translationCore-Create-BCS_.../checking/peer-check/01.md

6.3 KiB

ಮೌಖಿಕ ಪಾಲುದಾರ ಪರಿಶೀಲನೆ ಮಾಡುವುದು ಹೇಗೆ

ಈ ಸಮಯದಲ್ಲಿ, ಮೊದಲನೆಯ ರಚನೆ ಎಂದು ಕರೆಯಲ್ಪಡುವ ಘಟಕದಲ್ಲಿ ಕೊಡಲ್ಪಟ್ಟಿರುವ ನಿಯಮಗಳನ್ನು ಅನುಸರಿಸಿ ನಿಮ್ಮ ಅನುವಾದದಲ್ಲಿ ಕನಿಷ್ಠ ಮೊದಲನೆಯ ಅಧ್ಯಾಯವನ್ನಾದರೂ ನೀವು ಈಗಾಗಲೇ ಪೂರ್ತಿಮಾಡಿರಬಹುದು. ಅದನ್ನು ಪರಿಶೀಲಿಸಲು, ಅದರಲ್ಲಿ ಯಾವುದಾದರು ತಪ್ಪುಗಳು ಅಥವಾ ಸಮಸ್ಯೆಗಳು ಇಲ್ಲದ ಹಾಗೆ ಮತ್ತು ಅದನ್ನು ಅತ್ಯುತ್ತಮವಾಗಿ ಮಾಡಲು ಈ ಹಂತದಲ್ಲಿ ನಿಮಗೆ ಬೇರೆಯವರ ಸಹಾಯ ಬೇಕಾಗಿರುತ್ತದೆ. ಅನುವಾದಕರು ಅಥವಾ ಅನುವಾದದ ತಂಡದವರು ಪರಿಶುದ್ಧ ಗ್ರಂಥದಲ್ಲಿ ಹೆಚ್ಚಿನ ಕಥೆಗಳು ಅಥವಾ ಅಧ್ಯಾಯಗಳು ಅನುವಾದ ಮಾಡುವುದಕ್ಕೆ ಮುಂಚೆಯೇ ಅವರ ಅನುವಾದವನ್ನು ಪರಿಶೀಲಿಸಬೇಕು, ಅದರಿಂದ ಅನುವಾದ ಕ್ರಮದಲ್ಲಿ ಅವರ ತಪ್ಪುಗಳನ್ನು ಆದಷ್ಟು ಬೇಗನೆ ಅವರು ತಿಳಿದುಕೊಂಡು ಅವುಗಳನ್ನು ತಿದ್ದುಪಡಿ ಮಾಡಿಕೊಳ್ಳುವರು. ಅನುವಾದ ಮುಗಿಸುವುದಕ್ಕೆ ಮುಂಚೆ ಈ ಕ್ರಮದ ಅನೇಕ ಹಂತಗಳನ್ನು ಹಲವಬಾರಿ ಮಾಡುವ ಅಗತ್ಯತೆ ಇರಬಹುದು. ಮೌಖಿಕ ಪಾಲುದಾರ ಪರಿಶೀಲನೆ ಮಾಡುವುದಕ್ಕೆ ಈ ಕೆಳಕಂಡ ಹಂತಗಳನ್ನು ಅವಲಂಬಿಸಿ.

