translationCore-Create-BCS_.../checking/complete/01.md

3.9 KiB

ಸಂಪೂರ್ಣ ಅನುವಾದ

ಅನುವಾದ ಮಾಡುವುದನ್ನು ಸಂಪೂರ್ಣಗೊಳಿಸಲಾಗಿದೆಯೆಂದು ನಿರ್ಧಾರ ಮಾಡುವುದೇ ಈ ವಿಭಾಗದ ಉದ್ದೇಶವಾಗಿದೆ . ಈ ವಿಭಾಗದಲ್ಲಿ ಹೊಸ ಅನುವಾದವನ್ನು ಮೂಲ ಅನುವಾದಕ್ಕೆ ಹೋಲಿಸಿ ನೋಡಬೇಕಾಗಿರುತ್ತದೆ. ಎರಡು ಅನುವಾದಗಳನ್ನು ನೀವು ಹೋಲಿಸಿ ನೋಡುವಾಗ, ಈ ಪ್ರಶ್ನೆಗಳನ್ನು ನಿಮ್ಮಲ್ಲಿ ನೀವೇ ಕೇಳಿಕೊಳ್ಳಿರಿ:

  1. ಅನುವಾದದಲ್ಲಿ ಏನಾದರೂ ಒಂದು ಭಾಗವು ಕಾಣಿಸಿಕೊಂಡಿಲ್ಲವೋ? ಮತ್ತೊಂದು ಅರ್ಥದಲ್ಲಿ ಹೇಳಬೇಕಾದರೆ, ಅನುವಾದ ಮಾಡಲ್ಪಟ್ಟ ಪುಸ್ತಕದಲ್ಲಿರುವ ಪ್ರತಿಯೊಂದು ಸಂಘಟನೆಯು ಅನುವಾದದಲ್ಲಿ ಸೇರಿಸಲ್ಪಟ್ಟಿದೆಯೋ?
  2. ಅನುವಾದ ಮಾಡಲ್ಪಟ್ಟ ಪುಸ್ತಕದಲ್ಲಿರುವ ಪ್ರತಿಯೊಂದು ವಾಕ್ಯವು ಅನುವಾದದಲ್ಲಿ ಸೇರಿಸಲ್ಪಟ್ಟಿದೆಯೋ? (ಮೂಲ ಭಾಷೆಯ ಅನುವಾದದಲ್ಲಿ ವಾಕ್ಯದ ಸಂಖ್ಯೆಯನ್ನು ನೀವು ನೋಡುವಾಗ, ಎಲ್ಲಾ ಸಂಖ್ಯೆಗಳ ವಾಕ್ಯಭಾಗಗಳು ಅನುವಾದ ಮಾಡುವ ಭಾಷೆಯಲ್ಲಿ ಸೇರಿಸಲ್ಪಟ್ಟಿವೆಯೋ?) ಅನುವಾದಗಳಲ್ಲಿ ಕೆಲವೊಂದು ಬಾರಿ ವಚನಗಳಿಗೆ ಸಂಬಂಧಪಟ್ಟು ಸಂಖ್ಯೆಗಳ ವ್ಯತ್ಯಾಸವಿರುತ್ತದೆ. ಉದಾಹರಣೆಗೆ, ಕೆಲವೊಂದು ಅನುವಾದಗಳಲ್ಲಿ ಕೆಲವು ವಚನಗಳು ಒಂದೇ ಸಂಖ್ಯೆಯಲ್ಲಿಯೇ ಸೇರಿಸಲ್ಪಟ್ಟಿರುತ್ತವೆ ಅಥವಾ ಕೆಲವೊಂದುಬಾರಿ ಕೆಲವೊಂದು ವಚನಗಳು ಪುಟದ ಕೆಳಭಾಗದಲ್ಲಿ ಬರೆಯಲ್ಪಟ್ಟಿರುತ್ತವೆ. ಮೂಲ ಅನುವಾದನೆಗೆ ಮತ್ತು ಗುರಿ ಅನುವಾದನೆಗೆ ಮಧ್ಯದಲ್ಲಿ ಈ ರೀತಿಯ ವ್ಯತ್ಯಾಸಗಳಿದ್ದರೂ, ಗುರಿ ಭಾಷೆಯ ಅನುವಾದವು ಸಂಪೂರ್ಣವಾಗಿದೆಯೆಂದು ಪರಿಗಣಿಸಲಾಗುತ್ತದೆ. ಇನ್ನಿತರ ಮಾಹಿತಿಗಾಗಿ, [ಸಂಪೂರ್ಣ ರಚನೆ] (../verses/01.md) ನೋಡಿರಿ.
  3. ವಾಕ್ಯಗಳೇನಾದರು ಬಿಡಲ್ಪಟ್ಟಿರುವ ಸ್ಥಳಗಳು ಅನುವಾದಗಳಲ್ಲಿ ಇದ್ದಾವೋ, ಅಥವಾ ಮೂಲ ಅನುವಾದ ಭಾಷೆಗಿಂತಲೂ ವಿಭಿನ್ನವಾದ ಸಂದೇಶವಿದ್ದಂತೆ ಕಾಣಿಸಿಕೊಂಡಿದಿಯೋ? (ಪದಗಳ ಪ್ರಯೋಗ ಮತ್ತು ಕ್ರಮವು ವಿಭಿನ್ನವಾಗಿರಬಹುದು, ಆದರೆ ಅನುವಾದಕರು ಉಪಯೋಗಿಸಿದ ಭಾಷೆಯು ಮೂಲ ಭಾಷೆಯ ಅನುವಾದವು ಕೊಡುವ ಸಂದೇಶವನ್ನೇ ಕೊಡತಕ್ಕದ್ದು.)

ಅನುವಾದವು ಸಂಪುರ್ಣವಾಗಿಲ್ಲವೆಂದು ಕಾಣಿಸಿಕೊಂಡರೆ, ಆ ಸ್ಥಳದಲ್ಲಿ ಅದಕ್ಕೆ ಸಂಬಂಧಪಟ್ಟ ಟಿಪ್ಪಣಿಗಳನ್ನು ಬರೆಯಿರಿ, ಇದರಿಂದ ನೀವು ಆ ವಿಷಯಗಳ ಕುರಿತಾಗಿ ಅನುವಾದ ತಂಡದೊಂದಿಗೆ ಚರ್ಚೆ ಮಾಡಬಹುದು.