translationCore-Create-BCS_.../translate/bita-humanbehavior/01.md

40 KiB
Raw Blame History

ಮಾನವನ ನಡತೆಯ ಬಗ್ಗೆ ಕೆಲವು ಚಿತ್ರಣಗಳನ್ನು ಸತ್ಯವೇದದಲ್ಲಿ ಇರುವಂತೆ ಪಟ್ಟಿ ಮಾಡಿದೆ. ದೊಡ್ಡ ಅಕ್ಷರಗಳಲ್ಲಿ ಇರುವ ಪದಗಳು ಚಿತ್ರಣವನ್ನು ಪ್ರತಿನಿಧಿಸುತ್ತದೆ. ಪ್ರತಿಯೊಂದು ಪದದಲ್ಲೂ, ವಾಕ್ಯದಲ್ಲೂ ಈ ಪ್ರತಿಮೆ ಇರಬೇಕೆಂಬ ಅವಶ್ಯಕತೆ ಇಲ್ಲ. ಆದರೆ ಅದರ ಉದ್ದೇಶ ಪ್ರತಿನಿಧಿಸುವುದು ಅಗತ್ಯ.

ಕುಗ್ಗಿರುವ, ಬಾಗಿರುವ, ಎಂಬ ಪದಗಳು ನಿರುತ್ಸಾಹದ ಪದಗಳನ್ನು ಪ್ರತಿನಿಧಿಸುತ್ತದೆ.

ಯೆಹೋವನು ಬಿದ್ದವರನ್ನೆಲ್ಲಾ ಎತ್ತುವವನು ಕುಗ್ಗಿದವರನ್ನೆಲ್ಲಾ ಉದ್ಧರಿಸುವವನು ಆಗಿದ್ದಾನೆ . (ದಾ.ಕೀ 145:14 ULB)

ಜನ್ಮ ನೀಡುವಾಗ ಪಡುವ ವೇದನೆ /ಹೆರಿಗೆ ನೋವು ಪರಿಶ್ರಮವನ್ನು ಪ್ರತಿನಿಧಿಸುತ್ತದೆ. ಇದು ಹೊಸತನವನ್ನು ನೂತನ ಆಗಮನವನ್ನು ಸಾಧಿಸುವುದನ್ನು ಪ್ರತಿನಿಧಿಸುತ್ತದೆ.

ಚೀಯೋನ್ ಯುವತಿ , ಹೆರುವವಳಂತೆ , ಪ್ರಸವ ವೇದನೆಗೆ ಒಳಗಾಗು , ನೀನೀಗ ಪಟ್ಟಣದಿಂದ ಹೊರಟು, ಕಾಡಿನಲ್ಲಿ ವಾಸಿಸುತ್ತಾ ಬಾಬೆಲ್ ಪಟ್ಟಣ ಸೇರುವಿ. ಅಲ್ಲಿ ನಿನ್ನ ಉದ್ಧಾರವಾಗುವುದು. ಅಲ್ಲಿ ಯೆಹೋವನು ಶತ್ರುಗಳಿಂದ ನಿನ್ನನ್ನು ಬಿಡಿಸುವನು. (ಮೀಕಾ 4:10 ULB)

ಜನರ ವಿರುದ್ಧವಾಗಿ ಜನರು, ರಾಜ್ಯಕ್ಕೆ ವಿರುದ್ಧವಾಗಿ ರಾಜ್ಯವೂ ಏಳುವುದು. ಅಲ್ಲಲ್ಲಿ ಬರಗಾಲವೂ, ಭೂಕಂಪಗಳು ಉಂಟಾಗುವವು. ಆದರೆ ಇದೆಲ್ಲಾ ನೂತನ ಕಾಲದ ಉದಯದ ಪ್ರಸವ ವೇದನೆಯ ಪ್ರಾರಂಭಪ್ರಸವ ವೇದನೆ. (ಮತ್ತಾಯ 24:7-8 ULB)

ನನ್ನ ಪ್ರಿಯ ಪುಟ್ಟ ಮಕ್ಕಳೇ, ಕ್ರಿಸ್ತನ ಸಾರೂಪ್ಯವು ನಿಮ್ಮಲ್ಲಿ ಉಂಟಾಗುವ ತನಕ ನಿಮಗೋಸ್ಕರ ಪುನಃ ಪ್ರಸವ ವೇದನೆಯನ್ನು ಅನುಭವಿಸುತ್ತೇನೆ. (ಗಲಾತ್ಯದವರಿಗೆ 4:19 ULB)

ಯಾವುದೇ ಒಂದು ವಸ್ತು ವಿಷಯದ ಬಗ್ಗೆ ಮಾತನಾಡುವುದು ಕರೆಯುವುದು ಎಂದರೆ ಆ ಪದದ ಬಗ್ಗೆ ಹೇಳುವುದು ಎಂದು ಅರ್ಥ.

ಪವಿತ್ರಾತ್ಮನು ಇಸ್ರಾಯೇಲರ ರಕ್ಷಕನಾದ ಸದಮಲಸ್ವಾಮಿಯು ನಿನ್ನ ನ್ಯಾಯ ಸ್ಥಾಪಕನಾಗಿದ್ದಾನೆ.ಸರ್ವಲೋಕದ ದೇವರೆಂಬ ನಾಮಧೇಯವನ್ನು ಹೊಂದಿರುವನು. (ಯೆಶಾಯ 54:5b ULB) ಏಕೆಂದರೆ ಇಡೀ ಲೋಕದ ಒಡೆಯನಾಗಿರುವಾತನೇ ಯೆಹೋವ ದೇವರು.

ಜ್ಞಾನವುಳ್ಳ ಹೃದಯವಂತರಿಗೆ ವಿವೇಕವುಳ್ಳವನು ಎಂಬ ಬಿರುದು ಬರುವುದು. (ಜ್ಞಾನೋಕ್ತಿ 16:21a ULB)

ಏಕೆಂದರೆ ನಿಜವಾಗಲೂ ಅವನು ವಿವೇಚಿಸುವವನಾಗಿರುತ್ತಾನೆ.

ಅವನು ಮಹಾ ಪುರುಷನಾಗಿ ಪರಾತ್ಪರನ ಕುಮಾರನೆನೆಸಿ ಕೊಳ್ಳುವನು. (ಲೂಕ 1:32 ULB)

ಏಕೆಂದರೆ ಆತನು ನಿಜವಾಗಲೂ ಮಹೋನ್ನತನಾದ ಪರಾತ್ಪರನ ಪುತ್ರನು.

ಪವಿತ್ರಾತ್ಮನಿಂದ ಹುಟ್ಟಿದ ಮಗನು ದೇವರ ಮಗನೆಂದು ಕರೆಸಿಕೊಂಡನು. (ಲೂಕ 1:35 ULB)

ಏಕೆಂದರೆ ಆತನು ದೇವರ ಮಗನೆಂಬುದು ನಿಜವಾದ ಸಂಗತಿ. ಏಕೆಂದರೆ ಚೊಚ್ಚಲು ಗಂಡುಮಕ್ಕಳೆಲ್ಲಾ, ಕರ್ತನಾದ ಯೆಹೋವನಿಗೆ ಮೀಸಲು ಎಂದು ತಿಳಿಸಿದೆ. (ಲೂಕ 2:23 ULB)

ಇದರ ಅರ್ಥವೇನೆಂದರೆ ನಿಜವಾಗಲೂ ದೇವರಿಗಾಗಿ ಮೀಸಲಾದವನು ಎಂಬುದನ್ನು ಈ ವಾಕ್ಯಗಳು ತಿಳಿಸುತ್ತವೆ.

