translationCore-Create-BCS_.../checking/self-assessment/01.md

19 KiB

ಅನುವಾದದ ಗುಣಮಟ್ಟದ ಸ್ವಯಂ ಮೌಲ್ಯಮಾಪನ

ಅನುವಾದದ ಗುಣಮಟ್ಟವನ್ನು ಸಭೆ ವಿಶ್ವಾಸಾರ್ಹವಾಗಿ ನಿರ್ಧರಿಸುವ ಪ್ರಕ್ರಿಯೆಯನ್ನು ವಿವರಿಸುವುದು ಈ ವಿಭಾಗದ ಉದ್ದೇಶವಾಗಿದೆ. ಬಳಸಬಹುದಾದ ಪ್ರತಿಯೊಂದು ಕಾಲ್ಪನಿಯ ಪರಿಶೀಲನೆಯನ್ನು ವಿವರಿಸುವ ಬದಲಿಗೆ, ಈ ಕೆಳಗಿನ ಮೌಲ್ಯಮಾಪನವು ಅನುವಾದವನ್ನು ಪರಿಶೀಲಿಸುವ ಕೆಲವು ಪ್ರಮುಖ ತಂತ್ರಗಳನ್ನು ಸೂಚಿಸುವ ಉದ್ದೇಶವನ್ನು ಹೊಂದಿದೆ. ಅಂತಿಮವಾಗಿ ಯಾವ ರೀತಿಯ ಪರಿಶೀಲನೆ ಬಳಸಲಾಗುತ್ತದೆ, ಯಾವಾಗ ಮತ್ತು ಯಾರಿಂದ ಎಂಬುವುದನ್ನು ಸಭೆ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ.

ಮೌಲ್ಯಮಾಪನವನ್ನು ಹೇಗೆ ಬಳಸುವುದು

ಈ ಮೌಲ್ಯಮಾಪನ ವಿಧಾನವು ಎರಡು ರೀತಿಯ ಹೇಳಿಕೆಯನ್ನು ಬಳಸಿಕೊಳ್ಳುತ್ತದೆ. ಕೆಲವು “ಹೌದು/ಇಲ್ಲ” ಹೇಳಿಕೆಗಳಾಗಿವೆ, ಅಲ್ಲಿ ನಕಾರಾತ್ಮಕ ಪ್ರತಿಕ್ರಿಯೆಯು ಪರಿಹರಿಸಬೇಕಾದ ಸಮಸ್ಯೆಯನ್ನು ಸೂಚಿಸುತ್ತದೆ. ಇತರ ವಿಭಾಗಗಳು ಸಮಾನ-ತೂಕದ ವಿಧಾನವನ್ನು ಬಳಸುತ್ತವೆ, ಅದು ಅನುವಾದ ತಂಡಗಳಿಗೆ ಅನುವಾದದ ಬಗ್ಗೆ ಹೇಳಿಕೆಯನ್ನು ನೀಡುತ್ತದೆ. ಪ್ರತಿ ಹೇಳಿಕೆಯನ್ನು 0-2 ಪ್ರಮಾಣದಲ್ಲಿ ಪರಿಶೀಲನೆ ಮಾಡುವ ವ್ಯಕ್ತಿಯು(ಅನುವಾದದ ತಂಡದಿಂದ ಪ್ರಾರಂಭಿಸಿ) ಸ್ಕೋರ್ ಮಾಡಬೇಕು.

