translationCore-Create-BCS_.../translate/figs-exclamations/01.md

12 KiB

ವಿವರಣೆಗಳು.

ಭಾವಸೂಚಕ ಪದಗಳನ್ನು ಅಥವಾ ವಾಕ್ಯಗಳನ್ನು, ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಬಳಸುತ್ತೇವೆ. ಉದಾ : ಸಂತೋಷ, ಆಶ್ಚರ್ಯ, ಹೆದರಿಕೆ, ಸಿಟ್ಟು ಮುಂತಾದವು. ULB ಮತ್ತು UDB, ಯಲ್ಲಿ ಸಾಮಾನ್ಯವಾಗಿ ಆಶ್ಚರ್ಯ ಸೂಚಕ ಚಿಹ್ನೆ (!) ಯನ್ನು ಬಳಸಲಾಗಿದೆ.

ಈ ಚಿಹ್ನೆ ಆಶ್ಚರ್ಯ ಸೂಚಕ ಚಿಹ್ನೆ (!) ಯನ್ನು ಸೂಚಿಸುತ್ತದೆ. ಸುಲಭವಾಗಿ ಸನ್ನಿವೇಶ, ಸಂದರ್ಭಗಳನ್ನು, ಅರ್ಥಮಾಡಿಕೊಳ್ಳಲು, ವ್ಯಕ್ತಪಡಿಸಿರುವ ಭಾವನೆಗಳನ್ನು ಅರ್ಥಮಾಡಿಕೊಳ್ಳಲು, ಇಂತಹ ಭಾವಸೂಚಕ ಪದಗಳು ಚಿಹ್ನೆಗಳು ಸಹಕಾರಿಯಾಗಿವೆ.

ಕೆಳಗೆ ಕೊಟ್ಟಿರುವ ಉದಾಹರಣೆ (ಮತ್ತಾಯ 8ನೇ ಅಧ್ಯಾಯ) ಎಲ್ಲಿ ಜನರು,ಅತ್ಯಂತ ಭಯಭ್ರಾಂತರಾಗಿರುವುದನ್ನು ಸೂಚಿಸುತ್ತದೆ. ಮತ್ತಾಯ 9ನೇ ಅಧ್ಯಾಯದಲ್ಲಿ ಜನರು ಆಶ್ಚರ್ಯದಿಂದ ದಿಗ್ಭ್ರಮೆಗೊಂಡರು ಏಕೆಂದರೆ ಇದುವರೆಗೂ ಅವರು ಹೀಗೆ ನಡೆದದ್ದನ್ನು ನೋಡಿರಲಿಲ್ಲ.,

ಸ್ವಾಮಿ, ನಮ್ಮನ್ನು ಕಾಪಾಡು, ನಾವು ಸಾಯುತ್ತೇವೆ. (ಮತ್ತಾಯ 8:25 ULB) ಆತನು ದೆವ್ವವನ್ನು ಬಿಡಿಸಿ ಓಡಿಸಿದಮೇಲೆ, ಆ ಮೂಕನು ಮಾತನಾಡತೊಡಗಿದನು. " ಇಸ್ರಾಯೆಲ್ ಜನರಲ್ಲಿ ಇಂತಹಕಾರ್ಯ ಯಾವಾಗಲೂ ನೆರವೇರಿರಲಿಲ್ಲ ಎಂದು ಆ ಜನರು ಬೆರಗಾದರು !" (ಮತ್ತಾಯ 9:33 ULB)

###ಇದೊಂದು ಭಾಷಾಂತರ ತೊಡಕು.

ಎಲ್ಲಾ ಭಾಷೆಯಲ್ಲೂ ಮನಸ್ಸಿನ ತೀವ್ರವಾದ ಭಾವನೆಗಳನ್ನು ವ್ಯಕ್ತಪಡಿಸಲು ಅನೇಕ ರೀತಿಯ ಪದಗಳು ವಾಕ್ಯಗಳು ಇವೆ.

ಸತ್ಯವೇದದಲ್ಲಿನ ಕೆಲವು ಉದಾಹರಣೆಗಳು.

