translationCore-Create-BCS_.../translate/figs-personification/01.md

8.3 KiB
Raw Blame History

###ವಿವರಣೆಗಳು.

ನಿರ್ಜೀವ ವಸ್ತುಗಳನ್ನು ಜೀವಂತವಸ್ತುಗಳಂತೆ ಹೋಲಿಸಿ ಹೇಳಿ ನಿರ್ಜೀವ ವಸ್ತು ಜೀವಂತವ್ಯಕ್ತಿಗಳಂತೆ ಕಾರ್ಯ ನಿರ್ವಹಿಸುವುದನ್ನು ಹೇಳುವುದು. ವ್ಯಕ್ತೀಕರಣ ಎಂಬುದು ಒಂದು ಅಲಂಕಾರ. ನಾವು ಯಾವ ವಸ್ತುಗಳನ್ನು, ವಿಷಯಗಳನ್ನು ನೋಡಲು ಸಾಧ್ಯವಿಲ್ಲವೋ ಅದನ್ನು ಇನ್ನೊಂದು ವಸ್ತುವನ್ನು ಬಳಸಿ ವರ್ಣಿಸಿ ಹೇಳಿ ಸಂತೋಷಿಸುವುದನ್ನು ಜನರು ಆಗಿಂದಾಗ್ಗೆ ಮಾಡುತ್ತಾರೆ. ಉದಾಹರಣೆ –ಶುಭ್ರವಾದ ಆಕಾಶದಲ್ಲಿದ್ದ ನಕ್ಷತ್ರಗಳು ಕಣ್ಣು ಮಿಟುಕಿಸಿತು, ಸಾಲಾಗಿ ಹಾರಿಹೋದ ಪಕ್ಷಿಗಳ ಸಾಲು ಪ್ರಕೃತಿಯ ಚೆಲುವಿಗೆ ನೀಡಿದ ಸಹಿಯಂತಿತ್ತು. ಉದಾಹರಣೆಗೆ ಜ್ಞಾನ.

ಜ್ಞಾನವೆಂಬಾಕೆಯು ಕರೆಯುತ್ತಾಳೆ. (ಜ್ಞಾನೋಕ್ತಿಗಳು 8:1 ULB)

ಅಥವಾ ಪಾಪ:

ಪಾಪವು ನಿನ್ನನ್ನು ಹಿಡಿಯಬೇಕೆಂದು ಬಾಗಿಲಲ್ಲಿ ಹೊಂಚಿಕೊಂಡಿರುವುದು.

ಕೆಲವೊಮ್ಮೆ ಜನರ ಸಂಬಂಧಗಳ ಕುರಿತು ಮಾತನಾಡಲು ನಿರ್ಜೀವ ವಸ್ತುಗಳ ಅಂದರೆ ಆಸ್ತಿ, ಹಣ, ಆಸ್ತಿ ಇವುಗಳ ಉದಾಹರಣೆಗಳನ್ನು ಕೊಡುವುದು ಸಾಮಾನ್ಯ.

ನೀವು ದೇವರು ಮತ್ತು ಐಶ್ವರ್ಯ ಇವರೆಡರ ಸೇವೆಯನ್ನು ಒಟ್ಟಿಗೆ ಮಾಡಲಾರಿರಿ. (ಮತ್ತಾಯ 6:24 ULB)

ಕಾರಣ ಇದೊಂದು ಭಾಷಾಂತರ ತೊಡಕು

  • ಕೆಲವು ಭಾಷೆಗಳಲ್ಲಿ ವ್ಯಕ್ತೀಕರಣ ಎಂಬ ಅಲಂಕಾರ ಇಲ್ಲ.
  • ಕೆಲವು ಭಾಷೆಗಳಲ್ಲಿ ವ್ಯಕ್ತೀಕರಣ ಎಂಬ ಅಲಂಕಾರವನ್ನು ಕೆಲವು ಸನ್ನಿವೇಶಗಳಲ್ಲಿ ಮಾತ್ರ ಬಳಸುತ್ತಾರೆ.

ಸತ್ಯವೇದದಲ್ಲಿನ ಉದಾಹರಣೆಗಳು.

