translationCore-Create-BCS_.../translate/translate-numbers/01.md

89 lines
13 KiB
Markdown
Raw Normal View History

2020-08-03 14:01:15 +00:00
### ವಿವರಣೆಗಳು.
2020-08-03 14:01:15 +00:00
ಸತ್ಯವೇದದಲ್ಲಿ ಅನೇಕ ಸಂಖ್ಯೆಗಳು ಇವೆ. ಅವುಗಳನ್ನು ಅಕ್ಷರಗಳಲ್ಲಿ ಬರೆಯಬಹುದು. ಉದಾಃ- "ಐದು" ಅಥವಾ "5." ಎಂದೂ ಬರೆಯಬಹುದು. ಕೆಲವು ಸಂಖ್ಯೆಗಳು ತುಂಬಾ ದೊಡ್ಡದಾಗಿದ್ದು ಉದ್ದಕ್ಕೆ ಬರೆಯುತ್ತಾ ಹೋಗಬೇಕಾಗುತ್ತದೆ. ಉದಾಃ "ಇನ್ನೂರು" (200), " ಇಪ್ಪತ್ತೆರಡು ಸಾವಿರ " (22,000), "ಒಂದು ನೂರು ಮಿಲಿಯನ್ " (100,000,000.)
ಕೆಲವು ಭಾಷೆಯಲ್ಲಿ ಇಂತಹ ಸಂಖ್ಯೆಗಳನ್ನು ಅಕ್ಷರದಲ್ಲಿ ಬರೆಯಲು ಅವಕಾಶ ಇರುವುದಿಲ್ಲ. ಭಾಷಾಂತರಗಾರರು ಸಂಖ್ಯೆಗಳನ್ನು ಭಾಷಾಂತರಿಸಲು ನಿರ್ಧರಿಸುವ ಅಗತ್ಯವಿದೆ, ಸಂಖ್ಯೆಗಳಲ್ಲಿ ಬರೆಯಬೇಕೇ? ಅಕ್ಷರಗಳಲ್ಲಿ ಬರೆಯಬೇಕೇ ಎಂದು ನಿರ್ಧರಿಸಬೇಕು ಕೆಲವು ಸಂಖ್ಯೆಗಳನ್ನು ನಿಖರವಾಗಿ ಮತ್ತು ಸಂಪೂರ್ಣ ಸಂಖ್ಯೆಯಾಗಿ ಬರೆಯಬೇಕು.
> ಕೆಲವು ಸಂಖ್ಯೆಗಳು ನಿಖರವಾಗಿರುತ್ತವೆ ಮತ್ತು ಇತರವು ಚಕ್ರಾಕಾರವಾಗಿರುತ್ತದೆ.
ಹಾಗರಳು ಇಷ್ಮಾಯೇಲನಿಗೆ ಜನ್ಮನೀಡಿದಾಗ ಅಬ್ರಹಾಮನಿಗೆ **86** ವರ್ಷದವನಾಗಿ ಇದ್ದನು. (ಆದಿಕಾಡ16:16 ಯು ಎಲ್ ಟಿ)
2020-08-03 14:01:15 +00:00
ಎಂಭತ್ತಾರು (86) ಒಂದು ನಿಖರ ಸಂಖ್ಯೆ.
2020-08-03 14:01:15 +00:00
> ಆ ದಿನ ಸುಮಾರು **3000** ಜನರೊಳಗೆ ಕೊಲ್ಲಲ್ಪಟ್ಟರು. (ವಿಮೋಚನಾಕಾಂಡ 32:28ಬಿ ಯುಎಲ್ ಟಿ)
2020-08-03 14:01:15 +00:00
ಇಲ್ಲಿರುವ ಮೂರುಸಾವಿರ (3,000) ಎಂಬುದು ಸಂಪೂರ್ಣಸಂಖ್ಯೆ. ಇದು ಇರುವುದಕ್ಕಿಂತ ಸ್ವಲ್ಪ ಹೆಚ್ಚು ಇಲ್ಲವೆ ಸ್ವಲ್ಪಕಡಿಮೆಯೂ ಇರಬಹುದು "ಸುಮಾರು" ಎಂಬ ಪದ ಇದು ನಿಖರವಾದ ನಿರ್ದಿಷ್ಟವಾದ ಸಂಖ್ಯೆಯಲ್ಲ ಎಂಬುದನ್ನು ತಿಳಿಸುತ್ತದೆ.
