translationCore-Create-BCS_.../translate/bita-phenom/01.md

14 KiB

ಸತ್ಯವೇದದಲ್ಲಿ ಬರುವ ಸ್ವಾಭಾವಿಕ ಫಿನಾಮಿನಾಗಳ ಚಿತ್ರಣಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಿದೆ. ದೊಡ್ಡ ಅಕ್ಷರಗಳಲ್ಲಿ ಇರುವ ಪದಗಳು ಚಿತ್ರಣಗಳನ್ನು ಪ್ರತಿನಿಧಿಸುತ್ತದೆ. ಈ ಪದಗಳು ಎಲ್ಲಾ ವಾಕ್ಯಗಳಲ್ಲಿ ಇರಲೇ ಬೇಕು ಎಂಬ ನಿಯಮವಿಲ್ಲ ಆದರೆ ಇದರ ಅರ್ಥ,ಉದ್ದೇಶಗಳನ್ನು ಪದಗಳು ಪ್ರತಿನಿಧಿಸಿದರೆ ಸಾಕು.

“ಬೆಳಕು ವ್ಯಕ್ತಿಯ ಮುಖವನ್ನು ಪ್ರತಿನಿಧಿಸುತ್ತದೆ. (ಇದು ಒಬ್ಬರ ಮುಖ ಮತ್ತು ಪ್ರಸ್ತುತತೆಯನ್ನು ಸೇರಿ ಇರುವಂಥದ್ದನ್ನು ಪ್ರತಿನಿಧಿಸುತ್ತದೆ.

ಯೆಹೋವನೇ ನೀನು, ನಿನ್ನ ಪ್ರಸನ್ನ ಮುಖದಿಂದ ನಮ್ಮನ್ನು ನೋಡು. (ದಾ.ಕೀ. 4:6 ULB)

ನಮ್ಮ ಪಿತೃಗಳಿಗೆ ಕತ್ತಿ ಈ ದೇಶವನ್ನು ಸ್ವಾಧೀನಮಾಡಿಕೊಡಲಿಲ್ಲ. ಅವರ ಭುಜಬಲ ಅವರಿಗೆ ಜಯಕೊಡಲಿಲ್ಲ. ಆದರೆ ನಿನ್ನ ಭುಜಬಲ, ಹಸ್ತ, ಪ್ರಸನ್ನತೆ, ಬೆಳಕು ಇವೇ ಅವರಿಗೆ ಜಯತಂದು ಕೊಟ್ಟಿದ್ದು , ಏಕೆಂದರೆ ನಿನ್ನ ಒಲುಮೆ ಅವರ ಕಡೆಗಿತ್ತು. (ದಾ.ಕೀ. 44:3 ULB)

ನನ್ನ ಮುಖಕಾಂತಿಯನ್ನುಅವರು ಎಂದೂ ಕುಂದಿಸಲೂ ಇಲ್ಲ,ತಿರಸ್ಕರಿಸಲೂ ಇಲ್ಲ .(ಯೋಬ 29:24 ULB)

ಯೆಹೋವನೇ ನಿನ್ನ ಮುಖ ಪ್ರಕಾಶದಲ್ಲಿ ಸಂಚರಿಸುವವರು . (ದಾ.ಕೀ. 89:15 ULB)

LIGHT “ಬೆಳಕು “ ಒಳ್ಳೇತನವನ್ನು ಪ್ರತಿನಿಧಿಸುತ್ತದೆ. ಕತ್ತಲೆ ಕೆಟ್ಟದ್ದನ್ನು ಪ್ರತಿನಿಧಿಸುತ್ತದೆ.

ನಿಮ್ಮ ದೃಷ್ಟಿಕೆಟ್ಟದಾಗಿದ್ದರೆ ನಿಮ್ಮ ದೇಹವೆಲ್ಲಾ ಕತ್ತಲಾಗಿರುವುದು. ಹಾಗಾದರೆ ನಿನ್ನೊಳಗಿರುವ ಬೆಳಕೇ ಕತ್ತಲಾದರೆ ಆ ಕತ್ತಲು ಎಂಥದ್ದಿರಬಹುದು? ಎಷ್ಟಿರಬಹುದು? (ಮತ್ತಾಯ 6:23 ULB)

ನೆರಳು ಅಥವಾ ಕತ್ತಲು ಮರಣವನ್ನು ಪ್ರತಿನಿಧಿಸುತ್ತದೆ.