“ಸ್ವಚ್ಛತೆ” / ಶುದ್ಧವಾದುದು ಎನ್ನುವ ಅಂಶ ದೇವರ ಉದ್ದೇಶಗಳನ್ನು ಸ್ವಿಕರಿಸುವಂತದ್ದನ್ನು ಪ್ರತಿನಿಧಿಸುವಂಥದ್ದು.

ನೋಹನು ಯೊಹೋವನಿಗಾಗಿ ಯಜ್ಞವೇದಿಕೆಯನ್ನು ನಿರ್ಮಿಸಿದನು.

ಅದರ ಮೇಲೆ ಶುದ್ಧವಾದ ಪ್ರಾಣಿಗಳನ್ನು ಶುದ್ಧವಾದ ಪಕ್ಷಿಜಾತಿಗಳನ್ನು ಸರ್ವಾಂಗ ಹೋಮಗಳನ್ನು ಯಜ್ಞದ ಮೂಲಕ ಅರ್ಪಿಸಿದನು. ಅದರ ಸುವಾಸನೆಯು ಎಲ್ಲೆಡೆ ವ್ಯಾಪಿಸಿತು ಗಮಗಮಿಸುತ್ತಿದ್ದ ಸರ್ವಾಂಗ ಹೋಮದ ಪರಿಮಳವನ್ನು ಯೆಹೋವನು ಆಘ್ರಾಣಿಸಿದನು. (ಆದಿಕಾಂಡ 8:20 ULB)

ಕುಷ್ಠ ರೋಗಿಯನ್ನು ಪ್ರತ್ಯೇಕವಾಗಿ ಇರಿಸಿ ಎರಡು ದಿನಗಳಾದ ಮೇಲೆ ಯಾಜಕನು ತಿರುಗಿ ಅವನನ್ನು ಪರೀಕ್ಷಿಸಿದಾಗ ಮಚ್ಚೆ ದೇಹದ ಚರ್ಮದಲ್ಲಿ ಹರಡಿಕೊಂಡಿದೆಯಾ ಎಂದು ಪರೀಕ್ಷಿಸುವನು ಚರ್ಮದಲ್ಲಿ ಹರಡಿಕೊಳ್ಳದೆ ಹೆಚ್ಚಾಗಿದ್ದರೆ ಯಾಜಕನು ಅದು ಬರೀ ಗುಳ್ಳೆ ಎಂದು ತಿಳಿದು ಅವನನನ್ನು ಶುದ್ಧನೆಂದು . ಘೋಷಿಸುವನು. ಅದೊಂದು ಚರ್ಮದ ತುರಿಕೆ. ಇಂಥಹವನು ನಂತರ ತನ್ನ ಬಟ್ಟೆಗಳನ್ನು ಒಗೆದು, ಸ್ನಾನಮಾಡಿ ಶುದ್ಧನಾಗುವನು. (ಯಾಜಕ ಕಾಂಡ 13:6 ULB)

ಸ್ವಚ್ಛಗೊಳಿಸುವುದು ಅಥವಾ ಶುದ್ಧಗೊಳಿಸುವುದು ದೇವರ ಉದ್ದೇಶಕ್ಕಾಗಿ ಸ್ವೀಕೃತವಾಗುವ ವಿಷಯವನ್ನು, ಕ್ರಿಯೆಯನ್ನು ಪ್ರತಿನಿಧಿಸುತ್ತದೆ.

ಜನಸಮೂಹಕ್ಕಾಗಿ ಪರಿಹಾರ ಮಾಡಿದ ನಂತರ ಯಾಜಕನು ಹೊರಗೆಬಂದು ಯೆಹೊವನ ಸನ್ನಧಿಯಲ್ಲಿರುವ ಯಜ್ಞವೇದಿಯ ಬಳಿಗೆ ಹೋಗಿ ಅದಕ್ಕಾಗಿ ದೋಷಪರಿಹಾರ ಮಾಡಬೇಕು. ಆ ಹೋರಿಯ ರಕ್ತದಲ್ಲಿಯೂ ಸ್ವಲ್ಪ ಸ್ವಲ್ಪ ತೆಗೆದುಕೊಂಡು ಯಜ್ಞವೇದಿಯ ಕೊಂಬುಗಳಿಗೆ ಸುತ್ತಲೂ ಹಚ್ಚಬೇಕು. ಆ ರಕ್ತದಲ್ಲಿ ಸ್ವಲ್ಪವನ್ನು ತೆಗೆದು ಯಜ್ಞವೇದಿಯ ಮೇಲೆ ಏಳು ಸಾರಿ ಬೆರಳಿನಿಂದ ಚಿಮುಕಿಸಿಇಸ್ರಾಯೇಲರಿಂದ ಅದಕ್ಕೆ ಉಂಟಾದ ಅಶುದ್ಧತ್ವವನ್ನು ನಿವಾರಿಸಿ ಅದನ್ನು ಪರಿಶುದ್ಧಗೊಳಿಸಬೇಕು . (ಯಾಜಕ ಕಾಂಡ 6:18-19 ULB)

ಪ್ರತಿಯೊಬ್ಬರು ಈ ದಿನದಲ್ಲಿ ಪರಿಶುದ್ಧರಾಗುವುದಕ್ಕಾಗಿ ನಿಮ್ಮ ದೋಷ ಪರಿಹಾರವಾಗುವುದು ಯೆಹೋವನ ದೃಷ್ಟಿಯಲ್ಲಿ ನಿಮ್ಮ ಎಲ್ಲಾ ಪಾಪದೋಷಗಳು ನಿವಾರಣೆಯಾಗುವುದು (ಯಾಜಕ ಕಾಂಡ 16:30 ULB)

ಅಶುದ್ಧತ್ವವೆಂಬುದು ದೇವರ ಉದ್ದೇಶಕ್ಕಾಗಿ ನಿರಾಕರಿಸಲ್ಪಡುವುದನ್ನು ಪ್ರತಿನಿಧಿಸುತ್ತದೆ.

ಭೂಮಿಯ ಮೇಲೆ ಚಲಿಸುವ ಚತುಷ್ಪಾದ ಪ್ರಾಣಿಗಳಲ್ಲಿ ನೀವು ತಿನ್ನಬಹುದಾದ ಪ್ರಾಣಿಗಳೆಂದರೆ ಕಾಲ್ಗೊರಸು ಸೀಳಿರುವ ಮತ್ತು ತನ್ನ ಆಹಾರವನ್ನು ಮೆಲಕು ಹಾಕುವಂತದ್ದಾಗಿರಬೇಕು. ಆದರೆ ಯಾವ ಪ್ರಾಣಿ ಮೆಲಕು ಹಾಕಿದರೂ ಗೊರಸು ಸೀಳಿರದಿದ್ದರೆ ಅದನ್ನು , ತಿನ್ನಬಾರದು. ಯಾವ ಪ್ರಾಣಿಯ ಗೊರಸು ಸೀಳಿದ್ದರೂ ಮೆಲಕು ಹಾಕುವುದಿಲ್ಲವೋ ಅವುಗಳ ಮಾಂಸ ತಿನ್ನಬಾರದು , ಉದಾಹರಣೆಗೆ ಒಂಟೆಯು ಮೆಲಕುಹಾಕುವಂತದ್ದಾದರೂ ಸೀಳುಗೊರಸು ಇಲ್ಲವಾದುದರಿಂದ, ಬೆಟ್ಟದ ಮೊಲವು ಮೆಲಕು ಹಾಕುವಂಥದ್ದು ಆದರೆ ಸೀಳುಗೊರಸು ಇಲ್ಲವಾದುದರಿಂದ, ತಿನ್ನಲು ಅಶುದ್ಧವಾದುದು. ಹಂದಿಯ ಗೊರಸು ಸೀಳಿದೆ ಆದರೆ ಮೆಲಕು ಹಾಕುವುದಿಲ್ಲ ಆದುದರಿಂದ ಅದು ತಿನ್ನಲು ಅಶುದ್ಧ. ಆದುದರಿಂದ ನಿಮಗೆ ಒಂಟೆ ಮುಂತಾದುವು ಅಶುದ್ಧ. (ಯಾಜಕ ಕಾಡ11:3-4 ULB)

