translationCore-Create-BCS_.../checking/vol2-steps/01.md

22 KiB

ಕ್ರಮಬದ್ಧ ಪರಿಶೀಲನೆಯ ಹಂತಗಳು

ಕ್ರಮಬದ್ಧ ಪರಿಶೀಲನೆಯ ಮಾಡುವಾಗ ಸಭೆಯ ಪ್ರತಿನಿಧಿಗಳು ಈ ಹಂತಗಳನ್ನು ಅನುಸರಿಸಬೇಕು. ಪರೀಕ್ಷಕನು, ಅನುವಾದಕನಿಗು ಅಥವ ಅನುವಾದ ತಂಡಕ್ಕು ನೇರ ಸಂಪರ್ಕ ಹೊಂದಿದ್ದಾನೆ ಎಂದು ಈ ಎಲ್ಲಾ ಹಂತಗಳು ಊಹಿಸುತ್ತದೆ, ಮತ್ತು ಆತನು ಮುಖಮುಖಿಯಾಗಿ ಪ್ರಶ್ನೆಗಳನ್ನು ಕೇಳಬಹುದು ಯಾಕಂದರೆ ಪರೀಕ್ಷಕ ಮತ್ತು ಅನುವಾದ ತಂಡವು ಒಟ್ಟಾಗಿ ಪರಿಶೀಲಿಸುತ್ತದೆ. ಇದು ಸಾಧ್ಯವಾಗದಿದ್ದರೆ, ಪರೀಕ್ಷಕನು ವಿಮರ್ಶೆಗಾಗಿ ಅನುವಾದ ತಂಡಕ್ಕೆ ಪ್ರಶ್ನೆಗಳನ್ನು ಬರೆಯಬಹುದು. ಇದು ಮುದ್ರಿತ ಅನುವಾದ ಕರಡು ಪ್ರತಿಯ ಅಂಚಿನಲ್ಲಿರಬಹುದು, ಅಥವಾ ಸ್ಪ್ರೆಡ್ ಶೀಟಲ್ಲಿರಬಹುದು ಅಥವಾ ಮೂಲ ಅನುವಾದದ ಹೇಳಿಕೆ ವೈಶಿಷ್ಟ್ಯವನ್ನು ಬಳಸಬಹುದು.

ಪರಿಶೀಲಿಸುವ ಮೊದಲು

1.ಯಾವ ಕಥೆಗಳನ್ನು ಅಥವಾ ಸತ್ಯವೇದದ ಯಾವ ಭಾಗವನ್ನು ಪರಿಶೀಲಿಸುತ್ತಿದ್ದಿರಿ ಎಂಬುವುದನ್ನು ಮೊದಲೇ ಕಂಡುಹಿಡಿಯಿರಿ. 1.ನಿಮಗೆ ಅರ್ಥವಾಗುವ ಯಾವುದೇ ಭಾಷೆಯಲ್ಲಿ ಮತ್ತು ಹಲವಾರು ಅವೃತ್ತಿಗಳಲ್ಲಿ ಈ ಭಾಗವನ್ನು ಓದಿರಿ, ಸಾಧ್ಯವಾದರೆ ಮೂಲ ಭಾಷೆಯಲ್ಲಿ ಓದಿರಿ. 1.ULT ಮತ್ತು UST ಯಲ್ಲಿ ಈ ಭಗವನ್ನು ಓದಿರಿ ಮತ್ತು ಟಿಪ್ಪಣಿಗಳು ಹಾಗು ಅನುವಾದ ಪದಗಳನ್ನು ಓದಿರಿ. 1.ಅನುವಾದಿಸಲು ಕಷ್ಟ ಎಂದು ನೀವು ಭಾವಿಸುವ ಯಾವುದೇ ಭಾಗಗಳನ್ನು ಗಮನಿಸಿ. 1.ಅನುವಾದದ ಸಹಾಯ ಮತ್ತು ವ್ಯಾಖ್ಯಾನಗಳಲ್ಲಿ ಈ ಭಾಗಗಳನ್ನು ಸಂಶೋಧಿಸಿ, ಮತ್ತು ನೀವು ಕಂಡುಹಿಡಿದ ವಿಷಯದ ಬಗ್ಗೆ ಟಿಪ್ಪಣಿ ಬರೆಯಿರಿ.

