translationCore-Create-BCS_.../translate/biblicalimageryta/01.md

8.7 KiB
Raw Blame History

ವಿವರಣೆ

ಚಿತ್ರಣ ಎಂಬುದು ಭಾಷೆಯಲ್ಲಿ ಒಂದು ಚಿತ್ರಣದ ಉದಾಹರಣೆಯನ್ನು ಇನ್ನೊಂದು ಚಿತ್ರಣದೊಂದಿಗೆ ಹೋಲಿಸಿ, ಜೊತೆ ಸೇರಿಸಿ ಅದರ ಕಲ್ಪನೆಯನ್ನು ಪ್ರತಿನಿಧಿಸುತ್ತದೆ. ಇವು ಉಪಮೆಗಳನ್ನು, ರೂಪಕಗಳನ್ನು, ಮಿಟೋನಿಮಿ (ಹೇಳ ಬೇಕಾದ ವಸ್ತುವಿಗೆ ಬದಲಾಗಿ ಅದರ ಲಕ್ಷಣವನ್ನು ತಿಳಿಸುವ ಅಲಂಕಾರ ಪದ) ಮಾದರಿಗಳನ್ನು ಒಳಗೊಂಡಿರುತ್ತದೆ.

ಈ ಎಲ್ಲಾ ಸಂಗತಿಗಳು, ಕಾವ್ಯಪ್ರತಿಮೆಗಳು ಮತ್ತು ಉದ್ದೇಶಗಳನ್ನು ಜೊತೆ ಸೇರಿಸಿ ಹೇಳುವಾಗ ವಿಶಾಲವಾದ ಮಾದರಿಯಲ್ಲಿ ಬಳಸಿರುವ ಬಗ್ಗೆ ತಿಳಿದು ಬರುತ್ತದೆ. ಆದರೆ ಕೆಲವೊಮ್ಮೆ ಕೆಲವು ವಿಚಾರಗಳು ಇದಕ್ಕಿಂತ ಭಿನ್ನವಾಗಿರಬಹುದು. ಸತ್ಯವೇದದಲ್ಲಿನ ಪುಟಗಳು ಸತ್ಯವೇದದಲ್ಲಿ ಬಳಸಿರುವ ಕಾವ್ಯಪ್ರತಿಮೆಗಳ ಮಾದರಿಯ ಬಗ್ಗೆ ತಿಳಿಸುತ್ತದೆ. ಸತ್ಯವೇದದಲ್ಲಿ ಕಂಡುಬರುವ ಜೋಡಿ ಮಾದರಿಗಳು ಆಗಿಂದಾಗ್ಗೆ ಇಬ್ರಿಯಾ (ಹಿಬ್ರೂ) ಮತ್ತು ಗ್ರೀಕ್ ಭಾಷೆಗಳಲ್ಲಿ ಕಂಡುಬರುವಂತದ್ದಾಗಿರುತ್ತದೆ.

ಈ ಮಾದರಿಗಳನ್ನು ಕಂಡುಹಿಡಿಯುವುದು ಸುಲಭವಾದ ವಿಷಯ ಏಕೆಂದರೆ ಅನುವಾದ ಮಾಡುವವರಿಗೆ ಎದುರಾಗುವ ಅನುವಾದದ ಸಮಸ್ಯೆಗಳನ್ನು ಪುನಃಪುನಃ ಪುನರುಕ್ತಿಯಾಗುವಂತರ ಮಾಡುತ್ತದೆ. ಅನುವಾದಕರಿಗೆ ಒಮ್ಮೆ ಅನುವಾದದ ಭಾಷಾಂತರದ ಸಮಸ್ಯೆ ಮತ್ತು ಸವಾಲುಗಳನ್ನು ಹೇಗೆ ನಿಭಾಯಿಸಬೇಕು ಎಂದು ಅರಿತುಕೊಂಡರೆ ಅವರು ಯಾವುದೇ ಸಂದರ್ಭದಲ್ಲಿ, ಸನ್ನಿವೇಶದಲ್ಲಿ ಎದುರಾಗುವ ಅನುವಾದದ ಸಮಸ್ಯೆಗಳನ್ನು ಸುಲಲಿತವಾಗಿ ನಿಭಾಯಿಸಲು ಸಮರ್ಥರಾಗುತ್ತಾರೆ, ಸಿದ್ಧರಾಗಿರುತ್ತಾರೆ.

ರೂಪಕ ಮತ್ತು ಉಪಮಾ ಅಲಂಕಾರದಲ್ಲಿನ ಸಮಾನ್ಯ ಮಾದರಿಗಳು.

