translationCore-Create-BCS_.../checking/community-evaluation/01.md

5.9 KiB

ಸಮುದಾಯ ಪರಿಶೀಲಕರ ಕೆಲಸಕ್ಕಾಗಿ ಇದನ್ನು ಪರಿಶೀಲನೆ ಮಾಡುವ ಪಟ್ಟಿಯಂತೆ ಈ ಪುಟವನ್ನು ನೀವು ಉಪಯೋಗಿಸಬಹುದು, ಮತ್ತು ಇದನ್ನು ನೀವು ಮುದ್ರಿಸಬಹುದು, ಆ ಪರೀಶೀಲನ ಪಟ್ಟಿಯನ್ನು ಅನುವಾದದ ತಂಡ ಮತ್ತು ಸಮುದಾಯದ ನಾಯಕರು ತುಂಬತಕ್ಕದ್ದು , ಮತ್ತು ಈ ಅನುವಾದಕ್ಕಾಗಿ ಉಪಯೋಗಿಸಿದ ಪರಿಶೀಲನೆ ಪದ್ಧತಿ ದಾಖಲಾತಿಯಾಗಿಯೂ ಇದನ್ನು ಇಟ್ಟುಕೊಳ್ಳಬಹುದು.

ಅನುವಾದ ತಂಡದ ಸದಸ್ಯರಾಗಿರುವ ನಾವು ಭಾಷೆಯ ಸಮುದಾಯ ಸದಸ್ಯರೊಂದಿಗೆ _____________________ ಅನುವಾದವನ್ನು ಪರಿಶೀಲನೆ ಮಾಡಿದ್ದೇವೆಂದು ಅನುಮೋದನೆ ಮಾಡಬಹುದು.

  • ನಾವು ಹಿರಿಯರ ಜೋತೆಯಲ್ಲಿ ಮತ್ತು ಚಿಕ್ಕವರ ಜೊತೆಯಲ್ಲಿ, ಮತ್ತು ಸ್ತ್ರೀ ಪುರುಷರ ಜೊತೆಯಲ್ಲಿಯೂ ಅನುವಾದವನ್ನು ಪರಿಶೀಲನೆ ಮಾಡಿದ್ದೇವೆ.
  • ನಾವು ಸಮುದಾಯದೊಂದಿಗೆ ಅನುವಾದವನ್ನು ಪರಿಶೀಲನೆ ಮಾಡುತ್ತಿರುವಾಗ ಅನುವಾದ ಪ್ರಶ್ನೆಗಳನ್ನು ಉಪಯೋಗಿಸಿದ್ದೇವೆ.
  • ಸಮುದಾಯದ ಸದಸ್ಯರು ಅಥವಾ ಜನರು ಅನುವಾದವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳದ ಸ್ಥಳಗಳಲ್ಲಿ ಸುಲಭವಾಗಿ, ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವುದಕ್ಕೆ ನಾವು ಅನುವಾದವನ್ನು ತಿದ್ದುಪಡಿ ಮಾಡಿದ್ದೇವೆ.

ದಯೆವಿಟ್ಟು ಕೆಳಗಿನ ಪ್ರಶ್ನೆಗಳಿಗೆ ಉತ್ತರ ನೀಡಿ. ಈ ಪ್ರಶ್ನೆಗಳಿಗೆ ಉತ್ತರಗಳನ್ನು ಕೊಡುವುದರ ಮೂಲಕ ಕ್ರೈಸ್ತ ಸಮುದಾಯದಲ್ಲಿರುವವರಿಗೆ ವ್ಯಾಪಕ ಮಟ್ಟಿಗೆ ಸಹಾಯ ಮಾಡುವವರಾಗಿರುತ್ತೇವೆ, ಇದರ ಮೂಲಕ ಅನುವಾದ ಮಾಡುವ ಭಾಷೆಯ ಸಮುದಾಯದ ಜನರು ಅನುವಾದವು ಸ್ಪಷ್ಟವಾಗಿದೆ, ನಿಖರತೆಯಾಗಿದೆ, ಮತ್ತು ಸ್ವಾಭಾವಿಕವಾಗಿದೆಯೆಂದು ತಿಳಿದುಕೊಳ್ಳುವರು.

  • ಸಮುದಾಯದ ಪ್ರತಿಸ್ಪಂದನೆಯು ಸಹಾಯಕರವಾಗಿರುವ ಕೆಲವು ವಾಕ್ಯಭಾಗಗಳನ್ನು ಪಟ್ಟಿ ಮಾಡಿರಿ. ಅವರಿಗೆ ಸ್ಪಷ್ಟವಾಗಿರುವಂತೆ ಈ ವಾಕ್ಯಭಾಗಗಳನ್ನು ನೀವು ಹೇಗೆ ಮಾರ್ಪಾಟು ಮಾಡಿದ್ದೀರಿ?



