translationCore-Create-BCS_.../tq_MRK.tsv

316 lines
120 KiB
Plaintext

Reference ID Tags Quote Occurrence Question Response
1:2-3 a4zc ಕರ್ತನು ಬರುವ ಮೊದಲು ಏನು ಆಗುವುದೆಂದು ಪ್ರವಾದಿಯಾದ ಯೆಶಾಯನು ಮುನ್ನುಡಿದಿದ್ದನು? ದೇವರು ಒಬ್ಬ ದೇವದೂತನನ್ನು ಕಳುಹಿಸುವನು, ಕರ್ತನಿಗೆ ದಾರಿಯನ್ನು ಸಿದ್ದಮಾಡಿರಿ ಎಂದು ಅಡವಿಯಲ್ಲಿ ಕೂಗುವವನ ಶಬ್ದವಿದೆ ಎಂದು ಮುನ್ನುಡಿದದ್ದನು.
1:4 g2v6 ಯೋಹಾನನು ಏನನ್ನು ಸಾರುತ್ತಾ ಬಂದನು? ಯೋಹಾನನು ಪಾಪಗಳ ಕ್ಷಮಾಪಣೆಗಾಗಿ ಪಶ್ಛಾತ್ತಾಪದ ದೀಕ್ಷಾಸ್ನಾನದ ಬಗ್ಗೆ ಸಾರುತ್ತಾ ಬಂದನು.
1:5 kdd7 ಜನರು ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಿರುವಾಗ ಅವರು ಏನು ಮಾಡುತ್ತಿದ್ದರು? ಜನರು ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಿರುವಾಗ ಅವರು ತಮ್ಮ ತಮ್ಮ ಪಾಪಗಳನ್ನು ಅರಿಕೆ ಮಾಡಿದರು
1:6 zlqi ಯೋಹಾನನು ಏನನ್ನು ತಿನ್ನುತ್ತಿದ್ದನು? ಯೋಹಾನನು ಮಿಡತೆಗಳನ್ನು ಮತ್ತು ಕಾಡು ಜೇನನ್ನು ತಿನ್ನುತ್ತಿದ್ದನು.
1:8 yakl ಅವನ ನಂತರ ಬರುವವನು ಯಾವುದರಿಂದ ದೀಕ್ಷಾಸ್ನಾನ ಮಾಡಿಸುವನೆಂದು ಯೋಹಾನನು ಹೇಳಿದನು? ಅವನ ನಂತರ ಬರುವವನು ಪವಿತ್ರ ಆತ್ಮದಿಂದ ದೀಕ್ಷಾಸ್ನಾನ ಮಾಡಿಸುವನೆಂದು ಯೋಹಾನನು ಹೇಳಿದನು.
1:10 y6fa ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಂಡ ನಂತರ ನೀರಿನಿಂದ ಮೇಲೆ ಬಂದಾಗ ಯೇಸು ಏನನ್ನು ನೋಡಿದನು? ದೀಕ್ಷಾಸ್ನಾನ ಮಾಡಿಸಿಕೊಂಡ ನಂತರ, ಆಕಾಶವು ತೆರೆದು ಆತ್ಮವು ಪಾರಿವಾಳದ ರೂಪದಲ್ಲಿ ಆತನ ಮೇಲೆ ಇಳಿದು ಬರುವುದನ್ನು ಯೇಸು ನೋಡಿದನು.
1:11 f2a4 ಯೇಸು ದೀಕ್ಷಾಸ್ನಾನ ಮಾಡಿಸಿಕೊಂಡ ನಂತರ ಪರಲೋಕದಿಂದ ಬಂದಂತ ಸ್ವರವು ಏನು ಹೇಳಿತು? ಪರಲೋಕದಿಂದ ಬಂದಂತ ಸ್ವರವು, “ನೀನು ನನ್ನ ಪ್ರಿಯನಾಗಿರುವ ಮಗನು; ನಾನು ನಿನ್ನನ್ನು ಬಹಳವಾಗಿ ಮೆಚ್ಚಿದ್ದೇನೆ” ಎಂದು ಹೇಳಿತು.
1:12 ahm3 ಯೇಸುವನ್ನು ಯಾರು ಅರಣ್ಯಕ್ಕೆ ಕರೆದುಕೊಂಡು ಹೋದರು? ಆತ್ಮನು ಯೇಸುವನ್ನು ಅರಣ್ಯಕ್ಕೆ ಕರೆದುಕೊಂಡು ಹೋದನು.
1:13 ex5p ಯೇಸು ಎಷ್ಟು ಕಾಲ ಅರಣ್ಯದಲ್ಲಿದ್ದನು, ಮತ್ತು ಅಲ್ಲಿ ಆತನಿಗೆ ಏನು ಆಯಿತು? ಯೇಸು ಅರಣ್ಯದಲ್ಲಿ 40 ದಿನಗಳು ಇದ್ದನು, ಮತ್ತು ಅಲ್ಲಿ ಸೈತಾನನಿಂದ ಶೋಧಿಸಲ್ಪಟ್ಟನು.
1:15 kyxp ಯೇಸು ಏನನ್ನು ಸಾರಿದನು? ದೇವರ ರಾಜ್ಯವು ಹತ್ತಿರವಾಗಿದೆ, ಜನರು ಪಶ್ಚಾತ್ತಾಪಪಟ್ಟು ಸುವಾರ್ತೆಯನ್ನು ನಂಬಿರಿ ಎಂದು ಯೇಸು ಸಾರಿದನು.
1:16 yzo9 ಸೀಮೋನ ಮತ್ತು ಅಂದ್ರೆಯನ ಕೆಲಸ ಏನಾಗಿತ್ತು? ಸೀಮೋನನು ಮತ್ತು ಅಂದ್ರೆಯನು ಬೆಸ್ತರಾಗಿದ್ದರು.
1:17 r3ba ಸೀಮೋನನನ್ನು ಮತ್ತು ಆಂದ್ರೆಯನನ್ನು ಏನಾಗಿ ಮಾಡುವೆನೆಂದು ಯೇಸು ಹೇಳಿದನು? ಸೀಮೋನನನ್ನು ಮತ್ತು ಆಂದ್ರೆಯನನ್ನು ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ಮಾಡುವೆನೆಂದು ಯೇಸು ಹೇಳಿದನು.
1:19 foqj ಯಾಕೋಬ ಮತ್ತು ಯೋಹಾನನ ಕೆಲಸ ಏನಾಗಿತ್ತು? ಯಾಕೋಬ ಮತ್ತು ಯೋಹಾನನು ಬೆಸ್ತರಾಗಿದ್ದರು.
1:22 lq6y ಯೇಸುವಿನ ಬೋಧನೆಯು ಸಭಾಮಂದಿರದಲ್ಲಿ ಯಾಕೆ ಜನರನ್ನು ಬೆರಗುಗೊಳಿಸಿತು? ಯೇಸುವಿನ ಬೋಧನೆಯು ಜನರನ್ನು ಬೆರಗುಗೊಳಿಸಿತು ಯಾಕೆಂದರೆ ಯೇಸು ಅಧಿಕಾರದಿಂದ ಬೋಧಿಸಿದನು.
1:24 rtx4 ಸಭಾಮಂದಿರದಲ್ಲಿದ್ದ ಅಶುದ್ದ ಆತ್ಮವು ಯೇಸುವಿಗೆ ಯಾವ ಬಿರುದನ್ನು ಕೊಟ್ಟಿತು? ಸಭಾಮಂದಿರದಲ್ಲಿದ್ದ ಅಶುದ್ದ ಆತ್ಮವು ಯೇಸುವಿಗೆ ದೇವರಿಂದ ಬಂದ ಪರಿಶುದ್ಧನು ಎಂಬ ಬಿರುದನ್ನು ಕೊಟ್ಟಿತು.
1:28 dn9o ಯೇಸುವಿನ ಕುರಿತಾದ ಸುದ್ದಿಯು ಏನಾಯಿತು? ಯೇಸುವಿನ ಕುರಿತಾದ ಸುದ್ದಿಯು ಎಲ್ಲೆಡೆಯೂ ಹಬ್ಬಿಹರಡಿತು.
1:30 ii0v ಅವರು ಸೀಮೋನನ ಮನೆಗೆ ಹೋದಾಗ, ಯೇಸು ಯಾರನ್ನು ಸ್ವಸ್ಥ ಮಾಡಿದನು? ಅವರು ಸೀಮೋನನ ಮನೆಗೆ ಹೋದಾಗ, ಯೇಸು ಸೀಮೋನನ ಅತ್ತೆಯನ್ನು ಸ್ವಸ್ಥಮಾಡಿದನು.
1:32-34 ywmc ಸಂಜೆಯಾದಾಗ ಏನಾಯಿತು? ಸಂಜೆಯಾದಾಗ, ಅಸ್ವಸ್ಥರಾದ ಎಲ್ಲರನ್ನೂ ಅಥವಾ ದೆವ್ವಗಳಿಂದ ಪೀಡಿತರಾದವರನ್ನು ಜನರು ಕರೆದುಕೊಂಡು ಬಂದರು, ಯೇಸು ಅವರನ್ನು ಸ್ವಸ್ಥ ಮಾಡಿದನು.
1:35 i2xa ಸೂರ್ಯ ಹುಟ್ಟುವುದಕ್ಕೆ ಮೊದಲು ಯೇಸು ಏನು ಮಾಡಿದನು? ಸೂರ್ಯ ಹುಟ್ಟುವ ಮೊದಲು, ಯೇಸುವು ಏಕಾಂತವಾದ ಸ್ಥಳಕ್ಕೆ ಹೋಗಿ ಅಲ್ಲಿ ಪ್ರಾರ್ಥಿಸಿದನು.
1:38-39 y32l ಏನು ಮಾಡಲು ಬಂದಿದ್ದೇನೆಂದು ಯೇಸು ಸೀಮೋನನಿಗೆ ಹೇಳಿದನು? ಸುತ್ತ ಮುತ್ತಲಿರುವ ಊರುಗಳಲ್ಲಿ ಸಾರಲು ಬಂದಿದ್ದೇನೆಂದು ಯೇಸು ಹೇಳಿದನು.
1:40-41 xyj3 ಸ್ವಸ್ಥನಾಗಬೇಕೆಂದು ಯೇಸುವನ್ನು ಬೇಡಿಕೊಂಡ ಕುಷ್ಟರೋಗಿಯ ಬಗ್ಗೆ ಯೇಸು ಯಾವ ಮನೋಭಾವವನ್ನು ಹೊಂದಿದ್ದನು? ಕುಷ್ಟರೋಗಿಯ ಮೇಲೆ ಯೇಸು ಕನಿಕರಪಟ್ಟು ಅವನನ್ನು ಸ್ವಸ್ಥ ಮಾಡಿದನು.
1:44 dzi8 ಯೇಸು ಕುಷ್ಟರೋಗಿಗೆ ಏನು ಮಾಡಲು ಹೇಳಿದನು, ಮತ್ತು ಯಾಕೆ ಹೇಳಿದನು? ಮೋಶೆಯು ಆಜ್ಞಾಪಿಸಿದ ಪ್ರಕಾರ ಹೋಗಿ ಯಜ್ಞಗಳನ್ನು ಅರ್ಪಿಸುವಂತೆ ಕುಷ್ಟರೋಗಿಗೆ ಯೇಸು ಹೇಳಿದನು. ಅವನು ಸ್ವಸ್ಥಗೊಂಡಿದ್ದು ಸಮುದಾಯದಲ್ಲಿ ಸಾಕ್ಷಿಯಾಗಿ ಕಾರ್ಯ ಮಾಡುತ್ತದೆ.
2:4 zvpg ಪಾರ್ಶ್ವವಾಯು ರೋಗಿಯನ್ನು ಹೊತ್ತುಕೊಂಡು ಬಂದಿದ್ದ ನಾಲ್ಕು ಜನರು ಏನು ಮಾಡಿದರು? ಪುರುಷರು ಮನೆಯ ಮೇಲ್ಚಾವಣಿಯನ್ನು ತೆಗೆದು ಪಾರ್ಶ್ವವಾಯು ರೋಗಿಯನ್ನು ಯೇಸುವಿನ ಬಳಿಗೆ ಇಳಿಸಿದರು
2:5 efne ಪಾರ್ಶ್ವವಾಯು ರೋಗಿಗೆ ಯೇಸು ಏನು ಹೇಳಿದನು? ಯೇಸು, “ಮಗುವೇ, ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ” ಎಂದು ಹೇಳಿದನು.
2:6-7 k9lq ಯೇಸು ಹೇಳಿದ್ದಕ್ಕೆ ಕೆಲವು ಶಾಸ್ತ್ರಿಗಳು ಯಾಕೆ ವಿರೋಧಿಸಿದರು? ದೇವರು ಮಾತ್ರ ಪಾಪಗಳನ್ನು ಕ್ಷಮಿಸಲು ಸಾಧ್ಯ ಆದ್ದರಿಂದ ಯೇಸು ದೇವದೂಷಣೆ ಮಾಡಿದ್ದಾನೆ ಎಂದು ಕೆಲವು ಶಾಸ್ತ್ರಿಗಳು ಯೋಚಿಸಿದರು.