ಪರಿಶೀಲಿಸುವಾಗ

1.**ವಾಕ್ಯದ ಭಾಗವನ್ನು ಹೊಂದಿಸಿ **. ವಾಕ್ಯ ಭಾಗವನ್ನು ಹೊಂದಿಸಲು ಮೂಲ ಭಾಷೆಯೊಂದಿಗೆ ಮೂಲ ಅನುವಾದದಲ್ಲಿ ಸಾಲುಗೂಡಿಕೆ ಸಾಧನವನ್ನು ಬಳಸಿ. ಹೊಂದಾಣಿಕೆ ಪ್ರಕ್ರಿಯೆಯ ಪರಿಣಾವವಾಗಿ, ಅನುವಾದದ ಭಾಗಗಳ ಕುರಿತು ನಿಮ್ಮಲ್ಲಿ ಅನೇಕ ಪ್ರಶ್ನೆಗಳಿರುತ್ತದೆ. ಮೂಲ ಅನುವಾದದಲ್ಲಿ ವ್ಯಾಖ್ಯೆ ವೈಶಿಷ್ಟದೊಂದಿಗೆ ಇವುಗಳ ಟಿಪ್ಪಣಿ ಬರೆಯಿರಿ. ಇದರಿಂದ ನೀವು ಅನುವಾದ ತಂಡವನ್ನು ಭೇಟಿಯಾದಾಗ ಅವರನ್ನು ಕೇಳಬಹುದು , ಅಥವ ನೀವು ಭೇಟಿಯಾಗವ ಮೊದಲು ಅನುವಾದ ತಂಡದವರು ಅದನ್ನು ನೋಡಿ ಚರ್ಚಿಸಬಹುದು. ಸಾಲುಗೂಡಿಕೆಯ ಸಾಧನದ ಮಾಹಿತಿಗಾಗಿ,ಸಾಲುಗೂಡಿಕೆ ಸಾಧನವನ್ನುನೋಡಿರಿ. 1.ಪ್ರಶ್ನೆ ಕೇಳಿರಿ. ನೀವು ಅನುವಾದ ತಂಡದೊಂದಿಗೆ ಇರುವಾಗ ಮತ್ತು ಅನುವಾದದಲ್ಲಿ ಸಮಸ್ಯ ಇರಬಹುದೆಂದು ನೀವು ಭಾವಿಸುವ ಯಾವುದನ್ನಾದರೂ ಪರಿಹರಿಸಲು ನೀವು ಬಯಸಿದ್ದಾಗ, ಅನುವಾದದಲ್ಲಿ ಸಮಸ್ಯ ಇದೆ ಎಂದು ಅನುವದಕರಿಗೆ ಹೇಳಬೇಡಿರಿ. ನೀವು ಉದ್ದೇಶಿತ ಭಾಷೆಯನ್ನು ಮಾತನಾಡದಿದ್ದರೆ, ಸಮಸ್ಯೆ ಇದೆಯೋ ಇಲ್ಲವೋ ಎಂದು ನಿಮಗೆ ತಿಳಿಯುವುದಿಲ್ಲ. ಸಮಸ್ಯೆ ಇರಬಹುದೆಂದು ನೀವು ಮಾತ್ರ ಅನುಮಾನಿಸುತ್ತೀರಿ. ನೀವು ಉದ್ದೇಶಿತ ಭಾಷೆಯನ್ನು ಮಾತನಾಡುತ್ತಿದ್ದರೂ ಸಹ, ಏನಾದರು ತಪ್ಪಾಗಿದೆ ಎಂದು ಹೇಳಿಕೆ ನೀಡುವುದಕ್ಕಿಂತ ಪ್ರಶ್ನೆಯನ್ನು ಕೇಳುವುದು ಹೆಚ್ಚು ಸಭ್ಯವಾಗಿದೆ. ನೀವು ಅವರಿಗೆ “ಅದನ್ನು ಈ ರೀತಿ ಹೇಳುವುದರ ಬಗ್ಗೆ ನೀವು ಏನು ಯೋಚಿಸುತ್ತೀರಿ”? ಎಂದು ಕೇಳಬಹುದು, ನಂತರ ಅದನ್ನು ಅನುವಾದಿಸಲು ಪರ್ಯಾಯ ಮಾರ್ಗವನ್ನು ಸೂಚಿಸಿರಿ. ನಂತರ ಒಟ್ಟಿಗೆ ನೀವು ವಿಭಿನ್ನ ಅನುವಾದ ವಿಚಾರಗಳನ್ನು ಚರ್ಚಿಸಬಹುದು, ಮತ್ತು ಒಂದು ಅನುವಾದ ಪರ್ಯಾಯವು ಇನ್ನೊಂದಕ್ಕಿಂತ ಉತ್ತಮವೆಂದು ನೀವು ಭಾವಿಸುವ ಕಾರಣಗಳನ್ನು ನೀವು ನೀಡಬಹುದು. ನಂತರದಲ್ಲಿ, ಅನುವಾದ ತಂಡದವರು ಪರ್ಯಯಗಳನ್ನು ಅನುವಾದಗಳನ್ನು ಪರಿಗಣಿಸಿ ಯಾವುದು ಉತ್ತಮವೆಂದು ನಿರ್ಧರಿಸಬೇಕು. ಪ್ರಶ್ನೆಗಳನ್ನು ಕೇಳಲು ವಿಷಯಗಳಿಗಾಗಿ, ಮತ್ತು ಸತ್ಯವೇದ ಅನುವಾದವನ್ನು ಪರಿಶೀಲಿಸುವಾಗ, [ಪರಿಶೀಲಿಸಬೇಕದ ವಸ್ತುಗಳ ಪ್ರಕಾರಗಳು] (../vol2-things-to-check/01.md)ನೋಡಿ.