ಕೆಲವೊಮ್ಮೆ ಕೆಲವು ಪದಗಳೇ ಭಾವಸೂಚಕಗಳಾಗಿ ಭಾವನೆಗಳನ್ನು ವ್ಯಕ್ತಪಡಿಸುತ್ತವೆ. ಈ ಕೆಳಗಿನ ವಾಕ್ಯಗಳಲ್ಲಿ "ಓಹ್" ಮತ್ತು "ಆಹ್." ಎಂಬ ಪದಗಳಿವೆ. " ಓಹ್ " ಇಂತಹ ಪದಗಳು ವ್ಯಕ್ತಿಯ ದಿಗ್ಭ್ರಮೆ, ಆಶ್ಚರ್ಯವನ್ನು ವ್ಯಕ್ತಪಡಿಸುತ್ತದೆ.

ಓಹ್ ,ದೇವರ ಐಶ್ವರ್ಯವು, ಜ್ಞಾನವು, ವಿವೇಕವು ಎಷ್ಟೋ ಅಗಾಧವಾದುದು! (ರೋಮಪುರದವರಿಗೆ 11:33 ULB)

ಕೆಳಗಿನ ಉದಾಹರಣೆಯಲ್ಲಿ " ಆಹ್ "! ಗಿದ್ಯೋನನು ತುಂಬಾ ಭಯಭೀತನಾಗಿರುವುದನ್ನು ಸೂಚಿಸುತ್ತದೆ. ತನ್ನೊಂದಿಗೆ ಮಾತನಾಡುತ್ತಿರುವವನು ಯೆಹೋವನು ದೂತನು ಎಂದು ಗಿದ್ಯೋನನು ಅರ್ಥಮಾಡಿಕೊಂಡನು. ಗಿಡಿಯೋನನು "ಆಹ್ , ಅಯ್ಯೋ ಕರ್ತನೇ, ಯೆಹೊವನೇ ಎಂದು ಕೂಗಿದನು. ಯೆಹೊವನೇ ಕರ್ತನ ದೂತನನ್ನು ಮುಖಾಮುಖಿಯಾಗಿ ನೋಡಿಬಿಟ್ಟೆನಲ್ಲಾ ! ಎಂದು ಕೂಗಿದನು. (ನ್ಯಾಯಸ್ಥಾಪಕರು 6:22 ULB)

ಕೆಲವು ಭಾವಸೂಚಕ ವಾಕ್ಯಗಳು ಪ್ರಶ್ನಿಸುವ ವಾಕ್ಯವಲ್ಲದಿದ್ದರೂ ಪ್ರಶ್ನಾರ್ಥಕ ಪದಗಳ ಮೂಲಕ ಪ್ರಾರಂಭವಾಗುತ್ತವೆ. ಉದಾಹರಣೆಗೆ "ಹೇಗೆ " ಅಥವಾ "ಏಕೆ," ಎಂಬ ಪದಗಳು. ಈ ಕೆಳಗಿನ ವಾಕ್ಯಗಳು, ದೇವರ ತೀರ್ಮಾನಗಳು ಪರಿಶೋಧನೆಗೆ ಎಷ್ಟೋ ಅಗಮ್ಯ.ಎನ್ನುವ ವಿಷಯದಲ್ಲಿ ಕರ್ತೃ ವ್ಯಕ್ತಪಡಿಸುವ ಆಶ್ಚರ್ಯವನ್ನು ಸೂಚಿಸುತ್ತದೆ!

