translationCore-Create-BCS_.../translate/bita-part2/01.md

8.9 KiB
Raw Blame History

ಸತ್ಯವೇದದಲ್ಲಿನ ಕೆಲವು ಮೆಟೋನಿಮಿಸ್ ಗಳನ್ನು ಅಕ್ಷರಾನುಕ್ರಮವಾಗಿ ಈ ಕೆಳಕಂಡಂತೆ ಪಟ್ಟಿಮಾಡಲಾಗಿದೆ. ದೊಡ್ಡ ಅಕ್ಷರಗಳಲ್ಲಿರುವುದು ಒಂದು ಉದ್ದೇಶವನ್ನು ಪ್ರತಿನಿಧಿಸುತ್ತದೆ. ಈ ಪದ ಪ್ರತಿವಾಕ್ಯದಲ್ಲೂ ಬರಬೇಕೆಂಬ ಅವಶ್ಯಕತೆ ಇಲ್ಲ, ಈ ಚಿತ್ರಣಗಳ ಉದ್ದೇಶ ಪದಗಳಲ್ಲಿ ಬಂದು ಆ ಅರ್ಥವನ್ನು ಪ್ರತಿಬಿಂಬಿಸುತ್ತದೆ.

ಒಂದು ಬಟ್ಟಲು ಅಥವಾ ಬೋಗುಣಿ ಅದರಲ್ಲಿ ಇರುವುದನ್ನು ಪ್ರತಿನಿಧಿಸುತ್ತದೆ.

ನನ್ನ ಬಟ್ಟಲುತುಂಬಿಹರಿಯುತ್ತದೆ. (ದಾ.ಕೀ 23:5 ULB)

ಈ ಬಟ್ಟಲಿನಲ್ಲಿರುವುದು ಹೊರಗೆ ಹರಿದು ಚೆಲ್ಲುವಷ್ಟು ತುಂಬಿದೆ.

ಪ್ರತಿಸಲ ನೀವು ಈ ರೊಟ್ಟಿಯನ್ನು ತಿಂದು, ಈ ಪಾತ್ರೆಯಲ್ಲಿ ದ್ರಾಕ್ಷಾರಸ ಪಾನಮಾಡುವಾಗೆಲ್ಲಾ ,ಕರ್ತನ ಮರಣವನ್ನು, ಆತನು ಬರುವ ತನಕ ಪ್ರಸಿದ್ಧಿ ಪಡಿಸುತ್ತೀರಿ. (1 ನೇ ಕೊರಿಂಥ 11:26 ULB)

ದಯವಿಟ್ಟು ಈ ಬಟ್ಟಲಿನಲ್ಲಿ ಪಾನಮಾಡಬೇಡಿ. ಅವರು ಆ ಬಟ್ಟಲಿನಲ್ಲಿ ಇರುವುದನ್ನು ಪಾನಮಾಡುತ್ತಾರೆ.

ಬಾಯಿಮಾತು ಅಥವಾ ಪದಗಳನ್ನು ಪ್ರತಿನಿಧಿಸುತ್ತದೆ.

ಜ್ಞಾನಹೀನನಿಗೆ ಅವನ ಬಾಯಿಂದ ಬರುವ ಮಾತೆ ಅವನನ್ನು ನಾಶಕ್ಕೆ ಗುರಿಮಾಡುತ್ತದೆ. (ಜ್ಞಾನೋಕ್ತಿ 18:7 ULB)

ನಾನು ಬಾಯಮಾತುಗಳಿಂದ ನಿಮ್ಮನ್ನು ಧೈರ್ಯಗೊಳಿಸಿ !ನಿಮ್ಮ ದುಃಖವನ್ನು ಶಮನಗೊಳಿಸುತ್ತೇನೆ. (ಯೋಬಾ 16:5 ULB)

ನೀನು ನನ್ನನ್ನು ದೂಷಿಸಿ ನಿನ್ನ ಬಾಯಿಂದ ಮಾತನಾಡಿದ ಮಾತುಗಳನ್ನು ;ಕೇಳಿದ್ದೇನೆ, ನೀನು ನನ್ನ ವಿರುದ್ಧವಾಗಿ ಆಡಿದ ಮಾತುಗಳನ್ನು ಕೇಳಿದ್ದೇನೆ. ನಾನು ಅವುಗಳನ್ನು ಕೇಳಿದ್ದೇನೆ. (ಯೆಹೆಜ್ಕೇಲ 35:13 ULB)

ಇಲ್ಲಿ ಬರುವ ಉದಾಹರಣೆ ವಾಕ್ಯಗಳಲ್ಲಿ ಬಾಯಿ ಎಂಬ ಪದ ಒಬ್ಬ ಮನುಷ್ಯನ ಮಾತನ್ನು ಪ್ರತಿನಿಧಿಸುತ್ತದೆ.