  1. ಉದ್ದೇಶಿತ ಭಾಷೆ ಮತ್ತು ಸಂಸ್ಕೃತಿಯನ್ನು ಶೋಧಿಸು. ನೀವು ಕೇಳುವ ಪ್ರಶ್ನೆಗಳು ಉದ್ದೇಶಿತ ಭಾಷೆಯಲ್ಲಿ ನುಡಿಗಟ್ಟಿನ ಅರ್ಥವನ್ನು ಕಂಡುಹಿಡಿಯುವುದು. ನುಡಿಗಟ್ಟು ಎಂದರೆನು ಮತ್ತು ಅದನ್ನು ಹೇಗೆ ಬಳಸಲಾಗುವುದು ಎಂಬುವುದರ ಕುರಿತು ಯೋಚಿಸಲು ಅನುವಾದಕರಿಗೆ ಸಹಾಯ ಮಾಡುವ ಪ್ರಶ್ನೆಗಳೆ ಉತ್ತಮ ಪ್ರಶ್ನೆಗಳಾಗಿವೆ. ಉಪಯುಕ್ತ ಪ್ರಶ್ನೆಗಳು,” ಈ ನಿಮ್ಮ ಭಾಷೆಯಲ್ಲಿ ಯಾವ ಸಂದರ್ಭಗಳಲ್ಲಿ ಬಳಸಲಾಗುತ್ತದೆ?” ಅಥವ “ಯಾರು ಸಾಮಾನ್ಯವಾಗಿ ಈ ರೀತಿಯ ವಿಷಯಗಳನ್ನು ಹೇಳುತ್ತಾರೆ, ಮತ್ತು ಏಕೆ ಹೇಳುತ್ತಾರೆ?” ಎಂಬುವುದು. ಸತ್ಯವೇದಲ್ಲಿರುವ ವ್ಯಕ್ತಿಯಂತೆ ಇರುವ ಹಳ್ಳಿಯ ವ್ಯಕ್ತಿಯೊಬ್ಬನು ಏನು ಹೇಳುತ್ತಾರೆಂದು ಯೋಚಿಸಲು ಅನುವಾದಕರಿಗೆ ಇದು ಉಪಯುಕ್ತವಾಗಿತ್ತು. 1.ಅನುವಾದಕರಿಗೆ ಕಲಿಸು. ಉದ್ದೇಶಿತ ಭಾಷೆ ಮತ್ತು ಸಂಸ್ಕೃತಿಯಲ್ಲಿನ ಒಂದು ನುಡುಗಟ್ಟಿನ ಅರ್ಥವನ್ನು ನೀವು ಶೋಧಿಸಿದ ನಂತರ, ಮೂಲ ಭಾಷೆ ಮತ್ತು ಸಂಸ್ಕೃತಿಯಲ್ಲಿ ಈ ಪದದ ಅರ್ಥವೇನೆಂದು ನೀವು ಅನುವಾದಕರಿಗೆ ಹೇಳಬಹುದು. ಅನುವದದಲ್ಲಿನ ನುಡಿಗಟ್ಟು ಅಥವಾ ಆತನು ಯೊಚಿಸಿದ ನುಡಿಗಟ್ಟು ಒಂದೇ ಅರ್ಥವನ್ನು ಹೊಂದಿದೆಯೆ ಅಥವ ಇಲ್ಲವೇ ಎಂಬುವುದನ್ನು ನೀವು ಒಟ್ಟಿಗೆ ನಿರ್ಧರಿಸಬಹುದು.