ಇವುಗಳ ಹೆಣವು ಯಾವ ವಸ್ತುವಿನ ಮೇಲೆ ಬೀಳುವುದೋ ಆ ವಸ್ತುವು ಅಶುದ್ಧವಾಗಿರುವುದು , ಅಂದರೆ ಮರದ ವಸ್ತುವಾಗಲಿ ಬಟ್ಟೆಯಾಗಲೀ, ಚರ್ಮವಾಗಲೀ, ಗೋಣಿಯಾಗಲೀ ಅದು ಅಶುದ್ದವಾಗುವುದು. ಇವು ಯಾವುದೇ ಆಗಿರಲಿ, ಯಾವ ಉಪಯೋಗಕ್ಕೂ ಬರದಿದ್ದರೂ ಅದನ್ನು ನೀರಿನಲ್ಲಿ ಸಾಯಂಕಾಲದವರೆಗೂ ನೆನಸಿಡಬೇಕು. ಸಾಯಂಕಾಲದವರೆಗೂಅಶುದ್ಧವಾಗಿರುತ್ತದೆ, ಸಾಯಂಕಾಲದ ನಂತರ ಶುದ್ಧವಾಗುತ್ತದೆ.. (ಯಾಜಕ ಕಾಂಡ 11:32 ULB)

ಕೆಲವು ವಸ್ತುಗಳನ್ನು ಅಶುದ್ಧಮಾಡುವುದು ದೇವರ ಉದ್ದೇಶಗಳಿಗೆ ಸ್ವೀಕೃತವಾಗಲು ಯೋಗ್ಯವಲ್ಲ ಎಂಬುದನ್ನು ಪ್ರತಿನಿಧಿಸುತ್ತದೆ.

ಯಾರಾದರೂ ಅಶುದ್ಧವಾದುದನ್ನು ಸ್ಪರ್ಷಿಸಿದರೆ ಅವನು ಅಶುದ್ಧನಾಗುತ್ತಾನೆ ,ಎಂದು ಯೆಹೋವನು ತಿಳಿಸಿದ್ದಾನೆ. ಯಾವನಿಗಾದರೂ ಅಶುದ್ಧವಾದ ಕಾಡುಮೃಗ, ಪಶು, ಜಂತು ಇವುಗಳ ಹೆಣವಾಗಲೀ, ಬೇರೆ ಯಾವ ಅಶುದ್ಧವಸ್ತುವಾಗಲೀ ತಗುಲಿದರೆ, ಅವನಿಗೆ ತಿಳಿಯದೆ ತಗುಲಿದರೂ ಅವನು ಅಶುದ್ಧನು , ಹಾಗೂ ದೋಷಿಯಾಗಿರುವನು . (ಯಾಜಕ ಕಾಂಡ 5:2 ULB)

ಯಾವುದರಿಂದಲಾದರೂ ಪ್ರತ್ಯೇಕಿಸಿದರೆ, ಕತ್ತರಿಸಿದರೆ/ ತುಂಡರಿಸಿದರೆ ಸಂಬಂಧಿಸಿದ ವ್ಯಕ್ತಿ, ವಸ್ತುವಿನಿಂದ ಬೇರ್ಪಡಿಸಿದ್ದನ್ನು ಪ್ರತಿನಿಧಿಸುತ್ತದೆ.

ಉಜ್ಜೀಯನು ಜೀವದಿಂದಿರುವವರೆಗೂ ಕುಷ್ಠರೋಗಿಯಾಗಿದ್ದು ಯೆಹೋವನ ಆಲಯಕ್ಕೆ ಬಾರದಂತೆ ಬಹಿಷ್ಕೃತನಾದನು ಅವನಿಗೆ ಬಂದ ಕುಷ್ಠದಿಂದ ಪ್ರತ್ಯೇಕಿಸಲ್ಪಟ್ಟು ಪ್ರತ್ಯೇಕವಾದ ಮನೆಯಲ್ಲಿ ವಾಸಿಸಬೇಕಾಯಿತು.(2 ಪೂರ್ವಕಾಲ ವೃತ್ತಾಂತ 26:21 ULB)

ಕತ್ತರಿಸುವುದು, ತುಂಡರಿಸುವುದು, ಎಂದರೆ ಕೊಲ್ಲುವುದನ್ನು ಪ್ರತಿನಿಧಿಸುತ್ತದೆ.

ನೀವು ಸಬ್ಬತ್ ದಿನವನ್ನು ದೇವರ ದಿನವೆಂದು ಭಾವಿಸಿ ಆಚರಿಸಬೇಕು, ಆತನಿಗಾಗಿ ಮೀಸಲಿಡಬೇಕು. ಸಬ್ಬತ್ ದಿನವನ್ನು ಅಪರಿಶುದ್ಧವೆಂದು ಎನಿಸುವವನಿಗೆ ಮರಣದಂಡನೆ ವಿಧಿಸ ಬೇಕು. ವಾರದ ಆರು ದಿನಗಳು ಕೆಲಸಮಾಡಿ, ಏಳನೆಯ ದಿನ ಕೆಲಸಮಾಡದೆ ಯೆಹೊವನಿಗೆ ಮೀಸಲಿಡಬೇಕು. ಆದಿನ ಕೆಲಸಮಾಡುವನನ್ನು ಕುಲದಿಂದಲೇ ಬಹಿಷ್ಕರಿಸಬೇಕು. . (ವಿಮೋಚನಾ ಕಾಂಡ 31:14-15 ULB)

ಯಾರಾದರೂ ಆದಿನ ತನ್ನನ್ನು ದೇವರ ಮುಂದೆ ತಗ್ಗಿಸಿಕೊಂಡು ಪ್ರಾರ್ಥಿಸದಿದ್ದರೆ ಅವನ . ಕುಲದಿಂದ ಬಹಿಷ್ಕರಿಸಬೇಕು. ಯಾರಾದರೂ ಆದಿನದಲ್ಲಿ . ಕೆಲಸವನ್ನು ಸ್ವಲ್ಪಸಮಯ ಮಾಡಿದರೂ ಇಸ್ರಾಯೇಲ್ ಜನಾಂಗದಿಂದಲೇ ಬಹಿಷ್ಕರಿಸಲ್ಪಡುವನು. (ಯಾಜಕ ಕಾಂಡ 23:29-30 ULB)

ಆದರೆ ಅಂತಹವನು ಜೀವಲೋಕದಿಂದಲೇ ತುಂಡರಿಸಲ್ಪಡುತ್ತಾನೆ (ಯೆಶಾಯ 53:8 ULB)

ಯಾರ ಮುಂದಾದರೂ ಗೌರವ ಪೂರ್ವಕವಾಗಿ ಒಬ್ಬನು ಬಂದು ನಿಂತರೆ ಆತನನ್ನು ಅನುಸರಿಸುತ್ತಾನೆ, ಆತನ ಮಾತಿನಂತೆ ನಡೆಯುತ್ತಾನೆ ಎಂದು ಅರ್ಥ /ಎಂಬುದನ್ನು ಪ್ರತಿನಿಧಿಸುತ್ತದೆ.