2:10-12 v3ys ಈ ಭೂಮಿಯ ಪಾಪಗಳನ್ನು ಮೇಲೆ ಕ್ಷಮಿಸಲು ಆತನಿಗೆ ಅಧಿಕಾರವಿದೆಯೆಂದು ಯೇಸು ಹೇಗೆ ತೋರ್ಪಡಿಸಿದನು? ಯೇಸು ಪಾರ್ಶ್ವವಾಯು ರೋಗಿಗೆ ನಿನ್ನ ಹಾಸಿಗೆಯನ್ನು ತೆಗೆದುಕೊಂಡು ಮನೆಗೆ ಹೋಗು ಎಂದು ಯೇಸು ಹೇಳಿದನು, ಮತ್ತು ಆ ಮನುಷ್ಯನು ಹಾಗೆಯೇ ಮಾಡಿದನು.
2:13-14 llaq ಯೇಸು ಲೇವಿಗೆ ತನ್ನನ್ನು ಹಿಂಬಾಲಿಸು ಎಂದು ಹೇಳಿದಾಗ ಲೇವಿಯು ಏನು ಮಾಡುತ್ತಿದ್ದನು? ಯೇಸು ಅವನನ್ನು ಕರೆದಾಗ ಲೇವಿಯು ಸುಂಕ ವಸೂಲಿ ಮಾಡುವ ಸ್ಥಳದಲ್ಲಿ ಕುಳಿತುಕೊಂಡಿದ್ದನು.
2:15-16 c07h ಲೇವಿಯ ಮನೆಯಲ್ಲಿ, ಫರಿಸಾಯರಿಗೆ ಬೇಸರಿಕೆ ಬರುವಂತೆ ಯೇಸು ಏನು ಮಾಡಿದನು? ಯೇಸು ಪಾಪಿಗಳ ಮತ್ತು ಸುಂಕ ವಸೂಲಿ ಮಾಡುತ್ತಿದ್ದ ಜನರೊಂದಿಗೆ ಊಟ ಮಾಡುತ್ತಿದ್ದನು.
2:17 zqw0 ಯಾರನ್ನು ಕರೆಯಲು ಬಂದಿದ್ದೇನೆಂದು ಯೇಸು ಹೇಳಿದನು? ಪಾಪಿಯಾದ ಜನರನ್ನು ಕರೆಯಲು ಬಂದೆನೆಂದು ಯೇಸು ಹೇಳಿದನು.
2:18 p9ln ಕೆಲವು ಜನರು ಉಪವಾಸದ ಬಗ್ಗೆ ಯೇಸುವನ್ನು ಯಾವ ಪ್ರಶ್ನೆಯನ್ನು ಕೇಳಿದರು? ಯೋಹಾನನ ಶಿಷ್ಯರು ಮತ್ತು ಫರಿಸಾಯರ ಶಿಷ್ಯರು ಉಪವಾಸ ಮಾಡುತ್ತಾರೆ ಆದರೆ ಯೇಸುವಿನ ಶಿಷ್ಯರು ಯಾಕೆ ಉಪವಾಸ ಮಾಡಲಿಲ್ಲವೆಂದು ಅವರು ಯೇಸುವನ್ನು ಕೇಳಿದರು.
2:19 w6go ಆತನ ಶಿಷ್ಯರು ಯಾಕೆ ಉಪವಾಸ ಮಾಡಿತ್ತಿಲ್ಲವೆಂದು ಯೇಸು ಹೇಗೆ ವಿವರಿಸಿದನು? ಮದುಮಗನ ಜೊತೆಯಲ್ಲಿ ಇನ್ನೂ ಮದುವೆಯ ಜನರು ಇರುವಾಗ, ಅವರು ಉಪವಾಸ ಮಾಡಲು ಆಗುವುದಿಲ್ಲವೆಂದು ಯೇಸು ಹೇಳಿದನು.
2:23-24 ej7h ಫರಿಸಾಯರಿಗೆ ಬೇಸರಿಕೆ ಬರುವಂತೆ ಸಬ್ಬತ್‌ ದಿನದಲ್ಲಿ ಯೇಸುವಿನ ಶಿಷ್ಯರು ಹೊಲದಲ್ಲಿ ಏನು ಮಾಡಿದರು? ಸಬ್ಬತ್‌ ದಿನದಲ್ಲಿ ಯೇಸುವಿನ ಶಿಷ್ಯರು ಹೊಲದಲ್ಲಿದ್ದ ತೆನೆಗಳನ್ನು ಮುರಿದುಕೊಂಡು ಅವುಗಳನ್ನು ತಿಂದರು.
2:25-26 iwe2 ಸಾಮಾನ್ಯವಾಗಿ ನಿಷೇಧಿಸಲ್ಪಟ್ಟ ರೊಟ್ಟಿಯು ಬೇಕಾದವರ ಮತ್ತು ತಿನ್ನುವವರ ಬಗ್ಗೆ ಯೇಸು ಯಾವ ಉದಾಹರಣೆಯನ್ನು ಕೊಟ್ಟನು? ದಾವೀದನು ಕೊರತೆಯುಳ್ಳವನಾಗಿ, ಯಾಜಕರ ಹೊರತು ಮತ್ತಾರು ತಿನ್ನಬಾರದ ರೊಟ್ಟಿಯನ್ನು ತಿಂದಂಥ ಉದಾಹರಣೆಯನ್ನು ಯೇಸು ಉದಾಹರಣೆಯಾಗಿ ಕೊಟ್ಟನು.
2:27 m19r ಸಬ್ಬತ್‌ ದಿನವು ಯಾರಿಗಾಗಿ ಮಾಡಲ್ಪಟ್ಟಿದೆ ಎಂದು ಯೇಸು ಹೇಳಿದನು? ಸಬ್ಬತ್‌ ದಿನವು ಜನರಿಗಾಗಿ ಮಾಡಲಾಯಿತು ಎಂದು ಯೇಸು ಹೇಳಿದನು.
2:28 ak51 ಯೇಸು ತನಗೆ ಯಾವ ಅಧಿಕಾರವಿದೆ ಎಂದು ಹೇಳಿಕೊಂಡನು? ನಾನು ಸಬ್ಬತ್‌ ದಿನಕ್ಕೂ ಸಹ ಕರ್ತನಾಗಿದ್ದೇನೆಂದು ಯೇಸು ಹೇಳಿದನು.
3:1-2 o82f ಸಬ್ಬತ್‌ ದಿನದಲ್ಲಿ ಸಭಾಮಂದಿರದಲ್ಲಿ ಅವರು ಯೇಸುವನ್ನು ಯಾಕೆ ಗಮನಿಸುತ್ತಿದ್ದರು? ಸಬ್ಬತ್‌ ದಿನದಲ್ಲಿ ಆತನು ಸ್ವಸ್ಥಮಾಡುತ್ತಾನೋ, ಸ್ವಸ್ಥಮಾಡುವುದಾದರೆ ಆತನನ್ನು ದೂಷಿಸಬಹುದೆಂದು ಅವರುಗಳು ಯೇಸುವನ್ನು ಗಮನಿಸುತ್ತಿದ್ದರು.
3:4 dk1g ಸಬ್ಬತ್‌ ದಿನದ ಬಗ್ಗೆ ಜನರನ್ನು ಯೇಸು ಯಾವ ಪ್ರಶ್ನೆಯನ್ನು ಕೇಳಿದನು? ಸಬ್ಬತ್‌ ದಿನದಲ್ಲಿ ಕೆಟ್ಟದ್ದನ್ನು ಮಾಡುವುದು, ಅಥವಾ ಒಳ್ಳೆಯದನ್ನು ಮಾಡುವುದು ಯಾವುದು ಶಾಸ್ತ್ರಸಮ್ಮತವಾದುದು ಎಂದು ಯೇಸು ಜನರನ್ನು ಕೇಳಿದನು.
3:4 p1z9 ಯೇಸುವಿನ ಪ್ರಶ್ನೆಗೆ ಜನರು ಹೇಗೆ ಪ್ರತಿಕ್ರಿಯಿಸಿದರು? ಜನರು ಮೌನವಾಗಿದ್ದರು.
3:5 mrbj ಅವರ ಮೇಲೆ ಯೇಸು ಎಂಥ ಮನೋಭಾವವುಳ್ಳವನಾಗಿದ್ದನು? ಯೇಸು ಅವರ ಮೇಲೆ ಕೋಪಗೊಂಡನು.
3:6 acwq ಯೇಸು ಮನುಷ್ಯನನ್ನು ಸ್ವಸ್ಥಮಾಡಿದಾಗ ಫರಿಸಾಯರು ಏನು ಮಾಡಿದರು? ಫರಿಸಾಯರು ಹೊರಟು ಹೋಗಿ ಯೇಸುವನ್ನು ಕೊಲ್ಲಲ್ಲು ಒಳಸಂಚು ಮಾಡಿದರು.
3:7-8 b2bk ಯೇಸು ಸಮುದ್ರದ ಬಳಿಗೆ ಹೋಗುತ್ತಿರುವಾಗ ಎಷ್ಟು ಜನರು ಆತನನ್ನು ಹಿಂಬಾಲಿಸಿದರು? ದೊಡ್ಡ ಜನರ ಗುಂಪು ಯೇಸುವನ್ನು ಹಿಂಬಾಲಿಸಿತು.
3:11 tke0 ಯೇಸುವನ್ನು ನೋಡಿದಾಗ ದೆವ್ವಗಳು ಏನೆಂದು ಕೂಗಿದವು? ಯೇಸು ದೇವರ ಮಗನೆಂದು ದೆವ್ವಗಳು ಕೂಗಿದವು.
3:14-15 e2s0 ಯೇಸು ಎಷ್ಟು ಮಂದಿ ಅಪೊಸ್ತಲರನ್ನು ನೇಮಿಸಿದನು ಮತ್ತು ಅವರುಗಳು ಏನು ಮಾಡಬೇಕಾಗಿತ್ತು? ಯೇಸು ತನ್ನ ಜೊತೆಯಲ್ಲಿರಲು, ಸುವಾರ್ತೆ ಸಾರಲು, ಮತ್ತು ದೆವ್ವಗಳನ್ನು ಬಿಡಿಸುವ ಅಧಿಕಾರವನ್ನು ಹೊಂದಿದವರಾಗಿರಲು 12 ಮಂದಿ ಅಪೊಸ್ತಲರನ್ನು ನೇಮಿಸಿದನು.
3:19 raj7 ಯೇಸುವಿಗೆ ದ್ರೋಹ ಮಾಡಿದ ಅಪೊಸ್ತಲನು ಯಾರು? ಯೇಸುವಿಗೆ ದ್ರೋಹ ಮಾಡಿದ ಅಪೊಸ್ತಲನು ಇಸ್ಕರಿಯೋತ ಯೂದನು.
3:21 rh8o ಯೇಸುವಿನ ಸುತ್ತವಿದ್ದ ಜನರ ಗುಂಪುಗಳ ಮತ್ತು ಘಟನೆಗಳ ಬಗ್ಗೆ ಯೇಸುವಿನ ಕುಟುಂಬದವರು ಏನೆಂದು ಯೋಚಿಸಿದರು? ಯೇಸುವಿನ ಕುಟುಂಬದವರು ಆತನಿಗೆ ಆತನಿಗೆ ಹುಚ್ಚುಹಿಡಿದಿದೆ ಎಂದು ಯೋಚಿಸಿದರು.
3:22 xmhs ಯೇಸುವಿನ ವಿರುದ್ದ ಶಾಸ್ತ್ರಿಗಳು ಯಾವ ಆರೋಪವನ್ನು ಮಾಡಿದರು? ದೆವ್ವಗಳ ಒಡೆಯನಿಂದ ದೆವ್ವಗಳನ್ನು ಬಿಡಿಸುತ್ತಿದ್ದಾನೆಂದು ಶಾಸ್ತ್ರಿಗಳು ಯೇಸುವಿನ ಮೇಲೆ ಆರೋಪ ಮಾಡಿದರು.
3:23-24 ob9v ಶಾಸ್ತ್ರಿಗಳ ಆರೋಪಕ್ಕೆ ಯೇಸುವಿನ ಪ್ರತಿಕ್ರಿಯೆ ಏನಾಗಿತ್ತು? ಯಾವುದೇ ರಾಜ್ಯವು ತನಗೆ ವಿರುದ್ದವಾಗಿ ವಿಭಜನೆಗೊಂಡಿದ್ದರೆ ನಿಲ್ಲುವುದಿಲ್ಲವೆಂದು ಯೇಸು ಪ್ರತಿಕ್ರಿಯಿಸಿದನು.
3:28-29 txqb ಯಾವ ಪಾಪವು ಕ್ಷಮಿಸಲ್ಪಡುವುದಿಲ್ಲವೆಂದು ಯೇಸು ಹೇಳಿದನು? ಪವಿತ್ರ ಆತ್ಮನಿಗೆ ವಿರುದ್ದ ಮಾಡುವ ದೂಷಣೆಯು ಕ್ಷಮಿಸಲ್ಪಡುವುದಿಲ್ಲವೆಂದು ಯೇಸು ಹೇಳಿದನು.