####ಅನುವಾದವನ್ನು ನೇರವಾಗಿ ಪರಿಶೀಲಿಸಲಾಗುತ್ತದೆ

ನೀವು ಉದ್ದೇಶಿತ ಭಾಷೆಯನ್ನು ಮಾತನಾಡುವವರಾಗಿದ್ದರೆ, ನೀವು ಅನುವಾದವನ್ನು ಕೇಳಬಹುದು ಅಥವ ಓದಬಹುದು ಮತ್ತು ಅದರ ಬಗ್ಗೆ ನೇರವಾಗಿ ಅನುವಾದ ತಂಡವನ್ನು ಕೇಳಬಹುದು.

ಲಿಖಿತವಾಗಿರುವ ಹಿಂದಿನ ಅನುವಾದವನ್ನು ಬಳಸುವುದು

ನೀವು ಉದ್ದೇಶಿತ ಭಾಷೆಯನ್ನು ಮಾತನಾಡದಿದ್ದರೆ, ನೀವು ಅದನ್ನು ಹೊಂದಿಸಲು ಸಾಧ್ಯವಾಗುವುದಿಲ್ಲ. ಆದರೆ ನೀವು ಗೇಟ್ ವೇ ಭಾಷೆಯನ್ನು ಮಾತನಾಡುವ ಸತ್ಯವೇದದ ವಿದ್ವಾಂಸರಾಗಿರಬಹುದು ಮತ್ತು ಅನುವಾದ ತಂಡಕ್ಕೆ ಅನುವಾದವನ್ನು ಸುಧಾರಿಸಲು ನೀವು ಸಹಾಯ ಮಾಡಬಹುದು. ಅಂತಹ ಸಂದರ್ಭದಲ್ಲಿ, ನೀವು ಗೇಟ್ ವೇ ಭಾಷೆಯಲ್ಲಿ ಹಿಂದಿನ ಅನುವಾದದಿಂದ ಕೆಲಸ ಮಾಡಬೇಕಾಗುತ್ತದೆ. ಇದನ್ನು ಅನುವಾದದಿಂದ ಪ್ರತ್ಯೇಕವಾಗಿ ಬರೆಯಬಹುದು, ಅಥವಾ ಇದನ್ನು ಸಾಲುಗಳ ನಡುವೆ ಬರೆಯಬಹುದು, ಅಂದರೆ, ಅನುವಾದದ ಪ್ರತಿಯೊಂದು ಸಾಲಿನ ಅಡಿಯಲ್ಲಿ ಹಿಂದಿನ ಅನುವಾದದ ರೇಖೆಯೊಂದಿಗೆ ಬರಯಬಹುದು. ಸಾಲುಗಳ ನಡುವೆ ಬರೆಯುವಾಗ ಅನುವಾದವನ್ನು ಹಿಂದಿನ ಅನುವಾದೊಂದಿಗೆ ಹೋಲಿಸುವುದು ಸುಲಭ, ಮತ್ತು ಪ್ರತ್ಯೇಕವಾಗಿ ಬರೆಯಲಾದ ಹಿಂದಿನ ಅನುವಾದವನ್ನು ಓದುವುದು ಸುಲಭ. ಪ್ರತಿಯೊಂದು ವಿಧಾನವು ತನ್ನದೇ ಆದ ಶಕ್ತಿಯನ್ನು ಹೊಂದಿದೆ. ಹಿಂದಿನ ಅನುವಾದವನ್ನು ಮಾಡುವ ವ್ಯಕ್ತಿಯು ಅನುವಾದವನ್ನು ಮಾಡುವಲ್ಲಿ ಭಾಗಿಯಾಗದ ವ್ಯಕ್ತಿಯಾಗಿರಬೇಕು. ಹೆಚ್ಚಿನ ವಿವರಗಳಿಗಾಗಿ ಹಿಂದಿನ ಅನುವಾದ ನೋಡಿರಿ.

