translationCore-Create-BCS_.../translate/figs-explicit/01.md

23 KiB
Raw Blame History

  • ಮಾತನಾಡುವವನು ತಾನು ಮಾತನಾಡುವ ಮತ್ತು ಅವರಿಗೆ ಕೆಲವೊಂದು ಮಾಹಿತಿಯನ್ನು ನೀಡುವ ಮೊದಲೇ ತನ್ನ ಶ್ರೋತೃಗಳಿಗೆ ಅದು ತಿಳಿದಿದೆ ಎಂದು ಊಹಿಸಿಕೊಳ್ಳುವಂಥ ಎಲ್ಲವು ಕಲ್ಪಿತ ಜ್ಞಾನ ಆಗಿದೆ. ಮಾತನಾಡುವವನು ಈ ಮಾಹಿತಿಯನ್ನು ಶ್ರೋತೃಗಳಿಗೆ ಕೊಡುವುದಿಲ್ಲ ಏಕೆಂದರೆ ಅದು ಈಗಾಗಲೇ ಅವರಿಗೆ ತಿಳಿದಿದೆ ಎಂದು ಅವನು ಭಾವಿಸುತ್ತಾನೆ.

  • ಮಾತನಾಡುವವನು ಶ್ರೋತೃಗಳಿಗೆ ಮಾಹಿತಿಯನ್ನು ಕೊಡುವಾಗ ಅವನು ಎರಡು ರೀತಿಯಲ್ಲಿ ಮಾಹಿತಿಯನ್ನು ನೀಡುತ್ತಾನೆ:

  • ಸ್ಪಷ್ಟವಾದ ಮಾಹಿತಿ ಎಂದರೆ ಮಾತನಾಡುವವನು ನೇರವಾಗಿ ವಿಷಯವನ್ನು ತಿಳಿಸುತ್ತಾನೆ.

  • ಸೂಚ್ಯ ಮಾಹಿತಿ ಎಂದರೆ ಮಾತನಾಡುವವನು ವಿಷಯವನ್ನು ನೇರವಾಗಿ ಹೇಳದೆ ತಾನು ಹೇಳುತ್ತಿರುವ ವಿಷಯವನ್ನು ತನ್ನ ಶ್ರೋತೃಗಳು ಕಲಿತುಕೊಳ್ಳಬೇಕೆಂದು ನಿರೀಕ್ಷಿಸುತ್ತಾನೆ.

ವಿವರಣೆ

ಒಬ್ಬನು ಬರೆಯುವಾಗ ಅಥವಾ ಮಾತನಾಡುವಾಗ ಯಾವುದಾದರೂ ನಿರ್ದಿಷ್ಟ ವಿಷಯವನ್ನು ಜನರು ತಿಳಿದುಕೊಳ್ಳಬೇಕು, ಮಾಡಬೇಕು ಅಥವಾ ಅದರ ಬಗ್ಗೆ ಯೋಚಿಸಬೇಕು ಎಂದು ಬಯಸುತ್ತಾನೆ. ಸಾಮಾನ್ಯವಾಗಿ ಅವನು ಇದನ್ನು ನೇರವಾಗಿ ಹೇಳುತ್ತಾನೆ. ಇದು ಸ್ಪಷ್ಟವಾದ ಮಾಹಿತಿ ಆಗಿದೆ.

ಇಲ್ಲಿ ಮಾತನಾಡುವ ವ್ಯಕ್ತಿ ತನ್ನ ಶ್ರೋತೃಗಳು ತಾನು ಹೇಳಬೇಕಾಗಿರುವ ವಿಷಯದ ಬಗ್ಗೆ ಈಗಾಗಲೇ ತಿಳಿದಿರುತ್ತಾರೆ ಮತ್ತು ತಾನು ಹೇಳುವ ಮಾಹಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲರು ಎಂದು ತಿಳಿದಿರುತ್ತಾನೆ. ಸಾಮಾನ್ಯವಾಗಿ ಅವನು ನೇರವಾಗಿ ಈ ವಿಚಾರವನ್ನು ತನ್ನ ಶ್ರೋತೃಗಳಿಗೆ ಹೇಳುವುದಿಲ್ಲ ಏಕೆಂದರೆ ಈಗಾಗಲೇ ಅವರಿಗೆ ಈ ವಿಷಯ ತಿಳಿದಿರುತ್ತದೆ. ಇದನ್ನು ಕಲ್ಪಿತ ಜ್ಞಾನ ಎಂದು ಕರೆಯುತ್ತಾರೆ.

