translationCore-Create-BCS_.../translate/resources-types/01.md

12 KiB
Raw Permalink Blame History

ULB ಸತ್ಯವೇದದಿಂದ ಭಾಷಾಂತರ ಮಾಡಲು.

ULB ಸತ್ಯವೇದವನ್ನು ಚೆನ್ನಾಗಿ ಓದಿ. ಈ ಸತ್ಯವೇದವನ್ನು ಓದಿದಾಗ ನಿಮಗೆ ಚೆನ್ನಾಗಿ ಅರ್ಥವಾಗುತ್ತಿದೆಯೇ ಎಂದು ತಿಳಿದುಕೊಳ್ಳಿ. ಆಗ ನೀವು ವಾಕ್ಯಭಾಗಗಳನ್ನು ಚೆನ್ನಾಗಿ, ನಿಖರವಾಗಿ, ಸ್ಪಷ್ಟವಾಗಿ ಮತ್ತು ಸಹಜವಾಗಿ ಭಾಷಾಂತರ ಮಾಡಲು ಸಾಧ್ಯವಾಗುತ್ತದೆ.

  • ಹೌದಾದರೆ ? ಭಾಷಾಂತರ ಮಾಡಲು ಪ್ರಾರಂಭಿಸಿ.

  • ಇಲ್ಲವಾದರೆ ? UDB ಸತ್ಯವೇದವನ್ನು ನೋಡಿ. ULB ವಾಕ್ಯಭಾಗಗಳನ್ನು ಅರ್ಥಮಾಡಿಕೊಳ್ಳಲು UDB ಸಹಾಯಕವಾಗಿದೆಯೇ ?

  • ಹೌದಾದರೆ ? ಭಾಷಾಂತರ ಮಾಡಲು ಪ್ರಾರಂಭಿಸಿ.

  • ಇಲ್ಲವಾದರೆ ? ಭಾಷಾಂತರ ಟಿಪ್ಪಣಿಯನ್ನು ಓದಿ ಸಹಾಯಪಡೆದುಕೊಳ್ಳಿ. ಭಾಷಾಂತರ ಟಿಪ್ಪಣಿಯಲ್ಲಿ ಪದಗಳು ಅಥವಾ ಪದಗುಚ್ಛಗಳು ಪ್ರತಿಯಿಂದ ತೆಗೆದುಕೊಂಡು ವಿವರಿಸಿದಂತವು. ಇಂಗ್ಲೀಷ್ ಭಾಷೆಯಲ್ಲಿ ಪ್ರತಿಯೊಂದು ಟಿಪ್ಪಣಿಯೂ ULB ಯಿಂದ ಪ್ರಾರಂಭವಾಗಿ ವಿವರಿಸಿರುವಂತಾದ್ದು. ಇವು ಪ್ರಮುಖ ಅಂಶಗಳಂತೆ ದೊಡ್ಡ ಅಕ್ಷರಗಳಲ್ಲಿ ನಮೂದಿಸಲಾಗಿರುತ್ತದೆ, ಹಾಗಯೆ ಒಂದು ಸಣ್ಣಗೆರೆ ಮತ್ತು ಭಾಷಾಂತರಗಾರರಿಗೆ ಸಲಹೆ ಮತ್ತು ಮಾಹಿತಿಯನ್ನು ನೀಡುತ್ತದೆ. ಈ ಟಿಪ್ಪಣಿಗಳು ಈ ಕೆಳಗಿನ ನಮೂನೆಯನ್ನು ಹೊಂದಿರುತ್ತದೆ.

  • ULB ಪ್ರತಿಯಿಂದ ಪ್ರತಿಮಾಡಿದೆ ವಾಕ್ಯಭಾಗ - ಭಾಷಾಂತರ ಮಾಡಲು ಸಲಹೆಗಳು ಅಥವಾ ಭಾಷಾಂತರ ಮಾಡುವವರಿಗೆ ಮಾಹಿತನೀಡುತ್ತದೆ.

