Merge Vishwanath-tc-create-1 into master by Vishwanath (#16)

This commit is contained in:
Vishwanath S P 2023-10-26 06:00:34 +00:00
parent 4b3025d1bf
commit 8ec2d53e68
1 changed files with 21 additions and 18 deletions

View File

@ -51,24 +51,27 @@
(1) ಓದುಗರಿಗೆ ಕಲ್ಪಿತ ಜ್ಞಾನವಿಲ್ಲದ ಕಾರಣ ಸಂದೇಶವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ಆಗ ಸ್ಪಷ್ಟವಾದ ಮಾಹಿತಿಯನ್ನು ಒದಗಿಸಿಕೊಡಬಹುದು.
> ಯೇಸು ಅವರಿಗೆ, "ನರಿಗಳಿಗೆ **ಗುದ್ದುಗಳಿವೆ**, ಮತ್ತು ಆಕಾಶದಲ್ಲಿ ಹಾರಾಡುವ ಹಕ್ಕಿಗಳಿಗೆ **ಗೂಡುಗಳಿವೆ**, ಆದರೆ ಮನುಷ್ಯಕುಮಾರನಿಗೆ ತಲೆ ಇಡುವಷ್ಟು ಸ್ಥಳವೂ ಇಲ್ಲ" ಎಂದು ಹೇಳಿದನು. (ಮತ್ತಾಯ 8:20 ULT) ನರಿಗಳು ಗುದ್ದುಗಳಲ್ಲಿ ಮಲಗುತ್ತವೆ, ಮತ್ತು ಪಕ್ಷಿಗಳು ಗೂಡುಗಳಲ್ಲಿ ಮಲಗುತ್ತವೆ ಎಂಬುದು ಕಲ್ಪಿತ ಜ್ಞಾನವಾಗಿದೆ.
>
> > ಯೇಸು ಅವರಿಗೆ, "ನರಿಗಳಿಗೆ **ವಾಸಿಸುವುದಕ್ಕೆ ಗುದ್ದುಗಳಿವೆ**, ಮತ್ತು ಆಕಾಶದಲ್ಲಿ ಹಾರಾಡುವ ಪಕ್ಷಿಗಳಿಗೆ **ವಾಸಿಸುವುದಕ್ಕೆ ಗೂಡುಗಳಿವೆ**, ಆದರೆ ಮನುಷ್ಯಕುಮಾರನಿಗೆ ತಲೆ ಇಟ್ಟು ನಿದ್ರಿಸಲು ಸ್ಥಳವಿಲ್ಲ" ಎಂದು ಹೇಳಿದನು.
>
> ನ್ಯಾಯ ವಿಚಾರಣೆಯ ದಿನದಲ್ಲಿ ನಿಮ್ಮ ಗತಿಗಿಂತಲೂ **ತೂರ್, ಸಿದೋನ್** ಪಟ್ಟಣಗಳ ಗತಿಯು ಮೇಲಾಗಿರುವುದು (ಮತ್ತಾಯ 11:22 ULT) - ತೂರ್ ಮತ್ತು ಸಿದೋನ್ ಜನರು ತುಂಬಾ ತುಂಬಾ ದುಷ್ಟರಾಗಿದ್ದಾರೆ ಎಂಬುದು ಕಲ್ಪಿತ ಜ್ಞಾನವಾಗಿದೆ. ಇದನ್ನು ಸ್ಪಷ್ಟವಾಗಿ ಹೇಳಬಹುದು.
>
> > … ನ್ಯಾಯ ವಿಚಾರಣೆಯ ದಿನದಲ್ಲಿ ನಿಮ್ಮ ಗತಿಗಿಂತಲೂ **ತುಂಬಾ ದುಷ್ಟರಾಗಿದ್ದ ತೂರ್ ಮತ್ತು ಸಿದೋನ್ ಪಟ್ಟಣಗಳ ಜನರ**, ಗತಿಯು ಮೇಲಾಗಿರುವುದು.
> > ಅಥವಾ:
> > …ನ್ಯಾಯ ವಿಚಾರಣೆಯ ದಿನದಲ್ಲಿ ನಿಮ್ಮ ಗತಿಗಿಂತಲೂ **ದುಷ್ಟ ಪಟ್ಟಣಗಳಾದ ತೂರ್ ಮತ್ತು ಸಿದೋನ್**, ಗತಿಯು ಮೇಲಾಗಿರುವುದು.