3:33-35 xtjn ಆತನ ತಾಯಿ ಮತ್ತು ಸಹೋದರರು ಯಾರು ಎಂದು ಯೇಸು ಹೇಳಿದನು? ದೇವರ ಚಿತ್ತವನ್ನು ಮಾಡುವವರು ಆತನ ತಾಯಿ ಮತ್ತು ಸಹೋದರರು ಎಂದು ಯೇಸು ಹೇಳಿದನು.
4:1 bki3 ಯೇಸು ಬೋಧಿಸಲು ದೋಣಿಯ ಒಳಗೆ ಯಾಕೆ ಹೋದನು? ಯೇಸು ಕುಳಿತುಕೊಂಡು ಬೋಧಿಸಲು ದೋಣಿಯ ಒಳಗೆ ಹೋದನು ಯಾಕೆಂದರೆ ಆತನ ಸುತ್ತಲೂ ದೊಡ್ಡ ಗುಂಪು ಸೇರಿತ್ತು.
4:4 wzuu ದಾರಿಯ ಮೇಲೆ ಬಿತ್ತಿದ್ದ ಬೀಜಗಳಿಗೆ ಏನಾಯಿತು? ಹಕ್ಕಿಗಳು ಬಂದು ಅವುಗಳನ್ನು ತಿಂದುಬಿಟ್ಟವು.
4:6 wyhf ಸೂರ್ಯನು ಹುಟ್ಟಿದಾಗ ಬಂಡೆ ನೆಲದ ಮೇಲೆ ಬಿತ್ತಿದ್ದ ಬೀಜಗಳಿಗೆ ಏನಾಯಿತು? ಅವುಗಳಿಗೆ ಬೇರಿಲ್ಲದ ಕಾರಣ ಅವು ಒಣಗಿಹೋದವು.
4:7 b6ma ಮುಳ್ಳು ಗಿಡಗಳ ಮಧ್ಯದಲ್ಲಿ ಬಿತ್ತಿದ್ದ ಬೀಜಗಳಿಗೆ ಏನಾಯಿತು? ಮುಳ್ಳುಗಿಡಗಳು ಬೆಳೆದು ಅವುಗಳನ್ನು ಅಡಗಿಸಿಬಿಟ್ಟವು.
4:8 ivy4 ಒಳ್ಳೆಯ ಮಣ್ಣಿನಲ್ಲಿ ಬಿತ್ತಿದ ಬೀಜಗಳಿಗೆ ಏನಾಯಿತು? ಬಿತ್ತಿದ್ದ ಬೀಜಗಳು ಕಾಳುಗಳನ್ನು ಉತ್ಪತ್ತಿಮಾಡಿ, 30, 60 ರಷ್ಟು ಮತ್ತು ಕೆಲವು 100 ರಷ್ಟು ಫಲವನ್ನು ಕೊಟ್ಟವು.
4:11 o0ss ಯೇಸು ಹನ್ನೆರಡು ಮಂದಿಗೆ ಏನನ್ನು ಕೊಡಲಾಗಿದೆ ಆದರೆ ಹೊರಗಿನವರಿಗೆ ಯಾಕೆ ಕೊಡಲಾಗಿಲ್ಲ ಎಂದು ಹೇಳಿದನು? ಹನ್ನೆರಡು ಮಂದಿಗೆ ದೇವರ ರಾಜ್ಯದ ಗುಟ್ಟು ಕೊಡಲಾಗಿದೆ ಆದರೆ ಹೊರಗಿನವರಿಗೆ ಕೊಡಲಾಗಿಲ್ಲ ಎಂದು ಯೇಸು ಹೇಳಿದನು.
4:14 pskj ಯೇಸುವಿನ ಸಾಮ್ಯದಲ್ಲಿ ಬೀಜ ಎಂದರೇನು? ಬೀಜ ಎಂದರೆ ದೇವರ ವಾಕ್ಯ.
4:15 t1r5 ದಾರಿಯ ಮೇಲೆ ಬಿತ್ತಿದ್ದ ಬೀಜವು ಏನನ್ನು ಪ್ರತಿನಿಧಿಸುತ್ತದೆ? ದೇವರ ವಾಕ್ಯವನ್ನು ಕೇಳಿದರೂ, ತಕ್ಷಣವೇ ಸೈತಾನನು ಅದನ್ನು ಅವರಿಂದ ತೆಗೆದುಕೊಂಡು ಹೋಗುತ್ತಾನೆ ಅಂಥವರನ್ನು ಅದು ಪ್ರತಿನಿಧಿಸುತ್ತದೆ.
4:16-17 zy18 ಬಂಡೆಯ ನೆಲದ ಮೇಲೆ ಬಿತ್ತಿದ್ದ ಬೀಜವು ಏನನ್ನು ಪ್ರತಿನಿಧಿಸುತ್ತದೆ? ವಾಕ್ಯವನ್ನು ಸಂತೋಷದಿಂದ ಕೇಳಿಕೊಂಡರೂ, ಸಂಕಟವು ಬಂದಾಗ, ಅವರು ಎಡವಿಬೀಳುವಂಥವರನ್ನು ಅದು ಪ್ರತಿನಿಧಿಸುತ್ತದೆ.
4:18-19 alo5 ಮುಳ್ಳು ಗಿಡಗಳ ಮಧ್ಯದಲ್ಲಿ ಬಿತ್ತಿದ್ದ ಬೀಜವು ಏನನ್ನು ಪ್ರತಿನಿಧಿಸುತ್ತದೆ? ದೇವರ ವಾಕ್ಯವನ್ನು ಕೇಳಿಸಿಕೊಂಡರೂ, ಲೋಕದ ಚಿಂತೆಗಳು ಅವುಗಳನ್ನು ಅಡಗಿಸಿಬಿಡುವಂಥವರನ್ನು ಅದು ಪ್ರತಿನಿಧಿಸುತ್ತದೆ.
4:20 lhwr ಒಳ್ಳೆಯ ಮಣ್ಣಿನಲ್ಲಿ ಬಿತ್ತಿದ್ದ ಬೀಜವು ಏನನ್ನು ಪ್ರತಿನಿಧಿಸುತ್ತದೆ? ದೇವರ ವಾಕ್ಯವನ್ನು ಕೇಳಿಸಿಕೊಂಡು, ಅದನ್ನು ಸ್ವೀಕರಿಸಿ, ಫಲವನ್ನು ಕೊಡುವಂಥವರನ್ನು ಅದು ಪ್ರತಿನಿಧಿಸುತ್ತದೆ.
4:22 c1ey ಗುಪ್ತವಾದ ಮತ್ತು ರಹಸ್ಯದ ವಿಷಯಗಳಿಗೆ ಏನಾಗುತ್ತದೆ ಎಂದು ಯೇಸು ಹೇಳಿದನು? ಗುಪ್ತವಾದ ಮತ್ತು ರಹಸ್ಯದ ವಿಷಯಗಳು ಬೆಳಕಿಗೆ ಬರುತ್ತವೆ ಎಂದು ಯೇಸು ಹೇಳಿದನು.
4:26-27 fteq ಬೀಜವನ್ನು ನೆಲದಲ್ಲಿ ಬಿತ್ತು ಒಬ್ಬ ಮನುಷ್ಯನಿಗೆ ದೇವರ ರಾಜ್ಯವು ಹೇಗೆ ಹೋಲಿಕೆಯಾಗಿದೆ? ಮನುಷ್ಯನು ಬೀಜವನ್ನು ಬಿತ್ತುತ್ತಾನೆ, ಅದು ಬೆಳೆಯುತ್ತದೆ, ಆದರೆ ಅದು ಹೇಗೆ ಎಂದು ಅವನಿಗೆ ತಿಳಿಯದು, ಸುಗ್ಗಿಕಾಲ ಬಂದು ಫಸಲು ಮಾಗಿದಾಗ ಅವನು ಅದನ್ನು ಕೊಯ್ಯಿದು ಸಂಗ್ರಹಿಸುತ್ತಾನೆ.
4:30-32 tzc2 ಯಾವ ರೀತಿಯಲ್ಲಿ ದೇವರ ರಾಜ್ಯವು ಸಾಸಿವೆ ಬೀಜಕ್ಕೆ ಹೋಲಿಕೆಯಾಗಿದೆ? ಸಾಸಿವೆಕಾಳು ಬಹಳ ಸಣ್ಣ ಬೀಜವಾಗಿ ಪ್ರಾರಂಭವಾಗುತ್ತದೆ, ಆದಾಗ್ಯೂ ಅನೇಕರು ಅವರುಗಳಿಗೆ ಗೂಡುಗಳನ್ನು ಮಾಡಿಕೊಳ್ಳುವಷ್ಟು ದೊಡ್ಡ ಗಿಡವಾಗಿ ಬೆಳೆಯುತ್ತದೆ.
4:35-37 tojt ಯೇಸು ಮತ್ತು ಶಿಷ್ಯರು ಸರೋವರವನ್ನು ದಾಟಿದಾಗ ಏನಾಯಿತು? ದೊಡ್ಡ ಬಿರುಗಾಳಿಯು ಪ್ರಾರಂಭವಾಗಿ, ದೋಣಿಯನ್ನು ನೀರಿನಿಂದ ತುಂಬಿಸುವಂತೆ ಭಯಪಡಿಸಿತು.
4:38 j9v3 ಯೇಸು ದೋಣಿಯಲ್ಲಿ ಏನು ಮಾಡುತ್ತಿದ್ದನು? ಯೇಸು ನಿದ್ರೆ ಮಾಡುತ್ತಿದ್ದನು.
4:38 vu2b ಶಿಷ್ಯರು ಯೇಸುವನ್ನು ಏನೆಂದು ಪ್ರಶ್ನೆ ಕೇಳಿದರು? ನಾವು ಸಾಯುತ್ತಿದ್ದೇವೆ ಎಂಬುದರ ಬಗ್ಗೆ ಆತನಿಗೆ ಚಿಂತೆ ಇದೆಯೋ ಎಂದು ಶಿಷ್ಯರು ಯೇಸುವನ್ನು ಕೇಳಿದರು.
4:39 vehj ಆಗ ಯೇಸು ಏನು ಮಾಡಿದನು? ಯೇಸು ಗಾಳಿಯನ್ನು ಗದರಿಸಿ, ಸಮುದ್ರವನ್ನು ಶಾಂತ ಮಾಡಿದನು.
4:41 fkpr ಯೇಸು ಇದನ್ನು ಮಾಡಿದ ನಂತರ, ಶಿಷ್ಯರ ಪ್ರತಿಕ್ರಿಯೆ ಏನಾಗಿತ್ತು? ಶಿಷ್ಯರು ಮಹಾ ಭಯದಿಂದ ಕೂಡಿದರು, ಗಾಳಿಯೂ ಸಮುದ್ರವೂ ಆತನಿಗೆ ವಿಧೇಯವಾಗುತ್ತಲ್ಲಾ, ಹಾಗಾದರೆ ಯೇಸು ಯಾರಾಗಿರಬಹುದೆಂದು ಆಶ್ಚರ್ಯಪಟ್ಟರು.
5:1-2 f3h1 ಗೆರೆಸೇನೆಯ ಪ್ರದೇಶಕ್ಕೆ ಅವರು ಬಂದಾಗ ಯೇಸುವನ್ನು ಯಾರು ಎದುರುಗೊಂಡರು? ದೆವ್ವ ಹಿಡಿದಿದ್ದ ಮನುಷ್ಯನು ಯೇಸುವನ್ನು ಎದುರುಗೊಂಡರು.
5:4 pvch ಈ ಮನುಷ್ಯನನ್ನು ಸರಪಳಿಗಳಿಂದ ಕಟ್ಟಿ ಅಡಗಿಸಲು ಜನರು ಪ್ರಯತ್ನಿಸಿದಾಗ ಏನಾಯಿತು? ಈ ಮನುಷ್ಯನನ್ನು ಸರಪಳಿಗಳಿಂದ ಕಟ್ಟಿ ಅಡಗಿಸಲು ಜನರು ಪ್ರಯತ್ನಿಸಿದಾಗ, ಅವನು ಸರಪಳಿಯನ್ನು ಮುರಿದು ಹಾಕಿದನು.
5:7 s4bf ದೆವ್ವುವ ಯೇಸುವಿಗೆ ಯಾವ ಬಿರುದನ್ನು ಕೊಟ್ಟಿತು? ದೆವ್ವವು ಯೇಸುವನ್ನು ಮಹೋನ್ನತನಾದ ದೇವರ ಮಗನು ಎಂದು ಹೇಳಿತು.
5:8 s0ay ಮನುಷ್ಯನ ಒಳಗಿದ್ದ ದೆವ್ವಕ್ಕೆ ಯೇಸು ಏನು ಹೇಳಿದನು? ಯೇಸು, “ದೆವ್ವವೇ, ಆ ಮನುಷ್ಯನ ಒಳಗಿನಿಂದ ಹೊರಗೆ ಬಾ” ಎಂದು ಹೇಳಿದನು.