#### ಕಾರಣ ಇದು ಒಂದು ಅನುವಾದ ತೊಂದರೆ
ಕೆಲವು ಭಾಷೆಯಲ್ಲಿ ಈ ಕೆಲವು ಸಂಖ್ಯೆಗಳಿಗೆ ಪದಗಳು ಇರುವುದಿಲ್ಲ
2020-08-03 14:01:15 +00:00
#### ಭಾಷಾಂತರ ತತ್ವಗಳು
* ನಿಖರವಾದ ಸಂಖ್ಯೆಗಳನ್ನು ಹೆಚ್ಚು ಹತ್ತಿರವಾಗಿ ಮತ್ತು ವಿಶೇಷವಾಗಿ ನಿರ್ದಿಷ್ಟವಾಗಿ ಭಾಷಾಂತರ ಮಾಡಬೇಕು.
* ಸಂಪೂರ್ಣವಾದ ಸಂಖ್ಯೆಗಳನ್ನು ಸಾಮಾನ್ಯವಾಗಿ ಭಾಷಾಂತರ ಮಾಡುತ್ತಾರೆ.
###ಸತ್ಯವೇದದಲ್ಲಿನ ಉದಾಹರಣೆಗಳು
> ಯೆರೆದನು **162** ವರ್ಷದವನಾಗಿ ಜೀವಿಸುತ್ತಿರುವಾಗ, ಆವನು ಹನೋಕನಿಗೆ ತಂದೆಯಾದನು. ಅವನು ಹನೋಕನಿಗೆ ತಂದೆಯಾದ ಮೇಲೆ ಯೆರೆದನು **800** ವರ್ಷಗಳವರೆಗೆ ಬದುಕಿದ್ದನು. ನಂತರ ಅವನು ಅನೇಕ ಗಂಡು ಮತ್ತು ಹೆಣ್ಣು ಮಕ್ಕಳಿಗೆ ತಂದೆಯಾದನು. ಯೆರೆದನು ಒಟ್ಟು **962** ವರಷಗಳು ಬದುಕಿ, ಮತ್ತೆ ಮರಣಹೊಂದಿದನು. (ಆದಿಕಾಂಡ 5:18-20 ಯು ಎಲ್ ಟಿ)
2020-08-03 14:01:15 +00:00
162, 800, ಮತ್ತು 962 ಎಂಬ ಸಂಖ್ಯೆಯು ನಿರ್ದಿಷ್ಟ ಸಂಖ್ಯೆಗಳು ಮತ್ತು ಇವುಗಳನ್ನು ಸಾಧ್ಯವಾದಷ್ಟು ಆ ಸಂಖ್ಯೆಗಳಿಗೆ ಹತ್ತಿರವಿರುವ ಯಾವುದೆ ಸಂಖ್ಯೆಗಳಂತೆ ಭಾಷಾಂತರಿಸಬೇಕು.
> ನಮ್ಮ ಸಹೋದರಿ, ನೀನು **ಲಕ್ಷಾಂತರ** ಮಕ್ಕಳಿಗೆ ತಾಯಿಯಾಗುವಿ (ಆದಿಕಾಂಡ 24:60 ಯು ಎಲ್ ಟಿ)
2020-08-03 14:01:15 +00:00
ಇದೊಂದು ಸಂಪೂರ್ಣ ಸಂಖ್ಯೆ. ಇದು ಅವಳು ನಿರ್ದಿಷ್ಟವಾಗಿ ಇಷ್ಟೇ ಸಂಖ್ಯೆಯ ಮಕ್ಕಳನ್ನು ಪಡೆಯಬೇಕು ಎಂದು ಹೇಳದೆ ಒಂದು ದೊಡ್ಡ ಸಂಖ್ಯೆಯನ್ನು ತಿಳಿಸುವಂತದ್ದು.
### ಭಾಷಾಂತರ ತಂತ್ರಗಳು
(1) ಸಂಖ್ಯೆಗಳನ್ನು ಅಂಕೆಗಳನ್ನು ಬಳಸಿ ಬರೆಯಿರಿ.
(2) ನಿಮ್ಮ ಭಾಷೆಯ ಪದಗಳನ್ನು ಬಳಸಿ ಸಂಖ್ಯೆಗಳನ್ನು ಬರೆಯಿರಿ ಅಥವಾ ಗೇಟ್ ವೇ ಭಾಷೆಯ ಪದಗಳನ್ನು ಆ ಸಂಖ್ಯೆಗಳಿಗೆ ಬರೆಯಿರಿ.