0 -ಒಪ್ಪದಿರುವುದು

1 -ಸ್ವಲ್ಪಮಟ್ಟಿಗೆ ಒಪ್ಪುತ್ತೇನೆ

2 -ಬಲವಾಗಿ ಒಪ್ಪುತ್ತೇನೆ

ಮಿಮರ್ಶೆಯ ಕೊನೆಯಲ್ಲಿ, ಒಂದು ವಿಭಾಗದಲ್ಲಿನ ಎಲ್ಲಾ ಪ್ರತಿಕ್ರಿಯೆಗಳ ಒಟ್ಟು ಮೌಲ್ಯವನ್ನು ಸೇರಿಸಬೇಕು ಮತ್ತು ಪ್ರತಿಕ್ರಿಯೆಗಳು ಅನುವಾದದ ಸ್ಥಿತಿಯನ್ನು ನಿಖಾರವಾಗಿ ಪ್ರತಿಬಿಂಬಿಸಿದರೆ, ಈ ಮೌಲ್ಯವು ಅನುವಾದಿತ ಅಧ್ಯಾಯವು ಉತ್ತಮ ಗುಣಮಟ್ಟದ್ದಾಗಿದೆ ಎಂಬ ಸಂಭವನೀತೆಯ ಅಂದಾಜನ್ನು ವಿಮರ್ಶಕರಿಗೆ ನೀಡುತ್ತದೆ. ಅನುಸರಿಸಬೇಕಾದ ನಿಯಮಗಳನ್ನು ಸರಳವಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಎಲ್ಲಿ ಕೆಲಸದ ಸುಧಾರಣೆ ಅಗತ್ಯವಿದೆ ಎಂಬುವುದನ್ನು ವಸ್ತುನಿಷ್ಠ ವಿಧಾನದೊಂದಿಗೆ ವಿಮರ್ಶಕರಿಗೆ ಒದಗಿಸುತ್ತದೆ. *ಉದಾಹರಣೆಗೆ, ಅನುವಾದವು “ನಿಖರತೆ”ಯಲ್ಲಿ ಉತ್ತಮವಾಗಿದ್ದರೂ “ಸ್ವಾಭಾವಿಕತೆ” ಮತ್ತು “ಸ್ಪಷ್ಟತೆ” ಯಲ್ಲಿ ಕಳಪೆಯಾಗಿದ್ದರೆ, ಅನುವಾದ ತಂಡವು ಹೆಚ್ಚಿನ ಪರಿಶೀಲನೆಯನ್ನು ಮಾಡಬೇಕಾಗುತ್ತದೆ. *

ಅನುವಾದಿತ ಸತ್ಯವೇದದ ವಿಷಯದ ಪ್ರತಿ ಅಧ್ಯಾಯಕ್ಕೂ ಅನುಸರಿಸಬೇಕಾದ ನಿಯಮಗಳು ಬಳಸಲು ಉದ್ದೇಶಿಸಲಾಗಿದೆ. ಅನುವಾದ ತಂಡವು ಇತರ ಪರಿಶೀಲನೆ ಮಾಡಿದ ನಂತರ ಪ್ರತಿ ಅಧ್ಯಾಯದ ಮೌಲ್ಯಮಾಪನವನ್ನು ಮಾಡಬೇಕು, ತದನಂತರ 2ನೆಯ ಹಂತದ ಪರೀಕ್ಷಿಕರು ಇದನ್ನು ಮತ್ತೆ ಮಾಡಬೇಕು, ಮತ್ತು ನಂತರ 3ನೆಯ ಹಂತದ ಪರೀಕ್ಷಿಕರು ಈ ಪರಿಶೀಲನಾಪಟ್ಟಿಯೊಂದಿಗೆ ಅನುವಾದವನ್ನು ಪ್ರವೇಶಿಸಬಹುದು. ಪ್ರತಿಹಂತದಲ್ಲೂ ಅಧ್ಯಾಯದ ಹೆಚ್ಚು ವಿವರವಾದ ಮತ್ತು ವ್ಯಾಪಕವಾದ ಪರಿಶೀಲನೆಯನ್ನು ಸಭೆ ನಿರ್ವಹಿಸುವುದರಿಂದ, ಅಧ್ಯಾಯದ ಅಂಶಗಳನ್ನು ಮೊದಲ ನಾಲ್ಕು ವಿಭಾಗಗಳಿಂದ (ಅವಲೋಕನ, ನೈಸರ್ಗಿಕತೆ, ಸ್ಪಷ್ಟತೆ,ನಿಖರತೆ) ನವೀಕರಿಸಬೇಕು, ಅನುವಾದ ಹೇಗೆ ಸುಧಾರಿಸಿದೆ ಎಂಬುವುದನ್ನು ನೋಡಲು ಸಭೆ ಮತ್ತು ಸಮಾಜಕ್ಕೆ ಅವಕಾಶ ಮಾಡಿಕೊಡುತ್ತದೆ.