ನಿನ್ನ ಪ್ರಜೆಗಳು ಸದಾ ನಿನ್ನ ಮುಂದೆ ನಿಂತುಕೊಂಡು ನಿರಂತರವೂ ಜ್ಞಾನವಾಕ್ಯಗಳನ್ನು ಕೇಳುವ ನಿನ್ನ ಸೇವೆ ಮಾಡುವ ಸೇವಕರು ಧನ್ಯರು. (1 ನೇ ಅರಸು 10:8 ULB)

ನಂಬಿಕೆಯ ಒಡಂಬಡಿಕೆ,ನೀತಿ ಸತ್ಯತೆಗಳು ನಿನ್ನಿಂದ ದೊರೆತವು . (ದಾ.ಕೀ. 89:14 ULB)

ನೀತಿ ನ್ಯಾಯಗಳು ನಿನ್ನ ಸಿಂಹಾಸನದ ಆಸ್ಥಿವಾರಗಳು ನಂಬಿಕೆಯ ಒಡಂಬಡಿಕೆ ಹಾಗೂ ವಿಶ್ವಾಸಗಳು ನಿನ್ನ ಸಾನ್ನಿಧ್ಯ ಧೂತರು, ಪ್ರೀತಿ ಸತ್ಯತೆಗಳೇ ಎಲ್ಲವನ್ನು ವ್ಯಕ್ತೀಕರಣಗೊಳಿಸಿದೆ. (Personification).

ಮದ್ಯಸೇವನೆ ನೋವನ್ನು ಪ್ರತಿನಿಧಿಸಿದರೆ ದ್ರಾಕ್ಷಾರಸ ನ್ಯಾಯತೀರ್ಪನ್ನು ಪ್ರತಿನಿಧಿಸುತ್ತದೆ.

ಅತಿಯಾದ ದ್ರಾಕ್ಷಾರಸ (wine) ಸೇವನೆ ಸಹ ಒಬ್ಬ ವ್ಯಕ್ತಿಯನ್ನು ಬಲಹೀನನನ್ನಾಗಿ ಮತ್ತು ತೂರಾಡುವಂತೆ ಮಾಡುತ್ತದೆ. ದೇವರು ನ್ಯಾಯ ತೀರ್ಪು ಮಾಡಲು ಬಂದಾಗ ಈ ಜನರು ಬಲಹೀನರಾಗಿ, ಧೈರ್ಯಗುಂದಿ ತೂರಾಡುವರು. ಆದುದರಿಂದ ದ್ರಾಕ್ಷಾರಸ (wine) ಎಂಬುದು ದೇವರ ನ್ಯಾಯತೀರ್ಪನ್ನು ಪ್ರತಿನಿಧಿಸುತ್ತದೆ

ನಿನ್ನ ಜನರನ್ನು ಸಂಕಟಕ್ಕೆ ಗುರಿಮಾಡಿರುವೆ. ನೀನು ನಮಗೆ ಬುದ್ಧಿ ಭ್ರಮಣೆ ಉಂಟುಮಾಡುವ ಮದ್ಯವನ್ನು (wine) ದ್ರಾಕ್ಷಾರಸವನ್ನು ಕುಡಿಸಿ ತೂರಾಡುವಂತೆ ಮಾಡಿರುವಿ.. (ದಾ.ಕೀ 60:3 ULB)

ದಾವೀದನ ಕೀರ್ತನೆಯಿಂದ ಇನ್ನೊಂದು ಉದಾಹರಣೆ.

ಆದರೆ ದೇವರೇ ನ್ಯಾಯಾಧಿಪತಿಯು. ಆತನು ನ್ಯಾಯಧೀಶನಾಗಿ ಒಬ್ಬನನ್ನು ಬದಿಗೊತ್ತಿ ಇನ್ನೊಬ್ಬನನ್ನು ನೋಯಿಸುತ್ತಾನೆ. ಯೆಹೋವನ ಕೈಯಲ್ಲಿ ಉಕ್ಕುವ ದ್ರಾಕ್ಷಾರಸದ ಪಾತ್ರೆಯಿದೆ , ಅದರಲ್ಲಿ ಔಷಧೀಯ ಗುಣವುಳ್ಳ ಮೂಲಿಕೆಗಳ ರಸ ಮಿಶ್ರಣವಾಗಿದೆ, ಅದನ್ನು ನಮಗೆ ಹಂಚುತ್ತಾನೆ. ಲೋಕದದಲ್ಲಿರುವ ಎಲ್ಲಾ ದುಷ್ಟರು ಅದರಲ್ಲಿರುವ ದ್ರಾಕ್ಷಾರಸವನ್ನು ಕೊನೆ ಹನಿಯವರೆಗೂ ಕುಡಿದು ಮುಗಿಸಬೇಕಿದೆ. (ದಾ.ಕೀ 75:8 ULB)

ಪ್ರಕಟಣೆ ಗ್ರಂಥದಿಂದ ಒಂದು ಉದಾಹರಣೆ.

ವಿಗ್ರಹ ಆರಾಧನೆ ಮಾಡಿ ದೇಹದ ಮೇಲೆ ಗುರುತು ಹಾಕಿಸಿಕೊಂಡವನು ದೇವರ ಕೋಪವೆಂಬ ಪಾತ್ರೆಯಲ್ಲಿ ಏನೂ ಬೆರೆಸದೆದ್ರಾಕ್ಷಾರಸ ಹಾಕಿದ ದೇವರ ರೌದ್ರವೆಂಬ ದ್ರಾಕ್ಷಾರಸ ವನ್ನು ಕುಡಿಯುವರು, ಪರಿಶುದ್ಧ ದೇವದೂತರ ಮುಂದೆಯೂ, ಯಜ್ಞದ ಕುರಿಯದಾತನ ಮುಂದೆಯೂ ಬೆಂಕಿಯಿಂದಲೂ ಗಂಧಕದಿಂದಲೂ ಯಾತನೆ ಅನುಭವಿಸುವನು. (ಪ್ರಕಟಣೆ 14:10 ULB)

ತಿನ್ನುವುದು ಎಂದರೆ ನಾಶನವನ್ನು ಪ್ರತಿನಿಧಿಸುತ್ತದೆ.

ದೇವರು [ಇಸ್ರಾಯೇಲರನ್ನು]ಐಗುಪ್ತ ದೇಶದಿಂದ ಕರೆತಂದನು ಅವರು ಕಾಡುಕೋಣದಷ್ಟು ಬಲವುಳ್ಳವರು. ಆತನ ವಿರುದ್ಧ ಹೇಳುವ ಶತ್ರು ರಾಜ್ಯಗಳನ್ನು ನಿರ್ಮೂಲ ಮಾಡಿ ಬಿಡುವನು. ಅವರ ಎಲುಬುಗಳನ್ನು ಮುರಿದು ಹಾಕುವನು. ತನ್ನ ಬಾಣಗಳಿಂದ ಅವರನ್ನು ಗಾಯಪಡಿಸುವನು. ಅರಣ್ಯ ಕಾಂಡ 24:8 ULB)

"ತಿನ್ನುವುದು"("eat up") ಎಂಬ ಪದದ ಇನ್ನೊಂದು ಅರ್ಥ ಅತ್ಯಾಶೆಯಿಂದ ಮುಕ್ಕುವುದು, ಧ್ವಂಸಮಾಡು, ನಾಶಮಾಡುವುದು ಎಂದು.

ಅವರು ಸದಮಲಸ್ವಾಮಿಯ ವಾಕ್ಯವನ್ನು ಅಸಡ್ಡೆ ಮಾಡಿದ್ದರಿಂದ ಅಗ್ನಿಯ ನಾಲಿಗೆಗಳು ಒಣಕೂಳೆಯನ್ನು ದಹಿಸಿ ಬಿಡುವ ಹಾಗೆ ನಾಶವಾಗುವುದು , ಒಣಹುಲ್ಲು ಬೆಂಕಿಯಲ್ಲಿ ಸುಟ್ಟುಹೋಗುವಂತೆ, ಬೇರುಕೊಳೆತು, ಅವುಗಳ ಹೂವು ಅರಳದೆ ಧೂಳಾಗಿ ತೂರಿಹೋಗುವುದು. (ಯೆಶಾಯ 5:24 ULB)

ಯೆಶಾಯನು ಬರೆದ ಪ್ರವಾದನ ಗ್ರಂಥದಿಂದ ಮತ್ತೊಂದು ಉದಾಹರಣೆ.