ಹೇಗೆಆತನ ತೀರ್ಮಾನಗಳು ಪರಿಶೋಧನೆಗೆ ಎಷ್ಟೋ ಅಗಮ್ಯ! ತನ ಮಾರ್ಗಗಳು ಕಂಡುಹಿಡಿಯಲು ಅಸಾಧ್ಯ. (ರೋಮಪುರದವರಿ11:33 ULB)

ಕೆಲವೊಮ್ಮೆ ಸತ್ಯವೇದದಲ್ಲಿ ಬರುವ ಭಾವಸೂಚಕ ವಾಕ್ಯಗಳಲ್ಲಿ ಮುಖ್ಯವಾದ ಕ್ರಿಯಾಪದ ಇರುವುದಿಲ್ಲ. ಈ ಕೆಳಗಿನ ವಾಕ್ಯಗಳು ಇಲ್ಲಿ ಮಾತನಾಡುತ್ತಿರುವ ವ್ಯಕ್ತಿಯ ಬಗ್ಗೆ ಅಸಮಾಧಾನಗೊಂಡಂತೆ ಕಾಣುತ್ತದೆ.

ಛೀ! ನೀಚ (ಮತ್ತಾಯ 5:22 ULB)

ಭಾಷಾಂತರದ ತಂತ್ರಗಳು

  1. ನಿಮ್ಮ ಭಾಷೆಯಲ್ಲಿ ಕಂಡುಬರುವ ಭಾವಸೂಚಕ ಪದಕ್ಕೆ ಕ್ರಿಯಾಪದದ ಅವಶ್ಯಕತೆ ಇದ್ದರೆ ಅದನ್ನು ಸೇರಿಸಬಹುದು. ಒಂದು ಒಳ್ಳೆ ಕ್ರಿಯಾಪದವೆಂದರೆ "is" or "are.".
  2. ನಿಮ್ಮ ಭಾಷೆಯಲ್ಲಿ ಪರಿಣಾಮಕಾರಿ ಭಾವಸೂಚಕ ಪದವಿದ್ದರೆ ಬಳಸಬಹುದು.
  3. ಭಾವಸೂಚಕ ಪದವನ್ನು ಬಳಸಿ ವಾಕ್ಯದ ಮೂಲಕ ಭಾವನೆಗಳನ್ನು ಪರಿಣಾಮಕಾರಿಯಾಗಿ ಬಳಸಬಹುದು.
  4. ವಾಕ್ಯದಲ್ಲಿ ಯಾವಭಾಗ ಪರಿಣಾಮಕಾರಿಯಾದ ಭಾವನೆಯನ್ನು ವ್ಯಕ್ತಪಡಿಸುತ್ತದೋ ಅದನ್ನು ಸೂಕ್ತಪದದಿಂದ ವಿಶೇಷ ಒತ್ತು ನೀಡಿ
  5. ಭಾಷಾಂತರ ಮಾಡುವ ಭಾಷೆಯಲ್ಲಿ ಪರಿಣಾಮಕಾರಿಯಾಗಿ ತಿಳಿಸಲು ಸಾಧ್ಯವಾಗದಿದ್ದರೆ ಎಂತಹ ಭಾವನೆಗಳು ವ್ಯಕ್ತವಾಗಿದೆ ಎಂಬುದನ್ನು ಸರಳವಾಗಿ ತಿಳಿಸಿ.

ಭಾಷಾಂತರದ ತಂತ್ರಗಳ ಅಳವಡಿಕೆಯಾದ ಬಗ್ಗೆ ಉದಾಹರಣೆಗಳು

  1. ನಿಮ್ಮ ಭಾಷೆಯಲ್ಲಿ ಕಂಡುಬರುವ ಭಾವಸೂಚಕ ಪದಕ್ಕೆ ಕ್ರಿಯಾಪದದ ಅವಶ್ಯಕತೆ ಇದ್ದರೆ ಸೇರಿಸಬಹುದು. ಇಂಗ್ಲೀಷಿನಲ್ಲಿ ಒಳ್ಳೆ ಕ್ರಿಯಾಪದವೆಂದರೆ "is" or "are.".