>
> ನಿನ್ನ ಶಿಷ್ಯರು ಹಿರಿಯರ ಸಂಪ್ರದಾಯವನ್ನು ಏಕೆ ಉಲ್ಲಂಘಿಸುತ್ತಾರೆ? ಏಕೆಂದರೆ **ಅವರು ಊಟ ಮಾಡುವಾಗ ಅವರು ತಮ್ಮ ಕೈ ತೊಳೆದುಕೊಳ್ಳುವುದಿಲ್ಲ**. (ಮತ್ತಾಯ 15:2 ULT) ಇದರಲ್ಲಿ ಕಲ್ಪಿತ ಜ್ಞಾನವೆಂದರೆ ಹಿರಿಯರಿಂದ ಬಂದ ಸಂಪ್ರದಾಯಗಳ ಪೈಕಿ ಒಂದು ಜನರು ತಾವು ಧಾರ್ಮಿಕ ಸಂಸ್ಕಾರದ ರೀತಿಯಲ್ಲಿ ಸ್ವಚ್ಛವಾಗಿರುವುದಕ್ಕಾಗಿ ಊಟಮಾಡುವ ಮೊದಲು ತಮ್ಮ ಕೈಗಳನ್ನು ತೊಳೆದುಕೊಳ್ಳುತ್ತಿದ್ದರು. ನೀತಿವಂತರಾಗಿರುವುದಕ್ಕಾಗಿ ಹಿರಿಯರ ಸಂಪ್ರದಾಯವನ್ನು ಮಾಡಬೇಕಾಗಿತ್ತು. ಆಧುನಿಕ ಕಾಲದ ಓದುಗರು ತಿಳಿದಂತೆ ಊಟಮಾಡುವ ಮೊದಲು ಕೈ ತೊಳೆಯುವುದರಿಂದ ಕೈಗಳಲ್ಲಿರುವ ಕ್ರಿಮಿ, ಬ್ಯಾಕ್ಟೀರಿಯಾಗಳಿಂದ ಮುಕ್ತವಾಗುವುದಕ್ಕಾಗಿ ಅಲ್ಲ.
>
> > ನಿನ್ನ ಶಿಷ್ಯರು ಹಿರಿಯರ ಸಂಪ್ರದಾಯವನ್ನು ಏಕೆ ಉಲ್ಲಂಘಿಸುತ್ತಾರೆ? ಏಕೆಂದರೆ ಅವರು ಊಟಮಾಡುವಾಗ **ಅವರು ನೀತಿಯ ಕರ್ಮಾಚರಣೆಯ ಪ್ರಕಾರ ವಿಧ್ಯುಕ್ತವಾದ ರೀತಿಯಲ್ಲಿ ಅನುಸರಿಸುವುದಿಲ್ಲ.**
(2) ಓದುಗರಿಗೆ ಸೂಚ್ಯ ಮಾಹಿತಿಯಿಲ್ಲದ ಕಾರಣ ಸಂದೇಶವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ಆಗ ಸ್ಪಷ್ಟವಾದ ಮಾಹಿತಿ ನೀಡಿ ಅರ್ಥವಾಗುವಂತೆ ಮಾಡಬೇಕು. ಆದರೆ ಮೂಲ ಓದುಗರಿಗೆ ಈ ಮಾಹಿತಿಯು ಹೊಸದಾಗಿತ್ತು ಎಂಬ ಅರ್ಥವನ್ನು ಕೊಡದಂತೆ ಪ್ರಯತ್ನಿಸಬೇಕು.