5:9 yw86 ದೆವ್ವದ ಹೆಸರು ಏನು? ದೆವ್ವದ ಹೆಸರು ದಂಡು ಎಂದು, ಯಾಕೆಂದರೆ ಅವುಗಳು ಬಹಳವಾಗಿ ಇದ್ದವು.
5:13 jvth ಯೇಸು ಮನುಷ್ಯನಿಂದ ದೆವ್ವವನ್ನು ಬಿಡಿಸಿದಾಗ ಏನಾಯಿತು? ದೆವ್ವಗಳು ಹೊರ ಬಂದು ಹಂದಿಗಳ ಗುಂಪಿನೊಳಗೆ ಹೊಕ್ಕವು, ಅವು ಕಡಿದಾದ ಬೆಟ್ಟದತ್ತ ಓಡಿಹೋಗಿ ನದಿಯಲ್ಲಿ ಮುಳುಗಿದವು
5:15 ist0 ದೆವ್ವವನ್ನು ಬಿಡಿಸಿದ ನಂತರ, ಆ ಮನುಷ್ಯನ ಸ್ಥಿತಿಯು ಹೇಗಿತ್ತು? ಮನುಷ್ಯನು ಬಟ್ಟೆ ಹಾಕಿಕೊಂಡು ಸ್ವಸ್ಥ ಮನಸ್ಸಿನಿಂದ ಯೇಸುವಿನೊಂದಿಗೆ ಕುಳಿತಿದ್ದನು.
5:17 mpj9 ಆ ಪ್ರದೇಶದ ಜನರು ಯೇಸುವನ್ನು ಏನು ಮಾಡುವಂತೆ ಕೇಳಿಕೊಂಡರು? ಜನರು ಯೇಸುವನ್ನು ಅವರ ಪ್ರದೇಶವನ್ನು ಬಿಟ್ಟು ಹೋಗುವಂತೆ ಕೇಳಿಕೊಂಡರು.
5:19 w96x ಗುಹೆಗಳಲ್ಲಿ ವಾಸಿಸುತ್ತಿದ್ದ ಆ ಮನುಷ್ಯನಿಗೆ ಈಗ ಏನು ಮಾಡುವಂತೆ ಯೇಸು ಹೇಳಿದನು? ಕರ್ತನು ಅವನಿಗೆ ಏನು ಮಾಡಿದ್ದಾನೆಂದು ಜನರಿಗೆ ಹೇಳುವಂತೆ ಯೇಸು ಆ ಮನುಷ್ಯನಿಗೆ ಹೇಳಿದನು.
5:22-23 pj22 ಸಭಾಮಂದಿರದ ನಾಯಕನಾದ ಯಾಯೀರನು ಯೇಸುವಿಗೆ ಏನೆಂದು ಭಿನ್ನವಿಸಿದನು? ಯಾಯೀರನು ಯೇಸುವಿಗೆ ಮರಣದ ಅಂಚಿನಲ್ಲಿರುವ ತನ್ನ ಮಗಳ ಮೇಲೆ ಕೈ ಇಡಲು ತನ್ನ ಜೊತೆಗೆ ಬರುವಂತೆ ಕೇಳಿಕೊಂಡನು.
5:25 atxm ಯೇಸುವಿನ ಬಟ್ಟೆಯ ಗೊಂಡೆಯನ್ನು ಮುಟ್ಟಿದ ಹೆಂಗಸಿನ ಸಮಸ್ಯೆ ಏನಾಗಿತ್ತು? ಆ ಹೆಂಗಸು 12 ವರ್ಷಗಳಿಂದ ರಕ್ತಕುಸುಮ ರೋಗದಿಂದ ಬಳಲುತ್ತಿದ್ದಳು.
5:28 afd1 ಆ ಹೆಂಗಸು ಯೇಸುವಿನ ಬಟ್ಟೆಯ ಗೊಂಡೆಯನ್ನು ಯಾಕೆ ಮುಟ್ಟಿದಳು? ಯೇಸುವಿನ ಬಟ್ಟೆಗಳನ್ನು ಮುಟ್ಟಿದರೆ ಆಕೆ ಸ್ವಸ್ಥಳಾಗುತ್ತೇನೆ ಎಂದು ಯೋಚಿಸಿ ಮುಟ್ಟಿದಳು.
5:30 mrlf ಆ ಹೆಂಗಸು ಆತನ ಬಟ್ಟೆಯ ಗೊಂಡೆಯನ್ನು ಮುಟ್ಟಿದಾಗ ಯೇಸು ಏನು ಮಾಡಿದನು? ತನ್ನ ಮೂಲಕ ಶಕ್ತಿಯು ಹರಿದು ಹೋಯಿತು ಎಂದು ತಿಳಿದು ಯೇಸು ತನ್ನ ಬಟ್ಟೆಯನ್ನು ಯಾರು ಮುಟ್ಟಿದರು ಎಂದು ಕೇಳಿದನು.
5:32 lyq8 ಆ ಹೆಂಗಸು ಯೇಸುವಿನ ಬಟ್ಟೆಯನ್ನು ಮುಟ್ಟಿದ ನಂತರ ಯೇಸು ಏನು ಮಾಡಿದನು? ಯೇಸು ಸುತ್ತಲೂ ತಿರುಗಿ ಯಾರು ತನ್ನನ್ನು ಮುಟ್ಟಿದವರು ಯಾರು ಎಂದು ನೋಡಿದನು.
5:34 jfch ಆ ಹೆಂಗಸು ಎಲ್ಲಾ ಸತ್ಯವನ್ನು ಯೇಸುವಿಗೆ ಹೇಳಿದಾಗ, ಯೇಸು ಆಕೆಗೆ ಏನು ಹೇಳಿದನು? ಆಕೆಯ ನಂಬಿಕೆಯೇ ಆಕೆಯನ್ನು ಸ್ವಸ್ಥಮಾಡಿತು, ಸಮಾಧಾನದಿಂದ ಹೋಗು ಎಂದು ಯೇಸು ಆಕೆಗೆ ಹೇಳಿದನು.
5:35 spbi ಯೇಸು ಮನೆಗೆ ಬಂದಾಗ ಯಾಯೀರನ ಮಗಳ ಸ್ಥಿತಿಯು ಏನಾಗಿತ್ತು? ಯಾಯೀರನ ಮಗಳು ಸತ್ತುಹೋಗಿದ್ದಳು.
5:36 fai5 ಆ ಸಮಯದಲ್ಲಿ ಯೇಸು ಯಾಯೀರನಿಗೆ ಏನು ಹೇಳಿದನು? ಯೇಸು ಯಾಯೀರನಿಗೆ ಭಯಪಡಬೇಡ, ನಂಬು ಎಂದು ಹೇಳಿದನು.
5:37 ffse ಮಗುವು ಇದ್ದ ಕೋಣೆಗೆ ಯೇಸುವಿನೊಂದಿಗೆ ಹೋದ ಶಿಷ್ಯರು ಯಾರು? ಪೇತ್ರ, ಯಾಕೋಬ, ಮತ್ತು ಯೋಹಾನ ಯೇಸುವಿನೊಂದಿಗೆ ಕೋಣೆಯ ಒಳಗೆ ಹೋದರು.
5:40 sunl ಯಾಯೀರನ ಮಗಳು ನಿದ್ರೆ ಮಾಡುತ್ತಿದ್ದಾಳೆ ಎಂದು ಯೇಸು ಹೇಳಿದಾಗ ಮನೆಯಲ್ಲಿದ್ದ ಜನರು ಏನು ಮಾಡಿದರು? ಯಾಯೀರನ ಮಗಳು ನಿದ್ರೆ ಮಾಡುತ್ತಿದ್ದಾಳೆ ಎಂದು ಯೇಸು ಹೇಳಿದಾಗ ಜನರು ಯೇಸುವನ್ನು ಅಪಹಾಸ್ಯ ಮಾಡಿದರು.
5:42 km08 ಮಗುವು ಎದ್ದು ನಡೆದಾಗ, ಜನರು ಹೇಗೆ ಪ್ರತಿಕ್ರಿಯಿಸಿದರು? ಜನರು ಬಹಳ ಆಶ್ಚರ್ಯಗೊಂಡು ಬೆರಗಾದರು.
6:2 o2l2 ಯೇಸುವಿನ ಸ್ವಂತ ಊರಿನ ಜನರು ಆತನ ಬಗ್ಗೆ ಯಾಕೆ ಆಶ್ಚರ್ಯಪಟ್ಟರು? ಆತನ ಉಪದೇಶಗಳು, ಆತನ ಜ್ಞಾನ, ಮತ್ತು ಆತನ ಅದ್ಭುತಗಳು ಎಲ್ಲಿಂದ ಬಂದವೆಂದು ಜನರಿಗೆ ತಿಳಿದಿರಲಿಲ್ಲ.
6:4 d9fa ಎಲ್ಲಿ ಪ್ರವಾದಿಗೆ ಗೌರವ ಇರುವುದಿಲ್ಲ ಎಂದು ಯೇಸು ಹೇಳಿದನು? ಪ್ರವಾದಿಗೆ ಅವನ ಸ್ವಂತ ಊರಿನಲ್ಲಿಯೂ, ಅವನ ಸಂಬಂಧಿಕರ ಮಧ್ಯದಲ್ಲಿಯೂ, ಅವನ ಸ್ವಂತ ಮನೆಯಲ್ಲಿಯೂ ಗೌರವ ಇರುವುದಿಲ್ಲ ಎಂದು ಯೇಸು ಹೇಳಿದನು.
6:6 arwk ಆತನ ಸ್ವಂತ ಊರಿನ ಜನರ ಬಗ್ಗೆ ಯೇಸುವನ್ನು ಏನು ಬೆರಗುಗೊಳಿಸಿತು? ಆತನ ಸ್ವಂತ ಊರಿನ ಜನರ ಅಪನಂಬಿಕೆಯು ಯೇಸುವನ್ನು ಬೆರಗುಗೊಳಿಸಿತು.
6:7 djdl ಹನ್ನೆರಡು ಮಂದಿಯನ್ನು ಕಳುಹಿಸಿ ಕೊಡುವಾಗ ಯೇಸು ಅವರಿಗೆ ಯಾವ ಅಧಿಕಾರವನ್ನು ಕೊಟ್ಟನು? ದೆವ್ವಗಳ ಮೇಲೆ ಯೇಸು ಹನ್ನೆರಡು ಮಂದಿಗೆ ಅಧಿಕಾರವನ್ನು ಕೊಟ್ಟನು.
6:8-9 e4e2 ಹನ್ನೆರಡು ಮಂದಿಯು ಅವರ ಪ್ರಯಾಣದಲ್ಲಿ ಏನನ್ನು ತೆಗೆದುಕೊಂಡು ಹೋದರು? ಆ ಹನ್ನೆರಡು ಮಂದಿ ಕೋಲು, ಕೆರಗಳು, ಮತ್ತು ಒಂದು ಬಟ್ಟೆಯನ್ನು ತೆಗೆದುಕೊಂಡು ಹೋದರು.
6:11 yfhp ಆ ಸ್ಥಳದವರು ಅವರನ್ನು ಸ್ವೀಕರಿಸದಿದ್ದರೆ ಆ ಸ್ಥಳಕ್ಕೆ ಏನು ಮಾಡುವಂತೆ ಯೇಸು ಆ ಹನ್ನೆರಡು ಮಂದಿಗೆ ಹೇಳಿದನು? ಯೇಸು ಆ ಹನ್ನೆರಡು ಮಂದಿಗೆ ಅವರ ಕಾಲ ಕೆಳಗೆ ಇರುವ ಧೂಳನ್ನು ಅವರ ವಿರುದ್ದ ಸಾಕ್ಷಿಯಾಗಿ ಜಾಡಿಸಿ ಬಿಡಿರಿ ಎಂದು ಹೇಳಿದನು.
6:14-15 iota ಯೇಸು ಯಾರೆಂದು ಜನರು ಊಹಿಸಿದರು? ಜನರು ಯೇಸು ಸ್ನಾನಿಕನಾದ ಯೋಹಾನನು ಅಥವಾ ಎಲೀಯನು ಅಥವಾ ಪ್ರವಾದಿ ಎಂದು ಊಹಿಸಿದರು.
6:18 wv8i ಸ್ನಾನಿಕನಾದ ಯೋಹಾನನು ಹೆರೋದನಿಗೆ ಯಾವ ಅಧರ್ಮವನ್ನು ಮಾಡುತ್ತಿದ್ದಿಯಾ ಎಂದು ಹೇಳಿದನು? ಯೋಹಾನನು ಹೆರೋದನಿಗೆ ನಿನ್ನ ಸಹೋದರನ ಹೆಂಡತಿಯನ್ನು ಮದುವೆ ಮಾಡಿಕೊಳ್ಳುವುದು ಅಧರ್ಮವೆಂದು ಹೇಳಿದನು.