ಟಿಪ್ಪಣಿಗಳ ವಿಧಗಳು.

ಭಾಷಾಂತರ ಟಿಪ್ಪಣಿಗಳಲ್ಲಿ ಅನೇಕ ವಿಧದ ಟಿಪ್ಪಣಿಗಳಿವೆ. ಪ್ರತಿಯೊಂದು ವಿಧದ ಟಿಪ್ಪಣಿ ವಿವಿಧರೀತಿಯಲ್ಲಿ ವಿವರಣೆ ನಿಡುತ್ತದೆ. ಭಾಷಾಂತರಗಾರನಿಗೆ ಈ ಟಿಪ್ಪಣಿಗಳು ಭಾಷಾಂತರವನ್ನು ಯಾವರೀತಿ ಹಾಗೂ ಅತ್ಯುತ್ತಮ ಮಾರ್ಗವನ್ನು ಆಯ್ಕೆಮಾಡಿಕೊಳ್ಳಲು ಸಹಾಯಮಾಡುವುದಲ್ಲದೆ, ಅವರು ಭಾಷಾಂತರ ಮಾಡುತ್ತಿರುವ ಭಾಷೆಯಲ್ಲಿ ಸತ್ಯವೇದವನ್ನು ಉತ್ತಮವಾಗಿ ಭಾಷಾಂತರಿಸಲು ಸಾಧ್ಯವಾಗುತ್ತದೆ.

  • ವ್ಯಾಖ್ಯಾನದೊಂದಿಗೆ ಟಿಪ್ಪಣಿಗಳು ಕೆಲವೊಮ್ಮೆ ULB ಯಲ್ಲಿನ ಪದಗಳಿಗೆ ಸರಿಯಾದ ಅರ್ಥ ನಿಮಗೆ ತಿಳಿಯದೆ ಹೋಗಬಹುದು. ಪದಗಳಿಗೆ ಅಥವಾ ಪದಗುಚ್ಛಗಳಿಗೆ ಸರಳವಾದ ವ್ಯಾಖ್ಯಾನಗಳನ್ನು ಗಳನ್ನು ಅಥವಾ ವಾಕ್ಯರೂಪವನ್ನು ಕೊಡದೆ ನೀಡುತ್ತದೆ.
  • ವಿವರ ನೀಡುವ ಟಿಪ್ಪಣಿಗಳು - ಪದಗಳ ಅಥವಾ ಪದಗುಚ್ಛಗಳ ಸರಳವಾದ ವಿವರವನ್ನು ವಾಕ್ಯದ ರೂಪದಲ್ಲಿ ವಿವರಿಸುತ್ತದೆ.
  • ಮತ್ತೊಂದು ರೀತಿಯ ಭಾಷಾಂತರ ಮಾಡುವುದನ್ನು ತಿಳಿಸುವ ಭಾಷಾಂತರ ಮಾಡುವುದನ್ನು ತಿಳಿಸುವ ಭಾಷಾಂತರ ಟಿಪ್ಪಣಿಗಳಿದ್ದು ಅವುಗಳನ್ನು ವಿವರವಾಗಿ ಈ ಕೆಳಗೆ ಕೊಟ್ಟಿರುವಂತೆ ವಿವರಿಸಿದೆ.

ಭಾಷಾಂತರಗಳಿಗೆ ನೀಡಿರುವ ಸಲಹೆಗಳಲ್ಲಿ ಅನೇಕ ವಿಧಗಳಿವೆ.

ಭಾಷಾಂತರ ಮಾಡಲು ನೀಡಿರುವ ಸಲಹೆಗಳಲ್ಲಿ ಅನೇಕ ವಿಧಗಳಿವೆ.