> ಆಗ ಒಬ್ಬ ಶಾಸ್ತ್ರಿಯು ಆತನ ಬಳಿಗೆ ಬಂದು, "ಗುರುವೇ, ನೀನು ಎಲ್ಲಿಗೆ ಹೋದರೂ ನಾನು ನಿನ್ನ ಹಿಂಬಾಲಿಸುತ್ತೇನೆ" ಎಂದು ಹೇಳಿದನು. ಯೇಸು ಅವನಿಗೆ "ನರಿಗಳಿಗೆ **ಗುದ್ದುಗಳಿವೆ**, ಆಕಾಶದಲ್ಲಿ ಹಾರಾಡುವ ಹಕ್ಕಿಗಳಿವೆ **ಗೂಡುಗಳಿವೆ**, ಆದರೆ ಮನುಷ್ಯಕುಮಾರನಿಗೆ ತಲೆ ಇಡುವಷ್ಟು ಸ್ಥಳವೂ ಇಲ್ಲ" ಎಂದು ಹೇಳಿದನು. (ಮತ್ತಾಯ 8:20 ULT) ಇಲ್ಲಿ ಯೇಸು ಮನುಷ್ಯಕುಮಾರನಾಗಿದ್ದಾನೆ ಎಂಬುದು ಸೂಚ್ಯ ಮಾಹಿತಿಯಾಗಿದೆ. ಆ ಶಾಸ್ತ್ರಿಯು ಯೇಸುವನ್ನು ಹಿಂಬಾಲಿಸಲು ಬಯಸಿದರೆ ಅವನು ಯೇಸುವಿನಂತೆ ಮನೆ ಇಲ್ಲದೆ ಜೀವಿಸಬೇಕು ಎಂಬುದು ಇನ್ನೊಂದು ಸೂಚ್ಯ ಮಾಹಿತಿಯಾಗಿದೆ.
>
> > ಯೇಸು ಅವನಿಗೆ, "ನರಿಗಳಿಗೆ ಗುದ್ದುಗಳಿವೆ ಮತ್ತು ಆಕಾಶದಲ್ಲಿ ಹಾರಾಡುವ ಪಕ್ಷಿಗಳಿಗೆ ಗೂಡುಗಳಿವೆ ಮತ್ತು **ಮನುಷ್ಯಕುಮಾರನಾದ ನನಗೆ, ವಿಶ್ರಾಂತಿ ಪಡೆಯಲು ಮನೆ ಇಲ್ಲ. ನೀನು ನನ್ನನ್ನು ಹಿಂಬಾಲಿಸಿ ಬಯಸುವುದಾದರೆ ನನ್ನಂತೆಯೇ ನೀನು ಜೀವಿಸಬೇಕು**" ಎಂದು ಹೇಳಿದನು.
>
> ನ್ಯಾಯ ವಿಚಾರಣೆಯ ದಿನದಲ್ಲಿ ನಿಮ್ಮ ಗತಿಗಿಂತಲೂ ತೂರ್, ಸಿದೋನ್ ಪಟ್ಟಣಗಳ ಗತಿಯು ಮೇಲಾಗಿರುವುದು (ಮತ್ತಾಯ 11:22 ULT) ದೇವರು ಜನರಿಗೆ ನ್ಯಾಯತೀರ್ಪು ಮಾಡುವುದು ಮಾತ್ರವಲ್ಲ ಆತನು ಅವರನ್ನು ಶಿಕ್ಷಿಸುತ್ತಾನೆ ಎಂಬುದು ಸೂಚ್ಯ ಮಾಹಿತಿ. ಇದನ್ನು ಸ್ಪಷ್ಟಪಡಿಸಿ ಹೇಳಬಹುದು.
>
> > ನ್ಯಾಯ ವಿಚಾರಣೆಯ ದಿನದಂದು ದೇವರು ತುಂಬಾ ದುಷ್ಟರಾಗಿರುವ **ತೂರ್ ಮತ್ತು ಸಿದೋನ್ ಪಟ್ಟಣದ ಜನರನ್ನು ಶಿಕ್ಷಿಸುವನು**, ಆದರೆ **ನಿಮ್ಮನ್ನು ಶಿಕ್ಷಿಸುವುದಕ್ಕಿಂತ ಅತಿ ಕಡಿಮೆಯಾಗಿ ಶಿಕ್ಷಿಸುವನು**.
> > ಅಥವಾ:
> > ನ್ಯಾಯ ವಿಚಾರಣೆಯ ದಿನದಲ್ಲಿ ದುಷ್ಟರಾದ ತೂರ್ ಮತ್ತು ಸಿದೋನ್ ಪಟ್ಟಣದ ಜನರಿಗಿಂತ **ನಿಮ್ಮನ್ನು ದೇವರು ಬಹು ಘೋರವಾಗಿ ಶಿಕ್ಷಿಸುವನು**.