####ಸ್ವಯಂ ಮೌಲ್ಯಮಾಪನ

ಪ್ರಕ್ರಿಯೆಯನ್ನು ಐದು ಭಾಗವಾಗಿ ವಿಂಗಡಿಸಲಾಗಿದೆ: ಅವಲೋಕನ (ಅನುವಾದದ ಬಗ್ಗೆ ಮಾಹಿತಿ), ಸ್ವಾಭಾವಿಕತೆ,ಸ್ಪಷ್ಟತೆ,ನಿಖರತೆ, ಮತ್ತು ಸಭೆಯ ಅನುಮೋದನೆ.

1. ಅವಲೋಕನ

*ಕೆಳಗಿನ ಪ್ರತಿ ಹೇಳಿಕೆಗೆ “ಇಲ್ಲ” ಅಥವ “ಹೌದು” ಎಂದು ವೃತ್ತ ಮಾಡಿರಿ. *

ಇಲ್ಲ/ಹೌದು ಈ ಅನುವಾದವು ಅರ್ಥ ಆಧಾರಿತ ಅನುವಾದವಾಗಿದ್ದು, ಮೂಲ್ಯ ಪಠ್ಯದ ಅರ್ಥವನ್ನು ಉದ್ದೇಶಿತ ಭಾಷೆಯಲ್ಲಿ ನೈಸರ್ಗಿಕ, ಸ್ಪಷ್ಟ ಮತ್ತು ನಿಖಾರವಾದ ರೀತಿಯಲ್ಲಿ ತಿಳಿಸಲು ಪ್ರಯತ್ನಿಸುತ್ತದೆ.

ಇಲ್ಲ/ಹೌದು ಅನುವಾದವನ್ನು ಪರಿಶೀಲಿಸುವಲ್ಲಿ ತೊಡಗಿರುವವರು ಉದ್ದೇಶಿತ ಭಾಷೆಯ ಪ್ರಥಮ -ಭಾಷೆ ಮಾತನಾಡುವವರಗಿರುತ್ತಾರೆ

ಇಲ್ಲ/ಹೌದು ಈ ಅಧ್ಯಾಯದ ಅನುವಾದವು ನಂಬಿಕೆಯ ಹೇಳಿಕೆಯೊಂದಿಗೆ ಒಪ್ಪಂದದಲ್ಲಿರುತ್ತದೆ .

ಇಲ್ಲ/ಹೌದು ಈ ಅಧ್ಯಾಯದ ಅನುವಾದವನ್ನು ಅನುವಾದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಮಾಡಲಾಗಿದೆ

2.ಸ್ವಾಭಾವಿಕತೆ:”ಇದು ನನ್ನ ಭಾಷೆ”

*ಕೆಳಗಿನ ಪ್ರತಿ ಹೇಳಿಕೆಗೆ “0” ಅಥವಾ “1” ಅಥವಾ “2” ವೃತ್ತಿಸಿ. *

ಹೆಚ್ಚಿನ ಸಮಾಜಿಕ ಪರಿಶೀಲನೆ ಮಾಡುವ ಮೂಲಕ ಈ ಭಾಗವನ್ನು ಬಲಪಡಿಸಬಹುದು.(ನೋಡಿ [ಸಮಾಜಿಕ ಭಾಷ ಪರಿಶೀಲನೆ] (../language-community-check/01.md))

0 1 2 ಈ ಭಾಷೆಯನ್ನು ಮಾತನಾಡುವವರು ಮತ್ತು ಈ ಅಧ್ಯಾಯವನ್ನು ಕೇಳಿದವರು, ಇದನ್ನು ಭಾಷೆಯ ಸರಿಯಾದ ರೂಪವನ್ನು ಬಳಸಿ ಅನುವಾದಿಸಲಾಗಿದೆ ಎಂದು ಒಪ್ಪಿಕೊಳ್ಳುತ್ತಾರೆ.

0 1 2 ಈ ಅಧ್ಯಾಯದಲ್ಲಿ ಬಳಸಲಾದ ಪ್ರಮುಖ ಪದಗಳು ಈ ಸಂಸ್ಕೃತಿಗೆ ಸರಿಹೊಂದುತ್ತದೆ ಮತ್ತು ಸ್ವೀಕಾರಾರ್ಹವಾಗಿದೆ ಎಂದು ಈ ಭಾಷೆಯನ್ನು ಮಾತನಾಡುವವರು ಒಪ್ಪಿಕೊಳ್ಳುತ್ತಾರೆ.