ಛೀ ! ನೀಚ (ಮತ್ತಾಯ 5:22 ULB)

  • ನೀನು ಒಬ್ಬಅಯೋಗ್ಯ ಮನುಷ್ಯ ! "

  • ಓಹ್ ! ದೇವರ ಐಶ್ವರ್ಯವು, ಜ್ಞಾನವು, ವಿವೇಕವೂ ಎಷ್ಟೋ ಅಗಾಧವಾದುದು ! (ರೋಮಾಪುರದವರಿಗೆ 11:33 ULB)

    • " ಓಹ್ ! ದೇವರ ಜ್ಞಾನವು ವಿವೇಕವೂ ಐಶ್ವರ್ಯದಂತೆ ಅಗಾಧವಾದುದು !
  1. ನಿಮ್ಮ ಭಾಷೆಯಲ್ಲಿರುವ ಪರಿಣಾಮಕಾರಿಯಾದ ಭಾವಸೂಚಕ ಪದವನ್ನು ಬಳಸಿ. "wow"! ಎಂಬ ಪದ ಕೆಳಗಿನ ಉದಾಹರಣೆಗಳಲ್ಲಿ ಅವರು ಆಶ್ಚರ್ಯಚಕಿತರಾದ ಬಗ್ಗೆ ತಿಳಿಸುತ್ತದೆ. "ಓಹ್ ! " " ಇಲ್ಲ "ಎಂಬ ಪದಗಳು ಯಾವುದೋ ಭಯಂಕರವಾದ, ಸಹಿಸಲು ಅಸಾಧ್ಯವಾದ ಘಟನೆ ನಡೆದ ಬಗ್ಗೆ ಸೂಚಿಸುವ ಪದಗಳಾಗಿವೆ.
  • ಅವರು ಅತ್ಯಂತ ಆಶ್ವರ್ಯಪಟ್ಟು " ಇವನು ಎಲ್ಲವನ್ನು ಸರಿಮಾಡುತ್ತಾನೆ! " ಅಂದರು. ಈತನ ಕಿವುಡರನ್ನು ಕೇಳುವಂತೆ, ಮೂಕರನ್ನು ಮಾತನಾಡಿಸುವಂತೆ ಮಾಡುತ್ತಾನೆ." ಅಂದುಕೊಂಡರು (ಮಾರ್ಕ 7:36 ULB)

    • " ಅವರು ಅತ್ಯಂತ ಆಶ್ಚರ್ಯಗೊಂಡು "ವಾವ್! ಎಂದರು. ಈತನು ಎಲ್ಲವನ್ನು ಚೆನ್ನಾಗಿ ಮಾಡುತ್ತಾನೆ. ಈತನ ಕಿವುಡರಿಗೆ ಕೇಳುವಂತೆ, ಮೂಕರನ್ನು ಮಾತನಾಡುವಂತೆ ಸಹಾ ಮಾಡುವನು.
  • ಅಯ್ಯೋ ! ಕರ್ತನಾದ ಯೆಹೋವನೇ ! ಯೆಹೋವನ ದೂತನನ್ನು ಮುಖಾಮುಖಿಯಾಗಿ ನೋಡಿಬಿಟ್ಟೆನಲ್ಲಾ ! (ನ್ಯಾಯಪಾಲಕರು 6:22 ULB)

    • "ಅಯ್ಯೋ ! ಇಲ್ಲ !, ಕರ್ತನೇ, ಯೆಹೋವನೇ ! ಯೆಹೋವನ ದೂತನನ್ನು ಮುಖಾಮುಖಿಯಾಗಿ ನೋಡಿಬಿಟ್ಟೆ !
  1. ನಿಮ್ಮ ಭಾಷೆಯಲ್ಲಿ ಪರಿಣಾಮಕಾರಿ ಭಾವಸೂಚಕ ಪದವಿದ್ದರೆ ಬಳಸಬಹುದು.
  • ಅಯ್ಯೋ !, ಕರ್ತನೇ, ಯೆಹೋವನೇ ! ಯೆಹೋವನ ದೂತನನ್ನು ಮುಖಾಮುಖಿಯಾಗಿ ನೋಡಿಬಿಟ್ಟೆನಲ್ಲಾ ! (ನ್ಯಾಯಪಾಲಕರು 6:22 ULB)

