translationCore-Create-BCS_.../translate/figs-idiom/01.md

11 KiB
Raw Blame History

"ನುಡಿಗಟ್ಟುಗಳು" ಇವು ಸಹ ಅಲಂಕಾರವಾಗಿದ್ದು ಪದಗಳು ಗುಂಪಾಗಿ ಕಂಡು ಬರುತ್ತವೆ. ಒಂದು ಪದಕ್ಕೆ ಅರ್ಥವಿರುವಂತೆ ಈ ಪದದ ಗುಂಪಿಗೆ ಕೆಲವೊಮ್ಮೆ ವಿಭಿನ್ನವಾದ ಅರ್ಥವನ್ನು ಕೊಟ್ಟು ಅರ್ಥಮಾಡಿಕೊಳ್ಳಬಹುದು.

ಬೇರೆ ಸಂಸ್ಕೃತಿಯಲ್ಲಿನ ಜನರಿಗೆ ಇಂತಹ ನುಡಿಗಟ್ಟು, ಕೆಲವೊಮ್ಮೆಈ ರೀತಿಯ ನಾಣ್ನುಡಿ ಅರ್ಥವಾಗದೇ ಇರಬಹುದು. ನುಡಿಗಟ್ಟು ಯಾವ ಭಾಷೆಯಲ್ಲಿದೆಯೋ ಆ ಭಾಷೆಯ ಅಥವಾ ಸಂಸ್ಕೃತಿಯ ಜನರಿಗೆ ಇದು ಸುಲಭವಾಗಿ ಸರಿಯಾಗಿ ಅರ್ಥವಾಗುತ್ತದೆ. ಎಲ್ಲಾ ಭಾಷೆಯಲ್ಲೂ ಇಂತಹ ನುಡಿಗಟ್ಟ ಉಪಯೋಗಿಸುತ್ತಾರೆ. ಇಂಗ್ಲೀಷ್ ಭಾಷೆಯಲ್ಲಿನ ಕೆಲವು ಉದಾಹರಣೆಗಳು.

  • "ನೀನು ನನ್ನ ಕಾಲು ಏಳೆಯುತ್ತಿದ್ದೀಯಾ", ಇದರ ಅರ್ಥ(ನೀನು ನನಗೆ ಸುಳ್ಳು ಹೇಳುತ್ತಿರುವಿ)
  • ಈ ಲಕೋಟೆಯನ್ನು (envelope) ನೂಕಬೇಡ (ಇದರ ಅರ್ಥ ವಿಷಯವನ್ನು ಅತಿರೇಕಕ್ಕೆ ತೆಗೆದುಕೊಡು ಹೋಗಬೇಡ)
  • ಈ ಮನೆ ನೀರಿನಲ್ಲಿ ಮುಳುಗಿದೆ) (ಇದರ ಅರ್ಥ ಈ ಮನೆಗೆ ತೆಗೆದುಕೊಂಡಿರುವ ಸಾಲದ ಮೊತ್ತ ಮನೆಯ ನಿಜವಾದ ಮೌಲ್ಯಕ್ಕಿಂತ ಹೆಚ್ಚಾಗಿದೆ).
  • ನಾವು ನಗರವನ್ನು ಕೆಂಪುಬಣ್ಣದಿಂದ ಬಳೆಯುತ್ತೇವೆ, ಇದರ ಅರ್ಥ ಈ ರಾತ್ರಿ ನಾವು ನಗರದ ಸುತ್ತ ಸಂಭ್ರಮಾಚರಣೆಗಳಿಂದ ಸಂತೋಷಿಸುತ್ತೇವೆ, ಎಂದು.

###ವಿವರಣೆಗಳು.

ಒಂದು ಭಾಷೆಯ ಅಥವಾ ಸಂಸ್ಕೃತಿಯ ಜನರಿಗೆ ವಿಶೇಷ ಅರ್ಥವನ್ನು ನೀಡುವ ನುಡಿಗಟ್ಟು ಅಥವಾ ನಾಣ್ನುಡಿ ಬಳಸಲು ಅವಕಾಶ ಮಾಡಿಕೊಡುವುದು. ಈ ಪದಗಳ ಅರ್ಥವನ್ನು ಒಬ್ಬ ವ್ಯಕ್ತಿ ಒಂದು ಪದವನ್ನು ಅರ್ಥಮಾಡಿಕೊಳ್ಳುವುದಕ್ಕಿಂತ ಭಿನ್ನವಾಗಿ ಅರ್ಥಮಾಡಿಕೊಳ್ಳಬಹುದು.