(3) ಪದಗಳನ್ನು ಬಳಸಿ ಸಂಖ್ಯೆಗಳನ್ನು ಬರೆಯಿರಿ ಮತ್ತು ಅಂಕೆಗಳನ್ನು ಆವರಣದಲ್ಲಿ ಬರೆಯಿರಿ.
(4) ದೊಡ್ಡ ಸಂಖ್ಯೆಗಳನ್ನು ಪದದೊಂದಿಗೆ ಸೇರಿಸಿ ಬರೆಯಿರಿ.
(5) ದೊಡ್ಡ ಸಂಪೂರ್ಣವಾದ ಸಂಖ್ಯೆಗಳಿಗೆ ಸಾಮಾನ್ಯವಾದ ಅಭಿವ್ಯಕ್ತಿಯನ್ನು ಬಳಸಿ ಮತ್ತು ಅಂಕಿಗಳನ್ನು ಆವರಣದಲ್ಲಿ ಬರೆಯಿರಿ.
2020-08-03 14:01:15 +00:00
### ಭಾಷಾಂತರ ಕೌಶಲ್ಯಗಳನ್ನು ಅಳವಡಿಸಿರುವ ಬಗ್ಗೆ ಉದಾಹರಣೆಗಳು.
ನಾವು ಕೆಳಗೆ ಕೊಟ್ಟಿರುವ ವಾಕ್ಯಗಳನ್ನು ಉದಾಹರಣೆಯಾಗಿ ಬಳಸಿಕೊಳ್ಳುತ್ತೇವೆ.
> ಇಗೋ, ನೋಡು, ನಾನು ಬಹು ಪ್ರಯಾಸಪಟ್ಟು ಯೆಹೋವನ ಆಲಯಕ್ಕಾಗಿ **100,000** ತಲಾಂತು ಬಂಗಾರವನ್ನು, **1,,** ತಲಾಂತು ಬೆಳ್ಳಿಯನ್ನು, ಮತ್ತು ಲೆಕ್ಕವಿಲ್ಲದಷ್ಟು ತಾಮ್ರ ಮತ್ತು ಕಬ್ಬಿಣ ಇವುಗಳನ್ನು ಒದಗಿಸಿದ್ದೇನೆ. (1 ನೇ ಪೂರ್ವಕಾಲ ವೃತ್ತಾಂತ 22:14 ಯ ಎಲ್ ಟಿ)
2020-08-03 14:01:15 +00:00
(1) ಅಂಕೆಗಳನ್ನು ಬಳಸಿ ಸಂಖ್ಯೆಗಳನ್ನು ಬರೆಯಿರಿ.
2020-08-03 14:01:15 +00:00
> > ನಾನು ಯೆಹೋವನ ಆಲಯಕ್ಕಾಗಿ ಸಿದ್ಧಮಾಡಿರುವುದು **100,000** ತಲಾಂತು ಬಂಗಾರ **1,000,000** ತಲಾಂತು ಬೆಳ್ಳಿ ಮತ್ತು ಯೆಥೇಚ್ಚವಾದ ತಾಮ್ರ ಮತ್ತು ಕಬ್ಬಿಣ ಸಿದ್ಧಮಾಡಿದ್ದೇನೆ.
2020-08-03 14:01:15 +00:00
(2) ನಿಮ್ಮ ಭಾಷೆಯ ಪದಗಳನ್ನು ಬಳಸಿ ಸಂಖ್ಯೆಗಳನ್ನು ಬರೆಯಿರಿ. ಅಥವಾ ಗೇಟ್ ವೇ ಭಾಷೆಯ ಪದಗಳನ್ನು ಆ ಸಂಖ್ಯೆಗಳಿಗೆ ಬರೆಯಿರಿ.
2020-08-03 14:01:15 +00:00
> > ನಾನು ಯೆಹೋವನ ಆಲಯಕ್ಕಾಗಿ **ಒಂದು ನೂರು ಸಾವಿರ** ತಲಾಂತು ಬಂಗಾರ **ಒಂದು ಮಿಲಿಯನ್** ತಲಾಂತು ಬೆಳ್ಳಿ ಮತ್ತು ಯೆಥೇಚ್ಛವಾದ ತಾಮ್ರ ಮತ್ತು ಕಬ್ಬಿಣ ಸಿದ್ಧಮಾಡಿದ್ದೇನೆ.