ಯೆಹೋವನು ರೆಚೀನನ ವೈರಿಗಳನ್ನು ಅವರಿಗೆ ವಿರುದ್ಧವಾಗಿ ಹೆಚ್ಚಿಸಿದ್ದಾನೆ. ಅವರ ಮುಂದೆ ಪೂರ್ವದಲ್ಲಿ ಆರಾಮ್ಯರನ್ನು ಅವರ ಹಿಂದೆ ಫಿಲಿಪ್ಪಿಯರನ್ನು ಪಶ್ಚಿಮದಲ್ಲಿ ಎಬ್ಬಿಸಿದ್ದಾನೆ. ಇವರು ಇಸ್ರಾಯೇಲರನ್ನು ಬಾಯಿತೆರೆದು ನುಂಗಿಬಿಟ್ಟಿದ್ದಾರೆ . (ಯೆಶಾಯ 9:11-12 ULB)

ಧರ್ಮೋಪದೇಶಕಾಂಡದಿಂದ ಒಂದು ಉದಾಹರಣೆ.

ನನ್ನ ಬಾಣಗಳನ್ನು ರಕ್ತವನ್ನು ಕುಡಿದು ಮತ್ತಿನಿಂದ ತುಂಬುವಂತೆ ಮಾಡುವೆನು. ನನ್ನ ಖಡ್ಗವು ರಕ್ತಮಾಂಸವನ್ನು ಭಕ್ಷಿಸುತ್ತದೆ. ನನ್ನ ಕತ್ತಿಯು ಕೊಲ್ಲಲ್ಪಟ್ಟ ಶತ್ರುಗಳ ರಕ್ತಮಯವಾಗಿದೆ. ಇವು ಶತ್ರುಗಳಲ್ಲಿರುವ ವೀರರ ತಲೆಗಳನ್ನು ಚೆಂಡಾಡುತ್ತದೆ. (ಧರ್ಮೋಪದೇಶ ಕಾಂಡ 32:42 ULB)

ಮೇಲೆ ಬೀಳುವುದು ಅಥವಾ “ ಮೇಲೆ ಇರುವುದು ಎಂಬ ಪದ ಪರಿಣಾಮವನ್ನು ಪ್ರತಿಬಿಂಬಿಸುತ್ತದೆ.

ಯೆಹೋವ ದೇವರು ಆ ಮನುಷ್ಯನಿಗೆ ಗಾಢ ನಿದ್ರೆಯನ್ನು ಬರಮಾಡಿ ದನುಆ ಮನುಷ್ಯನು ಗಾಢವಾಗಿ ನಿದ್ರಿಸಿದನು (ಆದಿಕಾಂಡ 2:21 ULB)

ಆತನ ಶ್ರೇಷ್ಠತೆಯು ನಿಮ್ಮನ್ನು ಹೆದರಿಸುವುದಿಲ್ಲವೇ ? ಆತನ ಮೇಲಿರುವ ಭಯವು ನಿಮ್ಮ ಮೇಲೆ ಬೀಳುವುದಿಲ್ಲವೇ? (ಯೋಬಾ13:11 ULB)

ಆಗ ಯೆಹೋವನ ಆತ್ಮವು ನನ್ನಲ್ಲಿ ಪ್ರವೇಶಿಸಲು ನನಗೆ ಹೀಗೆ ಸಾರಬೇಕೆಂದು ಅಪ್ಪಣೆಯಾಯಿತು (ಯೆಹಜ್ಜೇಲ 11:5 ULB)

ಯೆಹೋವನು ನಿನ್ನ ಮೇಲೆ ಕೈ ಎತ್ತಿದ್ದಾನೆ ನೀನು ಕುರುಡನಾಗಿ ಕೆಲವು ಕಾಲ, ಸೂರ್ಯನನ್ನು ಕಾಣದೆ ಇರುವಿ. (ಅಪೋಸ್ತಲರ ಕೃತ್ಯಗಳು13:11 ULB)

ಯಾರನ್ನಾದರೂ ಅನುಸರಿಸುವುದು ಎಂದರೆ ದೇವರೊಂದಿಗೆ ಪ್ರಾಮಾಣಿಕವಾಗಿರುವುದು ಎಂಬುದನ್ನು ಪ್ರತಿನಿಧಿಸುತ್ತಾರೆ.

ಅವರು ಅವನನ್ನು ಯೆಹೋವ ದೇವರಿಂದ ದೂರವಾಗದಂತೆ. ಐಗುಪ್ತ ದೇಶದಿಂದ ಅವರ ಪೂರ್ವಜರನ್ನು ಬಿಡುಗಡೆ ಮಾಡಿ ಕರೆತಂದದ್ದನ್ನು ಮರೆತರು. ತಮ್ಮ ಮನಸ್ಸನ್ನು ಅನ್ಯ ದೇವರುಗಳ ಕಡೆ ತಿರುಗಿಸಿದರು , ಅವನು ತನ್ನ ತಂದೆಯಾದ ದಾವೀದನಂತೆ ನಡೆಯಲಿಲ್ಲ. ಅವರು ಅವರ ದೇವತೆಗಳಿಗೆ ಅಡ್ಡಬಿದ್ದು ನಮಸ್ಕರಿಸಿದರು. ಅವರು ಯೆಹೋವನನ್ನು ಅಷ್ಟೋರೆತ್ ದೇವತೆಗಳನ್ನು, ಬಾಳ ದೇವತೆಗಳನ್ನು ಪೂಜಿಸಿ ಯೆಹೋವನ ಕೋಪವನ್ನು ಹೆಚ್ಚಿಸಿದರು.

ಸಲಮೋನನು ಅನ್ಯದೇವತೆಗಳ ಕಡೆಗೆ ತಿರುಗಿಕೊಂಡು ಅಷ್ಟೋರೆತ್ ಚಿದೋನ್ಯರ ದೇವತೆಗಳನ್ನು ಅಮೋನಿಯರು, ಮಿಲ್ಕೋಮ್ ದೇವತೆಗಳನ್ನು, ಅವುಗಳ ವಿಗ್ರಹಗಳನ್ನು ಪೂಜಿಸ ತೊಡಗಿ ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾದನು.(1 ನೇ ಅರಸು11:5 ULB)

ನಾನು ನಡೆಸಿರುವ ಮಹತ್ಕಾರ್ಯಗಳನ್ನು, ನನ್ನ ಮಹಿಮೆಯನ್ನು ನೋಡಿದರೂ ನನ್ನ ಮಾತಿಗೆ ಕಿವಿಗೊಡದೆ ಪದೇ ಪದೇ ನನ್ನನ್ನು ಪರೀಕ್ಷಿಸಿದ್ದರಿಂದ ನಾನು ಅವರ ಪಿತೃಗಳಿಗೆ ವಾಗ್ದಾನಮಾಡಿದ ದೇಶವನ್ನು ಇವರಲ್ಲಿ ಯಾರೂ ಕಾಣುವುದಿಲ್ಲ.ನನ್ನ ದಾಸನಾದ ಕಾಲೇಬನು ಮನಃ ಪೂರ್ವಕವಾಗಿ ನನ್ನ ಮಾತನ್ನು ಅನುಸರಿಸಿ ನಡೆದುದರಿಂದ ;ಅವನನ್ನೇ ಅವರು ಸಂಚರಿಸುವ ದೇಶದಲ್ಲಿ ಸೇರಿಸುವೆನು. ಅವನ ಸಂತತಿಯವರು ಅದನ್ನು ಸ್ವಾಧೀನ ಪಡಿಸಿಕೊಳ್ಳುವರು. (ಅರಣ್ಯಕಾಡ14:23-24 ULB)

ಜೊತೆಯಾಗಿ ಹೋಗುವುದು, ಮುಂದೆ ಹೊಗುವುದು, ಅಥವಾ ಇತರ ಸೇವಕರೊಂದಿಗೆ ರಾಜನನ್ನು ಹಿಂಬಾಲಿಸುವುದು ಎಂದರೆ ಅವನ ಸೇವೆ ಮಾಡುವುದು ಎಂದರ್ಥ.

