translationCore-Create-BCS_.../translate/figs-sentencetypes/01.md

15 KiB
Raw Permalink Blame History

ವಿವರಣೆಗಳು

ಒಂದು ವಾಕ್ಯ ಎಂದರೆ ಸಂಪೂರ್ಣವಾದ ಅರ್ಥವನ್ನು ಕೊಡುವ ಪದಗಳ ಗುಂಪು. ಮೂಲಭೂತ ವಾಕ್ಯಗಳ ಪಟ್ಟಿಯನ್ನು ಈ ಕೆಳಗೆ ನೀಡಿದೆ ಹಾಗೂ ಅವುಗಳ ಬಳಕೆ ಯಾವ ಸಂದರ್ಭದಲ್ಲಿ ಹೇಗೆ ಮಾಡಬೇಕೆಂಬುದನ್ನು ತಿಳಿಸುತ್ತದೆ.

  • ಹೇಳಿಕೆವಾಕ್ಯಗಳು ಈ ವಾಕ್ಯದ ವನ್ನು ಮುಖ್ಯಮಾಹಿತಿಯನ್ನು ಕೊಡಲು ಉಪಯೋಗಿಸುತ್ತೇವೆ. ಇದೊಂದು ವಾಸ್ತವ ಸಂಗತಿ.

  • ಪ್ರಶ್ನೆಗಳು - ಇಂತಹ ವಾಕ್ಯಗಳನ್ನು ಮಾಹಿತಿಯ ಬಗ್ಗೆ ಕೇಳಲು ಬಳಸುತ್ತೇವೆ. 'ನಿನಗೆ ಅವನು ಯಾರೆಂದು ಗೊತ್ತೆ ?'

  • ಕೋರಿಕೆ / ಆದೇಶ ಅಥವಾ ಆಜ್ಞಾಪನಾ ವಾಕ್ಯಗಳು ಈ ವಾಕ್ಯವನ್ನು ಮುಖ್ಯವಾಗಿ ಒಂದು ಬಯಕೆಯನ್ನು ವ್ಯಕ್ತಪಡಿಸಲು ಅಥವಾ ಬೇಡಿಕೆಯನ್ನು ಇಡಲು ಇಲ್ಲವೇ, ಒಬ್ಬರನ್ನು ಉದ್ದೇಶಿಸಿ ನಿರ್ದಿಷ್ಟ ಕಾರ್ಯ ಮಾಡಲು ಸೂಚಿಸಲು ಬಳಸಲಾಗುತ್ತದೆ. ಉದಾ 'ಕೆಳಗೆ ಬಿದ್ದಿರುವುದನ್ನು ತೆಗೆ '

  • ಭಾವ ಸೂಚಕವಾಕ್ಯಗಳು ಈ ವಾಕ್ಯವನ್ನು ಮುಖ್ಯವಾಗಿ ತೀವ್ರವಾದ ಭಾವನೆಗಳನ್ನು ವ್ಯಕ್ತಪಡಿಸಲು ಉಪಯೋಗಿಸುವಂತದ್ದು ಉದಾ : 'ಅಯ್ಯೋ, ಓಹ್ '

ಕಾರಣ ಇದೊಂದು ಭಾಷಾಂತರ ತೊಡಕು.

  • ಭಾಷೆಯಲ್ಲಿ ಅನೇಕ ರೀತಿಯ ವಾಕ್ಯಗಳ ಮೂಲಕ ವಿವಿಧ ಭಾವನೆಗಳನ್ನು ನಿರ್ದಿಷ್ಟಕಾರ್ಯವನ್ನು ತಿಳಿಸಲು ಸಾಧ್ಯ.
  • ಅನೇಕ ಭಾಷೆಯಲ್ಲಿ ಈ ರೀತಿಯ ವಾಕ್ಯಗಳನ್ನು ಒಂದಕ್ಕಿಂತ ಹೆಚ್ಚು ಕಾರ್ಯ ಮಾಡಲು ಬಳಸಲಾಗುತ್ತದೆ.
  • ಸತ್ಯವೇದದಲ್ಲಿನ ಪ್ರತಿಯೊಂದು ವಾಕ್ಯವು ಯಾವುದಾದರೂ ಒಂದು ನಿರ್ದಿಷ್ಟ ರೀತಿಯ ವಾಕ್ಯ ಲಕ್ಷಣವನ್ನು ಹೊಂದಿರುತ್ತದೆ. ಹಾಗೆಯೇ ನಿರ್ದಿಷ್ಟ ಕಾರ್ಯ ಹೊಂದಿರುತ್ತದೆ. ಆದರೆ ಕೆಲವು ಭಾಷೆಯಲ್ಲಿ ಇದು ಭಿನ್ನವಾಗಿರಬಹುದು.