  • ಸಮಾನ ಅರ್ಥಕೊಡುವ ಟಿಪ್ಪಣಿಗಳು ಮತ್ತು ಸಮಾನ ಪದಗುಚ್ಛಗಳು ಇಂತಹ ಪದಗಳು ಅಥವಾ ಪದಗುಚ್ಛಗಳ ಬದಲಾವಣೆಯಿಂದ ಮೂಲ ವಾಕ್ಯಭಾಗದ ಅರ್ಥಕ್ಕೆ ಯಾವುದೇ ಧಕ್ಕೆ ಉಂಟುಮಾಡುವುದಿಲ್ಲ. ಈ ಸಮಾನಾರ್ಥಕ ಪದಗಳುಮತ್ತು ಸಮಾನ ಪದಗುಚ್ಛಗಳನ್ನು ಚಿನ್ಹೆಗಳೊಂದಿಗೆ ಗುರುತಿಸಲ್ಪಡುತ್ತದೆ. ಇದರ ಅರ್ಥ ULB ವಾಕ್ಯಭಾಗಗಳಲ್ಲಿ ಇರುವಂತೆ ಇರುತ್ತದೆ.
  • ಪರ್ಯಾಯ ಭಾಷಾಂತರದೊಂದಿಗಿನ ಟಿಪ್ಪಣಿಗಳು - ಪರ್ಯಾಯ ಭಾಷಾಂತರ ULB ವಿಷಯ ಅಥವಾ ನಮೂನೆಯ ಬಗ್ಗೆ ಬದಲಾವಣೆಗೆ ಸಲಹೆ ನೀಡಬಹುದು. ಏಕೆಂದರೆ ಭಾಷಾಂತರವಾಗುತ್ತಿರುವ ಭಾಷೆಯಲ್ಲಿ ಅನೇಕ ಬದಲಾವಣೆಗೆ ಅಗತ್ಯ ಬರಬಹುದು. ಈ ಪರ್ಯಾಯ ಭಾಷಾಂತರವನ್ನು ULB ನಮೂನೆ ಅಥವಾ ವಿಷಯವು ನಿಮ್ಮ ಭಾಷೆಗೆ ಭಾಷಾಂತರ ಮಾಡುವಾಗ ನಿಖರವಾಗಿ ಅಥವಾ ಸಹಜವಾಗಿ ಮೂಡಿ ಬರದಿದ್ದರೆ ಮಾತ್ರ ಮಾಡಬೇಕು.
  • UDB ಭಾಷಾಂತರವನ್ನು ಸ್ಪಷ್ಟಪಡಿಸುವ ಟಿಪ್ಪಣಿಗಳು - ULBಯ ವಿಷಯಕ್ಕೆ ಸರಿಯಾದ ಪರ್ಯಾಯ ಭಾಷಾಂತರವನ್ನು ನೀಡುವುದಾದರೆ ಪರ್ಯಾಯ ಭಾಷಾಂತರಕ್ಕೆ ಟಿಪ್ಪಣಿಯ ಅವಶ್ಯವಿರುವು ದಿಲ್ಲ. ಕೆಲವು ಸಂದರ್ಭಗಳಲ್ಲಿ ಈ ಟಿಪ್ಪಣಿಗಳು ಪರ್ಯಾಯ ಭಾಷಾಂತರದೊಂದಿಗೆ UDBಯಿದವಾಕ್ಯಭಾಗಗಳನ್ನು ಒದಗಿಸುತ್ತದೆ, ಕೆಲವೊಮ್ಮೆ UDBಯಿದ ವಾಕ್ಯಭಾಗಗಳನ್ನು ವಾಕ್ಯಗಳಂತೆ " ()"ಒಂದು ಪರ್ಯಾಯ ಭಾಷಾಂತರಕ್ಕೆ ಪೂರಕವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಈ ಟಿಪ್ಪಣಿಗಳು "(UDB)" ಎಂಬ ಗುರುತನ್ನುUDBವಾಕ್ಯಭಾಗಗಳನ್ನುಉದ್ಧರಿಸುವಾಗ ಬಳಸಲಾಗುತ್ತದೆ.
