translationCore-Create-BCS_.../checking/publishing/01.md

7.1 KiB

Door43 ಮತ್ತು unfoldingWord.Bible ಮೇಲೆ ಪ್ರಕಾಶಕ ಮಾಡುವುದು

  • ಅನುವಾದ ಮತ್ತು ಪರಿಶೀಲನೆ ಮಾಡುವ ವಿಧಾನಗಳೆಲ್ಲವುಗಳ ಮೂಲಕ, ಅನುವಾದವು ನೀವು ಆಯ್ಕೆ ಮಾಡಿಕೊಂಡಿರುವ Door43 ವೆಬ್.ಸೈಟ್ ಎನ್ನುವ ಹೆಸರಿನ ಕೆಳಗೆ ಇರುವ ಭಂಡಾರದಲ್ಲಿ ನಿರ್ವಹಿಸಲ್ಪಡುವುದು ಮತ್ತು ಅಪ್ ಲೋಡ್ ಮಾಡಲಾಗುವುದು. ನೀವು ಕಳುಹಿಸಿದ ಮಾಹಿತಿಯನ್ನು ಅಪ್ ಲೋಡ್ ಮಾಡಿರಿ ಎಂದು ಅವರಿಗೆ ಹೇಳಿದಾಗ, translationStudio ಮತ್ತು translationCore ಮಾಹಿತಿಯನ್ನು ಕಳುಹಿಸಿಕೊಡುವವು.
  • door43 ಮೇಲೆ ಅನುವಾದದಲ್ಲಿ ತಿದ್ದುಪಡಿಗಳನ್ನು ಸಿದ್ಧಪಡಿಸಿದ ಮತ್ತು ಪರಿಶೀಲನೆಯನ್ನು ಸಂಪೂರ್ಣವಾಗಿ ಮುಕ್ತಾಯಗೊಳಿಸಿದಾಗ, ಪರಿಶೀಲಕರು ಅಥವಾ ಸಭಾ ನಾಯಕರು ಪ್ರಕಾಶನಕ್ಕೆ ಚಾಲನೆ ನೀಡಬಹುದು ಎಂದು ತಮ್ಮ ಅನಿಸಿಕೆಯನ್ನು unfoldingWord ಗೆ ವ್ಯಕ್ತಪಡಿಸುವರು, ಮತ್ತು ಅನುವಾದವು ನಂಬತಕ್ಕದ್ದಾಗಿದೆಯೆಂದು ಸಭಾಪಾಲಕರು, ಸಮುದಾಯ, ಮತ್ತು ಸಭೆಯ ಗುಂಪಿನ ನಾಯಕರು ಅನುಮೋದನೆ ಮಾಡಿದ್ದಾರೆಂದು ತಿಳಿಸುವ ಪತ್ರಗಳೊಂದಿಗೆ unfoldingWord ಗೆ ಕೊಡುವರು. ಪ್ರತಿಯೊಂದು ಅನುವಾದದ ಮಾಹಿತಿ ನಂಬಿಕೆಯ ವ್ಯಾಖ್ಯೆಗಳ ವೇದಾಂತದೊಂದಿಗೆ ಮತ್ತು ಅನುವಾದದ ಮಾರ್ಗದರ್ಶನಗಳ ಪದ್ಧತಿಗಳೊಂದಿಗೆ ಹೊಂದಿಕೊಂಡಿರಬೇಕು. unfoldingWord ಎನ್ನುವುದು ಅನುಮೋದನೆಗಳನ್ನು ಅಥವಾ ಅನುವಾದಗಳ ನಿಖರತೆಯನ್ನು ಪರಿಶೀಲನೆ ಮಾಡುವುದಕ್ಕೆ ಯಾವ ಪದ್ಧತಿಯನ್ನು ಹೊಂದಿರುವುದಿಲ್ಲ, ಇದರಿಂದ ಸಭೆಯ ಗುಂಪುಗಳ ನಾಯಕತ್ವದ ಸಮಗ್ರತೆಯ ಮೇಲೆ ಆತುಕೊಂಡಿರುತ್ತಾರೆ.
  • ಈ ಎಲ್ಲಾ ಅನುಮೋದನೆಗಳನ್ನು ಪಡೆದುಕೊಂಡನಂತರ, unfoldingWord ಎನ್ನುವುದು door43 ಮೇಲೆ ಇರುವಂತಹ ಅನುವಾದದ ನಕಲು ತಯಾರು ಮಾಡುತ್ತದೆ, ಒಂದು ನಕಲು ಪತ್ರವನ್ನು ಡಿಜಿಟಲ್ ರೂಪದಲ್ಲಿ unfoldingWord (https://unfoldingword.bible ನೋಡಿರಿ) ವೆಬ್ ಸೈಟ್ ಮೇಲೆ ಪ್ರಕಾಶಪಡಿಸಲಾಗುತ್ತದೆ. ಮುದ್ರಿಸುವುದಕ್ಕೆ ಸಿದ್ದವಾಗಿರುವ ಪಿಡಿಎಫ್ ಫೈಲನ್ನು ಕೊಡಲಾಗುವುದು ಮತ್ತು ಡೌನ್ ಲೋಡ್ ಮಾಡಿಕೊಳ್ಳುವುದಕ್ಕೆ ಲಭ್ಯದಲ್ಲಿಡಲಾಗುತ್ತದೆ. door43ರ ಮೇಲೆ ಇಟ್ಟಿರುವ ಪರಿಶೀಲನೆ ಮಾಡಿಟ್ಟಿರುವ ಅನುವಾದವನ್ನು ಬದಲಾಯಿಸುವುದಕ್ಕೆ ಸಾಧ್ಯತೆಗಳಿರುತ್ತವೆ, ಹೆಚ್ಚಿನ ಪರಿಶೀಲನೆಗೆ ಮತ್ತು ತಿದ್ದುಪಡಿಗೆ ಅವಕಾಶವನ್ನು ಕೊಡಲಾಗಿರುತ್ತದೆ.
  • unfoldingWord ಅನುವಾದಕ್ಕೆ ಉಪಯೋಗಿಸಲ್ಪಟ್ಟ ಮೂಲ ಪುಸ್ತಕದ ಆವೃತಿಯ ಸಂಖ್ಯೆ ತಿಳಿದುಕೊಂಡಿರಬೇಕಾದ ಅವಶ್ಯಕತೆಯಿದೆ. ಈ ಸಂಖ್ಯೆಯನ್ನು ಅನುವಾದಕ್ಕೆ ಉಪಯೋಗಿಸಲ್ಪಟ್ಟ ಆವೃತಿಯ ಸಂಖ್ಯೆಯೊಳಗೆ ಸಂಯೋಜಿಸಬೇಕು. ಇದರಿಂದ ಮೂಲ ವಾಕ್ಯದ ಸ್ಥಿತಿಯನ್ನು ತುಂಬಾ ಸುಲಭವಾಗಿ ತಿಳಿದುಕೊಳ್ಳುವುದಕ್ಕೆ ಅವಕಾಶ ಮತ್ತು ಅನುವಾದವನ್ನು ಬದಲಾಯಿಸಬಹುದು ಮತ್ತು ತಿದ್ದುಪಡಿ ಮಾಡಬಹುದು. ಆವೃತಿಯ ಸಂಖ್ಯೆಗಳ ಕುರಿತಾದ ಮಾಹಿತಿಗಾಗಿ, [ಮೂಲ ವಾಕ್ಯಗಳು ಮತ್ತು ಆವೃತಿಯ ಸಂಖ್ಯೆಗಳು] ಎನ್ನುವದನ್ನು ನೋಡಿರಿ (../../intro/translation-guidelines/01.md).