ನೀನು ನಮ್ಮನ್ನು ಪರಾಜಯಗೊಳಿಸಿ ನಮ್ನ ದೇಶವನ್ನು ನರಿಗಳಿರುವ ಕಾಡನ್ನಾಗಿ ಮಾಡಿದ್ದೇಕೆ? ಕಾರ್ಗತ್ತಲು ನಮ್ಮನ್ನು ಕವಿಯುವಂತೆ ಮಾಡಿದ್ದೇಕೆ? . (ದಾ.ಕೀ. 44:19)

ಬೆಂಕಿ ಮನಸ್ಸಿನ ತೀವ್ರವಾದ ಭಾವನೆಗಳನ್ನು ಪ್ರತಿನಿಧಿಸುತ್ತದೆ. ನಿರ್ದಿಷ್ಟವಾಗಿ ಪ್ರೀತಿ ಮತ್ತು ಕೋಪದಲ್ಲಿ.

ಇದಲ್ಲದೆ ಅಧರ್ಮವು ಹೆಚ್ಚಾಗುವುದರಿಂದ ಬಹುಜನರ ಪ್ರೀತಿಯು ತಣ್ಣಗಾಗಿ ಹೋಗುವುದು . (ಮತ್ತಾಯ 24:12 ULB)

ಜಲರಾಶಿಗಳು ಪ್ರೀತಿಯನ್ನು ನಂದಿಸಲಾರವು . (ಪರಮಗೀತೆಗಳು 8:7 ULB)

ನನ್ನ ಕೋಪಾಗ್ನಿ ಪ್ರಜ್ವಲಿಸುತ್ತದೆ ಮತ್ತು ಬುಡಸಹಿತವಾಗಿ ಬೆಟ್ಟಗಳನ್ನು ದಹಿಸಿಬಿಡುವುದು. (ಧರ್ಮೋಪದೇಶ ಕಾಂಡ 32:22 ULB)

ಯೆಹೋವನ ಕೋಪಾಗ್ನಿಯು ಇಸ್ರಾಯೇಲರ ವಿರುದ್ಧವಾಗಿ ದಹಿಸಿತು. (ನ್ಯಾಯಸ್ಥಾಪಕರು 3:8 ULB)

ಯೆಹೋವನು ಈ ಬಗ್ಗೆ ಕೇಳಿದಾಗ ತನು ಕೋಪದಿಂದ ರೋಷಗೊಂಡನು ; ಇದರಿಂದ ಆತನ ಕೋಪಾಗ್ನಿಯು ಯಕೋಬನ ವಂಶದವರಲ್ಲಿ ಹೊತ್ತಿಕೊಂಡಿತು ಇಸ್ರಾಯೇಲರ ಮೇಲೆ ಕೋಪದಿಂದ ಕ್ರಮಣ ಮಾಡಿದನು. (ದಾ.ಕೀ. 78:21 ULB)

ಬೆಂಕಿ ಅಥವಾ ದೀಪ ಜೀವನವನ್ನು ಪ್ರತಿನಿಧಿಸುತ್ತದೆ.

ಅವರೆಲ್ಲಾ, 'ಅವನನ್ನು ನಮಗೆ ಒಪ್ಪಿಸು, ತಮ್ಮನ ಪ್ರಾಣಕ್ಕಾಗಿ ಅವನ ಪ್ರಾಣವನ್ನು ತೆಗೆದು ಬಿಡುತ್ತೇವೆ. ನಿನ್ನನ್ನು ಬಾಧ್ಯಸ್ಥನಿಲ್ಲದ ಹಾಗೆ ಮಾಡಿಬಿಡುತ್ತೇವೆ ಎಂದು ಹೇಳಿದರು. ಅವರು ನನಗಿರುವ ಒಂದು ಕೆಂಡವನ್ನು ಆರಿಸಿ ಬಿಟ್ಟು, ನನ್ನ ಗಂಡನ ಹೆಸರನ್ನು ಸಂತಾನವನ್ನು ಭೂಲೋಕದ ಮೇಲಿನಿಂದ ಅಳಿಸಬೇಕೆಂದಿದ್ದಾರೆ 2 ನೇ ಸಮುವೇಲ 14:7 ULB)