ಇಗೋ ನಿನ್ನ ರಕ್ಷಣೆಯು ಸಮೀಪವಾಯಿತು. ಯೆಹೋವನು ದಯಪಾಲಿಸುವ ಬಹುಮಾನವು ಆತನೊಂದಿಗೆ , ಆತನು ಅನುಗ್ರಹಿಸುವ ಪ್ರತಿಫಲವು ಆತನ ಮುಂದಿದೆ . (ಯೆಶಾಯ 62:11 ULB)

ನೀತಿಯು ಆತನ ಮುಂದೆ ಹೋಗುತ್ತಾನಾವು ಆತನ ಹೆಜ್ಜೆ ಅನುಸರಿಸಿ ಹೋಗಲು ದಾರಿ ಮಾಡುತ್ತದೆ. (ದಾ.ಕೀ. 85:13 ULB)

INHERITING ಪಿತ್ರಾರ್ಜಿತವಾಗಿ ಪಡೆಯುವುದು ಎಂದರೆ ಆಸ್ತಿಯನ್ನು, ವಸ್ತುವನ್ನು ಶಾಶ್ವತವಾಗಿ ಪಡೆಯುವುದು ಎಂದು ಅರ್ಥ.

ಮಹಿಮೆಯಿಂದ ಕೂಡಿಬರುವ ಮನುಷ್ಯಕುಮಾರನು ತನ್ನ ಬಲಗಡೆಯಲ್ಲಿರುವವರಿಗೆ ತನ್ನ ತಂದೆಯ ಆಶೀರ್ವಾದ ಹೊಂದಿದವರೇ ಬನ್ನಿರಿ, ಲೋಕಾಧಿಯಿಂದ ನಿಮಗೋಸ್ಕರ ಸಿದ್ಧಮಾಡಿದ ರಾಜ್ಯವನ್ನು ಸ್ವಾಸ್ಥ್ಯವಾಗಿ ಪಡೆದುಕೊಳ್ಳಿರಿ (ಮತ್ತಾಯ 25:34)

ದೇವರ ಸಂಪೂರ್ಣ ಆಶೀರ್ವಾದವು ದೇವರು ಯಾರನ್ನೂ ಉದ್ದೇಶಿಸಿ ಮಾತನಾಡುತ್ತಿದ್ದಾನೋ ಅವರಿಗೆ ಶಾಶ್ವತವಾಗಿ ನೀಡುವನು.

ಸಹೋದರ ಸಹೋದರಿಯರೇ ನಾನು ಹೇಳುವುದೇನೆಂದರೆ ರಕ್ತಮಾಂಸವು ದೇವರ ರಾಜ್ಯಕ್ಕೆ ಬಾಧ್ಯವಾಗಲಾರದು . ಲಯವಾಗುವ ವಸ್ತು ನಿರ್ಲಯ ಪದವಿಗೆ ಬಾಧ್ಯವಾಗುವುದಿಲ್ಲ, ಇದು ಶಾಶ್ವತವಲ್ಲ (1 ಕೊರಿಂಥ 15:50 ULB)

ನಶ್ವರವಾಗುವ ದೇಹವನ್ನು ಹೊಂದಿರುವ ಜನರು ದೇವರ ರಾಜ್ಯವನ್ನು ಅದರ ಸಂಪೂರ್ಣ ರೂಪದಲ್ಲಿ ಶಾಶ್ವತವಾಗಿ ಸ್ವಾಧೀನ ಮಾಡಿಕೊಳ್ಳುವರು.

ಪಿತ್ರಾರ್ಜಿತ ವಾದುದು ಎಂದರೆ ಜನರು ತಮ್ಮ ವಂಶಪಾರಂಪರ್ಯವಾಗಿ ಬಂದವುಗಳನ್ನು ಶಾಶ್ವತವಾಗಿ ಸ್ವಾಸ್ಥ್ಯ ಮಾಡಿಕೊಳ್ಳುವುದು ಎಂದು ಅರ್ಥ

ನೀನು ಅವರನ್ನು ನಿನ್ನ ಸ್ವಕೀಯ ದೇಶವಾಗಿರುವ ಬೆಟ್ಟದ ಸೀಮೆಗೆ ತಂದು ಸ್ಥಾಪಿಸು .(ವಿಮೋಚನಾ ಕಾಡ15:17 ULB)

ಯಾವ ಬೆಟ್ಟದಲ್ಲಿ ದೇವರನ್ನು ಶಾಶ್ವತವಾಗಿ ಆರಾಧಿಸಿದರೋ ಅದೇ ಆತನ ಶಾಶ್ವತ ಸ್ಥಳ.

ನಮ್ಮ ಜನರು ಮೊಂಡರೇ, ಆದಾಗ್ಯೂ ನೀನು ನಮ್ಮ ಪಾಪಗಳನ್ನು, ಅಧರ್ಮಗಳನ್ನು ಕ್ಷಮಿಸಿ ನಿನ್ನ ಜನರಾಗುವಂತೆ ನಮ್ಮನ್ನು ಸ್ವೀಕರಿಸಬೇಕೆಂದು ಪ್ರಾರ್ಥಿಸಿದನು (ವಿಮೋಚನಾ ಕಾಂಡ 34:9 ULB)

ಮೋಶೆಯು ದೇವರ ಬಳಿ ಇಸ್ರಾಯೇಲರ ತಪ್ಪೆಲ್ಲವನ್ನು ಕ್ಷಮಿಸಿ ತನ್ನ ವಿಶೇಷಜನರೆಂದು ಸ್ವೀಕರಿಸುವಂತೆ ಪ್ರಾರ್ಥಿಸುತ್ತಾನೆ, ಹಾಗೆಯೇ ಅವರು ದೇವರ ಶಾಶ್ವತ ಸ್ವಾಸ್ಥ್ಯವಾಗಿರುವುದರಿಂದ ಸ್ವೀಕರಿಸಲು ಕೋರುತ್ತಾನೆ.

ಆತನ ಅತಿಶಯವಾದ ಪ್ರೀತಿಯು, ಮಹಿಮಾತಿಶಯವು ದೇವಜನರೆನಿಸಿ ಕೊಂಡವರಿಗಾಗಿಶಾಶ್ವತ ಸ್ವಾಸ್ಥ್ಯವನ್ನು ಅನುಗ್ರಹಿಸುತ್ತದೆ. (ಎಫೇಸ 1:18 ULB)

ಆತನಿಂದ ಕರೆಸಿಕೊಂಡವರು ನಿರೀಕ್ಷಿಸುವ ಪದವಿ ಎಂಥದೆಂಬುದನ್ನು, ದೇವಜನರೆಂಬ ಸಂತತಿ ಆತನ ಸ್ವಾಸ್ಥ್ಯದ ಮಹಿಮಾತಿಶಯವನ್ನು ಶಾಶ್ವತವಾಗಿ ನಂಬುವವರಾಗುತ್ತಾರೆ.

ಸಂತತಿ ಎಂದರೆ ಒಬ್ಬನು ಶಾಶ್ವತವಾಗಿ ತನ್ನ ಹುಟ್ಟು ಮತ್ತು ಸಂಬಂಧವನ್ನು ಗುರುತಿಸಿಕೊಳ್ಳುವುದು.

