದ ಸಂದೇಶವನ್ನು (ಅಕ್ಷರಾರ್ಥವಾಗಿ ಅಲ್ಲ) ಅನುಸರಿಸಿಕೊಂಡು ಬರುತ್ತಿದಿಯೋ? (ಕೆಲವೊಮ್ಮೆ ಮೂಲ ಅನುವಾದದಲ್ಲಿರುವದಕ್ಕಿಂತಲೂ ಆಲೋಚನೆ ವಿಧಾನವು ಅಥವಾ ಪದಗಳ ಸಂಗ್ರಹಣೆ ಹೊಸ ಅನುವಾದದಲ್ಲಿ ಬೇರೆಯಾಗಿರಬಹುದು, ಅದು ಮುಂಚೆ ಮಾಡಿರುವ ಅನುವಾದಕ್ಕಿಂತ ಉತ್ತಮವಾಗಿದ್ದು, ನಿಖರವಾಗಿರಬಹುದು.)
  • ಮೂಲ ಭಾಷೆಯ ಅನುವಾದದಲ್ಲಿ ಹೇಳಲ್ಪಟ್ಟಿರುವ ವಿಷಯಗಳನ್ನೇ ಪ್ರತಿಯೊಂದು ಕಥೆಯಲ್ಲಿ ಪರಿಚಯಮಾಡಿದ ಜನರು ಇದ್ದಾರೋ? (ಮೂಲ ಭಾಷೆಗೆ ಅದನ್ನು ಹೋಲಿಸಿಕೊಳ್ಳುವಾಗ ಹೊಸ ಅನುವಾದ ಸಂಘಟನೆಗಳಲ್ಲಿರುವ ಜನರನ್ನು ನೋಡುವುದಕ್ಕೆ ಸುಲಭವಾಗುತ್ತಿದಿಯೋ?)
  • ಮೂಲ ಅನುವಾದದಲ್ಲಿ ನಿಮಗೆ ಅರ್ಥವಾಗದಿರುವ ಉಪಯೋಗಿಸಿದ ಪದಗಳಿಗೆ ಸರಿಹೊಂದದಂತೆ ಹೊಸ ಅನುವಾದದಲ್ಲಿ ಅನುವಾದ ಪದಗಳನ್ನು ಉಪಯೋಗಿಸಿದ್ದಾರೋ? ಇಂಥಹ ವಿಷಯಗಳ ಕುರಿತಾಗಿ ಆಲೋಚನೆ ಮಾಡಿರಿ: ಮೂಲ ಭಾಷೆಯಿಂದ ಯಾವ ಪದಗಳನ್ನು ಉಪಯೋಗಿಸದೇ ಯಾಜಕನ (ದೇವರಿಗೆ ಯಜ್ಞಗಳನ್ನು ಸಮರ್ಪಿಸುವವನು) ಕುರಿತಾಗಿ ಅಥವಾ ದೇವಾಲಯದ (ಯೆಹೂದ್ಯರು ಯಜ್ಞಗಳನ್ನು ಅರ್ಪಿಸುವ ಸ್ಥಳ) ಕುರಿತಾಗಿ ಜನರು ಮಾತನಾಡಿದರೆ ಹೇಗಿರುತ್ತದೆ?
  • ಮೂಲ ಭಾಷೆಯ ಹೆಚ್ಚಿನ ಕ್ಲಿಷ್ಟಕರ ಮಾತುಗಳನ್ನು ಅರ್ಥಮಾಡಿಕೊಳ್ಳುವದಕ್ಕೆ ಹೊಸ ಅನುವಾದದಲ್ಲಿ ಬೇರೆ ಮಾತುಗಳು ಉಪಯೋಗಿಸಲ್ಪಟ್ಟಿದ್ದಾವೋ? (ಮೂಲ ಭಾಷೆಯ ಅನುವಾದ ಅರ್ಥವನ್ನು ಹೋಗಲಾಡಿಸದೇ, ಉತ್ತಮ ಅರ್ಥವನ್ನು ತೆಗೆದುಕೊಂಡು ಬರುವ ವಿಧಾನದಲ್ಲಿ ಹೊಸ ಅನುವಾದದ ಮಾತುಗಳು ಇದ್ದಾವೋ?)
  • ವಾಕ್ಯವು ನಿಖರತೆಯಾಗಿ ಇದೆಯೋ ಇಲ್ಲವೋ ಎಂದು ನಿರ್ಣಯಿಸಿಕೊಳ್ಳುವುದಕ್ಕೆ ಮತ್ತೊಂದು ವಿಧಾನ ಏನಂದರೆ ಅನುವಾದದ ಕುರಿತಾಗಿ ಗ್ರಹಿಕೆಯ ಪ್ರಶ್ನೆಗಳನ್ನು ಕೇಳುವುದು, “ಯಾರು ಏನನ್ನು, ಯಾವಾಗ, ಎಲ್ಲಿ, ಹೇಗೆ ಮತ್ತು ಯಾತಕ್ಕೆ ಮಾಡಿದರು” ಎನ್ನುವ ಪ್ರಶ್ನೆಗಳು ಕೇಳಬಹುದು. ಈ ರೀತಿ ಸಹಾಯ ಮಾಡುವುದಕ್ಕೆ ಸಿದ್ಧಮಾಡಲ್ಪಟ್ಟ ಪ್ರಶ್ನೆಗಳು ಇಲ್ಲಿವೆ. (ಅನುವಾದದ ಪ್ರಶ್ನೆಗಳನ್ನು ನೋಡುವುದಕ್ಕೆ ಇಲ್ಲಿಗೆ ಹೋಗಿರಿ: http://ufw.io/tq/.) ಆ ಪ್ರಶ್ನೆಗಳಿಗೆ ಉತ್ತರಗಳು ಮೂಲ ಭಾಷೆಯ ಅನುವಾದದ ಕುರಿತಾಗಿ ಕೇಳುವ ಆ ಪ್ರಶ್ನೆಗಳಿಗೆ ಉತ್ತರ ಕೊಡುವಂತೆಯೇ ಇರಬೇಕು. ಒಂದುವೇಳೆ ಆ ರೀತಿಯಾಗಿ ಇಲ್ಲದಿದ್ದರೆ, ಅನುವಾದದಲ್ಲಿ ಸಮಸ್ಯೆ ಇದ್ದಂತೆಯೇ ಅರ್ಥ.

ಇನ್ನಿತರ ಹೆಚ್ಚಿನ ಅಂಶಗಳನ್ನು ಪರಿಶೀಲನೆ ಮಾಡಬೇಕಾದರೆ, [ಪರಿಶೀಲನೆ ಮಾಡುವುದಕ್ಕೆ ಇನ್ನಿತರ ಅಂಶಗಳು] (../vol2-things-to-check/01.md) ಎನ್ನುವದನ್ನು ನೋಡಿರಿ.