(3) ಪದಗಳನ್ನು ಬಳಸಿ ಸಂಖ್ಯೆಗಳನ್ನು ಬರೆಯಿರಿ ಮತ್ತು ಅಂಕೆಗಳನ್ನು ಆವರಣದಲ್ಲಿ ಬರೆಯಿರಿ.
2020-08-03 14:01:15 +00:00
> > ನಾನು ಯೆಹೋವನ ಆಲಯಕ್ಕಾಗಿ ಒಂದು **ನೂರು ಸಾವಿರ (100,000)** ತಲಾಂತು ಬಂಗಾರ, ಒಂದು ಮಿಲಿಯನ್ (1,000,000)** ತಲಾಂತು ಬೆಳ್ಳಿ ಯೆಥೇಚ್ಛವಾದ ತಾಮ್ರ ಮತ್ತು ಕಬ್ಬಿಣ ಸಿದ್ಧಮಾಡಿದ್ದೇನೆ.
2020-08-03 14:01:15 +00:00
(4) ದೊಡ್ಡ ಸಂಖ್ಯೆಗಳನ್ನು ಪದದೊಂದಿಗೆ ಸೇರಿಸಿ ಬರೆಯಿರಿ.
2020-08-03 14:01:15 +00:00
> > ನಾನು ಯೆಹೋವನ ಆಲಯಕ್ಕಾಗಿ **ಒಂದು ನೂರು ಸಾವಿರ** ತಲಾಂತು ಬಂಗಾರ **ಒಂದು ಸಾವಿರ ಸಾವಿರ** ತಲಾಂತು ಬೆಳ್ಳಿ ಮತ್ತು ಹೆಚ್ಚಾದ ತಾಮ್ರ ಮತ್ತು ಕಬ್ಬಿಣ ಸಿದ್ಧಮಾಡಿದ್ದೇನೆ.
(5) ದೊಡ್ಡ ಸಂಪೂರ್ಣವಾದ ಸಂಖ್ಯೆಗಳಿಗೆ ಸಾಮಾನ್ಯವಾದ ಅಭಿವ್ಯಕ್ತಿಯನ್ನು ಬಳಸಿ ಮತ್ತು ಅಂಕಿಗಳನ್ನು ಆವರಣದಲ್ಲಿ ಬರೆಯಿರಿ.
2020-08-03 14:01:15 +00:00
> ನಾನು ಯೆಹೋವನ ಆಲಯಕ್ಕಾಗಿ **ಯೆಥೇಚ್ಛವಾದ ಬಂಗಾರ (100,000 ತಲಾಂತುಗಳು)**, ಮತ್ತು **ಹತ್ತು ಪಟ್ಟು ಬೆಳ್ಳಿ (1,000,000 ತಲಾಂತುಗಳು)**, ಯೆಥೇಚ್ಛವಾದ ತಾಮ್ರ ಮತ್ತು ಕಬ್ಬಿಣ ಸಿದ್ಧಮಾಡಿದ್ದೇನೆ.
2020-08-03 14:01:15 +00:00
#### ಏಕರೂಪ
ನಿಮ್ಮ ಭಾಷಾಂತರದಲ್ಲಿ ಏಕರೂಪವನ್ನು ಉಳಿಸಿಕೊಳ್ಳಿ. ಸಂಖ್ಯೆಗಳನ್ನು ಹೇಗೆ ಭಾಷಾಂತರಿಸಬೇಕು ಮತ್ತು ಅಂಕೆಗಳನ್ನು ಬಳಸಿ ಸಂಖ್ಯೆಗಳನ್ನು ಹೇಗೆ ಭಾಷಾಂತರಿಸಬೇಕು ಎಂದು ನಿರ್ಧರಿಸಬೇಕು.
2020-08-03 14:01:15 +00:00
* ಏಕರೂಪವನ್ನು ಉಳಿಸಿಕೊಳ್ಳಲು ಅನೇಕ ಮಾರ್ಗಗಳಿವೆ.