6:20 l858 ಯೋಹಾನನು ಉಪದೇಶ ಮಾಡುವುದನ್ನು ಕೇಳಿಸಿಕೊಂಡಾಗ ಹೆರೋದನು ಹೇಗೆ ಪ್ರತಿಕ್ರಿಯಿಸಿದನು? ಯೋಹಾನನು ಉಪದೇಶ ಮಾಡುವುದನ್ನು ಕೇಳಿಸಿಕೊಂಡ ಹೆರೋದನು ಗಲಿಬಿಲಿ ಗೊಂಡನು, ಆದರೂ ಅವನ ಮಾತನ್ನು ಸಂತೋಷದಿಂದ ಕೇಳಿಸಿಕೊಳ್ಳುತ್ತಿದ್ದನು.
6:23 fzf0 ಹೆರೋದನು ಅಣೆಯಿಟ್ಟು ಹೆರೋದ್ಯಳಿಗೆ ಏನೆಂದು ಮಾತು ಕೊಟ್ಟನು? ಆಕೆ ಏನೇ ಕೇಳಿಕೊಂಡರೂ, ಅರ್ಧ ರಾಜ್ಯವನ್ನೇ ಕೇಳಿಕೊಂಡರೂ ಆಕೆಗೆ ಕೊಡುತ್ತೆನೆಂದು ಹೆರೋದನು ಆಣೆಯಿಟ್ಟು ಹೇಳಿದನು.
6:25 tn2q ಹೆರೋದ್ಯಳು ಏನನ್ನು ಕೇಳಿಕೊಂಡಳು? ಸ್ನಾನಿಕನಾದ ಯೋಹಾನ ತಲೆಯನ್ನು ಪಾರಾತಿನಲ್ಲಿ ಕೊಡಬೇಕೆಂದು ಹೆರೋದ್ಯಳು ಕೇಳಿಕೊಂಡಳು.
6:26 cu47 ಹೆರೋದ್ಯಳ ಕೋರಿಕೆಗೆ ಹೆರೋದನು ಹೇಗೆ ಪ್ರತಿಕ್ರಿಯಿಸಿದನು? ಹೆರೋದನಿಗೆ ಬಹಳ ದು:ಖವಾಯಿತು, ಆದರೂ ಅವನು ಅತಿಥಿಗಳ ಮುಂದೆ ಮಾಡಿದ್ದ ಆಣೆಗಳ ನಿಮಿತ್ತವಾಗಿ ಆಕೆಯ ಕೋರಿಕೆಯನ್ನು ನಿರಾಕರಿಸಲಿಲ್ಲ.
6:33 c20j ಯೇಸು ಮತ್ತು ಅಪೋಸ್ತಲರು ವಿಶ್ರಾಂತಿಯನ್ನು ತೆಗೆದುಕೊಳ್ಳಲು ಹೋಗುವುದಕ್ಕೆ ಪ್ರಯತ್ನಿಸುತ್ತಿರುವಾಗ ಏನಾಯಿತು? ಅನೇಕ ಜನರು ಅವರನ್ನು ಗುರುತಿಸಿ ಓಡುತ್ತಾ ಯೇಸು ಮತ್ತು ಅಪೊಸ್ತಲರ ಬರುವುದಕ್ಕೆ ಮೊದಲೇ ಅವರು ಅಲ್ಲಿಗೆ ಬಂದರು.
6:34 mdl0 ಅವರಿಗಾಗಿ ಕಾಯುತ್ತಿದ್ದ ಜನರ ಗುಂಪಿನ ಮೇಲೆ ಯೇಸುವಿನ ಮನೋಭಾವ ಏನಾಗಿತ್ತು? ಅವರು ಕುರುಬನಿಲ್ಲದ ಕುರಿಗಳಂತೆ ಇದ್ದದ್ದರಿಂದ ಯೇಸುವಿಗೆ ಅವರ ಮೇಲೆ ಕನಿಕರಪಟ್ಟನು
6:37 if60 ಯೇಸು ಜನರಿಗೆ ಊಟಕ್ಕೆ ಏನು ಕೊಡಬೇಕೆಂದು ಇದ್ದೀರಿ ಎಂದು ಕೇಳಿದಾಗ ಶಿಷ್ಯರು ಅದರ ಬಗ್ಗೆ ಏನು ಯೋಚಿಸಿದರು? ಅವರು ಹೋಗಿ 200 ದಿನಾರಿನ ಬೆಲೆಯ ರೊಟ್ಟಿಯನ್ನು ಖರೀದಿಸಬೇಕೆಂದು ಶಿಷ್ಯರು ಆಲೋಚಿಸಿದರು.
6:38 o56u ಈಗಾಗಲೇ ಶಿಷ್ಯರ ಬಳಿ ಯಾವ ಆಹಾರವಿತ್ತು? ಈಗಾಗಲೇ ಶಿಷ್ಯರ ಬಳಿ ಐದು ರೊಟ್ಟಿಗಳು ಮತ್ತು ಎರಡು ಮೀನುಗಳು ಇದ್ದವು.
6:41 bqyw ರೊಟ್ಟಿಗಳನ್ನು ಮತ್ತು ಮೀನನ್ನು ತೆಗೆದುಕೊಂಡು ಯೇಸು ಏನು ಮಾಡಿದನು? ರೊಟ್ಟಿಗಳನ್ನು ಮತ್ತು ಮೀನನ್ನು ತೆಗೆದುಕೊಂಡು, ಯೇಸು ಪರಲೋಕದ ಕಡೆಗೆ ನೋಡಿ, ರೊಟ್ಟಿಗಳನ್ನು ಆಶೀರ್ವದಿಸಿ ಮುರಿದು, ಆತನ ಶಿಷ್ಯರಿಗೆ ಕೊಟ್ಟನು.
6:43 zbvh ಎಲ್ಲರೂ ಊಟ ಮಾಡಿದ ನಂತರ ಎಷ್ಟು ಊಟ ಉಳಿದಿತ್ತು? ಎಲ್ಲರೂ ಊಟ ಮಾಡಿದ ನಂತರ 12 ಪುಟ್ಟಿಗಳಷ್ಟು ರೊಟ್ಟಿ, ಮತ್ತು ಮೀನಿನ ತುಂಡುಗಳು ಉಳಿದಿತ್ತು.
6:44 yrio ಎಷ್ಟು ಮಂದಿ ಪುರುಷರಿಗೆ ಊಟ ಬಡಿಸಲಾಯಿತು? 5,000 ಮಂದಿ ಪುರುಷರಿಗೆ ಊಟ ಬಡಿಸಲಾಯಿತು.
6:48 uxae ಸರೋವರದ ಮೇಲೆ ಯೇಸು ಶಿಷ್ಯರ ಬಳಿಗೆ ಹೇಗೆ ಬಂದನು? ಯೇಸು ಸರೋವರದ ಮೇಲೆ ನಡೆದುಕೊಂಡು ಶಿಷ್ಯರ ಬಳಿಗೆ ಬಂದನು.
6:50 j2xz ಅವರು ಆತನನ್ನು ನೋಡಿದಾಗ ಯೇಸು ಶಿಷ್ಯರಿಗೆ ಏನೆಂದು ಹೇಳಿದನು? ಯೇಸು ಶಿಷ್ಯರಿಗೆ ಧೈರ್ಯವಾಗಿರಿ ಭಯಪಡಬೇಡಿರಿ ಎಂದು ಹೇಳಿದನು.
6:52 icdc ರೊಟ್ಟಿಗಳಿಂದ ಆದ ಅದ್ಬುತವನ್ನು ಶಿಷ್ಯರು ಯಾಕೆ ಅರ್ಥಮಾಡಿಕೊಳ್ಳಲಿಲ್ಲ? ರೊಟ್ಟಿಗಳಿಂದ ಆದ ಅದ್ಬುತವನ್ನು ಶಿಷ್ಯರು ಅರ್ಥಮಾಡಿಕೊಳ್ಳಲಿಲ್ಲ ಯಾಕೆಂದರೆ ಅರ್ಥಮಾಡಿಕೊಳ್ಳಲು ಅವರ ಮನಸ್ಸುಗಳು ತುಂಬಾ ಮಂದವಾಗಿದ್ದವು.
6:55 qidu ಆ ಪ್ರದೇಶದ ಜನರು ಯೇಸುವನ್ನು ಗುರುತಿಸಿದ ಮೇಲೆ ಏನು ಮಾಡಿದರು? ಯೇಸು ಎಲ್ಲೆಲ್ಲಿಗೆ ಬರುತ್ತಿದ್ದಾನೆ ಎಂದು ಕೇಳಿಸಿಕೊಂಡ ಜನರು ರೋಗಿಗಳನ್ನು ಡೋಲಿಗಳಲ್ಲಿ ಕರೆದುಕೊಂಡು ಬರುತ್ತಿದ್ದರು.
6:56 nkto ಯೇಸುವಿನ ಬಟ್ಟೆಯ ಗೊಂಡೆಯನ್ನು ಮುಟ್ಟಿದವರಿಗೆ ಏನಾಯಿತು? ಯೇಸುವಿನ ಬಟ್ಟೆಯ ಗೊಂಡೆಯನ್ನು ಮುಟ್ಟಿದವರು ಸ್ವಸ್ಥರಾದರು.
7:2 t05x ಯೇಸುವಿನ ಕೆಲವು ಶಿಷ್ಯರು ಫರಿಸಾಯರು ಮತ್ತು ಶಾಸ್ತ್ರಿಗಳು ಬೇಸರಗೊಳ್ಳುವಂತೆ ಏನು ಮಾಡಿದರು? ಕೆಲವು ಶಿಷ್ಯರು ಕೈಗಳನ್ನು ತೊಳೆಯದೆ ಊಟ ಮಾಡುತ್ತಿದ್ದರು.
7:3-4 ym0v ಊಟ ಮಾಡುವ ಮೊದಲು ಕೈಗಳನ್ನು, ಲೋಟಗಳನ್ನು, ಚೊಂಬುಗಳನ್ನು, ಮತ್ತು ತಾಮ್ರದ ಪಾತ್ರೆಗಳನ್ನು ತೊಳೆಯುವುದು ಯಾರ ಸಂಪ್ರದಾಯವಾಗಿತ್ತು? ಊಟ ಮಾಡುವ ಮೊದಲು ಕೈಗಳನ್ನು, ಲೋಟಗಳನ್ನು, ಚೊಂಬುಗಳನ್ನು, ಮತ್ತು ತಾಮ್ರದ ಪಾತ್ರೆಗಳನ್ನು ತೊಳೆಯುವುದು ಹಿರಿಯರ ಸಂಪ್ರದಾಯವಾಗಿತ್ತು
7:8-9 qrmr ತೊಳೆಯುವ ವಿಷಯದ ಬಗ್ಗೆ ಫರಿಸಾಯರು ಮತ್ತು ಶಾಸ್ತ್ರಿಗಳ ಉಪದೇಶದ ಬಗ್ಗೆ ಯೇಸು ಏನು ಹೇಳಿದನು? ಯೇಸು ಫರಿಸಾಯರು ಮತ್ತು ಶಾಸ್ತ್ರಿಗಳು ಪುರುಷರಿಗೆ ದೇವರ ಆಜ್ಞೆಯನ್ನು ಬಿಟ್ಟು ಮನುಷ್ಯರು ಕಲ್ಪಿಸಿದ ನಿಯಮವನ್ನು ಹಿಡಿದಿದ್ದೀರಿ ಎಂದು ಹೇಳಿದನು.
7:11-13 d1yr ನಿಮ್ಮ ತಂದೆ ಮತ್ತು ತಾಯಿಯನ್ನು ಸನ್ಮಾನಿಸಿರಿ ಎಂದು ದೇವರು ಕೊಟ್ಟ ಆಜ್ಞೆಯನ್ನು ಫರಿಸಾಯರು ಮತ್ತು ಶಾಸ್ತ್ರಿಗಳು ಹೇಗೆ ಅಲ್ಲಗಳೆದರು? ಅವರು ತಮ್ಮ ತಂದೆ ತಾಯಿಗೆ ಸಹಾಯಕವಾಗುವಂತೆ ಕೊಡುವ ಹಣವನ್ನು ಕೊರ್ಬಾನಿನಂತೆ ಕೊಡಬೇಕೆಂದು ಜನರಿಗೆ ಹೇಳುತ್ತಾ ದೇವರ ಆಜ್ಞೆಯನ್ನು ಅಲ್ಲಗಳೆದರು.
7:15 nqfn ಒಬ್ಬ ವ್ಯಕ್ತಿಯನ್ನು ಯಾವುದು ಮಲಿನ ಮಾಡುವುದಿಲ್ಲ ಎಂದು ಯೇಸು ಹೇಳಿದನು? ಒಬ್ಬ ವ್ಯಕ್ತಿಯ ಹೊರಗಿನಿಂದ ಬರುವುದು ಅವನೊಳಗೆ ಹೋಗಿ ಅವನನ್ನು ಮಲಿನ ಮಾಡುವುದಿಲ್ಲವೆಂದು ಯೇಸು ಹೇಳಿದನು.
