"ನುಡಿಗಟ್ಟುಗಳು" ಇವು ಸಹ ಅಲಂಕಾರವಾಗಿದ್ದು ಪದಗಳು ಗುಂಪಾಗಿ ಕಂಡು ಬರುತ್ತವೆ. ಒಂದು ಪದಕ್ಕೆ ಅರ್ಥವಿರುವಂತೆ ಈ ಪದದ ಗುಂಪಿಗೆ ಕೆಲವೊಮ್ಮೆ ವಿಭಿನ್ನವಾದ ಅರ್ಥವನ್ನು ಕೊಟ್ಟು ಅರ್ಥಮಾಡಿಕೊಳ್ಳಬಹುದು.
ಬೇರೆ ಸಂಸ್ಕೃತಿಯಲ್ಲಿನ ಜನರಿಗೆ ಇಂತಹ ನುಡಿಗಟ್ಟು, ಕೆಲವೊಮ್ಮೆಈ ರೀತಿಯ ನಾಣ್ನುಡಿ ಅರ್ಥವಾಗದೇ ಇರಬಹುದು. ನುಡಿಗಟ್ಟು ಯಾವ ಭಾಷೆಯಲ್ಲಿದೆಯೋ ಆ ಭಾಷೆಯ ಅಥವಾ ಸಂಸ್ಕೃತಿಯ ಜನರಿಗೆ ಇದು ಸುಲಭವಾಗಿ ಸರಿಯಾಗಿ ಅರ್ಥವಾಗುತ್ತದೆ. ಎಲ್ಲಾ ಭಾಷೆಯಲ್ಲೂ ಇಂತಹ ನುಡಿಗಟ್ಟ ಉಪಯೋಗಿಸುತ್ತಾರೆ. ಇಂಗ್ಲೀಷ್ ಭಾಷೆಯಲ್ಲಿನ ಕೆಲವು ಉದಾಹರಣೆಗಳು.
ಒಂದು ಭಾಷೆಯ ಅಥವಾ ಸಂಸ್ಕೃತಿಯ ಜನರಿಗೆ ವಿಶೇಷ ಅರ್ಥವನ್ನು ನೀಡುವ ನುಡಿಗಟ್ಟು ಅಥವಾ ನಾಣ್ನುಡಿ ಬಳಸಲು ಅವಕಾಶ ಮಾಡಿಕೊಡುವುದು. ಈ ಪದಗಳ ಅರ್ಥವನ್ನು ಒಬ್ಬ ವ್ಯಕ್ತಿ ಒಂದು ಪದವನ್ನು ಅರ್ಥಮಾಡಿಕೊಳ್ಳುವುದಕ್ಕಿಂತ ಭಿನ್ನವಾಗಿ ಅರ್ಥಮಾಡಿಕೊಳ್ಳಬಹುದು.
ಇಲ್ಲಿ " ಮನಸ್ಸನ್ನು ದೃಢಮಾಡಿಕೊಂಡನು " ಎಂಬುದು ನಿರ್ಧರಿಸಿದನು ಎಂಬ ಅರ್ಥ ಕೊಡುತ್ತದೆ. ಕೆಲವೊಮ್ಮೆ ಜನರು ಬೇರೆ ಸಂಸ್ಕೃತಿಯ ಆಧಾರದ ಮೇಲೆ ನುಡಿಗಟ್ಟುಗಳನ್ನು ಅರ್ಥಮಾಡಿಕೊಳ್ಳುವುದುಂಟು. ಆದರೆ ಆಗ ಇದು ವಿಭಿನ್ನ ರೀತಿಯ ಅರ್ಥವನ್ನು ವ್ಯಕ್ತಮಾಡಬಹುದು.