* ಎಲ್ಲಾ ಸಮಯದಲ್ಲೂ ಸಂಖ್ಯೆಗಳನ್ನು ಪ್ರತಿನಿಧಿಸುವಂತೆ ಅಂಕೆಗಳನ್ನು ಬಳಸಿಕೊಳ್ಳಿ. (ಕೆಲವೊಮ್ಮೆ ತುಂಬಾ ಉದ್ದವಾದ ಪದಗಳನ್ನು ಬಳಸಬೇಕಾಗಬಹುದು)
* ಅಂಕೆಗಳನ್ನು ಬಳಸಿ ಎಲ್ಲಾ ಸಮಯದಲ್ಲೂ ಸಂಖ್ಯೆಗಳನ್ನು ಪ್ರತಿನಿಧಿಸುವಂತೆ ಬರೆಯಿರಿ
* ನಿಮ್ಮ ಭಾಷೆಯಲ್ಲಿ ಸಂಖ್ಯೆಗಳನ್ನು ಪ್ರತಿನಿಧಿಸುವ ಪದಗಳನ್ನು ಮತ್ತು ಅಂಕಿಗಳಿಗೆ ಸಂಖ್ಯೆಗಳನ್ನು ಬರೆದು ನಿಮ್ಮ ಭಾಷೆಯಲ್ಲಿಯ ಪದಗಳನ್ನು ಬರೆಯಿರಿ.
* ಚಿಕ್ಕ ಸಂಖ್ಯೆಗಳಿಗೆ ಪದಗಳನ್ನು ದೊಡ್ಡ ಸಂಖ್ಯೆಗಳಿಗೆ ಅಂಕೆಗಳನ್ನು ಬಳಸಿ.
* ಕೆಲವೇ ಅಕ್ಷರಗಳು ಬಳಸಿ ಬರೆಯುವುದಾದರೆ ಸಂಖ್ಯೆಗಳಿಗೆ ಬಳಸಿಕೊಳ್ಳಿ ದೊಡ್ಡ ಸಂಖ್ಯೆಗಳನ್ನು ಅಂಕೆಗಳಿಂದ ಬರೆಯಿರಿ
* ಸಂಖ್ಯೆಗಳನ್ನುಪ್ರತಿನಿಧಿಸಲು ಪದಗಳನ್ನು ಬಳಸಿ ಮತ್ತು ಅಂಕೆಗಳನ್ನು ಆವರಣದಲ್ಲಿ ಬರೆಯಿರಿ.
#### ಯು ಎಲ್ ಟಿ ಮತ್ತು ಯು ಎಸ್ ಟಿಯಲ್ಲಿರುವ ಏಕರೂಪ.
2020-08-03 14:01:15 +00:00
The *Unlocked Literal Bible* (ಯು ಎಲ್ ಟಿ) ಮತ್ತು the *Unlocked Dynamic Bible* (ಯು ಎಸ್ ಟಿ) ಒಂದರಿಂದ ಹತ್ತು ಸಂಖ್ಯೆಗಳಿಗೆ ಪದಗಳನ್ನು ಬಳಸಿ ಮತ್ತು ಹತ್ತು ಮೇಲಿನ ಎಲ್ಲಾ ಸಂಖ್ಯೆಗಳಿಗೆ ಅಂಕಿಗಳನ್ನು ಬಳಸಿ.
2020-08-03 14:01:15 +00:00
> ಯಾವಾಗ ಆದಾಮನು **130** ವರ್ಷದವನಾಗಿ ಜೀವಿಸುತ್ತಿದ್ದಾಗ, ರೂಪದಲ್ಲಿ ತನ್ನ ಹೋಲಿಕೆಗೆ ಸರಿಯಾದ ಮಗನನ್ನು ಪಡೆದನು, ಮತ್ತು ಅವನು ಆತನಿಗೆ ಸೇತ ಎಂದು ಹೆಸರಿಟ್ಟನು. ಸೇತನಿಗೆ ತಂದೆಯಾದ ಮೇಲೆ, ಅವನು **800** ವರ್ಷ ಬದುಕಿದ್ದನು. ಅವನು ಅನೇಕ ಗಂಡು,ಹೆಣ್ಣು ಮಕ್ಕಳಿಗೆ ತಂದೆಯಾದನು. ಆದಾಮನು **930** ವರ್ಷ ಬದುಕಿ ನಂತರ ಮರಣಹೊಂದಿದನು. (ಆದಿಕಾಂಡ 5:3-5 ಯು ಎಲ್ ಟಿ)