ಇಸ್ರಾಯೇಲರ ದೀಪವು ನಂದಿಹೋಗದಂತೆ ನೀನು ಇನ್ನು ಮುಂದೆ ನಮ್ಮ ಜೊತೆಯಲ್ಲಿ ಯುದ್ಧಕ್ಕೆ ಬರಬಾರದು ಎಂದು ಖಂಡಿತವಾಗಿ ಹೇಳಿದರು.. (2 ನೇ ಸಮುವೇಲ 21:17 ULB)

ನಾನು ನನ್ನ ಹೆಸರಿಗೋಸ್ಕರ ಆರಿಸಿಕೊಂಡ ಯೆರುಸಲೇಮ್ ಪಟ್ಟಣದಲ್ಲಿ ನನ್ನ ಸೇವಕನಾದ ದಾವೀದನ ದೀಪವು ನನ್ನ ಸನ್ನಿಧಿಯಲ್ಲಿ ಉರಿಯುತ್ತಲೇ ಇರುವಂತೆ ಅವನ ಮಗನಿಗೆ ಒಂದು ಕುಲವನ್ನು ಉಳಿಸುವೆನು. (1 ನೇ ಅರಸರು 11:36 ULB)

ತನ್ನ ಆಜ್ಞೆಯನ್ನು ಮೀರದೆ ಜೀವದಿಂದ ಇರುವವರೆಗೂ ತನ್ನ ಚಿತ್ತಕ್ಕನುಸಾರವಾಗಿ ನಡೆದ ದಾವೀದನ ನಿಮಿತ್ತವಾಗಿ ಯೆಹೋವನು ಯೆರುಸಲೇಮ್ ನಲ್ಲಿನ ಇವನ ದೀಪವನ್ನು ನಂದಿಸಲಿಲ್ಲ. (1 ನೇ ಅರಸರು 15:4 ULB)

ದುಷ್ಟನ ದೀಪವು ನಂದಿಹೋಗುವುದು; ಅವನ ದೀಪದ ಕುಡಿಯು ಬೆಳಗುವುದಿಲ್ಲ ತೂಗುದೀವಿಗೆಯು ನಂದಿಹೋಗುವುದು .ಅವನ ಗುಡಾರದಲ್ಲಿನ ಬೆಳಕು ಕತ್ತಲಾಗುವುದು ; (ಯೋಬ 18:5-6 ULB)

ನೀನೇ ನನ್ನ ದೀಪವನ್ನು ; ಹೊತ್ತಿಸುವವನಲ್ಲವೇ? ನನ್ನ ದೇವರಾದ ಯೆಹೋವನೇ, ನನಗೆ ಬೆಳಕನ್ನು ಕೊಟ್ಟು ಕತ್ತಲನ್ನು ಪರಿಹರಿಸುವನು . (ದಾ.ಕೀ. 18:28 ULB)

ಕಳೆಗುಂದಿದ ದೀಪವನ್ನು ನಂದಿಸದೆ ಸಧ್ಧರ್ಮವನ್ನು ಪ್ರಚಾರಪಡಿಸಿ ಸಿದ್ಧಿಗೆ ತರುವನು. (ಯೆಶೆಯ 42:3 ULB)

ವಿಶಾಲವಾದ ಸ್ಥಳವು ಸುರಕ್ಷಣೆ, ಭದ್ರತೆ ಮತ್ತು ನಿಶ್ಚಿಂತೆಯನ್ನು ಪ್ರತಿನಿಧಿಸುತ್ತದೆ.

ಅವರು ನನ್ನ ವಿಪತ್ಕಾಲದಲ್ಲಿ ನನ್ನ ಮೇಲೆ ಆಕ್ರಮಣ ಮಾಡಿದರು. ಆತನು ನನ್ನ ಉದ್ಧಾರಕನಾದನು ಆತನು ನನ್ನನ್ನು ಬಿಡಿಸಿ ವಿಶಾಲಸ್ಥಳದಲ್ಲಿ ಸೇರಿಸಿದನು ; ಏಕೆಂದರೆ ಆತನು ನನ್ನನ್ನು ಮೆಚ್ಚಿ ರಕ್ಷಿಸಿದನು. (ದಾ.ಕೀ. 18:18-19 ULB) ನೀನು ನನ್ನ ಕಾಲುಗಳಿಗೆ ವಿಶಾಲಸ್ಥಳವನ್ನು ಕೊಟ್ಟಿರುವೆ. ಇದರಿಂದ ನನ್ನ ಕಾಲುಗಳು ಕದಲುವುದಿಲ್ಲ., ಜಾರುವುದಿಲ್ಲ. (2 ನೇ ಸಮುವೇಲ 22:37 ULB) ನೀನು ಮನುಷ್ಯರು ತಮ್ಮ ತಲೆಗಳ ಮೇಲೆಯೇ ರಥಗಳು ಹಾಯಿಸುವಂತೆ ಮಾಡಿದೆ. ನಾವು ಬೆಂಕಿಯನ್ನು, ನೀರನ್ನು ದಾಟಬೇಕಾಯಿತು. ಆದರೂ ನಮ್ಮನ್ನು ಇಕ್ಕಟ್ಟಿನಿಂದ ಪಾರುಮಾಡಿ ಸುಸ್ಥಿತಿಗೆ ತಂದಿರುವೆ . (ದಾ.ಕೀ.66:12 ULB)