ಸತ್ಯವೇದದಲ್ಲಿನ ಉದಾಹರಣೆಗಳು.

ಈ ಕೆಳಗಿನ ಉದಾಹರಣೆಗಳು. ಮೇಲೆ ತಿಳಿಸಿರುವ ವಾಕ್ಯಗಳ ವಿಧವನ್ನು ಹೊಂದಿರುತ್ತದೆ ಮತ್ತು ಒಂದೇ ರೀತಿಯ ಕಾರ್ಯವನ್ನು ನಿರ್ವಹಿಸುತ್ತದೆ.

####ಹೇಳಿಕೆಗಳು

ಆದಿಯಲ್ಲಿ ದೇವರು ಆಕಾಶವನ್ನು, ಭೂಮಿಯನ್ನು ಉಂಟುಮಾಡಿದನು. (ಆದಿಕಾಂಡ 1:1 ULB)

ಈ ಹೇಳಿಕೆ ವಾಕ್ಯಗಳು ಇನ್ನೂ ಅನೇಕ ಕಾರ್ಯವನ್ನು ಮಾಡುತ್ತವೆ.() ನೋಡಿ ಹೇಳಿಕೆಗಳು ಇತರ ಬಳಕೆಗಳು

ಪ್ರಶ್ನೆಗಳು

ಈ ಕೆಳಗಿನ ಪ್ರಶ್ನಾರ್ಥಕ ವಾಕ್ಯಗಳು ಮಾಹಿತಿಯನ್ನು ಕೇಳುವಂತದ್ದಾಗಿದೆ. ಅವರೊಂದಿಗೆ ಮಾತನಾಡುತ್ತಿ ರುವ ವ್ಯಕ್ತಿಗಳು ಅವರ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ.

ಯೇಸು ಅವರನ್ನು ಕುರಿತು "ನಾನು ಇದನ್ನು ಮಾಡಬಲ್ಲೆನೆಂಬುದನ್ನು ನಂಬುತ್ತಿರೋ ?" ಎಂದು ಕೇಳಿದ್ದಕ್ಕೆ ಅವರು, " ಹೌದು ಸ್ವಾಮಿ ನಂಬುತ್ತೇವೆ " ಎಂದರು (ಮತ್ತಾಯ 9:28 ULB)
ಸೆರೆಮನೆಯ ಅಧಿಕಾರಿಯು " ಸ್ವಾಮಿಗಳೇ ನಾನು ರಕ್ಷಣೆ ಹೊಂದುವುದಕ್ಕೆ ಏನು ಮಾಡಬೇಕು ?" ಅವರು ಕರ್ತನಾದ ಯೇಸುವಿನ ಮೇಲೆ ನಂಬಿಕೆ ಇಡು. ಆಗ ನೀನು ರಕ್ಷಣೆ ಹೊಂದುವಿ ಹಾಗೂ ನಿನ್ನ ಮನೆಯವರೂ ರಕ್ಷಣೆಹೊಂದುವರು." (ಅಪೋಸ್ತಲ ಕೃತ್ಯಗಳು 16:29-31 ULB)

ಪ್ರಶ್ನೆಗಳು ಇನ್ನೂ ಬೇರೆ ಕಾರ್ಯಗಳನ್ನು ಮಾಡಬಲ್ಲವು.(ಅಲಂಕಾರಿಕ ಪ್ರಶ್ನೆಗಳು)

ಆಜ್ಞಾಪನಾ ವಾಕ್ಯಗಳು.

ಈ ವಾಕ್ಯಗಳಲ್ಲಿ ಅನೇಕ ವಿಧಗಳಿವೆ : ಆಜ್ಞೆಗಳು, ಸೂಚನೆಗಳು, ಸಲಹೆಗಳು, ಆಹ್ವಾನಗಳು, ಕೋರಿಕೆಗಳು ಮತ್ತು ಹಾರೈಕೆಗಳು ಇರುತ್ತವೆ.