7:15 l384 ಒಬ್ಬ ವ್ಯಕ್ತಿಯನ್ನು ಏನು ಮಲಿನ ಮಾಡುತ್ತದೆಂದು ಯೇಸು ಹೇಳಿದನು? ಒಬ್ಬ ವ್ಯಕ್ತಿಯಿಂದ ಹೊರಗೆ ಬರುವಂಥದ್ದು ಅವನನ್ನು ಮಲಿನ ಮಾಡುತ್ತದೆಂದು ಯೇಸು ಹೇಳಿದನು.
7:18-19 gvrq ಒಬ್ಬ ವ್ಯಕ್ತಿಯನ್ನು ಏನು ಮಲಿನ ಮಾಡುವುದಿಲ್ಲವೆಂದು ಯೇಸು ಹೇಳಿದನು? ಒಬ್ಬ ವ್ಯಕ್ತಿಯ ಹೊರಗಿರುವಂಥದ್ದು ಅವನನ್ನು ಮಲಿನ ಮಾಡುವುದಿಲ್ಲವೆಂದು ಯೇಸು ಹೇಳಿದನು.
7:19 yf7h ಯಾವ ರೀತಿಯ ಆಹಾರಗಳು ಶುದ್ದವಾದವೆಂದು ಯೇಸು ಹೇಳಿದನು? ಎಲ್ಲಾ ಆಹಾರಗಳು ಶುದ್ದವಾದವೆಂದು ಯೇಸು ಹೇಳಿದನು.
7:20-23 w1ic ಒಬ್ಬ ವ್ಯಕ್ತಿಯನ್ನು ಏನು ಮಲಿನ ಮಾಡುತ್ತದೆಂದು ಯೇಸು ಹೇಳಿದನು? ಒಬ್ಬ ವ್ಯಕ್ತಿಯಿಂದ ಹೊರರ ಬರುವಂಥದ್ದು ಅವನನ್ನು ಮಲಿನ ಮಾಡುತ್ತದೆಂದು ಯೇಸು ಹೇಳಿದನು.
7:21-22 t1rz ಒಬ್ಬ ಮನುಷ್ಯನನ್ನು ಮಲಿನ ಮಾಡಲು ಅವನೊಳಗಿನಿಂದ ಬರುವಂಥ ವಿಷಯಗಳು ಯಾವುವು ಎಂದು ಯೇಸು ಹೇಳಿದನು? ದುರಾಲೋಚನೆಗಳು, ಲೈಂಗಿಕ ಅನೈತಿಕತೆ, ಕಳ್ಳತನ, ಕೊಲೆ, ಹಾದರ, ದ್ರವ್ಯಾಶೆ, ಕೆಡಕುತನ, ಮೋಸ, ಬಂಡುತನ, ಹೊಟ್ಟೆಕಿಚ್ಚು, ಬೈಗುಳ, ಸೊಕ್ಕು, ಮತ್ತು ಬುದ್ದಿಗೇಡುತನಗಳು ಒಬ್ಬ ವ್ಯಕ್ತಿಯೊಳಗಿಂದ ಬಂದು ಅವನನ್ನು ಮಲಿನಗೊಳಿಸುತ್ತದೆಂದು ಯೇಸು ಹೇಳಿದನು.
7:25-26 y2wf ದೆವ್ವ ಹಿಡಿದಿದ್ದ ಹುಡುಗಿಯ ತಾಯಿಯು ಯೆಹೂದ್ಯಳೋ ಅಥವಾ ಗ್ರೀಕಳೋ? ದೆವ್ವ ಹಿಡಿದಿದ್ದ ಹುಡುಗಿಯ ತಾಯಿಯು ಗ್ರೀಕಿನವಳಾಗಿದಳು?
7:28 q2o4 ಮಕ್ಕಳ ರೊಟ್ಟಿಗಳನ್ನು ತೆಗೆದುಕೊಂಡು ನಾಯಿಗಳಿಗೆ ಹಾಕುವುದು ಸರಿಯಲ್ಲವೆಂದು ಯೇಸು ಆಕೆಗೆ ಹೇಳಿದಾಗ ಆ ಹೆಂಗಸು ಹೇಗೆ ಪ್ರತಿಕ್ರಿಯಿಸಿದಳು? ಆ ಹೆಂಗಸು ಮೇಜಿನ ಕೆಳಗಿರುವ ನಾಯಿಗಳೂ ಕೂಡ ಮಕ್ಕಳು ತಿಂದು ಬಿಟ್ಟ ರೊಟ್ಟಿಯ ಚೂರುಗಳನ್ನು ತಿನ್ನುತ್ತವೆಂದು ಹೇಳಿದಳು.
7:29-30 nb1x ಯೇಸು ಆ ಹೆಂಗಸಿಗಾಗಿ ಏನು ಮಾಡಿದನು? ಯೇಸು ಆ ಹೆಂಗಸಿನ ಮಗಳಲ್ಲಿದ್ದ ದೆವ್ವವನ್ನು ಬಿಡಿಸಿದನು.
7:33-34 ca4d ಕಿವುಡು ಮತ್ತು ಮಾತನಾಡುವ ತೊಂದರೆ ಇದ್ದ ಮನುಷ್ಯನನ್ನು ಯೇಸುವಿನ ಬಳಿ ಕರೆದು ತಂದಾಗ, ಅವನನ್ನು ಸ್ವಸ್ಥಮಾಡಲು ಆತನು ಏನು ಮಾಡಿದನು? ಯೇಸು ತನ್ನ ಬೆರಳುಗಳನ್ನು ಮನುಷ್ಯನ ಕಿವಿಯೊಳಗೆ ಇಟ್ಟು, ಉಗುಳಿ, ಅವನ ನಾಲಿಗೆಯನ್ನು ಮುಟ್ಟಿ, ನಂತರ ಪರಲೋಕದ ಕಡೆಗೆ ನೋಡಿ, “ತೆರೆಯಲ್ಪಡಲಿ!” ಎಂದು ಹೇಳಿದನು.
7:36 hc18 ಆತನು ಮಾಡಿದಂತ ಸ್ವಸ್ಥತೆಗಳ ಬಗ್ಗೆ ಹೇಳಬಾರದೆಂದು ಯೇಸು ಅವರಿಗೆ ಹೇಳಿದಾಗ ಜನರು ಏನು ಮಾಡಿದರು? ಯೇಸು ಅವರಿಗೆ ಸುಮ್ಮನೆ ಇರಬೇಕೆಂದು ಹೆಚ್ಚಾಗಿ ಆಜ್ಞಾಪಿಸಿದರೂ, ಅವರುಗಳು ಅದರ ಬಗ್ಗೆ ಹೆಚ್ಚಾಗಿ ಮಾತನಾಡುತ್ತಿದ್ದರು.
8:1-2 slgu ಯೇಸು ತನ್ನನ್ನು ಹಿಂಬಾಲಿಸುತ್ತಿದ್ದ ದೊಡ್ಡ ಜನರ ಗುಂಪಿನ ಬಗ್ಗೆ ಕಾಳಜಿಯಿಂದ ಏನು ಹೇಳಿದನು? ಯೇಸು ತನ್ನ ಹಿಂಬಾಲಿಸುತ್ತಿದ್ದ ದೊಡ್ಡ ಜನರಗುಂಪಿಗೆ ಊಟಕ್ಕೆ ಏನೂ ಇಲ್ಲವೆಂದು ಕಾಳಜಿಯಿಂದ ಹೇಳಿದನು.
8:5 s9oj ಶಿಷ್ಯರ ಬಳಿ ಎಷ್ಟು ರೊಟ್ಟಿಗಳಿದ್ದವು? ಶಿಷ್ಯರ ಬಳಿಯಲ್ಲಿ ಏಳು ರೊಟ್ಟಿಗಳಿದ್ದವು.
8:6 y5p3 ಶಿಷ್ಯರ ಬಳಿಯಿದ್ದ ರೊಟ್ಟಿಗಳನ್ನು ಯೇಸು ಏನು ಮಾಡಿದನು? ಯೇಸು ಕೃತಜ್ಞತಾ ಸ್ತುತಿ ಸಲ್ಲಿಸಿ, ರೊಟ್ಟಿಗಳನ್ನು ಮುರಿದು, ಅದನ್ನು ಹಂಚುವಂತೆ ಶಿಷ್ಯರಿಗೆ ಕೊಟ್ಟನು.
8:8 ckyo ಎಲ್ಲರೂ ಊಟ ಮಾಡಿದ ನಂತರ ಎಷ್ಟು ಊಟ ಉಳಿದಿತ್ತು? ಎಲ್ಲರೂ ಊಟ ಮಾಡಿದ ನಂತರ ಏಳು ಪುಟ್ಟಿಗಳಷ್ಟು ರೊಟ್ಟಿಗಳು ಉಳಿದಿದ್ದವು.
8:9 h9sm ಎಷ್ಟು ಜನರು ಊಟ ಮಾಡಿ ತೃಪ್ತರಾದರು? ಸುಮಾರು 4,000 ಮಂದಿ ಗಂಡಸರು ಊಟಮಾಡಿ ತೃಪ್ತರಾದರು.
8:11 bo9w ಆತನನ್ನು ಪರೀಕ್ಷಿಸಲು, ಯೇಸು ಏನು ಮಾಡಬೇಕೆಂದು ಫರಿಸಾಯರು ಬಯಸಿದರು? ಯೇಸು ಪರಲೋಕದಿಂದ ಒಂದು ಸೂಚಕಕಾರ್ಯವನ್ನು ಮಾಡುವಂತೆ ಫರಿಸಾಯರು ಬಯಸಿದ್ದರು.
8:15 jt3x ಫರಿಸಾಯರ ವಿಚಾರವಾಗಿ ಯೇಸು ಶಿಷ್ಯರಿಗೆ ಯಾವುದರ ಬಗ್ಗೆ ಎಚ್ಚರಿಸಿದನು? ಫರಿಸಾಯರ ಹುಳಿಹಿಟ್ಟಿನ ವಿಷಯವಾಗಿ ಎಚ್ಚರಿಕೆಯಾಗಿರಬೇಕೆಂದು ಯೇಸು ಶಿಷ್ಯರಿಗೆ ಹೇಳಿದನು.
8:16 fjm2 ಯೇಸು ಯಾವುದರ ಬಗ್ಗೆ ಮಾತನಾಡುತ್ತಿದ್ದಾನೆಂದು ಶಿಷ್ಯರು ಆಲೋಚಿಸಿದರು? ಅವರು ರೊಟ್ಟಿಯನ್ನು ತರಲು ಮರೆತಿರುವುದರ ಬಗ್ಗೆ ಯೇಸು ಮಾತನಾಡುತ್ತಿದ್ದಾನೆಂದು ಶಿಷ್ಯರು ಆಲೋಚಿಸಿದರು.
8:19 nrwx ಯೇಸು ಐದು ರೊಟ್ಟಿಯ ತುಂಡುಗಳನ್ನು ಮುರಿದಾಗ ಏನು ನಡೆಯಿತೆಂದು ಯೇಸು ಶಿಷ್ಯರನ್ನು ನೆನಪಿಸಿದನು? ಆತನು ಐದು ರೊಟ್ಟಿಗಳನ್ನು ಮುರಿದಾಗ, 5,000 ಜನರಿಗೆ ಊಟ ಬಡಿಸಿದನು ಮತ್ತು ಮುರಿದ ತುಂಡುಗಳನ್ನು 12 ಪುಟ್ಟಿಗಳಷ್ಟು ಒಟ್ಟುಗೂಡಿಸಲಾಯಿತೆಂದು ಯೇಸು ಅವರಿಗೆ ನೆನಪಿಸಿದನು.
8:23 lkdf ಕುರುಡನಿಗೆ ಕಣ್ಣು ಕಾಣಿಸುವ ಹಾಗೆ ಮಾಡಲು ಯೇಸು ಮೊದಲು ಯಾವ ಎರಡು ಕಾರ್ಯವನ್ನು ಮಾಡಿದನು? ಮೊದಲು ಯೇಸು ಅವನ ಕಣ್ಣುಗಳ ಮೇಲೆ ಉಗುಳಿ, ಅವನ ಮೇಲೆ ತನ್ನ ಕೈಗಳನ್ನಿಟ್ಟನು.
8:25 w8lo ಆ ಕುರುಡನಿಗೆ ಪೂರ್ಣವಾಗಿ ಕಣ್ಣು ಕಾಣುವ ಹಾಗೆ ಯೇಸು ಯಾವ ಮೂರನೆಯ ಕಾರ್ಯವನ್ನು ಮಾಡಿದನು? ಯೇಸು ತಿರುಗಿ ಅವನ ಕಣ್ಣುಗಳ ಮೇಲೆ ತನ್ನ ಕೈಗಳನ್ನಿಟ್ಟನು.
8:28 scql ಜನರು ಯೇಸುವನ್ನು ಯಾರೆಂದು ಹೇಳುತ್ತಿದ್ದರು? ಜನರು ಯೇಸುವನ್ನು ಸ್ನಾನಿಕನಾದ ಯೋಹಾನನು, ಎಲೀಯನು, ಅಥವಾ ಪ್ರವಾದಿಗಳಲ್ಲಿ ಒಬ್ಬನು ಎಂದು ಹೇಳುತ್ತಿದ್ದರು.