1.ಸಾಧ್ಯವಾದರೆ, ಅನುವಾದನನ್ನು ಅಥವ ಅನುವಾದ ತಂಡವನ್ನು ಮುಖಮುಖಿಯಾಗಿ ಭೇಟಿಯಾಗುವ ಮೊದಲು ಹಿಂದಿನ ಅನುವಾದವನ್ನು ಲಿಖಿತಿ ರೂಪದಲ್ಲಿ ಪರಿಶೀಲಿಸಿ. ವಾಕ್ಯ ಭಾಗದ ಬಗ್ಗೆ ಪರಿಶೀಲಿಸಲು ಮತ್ತು ಹಿಂದಿನ ಅನುವಾದದ ಹೇಳಿಕೆಯ ಕಾರಣದಿಂದ ಉದ್ಭವಿಸುವ ಪ್ರಶ್ನೆಗಳ ಕುರಿತು ಹೆಚ್ಚಿನ ಸಂಶೋಧನೆ ಮಾಡಲು ಇದು ನಿಮಗೆ ಸಮಯವನ್ನು ನೀಡುತ್ತದೆ. ನೀವು ಅನುವಾದ ತಂಡದೊಂದಿಗೆ ಭೇಟಿಯಾಗುವಾಗ ಇದು ಸಾಕಷ್ಟು ಸಮಯವನ್ನು ಉಳಿಸುತ್ತದೆ, ಏಕೆಂದರೆ ಹಿಂದಿನ ಅನುವಾದದ ಲಿಖಿತ ರೂಪವನ್ನು ಪರಿಶೀಲಿಸಿದ ಕಾರಣ ನೀವು ಎಲ್ಲಾವನ್ನು ಮಾತನಾಡುವ ಅಗತ್ಯವಿರುವುದಿಲ್ಲ. ನೀವು ಒಟ್ಟಿಗೆ ಭೇಟಿಯಾದಾಗ, ನೀವು ಇನ್ನೂ ಉತ್ತಮವಾಗಿ ಮಾಡಲು ಶಕ್ತರಾಗುತ್ತೀರಿ ಏಕೆಂದರೆ ಸಮಸ್ಯೆಗಳ ವಿಷಯದಲ್ಲಿ ನೀವು ಹೆಚ್ಚಿನ ಸಮಯವನ್ನು ಕಳೆಯಬಹುದು. 1.ಹಿಂದಿನ ಅನುವಾದದ ಮೂಲಕ ನೀವು ಕೆಲಸಮಾಡುವಾಗ, ನೀವು ಅನುವಾದಕನಿಗೆ ಕೇಳಲು ಬಯಸುವ ಪ್ರಶ್ನೆಗಳ ಟಿಪ್ಪಣಿಗಳನ್ನು ಮಾಡಿ. ಸಂಭವನೀಯ ಸಮಸ್ಯೆಗಳ ಬಗ್ಗೆ ಯೋಚಿಸಲು ಅಥವಾ ಅದರ ಸ್ಪಷ್ಟಿಕರಣಕ್ಕಾಗಿ ಇದು ಸಹಾಯಕಾರಿಯಾಗುತ್ತದೆ. 1.ಅನುವಾದಕನಿಗೆ ಅನುವಾದದ ನಕಲನ್ನು ಕೇಳಿ, ಇದರಿಂದ ನೀವು ಅನುವಾದವನ್ನು ಹಿಂದಿನ ಅನುವದದೊಂದಿಗೆ ಹೋಲಿಸಬಹುದು ಮತ್ತು ಉದ್ದೇಶಿತ ಭಾಷೆಗಳು ಬಳಸುವ ಕನೆಕ್ಟರ್ಸ್ ಮತ್ತು ಹಿಂದಿನ ಅನುವಾದದಲ್ಲಿ ಗೋಚರಿಸಿದ ಇತರ ವೈಶಿಷ್ಟ್ಯಗಳನ್ನು ಗಮನಿಸಿ. ಅನುವಾದವನ್ನು ನೋಡುವುದರಿಂದ, ಹಿಂದಿನ ಅನುವಾದವು ಅನುವಾದವನ್ನು ನಿಖರವಾಗಿ ಪ್ರತಿನಿಧಿಸದ ಸ್ಥಳಗಳನ್ನು ಗುರುತಿಸಲು ಸಹಾಯ ಮಾಡುತ್ತದೆ ಉದಾಹರಣೆಗೆ ಅನುವಾದದಲ್ಲಿ ಬಳಸುವ ಅದೇ ಪದಗಳು, ಆದರೆ ಹಿಂದಿನ ಅನುವಾದದಲ್ಲಿ ಅವು ವಿಭಿನ್ನವಾಗಿರುತ್ತದೆ. ಈ ಸಂದರ್ಭದಲ್ಲಿ, ಹಿಂದಿನ ಅನುವಾದ ಏಕೆ ವಿಭಿನ್ನವಾಗಿದೆ ಮತ್ತು ಅದನ್ನು ಸರಿಪಡಿಸಬೇಕಾಗಿದೆಯೆ ಎಂದು ಅನುವಾದಕನಿಗೆ ಕೇಳುವುದು ಒಳ್ಳೆಯದು.