0 1 2 ಈ ಅಧ್ಯಾಯದಲ್ಲಿನ ವಿವರಣೆಗಳು ಅಥವಾ ಕಥೆಗಳು ಈ ಭಾಷೆಯನ್ನು ಮಾತನಾಡುವ ಜನರಿಗೆ ಅರ್ಥಮಾಡಿಕೊಳ್ಳಲು ಸುಲಭವಾಗಿದೆ.

0 1 2 ಈ ಅಧ್ಯಾಯದಲ್ಲಿನ ಪಠ್ಯದ ವಾಕ್ಯ ರಚನೆ ಮತ್ತು ಕ್ರಮವು ಸ್ವಾಭಾವಿಕವಾಗಿದೆ ಮತ್ತು ಕ್ರಮಬದ್ಧವಾಗಿರುತ್ತದೆ ಎಂದು ಈ ಭಾಷೆಯನ್ನು ಮಾತನಾಡುವವರು ಒಪ್ಪಿಕೊಳ್ಳುತ್ತಾರೆ.

0 1 2 ಸ್ವಾಭಾವಿಕತೆಗೆಗಾಗಿ ಈ ಅಧ್ಯಾಯದ ಅನುವಾದದ ವಿಮರ್ಶೆಯಲ್ಲಿ ಅನುವಾದವನ್ನು ರಚಿಸುವಲ್ಲಿ ನೇರವಾಗಿ ಭಾಗಿಯಾಗಿಲ್ಲದ ಸಮುದಾಯದ ಸದಸ್ಯರು ಸೇರಿದ್ದಾರೆ.

0 1 2 ಸ್ವಾಭಾವಿಕತೆಗಾಗಿ ಈ ಅಧ್ಯಾಯದ ಅನುವಾದದ ವಿಮರ್ಶೆಯಲ್ಲಿ ವಿಶ್ವಾಸಿಗಳು ಮತ್ತು ಅವಿಶ್ವಾಸಿಗಳನ್ನು, ಅಥವ ಸತ್ಯವೇದದ ಬಗ್ಗೆ ಪರಿಚಯವಿಲ್ಲದ ಕನಿಷ್ಠ ವಿಶ್ವಾಸಿಗಳನ್ನು ಸಹ ಒಳಗೊಂಡಿದೆ, ಆದ್ದರಿಂದ ಪಾಠ್ಯವನ್ನು ಕೇಳುವ ಮೊದಲು ಅದು ಏನನ್ನು ಸೂಚಿಸುತ್ತದೆ ಎಂದು ಅವರಿಗೆ ತಿಳಿದಿರುವುದಿಲ್ಲ.

0 1 2 ಸ್ವಾಭಾವಿಕತೆಗಾಗಿ ಈ ಅಧ್ಯಾಯದ ಅನುವಾದದ ವಿಮರ್ಶೆಯು ವಿವಿಧ ವಯಸ್ಸಿನ ಮಾತುಗಾರರನ್ನು ಒಳಗೊಂಡಿದೆ.

0 1 2 ಸ್ವಾಭಾವಿಕತೆಗಾಗಿ ಈ ಅಧ್ಯಾಯದ ಅನುವಾದದ ವಿಮರ್ಶೆಯಲ್ಲಿ ಪುರುಷರು ಮತ್ತು ಮಹಿಳೆಯರನ್ನು ಸೇರಿದ್ದಾರೆ.

3.ಸ್ಪಷ್ಟತೆ: ”ಅರ್ಥ ಸ್ಪಷ್ಟವಾಗಿದೆ”

*ಕೆಳಗಿನ ಪ್ರತಿ ಹೇಳಿಕೆಗೆ ”0” ಅಥವ “1” ಅಥವ ”2” ವೃತ್ತಿಸಿ. *

ಹೆಚ್ಚಿನ ಸಮಾಜಿಕ ಪರಿಶೀಲನೆ ಮಾಡುವ ಮೂಲಕ ಈ ವಿಭಾಗವನ್ನು ಬಲಪಡಿಸಬಹುದು. (ನೋಡಿಸಮಾಜಿಕ ಭಾಷ ಪರಿಶೀಲನೆ)

0 1 2 ಸ್ಥಳೀಯ ಭಾಷಿಕರು ಅರ್ಥಮಾಡಿಕೊಳ್ಳಲು ಸುಲಭವಾದ ಭಾಷೆಯನ್ನು ಬಳಸಿ ಈ ಅಧ್ಯಾಯವನ್ನು ಅನುವಾದಿಸಲಾಗಿದೆ.