    • ಕರ್ತನೇ, ಯೆಹೋವನೇ ! ನನಗೆ ಏನಾಗುತ್ತದೆ ? ಯೆಹೋವನ ದೂತನನ್ನು ಮುಖಾಮುಖಿಯಾಗಿ ನೋಡಿಬಿಟ್ಟೆನಲ್ಲಾ !
    • ಸಹಾಯಮಾಡು, ಕರ್ತನೇ, ಯೆಹೋವನೇ! ಯೆಹೋವನ ದೂತನನ್ನು ಮುಖಾಮುಖಿಯಾಗಿ ನೋಡಿಬಿಟ್ಟೆನಲ್ಲಾ !
  1. ವಾಕ್ಯದಲ್ಲಿ ಯಾವಭಾಗ ಪರಿಣಾಮಕಾರಿಯಾದ ಭಾವನೆಯನ್ನು ವ್ಯಕ್ತಪಡಿಸುತ್ತದೋ ಅದನ್ನು ಸೂಕ್ತಪದದಿಂದ ವಿಶೇಷ ಒತ್ತು ನೀಡಿ
  • >ಹೇಗೆಆತನ ತೀರ್ಮಾನಗಳು ಪರಿಶೋಧನೆಗೆ ಎಷ್ಟೋ ಅಗಮ್ಯ! ಆತನ ಮಾರ್ಗಗಳು ಕಂಡುಹಿಡಿಯಲು ಅಸಾಧ್ಯ.

    • ಆತನ ನ್ಯಾಯ ತೀರ್ಮಾನಗಳು ಪರಿಶೀಲನೆಗೆ ಅಗಮ್ಯವಾದುದು, ಆತನ ಮಾರ್ಗಗಳು ಕಂಡುಹಿಡಿಯಲು ಅಸಾಧ್ಯ !
  1. ಭಾಷಾಂತರ ಮಾಡುವ ಭಾಷೆಯಲ್ಲಿ ಪರಿಣಾಮಕಾರಿಯಾಗಿ ತಿಳಿಸಲು ಸಾಧ್ಯವಾಗದಿದ್ದರೆ ಎಂತಹ ಭಾವನೆಗಳು ವ್ಯಕ್ತವಾಗಿದೆ ಎಂಬುದನ್ನು ಸರಳವಾಗಿ ತಿಳಿಸಿ.
  • ಯೆಹೋವನು ದೂತನು (ದೇವದೂತನು) ತನ್ನೊಂದಿಗೆ ಮಾತನಾಡುತ್ತಿರುವನು ಎಂದು ಗಿದ್ಯೋನನು ಅರ್ಥಮಾಡಿಕೊಂಡನು ಗಿದ್ಯೋನನು "ಆಹ್ , ಅಯ್ಯೋ ಕರ್ತನೇ, ಯೆಹೋವನೇ ಎಂದು ಕೂಗಿದನು. ಯೆಹೊವನೇ ಕರ್ತನ ದೂತನನ್ನು ಮುಖಾಮುಖಿಯಾಗಿ ನೋಡಿಬಿಟ್ಟೆನಲ್ಲಾ ! ಎಂದು ಕೂಗಿದನು. (ನ್ಯಾಯಸ್ಥಾಪಕರು 6:22 ULB)

    • " ಇದು ಯೆಹೋವನ ದೂತನು ಎಂದು ಗಿಡಿಯೋನನಿಗೆ ಅರ್ಥವಾಯಿತು ಅವನು ಭಯಭೀತನಾದನು, ದಿಗ್ಬ್ರಮೆಯಿಂದ ಅಯ್ಯೋ !, ಕರ್ತನೇ, ಯೆಹೋವನೇ !ಎಂದು ಕೂಗಿದನು. ಯೆಹೋವನೇ ಕರ್ತನ ದೂತನನ್ನು ಮುಖಾಮುಖಿಯಾಗಿ ನೋಡಿಬಿಟ್ಟೆನಲ್ಲಾ ! ಎಂದು ಕೂಗಿದನು. (ನ್ಯಾಯಸ್ಥಾಪಕರು 6:22 ULB)