ಅನುವಾದಕರೊಂದಿಗೆ ಭೇಟಿಯಾಗುವ ಮೊದಲು ಹಿಂದಿನ ಅನುವಾದವನ್ನು ಪರಿಶೀಲಿಸಲು ನಿಮಗೆ ಸಾಧ್ಯವಾಗದಿದ್ದರೆ, ನೀವು ಒಟ್ಟಿಗೆ ಕೆಲಸಮಾಡುವಾಗ ಪ್ರಶ್ನೆಗಳು ಮತ್ತು ಸಮಸ್ಯೆಗಳ ಕುರಿತು ಚರ್ಚಿಸಿರಿ ನಂತರ ನೀವು ಅನುವಾದಕರೊಂದಿಕೆ ಕೆಲಸ ಮಾಡಿರಿ. ಆಗಾಗ್ಗೆ ಅನುವಾದವನ್ನು ಹಿಂದಿನ ಅನುವಾದಕ್ಕೆ ಹೋಲಿಸುವಾಗ ಅನುವಾದಕನು ಅನುವಾದದ ಸಮಸ್ಯೆಗಳನ್ನು ಸಹ ಕಂಡುಕೊಳ್ಳುತ್ತಾನೆ.

ಮೌಖಿಕ ಹಿಂದಿನ ಅನುವಾದವನ್ನು ಬಳಸುವುದು

ಯಾವುದೇ ಹಿಂದಿನ ಲಿಖಿತ ಅನುವಾದವಿಲ್ಲದಿದ್ದರೆ, ಉದ್ದೇಶಿತ ಭಾಷೆಯನ್ನು ತಿಳಿದಿರುವ ಹಾಗೆಯೇ ನೀವು ಅರ್ಥಮಾಡಿಕೊಳ್ಳುವ ಭಾಷೆಯಲ್ಲಿ ನಿಮಗಾಗಿ ಮೌಖಿಕವಾಗಿ ಹಿಂದಿನ ಅನುವಾದ ಮಾಡುವ ಹಾಗೆ ಯಾರನ್ನಾದರು ನಿಮ್ಮೊಂದಿಗೆ ಇಟ್ಟುಕೊಳ್ಳಿ. ಆ ವ್ಯಕ್ತಿಯು ಅನುವಾದ ಕಾರ್ಯದಲ್ಲಿ ಭಾಗಿಯಾಗದವನಾಗಿರಬೇಕು. ನೀವು ಮೌಖಿಕ ಹಿಂದಿನ ಅನುವಾದವನ್ನು ಕೇಳುತ್ತಿರುವಾಗ ತಪ್ಪಾದ ಅರ್ಥವನ್ನು ತಿಳಿಸುವ ಪದಗಳನ್ನು ಮತ್ತು ನಡುಗಟ್ಟುಗಳ ಟಿಪ್ಪಣಿ ಮಾಡಿ. ವ್ಯಕ್ತಿಯು ವಾಕ್ಯ ಭಾಗವನ್ನು ಸಣ್ಣ ಭಾಗಗಳಲ್ಲಿ ಭಾಷಾಂತರಿಸಬೇಕು, ಪ್ರತಿ ವಿಭಾಗಗಳ ನಡುವೆ ವಿರಾಮವಿರಬೇಕು .ಹೀಗೆ ನೀವು ಎಲ್ಲಾ ವಿಭಾಗವನ್ನು ಕೇಳಿದ ನಂತರ ಪ್ರಶ್ನೆಗಳನ್ನು ಕೇಳಬಹುದು.