0 1 2 ಈ ಅಧ್ಯಾಯದಲ್ಲಿನ ಹೆಸರುಗಳು, ಸ್ಥಳಗಳು ಮತ್ತು ಕ್ರಿಯಪದಗಳ ಅನುವಾದವು ಸರಿಯಾಗಿದೆ ಎಂದು ಈ ಭಾಷೆಯ ಭಾಷಿಕರು ಒಪ್ಪುತ್ತಾರೆ.

0 1 2 ಈ ಅಧ್ಯಾಯದಲ್ಲಿನ ಅಲಂಕಾರಗಳು ಈ ಸಂಸ್ಕೃತಿಯ ಜನರಿಗೆ ಅರ್ಥವಾಗುವ ಹಾಗೆ ಇರುತ್ತದೆ.

0 1 2 ಈ ಅಧ್ಯಾಯವನ್ನು ಸರಿಯಾದ ಅರ್ಥವನ್ನು ನೀಡುವ ರೀತಿಯಲ್ಲಿ ರಚಿಸಲಾಗಿದೆ ಎಂದು ಈ ಭಾಷೆಯ ಭಾಷಿಕರು ಒಪ್ಪುತ್ತಾರೆ.

0 1 2 ಸ್ಪಷ್ಟತೆಗಾಗಿ ಈ ಅಧ್ಯಾಯದ ಅನುವಾದದ ವಿಮರ್ಶೆಯಲ್ಲಿ ಈ ಅಧ್ಯಾಯದ ಅನುವಾದವನ್ನು ರಚಿಸುವಲ್ಲಿ ನೇರವಾಗಿ ಭಾಗಿಯಾಗಿಲ್ಲದ ಸಮುದಾಯದ ಸದಸ್ಯರು ಸೇರಿದ್ದಾರೆ.

** 0 1 2** ಸ್ಪಷ್ಟತೆಗಾಗಿ ಈ ಅಧ್ಯಾಯದ ಅನುವಾದದ ವಿಮರ್ಶೆಯಲ್ಲಿ ವಿಶ್ವಾಸಿಗಳು ಮತ್ತು ಅವಿಶ್ವಾಸಿಗಳನ್ನು, ಅಥವ ಸತ್ಯವೇದದ ಬಗ್ಗೆ ಪರಿಚಯವಿಲ್ಲದ ಕನಿಷ್ಠ ವಿಶ್ವಾಸಿಗಳನ್ನು ಸಹ ಒಳಗೊಂಡಿದೆ, ಆದ್ದರಿಂದ ಪಾಠ್ಯವನ್ನು ಕೇಳುವ ಮೊದಲು ಅದು ಏನನ್ನು ಸೂಚಿಸುತ್ತದೆ ಎಂದು

0 1 2 ಸ್ಪಷ್ಟತೆಗಾಗಿ ಈ ಅಧ್ಯಾಯದ ಅನುವಾದದ ವಿಮರ್ಶೆಯು ವಿವಿಧ ವಯಸ್ಸಿನ ಮಾತುಗಾರರನ್ನು ಒಳಗೊಂಡಿದೆ.

0 1 2 ಸ್ಪಷ್ಟತೆಗಾಗಿ ಈ ಅಧ್ಯಾಯದ ಅನುವಾದದ ವಿಮರ್ಶೆಯಲ್ಲಿ ಪುರುಷರು ಮತ್ತು ಮಹಿಳೆಯರನ್ನು ಸೇರಿದ್ದಾರೆ.

4.ನಿಖರತೆ:”ಅನುವಾದವು ಮೂಲ ಪಠ್ಯವನ್ನು ಸಂಪರ್ಕಿಸುತ್ತದೆ”

  • ಕೆಳಗಿನ ಪ್ರತಿ ಹೇಳಿಕೆಗೆ ”0” ಅಥವ “1” ಅಥವ ”2” ವೃತ್ತಿಸಿ *

ಹೆಚ್ಚಿನ ಸಮಾಜಿಕ ಪರಿಶೀಲನೆ ಮಾಡುವ ಮೂಲಕ ಈ ವಿಭಾಗವನ್ನು ಬಲಪಡಿಸಬಹುದು. (ನೋಡಿಸಮಾಜಿಕ ಭಾಷ ಪರಿಶೀಲನೆ)