ಒಬ್ಬ ಮನುಷ್ಯನ ನೆನಪು ಎಂಬುದು ಅವನ ಸಂತತಿಯನ್ನು ಪ್ರತಿನಿಧಿಸುತ್ತದೆ.

ಒಬ್ಬ ವ್ಯಕ್ತಿಯ ನೆನಪು ಆತನ ಸಂತತಿಯನ್ನು ನೆನಪಿಸಿಕೊಳ್ಳುತ್ತದೆ, ಏಕೆಂದರೆ ಆ ಸಂತತಿಯವರೇ ಆತನನ್ನು ಸ್ಮರಿಸಿ ಗೌರವಿಸಬೇಕಿದೆ. ಸತ್ಯವೇದದಲ್ಲಿ ವ್ಯಕ್ತಿಯೋರ್ವನ ನೆನಪಿನ ಶಕ್ತಿ ಸತ್ತು ಹೋದರೆ (ಇಲ್ಲವಾದರೆ) ಆ ವ್ಯಕ್ತಿಗೆ ಯಾವ ಸಂತತಿಯೂ ಇಲ್ಲ.ಅಥವಾ ಆತನ ಸಂತತಿ ಇಲ್ಲವಾಗಿದೆ ಎಂದು ಅರ್ಥ.

ನೀನು ಜನಾಂಗಗಳನ್ನು ಎದುರಿಸಿ, ಯುದ್ಧದ ಮೂಲಕ ನಾಶಮಾಡಿರುವೆ. ದುಷ್ಟರನ್ನು ನಾಶಮಾಡಿದ್ದೀ. ಅವರ ಹೆಸರಿನ ನೆನಪನ್ನು ಯುಗಯುಗಾಂತರಕ್ಕೂ ಅಳಿಸಿಬಿಟ್ಟಿದ್ದೀ. ಶತೃಗಳು ನಿಶ್ಶೇಷವಾದರೂ. ನೀನು ಅವರ ಊರು, ಕೋಟೆಗಳನ್ನು ಕೆಡವಿ ನಾಶಮಾಡಿದಿ. ಅವರ ಸ್ಮರಣೆಯೇ ಇಲ್ಲದಂತೆ ನಾಶಮಾಡಿರುವೆ. (ದಾ.ಕೀ. 9:5-6 ULB)

ಆತನ ಸ್ಮರಣೆಯು ಭೂಮಿಯ ಮೇಲಿನಿಂದ ಅಳಿದು ಹೋಗುವುದು (ಯೋಬ 18:17 ULB)

ದುಷ್ಟಕಾರ್ಯಮಾಡುವ ಕೆಡುಕರಿಗೆ ಕೋಪದಿಂದ ಶಿಕ್ಷಿಸುವನು. ಲೋಕದಲ್ಲಿ ಅವರ ನೆನಪೇ ಉಳಿಯದಂತೆ ನಿರ್ಮೂಲ ಮಾಡುವನು (ದಾ.ಕೀ 4:16 ULB)

ಒಬ್ಬ ವ್ಯಕ್ತಿ ಒಂದು ಗುಂಪನ್ನು ಪ್ರತಿನಿಧಿಸುತ್ತಾನೆ.

ದುಷ್ಟನು ತನ್ನ ಮನೋರಥವು ನೆರವೇರಿತೆಂದು ಕೊಚ್ಚಿಕೊಳ್ಳುತ್ತಾನೆ. ಅವನು ಯೆಹೋವನನ್ನು ಅಲ್ಲಗೆಳೆದು ದುಷ್ಟನನ್ನೂ ಅತಿಯಾಸೆ ಉಳ್ಳವರನ್ನು ಮೆಚ್ಚುತ್ತಾನೆ, ಆಶೀರ್ವದಿಸುತ್ತಾನೆ. (ದಾ.ಕೀ. 10:3 ULB)

ಈ ವಾಕ್ಯಗಳು ನಿರ್ದಿಷ್ಟವಾಗಿ ಒಬ್ಬ ದುಷ್ಟವ್ಯಕ್ತಿಯನ್ನು ಕುರಿತು ಹೇಳಿರುವುದಲ್ಲ ಆದರೆ ಅವನಂತಹ ದುಷ್ಟಜನರನ್ನು ಕುರಿತು ಹೇಳಿರುವಂತದ್ದು.

ಒಬ್ಬ ವ್ಯಕ್ತಿಯ ಹೆಸರು ಆತನ ಸಂತತಿಯವರಿಗೂ ಬರುತ್ತದೆ.