8:29 pf6h ಪೇತ್ರನು ಯೇಸುವನ್ನು ಯಾರೆಂದು ಹೇಳಿದನು? ಯೇಸು ಕ್ರಿಸ್ತನೆಂದು ಪೇತ್ರನು ಹೇಳಿದನು.
8:31 ssr3 ಮುಂದೆ ಆಗುವಂತ ಯಾವ ಘಟನೆಗಳ ಬಗ್ಗೆ ಯೇಸು ಸ್ಪಷ್ಟವಾಗಿ ಆತನ ಶಿಷ್ಯರಿಗೆ ಬೋಧಿಸಲು ಪ್ರಾರಂಭಿಸಿದನು? ಯೇಸು ಆತನ ಶಿಷ್ಯರಿಗೆ ಮನುಷ್ಯ ಕುಮಾರನು ಸಂಕಟನ್ನು ಅನುಭವಿಸಿ, ತಿರಸ್ಕರಿಸಲ್ಪಡಬೇಕು, ಕೊಲ್ಲಲ್ಪಡಬೇಕು, ಮತ್ತು ಮೂರು ದಿನಗಳ ನಂತರ ಎದ್ದೇಳಬೇಕೆಂದು ಬೋಧಿಸಿದನು.
8:33 o8md ಪೇತ್ರನು ಯೇಸುವನ್ನು ಗದರಿಸಲು ಪ್ರಾರಂಭಿಸಿದಾಗ ಯೇಸು ಏನೆಂದು ಹೇಳಿದನು? ಯೇಸು ಪೇತ್ರನಿಗೆ, “ಸೈತಾನನೇ, ನನ್ನ ಮುಂದೆ ನಿಲ್ಲಬೇಡ! ನಡೆ, ನಿನ್ನ ಯೋಚನೆ ಮನುಷ್ಯರ ಯೋಚನೆಯೇ ಹೊರತು ದೇವರದಲ್ಲ" ಎಂದು ಹೇಳಿದನು.
8:34 vqyx ಯಾರಾದರೂ ತನ್ನನ್ನು ಹಿಂಬಾಲಿಸಬೇಕಾದರೆ ಅವರು ಏನು ಮಾಡಬೇಕೆಂದು ಯೇಸು ಹೇಳಿದನು? ಯಾರಾದರೂ ತನ್ನನ್ನು ಹಿಂಬಾಲಿಸಬೇಕಾದರೆ ಅವರು ತಮ್ಮನ್ನು ತಾವೇ ಅಲ್ಲಗಳೆಯಬೇಕು, ತನ್ನ ಶಿಲುಬೆಯನ್ನು ಹೊತ್ತುಕೊಂಡು, ತನ್ನನ್ನು ಹಿಂಬಾಲಿಸಬೇಕು ಎಂದು ಯೇಸು ಹೇಳಿದನು.
8:36 eosc ಒಬ್ಬ ವ್ಯಕ್ತಿಯು ಲೋಕದ ವಸ್ತುಗಳನ್ನು ಪಡೆದುಕೊಳ್ಳುವ ಬಯಕೆಯ ಬಗ್ಗೆ ಯೇಸು ಏನು ಹೇಳಿದನು? ಯೇಸು, “ಒಬ್ಬ ಮನುಷ್ಯನು ಲೋಕವನ್ನೆಲ್ಲಾ ಸಂಪಾದಿಸಿಕೊಂಡರೂ ಪ್ರಾಣ ನಷ್ಟಪಟ್ಟರೆ ಅವನಿಗೆ ಪ್ರಯೋಜನವೇನು?” ಎಂದು ಹೇಳಿದನು.
8:38 fczm ಯೇಸುವಿನ ಬಗ್ಗೆ ಮತ್ತು ಆತನ ಮಾತುಗಳ ಬಗ್ಗೆ ನಾಚಿಕೆ ಪಡುವವರ ಬಗ್ಗೆ ಯೇಸು ಏನು ಹೇಳಿದನು? ಯೇಸು ತನ್ನ ಬರೋಣದಲ್ಲಿ ತನ್ನನ್ನೂ ತನ್ನ ಮಾತುಗಳನ್ನೂ ನೋಡಿ ನಾಚಿಕೆಪಡುವವರನ್ನು ನಾಚಿಕೆಗೆ ಒಳಪಡಿಸುವನೆಂದು ಹೇಳಿದನು.
9:1 ryud ದೇವರ ರಾಜ್ಯವು ಶಕ್ತಿಯಿಂದ ಬರುವುದನ್ನು ಯಾರು ನೋಡುವರು ಎಂದು ಯೇಸು ಹೇಳಿದನು? ಯೇಸುವಿನೊಂದಿಗೆ ಅಲ್ಲಿ ನಿಂತಿದ್ದ ಕೆಲವರು ದೇವರ ರಾಜ್ಯವು ಶಕ್ತಿಯಿಂದ ಬರುವುದನ್ನು ನೋಡುವವರೆಗೂ ಅವರು ಸಾಯುವುದಿಲ್ಲ ಎಂದನು.
9:2-3 j5nw ಯೇಸುವಿನೊಂದಿಗೆ ಪೇತ್ರ, ಯಾಕೋಬ, ಯೋಹಾನರು ಎತ್ತರವಾದ ಬೆಟ್ಟಕ್ಕೆ ಹೋದಾಗ ಯೇಸುವಿಗೆ ಏನಾಯಿತು? ಯೇಸುವಿನ ರೂಪವು ಬದಲಾಯಿತು ಮತ್ತು ಆತನ ಉಡುಪುಗಳು ಬೆಳ್ಳಗೆ ಮಿನುಗುತ್ತಿದ್ದವು.
9:4 hssp ಬೆಟ್ಟದ ಮೇಲೆ ಯೇಸುವಿನೊಂದಿಗೆ ಯಾರು ಮಾತನಾಡುತ್ತಿದ್ದರು? ಎಲೀಯನೂ ಮೋಶೆಯೂ ಯೇಸುವಿನೊಂದಿಗೆ ಮಾತನಾಡುತ್ತಿದ್ದರು.
9:7 gnw6 ಬೆಟ್ಟದ ಮೇಲೆ, ಮೋಡದೊಳಗಿನಿಂದ ಬಂದ ಸ್ವರವು ಏನೆಂದು ಹೇಳಿತು? ಆ ಸ್ವರವು, “ಈತನು ನನ್ನ ಪ್ರಿಯ ಮಗನು. ಆತನ ಮಾತನ್ನು ಕೇಳಿರಿ” ಎಂದು ಹೇಳಿತು.
9:9 wh06 ಬೆಟ್ಟದ ಮೇಲೆ ಅವರು ನೋಡಿದ್ದರ ಬಗ್ಗೆ ಯೇಸು ಶಿಷ್ಯರಿಗೆ ಏನೆಂದು ಆಜ್ಞಾಪಿಸಿದನು? ಮನುಷ್ಯ ಕುಮಾರನು ಮರಣದಿಂದ ಎದ್ದು ಬರುವವರೆಗೂ ಅವರು ನೋಡಿದ್ದನ್ನು ಯಾರಿಗೂ ಹೇಳಬಾರದೆಂದು ಯೇಸು ಅವರಿಗೆ ಆಜ್ಞಾಪಿಸಿದನು.
9:11-13 ct8y ಎಲೀಯನ ಬರುವಿಕೆಯ ಬಗ್ಗೆ ಯೇಸು ಏನೆಂದು ಹೇಳಿದನು? ಎಲೀಯನು ಮೊದಲು ಬಂದು ಎಲ್ಲವನ್ನು ಪುನ:ಸ್ಥಾಪಿಸುತ್ತಾನೆ, ಮತ್ತು ಎಲೀಯನು ಈಗಾಗಲೇ ಬಂದಿದ್ದಾನೆ ಎಂದು ಯೇಸು ಹೇಳಿದನು.
9:17-18 tzbr ತಂದೆ ಮತ್ತು ಅವನ ಮಗನಿಗೆ ಶಿಷ್ಯರು ಏನನ್ನು ಮಾಡಲು ಆಗಲಿಲ್ಲ? ಆ ತಂದೆಯ ಮಗನಿಂದ ದುರಾತ್ಮವನ್ನು ಬಿಡಿಸಲು ಶಿಷ್ಯರಿಗೆ ಆಗಲಿಲ್ಲ.
9:22 ifim ದುರಾತ್ಮವು ಆ ಹುಡುಗನನ್ನು ಬಿಳಿಸಿ ಅವನನ್ನು ನಾಶಮಾಡುವುದಕ್ಕಾಗಿ ಏನು ಮಾಡಿತು? ದುರಾತ್ಮವು ಆ ಹುಡುಗನನ್ನು ಬೆಂಕಿಯ ಒಳಗೆ ಅಥವಾ ನೀರಿನ ಒಳಗೆ ಬಿಳಿಸಿ ಅವನನ್ನು ನಾಶಮಾಡಲು ಪ್ರಯತ್ನಿಸಿತು.
9:23-24 ay7z ಯಾರು ನಂಬುತ್ತಾರೋ ಅವರಿಗೆ ಎಲ್ಲವೂ ಸಾಧ್ಯವೆಂದು ಯೇಸು ಹೇಳಿದಾಗ ತಂದೆಯು ಹೇಗೆ ಪ್ರತಿಕ್ರಿಯಿಸಿದನು? “ನಾನು ನಂಬುತ್ತೇನೆ! ನನ್ನ ಅಪನಂಬಿಕೆಗೆ ಸಹಾಯ ಮಾಡಿ!” ಎಂದು ತಂದೆಯು ಪ್ರತಿಕ್ರಿಯಿಸಿದನು.
9:28-29 uh6o ಹುಡುಗನ ಒಳಗೆ ಇದ್ದ ಮೂಕ ಮತ್ತು ಕಿವುಡು ಆತ್ಮವನ್ನು ಶಿಷ್ಯರಿಂದ ಬಿಡಿಸಲು ಯಾಕೆ ಆಗಲಿಲ್ಲ? ಶಿಷ್ಯರಿಂದ ಆತ್ಮವನ್ನು ಬಿಡಿಸಲು ಸಾಧ್ಯವಾಗಲಿಲ್ಲ ಯಾಕೆಂದರೆ ಪ್ರಾರ್ಥನೆಯಿಂದ ಹೊರತು ಮತ್ತಾವುದರಿಂದಲೂ ಅದನ್ನು ಬಿಡಿಸಲು ಆಗುವುದಿಲ್ಲ.
9:31 uvpd ಆತನಿಗೆ ಏನಾಗುತ್ತದೆ ಎಂದು ಯೇಸು ತನ್ನ ಶಿಷ್ಯರಿಗೆ ಹೇಳಿದನು? ತನ್ನನ್ನು ಮರಣಕ್ಕೆ ಕೊಲ್ಲಲ್ಲುವರು, ಆಮೇಲೆ ಮೂರು ದಿನಗಳ ನಂತರ ತಾನು ತಿರುಗಿ ಎದ್ದು ಬರುವೆನು ಎಂದು ಯೇಸು ಅವರಿಗೆ ಹೇಳಿದನು.
9:33-34 q8mj ದಾರಿಯುದ್ದಕ್ಕೂ ಶಿಷ್ಯರು ಯಾವುದರ ಬಗ್ಗೆ ವಾದ ಮಾಡುತ್ತಿದ್ದರು? ಅವರುಗಳೊಳಗೆ ಯಾರು ದೊಡ್ಡವರು ಎಂಬುದರ ಬಗ್ಗೆ ಶಿಷ್ಯರು ವಾದ ಮಾಡುತ್ತಿದ್ದರು.
9:35 xnwc ಯಾರು ಮೊದಲಿನವರು ಎಂದು ಯೇಸು ಹೇಳಿದನು? ಎಲ್ಲರಿಗೂ ಸೇವಕನಾದವನೇ ಮೊದಲಿನವನು ಎಂದು ಯೇಸು ಹೇಳಿದನು.
9:36-37 d095 ಯಾರಾದರೂ ಯೇಸುವಿನ ಹೆಸರಿನಲ್ಲಿ ಒಂದು ಚಿಕ್ಕ ಮಗುವನ್ನು ಸ್ವೀಕರಿಸಿದರೆ, ಅವರು ಯಾರನ್ನು ಸ್ವೀಕರಿಸಿದಂತೆ ಆಗುತ್ತದೆ? ಯಾರಾದರೂ ಯೇಸುವಿನ ಹೆಸರಿನಲ್ಲಿ ಒಂದು ಚಿಕ್ಕ ಮಗುವನ್ನು ಸ್ವೀಕರಿಸಿದರೆ, ಅವರೂ ಯೇಸುವನ್ನು ಮತ್ತು ಯೇಸುವನ್ನು ಕಳುಹಿಸಿಕೊಟ್ಟವನನ್ನು ಸ್ವೀಕರಿಸಿದಂತೆ ಆಗುವುದು.
