translationCore-Create-BCS_.../checking/vol2-things-to-check/01.md

6.7 KiB
Raw Permalink Blame History

ಪರಿಶೀಲಿಸಬೇಕಾದ ವಿಷಯಗಳು

1.ನಿಮಗೆ ಸರಿ ತೋರದ ವಿಷಯದ ಬಗ್ಗೆ ನೀವು ಕೇಳಬಹುದು, ಆಗ ಅನುವಾದದ ತಂಡದವರು ಅದನ್ನು ವಿವರಿಸುತ್ತಾರೆ. ಅವರಿಗು ಸಹ ಅದು ಸರಿ ತೋರದಿದ್ದರೆ, ಅವರು ಅನುವಾದವನ್ನು ಸರಿಪಡಿಸಬಹುದು. ಸಾಮಾನ್ಯವಾಗಿ:

  1. ಮೂಲ ಪಠ್ಯದ ಅರ್ಥದ ಭಾಗವಾಗಿರದ, ಸೇರಿಸಿದಂತೆ ಕಂಡುಬರುವ ಯಾವುದಾದರು ಇದ್ದಲ್ಲಿ ಅದನ್ನು ಪರಿಶೀಲಿಸಿರಿ. (ನೆನಪಿಡಿ, ಮೂಲ ಅರ್ಥವು [ಸೂಚ್ಯ ಮಾಹಿತಿಯನ್ನು] ಒಳಗೊಂಡಿದೆ(../../translate/figs-explicit/01.md).) 1.ಮೂಲ ಪಠ್ಯದ ಅರ್ಥದ ಭಾಗವಾಗಿದ್ದು ಅದು ಅನುವದದಲ್ಲಿ ಸೇರಿಸಲಾಗದೆ ಬಿಟ್ಟುಹೋಗುವ ಕಂಡುಬರುವ ಯಾವುದನ್ನು ಪರಿಶೀಲಿಸಿರಿ . 1.ಮೂಲ ಪಠ್ಯದ ಅರ್ಥಕ್ಕಿಂತ ಭಿನ್ನವಾಗಿ ಕಂಡುಬರುವ ಯಾವುದೇ ಅರ್ಥವಿದ್ದರೂ ಅದನ್ನು ಪರಿಶೀಲಿಸಿರಿ.