ಗಾದನು ಸುಲಿಗೆ ಮಾಡುವವರು ದಂಡೆತ್ತಿ ಅವನ ಮೇಲೆ ಬೀಳಲು ಇವನು ಅವರನ್ನು ಹಿಮ್ಮೆಟ್ಟಿಕೊಂಡು ಹೋದನು. ಅಶೇರನಿಗೆ ಧಾನ್ಯ ಸಮೃದ್ಧಿಯಾಗುವುದು, ಅವನಲ್ಲಿ ರಾಜಭೋಗ್ಯವಾದ ಪದಾರ್ಥಗಳು ದೊರಕುವವು. ನಫ್ತಾಲಿ ಬಿಡುಗಡೆಯಾದ ಜಿಂಕೆಯಂತಿದ್ದಾನೆ ಅವನಿಂದ ಇಂಪಾದ ಮಾತುಗಳು ಬರುತ್ತವೆ. (ಆದಿಕಾಂಡ 49:19-21 ULB)

ಗಾದ, ಅಶೇರ, ನಫ್ತಾಲಿಯವರ ಹೆಸರುಗಳು ಅವರಿಗೆ ಮಾತ್ರ ಸೀಮಿತವಾಗಿರದೆ ಅವರ ಸಂತತಿಯವರು ಅದರ ಪ್ರಯೋಜನಗಳನ್ನು ಪಡೆದರು.

ಒಬ್ಬ ವ್ಯಕ್ತಿಯ ಹೆಸರು ಆತನನ್ನು ಆತನಿಗೆ ಸೇರಿದ ಜನರನ್ನು ಪ್ರತಿನಿಧಿಸುತ್ತಾನೆ.

ಅಬ್ರಹಾಮನು ಐಗುಪ್ತದೇಶವನ್ನು ಪ್ರವೇಶಿಸಿದಾಗ ಅಬ್ರಹಾಮನನ್ನು ಅವನ ಸಂಗಡ ಇದ್ದ ಸಾರೆಯಳನ್ನು ನೋಡಿ ಬಹು ಸುಂದರವಾಗಿದ್ದಾಳೆ ಎಂದರು. (ಆದಿಕಾಂಡ 12:14 ULB)

ಅಲ್ಲಿ ಅಬ್ರಹಾಮ ಎಂದರೆ ಅವನೊಂದಿಗೆ ಪ್ರಯಾಣಿಸುತ್ತಿದ್ದ ಎಲ್ಲರೂ ಸಂಬಂಧಪಟ್ಟವರಾದರು. ಇಲ್ಲಿ ಅಬ್ರಹಾಮನ ಮೇಲೆ ಎಲ್ಲವೂ ಕೇಂದ್ರೀಕೃತವಾಗಿದೆ.

ಇರಿಯುವುದು ಎಂದರೆ ಕೊಲ್ಲುವುದು ಎಂದು ಅರ್ಥ.

ಆತನ ಹಸ್ತವು ವೇಗವಾಗಿ ಓಡುವ </u ಸರ್ಪವನ್ನು ಇರಿಯುವುದು. (ಯೋಬ 26:13 ULB)

ಇದರ ಅರ್ಥ ಆತ ಸರ್ಪವನ್ನು ಕೊಂದುಹಾಕಿದ ಎಂದು.

ಇಗೋ ಆತನು ಮೇಘಗಳೊಂದಿಗೆ ಬರುತ್ತಾನೆ. ಎಲ್ಲರ ಕಣ್ಣುಗಳು ಆತನನ್ನು ಕಾಣುವವು ಆತನನ್ನು ಇರಿದವರು ಸಹ ಕಾಣುವರು. (ಪ್ರಕಟಣೆ 1:7 ULB)

"ಆತನನ್ನು ಇರಿದವರು ಯಾರು ? ಎಂಬುದು ಯೇಸುವನ್ನು ಕೊಂದವರನ್ನು ಕುರಿತು ಹೇಳಿರುವುದು"

ಪಾಪಗಳು (ಅಧರ್ಮ) ಪಾಪಕ್ಕೆ ತಕ್ಕ ಶಿಕ್ಷೆಯನ್ನು ಪ್ರತಿನಿಧಿಸುತ್ತದೆ.

ಯೆಹೋವನು ನಮ್ಮೆಲ್ಲರ ದೋಷವನ್ನು ಪಾಪವನ್ನು ತನ್ನ ಮೇಲೆ ಹಾಕಿಕೊಂಡನು (ಯೆಶಾಯ 53:6 ULB)

ಇದರ ಅರ್ಥ ಯಹೋವನು ನಮ್ಮ ಪಾಪಗಳಿಂದ ಉಂಟಾದ ಶಿಕ್ಷೆಯನ್ನು ತಾನು ಅನುಭವಿಸಿದನು.