ಈ ನುಡಿಗಟ್ಟಿನ ಅರ್ಥ ನನ್ನ ಮಾತುಗಳನ್ನು " ಎಚ್ಚರಿಕೆಯಿಂದ ಆಲಿಸಿ ಮತ್ತು ನೆನಪಿನಲ್ಲಿಡಿ ಎಂದು "
**ಉದ್ದೇಶ**:
ಈ ನುಡಿಗಟ್ಟುಗಳನ್ನು ಆಯಾ ಸಂಸ್ಕೃತಿಯಲ್ಲಿ ಬಹುಶಃ ಜನರು ತಾವು ಹೇಳುವ ವಿಷಯಗಳು ಇತರರಿಗೆ ಮನದಟ್ಟಾಗುವಂತೆ ವಿವರಿಸಲು ಇಂತಹ ಪದಗಳನ್ನು ಬಳಸಿರಬಹುದು. ಅಥವಾ ಕೆಲವೊಮ್ಮೆ ಆಕಸ್ಮಿಕವಾಗಿಯೂ ಬಳಸಿರಬಹುದು. ಆದರೆ ಯಾವಾಗ ಇಂತಹ ಪದಗಳು ಪರಿಣಾಮಕಾರಿಯಾದ ಅರ್ಥವನ್ನು ಜನರಿಗೆ ತಿಳಿಸಿದರೆ, ಅವರಿಗೆ ಸುಲಭವಾಗಿ ಅರ್ಥವಾದರೆ ಮಾತ್ರ ಜನರು ಅದನ್ನು ಬಳಸಲು ಪ್ರಾರಂಭಿಸುತ್ತಾರೆ. ಕ್ರಮೇಣ ಇಂತಹ ಪದಗಳನ್ನು ಎಲ್ಲಾ ಜನರು ಸಹಜವಾಗಿ ಉಪಯೋಗಿಸುತ್ತಾರೆ.
* ಸತ್ಯವೇದದ ಮೂಲಭಾಷೆಯಲ್ಲಿನ ನುಡಿಗಟ್ಟುಗಳನ್ನು ಜನರು ಕೆಲವೊಮ್ಮೆ ಸುಲಭವಾಗಿ ಅಪಾರ್ಥಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ.(ಅವರಿಗೆ ಅಂದಿನ ಸಂಸ್ಕೃತಿಯ ಪರಿಚಯವಿಲ್ಲದಿದ್ದರೆ) ಮತ್ತು ಆ ಸಂಸ್ಕೃತಿಯ ಸತ್ಯವೇದವನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗಬಹುದು.
* ಮೂಲಭಾಷೆಯ ಸತ್ಯವೇದದಲ್ಲಿರುವ ನುಡಿಗಟ್ಟುಗಳನ್ನು ಸರಿಯಾಗಿ ಭಾಷಾಂತರ ಮಾಡದಿದ್ದರೆ ಮತ್ತು ಅಂದಿನ ಸಂಸ್ಕೃತಿಯ ಪರಿಚಯ ಇಲ್ಲದಿದ್ದರೆ ಓದುವ ಜನರು ಇದನ್ನು ಅರ್ಥಮಾಡಿಕೊಳ್ಳಲು ಅಸಮರ್ಥರಾಗುತ್ತಾರೆ.
* ಭಾಷಾಂತರವಾಗುತ್ತಿರುವ ಭಾಷೆಯ ಜನರಿಗೆ ಈ ನುಡಿಗಟ್ಟುಗಳು (ಪ್ರತಿಯೊಂದು ಪದದ ಅರ್ಥ) ನುಡಿಗಟ್ಟುಗಳನ್ನು ಭಾಷಾಂತರಿಸುವುದು ವ್ಯರ್ಥ
>ಅನಂತರ ಇಸ್ರಾಯೇಲರೆಲ್ಲರೂ ಹೆಬ್ರೋನಿನಲ್ಲಿದ್ದ ದಾವೀದನ ಬಳಿ ಬಂದು ನೋಡು ನಾವು **ನಿನ್ನ ದೇಹದ ರಕ್ತ ಮಾಂಸ ಮತ್ತು ಮೂಳೆಗಳಾಗಿದ್ದೇವೆ (ರಕ್ತಸಂಬಂಧಿಗಳು) ಆಗಿದ್ದೇವೆ ಎಂದರು **. " (1 ಪೂರ್ವಕಾಲ ವೃತ್ತಾಂತ 11:1 ULT)
>ಅನಂತರ ಇಸ್ರಾಯೇಲರೆಲ್ಲರೂ ಹೆಬ್ರೋನಿನಲ್ಲಿದ್ದ ದಾವಿದನ ಬಳಿ ಬಂದು ನೋಡು ನಾವು **ನಿನ್ನ ದೇಹದ ರಕ್ತ ಮಾಂಸ ಮತ್ತು ಮೂಳೆಗಳಾಗಿದ್ದೇವೆ (ರಕ್ತಸಂಬಂಧಿಗಳು) ಆಗಿದ್ದೇವೆ ಎಂದರು **'' (1 ಪೂರ್ವಕಾಲದ ವೃತ್ತಾಂತ 11:1 ULT)