ಮಾತನಾಡುವವನು ಎಲ್ಲವನ್ನು ಯಾವಾಗಲೂ ನೇರವಾಗಿ ಹೇಳುವುದಿಲ್ಲ ಅವನು ಹೇಳುವ ವಿಷಯದ ಒಳಾರ್ಥವನ್ನು ಅವರು ತಿಳಿಯಬೇಕು ಎಂದು ಭಾವಿಸುತ್ತಾನೆ. ಅವನು ನೇರವಾಗಿ ವಿಷಯವನ್ನು ಹೇಳದಿದ್ದರೂ ತಾನು ಹೇಳಿರುವ ವಿಚಾರಗಳಿಂದ ತಿಳಿದುಕೊಳ್ಳಬೇಕಾದ ಮಾಹಿತಿಗಳನ್ನು ಅವರು ತಿಳಿದುಕೊಳ್ಳಬೇಕೆಂದು ನಿರೀಕ್ಷಿಸುತ್ತಾನೆ, ಇದೇ ಸೂಚ್ಯ ಮಾಹಿತಿ ಆಗಿದೆ.

ಸಾಮಾನ್ಯವಾಗಿ ಶ್ರೋತೃಗಳು ಈ ಸೂಚ್ಯ ಮಾಹಿತಿಯನ್ನು ಅವರು ಈಗಾಗಲೇ ತಿಳಿದುಕೊಂಡಿರುವ ಮತ್ತು ಮಾತನಾಡುವವನು ನೇರವಾಗಿ ಹೇಳಿರುವಂಥ (ಕಲ್ಪಿತ ಜ್ಞಾನ) ಸ್ಪಷ್ಟವಾದ ಮಾಹಿತಿ ಜೊತೆಗೆ ಸೇರಿಸಿ ಅರ್ಥಮಾಡಿಕೊಳ್ಳುತ್ತಾರೆ.

ಕಾರಣವೇನಂದರೆ ಇದು ಭಾಷಾಂತರದ ಸಮಸ್ಯೆಯಾಗಿದೆ

ಈ ಎಲ್ಲಾ ಮೂರು ಮಾಹಿತಿಗಳು ಮಾತನಾಡುವವನ ಸಂದೇಶಗಳ ಭಾಗವಾಗಿದೆ. ಈ ಮೂರರಲ್ಲಿ ಒಂದು ತಪ್ಪಿದರೂ ಶ್ರೋತೃಗಳು ಮಾತನಾಡುವವನ ಸಂದೇಶದ ಉದ್ದೇಶವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಏಕೆಂದರೆ ಸತ್ಯವೇದವನ್ನು ಭಾಷಾಂತರಿಸುತ್ತಿರುವ ಭಾಷೆಯು ಸತ್ಯವೇದದ ಉದ್ದೀಷ್ಟ ಭಾಷೆಗಿಂತ ಭಿನ್ನವಾಗಿರುತ್ತದೆ ಮತ್ತು ಸದರಿ ಶ್ರೋತೃಗಳು ಸತ್ಯವೇದದ ಕಾಲಕ್ಕಿಂತ ವಿಭಿನ್ನವಾದ ಸಮಯ ಮತ್ತು ಬೇರೆ ಸ್ಥಳದಲ್ಲಿ ವಾಸಿಸುತ್ತಿರುವುದರಿಂದ ಇದು ಸಾಧ್ಯವಾಗುವುದಿಲ್ಲ ಅನೇಕಸಲ ಕಲ್ಪಿತ ಜ್ಞಾನ ಅಥವಾ ಸೂಚ್ಯ ಮಾಹಿತಿ ಸಂದೇಶದಿಂದ ಮರೆಯಾಗುವ ಸಾಧ್ಯತೆ ಇರುತ್ತದೆ. ಸತ್ಯವೇದ ಕಾಲದ ಮೂಲ ಲೇಖಕರು, ಶ್ರೋತೃಗಳು ತಿಳಿದಿರುವಂತೆ ಆಧುನಿಕ ಕಾಲದ ಓದುಗರಿಗೆ, ಶ್ರೋತೃಗಳಿಗೆ ಎಲ್ಲವೂ ತಿಳಿದಿರುವುದಿಲ್ಲ. ಸಂದೇಶವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಈ ಸಂಗತಿಗಳನ್ನು ನೀವು ವಾಕ್ಯಗಳ ಭಾಗದಲ್ಲಿ ಅಥವಾ ಅಡಿಟಿಪ್ಪಣಿಯಲ್ಲಿ ಸೇರಿಸಬಹುದು.