ನೀನು ಬಾಧ್ಯನಾಗುವೀ ಎಂಬ ವಾಗ್ದಾನವು ಅಭಿಪ್ರಾಯವಾಗಲೀ, ಅವನ ಸಂತತಿಯವರಾಗಲೀ ಧರ್ಮಶಾಸ್ತ್ರದಿಂದ ಆದಲ್ಲಿ, ನಂಬಿಕೆ ಎಂಬ ನೀತಿಯಿಂದ ಆದದ್ದು . (ರೋಮಪುರದವರಿಗೆ ಬರೆದ ಪತ್ರಿಕೆ 4:13 ULB)

ಈ ವಾಗ್ದಾನವು ಅಬ್ರಹಾಮನ ಸಂತತಿಯವರೆಲ್ಲರಿಗೂ ಅಂದರೆ ಧರ್ಮಶಾಸ್ತ್ರವನ್ನು ಆಧಾರ ಮಾಡಿಕೊಂಡವರಿಗೆ ಮಾತ್ರವಲ್ಲದೆ ಅಬ್ರಹಾಮನಲ್ಲಿ ಇದ್ದಂಥಹ ನಂಬಿಕೆಯುಳ್ಳವರಿಗೆ ಶಾಶ್ವತವಾಗಿ ದೊರೆಯುವುದು. ವಿವಿಧ ಸಂದರ್ಭಗಳಲ್ಲಿ ವಿಧವಿಧವಾಗಿ ಮಾತನಾಡಿದ ದೇವರು ಈ ಅಂತ್ಯದಿನದಲ್ಲಿ ನಮ್ಮ ಸಂಗಡ ಮಗನ ಮುಖಾಂತರ ಮಾತನಾಡಿದ್ದಾನೆ

ವಿವಿಧ ಸಂದರ್ಭಗಳಲ್ಲಿ ವಿಧವಿಧವಾಗಿ ಮಾತನಾಡಿದ ದೇವರು ಈ ಅಂತ್ಯದಿನದಲ್ಲಿ ನಮ್ಮ ಸಂಗಡ ಮಗನ ಮುಖಾಂತರ ಮಾತನಾಡಿದ್ದಾನೆ ಈತನ ಮೂಲಕವೇ ಎಲ್ಲಕ್ಕೂ ಬಾಧ್ಯನನ್ನಾಗಿ ನೇಮಿಸಿದನು. (ಇಬ್ರಿಯ 1:2 ULB)

ದೇವರ ಮಗನು ಎಲ್ಲವನ್ನೂ ಶಾಶ್ವತ ಸ್ವಾಸ್ಥ್ಯವನ್ನಾಗಿ ಸ್ವೀಕರಿಸುವನು.

ನಂಬಿಕೆಯಿಂದಲೇ ನೋಹನು ಅದುವರೆಗೂ ಕಾಣದಿದ್ದ ಸಂಗತಿಗಳ ವಿಷಯವಾಗಿ ದೈವೋಕ್ತಿಯನ್ನು ಹೊಂದಿಭಯಭಕ್ತಿಯುಳ್ಳವನಾಗಿ ನೀತಿಯುಳ್ಳವನಾಗಿ ವಿಶ್ವಾಸದಿಂದ ದೇವರ ಸಂತತಿಯಾಗಿ ನಡೆದುಕೊಂಡ (ಇಬ್ರಿಯ 11:7 ULB)

ನೋಹನು ನೀತಿಯನ್ನು ಶಾಶ್ವತ ಸ್ವಾಸ್ಥ್ಯವಾಗಿ ಪಡೆದುಕೊಂಡ.

LYING DOWN ಕೆಳಗೆ ಬೀಳುವುದು ಎಂದರೆ DYING ಸಾಯುವುದು ಎಂದರ್ಥ

ನಿನ್ನ ಆಯುಷ್ ಕಾಲವು ಮುಗಿದು ನೀನು ನಿನ್ನ ಪಿತೃಗಳ ಬಳಿಗೆ ಸೇರುವಾಗ , ನಿನ್ನಿಂದ ಹುಟ್ಟಿದವನನ್ನು ನೆಲೆಗೊಳಿಸಿ ಅವನ ರಾಜ್ಯವನ್ನು ಸ್ಥಿರಪಡಿಸುವೆನು, (2 ಸಮುವೇಲ 7:12 ULB)

ನೀನು ಸೌಂದರ್ಯದಲ್ಲಿ ಯಾರಿಗೆ ಕಡಿಮೆ ಇಳಿದು ಹೋಗಿ ಸುನ್ನತಿಹೀನರ ನಡುವೆ ಒರಗು !' ಅವರು ಖಡ್ಗಹತರಾಗಿ ಅವರ ಮಧ್ಯದಲ್ಲಿ ಬೀಳುವರು. ಐಗುಪ್ತ ದೇಶವನ್ನು ಖಡ್ಗಗಳಿಗೆ ಗುರಿಮಾಡಿದೆ, ಅದರ ಶತೃಗಳು ಹೊಂಚುಹಾಕುತ್ತಾ ಇಸ್ರಾಯೇಲರನ್ನು ಮತ್ತೆ ಗುಲಾಮರಂತೆ ಮಾಡಲು ಕಾಯುತ್ತಿದ್ದಾರೆ. (ಯೆಹೆಜ್ಕೇಲ 32:19-20 ULB)

ಆಳುವುದು ಅಥವಾ ಆಡಳಿತ ನಡೆಸುವುದು ಎಂದರೆ ಅಧೀನದಲ್ಲಿಟ್ಟುಕೊಂಡು ನಿಭಾಯಿಸುವುದು.

ಪಾಪವು ಮರಣವನ್ನುಂಟು ಮಾಡುತ್ತಾಅಧಿಕಾರವನ್ನು ನಡೆಸಿದ ಹಾಗೆ ದೇವರ ಕೃಪೆಯು ನಮ್ಮ ಕರ್ತನಾದ ಯೇಸುಕ್ರಿಸ್ತನ ಮೂಲಕ ನೀತಿಯನ್ನು ಕೊಟ್ಟು ನಿತ್ಯ ಜೀವವನ್ನು ಉಂಟುಮಾಡುತ್ತಾ ಅಧಿಕಾರವನ್ನು ನಡೆಸುವುದು (ರೋಮಾಪುರದವರಿಗೆ ಬರೆದ ಪತ್ರಿಕೆ 5:21 ULB)

ನೀವು ನಶಿಸಿಹೋಗುವ ನಿಮ್ಮ ದೇಹದ ಮೇಲೆ ದುರಾಚಾರಗಳ ಪ್ರೇರಣೆ ಆಗದಂತೆ ನೊಡಿಕೊಳ್ಳಿರಿ rule (ರೋಮಾಪುರದವರಿಗೆ ಬರೆದ ಪತ್ರಿಕೆ 6:12 ULB)

ವಿಶ್ರಾಂತಿ ಅಥವಾ ವಿಶ್ರಾಂತಿ ಪಡೆಯುವ ಸ್ಥಳ ಎಂಬುದು ಶಾಶ್ವತವಾದ ಅನುಕೂಲ ಪಡೆಯುವ ಸ್ಥಳ ಎಂದು ಅರ್ಥ.