ಪರಿಶೀಲನೆಯ ನಂತರ

ಪರಿಶೀಲನಾ ಅಧಿವೇಶನದ ನಂತರ ಕೆಲವು ಪ್ರಶ್ನೆಗಳನ್ನು ನಂತರಕ್ಕೆ ನಿಗದಿಪಡಿಸಬೇಕಾಗುತ್ತದೆ. ಈ ಪ್ರಶ್ನೆಗಳ ಉತ್ತರವನ್ನು ಚರ್ಚಿಸಲು ಮತ್ತೇ ಭೇಟಿಯಾಗಲು ಸಮಯವನ್ನು ಯೋಜಿಸಲು ಮರೆಯದಿರಿ. ಅವುಗಳು :

1.ನೀವು ಅಥವಾ ಬೇರೊಬ್ಬರು ಸಂಶೋಧನೆ ಮಾಡಬೇಕಾದ ಪ್ರಶ್ನೆಗಳು, ಸಾಮಾನ್ಯವಾಗಿ ನೀವು ಕಂಡುಹಿಡಿಯಬೇಕಾದ ಸತ್ಯವೇದದ ಪಠ್ಯ, ಸತ್ಯವಾದದ ಪದಗಳು ಅಥವ ನುಡಿಗಟ್ಟಿನ ಅರ್ಥಗಳು, ಅಥವಾ ಸತ್ಯವೇದದ ಜನರ ನಡುವಿನ ಸಂಬಂಧ ಅಥವಾ ಸತ್ಯವೇದದ ಸ್ಥಳಗಳ ಸ್ವರೂಪ. 1.ಉದ್ದೇಶಿತ ಭಾಷೆಯ ಇತರ ಭಾಷಿಕರನ್ನು ಕೇಳುವ ಪ್ರಶ್ನೆಗಳು. ಕೆಲವು ನುಡಿಗಟ್ಟುಗಳು ಸರಿಯಾಗಿ ಸಂಪರ್ಕ ನಡೆಸುತ್ತಿದೆಯೆ ಅಥವಾ ಉದ್ದೇಶಿತ ಭಾಷೆಯಲ್ಲಿ ಕೆಲವು ಪದಗಳ ಸಾಂಸ್ಕೃತಿಕ ಹಿನ್ನಲೆಯನ್ನು ಸಂಶೋಧಿಸಲು ಇದು ಅಗತ್ಯವಾಗಿದೆ. ಇವುಗಳು ಅನುವಾದ ತಂಡವು ಜನರು ತಮ್ಮ ಸಮುದಾಯಕ್ಕ ಹಿಂತಿರುಗಿದಾಗ ಅವರು ಕೇಳಬೇಕಾದ ಪ್ರಶ್ನೆಗಳಾಗಿವೆ