ಆತನು **ಯೆರೂಸಲೇಮಿಗೆ ಹೋಗಲು **ಮನಸ್ಸನ್ನು ದೃಢಮಾಡಿಕೊಂಡನು (ಲೂಕ 9:51 ULT)

ಇಲ್ಲಿ " ಮನಸ್ಸನ್ನು ದೃಢಮಾಡಿಕೊಂಡನು " ಎಂಬುದು ನಿರ್ಧರಿಸಿದನು ಎಂಬ ಅರ್ಥ ಕೊಡುತ್ತದೆ. ಕೆಲವೊಮ್ಮೆ ಜನರು ಬೇರೆ ಸಂಸ್ಕೃತಿಯ ಆಧಾರದ ಮೇಲೆ ನುಡಿಗಟ್ಟುಗಳನ್ನು ಅರ್ಥಮಾಡಿಕೊಳ್ಳುವುದುಂಟು. ಆದರೆ ಆಗ ಇದು ವಿಭಿನ್ನ ರೀತಿಯ ಅರ್ಥವನ್ನು ವ್ಯಕ್ತಮಾಡಬಹುದು.

ನೀನು ನನ್ನ ಛಾವಣಿಗೆ **ಬರತಕ್ಕಷ್ಟು ಯೋಗ್ಯತೆ ನನಗಿಲ್ಲ **. (ಲೂಕ 7:6 ULB)

" ನನ್ನ ಛಾವಣಿಗೆ ಬರಲು” ಎಂದರೆ “ನನ್ನ ಮನೆಗೆ ಬರಲು” ಎಂದು ಅರ್ಥ

ಮಾತುಗಳು **ನಿಮ್ಮ ಕಿವಿಯಲ್ಲಿ ಮನಸ್ಸಿನಲ್ಲಿ ಆಳವಾಗಿ ಪ್ರವೇಶಿಸಲಿ **. (ಲೂಕ 9:44 ULT)

ಈ ನುಡಿಗಟ್ಟಿನ ಅರ್ಥ ನನ್ನ ಮಾತುಗಳನ್ನು " ಎಚ್ಚರಿಕೆಯಿಂದ ಆಲಿಸಿ ಮತ್ತು ನೆನಪಿನಲ್ಲಿಡಿ ಎಂದು "

ಉದ್ದೇಶ:

ಈ ನುಡಿಗಟ್ಟುಗಳನ್ನು ಆಯಾ ಸಂಸ್ಕೃತಿಯಲ್ಲಿ ಬಹುಶಃ ಜನರು ತಾವು ಹೇಳುವ ವಿಷಯಗಳು ಇತರರಿಗೆ ಮನದಟ್ಟಾಗುವಂತೆ ವಿವರಿಸಲು ಇಂತಹ ಪದಗಳನ್ನು ಬಳಸಿರಬಹುದು. ಅಥವಾ ಕೆಲವೊಮ್ಮೆ ಆಕಸ್ಮಿಕವಾಗಿಯೂ ಬಳಸಿರಬಹುದು. ಆದರೆ ಯಾವಾಗ ಇಂತಹ ಪದಗಳು ಪರಿಣಾಮಕಾರಿಯಾದ ಅರ್ಥವನ್ನು ಜನರಿಗೆ ತಿಳಿಸಿದರೆ, ಅವರಿಗೆ ಸುಲಭವಾಗಿ ಅರ್ಥವಾದರೆ ಮಾತ್ರ ಜನರು ಅದನ್ನು ಬಳಸಲು ಪ್ರಾರಂಭಿಸುತ್ತಾರೆ. ಕ್ರಮೇಣ ಇಂತಹ ಪದಗಳನ್ನು ಎಲ್ಲಾ ಜನರು ಸಹಜವಾಗಿ ಉಪಯೋಗಿಸುತ್ತಾರೆ.

ಇದೊಂದು ಭಾಷಾಂತರದ ಕಾರಣ.