  • ಕೆಲವೊಂದು ಪ್ರಾಮುಖ್ಯವಾದ ಪದಗಳಿಗೆ ಅಥವಾ ಶಬ್ದಗಳಿಗೆ ವಿವರಣೆಯನ್ನು ಬರೆಯಿರಿ, ಮೂಲ ಭಾಷೆಯಲ್ಲಿ ಉಪಯೋಗಿಸಲ್ಪಟ್ಟ ಪದಗಳಿಗೆ ಅಥವಾ ಶಬ್ದಗಳಿಗೆ ಅವು ಎಷ್ಟು ಸಮಾನವಾಗಿರುತ್ತವೆಯೆಂದು ವಿವರಣೆ ಕೊಡಿರಿ. ನೀವು ಈ ಪದಗಳನ್ನು ಯಾಕೆ ಆಯ್ಕೆ ಮಾಡಿಕೊಂಡಿದ್ದೀರೆಂದು ಪರಿಶೀಲಕರು ಅರ್ಥಮಾಡಿಕೊಳ್ಳಲು ಇದು ಸಹಾಯಕರವಾಗಿರುತ್ತದೆ.



  • ವಾಕ್ಯಭಾಗಗಳನ್ನು ಗಟ್ಟಿಯಾಗಿ ಓದುತ್ತಿರುವಾಗ ಭಾಷೆಯಲ್ಲಿ ಯಾವ ಅಡೆತಡೆ ಇಲ್ಲದೇ ಉತ್ತಮವಾಗಿಯಿದೆಯೆಂದು ಸಮುದಾಯದವರು ಪರಿಶೀಲನೆ ಮಾಡಿದ್ದಾರೋ? (ನಿಮ್ಮ ಸ್ವಂತ ಸಮುದಾಯದಿಂದ ಬಂದ ಲೇಖಕರು ಬರೆದಿರುವ ಭಾಷೆಯಂತೆಯೇ ಈ ಭಾಷೆ ಇದೆಯೋ?)



ಈ ಅನುವಾದವು ಸ್ಥಳೀಯ ಸಮುದಾಯಕ್ಕೆ ಎಷ್ಟರ ಮಟ್ಟಿಗೆ ಸ್ವೀಕೃತವಾಗಿದೆಯೆನ್ನುವದರ ಕುರಿತಾಗಿ ಸಾರಾಂಶ ವ್ಯಾಖ್ಯೆಯನ್ನು ಮಾಡುವುದಕ್ಕೆ ಸಮುದಾಯದ ನಾಯಕರು ತಮ್ಮ ಸ್ವಂತ ಮಾಹಿತಿಯನ್ನು ಸೇರಿಸುವುದಕ್ಕೆ ಇಷ್ಟಪಡಬಹುದು. ಬೃಹತ್ ಸಭೆಯ ನಾಯಕತ್ವಕ್ಕೆ ಈ ಮಾಹಿತಿಯು ಲಭ್ಯದಲ್ಲಿರಬೇಕು. ಮತ್ತು ಇದಕ್ಕೆ ಮುಂಚಿತವಾಗಿಯೇ ಮಾಡಿರುವ ಪರಿಶೀಲನೆ ಪದ್ಧತಿಯಲ್ಲಿ ನಿಶ್ಚಿತತೆಯನ್ನು ಹೊಂದಿಕೊಳ್ಳುವುದಕ್ಕೆ ಮತ್ತು ಅವುಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ ಇದು ಅವರಿಗೆ ಸಹಾಯಕವಾಗಿರುವುದು. ಅವರು ನಿಖರತೆಯ ಪರಿಶೀಲನೆಯನ್ನು ಮಾಡುವಾಗ ಮತ್ತು ಕೊನೆಯ ಕ್ರಮಬದ್ಧವಾದ ಪರಿಶೀಲನೆ ಮಾಡುವಾಗ ಸ್ಥಳೀಯ ಕ್ರೈಸ್ತ ಸಮುದಾಯದಿಂದ ಅನುಮೋದನೆ ಮಾಡಲ್ಪಟ್ಟಿರುವ ಅನುವಾದವನ್ನು ಮೌಲ್ಯೀಕರಿಸುವುದಕ್ಕೆ ಇದು ಅವರಿಗೆ ಸಹಾಯ ಮಾಡುತ್ತದೆ.