###ಪ್ರಮುಖ ಪದಗಳು

ಅನುವಾದ ತಂಡವು ಅನುವಾದಿಸುತ್ತಿರುವ ಸತ್ಯವೇದ ಭಾಗದಿಂದ ಪ್ರಮುಖ ಪದಗಳ ಪಟ್ಟಿಯನ್ನು (ಅನುವಾದ ಪದಗಳೆಂದು ಪರಿಗಣಿಸುವ ಪ್ರಮುಖ ಪದಗಳು) ಮತ್ತು ಪ್ರತಿಯೊಂದು ಪ್ರಮುಖ ಪದಗಳಿಗೆ ಬಳಸಲು ಅವರು ನಿರ್ಧರಿಸಿದ ಉದ್ದೇಶಿತ ಭಾಷೆಯಲ್ಲಿನ ಪದಗಳನ್ನು ಇಟ್ಟುಕೊಂಡಿದೆಯೆ ಎಂದು ಖಚಿತಪಡಿಸಿಕೊಳ್ಳಿ. ನೀವು ಮತ್ತು ಅನುವಾದ ತಂಡವು ಸತ್ಯವೇದ ಅನುವಾದ ಮುಂದುವರಿಸುವಾಗ, ಬಹುಶಃ ಉದ್ದೇಶಿತ ಭಾಷೆಯ ಪದಗಳನ್ನು ಮಾರ್ಪಡಿಸಿ ಪಟ್ಟಿಗೆ ಸೇರಿಸಬೇಕಾಗಬಹುದು. ನೀವು ಭಾಷಾಂತರಿಸುವ ವಾಕ್ಯ ಭಾಗದಲ್ಲಿ ಪ್ರಮುಖ ಪದಗಳಿದ್ದಾಗ ನಿಮ್ಮನ್ನು ಎಚ್ಚರಿಸಲು ಪ್ರಮುಖ ಪದಗಳ ಪಟ್ಟಿಯನ್ನು ಬಳಸಿ. ಸತ್ಯವೇದದಲ್ಲಿ ಪ್ರಮುಖ ಪದಗಳು ಇದ್ದಾಗೆಲ್ಲಾ, ಅನುವಾದವು ಆ ಪ್ರಮುಖ ಪದಕ್ಕಾಗಿ ಆಯ್ಕೆ ಮಾಡಲಾದ ಪದಗಳನ್ನು ಬಳಸುತ್ತಿದೆಯೆ ಎಂದು ಖಚಿತಪಡಿಸಿಕೊಳ್ಳಿ. ಪ್ರತಿ ಬಾರಿಯೂ ಅದು ಅರ್ಥಪೂರ್ಣವಾಗಿದೆಯೆ ಎಂದು ಖಚಿತಪಡಿಸಿಕೊಳ್ಳಿ. ಒಂದು ವೇಳೆ ಅದು ಅರ್ಥಪೂರ್ಣವಾಗದಿದ್ದರೆ, ಕೆಲವು ಸ್ಥಳಗಳಲ್ಲಿ ಮಾತ್ರ ಅದು ಏಕೆ ಅರ್ಥಪೂರ್ಣವಾಗಿದೆ ಎಂದು ನೀವು ಚರ್ಚಿಸಬೇಕಾಗುತ್ತದೆ. ಆಗ ನೀವು ಆಯ್ಕೆ ಮಾಡಿದ ಪದಗಳನ್ನು ಅಥವ ಬದಲಾಯಿಸಬೇಕಾಗಬಹುದು, ಅಥವ ಪ್ರಮುಖ ಪದಗಳು ಬಳಸುವ ವಿಭಿನ್ನ ವಿಧಾನಗಳಿಗೆ ಹೊಂದುಕೊಳ್ಳಲು ಉದ್ದೇಶಿತ ಭಾಷೆಯಲ್ಲಿ ಒಂದಕ್ಕಿಂತ ಹೆಚ್ಚು ಪದಗಳನ್ನು ಬಳಸಲು ನಿರ್ಧರಿಸಬಹುದು. ಇದನ್ನು ಮಾಡಲು ಒಂದು ಉಪಯುಕ್ತ ಮಾರ್ಗವೆಂದರೆ ಸ್ಪ್ರೆಡ್ ಶೀಟಲ್ಲಿ ಪ್ರತಿಯೊಂದು ಪ್ರಮುಖ ಪದವನ್ನು ಟ್ರ್ಯಾಕ್ ಮಾಡುವುದು, ಮೂಲ ಭಾಷೆಯ ಪದ, ಉದ್ದೇಶಿತ ಭಾಷೆಯ, ಪರ್ಯಾಯ ಪದ ಮತ್ತು ಸತ್ಯವೇದದ ಭಾಗದಲ್ಲಿ ನೀವು ಬಳಸುವ ಪ್ರತಿ ಪದ. ಈ ಅನುವಾದ ಸ್ಟುಡಿಯೋದ ಮುಂದಿನ ಆವೃತಿಗಳಲ್ಲಿರುತ್ತದೆ ಎಂದು ಭಾವಿಸುತ್ತೇವೆ.

ನೀವು ಸತ್ಯವೇದ ಕ್ರಮಬದ್ಧ ಪರಿಶೀಲನೆಯ ಪೂರ್ಣಗೊಳಿಸಿದಾಗ, ಪ್ರಶ್ನೆಗೆ ಉತ್ತರಿಸಿ: ಕ್ರಮಬದ್ಧ ಪರಿಶೀಲನೆಯ ಪ್ರಶ್ನೆಗಳು.