ಸತ್ಯವೇದದಲ್ಲಿನ ಉದಾಹರಣೆಗಳು

ಆಗ ಒಬ್ಬ ಶಾಸ್ತ್ರಿಯು ಆತನ ಬಳಿಗೆ ಬಂದು, "ಗುರುವೇ, ನೀನು ಎಲ್ಲಿಗೆ ಹೋದರೂ ನಾನು ನಿನ್ನ ಹಿಂಬಾಲಿಸುತ್ತೇನೆ" ಎಂದು ಹೇಳಿದನು. ಯೇಸು ಅವನಿಗೆ "ನರಿಗಳಿಗೆ ಗುದ್ದುಗಳಿವೆ, ಆಕಾಶದಲ್ಲಿ ಹಾರಾಡುವ ಹಕ್ಕಿಗಳಿವೆ ಗೂಡುಗಳಿವೆ, ಆದರೆ ಮನುಷ್ಯಕುಮಾರನಿಗೆ ತಲೆ ಇಡುವಷ್ಟು ಸ್ಥಳವೂ ಇಲ್ಲ" ಎಂದು ಹೇಳಿದನು. (ಮತ್ತಾಯ 8:20 ULT)

ಯೇಸು ನರಿಗಳು ಮತ್ತು ಪಕ್ಷಿಗಳು ಗುದ್ದುಗಳನ್ನು, ಗೂಡುಗಳನ್ನು ಏಕೆ ಉಪಯೋಗಿಸುತ್ತವೆ ಎಂಬುದನ್ನು ಹೇಳಲಿಲ್ಲ, ಏಕೆಂದರೆ ನರಿಗಳು ಗವಿ ಗುದ್ದುಗಳಲ್ಲಿ ಪಕ್ಷಿಗಳು ಗೂಡುಗಳಲ್ಲಿ ವಾಸಿಸುತ್ತವೆ ಎಂದು ಆ ಶಾಸ್ತ್ರಿಗೆ ತಿಳಿದಿದೆ ಎಂದು ಆತನು ಕಲ್ಪಿಸಿಕೊಂಡನು. ಇದು ಕಲ್ಪಿತ ಜ್ಞಾನ ಅಗಿದೆ.

ಯೇಸು ಇಲ್ಲಿ "ನಾನೇ ಮನುಷ್ಯಕುಮಾರನು" ಎಂದು ನೇರವಾಗಿ ಹೇಳಲಿಲ್ಲ, ಆದರೆ ಆ ಶಾಸ್ತ್ರಿಗೆ ಇದು ತಿಳಿಯದೇ ಇದ್ದರೆ, ಆಗ ಈ ವಿಷಯವು ಯೇಸು ತನ್ನ ಕುರಿತಾಗಿ ಈ ರೀತಿಯಾಗಿ ಸೂಚಿಸಿದನು ಎಂದು ಅವನು ಕಲಿತುಕೊಳ್ಳಬಹುದಾದ ಸೂಚ್ಯ ಮಾಹಿತಿ ಆಗುವುದು. ಇದಲ್ಲದೆ ಯೇಸು ಇಲ್ಲಿ ಪ್ರಯಾಣ ಮಾಡಿದ ಕಡೆಗಳಲ್ಲೆಲ್ಲಾ ರಾತ್ರಿಯಲ್ಲಿ ಮಲಗಲು ತನಗಾಗಿ ಮನೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಲಿಲ್ಲ. ಇದು ತಲೆ ಇಡುವಷ್ಟು ಸ್ಥಳವೂ ಇಲ್ಲ ಎಂದು ಯೇಸು ಹೇಳಿದಾಗ ಆ ಶಾಸ್ತ್ರೀಯು ಕಲಿತುಕೊಳ್ಳಬಹುದಾದಂಥ ಸೂಚ್ಯ ಮಾಹಿತಿ ಆಗಿದೆ.