  • ಟಿಪ್ಪಣಿಗಳಿಗೆ ಪರ್ಯಾಯ ಅರ್ಥಗಳು - ಕೆಲವುಪದಗಳು ಮತ್ತು ಪದಗುಚ್ಛಗಳು ಒಂದಕ್ಕಿಂತ ಹೆಚ್ಚು ಅರ್ಥವನ್ನು ನೀಡುವ ಸಂದರ್ಭದಲ್ಲಿ ಕೆಲವು ಟಿಪ್ಪಣಿಗಳು ಪರ್ಯಾಯ ಅರ್ಥಗಳನ್ನು ನೀಡುತ್ತವೆ. ಈ ರೀತಿ ಆದಾಗ ಟಿಪ್ಪಣಿಗಳು ಹೆಚ್ಚು ಸೂಕ್ತವಾದ ಅರ್ಥವನ್ನು ಕೊಡುವ ಪದವನ್ನು ಬಳಸಲು ಸಲಹೆ ನೀಡುತ್ತದೆ.
  • ಸಂಭಾವ್ಯ ಮತ್ತು ಸಂಭವಿಸಬಹುದಾದ - ಅರ್ಥಗಳೊಂದಿಗಿರುವ ಟಿಪ್ಪಣಿಗಳು]ಕೆಲವೊಮ್ಮೆ ಸತ್ಯವೇದದ ವಿದ್ವಾಂಸರು ಸತ್ಯವೇದದಲ್ಲಿ ಬರುವ ವಾಕ್ಯಗಳ ಅರ್ಥದ ಬಗ್ಗೆ ನಿಖರವಾಗಿ ತಿಳಿಯದೆ ಅಥವಾ ಒಪ್ಪಿಕೊಳ್ಳಲು ನಿರಾಕರಿಸಬಹುದು. ಇದಕ್ಕೆ ಕೆಲವು ಉದಾಹರಣೆಗಳು : ಪುರಾತನ ಕಾಲದ ಸತ್ಯವೇದದ ವಾಕ್ಯಭಾಗಗಳಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳು ಇರಬಹುದು ಅಥವಾ ಒಂದು ಪದಕ್ಕೆ ಒಂದಕ್ಕಿಂತ ಹೆಚ್ಚು ಅರ್ಥ ಇರಬಹುದು ಅಥವಾ ಕೆಲವೊಮ್ಮೆ ಕೆಲವು ಪದಗಳು ನಿರ್ದಿಷ್ಟ ಪದ ಅಥವಾ ಪದಗುಚ್ಛಗಳ ಬಗ್ಗೆ ಹೇಳುವಾಗ ಸ್ಪಷ್ಟತೆ ಇಲ್ಲದೆ ಇರಬಹುದು (ಉದಾಹರಣೆಗೆ ಸರ್ವನಾಮಗಳು) ಇಂತಹ ಸಂದರ್ಭದಲ್ಲಿ ಟಿಪ್ಪಣಿಗಳು ಅತ್ಯಂತ ಹೆಚ್ಚು ಸಂಭಾವ್ಯ ಅರ್ಥವನ್ನು ಅಥವಾ ಕೆಲವು ಸಂಭವಿಸುವ ಅರ್ಥ ನೀಡುವ ಪದಕ್ಕೆ ಮೊದಲ ಆಧ್ಯತೆ ಇರುತ್ತದೆ.