ನವೋಮಿ ತನ್ನ ಸೊಸೆ ರೂತಳಿಗೆ "ನನ್ನ ಮಗಳೇ, ನೀನು ಪುನಃ ಮದುವೆಯಾಗಿ ಸುಖದಿಂದ ಇರುವುದಕ್ಕೋಸ್ಕರ ಒಂದು ಸ್ಥಳವನ್ನು ಹುಡುಕಲು ಪ್ರಯತ್ನಿಸ ಬೇಕಲ್ಲವೇ ? ,(ರೂತಳು 3:1 ULB)

ಈ ಜನರು ನನ್ನ ಮಾರ್ಗವನ್ನು ತಿಳಿದುಕೊಳ್ಳದೆ ತಪ್ಪಿನಡೆಯುವವರು ಆದುದರಿಂದ ಇವರನ್ನು ನನ್ನ ವಿಶ್ರಾಂತಿಯ ಸ್ಥಳದಲ್ಲಿ ಸೇರಿಸುವುದಿಲ್ಲ.ಎಂದು ಕೋಪದಿಂದ ಪ್ರಮಾಣ ಮಾಡಿದನು (ದಾ.ಕೀ. 95:11 ULB)

ಈ ಸ್ಥಳವನ್ನು ನನ್ನ ನಿವಾಸಕ್ಕಾಗಿ ಆರಿಸಿಕೊಂಡಿದ್ದೇನೆ. ಇದು ನನ್ನ ಶಾಶ್ವತ ವಾಸಸ್ಥಾನಇಲ್ಲೇ ಇರುವೆನು. ಇದು ನನಗೆ ಇಷ್ಟವು.[ಚೀಯೋನ್]. (ದಾ.ಕೀ. 132:14 ULB)

ಆ ದಿನದಲ್ಲಿ ಜನಾಂಗಗಳು ತಮಗೆ ಧ್ವಜಪ್ರಾಯನಾಗಿ ನಿಂತಿರುವ ಈಶಯನ ಅಂಕುರ ಆದವನನ್ನು ಆಶ್ರಯಿಸುವರು, ಅವನ ವಿಶ್ರಾಂತಿ ಸ್ಥಳವು ವೈಭವವುಳ್ಳದ್ಧಾಗಿರುವುದು. (ಯೆಶಾಯ 11:10 ULB)

ಜಾಗೃತನಾಗು, ಎದ್ದುನಿಲ್ಲು ಎಂಬುದು ಒಂದು ಕ್ರಿಯೆಯನ್ನು ಪ್ರತಿನಿಧಿಸುತ್ತದೆ

ಎದ್ದು ಬಾ ಎದ್ದುಬಂದು ಸಹಾಯಮಾಡು ನಿನ್ನ ಒಡಂಬಡಿಕೆಯ ನಿಮಿತ್ತ ನಮ್ಮನ್ನು ವಿಮೋಚಿಸು. (ದಾ.ಕೀ. 44:26 ULB)

ಏನನ್ನಾದರೂ ನೋಡುವುದು ಎಂದರೆ ಅಲ್ಲಿ ಪ್ರತ್ಯಕ್ಷವಾಗಿ ಇರುವುದು.

ನೀನು ನನ್ನ ಜೀವಾತ್ಮವನ್ನು ಪಾತಾಳದಲ್ಲಿ ಬಿಡುವುದಿಲ್ಲ ನಿನ್ನ ಪ್ರಿಯನಿಗೆ ಅಧೋಲೋಕ ವನ್ನು ನೋಡಗೊಡಿಸುವುದಿಲ್ಲ see (ದಾ.ಕೀ. 16:10 ULB)

ಯಾವುದಾದರೂ ವಸ್ತುವನ್ನು ಮಾರುವುದೆಂದರೆ ನಮ್ಮಲ್ಲಿರುವ ಒಂದನ್ನು ಬೇರೆಯವರ ವಶಕ್ಕೆ ಕೊಡುವುದು ಎಂದು ಅರ್ಥ

BUYING ಕೊಂಡುಕೊಳ್ಳುವುದು ಎಂದರೆ ಬೇರೆಯವರ ವಶದಲ್ಲಿ ಇರುವುದನ್ನು ಕ್ರಯಕ್ಕೆ ತೆಗೆದುಕೊಳ್ಳು -ವುದು ಎಂದು ಅರ್ಥ.

[ಯೆಹೋವ] sold ಮೇಲೆ ಕೋಪಗೊಂಡು ಅವರನ್ನು ಎರಡು ನದಿಗಳ ಮಧ್ಯದಲ್ಲಿ ಇರುವ ರಾಮ್ ನಹರೈಮ್ ರಾಜ್ಯದ ಅರಸನಾದ ಕೂಷನ್ ರಿಷಾಯಿತಾಯಿಮ್ ಎಂಬುವವನಿಗೆ ಮಾರಿಬಿಟ್ಟನು (ನ್ಯಾಯಸ್ಥಾಪಕರು 3:8 ULB)

ಆಸೀನವಾಗುವುದು ಎಂದರೆ ಆಡಳಿತ ನಡೆಸುವುದು.

ಸಿಂಹಾಸನವು ಕೃಪಾಧಾರದಮೇಲೆ ಸ್ಥಾಪಿತವಾಗಿದೆ ರಾಜ್ಯಭಾರ ಪ್ರವೀಣನು, ಧರ್ಮಾಸಕ್ತನು, ನ್ಯಾಯ ನಿಪುಣನು ಆದವನು ದಾವೀದನ ಗುಡಾರದಲ್ಲಿನ ಸಿಂಹಾಸನದ ಮೇಲೆ ಸತ್ಯಪರನಾಗಿ ಕುಳಿತಿದ್ದಾನೆ (ಯೆಶಾಯ 16:5 ULB)

ನಿಲ್ಲುವುದು ಎಂದರೆ ಯಶಸ್ವಿಯಾಗಿ ನಿಲ್ಲುವುದು

ಯಾವನು ದುಷ್ಟರ ಪಾಪಾತ್ಮರ ಮಾರ್ಗದಲ್ಲಿ ನಿಂತುಕೊಳ್ಳದೆ ಧರ್ಮನಿಂಧಕರೊಡನೆ ಕೂತುಕೊಳ್ಳದೆ, ಧರ್ಮಶಾಸ್ತ್ರದಲ್ಲಿ ಆನಂದ ಪಡುತ್ತಾ, ಹಗಲಿರುಳು ಧ್ಯಾನಿಸುವನೋ ಅವನೇ ಧನ್ಯನು.stand (ದಾ.ಕೀ. 1:2 ULB)

ನಡೆಯುವುದು ಎಂದರೆ ಉತ್ತಮ ಮಾರ್ಗದಲ್ಲಿ ನಡೆಯುವುದು. ಒಳ್ಳೆಯ ನಡತೆಯನ್ನು ಪ್ರತಿನಿಧಿಸುತ್ತದೆ.

ಯಾರು ದುಷ್ಟರ ಆಲೋಚನೆಯಂತೆ ಪಾಪಾತ್ಮರ ಮಾರ್ಗದಲ್ಲಿ ನಡೆಯುವುದಿಲ್ಲವೋ ಅವನೇ ಧನ್ಯನು (ದಾ.ಕೀ. 1:1 ULB)

ಯೆಹೋವನು ನೀತಿವಂತರ ಮಾರ್ಗವನ್ನು ಲಕ್ಷಿಸಿ ಪರಿಗಣಿಸುವನು (ದಾ.ಕೀ.1:6 ULB)

ಮನೋವ್ಯಥೆಯಿಂದ ಕಣ್ಣಿರು ಸುರಿಸುತ್ತೇನೆ ನನ್ನ ವಾಗ್ದಾನಕ್ಕಾಗಿ ನನ್ನನ್ನು ಬಲಪಡಿಸು. (ದಾ.ಕೀ. 119:28 ULB)

ನೀನು ನನ್ನ ಅಂತರಾತ್ಮವನ್ನು ಬಿಡುಗಡೆಮಾಡು, ಆಗ ಆಸಕ್ತಿಯಿಂದ ನಿನ್ನ ಜ್ಞಾನ ಮಾರ್ಗವನ್ನು ಅನುಸರಿಸುವೆನು. (ದಾ.ಕೀ. 119:32 ULB)