ಅಯ್ಯೋ ಖೊರಾಜಿನೇ! ಅಯ್ಯೋ ಬೇತ್ಸಾಯಿದವೇ! ನಿನ್ನಲ್ಲಿ ನಡೆದ ಮಹತ್ಕಾರ್ಯಗಳು ತೂರ್ ಮತ್ತು ಸಿದೋನ್ ಪಟ್ಟಣಗಳಲ್ಲಿ ನಡೆದಿದ್ದರೆ ಅಲ್ಲಿಯವರು ಆಗಲೆ ಗೋಣಿತಟ್ಟು ಹೊದ್ದುಕೊಂಡು ಬೂದಿಯಲ್ಲಿ ಕುಳಿತುಕೊಂಡು ದೇವರ ಕಡೆಗೆ ತಿರುಗಿಕೊಳ್ಳುತ್ತಿದ್ದರು. ಆದರೆ ನ್ಯಾಯ ವಿಚಾರಣೆಯ ದಿನದಲ್ಲಿ ನಿಮ್ಮ ಗತಿಗಿಂತಲೂ ತೂರ್, ಸಿದೋನ್ ಪಟ್ಟಣಗಳ ಗತಿಯು ಮೇಲಾಗಿರುವುದು ಎಂದು ನಿಮಗೆ ಹೇಳುತ್ತೇನೆ. (ಮತ್ತಾಯ 11:21, 22 ULT)

ತಾನು ಮಾತನಾಡುತ್ತಿರುವ ಜನರಿಗೆ ತೂರ್ ಮತ್ತು ಸಿದೋನ್ ಪಟ್ಟಣಗಳು ತುಂಬಾ ದುಷ್ಟ ಪಟ್ಟಣಗಳಾಗಿದ್ದವು ಮತ್ತು ನ್ಯಾಯವಿಚಾರಣೆಯ ದಿನ ಎಂದರೆ ಎಲ್ಲಾ ಜನರಿಗೆ ನ್ಯಾಯತೀರ್ಪು ಮಾಡುವ ಸಮಯ ಎಂದು ಆ ಜನರಿಗೆ ತಿಳಿದಿದೆ ಎಂದು ಯೇಸು ಭಾವಿಸಿದ್ದನು. ಯೇಸುವಿಗೆ ತಾನು ಯಾರೊಂದಿಗೆ ಮಾತನಾಡುತ್ತಿದ್ದೇನೋ ಆ ಜನರು ಒಳ್ಳೆಯವರು ಮತ್ತು ಪಶ್ಚಾತ್ತಾಪ ಪಡುವ ಅವಶ್ಯಕತೆ ಇಲ್ಲ ಎಂದು ನಂಬುವವರಾಗಿದ್ದರು ಎಂದು ತಿಳಿದಿತ್ತು. ಯೇಸು ಈ ವಿಷಯಗಳನ್ನು ಅವರಿಗೆ ಹೇಳುವ ಅವಶ್ಯಕತೆ ಇರಲ್ಲಿಲ್ಲ. ಇದೆಲ್ಲವೂ ಕಲ್ಪಿತ ಜ್ಞಾನ ಆಗಿದೆ.

ಸೂಚ್ಯ ಮಾಹಿತಿ ಯ ಬಹು ಮುಖ್ಯವಾದ ಅಂಶವೆಂದರೆ, ಆತನು ಮಾತನಾಡುತ್ತಿರುವ ಜನರು ಪಶ್ಚಾತ್ತಾಪ ಪಡದಿದ್ದರೆ ನ್ಯಾಯ ವಿಚಾರಣೆಯ ಸಂದರ್ಭದಲ್ಲಿ ತೂರ್ ಮತ್ತು ಸಿದೋನ್ ಪಟ್ಟಣದ ಜನರಿಗಿಂತ ಬಹು ಘೋರವಾದ ನ್ಯಾಯ ತೀರ್ಪು ಆಗುತ್ತದೆ ಎಂಬುದು.

ನಿನ್ನ ಶಿಷ್ಯರು ಹಿರಿಯರ ಸಂಪ್ರದಾಯವನ್ನು ಏಕೆ ಉಲ್ಲಂಘಿಸುತ್ತಾರೆ? ಅವರು ಊಟ ಮಾಡುವಾಗ ಅವರು ತಮ್ಮ ಕೈ ತೊಳೆದುಕೊಳ್ಳುವುದಿಲ್ಲ. (ಮತ್ತಾಯ 15:2 ULT)