  • ಅಲಂಕಾರಗಳನ್ನು ಗುರುತಿಸುವ ಟಿಪ್ಪಣಿಗಳು ULB ವಾಕ್ಯಭಾಗದಲ್ಲಿ ಅಲಂಕಾರ ಪದ ಇದ್ದರೆ, ಟಿಪ್ಪಣಿಯಲ್ಲಿನ ವಿವರಗಳು ಅಲಂಕಾರಗಳನ್ನು ಹೇಗೆ ಭಾಷಾಂತರಿಸಬೇಕು ಎಂಬ ವಿವರ ನೀಡುತ್ತದೆ. ಕೆಲವೊಮ್ಮೆ ಪರ್ಯಾಯಭಾಷಾಂತರ (AT:) ವನ್ನು ಒದಗಿಸಲಾಗುತ್ತದೆ.ಅಲಂಕಾರಗಳನ್ನು ಭಾಷಾಂತರಿಸಲು ಬೇಕಾದ ನಿಖರವಾದ ಅರ್ಥಕೊಡುವ ಪದಗಳನ್ನು ಬಳಸಲು ಭಾಷಾಂತರ ಗಳು ಮತ್ತು ಭಾಷಾಂತರ ಅಕಾಡೆಮಿಯ ಪುಟಗಳಲ್ಲಿ ಇರುವ ಹೆಚ್ಚುವರಿ ಮಾಹಿತಿಗಳು ಸಹಾಯಮಾಡುತ್ತವೆ.
  • ಪರೋಕ್ಷ ಮತ್ತು ಅಪರೋಕ್ಷ ಮಾತುಗಳನ್ನು ಗುರುತಿಸುವ ಟಿಪ್ಪಣಿಗಳು -ಎರಡು ರೀತಿಯ ಗಳಿವೆ ಅವುಗಳಲ್ಲಿ ಒಂದು ಪರೋಕ್ಷ ಇನ್ನೊಂದು ಅಪರೋಕ್ಷ ವಾಕ್ಯಗಳು. ವಾಕ್ಯಗಳನ್ನು ಭಾಷಾಂತರಿಸುವಾಗ ಆ ವಾಕ್ಯಗಳನ್ನು ಪರೋಕ್ಷವಾಕ್ಯಗಳಾಗಿ ಭಾಷಾಂತರಿಸ ಬೇಕೆ ಇಲ್ಲವೆ ಅಪರೋಕ್ಷ ವಾಕ್ಯವಾಗಿ ಭಾಷಾಂತರಿಸ ಬೇಕೆ ಎಂಬುದನ್ನು ಮೊದಲು ನಿರ್ಧರಿಸಬೇಕು. ಈ ಟಿಪ್ಪಣಿಗಳು ಭಾಷಾಂತರಗಾರರನ್ನು ಯಾವ ರೀತಿಯ ಆಯ್ಕೆ ಮಾಡಬೇಕು ಎಂಬುದರ ಬಗ್ಗೆ ಎಚ್ಚರಿಕೆ ನೀಡುತ್ತವೆ.
  • ULBಯ ಉದ್ದುದ್ದ ಪದಗುಚ್ಛಗಳಿಗೆ ಟಿಪ್ಪಣಿಗಳು - ಕೆಲವೊಮ್ಮೆ ಈ ಟಿಪ್ಪಣಿಗಳು ಒಂದು ಪದಗುಚ್ಛ ಮತ್ತು ಕೆಲವೊಮ್ಮೆ ಅನೇಕ ಪದಗುಚ್ಛಗಳ ವಾಕ್ಯಭಾಗವನ್ನು ಉದ್ದೇಶಿಸಿಯೂ ಇರಬಹುದು. ಇಂತಹ ಸಂದರ್ಭದಲ್ಲಿ ಉದ್ದುದ್ದ ಇರುವ ವಾಕ್ಯಭಾಗಗಳಿಗೆ ಮೊದಲು ಮತ್ತು ನಂತರ ಚಿಕ್ಕ ಪದಗುಚ್ಛಗಳಿಗೆ ಟಿಪ್ಪಣಿಯ ಅವಕಾಶವನ್ನು ನೀಡಬೇಕು. ಈ ರೀತಿ ಟಿಪ್ಪಣಿಗಳು ಭಾಷಾಂತರ ಸಲಹೆಗಳನ್ನು ಅಥವಾ ಇಡೀ ವಾಕ್ಯಭಾಗಕ್ಕೆ ಅಥವಾ ಚಿಕ್ಕ ಚಿಕ್ಕ ಭಾಗಗಳಿಗೆ ಟಿಪ್ಪಣಿಗಳನ್ನು ನೀಡುತ್ತದೆ.