  • ಸತ್ಯವೇದದ ಮೂಲಭಾಷೆಯಲ್ಲಿನ ನುಡಿಗಟ್ಟುಗಳನ್ನು ಜನರು ಕೆಲವೊಮ್ಮೆ ಸುಲಭವಾಗಿ ಅಪಾರ್ಥಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ.(ಅವರಿಗೆ ಅಂದಿನ ಸಂಸ್ಕೃತಿಯ ಪರಿಚಯವಿಲ್ಲದಿದ್ದರೆ) ಮತ್ತು ಆ ಸಂಸ್ಕೃತಿಯ ಸತ್ಯವೇದವನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗಬಹುದು.
  • ಮೂಲಭಾಷೆಯ ಸತ್ಯವೇದದಲ್ಲಿರುವ ನುಡಿಗಟ್ಟುಗಳನ್ನು ಸರಿಯಾಗಿ ಭಾಷಾಂತರ ಮಾಡದಿದ್ದರೆ ಮತ್ತು ಅಂದಿನ ಸಂಸ್ಕೃತಿಯ ಪರಿಚಯ ಇಲ್ಲದಿದ್ದರೆ ಓದುವ ಜನರು ಇದನ್ನು ಅರ್ಥಮಾಡಿಕೊಳ್ಳಲು ಅಸಮರ್ಥರಾಗುತ್ತಾರೆ.
  • ಭಾಷಾಂತರವಾಗುತ್ತಿರುವ ಭಾಷೆಯ ಜನರಿಗೆ ಈ ನುಡಿಗಟ್ಟುಗಳು (ಪ್ರತಿಯೊಂದು ಪದದ ಅರ್ಥ) ನುಡಿಗಟ್ಟುಗಳನ್ನು ಭಾಷಾಂತರಿಸುವುದು ವ್ಯರ್ಥ

ಸತ್ಯವೇದದಲ್ಲಿನ ಉದಾಹರಣೆಗಳು.

ಅನಂತರ ಇಸ್ರಾಯೇಲರೆಲ್ಲರೂ ಹೆಬ್ರೋನಿನಲ್ಲಿದ್ದ ದಾವೀದನ ಬಳಿ ಬಂದು ನೋಡು ನಾವು **ನಿನ್ನ ದೇಹದ ರಕ್ತ ಮಾಂಸ ಮತ್ತು ಮೂಳೆಗಳಾಗಿದ್ದೇವೆ (ರಕ್ತಸಂಬಂಧಿಗಳು) ಆಗಿದ್ದೇವೆ ಎಂದರು **. " (1 ಪೂರ್ವಕಾಲ ವೃತ್ತಾಂತ 11:1 ULT)

ಇದರ ಅರ್ಥ " ನಾವು ನಿನ್ನ ಕುಲವನ್ನು ಸೇರಿದವರು, ನಿನ್ನ ಕುಟುಂಬದ ಸದಸ್ಯರು ಆಗಿದ್ದೇವೆ ಎಂದು ಅರ್ಥ."

ಇಸ್ರಾಯೇಲಿನ ಮಕ್ಕಳೆಲ್ಲರೂ **ಮೇಲುಗೈ ಆಗಿ ಅಟ್ಟಹಾಸದಿಂದ ಹೊರಗೆ ಹೊರಟರು **. (ವಿಮೋಚನಾಕಾಡ14:8b ASV)

ಇಸ್ರಾಯೇಲರೆಲ್ಲರೂ " ಪ್ರತಿಭಟಿಸಿ ಅಟ್ಟಹಾಸದಿಂದ, ಹೊರಟರು ಎಂದು ಅರ್ಥ."

ನನ್ನ ತಲೆಯನ್ನು **ಮೇಲಕ್ಕೆ ಎತ್ತುವಂತೆ **ಮಾಡುವವನು ಆಗಿದ್ದೀ (ಕೀರ್ತನೆ3:3 ULT)

ಇದರ ಅರ್ಥ ನನ್ನ ಗೌರವಕ್ಕೆ ಕಾರಣನೂ, " ನನಗೆ ಸಹಾಯ ಮಾಡುವವನು " ಎಂದು

ಭಾಷಾಂತರ ಕೌಶಲ್ಯಗಳು.

ನಿಮ್ಮ ಭಾಷೆಯಲ್ಲಿ ನುಡಿಗಟ್ಟುಗಳು ಸುಲಭವಾಗಿ ಅರ್ಥವಾಗುವುದಾದರೆ ಅದನ್ನೇ ಪರಿಗಣಿಸಿ. ಇಲ್ಲದಿದ್ದರೆ ಇಲ್ಲಿ ಇಂತಹ ಕೆಲವು ಅವಕಾಶವಿರುವ ಅಂಶಗಳನ್ನು ತಿಳಿಸಿದೆ.