ಇಕ್ಕಟ್ಟಾದ ಸ್ಥಳ ಅಪಾಯವನ್ನು ಅಥವಾ ಸಂಕಷ್ಟವನ್ನು ಪ್ರತಿನಿಧಿಸುತ್ತಾರೆ.

ನ್ಯಾಯ, ನೀತಿಯನ್ನು ಸ್ಥಾಪಿಸುವ ದೇವರೇ ನಾನು ಮೊರೆಯಿಟ್ಟಾಗ ಸದುತ್ತರ ದಯಪಾಲಿಸು ನನ್ನನ್ನು ಇಕ್ಕಟ್ಟಾದ ಸ್ಥಳದಿಂದ ತಪ್ಪಿಸಿ ಸೂಕ್ತವಾದ ಸ್ಥಳದಲ್ಲಿ ಸೇರಿಸು . ನನ್ನನ್ನು ಕರುಣಿಸಿ ನನ್ನ ಪ್ರಾರ್ಥನೆಯನ್ನು ಆಲಿಸು. (ದಾ.ಕೀ. 4:1 ULB) ವ್ಯಭಿಚಾರಿಯು ಆಳವಾದ ಹಳ್ಳವಿದ್ದಂತೆ. ಜಾರ ಸ್ತ್ರೀಯು ಇಕ್ಕಟ್ಟಾದ ಗುಂಡಿ. (ಜ್ಞಾನೋಕ್ತಿಗಳು 23:27 ULB)

ದ್ರವ ನೈತಿಕಮೌಲ್ಯಗಳನ್ನು ಪ್ರತಿನಿಧಿಸುತ್ತದೆ. (ಭಾವನೆಗಳು, ಮನೋದೋರಣೆಗಳು,ಪವಿತ್ರಾತ್ಮ ಜೀವನ)

ಯೆಹೋವನು ಕಟ್ಟೆಯೊಡೆದ ಪ್ರವಾಹದಂತೆ ನನ್ನ ಶತೃಗಳ ಮೇಲೆ ಬಿದ್ದು ಅವರನ್ನು ನನ್ನ ಕಣ್ಣ ಮುಂದೆಯೇ ನಾಶಮಾಡಿದನು . (2ನೇ ಸಮುವೇಲ 5:20 ULB)

ತುಂಬಿತುಳುಕುವ ಜಲಪ್ರವಾಹದಿಂದಲೋ ಎಂಬಂತೆ ತನ್ನ ವಿರೋಧಿಗಳನ್ನು ಹಿಂದಿಕ್ಕಿ ಅಂಧಕಾರಕ್ಕೆ ತಳ್ಳುವನು . (ನಹೂಮ 1:8 ULB)

ಮನೋವ್ಯಥೆಯಿಂದ ಕಣ್ಣೀರು ಸುರಿಸುತ್ತೇನೆ. (ದಾ.ಕೀ. 119:28 ULB)

ನಾನು ಸುರಿಯಲ್ಪಟ್ಟ ನೀರಿನಂತೆ ಇದ್ದೇನೆ . (ದಾ.ಕೀ. 22:14 ULB)

ತರುವಾಯ ನಾನು ಎಲ್ಲಾ ಮನುಷ್ಯರ ಮೇಲೆ ನನ್ನ ಆತ್ಮವನ್ನು ಸುರಿಸುವೆನು. (ಯೋವೇಲ 2:28 ULB)

ನನ್ನ ದೇವರೇ, ನನ್ನ ಆತ್ಮವು ಕುಗ್ಗಿಹೋಗಿದೆ (ದಾ.ಕೀ. 42:6 ULB)

ಯೆಹೋವನು ತನ್ನ ಮಹಾರೌದ್ರವನ್ನು ನಮ್ಮ ಮೇಲೆ ಸುರಿಸಿದ್ದಾನೆ (2 ನೇ ಪೂರ್ವಕಾಲವೃತ್ತಾಂತ 34:21 ULB)

ನೀರು ಯಾರು ಏನು ಹೇಳುತ್ತಾರೆ ಎಂಬುದನ್ನು ಪ್ರತಿನಿಧಿಸುತ್ತದೆ.