ಹಿರಿಯರಿಂದ ಬಂದ ಸಂಪ್ರದಾಯಗಳ ಪೈಕಿ ಒಂದು ಜನರು ತಾವು ಧಾರ್ಮಿಕ ಸಂಸ್ಕಾರದ ರೀತಿಯಲ್ಲಿ ಸ್ವಚ್ಛವಾಗಿರುವುದಕ್ಕಾಗಿ ಊಟಮಾಡುವ ಮೊದಲು ತಮ್ಮ ಕೈಗಳನ್ನು ತೊಳೆದುಕೊಳ್ಳುತ್ತಿದ್ದರು. ನೀತಿವಂತರಾಗಿರುವುದಕ್ಕಾಗಿ ಹಿರಿಯರ ಸಂಪ್ರದಾಯವನ್ನು ಪಾಲಿಸಬೇಕು ಎಂದು ಜನರು ಅಂದುಕೊಂಡಿದ್ದರು. ಇದು ಕಲ್ಪಿತ ಜ್ಞಾನ ಆಗಿದೆ, ಯೇಸುವಿನೊಂದಿಗೆ ಮಾತನಾಡುತ್ತಿದ್ದ ಫರಿಸಾಯರು ಈ ವಿಷಯದ ಬಗ್ಗೆ ಆತನು ತಿಳಿದುಕೊಳ್ಳಬೇಕೆಂದು ಬಯಸಿದರು. ಇದನ್ನು ಹೇಳುವ ಮೂಲಕ ಆತನ ಶಿಷ್ಯರು ಸಂಪ್ರದಾಯವನ್ನು ಪಾಲಿಸುತ್ತಿಲ್ಲ ಆದ್ದರಿಂದ ನೀತಿವಂತರಾಗಿಲ್ಲ ಎಂದು ಅವರು ಆರೋಪಿಸುತ್ತಿದ್ದರು. ಇದು ಅವರು ಹೇಳುತ್ತಿರುವುದನ್ನು ಆತನು ಅರ್ಥಮಾಡಿಕೊಳ್ಳಬೇಕೆಂದು ಬಯಸಿದ್ದಂಥ ಸೂಚ್ಯ ಮಾಹಿತಿ ಅಗಿದೆ.

ಭಾಷಾಂತರದ ಕಾರ್ಯತಂತ್ರಗಳು

ಓದುಗರಿಗೆ ಸ್ಪಷ್ಟವಾದ ಮಾಹಿತಿಯೊಂದಿಗೆ ಬರುವಂಥ ಮುಖ್ಯ ಸೂಚ್ಯ ಮಾಹಿತಿಯ ಮೂಲಕ ಸಂದೇಶವನ್ನು ಅರ್ಥಮಾಡಿಕೊಳ್ಳುವಷ್ಟು ಕಲ್ಪಿತ ಜ್ಞಾನ ಇರುವುದಾದರೆ, ಆಗ ಜ್ಞಾನವನ್ನು ವಿವರಿಸದೆ ಹಾಗೆಯೇ ಉಳಿಸಿಕೊಳ್ಳಬಹುದು ಮತ್ತು ಸೂಚ್ಯ ಮಾಹಿತಿಯನ್ನು ಸೂಚ್ಯವಾಗಿಯೇ ಉಳಿಸಿಕೊಳ್ಳಬಹುದು. ಇವುಗಳಲ್ಲಿ ಒಂದು ಇಲ್ಲದಿರುವುದ್ದರಿಂದ ಓದುಗರಿಗೆ ಈ ಸಂದೇಶವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ಆಗ ಈ ಕೆಳಗಿರುವ ಕಾರ್ಯತಂತ್ರಗಳನ್ನು ಬಳಸಿರಿ:

  1. ಓದುಗರಿಗೆ ಕಲ್ಪಿತ ಜ್ಞಾನವಿಲ್ಲದ ಕಾರಣ ಸಂದೇಶವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ಆಗ ಸ್ಪಷ್ಟವಾದ ಮಾಹಿತಿಯನ್ನು ಒದಗಿಸಿಕೊಡಬಹುದು.
  2. ಓದುಗರಿಗೆ ಸೂಚ್ಯ ಮಾಹಿತಿಯಿಲ್ಲದ ಕಾರಣ ಸಂದೇಶವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ಆಗ ಸ್ಪಷ್ಟವಾದ ಮಾಹಿತಿ ನೀಡಿ ಅರ್ಥವಾಗುವಂತೆ ಮಾಡಬೇಕು. ಆದರೆ ಮೂಲ ಓದುಗರಿಗೆ ಈ ಮಾಹಿತಿಯು ಹೊಸದಾಗಿತ್ತು ಎಂಬ ಅರ್ಥವನ್ನು ಕೊಡದಂತೆ ಪ್ರಯತ್ನಿಸಬೇಕು.

ಭಾಷಾಂತರದ ಕಾರ್ಯತಂತ್ರಗಳನ್ನು ಅನ್ವಯಿಸಲಾಗಿರುವ ಉದಾಹರಣೆಗಳು

(1) ಓದುಗರಿಗೆ ಕಲ್ಪಿತ ಜ್ಞಾನವಿಲ್ಲದ ಕಾರಣ ಸಂದೇಶವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ಆಗ ಸ್ಪಷ್ಟವಾದ ಮಾಹಿತಿಯನ್ನು ಒದಗಿಸಿಕೊಡಬಹುದು.