ಆಜ್ಞೆಯಲ್ಲಿ, ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯನ್ನು ಅಧಿಕಾರದಿಂದ ಒಂದು ಕಾರ್ಯವನ್ನು ಮಾಡುವಂತೆ ಹೇಳುವುದು / ಆಜ್ಞಾಪಿಸುವುದು

ಎದ್ದೇಳು</u ಬಾಲಾಕನೆ, ಕಿವಿಗೊಟ್ಟು. ಕೇಳುಚಿಪ್ಪೋರನ ಮಗನೇ ನನ್ನ ಮಾತನ್ನು ಲಾಲಿಸು. (ಅರಣ್ಯಕಾಂಡ 23:18 ULB)

ಸೂಚನೆ ನೀಡುವುದರ ಮೂಲಕಮಾತನಾಡುವ ವ್ಯಕ್ತಿ ಇನ್ನೊಬ್ಬನನ್ನು ಕುರಿತು ತಾನು ಹೇಳುವ ಕೆಲಸವನ್ನು ಹೇಗೆ ಮಾಡಬೇಕೆಂದು ಸೂಚಿಸುವುದು.

..ಒಳ್ಳೆಯ ಜೀವದಲ್ಲಿ ಸೇರಬೇಕೆಂದಿದ್ದರೆ, ದೇವರಾಜ್ಞೆಗಳಿಗೆ ಸರಿಯಾಗಿ ನಡೆದುಕೊಳ್ಳಿರಿ .. ನೀನು ಸಂಪೂರ್ಣನಾಗಬೇಕೆಂದಿದ್ದರೆ ಹೋಗು , ನಿನ್ನದೆಲ್ಲವನ್ನು ಮಾರಿ ಬಡವರಿಗೆ ಕೊಡು ಪರಲೋಕದಲ್ಲಿ ನಿನಗೆ ಸಂಪತ್ತಿರುವುದು. (ಮತ್ತಾಯ 19:17, 21 ULB)

ಸ ಲಹಾ ವಾಕ್ಯ ಒಬ್ಬ ವ್ಯಕ್ತಿ ಇನ್ನೊಬ್ಬನನ್ನು ಕುರಿತು ಏನನ್ನಾದರೂ ಮಾಡಲು ಹೇಳಬಹುದು, ಇಲ್ಲವೇ ಮಾಡಬೇಡವೆಂದು ಹೇಳಬಹುದು ಏಕೆಂದರೆ ಆ ವ್ಯಕ್ತಿಯ ಬಗ್ಗೆ ಅವನಿಗೆ ಕಾಳಜಿ ಇರುವುದರಿಂದ ಸಹಾಯ ಮಾಡಲು ಹೀಗೆ ಹೇಳಬಹುದು. ಕೆಳಗೆ ಕೊಟ್ಟಿರುವ ಉದಾಹರಣೆಯಲ್ಲಿ ಒಬ್ಬ ಕುರುಡನು ಇನ್ನೊಬ್ಬ ಕುರುಡನಿಗೆ ದಾರಿ ತೋರಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.

ಕುರುಡನುಕುರುಡನಿಗೆ ದಾರಿ ತೋರಿಸಬಾರದು . ಹಾಗೆ ಮಾಡಿದರೆ, ಅವರಿಬ್ಬರೂ ಕುಣಿಯಲ್ಲಿ ಬಿದ್ದು ಹೋಗುವರು ! (ಲೂಕ 6:39 UDB)

ಕೆಲವೊಮ್ಮೆ ಮಾತನಾಡುವ ವ್ಯಕ್ತಿ ಸೂಚಿಸಿದ್ದನ್ನು ಮಾಡುವ ಗುಂಪಿಗೆ ಸೇರಿದವರಾಗಿರುತ್ತಾರೆ. ಆದಿಕಾಂಡ 11ನೇ ಅಧ್ಯಾಯದಲ್ಲಿ " ಅವರು ತಮ್ಮತಮ್ಮೊಳಗೆ ಎಲ್ಲರೂ ಸೇರಿ ಒಳ್ಳೆಯ ಇಟ್ಟಿಗೆಗಳನ್ನು ಮಾಡೋಣ ಎಂದು ಮಾತನಾಡಿಕೊಳ್ಳುತ್ತಾರೆ.

