translationCore-Create-BCS_.../checking/vol2-backtranslation/01.md

2.5 KiB

ಹಿಂದಿನ ಅನುವಾದ ಎಂದರೇನು?

ಹಿಂದಿನ ಅನುವಾದವು ಸ್ಥಳಿಯ ಉದ್ದೇಶಿತ ಭಾಷೆಯಿಂದ (OL) ಸತ್ಯವೇದದ ಪಠ್ಯವನ್ನು ವಿಶಾಲವಾಗಿ ತಿಳಿಸುವ ಭಾಷೆಗೆ (GL) ಅನುವಾದಿಸುವುದು. ಇದನ್ನು “ಹಿಂದಿನ ಅನುವಾದ” ಎಂದು ಕರೆಯಲಾಗುತ್ತದೆ ಏಕೆಂದರೆ ಇದು ಸ್ಥಳಿಯ ಉದ್ದೇಶಿತ ಭಾಷಾ ಅನುವಾದವನ್ನು ರಚಿಸಲು ಮಾಡಿದ್ದಕ್ಕಿಂತ ವಿರುದ್ಧ ದಿಕ್ಕಿನಲ್ಲಿರುವ ಅನುವಾದವಾಗಿದೆ. ಉದ್ದೇಶಿತ ಭಾಷೆ ಮಾತನಾಡದ ಯಾರಿಗಾದರು ಉದ್ದೇಶ ಭಾಷ ಅನುವಾದ ಏನೆಂದು ತಿಳಿಯಲು ಅವಕಶ ನೀಡುವುದೇ ಹಿಂದಿನ ಅನುವಾದದ ಉದ್ದೆಶವಾಗಿದೆ.

ಹಿಂದಿನ ಅನುವಾದವನ್ನು ಸಂಪೂರ್ಣವಾಗಿ ಸಾಮಾನ್ಯ ಶೈಲಿಯಲ್ಲಿ ಮಾಡಲಾಗುವುದಿಲ್ಲ, ಆದಾಗ್ಯೂ, ಏಕೆಂದರೆ ಇದು ಅನುವಾದದ ಭಾಷೆಯಲ್ಲಿ ಸ್ವಭಾವಿಕತೆಯನ್ನು ಉದ್ದೇಶವಾಗಿ ಹೊಂದಿಲ್ಲ (ಈ ಸಂದರ್ಭದಲ್ಲಿ ಇದು ವಿಶಾಲವಾಗಿ ತಿಳಿಸುವ ಭಾಷೆಯಾಗಿದೆ). ಬದಲಾಗಿ, ಸ್ಥಳಿಯ ಭಾಷಾಂತರದ ಪದಗಳನ್ನು ಮತ್ತು ಅಭಿವ್ಯಕ್ತಿಯನ್ನು ಅಕ್ಷರಶಃ ರೀತಿಯಲ್ಲಿ ಪ್ರತಿನಿಧಿಸುವುಸು ಹಿಂದಿನ ಅನುವಾದದ ಗುರಿಯಾಗಿದೆ , ಆದರೆ ವ್ಯಾಪಕ ಸಂಪರ್ಕದ ಭಾಷೆಯ ವ್ಯಾಕರಣ ಮತ್ತು ಪದ ಕ್ರಮವನ್ನು ಸಹ ಬಳಸುತ್ತದೆ. ಈ ರೀತಿಯಾಗಿ, ಅನುವಾದ ಪರೀಕ್ಷಕನು ಉದ್ದೇಶಿತ ಭಾಷೆಯ ಪಠ್ಯದಲ್ಲಿನ ಪದಗಳನ್ನು ಸ್ಪಷ್ಟವಾಗಿ ನೋಡಬಹುದು ಮತ್ತು ಹಿಂದಿನ ಅನುವಾದವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು ಮತ್ತು ಅದನ್ನು ವೇಗವಾಗಿ ಹಾಗು ಸುಲಭವಾಗಿ ಓದಬಹುದು.