ಯೇಸು ಅವರಿಗೆ, "ನರಿಗಳಿಗೆ ಗುದ್ದುಗಳಿವೆ, ಮತ್ತು ಆಕಾಶದಲ್ಲಿ ಹಾರಾಡುವ ಹಕ್ಕಿಗಳಿಗೆ ಗೂಡುಗಳಿವೆ, ಆದರೆ ಮನುಷ್ಯಕುಮಾರನಿಗೆ ತಲೆ ಇಡುವಷ್ಟು ಸ್ಥಳವೂ ಇಲ್ಲ" ಎಂದು ಹೇಳಿದನು. (ಮತ್ತಾಯ 8:20 ULT) ನರಿಗಳು ಗುದ್ದುಗಳಲ್ಲಿ ಮಲಗುತ್ತವೆ, ಮತ್ತು ಪಕ್ಷಿಗಳು ಗೂಡುಗಳಲ್ಲಿ ಮಲಗುತ್ತವೆ ಎಂಬುದು ಕಲ್ಪಿತ ಜ್ಞಾನವಾಗಿದೆ.

ಯೇಸು ಅವರಿಗೆ, "ನರಿಗಳಿಗೆ ವಾಸಿಸುವುದಕ್ಕೆ ಗುದ್ದುಗಳಿವೆ, ಮತ್ತು ಆಕಾಶದಲ್ಲಿ ಹಾರಾಡುವ ಪಕ್ಷಿಗಳಿಗೆ ವಾಸಿಸುವುದಕ್ಕೆ ಗೂಡುಗಳಿವೆ, ಆದರೆ ಮನುಷ್ಯಕುಮಾರನಿಗೆ ತಲೆ ಇಟ್ಟು ನಿದ್ರಿಸಲು ಸ್ಥಳವಿಲ್ಲ" ಎಂದು ಹೇಳಿದನು.

ನ್ಯಾಯ ವಿಚಾರಣೆಯ ದಿನದಲ್ಲಿ ನಿಮ್ಮ ಗತಿಗಿಂತಲೂ ತೂರ್, ಸಿದೋನ್ ಪಟ್ಟಣಗಳ ಗತಿಯು ಮೇಲಾಗಿರುವುದು (ಮತ್ತಾಯ 11:22 ULT) - ತೂರ್ ಮತ್ತು ಸಿದೋನ್ ಜನರು ತುಂಬಾ ತುಂಬಾ ದುಷ್ಟರಾಗಿದ್ದಾರೆ ಎಂಬುದು ಕಲ್ಪಿತ ಜ್ಞಾನವಾಗಿದೆ. ಇದನ್ನು ಸ್ಪಷ್ಟವಾಗಿ ಹೇಳಬಹುದು.

… ನ್ಯಾಯ ವಿಚಾರಣೆಯ ದಿನದಲ್ಲಿ ನಿಮ್ಮ ಗತಿಗಿಂತಲೂ ತುಂಬಾ ದುಷ್ಟರಾಗಿದ್ದ ತೂರ್ ಮತ್ತು ಸಿದೋನ್ ಪಟ್ಟಣಗಳ ಜನರ, ಗತಿಯು ಮೇಲಾಗಿರುವುದು.
ಅಥವಾ:
…ನ್ಯಾಯ ವಿಚಾರಣೆಯ ದಿನದಲ್ಲಿ ನಿಮ್ಮ ಗತಿಗಿಂತಲೂ ದುಷ್ಟ ಪಟ್ಟಣಗಳಾದ ತೂರ್ ಮತ್ತು ಸಿದೋನ್, ಗತಿಯು ಮೇಲಾಗಿರುವುದು.