ಅವರು ಪರಸ್ಪರ ಒಬ್ಬರಿಗೊಬ್ಬರು ತಮ್ಮೊಳಗೆ ಮಾತನಾಡಿಕೊಂಡು, ಬನ್ನಿ, ಒಳ್ಳೊಳ್ಳೆ ಸುಟ್ಟ ಇಟ್ಟಿಗೆಗಳನ್ನು ನಾವುಮಾಡೋಣ ಎಂದರು." (ಆದಿಕಾಂಡ 11:3 ULB)

ಆಹ್ವಾನ ನೀಡುವ ಮೂಲಕ ಮಾತನಾಡುವ ವ್ಯಕ್ತಿ, ವಿನಯವನ್ನು, ಸ್ನೇಹಪೂರ್ವಕ ಸಲಹೆಯನ್ನು ಇನ್ನೊಬ್ಬ ವ್ಯಕ್ತಿಗೆ ನೀಡಬಹುದು ಮತ್ತು ತಮ್ಮ ಇಚ್ಛೆಯಂತೆ ಕಾರ್ಯಮಾಡುವ ಬಗ್ಗೆ ಹೇಳಬಹುದು. ಈ ವಾಕ್ಯದಲ್ಲಿ ಮಾತನಾಡುವ ವ್ಯಕ್ತಿ ತಾನು ಯಾರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾನೋ ಆ ವ್ಯಕ್ತಿ ತನ್ನ ಮಾತನ್ನು ಕೇಳಲು ಇಚ್ಛಿಸುತ್ತಾನೆ.ಎಂದು ತಿಳಿದು ಕೊಳ್ಳುತ್ತಾನೆ.

ನಮ್ಮ ಜೊತೆಯಲ್ಲಿ ಬಾನಮ್ಮಿಂದ ನಿಮಗೂ ಮೇಲುಂಟಾಗುವುದೆಂದು ಹೇಳಿದನು. (ಅರಣ್ಯಕಾಂಡ 10:29)

ಕೋರಿಕೆ, ವಾಕ್ಯದಲ್ಲಿ ಮಾತನಾಡುವ ವ್ಯಕ್ತಿ ವಿನಯವನ್ನು ವ್ಯಕ್ತಪಡಿಸುತ್ತಾನೆ. ಇನ್ನೊಬ್ಬ ವ್ಯಕ್ತಿಯನ್ನು ಯಾವುದಾದರೂ ಕೆಲಸವನ್ನು ಮಾಡುವಂತೆ ವಿನಯದಿಂದ ವಿನಂತಿಸುತ್ತಾನೆ. ಈ ವಾಕ್ಯದಲ್ಲಿ 'ದಯವಿಟ್ಟು' ಎಂಬ ಪದ ಉಪಯೋಗಿಸಿ ಕೆಲಸಮಾಡುವಂತೆ ಕೇಳುತ್ತಾರೆಯೇ ಹೊರತು ಅಧಿಕಾರದಿಂದ ಕೇಳುವುದಿಲ್ಲ. ಇಂತಹ ವಾಕ್ಯದಿಂದ ಮಾತನಾಡುವ ವ್ಯಕ್ತಿಗೆ ಲಾಭವಾಗುತ್ತದೆ.

ನಮ್ಮ ಅನುದಿನದ ಆಹಾರವನ್ನು ನಮಗೆ ಈಹೊತ್ತು ದಯಪಾಲಿಸು . (ಮತ್ತಾಯ 6:11 ULB)
ದಯವಿಟ್ಟು ನನ್ನನ್ನು ಕ್ಷಮಿಸು. (ಲೂಕ 14:18 ULB)

ಹಾರೈಕೆ /ಬಯಕೆ ವಾಕ್ಯದಲ್ಲಿ ಒಬ್ಬ ವ್ಯಕ್ತಿ ತನಗೆ ಏನು ಬೇಕೆಂದು, ಏನು ನಡೆಯಬೇಕೆಂದು ಬಯಸುವುದಾಗಿರುತ್ತದೆ. ಇಂಗ್ಲೀಷ್ ಭಾಷೆಯಲ್ಲಿ "may/ ಸಾಧ್ಯತೆ" or "let./ ಆಸ್ಪದ ನೀಡು" ಎಂಬ ಪದಗಳನ್ನು ಬಳಸುತ್ತಾರೆ. ಆದಿಕಾಂಡ 28,ರಲ್ಲಿ ಇಸಾಕನು ಯಾಕೋಬನನ್ನು ಕುರಿತು ದೇವರು ಅವರಿಗಾಗಿ ಏನು ಮಾಡಬೇಕೆಂಬುದನ್ನು ವ್ಯಕ್ತಪಡಿಸುತ್ತಾನೆ.