1.ಈ ವಾಕ್ಯಭಾಗದ ಮುಖ್ಯ ಅಂಶ ಅಥವ ವಿಷಯ ಸ್ಪಷ್ಟವಾಗಿದೆ ಎಂದು ಖಚಿತಪಡಿಸಕೊಳ್ಳಲು ಪರಿಶೀಲಿಸಿ. ಈ ವಾಕ್ಯಭಾಗದ ಏನು ಹೇಳುತ್ತದೆ ಎಂಬುವುದನ್ನು ಸಂಕ್ಷಿಪ್ತವಾಗಿ ಹೇಳಲು ಅನುವಾದ ತಂಡವನ್ನು ಕೇಳಿರಿ. ಅವರು ಚಿಕ್ಕ ವಿಷಯವನ್ನು ಪ್ರಾಧಾನವಾಗಿ ಆರಿಸಿದರೆ, ಅವರು ಈ ಭಾಗವನ್ನು ಅನುವಾದಿಸಿದ ರೀತಿಯನ್ನು ಸರಿಪಡಿಸಬೇಕಾಗಬಹುದು. 1.ವಾಕ್ಯಭಾಗದ ವಿವಿಧ ಭಾಗಗಳು ಸರಿಯಾದ ರೀತಿಯಲ್ಲಿ ಸಂಬಂಧ ಕಲ್ಪಿಸುತ್ತದೆಯೇ ಎಂದು ಪರಿಶೀಲಿಸಿರಿ. ಕಾರಣಗಳು, ಸೇರ್ಪಡೆಗಳು, ಫಲಿತಾಂಶಗಳು, ಸಮಾಪ್ತಿ, ಇತ್ಯಾದಿ, ಉದ್ದೇಶಿತ ಭಾಷೆಯಲ್ಲಿ ಸತ್ಯವೇದದ ಭಾಗವು ಸರಿಯಾದ ಸಂಪರ್ಕದಿಂದ ಗುರುತಿಸಲಾಗಿದೆಯೋ ಎಂದು ಗಮನಿಸಿ. 1.ಕೊನೆಯ ವಿಭಾಗದಲ್ಲಿ ವಿವರಿಸಿದಂತೆ ಅನುವಾದ ಪದಗಳ ಸ್ಥಿರತೆಗಾಗಿ ಪರಿಶೀಲಿಸಿ ನ್ಯಾಯಸಮ್ಮತಗೊಳಿಸುವಿಕೆಯ ಪರಿಶೀಲನೆಯ ಹಂತಗಳು. ಪ್ರತಿ ಪದವನ್ನು ಆ ಸಂಸ್ಕೃತಿಯಲ್ಲಿ ಹೇಗೆ ಬಳಸಲಾಗುತ್ತದೆ ಎಂದು ಕೇಳಿರಿ - ಯಾರು ಈ ಪದಗಳನ್ನು ಉಪಯೋಗಿಸುತ್ತಾರೆ, ಮತ್ತು ಯಾವ ಸಂದರ್ಭದಲ್ಲಿ ಎಂದು ನೋಡಿರಿ ಇನ್ನು ಇತರ ಯಾವ ಪದಗಳು ಹೋಲುತ್ತದೆ ಮತ್ತು ಒಂದೇ ರೀತಿಯ ಪದಗಳ ನಡುವಿನ ವ್ಯತ್ಯಾಸವೇನು ಎಂದು ಕೇಳಿರಿ. ಕೆಲವು ಪದಗಳು ಅನಗತ್ಯ ಅರ್ಥಗಳನ್ನು ಹೊಂದಿರಬಹುದೇ, ಯಾವ ಪದ ಉತ್ತಮವಾಗಿರಬಹುದು ಅಥವ ಬೇರೆ ಪದಗಳನ್ನು ಬೇರೆ ಸಂದರ್ಭಗಳಲ್ಲಿ ಬಳಿಸಬಹುದೆ ಎಂದು ನೋಡಲು ಇದು ಅನುವಾದಕರಿಗೆ ಸಹಾಯ ಮಾಡುತ್ತದೆ 1.ಅಲಂಕಾರಗಳನ್ನು ಪರಿಶೀಲಿಸಿ. ಸತ್ಯವೇದದಲ್ಲಿ ಅಲಂಕಾರಗಳು ಎಲ್ಲಿವೆ, ಇದನ್ನು ಅನುವಾದಿಸಿದ ರೀತಿಯನ್ನು ನೋಡಿರಿ ಮತ್ತು ಅದು ಒಂದೇ ಅರ್ಥವನ್ನು ಸಂಪರ್ಕಿಸುತ್ತದೆಯೆ ಎಂದು ಖಚಿತಪಡಿಸಿಕೊಳ್ಳಿ. 1.ಪ್ರೀತಿ, ಕ್ಷಮೆ, ಸಂತೋಷ ಮುಂತಾದ ಅಮೂರ್ತ ವಿಚಾರಗಳನ್ನು ಹೇಗೆ ಅನುವಾದಿಸಲಾಗಿದೆ ಎಂದು ಪರಿಶೀಲಿಸಿರಿ. ಇವುಗಳಲ್ಲಿ ಹಲವು ಪ್ರಮುಖ ಪದಗಳಿವೆ. 1.ಉದ್ದೇಶಿತ ಸಂಸ್ಕೃತಿಯವರು ಅರಿಯದ ವಿಷಯಗಳ ಅಥವ ಅಭ್ಯಾಸಗಳ ಅನುವಾದವನ್ನು ಪರಿಶೀಲಿಸಿರಿ. ಅನುವಾದ ತಂಡಕ್ಕೆ ಈ ಚಿತ್ರವನ್ನು ತೋರಿಸುವುದು ಮತ್ತು ಅವುಗಳನ್ನು ವಿವರಿಸುವುದು ಬಹಳ ಸಹಾಯಕವಾಗಿದೆ. 1.ಆತ್ಮ ಪ್ರಪಂಚದ ಬಗ್ಗೆ ಮತ್ತು ಉದ್ದೇಶಿತ ಸಂಸ್ಕೃತಿಯಲ್ಲಿ ಅವುಗಳನ್ನು ಹೇಗೆ ಅರ್ಥೈಸಲಾಗುತ್ತದೆ ಎಂಬುವುದರ ಬಗ್ಗೆ ಚರ್ಚಿಸಿರಿ. ಅನುವಾದದಲ್ಲಿ ಬಳಸಲಾದವುಗಳು ಸರಿಯಾದ ವಿಷಯವನ್ನು ಸಂಪರ್ಕಿಸುತ್ತದೆಯೆ ಎಂದು ಖಚಿತಪಡಿಸಿಕೊಳ್ಳಿ 1.ಅರ್ಥಮಾಡಿಕೊಳ್ಳಲು ಅಥವ ಅನುವಾದಿಸಲು ಬಹಳ ಕಷ್ಟವೆಂದು ನೀವು ಭಾವಿಸಿದ ಭಾಗವನ್ನು ಪರಿಶೀಲಿಸಿರಿ

ಈ ಎಲ್ಲಾ ವಿಷಯಗಳನ್ನು ಪರಿಶೀಲಿಸಿದ ನಂತರ ಮತ್ತು ತಿದ್ದುಪಡಿಗಳನ್ನು ಮಾಡಿದ ನಂತರ, ಎಲ್ಲಾ ಸಹಜ ರೀತಿಯಲ್ಲಿದೆ ಮತ್ತು ಸರಿಯಾದ ಸಂಬಂಧ ಕಲ್ಪಿಸಿದೆ ಎಂದು ಖಚಿತಪಡಿಸಲು ಅನುವಾದ ತಂಡವು ಪರಸ್ಪರ ಅಥವಾ ಸಮುದಾಯದ ಇತರ ಸದ್ಯಸರಿಗೆ ಆ ಭಾಗವನ್ನು ಜೋರಾಗಿ ಓದಲು ಹೇಳಲಿ. ತಿದ್ದುಪಡಿಗಳು ಅಸ್ವಾಭಾವಿಕ ವ್ಯತ್ಯಾಸಗಳನ್ನು ಉಂಟುಮಾಡಿದರೆ, ಅವರು ಅನುವಾದಕ್ಕೆ ಹೆಚ್ಚುವರಿ ಹೊಂದಾಣಿಕೆ ಮಾಡುವ ವರೆಗೂ ಅದನ್ನು ಸರಿಪಡಿಸಬೇಕಾಗುತ್ತದೆ.