  • ಈ ವಾಕ್ಯ ಭಾಗದ ಕೆಲಸವನ್ನು ಮಾಡದ ನಿಮ್ಮ ಪಾಲುದಾರನಿಗೆ (ಅನುವಾದದ ತಂಡದಲ್ಲಿರುವ ಒಬ್ಬರು) ನಿಮ್ಮ ಅನುವಾದವನ್ನು ಓದಿ ಕೇಳಿಸಿರಿ.
  • (ಮೂಲ ಭಾಷೆಯ ಪ್ರತಿಯನ್ನು ನೋಡದೆ) ಮೊದಲು ಸಹಜತ್ವಕ್ಕಾಗಿ ನಿಮ್ಮ ಪಾಲುದಾರನು ಕೇಳಬೇಕು ಮತ್ತು ನಿಮ್ಮ ಭಾಷೆಯಲ್ಲಿ ಯಾವ ಭಾಗಗಳು ಸಹಜವಾಗಿಲ್ಲವೋ ಎಂದು ನಿಮಗೆ ಹೇಳಬೇಕು. ನೀವಿಬ್ಬರು ಸೇರಿ ನಿಮ್ಮ ಭಾಷೆಯಲ್ಲಿ ಅದನ್ನು ಹೇಗೆ ಸಹಜವಾಗಿ ಹೇಳಬಹುದೆಂದು ಆಲೋಚಿಸಬೇಕು.
  • ನಿಮ್ಮ ಅನುವಾದದಲ್ಲಿ ಸ್ವಾಭಾವಿಕತೆ ಇಲ್ಲದ ಭಾಗಗಳನ್ನು ಇನ್ನು ಸ್ವಾಭಾವಿಕವಾಗಿ ಬದಲಾಯಿಸಲು ಆ ಆಲೋಚನೆಗಳನ್ನು ಉಪಯೋಗಿಸಿ. ಹೆಚ್ಚಿನ ಮಾಹಿತಿಗಾಗಿ, ಸಹಜತ್ವ ನೋಡಿರಿ.
  • ನಿಮ್ಮ ಪಾಲುದಾರನಿಗೆ ಮತ್ತೊಮ್ಮೆ ಆ ಭಾಗವನ್ನು ಓದಿ ಕೇಳಿಸಿರಿ. ಈ ಬಾರಿ, ಪಾಲುದಾರನು ಮೂಲ ಪ್ರತಿಯನ್ನು ನೋಡುತ್ತಾ ಹಾಗೂ ಅನುವಾದವನ್ನು ಕೇಳುತ್ತ ನಿಖರತೆಯನ್ನು ಪರಿಶೀಲಿಸಬೇಕು. ಮೂಲ ಕಥೆ ಅಥವಾ ಪರಿಶುದ್ಧ ಗ್ರಂಥದ ಭಾಗದ ಅರ್ಥವನ್ನು ಅನುವಾದ ನಿಖರವಾಗಿ ತಿಳಿಯಪಡಿಸುತ್ತಿದೆ ಎಂದು ನಿಶ್ಚಯವಾಗಿರುವುದು ಈ ಹಂತದ ಉದ್ದೇಶ್ಯವಾಗಿದೆ.
  • ಮೂಲ ಪ್ರತಿಯನ್ನು ಹೋಲಿಸುತ್ತ ಯಾವುದಾದರು ಸೇರಿಸಲ್ಪಟ್ಟಿದ್ದರೆ, ತೆಗೆದುಹಾಕಲ್ಪಟ್ಟಿದ್ದರೆ ಅಥವಾ ಬದಲಾಯಿಸಿ ಹೇಳಲ್ಪಟ್ಟಿದ್ದರೆ ಅದನ್ನು ನಿಮ್ಮ ಪಾಲುದಾರನು ನಿಮಗೆ ಹೇಳಬಹುದು.
  • ಅನುವಾದದ ಆ ಭಾಗವನ್ನು ಸರಿಪಡಿಸಿ.
  • ಅನುವಾದ ತಂಡದಲ್ಲಿರದ ಸಮುದಾಯದ ಬೇರೆ ಸದಸ್ಯರೊಂದಿಗೆ ನಿಖರತೆಗಾಗಿ ಪರಿಶೀಲನೆ ಮಾಡುವುದು ಸಹ ಸಹಾಯಕರವಾಗಿರುತ್ತದೆ. ಅನುವಾದದ ಭಾಷೆಯನ್ನು ಮಾತಾಡುವವರಾಗಿರಬೇಕು, ಸಮುದಾಯದಲ್ಲಿ ಗೌರವಿಸಲ್ಪಟ್ಟಿರಬೇಕು ಮತ್ತು ಸಾದ್ಯವಾದರೆ, ಮೂಲ ಭಾಷೆಯಲ್ಲಿ ಸತ್ಯವೇದವನ್ನು ಅರಿತಿರಬೇಕು. ಸತ್ಯವೇದದ ವಾಕ್ಯ ಭಾಗಗಳು ಅಥವಾ ಕಥೆಗಳ ಅರ್ಥವನ್ನು ಅನುವಾದ ಮಾಡುವುದಕ್ಕೆ ಅತ್ಯುತ್ತಮವಾದ ಮಾರ್ಗವನ್ನು ಆಲೋಚಿಸಲು ಈ ಪರಿಶೀಲಕರು ಅನುವಾದ ತಂಡದವರಿಗೆ ಸಹಾಯಕರವಾಗಿರುತ್ತಾರೆ. ಒಬ್ಬರಿಗಿಂತ ಹೆಚ್ಚಿನ ಜನ ಸತ್ಯವೇದದ ಭಾಗವನ್ನು ಈ ವಿಧವಾಗಿ ಪರಿಶೀಲಿಸುವುದು ಸಹಾಯಕರವಾಗಿರುತ್ತದೆ, ಯಾಕಂದರೆ ಬೇರೆ ಬೇರೆ ಪರಿಶೀಲಕರು ಬೇರೆ ಬೇರೆ ಅಂಶಗಳನ್ನು ಗಮನಿಸುತ್ತಾರೆ.
  • ನಿಖರತೆಗಾಗಿ ಪರಿಶೀಲಿಸುವುದನ್ನು ಕುರಿತು ಹೆಚ್ಚಿನ ಮಾಹಿತಿಗಾಗಿ, ನಿಖರತೆಗಾಗಿ-ಪರಿಶೀಲನೆ ನೋಡಿರಿ.
  • ನಿಮಗೆ ಯಾವುದಾದರು ಅಂಶದಲ್ಲಿ ನಿಶ್ಚಯತೆ ಇಲ್ಲದಿದ್ದರೆ, ಅನುವಾದ ತಂಡದ ಬೇರೆ ಸದಸ್ಯರನ್ನು ಕೇಳಿರಿ.