ಪರಿಶೀಲಕರನ್ನು ಪರಿಶೀಲನೆ ಮಾಡುವುದು

ವಿಷಯವನ್ನು ಉಪಯೋಗಿಸುವ ಸಭೆಯ ಮೂಲಕ ನಿರ್ಧಾರಣೆಯಾಗುವಂತೆಯೇ ಈ ದಾಖಲಾತಿಯಲ್ಲಿ ವಿವರಿಸಲ್ಪಟ್ಟ ವಿಷಯಗಳ ವಿಧಾನವನ್ನು ಮತ್ತು ಅವುಗಳನ್ನು ಪರಿಶೀಲನೆ ಮಾಡುವುದೆನ್ನುವುದು ವಿಷಯವನ್ನು ಪರಿಷ್ಕರಿಸುವುದರ ಮೇಲೆ ಮತ್ತು ಪುನರ್ ಪರಿಶೀಲನೆ ಮಾಡುವುದರ ವಿಧಾನದ ಮೇಲೆ ಆಧಾರವಾಗಿರುತ್ತದೆ . ಹೆಚ್ಚಿನ ಸಂಖ್ಯೆಯ ಜನರಿಂದ ಹೆಚ್ಚಿನ ಮಾಹಿತಿಗಳನ್ನು ತೆಗೆದುಕೊಳ್ಳುವ ಜನರ ಪ್ರತಿಕ್ರೀಯೆಯನ್ನು ಪ್ರೋತ್ಸಾಹಗೊಳಿಸಿಲಾಗುವುದು ಪ್ರೋತ್ಸಾಹ ಮಾಡಲಾಗಿದೆ (ಮತ್ತು ಕಾರ್ಯ ಸಾಧ್ಯವಾದ ಅನುವಾದ ಮಾಡುವ ಸಾಫ್ಟ್ ವೇರಿನಲ್ಲಿ ತೋರಿಸಲಾಗಿದೆ). ಆ ಕಾರಣದಿಂದಲೇ, ವಿಷಯದ ಅನುವಾದಗಳೆಲ್ಲವು ಅನಿರ್ದಿಷ್ಟವಾಗಿ ಅನುವಾದದ ವೇದಿಕೆಯ ಮೇಲೆ (http://door43.org ನೋಡಿರಿ) ವಿಷಯದ ಅನುವಾದಗಳು ಲಭ್ಯವಾಗಿರಲು ಮುಂದುವರಿಸಲಾಗಿರುತ್ತದೆ. ಇದರಿಂದ ಉಪಯೋಗಿಸುವವರು ಅವುಗಳನ್ನು ಇನ್ನಷ್ಟು ಹೆಚ್ಚಾಗಿ ಸುಧಾರಣೆ ಮಾಡಬಹುದು. ಈ ವಿಧಾನದಲ್ಲಿ ಹಂತ ಹಂತವಾಗಿ ಅನುವಾದದ ಗುಣಮಟ್ಟವನ್ನು ಹೆಚ್ಚಿಸುವ ಆಲೋಚನೆಯಲ್ಲಿ ವಾಕ್ಯಾನುಸಾರವಾದ ವಿಷಯಗಳನ್ನು ರಚಿಸಲು ಸಭೆಯೆಲ್ಲರು ಸೇರಿ ಕೆಲಸ ಮಾಡಬಹುದು.