ನೀವು ದೇವರು ಮತ್ತು ಐಶ್ವರ್ಯ ಎರಡನ್ನೂ ಒಟ್ಟಿಗೆ ಪ್ರೀತಿಸಲಾರಿರಿ. (ಮತ್ತಾಯ 6:24 ULB)

ಯೇಸು ಇಲ್ಲಿ ಐಶ್ವರ್ಯ ಎಂಬುದು ಮನುಷ್ಯನನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡು ಆಡಳಿತ ನಡೆಸುತ್ತದೆ ಎಂದು ಹೇಳಿದ್ದಾನೆ. ಹಣವನ್ನು ಪ್ರೀತಿಸುವವನು ಮತ್ತು ಅದಕ್ಕೆ ಅಧೀನನಾಗಿ ಅದರ ದಾಸನಾಗಿ ಸೇವೆಮಾಡುವವನಿಗೆ ಸಮಾನ.

ಜ್ಞಾನವೆಂಬಾಕೆಯು ಕರೆಯುವುದಿಲ್ಲವೇ? ವಿವೇಕವೆಂಬಾಕೆಯೇ ಧ್ವನಿಗೈಯ್ಯುತ್ತಾಳೆಯೇ? (ಜ್ಞಾನೋಕ್ತಿಗಳು 8:1 ULB)

ಇಲ್ಲಿ ಲೇಖಕನು ಜ್ಞಾನದ ಬಗ್ಗೆಯೂ, ವಿವೇಕದ ಬಗ್ಗೆಯೂ ಹೇಳುತ್ತಾ ಹೆಣ್ಣೊಬ್ಬಳು ಇದನ್ನು ಜನರಿಗೆ ಬೋಧಿಸಲು ಕರೆಯುತ್ತಾಳೆ. ಇದರ ಅರ್ಥ ಇವೆರಡಕ್ಕೂ ಗೂಡಾರ್ಥಗಳಿಲ್ಲ ಆದರೆ ಜನರು ಇವುಗಳ ಬಗ್ಗೆ ಗಮನಕೊಡಲೇ ಬೇಕಾದ ಅಂಶಗಳು

ಭಾಷಾಂತರದ ತಂತ್ರಗಳು.

ವ್ಯಕ್ತೀಕರಣ ಅಲಂಕಾರ ಬಳಕೆ ಸ್ಪಷ್ಟವಾಗಿ ಅರ್ಥವಾಗುವಂತದ್ದಾದರೆ ಅದನ್ನು ಬಳಸಲು ಪರಿಗಣಿಸಬಹುದು. ಸರಿಯಾಗಿ ಅರ್ಥವಾಗದಿದ್ದರೆ ಭಾಷಾಂತರ ಮಾಡುವಾಗ ಅನುಸರಿಸಬೇಕಾದ ಕೆಲವಾರು ಸೂಚನೆಗಳನ್ನು ಇಲ್ಲಿ ನೀಡಲಾಗಿದೆ.

  1. ಇದಕ್ಕೆ ಪದಗಳು ಅಥವಾ ನುಡಿಗಟ್ಟುಗಳನ್ನು ಸೇರಿಸಿ ಸ್ಪಷ್ಟಪಡಿಸಿ.
  2. " ಅದರಂತೆ, ", " ಹಾಗೆಯೇ " ಎಂಬ ಪದಗಳನ್ನು ಬಳಸಿ ವಾಕ್ಯಗಳನ್ನು ಅರ್ಥವಾಗುವಂತೆ ಬಳಸಬೇಕು
  3. ಇಂತಹ ಸಮಯದಲ್ಲಿ ವ್ಯಕ್ತೀಕರಣ ಅಲಂಕಾರ ಇಲ್ಲದೆ ಭಾಷಾಂತರಿಸಿ.

ಭಾಷಾಂತರದ ತಂತ್ರಗಳನ್ನು ಅಳವಡಿಸಿರುವ ಉದಾಹರಣೆಗಳು.

  1. ಇದರೊಂದಿಗೆ ಪದಗಳನ್ನು ಅಥವಾ ನುಡಿಗಟ್ಟುಗಳನ್ನು ಸೇರಿಸಿ ಸ್ಪಷ್ಟಪಡಿಸಿ.
  • .. ಪಾಪ ಬಾಗಿಲಿನಬಳಿ ಹೊಂಚುಹಾಕುತ್ತಿದೆ. (ಆದಿಕಾಂಡ 4:7 ULB) - ಕ್ರೂರಮೃಗವು ದಾಳಿಮಾಡಲು ಹೊಂಚುಹಾಕುವಂತೆ / ಕಾಯುತ್ತಿರುವಂತೆ ಪಾಪವೂ ಸಹ ನಮ್ಮನ್ನು ಆಕ್ರಮಿಸಲು ಕಾಯುತ್ತಿದೆ ಎಂದು ಹೇಳಿದ್ದಾನೆ. ಇದರಿಂದ ಪಾಪ ಎಷ್ಟು ಅಪಾಯಕಾರಿ ಎಂದು ತಿಳಿಯುತ್ತದೆ. ಈ ವಾಕ್ಯದಲ್ಲಿ ಇನ್ನೊಂದು ನುಡಿಗಟ್ಟನ್ನು ಸೇರಿಸುವ ಮೂಲಕ ಇನ್ನೂ ಪರಿಣಾಮಕಾರಿಯಾಗುವಂತೆ ಮಾಡಬಹುದು.