0 1 2 ಅನುವಾದದಲ್ಲಿ ಎಲ್ಲಾ ಪದಗಳು ಇರುವುದನ್ನು ಖಚಿತಪಡಿಸಿಕೊಳ್ಳಲು ಈ ಅಧ್ಯಾಯದ ಮೂಲ ಪಠ್ಯದಲ್ಲಿನ ಎಲ್ಲಾ ಪ್ರಮುಖ ಪದಗಳ ಸಂಪೂರ್ಣ ಪಟ್ಟಿಯನ್ನು ಬಳಸಲಾಗುತ್ತದೆ.

0 1 2 ಈ ಅಧ್ಯಾಯದಲ್ಲಿ ಎಲ್ಲಾ ಪ್ರಮುಖ ಪದಗಳನ್ನು ಸರಿಯಾಗಿ ಅನುವಾದಿಸಲಾಗಿದೆ.

0 1 2 ಈ ಅಧ್ಯಾಯದಲ್ಲಿನ ಎಲ್ಲಾ ಪ್ರಮುಖ ಪದಗಳನ್ನು ಹಾಗು ಇತರ ಸ್ಥಳಗಳಲ್ಲಿ ಕಾಣಿಸಿಕೊಳ್ಳುವ ಪ್ರಮುಖ ಪದಗಳನ್ನು ಏಕರೂಪವಾಗಿ ಅನುವಾದಿಸಲಾಗಿದೆ.

0 1 2 ಟಿಪಣ್ಣಿಗಳು ಮತ್ತು ಅನುವಾದ ಪದಗಳನ್ನು ಒಳಗೊಂಡಂತೆ ಅನುವಾದ ಸವಾಲುಗಳನ್ನು ಗುರುತಿಸಲು ಮತ್ತು ಪರಿಹರಿಸಲು ಇಡೀ ಅಧ್ಯಾಯದಲ್ಲಿ ವೇದಾಭ್ಯಾಸಕ್ಕೆ ಸಂಬಂಧಿಸಿದ ಸಂಪನ್ಮೂಲಗಳನ್ನು ಬಳಸಲಾಗುತ್ತದೆ.

0 1 2 ಮೂಲ ಪಠ್ಯದಲ್ಲಿನ ಐತಿಹಾಸಿಕ ವಿವರಗಳನ್ನು (ಹೆಸರುಗಳು, ಸ್ಥಳಗಳು ಮತ್ತು ಘಟಣೆಗಳನ್ನು) ಅನುವಾದದಲ್ಲಿ ಸಂರಕ್ಷಿಸಲಾಗಿದೆ.

0 1 2 ಅನುವಾದಿತ ಅಧ್ಯಾಯದಲ್ಲಿನ ಅಲಂಕಾರಗಳ ಅರ್ಥವನ್ನು ಮೂಲ ಉದ್ದಶಕ್ಕೆ ಹೋಲಿಸಲಾಗಿದೆ ಮತ್ತು ಜೋಡಿಸಲಾಗಿದೆ.*

0 1 2 ಅನುವಾದಿಸುವಾಗ ಭಾಗಿಯಾಗದ ಸ್ಥಳಿಯ ಭಾಷಿಕರಿಂದ ಅನುವಾದವನ್ನು ಪರೀಕ್ಷಿಸಲಾಗಿದೆ ಮತ್ತು ಅನುವಾದವು ಮೂಲ ಪಠ್ಯದ ಉದ್ದೇಶಿತ ಅರ್ಥವನ್ನು ನಿಖರವಾಗಿ ಸಂಪರ್ಕಿಸುತ್ತದೆ ಎಂದು ಅವರು ಒಪ್ಪಿಕೊಂಡಿದ್ದಾರೆ.

0 1 2 ಈ ಅಧ್ಯಾಯದ ಅನುವಾದವನ್ನು ಕನಿಷ್ಠ ಎರಡು ಮೂಲ ಪಠ್ಯಗಳಿಗೆ ಹೋಲಿಸಲಾಗಿದೆ.

0 1 2 ಈ ಅಧ್ಯಾಯದಲ್ಲಿನ ಯಾವುದೇ ಅರ್ಥದ ಬಗ್ಗೆ ಎಲ್ಲಾ ಪ್ರಶ್ನೆಗಳು ಮತ್ತು ಭಿನ್ನಾಭಿಪ್ರಾಯಗಳನ್ನು ಪರಿಹಾರಿಸಲಾಗಿದೆ.