ಜಗಳಗಂಟಿಯಾದ ಹೆಂಡತಿಯು ಹನಿಹನಿಯಾಗಿ ತೊಟ್ಟಿಕ್ಕುವ ನೀರಹನಿಯ ಹಾಗೆ ಇರುವಳು. (ಜ್ಞಾನೋಕ್ತಿಗಳು 19:13 ULB)

ಅವನ ತುಟಿಗಳು ಸುಂದರ ಲಿಲ್ಲಿ ಹೂಗಳು, ಹನಿಹನಿ ನೀರು ತೊಟ್ಟಿಕ್ಕುವ ಕಮಲಗಳು ಸುಂದರ ಪುಷ್ಪ.. (ಪರಮಗೀತ 5:13 ULB)

ನನ್ನ ನರಳಾಟವು ಜಲಧಾರೆಯಂತಿದೆ . (ಯೋಬ 3:24 ULB)

ಸತ್ಪುರುಷರ ನುಡಿಯು ಆಳವಾದ ನೀರು ; ಜ್ಞಾನದ ಬುಗ್ಗೆ ಹರಿಯುವ ತೊರೆ (ಜ್ಞಾನೋಕ್ತಿಗಳು 18:4 ULB)

ಜಲಪ್ರವಾಹ ನಾಶವನ್ನು ಪ್ರತಿನಿಧಿಸುತ್ತದೆ.

ನಾನು ಆಳವಾದ ನೀರಿನಲ್ಲಿ , ಬಿದ್ದಿದ್ದೇನೆ ಪ್ರವಾಹವು ನನ್ನನ್ನು ಕೊಚ್ಚಿಕೊಂಡು ಹೋಗುತ್ತದೆ. (ದಾ.ಕೀ 69:2 ULB)

ಪ್ರವಾಹವು ನನ್ನನ್ನು ಕೊಚ್ಚಿಕೊಂಡು ಹೋಗದಿರಲಿ (ದಾ.ಕೀ. 69:15 ULB)

ಮೇಲಣ ಲೋಕದಿಂದ ಕೈ ಚಾಚಿ ಮಹಾಜಲರಾಶಿಯೊಳಗಿಂದ ನನ್ನನ್ನು ಎಳೆದುಕೋ ಸುಳ್ಳಾಣೆ ಇಡುವ ಅನ್ಯ ಜನಗಳ ಕೈಯಿಂದ ನನ್ನನ್ನು ಬಿಡಿಸು. (ದಾ.ಕೀ.144:7 ULB)

ನೀರಿನ ಚಿಲುಮೆ/ಬುಗ್ಗೆ ಯಾವುದಾದರೂ ಮೂಲದ ಬೆಳವಣಿಗೆಯನ್ನು (ಉದಾಹರಣೆಗೆ ಜನಾಂಗದ ಮೂಲ) ಪ್ರತಿನಿಧಿಸುತ್ತದೆ.

ಯೆಹೋವನ ಭಯ ಜೀವದ ಬುಗ್ಗೆ . (ಜ್ಞಾನೋಕ್ತಿಗಳು 14:27 ULB)

ರಕ್ಷಣೆಯನ್ನು ಪ್ರತಿನಿಧಿಸುತ್ತದೆ.

ಯೆಹೋವನಲ್ಲದೆ ನಮ್ಮ ಆಶ್ರಯ ಬಂಡೆ ಯಾರಿದ್ದಾರೆ.? (ದಾ.ಕೀ. 18:31 ULB)

ಯೆಹೋವನೇ,ನನ್ನ ಬಂಡೆಯೂ, ನನ್ನ ಶರಣನು, ನನ್ನ ವಿಮೋಚಕನು. (ದಾ.ಕೀ.19:14 ULB)