ರೂಪಕ ಅಲಂಕಾರದಲ್ಲಿ ಯಾವುದಾದರೂ ಒಂದು ವಸ್ತುವಿನ ಬಗ್ಗೆ ಮಾತನಾಡುವಾಗ ಒಂದು ವಸ್ತುವಿಗೂ ಮತ್ತು ಇನ್ನೊಂದು ವಸ್ತುವಿಗೂ ಯಾವ ವ್ಯತ್ಯಾಸವೂ ಇಲ್ಲ ಎಂಬುದು ತಿಳಿದು ಬರುತ್ತದೆ. ಈ ಬಗ್ಗೆ ಮಾತನಾಡುವಾಗ ವ್ಯಕ್ತಿ ತಾನು ಹೇಳಬೇಕೆಂದಿರುವ ವಿಷಯ / ವಸ್ತು / ವ್ಯಕ್ತಿಯ ಬಗ್ಗೆ ಪರಿಣಾಮಕಾರಿಯಾದ ಪ್ರಭಾವ ಬೀರುವಂತೆ ಹೇಳುತ್ತಾನೆ.

ಉದಾಹರಣೆಗೆ "ನನ್ನ ಪ್ರೀತಿ ಕೆಂಪು ಕೆಂಪು ಗುಲಾಬಿ" ಎಂದು ಹೇಳುವಾಗ ನನ್ನ ಪ್ರೇಯಸಿ ಗುಲಾಬಿಯಂತೆ ಸುಂದರ ಹಾಗೂ ಕೋಮಲವಾದವಳು ಎಂದು ತಿಳಿಸುವ ಉದ್ದೇಶವಿದೆ, "ಅವಳು ಸೌಂದರ್ಯದಲ್ಲಿ ಕೆಂಗುಲಾಬಿ" ಎಂದು ತಿಳಿಸುತ್ತಿದ್ದಾನೆ.

ಉಪಮೆ.ಉಪಮಾ ಅಲಂಕಾರದಲ್ಲಿ ರೂಪಕ ಅಲಂಕಾರದಂತೆ ವರ್ಣಿಸಿ ಹೇಳಿದರೂ ಇಲ್ಲಿ ಎರಡು ವಸ್ತು ಅಥವಾ ವ್ಯಕ್ತಿಗಳಲ್ಲಿ ಬಳಸುತ್ತಾರೆ. ಇದರಿಂದ ಇಲ್ಲಿ ಕಾವ್ಯಾಲಂಕಾರದ ಪದಗಳು ಬಳಕೆಯಾಗಿರುವುದನ್ನು ಕಾಣಬಹುದು. ಉಪಮಾ ಅಲಂಕಾರದಲ್ಲಿ ನನ್ನ ಪ್ರೇಯಸಿಯು ಕೆಂಪು ಕೆಂಪು ಗುಲಾಬಿಯಂತೆ ಇದ್ದಾಳೆ. ಎಂದು ಹೇಳುವಲ್ಲಿ ಕಾವ್ಯಪ್ರತಿಮೆಯು (ಕೆಂಗುಲಾಬಿ) ಬಳಕೆಯಾಗಿರುವುದನ್ನು ಕಾಣುತ್ತೇವೆ.

"ಸತ್ಯವೇದದಲ್ಲಿನ ಚಿತ್ರಣಗಳು ಸಾಮಾನ್ಯ ಮಾದರಿಗಳು ಉದ್ದೇಶಗಳು, ರೂಪಕಗಳು ಉಪಮೆಗಳ ನಡುವಿನ ಜೋಡಿ ಮಾದರಿಗಳನ್ನು ಈ ಪುಟಗಳಲ್ಲಿ ಕಾಣಬಹುದು.""

ಸಾಮಾನ್ಯವಾಗಿ ಕಂಡುಬರುವ ಮಿಟಾನಿಮೀಸ್ (ಲಾಕ್ಷಣಿಕ ಪ್ರಯೋಗಗಳು).

ಮಿಟಾನಿಮೀಸ್ ನಲ್ಲಿ ಒಂದು ವಸ್ತು ಅಥವಾ ಒಂದು ವಿಷಯವನ್ನು ಅದರ ಹೆಸರಿನಲ್ಲಿ ಕರೆಯದೆ ಅಥವಾ ಗುರುತಿಸದೆ ಅದಕ್ಕೆ ಸಂಬಂಧಿಸಿದ, ಸಂವಾದಿಯಾದ, ಸಮಾನಾಂತರದ ಪದವನ್ನು ಬಳಸಲಾಗುತ್ತದೆ.