ನಿನ್ನ ಶಿಷ್ಯರು ಹಿರಿಯರ ಸಂಪ್ರದಾಯವನ್ನು ಏಕೆ ಉಲ್ಲಂಘಿಸುತ್ತಾರೆ? ಏಕೆಂದರೆ ಅವರು ಊಟ ಮಾಡುವಾಗ ಅವರು ತಮ್ಮ ಕೈ ತೊಳೆದುಕೊಳ್ಳುವುದಿಲ್ಲ. (ಮತ್ತಾಯ 15:2 ULT) ಇದರಲ್ಲಿ ಕಲ್ಪಿತ ಜ್ಞಾನವೆಂದರೆ ಹಿರಿಯರಿಂದ ಬಂದ ಸಂಪ್ರದಾಯಗಳ ಪೈಕಿ ಒಂದು ಜನರು ತಾವು ಧಾರ್ಮಿಕ ಸಂಸ್ಕಾರದ ರೀತಿಯಲ್ಲಿ ಸ್ವಚ್ಛವಾಗಿರುವುದಕ್ಕಾಗಿ ಊಟಮಾಡುವ ಮೊದಲು ತಮ್ಮ ಕೈಗಳನ್ನು ತೊಳೆದುಕೊಳ್ಳುತ್ತಿದ್ದರು. ನೀತಿವಂತರಾಗಿರುವುದಕ್ಕಾಗಿ ಹಿರಿಯರ ಸಂಪ್ರದಾಯವನ್ನು ಮಾಡಬೇಕಾಗಿತ್ತು. ಆಧುನಿಕ ಕಾಲದ ಓದುಗರು ತಿಳಿದಂತೆ ಊಟಮಾಡುವ ಮೊದಲು ಕೈ ತೊಳೆಯುವುದರಿಂದ ಕೈಗಳಲ್ಲಿರುವ ಕ್ರಿಮಿ, ಬ್ಯಾಕ್ಟೀರಿಯಾಗಳಿಂದ ಮುಕ್ತವಾಗುವುದಕ್ಕಾಗಿ ಅಲ್ಲ.

ನಿನ್ನ ಶಿಷ್ಯರು ಹಿರಿಯರ ಸಂಪ್ರದಾಯವನ್ನು ಏಕೆ ಉಲ್ಲಂಘಿಸುತ್ತಾರೆ? ಏಕೆಂದರೆ ಅವರು ಊಟಮಾಡುವಾಗ ಅವರು ನೀತಿಯ ಕರ್ಮಾಚರಣೆಯ ಪ್ರಕಾರ ವಿಧ್ಯುಕ್ತವಾದ ರೀತಿಯಲ್ಲಿ ಅನುಸರಿಸುವುದಿಲ್ಲ.

(2) ಓದುಗರಿಗೆ ಸೂಚ್ಯ ಮಾಹಿತಿಯಿಲ್ಲದ ಕಾರಣ ಸಂದೇಶವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ಆಗ ಸ್ಪಷ್ಟವಾದ ಮಾಹಿತಿ ನೀಡಿ ಅರ್ಥವಾಗುವಂತೆ ಮಾಡಬೇಕು. ಆದರೆ ಮೂಲ ಓದುಗರಿಗೆ ಈ ಮಾಹಿತಿಯು ಹೊಸದಾಗಿತ್ತು ಎಂಬ ಅರ್ಥವನ್ನು ಕೊಡದಂತೆ ಪ್ರಯತ್ನಿಸಬೇಕು.

ಆಗ ಒಬ್ಬ ಶಾಸ್ತ್ರಿಯು ಆತನ ಬಳಿಗೆ ಬಂದು, "ಗುರುವೇ, ನೀನು ಎಲ್ಲಿಗೆ ಹೋದರೂ ನಾನು ನಿನ್ನ ಹಿಂಬಾಲಿಸುತ್ತೇನೆ" ಎಂದು ಹೇಳಿದನು. ಯೇಸು ಅವನಿಗೆ "ನರಿಗಳಿಗೆ ಗುದ್ದುಗಳಿವೆ, ಆಕಾಶದಲ್ಲಿ ಹಾರಾಡುವ ಹಕ್ಕಿಗಳಿವೆ ಗೂಡುಗಳಿವೆ, ಆದರೆ ಮನುಷ್ಯಕುಮಾರನಿಗೆ ತಲೆ ಇಡುವಷ್ಟು ಸ್ಥಳವೂ ಇಲ್ಲ" ಎಂದು ಹೇಳಿದನು. (ಮತ್ತಾಯ 8:20 ULT) ಇಲ್ಲಿ ಯೇಸು ಮನುಷ್ಯಕುಮಾರನಾಗಿದ್ದಾನೆ ಎಂಬುದು ಸೂಚ್ಯ ಮಾಹಿತಿಯಾಗಿದೆ. ಆ ಶಾಸ್ತ್ರಿಯು ಯೇಸುವನ್ನು ಹಿಂಬಾಲಿಸಲು ಬಯಸಿದರೆ ಅವನು ಯೇಸುವಿನಂತೆ ಮನೆ ಇಲ್ಲದೆ ಜೀವಿಸಬೇಕು ಎಂಬುದು ಇನ್ನೊಂದು ಸೂಚ್ಯ ಮಾಹಿತಿಯಾಗಿದೆ.