    • .. ಪಾಪವುನಿಮ್ಮ ಬಾಗಿಲಿನ ಬಳಿ ನಿಮ್ಮ ಮೇಲೆ ಆಕ್ರಮಣ ಮಾಡಲು ಕಾಯುತ್ತಿದೆ
  1. " ಅದರಂತೆ, ", " ಹಾಗೆಯೇ "ಎಂಬ ಪದಗಳನ್ನು ಬಳಸಿ ವಾಕ್ಯಗಳನ್ನು ಅರ್ಥವಾಗುವಂತೆ ಬಳಸಬೇಕು
  • .. ಪಾಪವು ಬಾಗಿಲಿನ ಬಳಿ ಹೊಂಚುಹಾಕುತ್ತಿದೆ (ಆದಿಕಾಂಡ 4:7 ULB) ಇದನ್ನು ಭಾಷಾಂತರಿಸುವಾಗ "ಅಂತೆ." ಎಂಬ ಪದ ಸೇರಿಸಿ ಮಾಡಬಹುದು.

    • .. ಪಾಪವು ಬಾಗಿಲಿನ ಬಳಿಯಲ್ಲಿ ಕ್ರೂರಪ್ರಾಣಿಯಂತೆ ನಿಮ್ಮ ಮೇಲೆ ಆಕ್ರಮಣ ಮಾಡಲು ಕಾಯುತ್ತಿದೆ.
  1. ಇಂತಹ ಸಮಯದಲ್ಲಿ ವ್ಯಕ್ತೀಕರಣ ಅಲಂಕಾರ ಇಲ್ಲದೆ ಭಾಷಾಂತರಿಸಿ.
  • .. ಗಾಳಿಯು ಸಮುದ್ರವೂ ಸಹ ಆತನು ಹೇಳಿದಂತೆ ಕೇಳುತ್ತದೆ. (ಮತ್ತಾಯ 8:27 ULB) ಆತನ ಶಿಷ್ಯರು " ಗಾಳಿ ಮತ್ತು ಸಮುದ್ರಗಳು ಆತನ ಮಾತು ಕೇಳಿ ಯೇಸುವಿಗೆ ವಿಧೇಯವಾಗಿ ನಡೆದುಕೊಂಡ ಬಗ್ಗೆ ಮಾತನಾಡಿದರು. ಇಲ್ಲಿ ವಿಧೇಯತೆ ಎಂಬ ಪದವನ್ನು ಬಿಟ್ಟು ಸಹ ಯೇಸು ಹೇಗೆ ಗಾಳಿ ಮತ್ತು ಸಮುದ್ರವನ್ನು ಹತೋಟಿಗೆ ತಂದ ಎಂದು ಹೇಳಬಹುದು.

    • ಆತನು ಗಾಳಿ ಮತ್ತು ಸಮುದ್ರವನ್ನು ಹತೋಟಿಯಲ್ಲಿ ಇಡಬಲ್ಲ .

ಗಮನಿಸಿ: ನಾವು ಇಲ್ಲಿ ವ್ಯಕ್ತೀಕರಣ ಅಲಂಕಾರ ವ್ಯಾಖ್ಯೆಯನ್ನು ವಿವರವಾಗಿ ಹೇಳಿದ್ದೇವೆ.ಅದರಲ್ಲಿ “ಮೃಗಾಲಂಕಾರ ಚಿತ್ರಣ” (ಯಾವುದಾದರೂ ಒಂದು ವಿಷಯವನ್ನು ಪ್ರಾಣಿಯ ಲಕ್ಷಣಗಳನ್ನು ನೀಡಿ ಮಾತನಾಡುವುದು), “ಮನುಷ್ಯತ್ವಾರೋಪ” (ನಿರ್ಜೀವ ವಸ್ತುಗಳಿಗೆ ಮಾನವ ಲಕ್ಷಣಗಳನ್ನು ನೀಡಿ ಮಾತನಾಡುವುದು).