  1. ನುಡಿಗಟ್ಟು ಬಳಸದೆ ಸರಳವಾದ ಅರ್ಥವನ್ನು ಕೊಡುವಂತೆ ಭಾಷಾಂತರಿಸಿ.
  2. ನಿಮ್ಮ ಭಾಷೆಯಲ್ಲಿ ಇದೇ ಅರ್ಥಕೊಡುವ ನುಡಿಗಟ್ಟುಗಳಿದ್ದರೆ ಅದನ್ನು ಬಳಿಸಿಕೊಳ್ಳಿ.

ಭಾಷಾಂತರ ಕೌಶಲ್ಯಗಳು ಅಳವಡಿಸಿರುವ ಉದಾಹರಣೆಗಳು.

(1). ನುಡಿಗಟ್ಟು ಬಳಸದೆ ಸರಳವಾದ ಅರ್ಥವನ್ನು ಕೊಡುವಂತೆ ಭಾಷಾಂತರಿಸಿ.

ಅನಂತರ ಇಸ್ರಾಯೇಲರೆಲ್ಲರೂ ಹೆಬ್ರೋನಿನಲ್ಲಿದ್ದ ದಾವಿದನ ಬಳಿ ಬಂದು ನೋಡು ನಾವು **ನಿನ್ನ ದೇಹದ ರಕ್ತ ಮಾಂಸ ಮತ್ತು ಮೂಳೆಗಳಾಗಿದ್ದೇವೆ (ರಕ್ತಸಂಬಂಧಿಗಳು) ಆಗಿದ್ದೇವೆ ಎಂದರು **'' (1 ಪೂರ್ವಕಾಲದ ವೃತ್ತಾಂತ 11:1 ULT)

ನೋಡು ನಾವೆಲ್ಲರೂ **ಒಂದೇ ರಾಷ್ಟ್ರಕ್ಕೆ ಸೇರಿದವರು **.

ಆತನು ಯೆರೋಸಲಮಿಗೆ ಹೋಗಲು **ತನ್ನ ಮುಖವನ್ನು ತಿರುಗಿ ನಿರ್ಧರಿಸಿದನು ** (ಲೂಕ 9:51 ULT)

ಆತನು ಯೆರೋಸಲಮಿನ ಕಡೆ ಪ್ರಯಾಣಿಸಲು ಯೋಚಿಸಿ ಅದನ್ನು **ತಲುಪಲು ನಿರ್ಧರಿಸಿದನು **.

ನೀನು ನನ್ನ ಛಾವಣಿಯನ್ನು ಪ್ರವೇಶಿಸಲು ಯೋಗ್ಯನಲ್ಲ. (ಲೂಕ 7:6 ULT)

ನೀನು **ನನ್ನ ಮನೆಗೆ ಬರುವಷ್ಟು **.ಯೋಗ್ಯತೆ ನನಗಿಲ್ಲ.

(2). ನಿಮ್ಮ ಭಾಷೆಯಲ್ಲಿರುವ ಸಮಾನ ಅರ್ಥಕೊಡುವ ಪದಗಳನ್ನು ಬಳಸಿ ನುಡಿಗಟ್ಟುಗಳನ್ನು ಅರ್ಥಮಾಡಿಕೊಳ್ಳಲು ಅವಕಾಶವನ್ನು ನಿಮ್ಮ ಜನರಿಗೆ ಕೊಡಿ.

ಈ ಮಾತುಗಳು ನಿಮ್ಮ ಕಿವಿಯೊಳಗೆ ಆಳವಾಗಿ ಹೋಗಲಿ (ಲೂಕ 9:44a ULT)

**ನಿಮ್ಮ ಕಿವಿಗಳಿಗೂ **ನಾನು ಹೇಳುವ ಮಾತುಗಳು ಕೇಳಿಸಲಿ.

ದುಃಖದಿಂದ ನನ್ನ **ಕಣ್ಣುಗಳು ಮಬ್ಬಾಯಿತು ** (ದಾ.ಕೀ. 6:7a ULT)

ನಾನು ಅಳುತ್ತಿರುವುದರಿಂದ ನನ್ನ ಕಣ್ಣುಗಳು ಕಣ್ಣೀರಿನಿಂದ ತುಂಬಿವೆ.