ಯೇಸು ಅವನಿಗೆ, "ನರಿಗಳಿಗೆ ಗುದ್ದುಗಳಿವೆ ಮತ್ತು ಆಕಾಶದಲ್ಲಿ ಹಾರಾಡುವ ಪಕ್ಷಿಗಳಿಗೆ ಗೂಡುಗಳಿವೆ ಮತ್ತು ಮನುಷ್ಯಕುಮಾರನಾದ ನನಗೆ, ವಿಶ್ರಾಂತಿ ಪಡೆಯಲು ಮನೆ ಇಲ್ಲ. ನೀನು ನನ್ನನ್ನು ಹಿಂಬಾಲಿಸಿ ಬಯಸುವುದಾದರೆ ನನ್ನಂತೆಯೇ ನೀನು ಜೀವಿಸಬೇಕು" ಎಂದು ಹೇಳಿದನು.

ನ್ಯಾಯ ವಿಚಾರಣೆಯ ದಿನದಲ್ಲಿ ನಿಮ್ಮ ಗತಿಗಿಂತಲೂ ತೂರ್, ಸಿದೋನ್ ಪಟ್ಟಣಗಳ ಗತಿಯು ಮೇಲಾಗಿರುವುದು (ಮತ್ತಾಯ 11:22 ULT) ದೇವರು ಜನರಿಗೆ ನ್ಯಾಯತೀರ್ಪು ಮಾಡುವುದು ಮಾತ್ರವಲ್ಲ ಆತನು ಅವರನ್ನು ಶಿಕ್ಷಿಸುತ್ತಾನೆ ಎಂಬುದು ಸೂಚ್ಯ ಮಾಹಿತಿ. ಇದನ್ನು ಸ್ಪಷ್ಟಪಡಿಸಿ ಹೇಳಬಹುದು.

ನ್ಯಾಯ ವಿಚಾರಣೆಯ ದಿನದಂದು ದೇವರು ತುಂಬಾ ದುಷ್ಟರಾಗಿರುವ ತೂರ್ ಮತ್ತು ಸಿದೋನ್ ಪಟ್ಟಣದ ಜನರನ್ನು ಶಿಕ್ಷಿಸುವನು, ಆದರೆ ನಿಮ್ಮನ್ನು ಶಿಕ್ಷಿಸುವುದಕ್ಕಿಂತ ಅತಿ ಕಡಿಮೆಯಾಗಿ ಶಿಕ್ಷಿಸುವನು.
ಅಥವಾ:
ನ್ಯಾಯ ವಿಚಾರಣೆಯ ದಿನದಲ್ಲಿ ದುಷ್ಟರಾದ ತೂರ್ ಮತ್ತು ಸಿದೋನ್ ಪಟ್ಟಣದ ಜನರಿಗಿಂತ ನಿಮ್ಮನ್ನು ದೇವರು ಬಹು ಘೋರವಾಗಿ ಶಿಕ್ಷಿಸುವನು.

ಆಧುನಿಕ ಕಾಲದ ಜನರಿಗೆ ಸತ್ಯವೇದ ಕಾಲದ ಜನರಿಗೆ ಮತ್ತು ಮೊದಲ ಓದುಗರಿಗೆ ಗೊತ್ತಿರುವ ವಿಷಯಗಳು ತಿಳಿಯದೆ ಇರಬಹುದು. ಇದು ಮಾತನಾಡುವವನು ಅಥವಾ ಬರಹಗಾರನು ಹೇಳುವಂಥದ್ದನ್ನು ಅರ್ಥಮಾಡಿಕೊಳ್ಳಲು ಮತ್ತು ಸೂಚ್ಯ ಮಾಹಿತಿಗಳನ್ನು ತಿಳಿದುಕೊಳ್ಳಲು ಕಷ್ಟವಾಗಬಹುದು. ಭಾಷಾಂತರಗಾರರು ಭಾಷಾಂತರ ಮಾಡುವಾಗ ಮೂಲ ಲೇಖಕನು ಅಥವಾ ಮಾತನಾಡುವವನು ಸೂಚ್ಯವಾಗಿ ಇಟ್ಟಿರುವ ಕೆಲವು ವಿಷಯಗಳನ್ನು ಸ್ಪಷ್ಟವಾಗಿ ತಿಳಿಸಬೇಕು.