0 1 2 ಪದಗಳ ಸರಿಯಾದ ವಾಖ್ಯಾನ ಮತ್ತು ಉದ್ದೇಶವನ್ನು ಪರೀಕ್ಷಿಸಲು ಈ ಅಧ್ಯಾಯದ ಅನುವಾದವನ್ನು ಮೂಲ ಪಠ್ಯಕ್ಕೆ (ಹೀಬ್ರೂ, ಗ್ರೀಕ್, ಅರಾಮಿಕ್) ಹೋಲಿಸಲಾಗಿದೆ.

5.ಸಭೆಯ ಅನುಮೊದನೆ: ”ಸ್ವಾಭಾವಿಕತೆ, ಸ್ಪಷ್ಟತೆ, ಮತ್ತು ಅನುವಾದದ ನಿಖರತೆಯನ್ನು ಆ ಭಾಷೆ ಮಾತನಾಡುವ ಸಭೆಯು ಅನುಮೋದಿಸಿದೆ”

*ಹೆಚ್ಚಿನ ಸಮಾಜಿಕ ಪರಿಶೀಲನೆ ಮಾಡುವ ಮೂಲಕ ಈ ವಿಭಾಗವನ್ನು ಬಲಪಡಿಸಬಹುದು. (ನೋಡಿಸಮಾಜಿಕ ಭಾಷ ಪರಿಶೀಲನೆ) *

ಇಲ್ಲಾ/ಹೌದು ಈ ಅನುವಾದವನ್ನು ಪರಿಶೀಲಿಸಿದಂತ ಸಭಾ ನಾಯಕರು ಉದ್ದೇಶಿತ ಭಾಷೆಯ ಸ್ಥಳಿಯ ಭಾಷಿಕರು ಹಾಗೆಯೇ ಮೂಲ ಪಠ್ಯ ಲಭ್ಯವಿರುವ ಭಾಷೆಗಳನ್ನು ಸಹ ಚೆನ್ನಾಗಿ ಅರ್ಥಮಾಡಿಕೊಂಡ ವ್ಯಕ್ತಿಯಾಗಿದ್ದಾರೆ.

ಇಲ್ಲಾ/ಹೌದು ಭಾಷಾ ಸಮುದಾಯದ ಜನರು, ಪುರುಷರು ಮತ್ತು ಮಹಿಳೆಯರ, ವೃದ್ಧರು ಮತ್ತು ಯುವಕರು ಈ ಅಧ್ಯಾಯದ ಅನುವಾದವನ್ನು ಪರಿಶೀಲಿಸಿದ್ದಾರೆ ಮತ್ತು ಅದು ಸಹಜ ಹಾಗು ಸ್ಪಷ್ಟವಾಗಿದೆ ಎಂದು ಒಪ್ಪುತ್ತಾರೆ.

ಇಲ್ಲಾ/ಹೌದು ಎರಡು ವಿಭಿನ್ನ ಸಭೆಯ ಸಭಾ ನಾಯಕರು ಈ ಅದ್ಯಾಯದ ಅನುವಾದವನ್ನು ಪರಿಶೀಲಿಸಿದ್ದಾರೆ ಮತ್ತು ನಿಖರವಾಗಿದೆ ಎಂದು ಒಪ್ಪಿಕೊಂಡಿದ್ದಾರೆ.

ಇಲ್ಲಾ/ಹೌದು ಕನಿಷ್ಠ ಎರಡು ವಿಭಿನ್ನ ಸಭೆಯ ನಾಯಕರು ಅಥವ ಅವರ ಪ್ರತಿನಿಧಿಗಳು ಈ ಅಧ್ಯಾಯದ ಅನುವಾದವನ್ನು ಪರಿಶೀಲಿಸಿದ್ದಾರೆ ಮತ್ತು ಈ ಭಾಷೆಯಲ್ಲಿ ಸತ್ಯವೇದದ ಈ ಅಧ್ಯಾಯವು ನೆಚ್ಚಿನ ಅನುವಾದವಾಗಿದೆ ಎಂದು ದೃಢಪಡಿಸಿದ್ದಾರೆ.