ಸರ್ವಶಕ್ತನಾದ ದೇವರು ನಿನ್ನನ್ನು ಆಶೀರ್ವದಿಸಿ ನಿನಗೆ ಬಹು ಸಂತತಿಯನ್ನು ಕೊಟ್ಟು. ನಿನ್ನಿಂದ ಅನೇಕ ಜನಾಂಗಗಳು ಹುಟ್ಟುವಂತೆ ಅನುಗ್ರಹಿಸಲಿ (ಆದಿಕಾಂಡ 28:3 ULB)

ಆದಿಕಾಡ9,ರಲ್ಲಿ ನೋಹನು ಕಾನಾನ್ ದೇಶಕ್ಕೆ ಏನು ನಡೆಯಬೇಕೆಂದು ಹೇಳಿದನು

ಕಾನಾನ್ ನು ಶಾಪಗ್ರಸ್ತನಾಗಲಿ ಅವನು ತನ್ನ ಅಣ್ಣತಮ್ಮಂದಿರಿಗೆ ದಾಸಾನುದಾಸನಾಗಲಿ (ಆದಿಕಾಂಡ 9:25 ULB)

ಆದಿಕಾಡ21ರಲ್ಲಿ ಹಾಗಾರಳು ತನ್ನ ಮಗನು ತನ್ನ ಕಣ್ಣಮುಂದೆ ಸಾಯುವುದನ್ನು ಇಚ್ಛಿಸದೆ, ಅವನಿಂದ ದೂರಹೋಗಿ ಕುಳಿತುಕೊಂಡಳು.

ಅವಳು ಮಗುವನ್ನು ಒಂದುಗಿಡದ ನೆರಳಿನಲ್ಲಿ ಹಾಕಿಮಗುವು ಸಾಯುವುದನ್ನು ನೋಡಲಾರೆನು ಎಂದುಕೊಂಡಳು. (ಆದಿಕಾಂಡ 9:25 ULB)

ಆಜ್ಞಾಪನಾ ವಾಕ್ಯಗಳು ಈ ವಾಕ್ಯಗಳಿಗೆ ಅದರದೇ ಆದ ಕಾರ್ಯಗಳಿರುತ್ತವೆ. (ಆಜ್ಞಾಪನಾ ವಾಕ್ಯಗಳು ಇತರ ಉಪಯೋಗಗಳನ್ನು ನೋಡಿ)

ಭಾವಸೂಚಕಗಳು

ಭಾವಸೂಚಕಗಳು ಮನಸ್ಸಿನಲ್ಲಿನ ಆಳವಾದ ಭಾವನೆಗಳನ್ನು ವ್ಯಕ್ತಪಡಿಸುತ್ತದೆ. ULB ಮತ್ತು UDB, ಸತ್ಯವೇದದಲ್ಲಿ ಭಾವಸೂಚಕ ವಾಕ್ಯಗಳ ಕೊನೆಯಲ್ಲಿ (!) ಈ ಚಿಹ್ನೆ ಇರುತ್ತದೆ.

“ ಸ್ವಾಮಿ, ಕಾಪಾಡು, ಸಾಯುತ್ತೇವೆ ಎಂದರು ! “ (ಮತ್ತಾಯ 8:25 ULB) (ನೋಡಿ ಆಶ್ಚರ್ಯಸೂಚಕ ಇದರಲ್ಲಿ ಭಾವಸೂಚಕಗಳನ್ನು ಹೇಗೆ ಉಪಯೋಗಿಸಿದೆ ಮತ್ತು ಹೇಗೆ ಭಾಷಾಂತರಿಸಬೇಕು ಎಂದು ತಿಳಿಸುತ್ತಾರೆ.

ಭಾಷಾಂತರ ತಂತ್ರಗಳು

  1. ನಿಮ್ಮ ಭಾಷೆಯಲ್ಲಿ ಒಂದು ವಾಕ್ಯಕ್ಕೆ ನಿರ್ದಿಷ್ಟ ಕಾರ್ಯವಿರುತ್ತದೆ ಎಂಬುದನ್ನು ತೋರಿಸಿದರೆ ಅದನ್ನು ಬಳಸಿ.
  2. ಸತ್ಯವೇದವನ್ನು ಭಾಷಾಂತರಿಸುತ್ತಿರುವಾಗ ನಿಮ್ಮ ಭಾಷೆಯಲ್ಲಿ ವಾಕ್ಯಗಳ ವಿವಿಧ ರೂಪವನ್ನು ಮತ್ತು ವಾಕ್ಯಗಳ ಕಾರ್ಯವನ್ನು ಬಳಸುವಾಗ ಅದಕ್ಕೆ ಅವಕಾಶ ಇಲ್ಲದಿದ್ದರೆ ಕೆಳಗೆ ಕೊಟ್ಟಿರುವ ಪುಟಗಳಲ್ಲಿ ಇರುವ ಭಾಷಾಂತರ ತಂತ್ರಗಳನ್ನು ಬಳಸಿಕೊಳ್ಳಿ.