"ಸತ್ಯವೇದದಲ್ಲಿನ ಚಿತ್ರಣಗಳು ಸಾಮಾನ್ಯ ಮಿಟೋನಿಮೀಸ್ ಸತ್ಯವೇದದಲ್ಲಿನ ಸಾಮಾನ್ಯ ಮಿಟೋನಿಮೀಸ್ ಗಳ.ಪಟ್ಟಿ""

ಸಾಂಸ್ಕೃತಿಕ ಮಾದರಿಗಳು

ಸಾಂಸ್ಕೃತಿಕ ಮಾದರಿಗಳು ಮಾನಸಿಕ ಚಿತ್ರಣಗಳು ಜೀವನದ ಒಂದು ಅಂಗ ಅಥವಾ ಮಾನವನ ನಡವಳಿಕಎ, ಮನೋಭಾವವನ್ನು ಆದರಿಸಿರುತ್ತದೆ. ಈ ಚಿತ್ರಗಳು ನಮಗೆ ಈ ಬಗ್ಗೆ ಮಾತನಾಡಲು, ಕಲ್ಪಿಸಿಕೊಳ್ಳಲು, ಅಭಿವ್ಯಕ್ತಿಸಲು ಸಹಾಯಮಾಡುತ್ತವೆ. ಉದಾಹರಣೆಗೆ ಅಮೇರಿಕಾದವರು ಕೆಲವೊಮ್ಮೆ ಕೆಲವು ವಿಷಯಗಳ ಬಗ್ಗೆ ಅದರದೇ ಆದ ಅಭಿಪ್ರಾಯಗಳನ್ನು ಹೊಂದಿರುತ್ತಾರೆ ವಿವಾಹ ಮತ್ತು ಸ್ನೇಹದ ಬಗ್ಗೆಯೂ ಅವರು ಯಾಂತ್ರಿಕವಾಗಿ ಯೋಚಿಸುತ್ತಾರೆ.

ಅಮೇರಿಕಾದವರು "ಆತನ ಮದುವೆ ಮುರಿದು ಬೀಳುತ್ತಿದೆ" ಅಥವಾ "ಅವರ ಸ್ನೇಹ ಸಂಪೂರ್ಣವೇಗದಿಂದ ಮುಂದುವರೆಯುತ್ತಿದೆ" ಎಂದು ವಾಕ್ಯ ಪ್ರಯೋಗ ಮಾಡುತ್ತಾರೆ. ಸತ್ಯವೇದದಲ್ಲಿ ದೇವರನ್ನು ಕುರಿತು ಹೇಳುವಾಗ ಆತ ಒಳ್ಳೇ ಕುರುಬ, ಆತನ ಜನರು ಕುರಿಗಳು ಎಂದು ವಾಕ್ಯಗಳನ್ನು ಬಳಸಲಾಗಿದೆ. ಇದೊಂದು ಸಾಂಸ್ಕೃತಿಕ ಮಾದರಿ

ಯೆಹೋವನು ನನ್ನ ಕುರುಬ, ನನಗೆ ಕೊರತೆಇಲ್ಲ /ನಾನು ಕೊರತೆ ಅನುಭವಿಸುವುದಿಲ್ಲ. (ದಾವೀದನ ಕೀರ್ತನೆಗಳು 23:1 ULB)

ಆತನು ತನ್ನ ಜನರನ್ನು ಕುರಿಗಳಂತೆ ರಕ್ಷಿಸಿ, ಮಾರ್ಗದರ್ಶಿಸಿ ಅಡವಿಯಿಂದ ಹೊರತಂದು ಮಂದೆಯಾಗಿ ಪೋಷಿಸಿ ನಡೆಸಿದನು. (ದಾವೀದನ ಕೀರ್ತನೆಗಳು 78:52 ULB)

ಸತ್ಯವೇದದಲ್ಲಿ ಬರುವ ಕೆಲವು ಮಾದರಿಗಳನ್ನು ಆದಿಯಲ್ಲಿದ್ದ ಪುರಾತನ ಪೂರ್ವ ದಿಕ್ಕಿನ ದೇಶಗಳವರು ಉಪಯೋಗಿಸಿ ಕೊಳ್ಳುತ್ತಿದ್ದರು. ಇಸ್ಮಾಯೇಲರು ಸಹ ಈ ಸಂಸ್ಕೃತಿಕ ಮಾದರಿಗಳನ್ನು ಅನುಸರಿಸುತ್ತಿದ್ದರು.

"ನೋಡಿ ಸತ್ಯವೇದದಲ್ಲಿನ ಚಿತ್ರಣ– ಸಾಂಸ್ಕೃತಿಕ ಮಾದರಿಗಳು ಸತ್ಯವೇದದಲ್ಲಿನ ಸಾಂಸ್ಕೃತಿಕ ಮಾದರಿಗಳ ಪಟ್ಟಿಗಳು.""