9:42 xm92 ಯೇಸುವನ್ನು ನಂಬುವ ಚಿಕ್ಕವನನ್ನು ಎಡವಿಬೀಳುವಂತೆ ಮಾಡುವವನಿಗೆ ಉತ್ತಮವಾದದು ಯಾವುದು? ಅವನ ಕುತ್ತಿಗೆಯ ಸುತ್ತಲೂ ಬೀಸುವ ಕಲ್ಲನ್ನು ಕಟ್ಟಿ ಅವನನ್ನು ಸಮುದ್ರಕ್ಕೆ ಎಸೆಯುವುದೇ ಉತ್ತಮವಾದದು.
9:47 qvrv ನಿಮ್ಮ ಕಣ್ಣು ನಿಮ್ಮನ್ನು ಎಡವುವಂತೆ ಮಾಡಿದರೆ ಏನು ಮಾಡಬೇಕೆಂದು ಯೇಸು ಹೇಳಿದನು? ನಿಮ್ಮ ಕಣ್ಣು ನಿಮ್ಮನ್ನು ಎಡವುವಂತೆ ಮಾಡಿದರೆ ನಿಮ್ಮ ಕಣ್ಣನ್ನು ಕಿತ್ತು ಬಿಸಾಡಿರಿ ಎಂದು ಯೇಸು ಹೇಳಿದನು.
9:48 l2p2 ನರಕದಲ್ಲಿ ಏನಾಗುತ್ತದೆ ಎಂದು ಯೇಸು ಹೇಳಿದನು? ನರಕದಲ್ಲಿ ಹುಳಗಳು ಸಾಯುವುದಿಲ್ಲ, ಮತ್ತು ಬೆಂಕಿಯು ಆರಿ ಹೋಗುವುದಿಲ್ಲ ಎಂದು ಯೇಸು ಹೇಳಿದನು.
10:2 tk8r ಯೇಸುವನ್ನು ಪರೀಕ್ಷಿಸಲು ಫರಿಸಾಯರು ಆತನನ್ನು ಯಾವ ಪ್ರಶ್ನೆಯನ್ನು ಕೇಳಿದರು? ಗಂಡನು ತನ್ನ ಹೆಂಡತಿಗೆ ವಿಚ್ಚೇದನ ಕೊಡುವುದು ಶಾಸ್ತ್ರಸಮ್ಮತವೋ ಎಂದು ಫರಿಸಾಯರು ಯೇಸುವನ್ನು ಕೇಳಿದರು.
10:4 p0nl ವಿಚ್ಚೇದನದ ವಿಷಯವಾಗಿ ಮೋಶೆಯು ಯೆಹೂದ್ಯರಿಗೆ ಕೊಟ್ಟ ಆಜ್ಞೆ ಏನು? ಒಬ್ಬ ಮನುಷ್ಯನು ವಿಚ್ಚೇದನದ ಪತ್ರವನ್ನು ಬರೆದು ಕೊಟ್ಟು ಆಮೇಲೆ ಅವನ ಹೆಂಡತಿಯನ್ನು ಕಳುಹಿಸಬಿಡುವುದಕ್ಕೆ ಮೋಶೆಯು ಅವಕಾಶ ಕೊಟ್ಟನು.
10:5 cuwg ವಿಚ್ಚೇದನದ ವಿಷಯವಾಗಿ ಮೋಶೆಯು ಯೆಹೂದ್ಯರಿಗೆ ಏಕೆ ಈ ಆಜ್ಞೆಯನ್ನು ಕೊಟ್ಟನು? ಅವರ ಹೃದಯಗಳು ಕಠಿಣವಾಗಿದ್ದರಿಂದ ವಿಚ್ಚೇದನದ ವಿಷಯವಾಗಿ ಮೋಶೆಯು ಯೆಹೂದ್ಯರಿಗೆ ಈ ಆಜ್ಞೆಯನ್ನು ಕೊಟ್ಟನು
10:6 b18w ವಿವಾಹದ ಮೂಲ ಸಂಕಲ್ಪದ ಬಗ್ಗೆ ಯೇಸು ಫರಿಸಾಯರಿಗೆ ಹೇಳುವಾಗ ಯಾವ ಐತಿಹಾಸಿಕ ಘಟನೆಯನ್ನು ಉಲ್ಲೇಖಿಸಿದನು? ಯೇಸು ವಿವಾಹದ ಕುರಿತಾದ ದೇವರ ಮೂಲ ಸಂಕಲ್ಪದ ಬಗ್ಗೆ ಹೇಳುವಾಗ ಆದಿಯಲ್ಲಿ ಗಂಡು ಮತ್ತು ಹೆಣ್ಣಿನ ಸೃಷ್ಟಿಯ ಬಗ್ಗೆ ಉಲ್ಲೇಖಿಸಿದನು.
10:7-8 lkz2 ಗಂಡು ಮತ್ತು ಹೆಣ್ಣು ಇಬ್ಬರೂ ವಿವಾಹವಾದಾಗ ಏನು ಆಗುತ್ತಾರೆಂದು ಯೇಸು ಹೇಳಿದನು? ಇಬ್ಬರೂ ಒಂದೇ ದೇಹವಾಗುವರು ಎಂದು ಯೇಸು ಹೇಳಿದನು.
10:9 bxgt ವಿವಾಹ ಕಾರ್ಯದಲ್ಲಿ ದೇವರು ಏನನ್ನು ಒಟ್ಟುಗೂಡಿಸಿದ್ದಾನೆಂದು ಯೇಸು ಹೇಳಿದನು? ದೇವರು ಕೂಡಿಸಿದ್ದನ್ನು, ಮನುಷ್ಯನು ಅಗಲಿಸಬಾರದೆಂದು ಯೇಸು ಹೇಳಿದನು.
10:13-14 ftqq ಚಿಕ್ಕ ಮಕ್ಕಳನ್ನು ಆತನ ಬಳಿಗೆ ಕರೆದುಕೊಂಡು ಬರುತ್ತಿರುವವರನ್ನು ಶಿಷ್ಯರು ಗದರಿಸಿದಾಗ ಯೇಸುವಿನ ಪ್ರತಿಕ್ರಿಯೆ ಏನಾಗಿತ್ತು? ಯೇಸು ಶಿಷ್ಯರ ಮೇಲೆ ಕೋಪಗೊಂಡು ಮತ್ತು ಅವರಿಗೆ ಚಿಕ್ಕ ಮಕ್ಕಳನ್ನು ನನ್ನ ಹತ್ತಿರಕ್ಕೆ ಬರಲು ಬಿಡಿರಿ ಎಂದು ಅವರಿಗೆ ಹೇಳಿದನು.
10:15 s8f7 ದೇವರ ರಾಜ್ಯದೊಳಗೆ ಪ್ರವೇಶಿಸಲು ಅದನ್ನು ಹೇಗೆ ಸ್ವೀಕರಿಸಬೇಕು ಎಂದು ಯೇಸು ಹೇಳಿದನು? ದೇವರ ರಾಜ್ಯವನ್ನು ಪ್ರವೇಶಿಸಲು ಚಿಕ್ಕ ಮಕ್ಕಳನ್ನು ಸ್ವೀಕರಿಸುವಂತೆ ಅದನ್ನು ಸ್ವೀಕರಿಸಬೇಕು ಎಂದು ಯೇಸು ಹೇಳಿದನು.
10:19 slbl ಒಬ್ಬ ಮನುಷ್ಯನು ನಿತ್ಯಜೀವವನ್ನು ಪಡೆಯಲು ಮೊದಲು ಏನು ಮಾಡಬೇಕೆಂದು ಯೇಸು ಹೇಳಿದನು? ನರಹತ್ಯ ಮಾಡಬಾರದು; ವ್ಯಭಿಚಾರಮಾಡಬಾರದು; ಕದಿಯಬಾರದು; ಸುಳ್ಳುಸಾಕ್ಷಿ ಹೇಳಬಾರದು; ಮೋಸಮಾಡಬಾರದು; ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು ಎಂದು ಯೇಸು ಹೇಳಿದನು.
10:21 h1nt ಯೇಸು ಮನುಷ್ಯನಿಗೆ ಯಾವ ಹೆಚ್ಚಿನ ಆಜ್ಞೆಯನ್ನು ಕೊಟ್ಟನು? ಮನುಷ್ಯನನ್ನು ಅವನಲ್ಲಿರುವುದನ್ನೆಲ್ಲಾ ಮಾರಿ ತನ್ನನ್ನು ಹಿಂಬಾಲಿಸುವಂತೆ ಯೇಸು ಆಜ್ಞಾಪಿಸಿದನು.
10:22 r5hj ಯೇಸು ಈ ಆಜ್ಞೆಯನ್ನು ಕೊಟ್ಟಾಗ, ಆ ಮನುಷ್ಯನು ಹೇಗೆ ಮತ್ತು ಯಾಕೆ ಪ್ರತಿಕ್ರಿಯಿಸಿದನು? ಆ ಮನುಷ್ಯನು ಬಹಳ ಆಸ್ತಿಯುಳ್ಳವನಾಗಿದ್ದದರಿಂದ ಈ ಮಾತಿಗೆ ದುಃಖಿತನಾಗಿ ಹೊರಟುಹೋದನು.
10:23-25 fn0b ಯಾರಿಗೆ ದೇವರ ರಾಜ್ಯವನ್ನು ಪ್ರವೇಶಿಸಲು ಬಹಳ ಕಷ್ಟವೆಂದು ಯೇಸು ಹೇಳಿದನು? ದೇವರ ರಾಜ್ಯವನ್ನು ಪ್ರವೇಶಿಸಲು ಶ್ರೀಮಂತನಿಗೆ ಬಹಳ ಕಷ್ಟವೆಂದು ಯೇಸು ಹೇಳಿದನು.
10:26-27 a2pr ಶ್ರೀಮಂತನೂ ಕೂಡ ಹೇಗೆ ರಕ್ಷಿಸಲ್ಪಡಬಹುದು ಎಂದು ಯೇಸು ಹೇಳಿದನು? ಮನುಷ್ಯರಿಗೆ ಅದು ಅಸಾಧ್ಯ, ಆದರೆ ದೇವರಿಗೆ ಎಲ್ಲವೂ ಸಾಧ್ಯವೆಂದು ಯೇಸು ಹೇಳಿದನು.
10:29-30 ut0n ಯೇಸುವಿನ ನಿಮಿತ್ತ ಮನೆಯನ್ನಾಗಲಿ ಕುಟುಂಬವನ್ನಾಗಲಿ ಮತ್ತು ಭೂವಿುಯನ್ನಾಗಲಿ ಬಿಟ್ಟುಬಿಟ್ಟಿರುವವನು ಏನನ್ನು ಸ್ವೀಕರಿಸುತ್ತಾನೆಂದು ಯೇಸು ಹೇಳಿದನು? ಅವರು ಈ ಲೋಕದಲ್ಲಿ ನೂರು ಪಟ್ಟು ಹೆಚ್ಚಿನದನ್ನು, ಹಿಂಸೆಗಳೊಂದಿಗೆ ಹೊಂದಿಕೊಳ್ಳುವರು ಮತ್ತು ಮುಂದಿನ ಲೋಕದಲ್ಲಿ ನಿತ್ಯಜೀವವನ್ನು ಪಡೆಯುತ್ತಾರೆ ಎಂದು ಯೇಸು ಹೇಳಿದನು.
10:32 t4vq ಯೇಸು ಮತ್ತು ಆತನ ಶಿಷ್ಯರು ಯಾವ ದಾರಿಯಲ್ಲಿ ಪ್ರಯಾಣ ಮಾಡುತ್ತಿದ್ದರು? ಯೇಸು ಮತ್ತು ಆತನ ಶಿಷ್ಯರು ಯೆರೂಸಲೇಮಿಗೆ ಹೋಗುವ ದಾರಿಯಲ್ಲಿ ಪ್ರಯಾಣ ಮಾಡುತ್ತಿದ್ದರು.
10:33-34 ie59 ಯೆರೂಸಲೇಮಿನಲ್ಲಿ ತನಗೆ ಏನು ಆಗುತ್ತದೆಂದು ಯೇಸು ತನ್ನ ಶಿಷ್ಯರಿಗೆ ಹೇಳಿದನು? ತನಗೆ ಮರಣದಂಡನೆಯನ್ನು ವಿಧಿಸುವರು ಮತ್ತು ಅನ್ಯರ ಕೈಗೆ ಒಪ್ಪಿಸುವರು ಎಂದು ಯೇಸು ಶಿಷ್ಯರಿಗೆ ಹೇಳಿದನು.
10:35-37 mu7d ಯಾಕೋಬ ಮತ್ತು ಯೋಹಾನ ಯೇಸುವಿಗೆ ಏನೆಂದು ಮನವಿ ಮಾಡಿದರು? ಯಾಕೋಬ ಮತ್ತು ಯೋಹಾನನು ಒಬ್ಬನು ಯೇಸುವಿನ ಮಹಿಮೆಯಲ್ಲಿ ಬಲಗಡೆಯಲ್ಲೂ ಮತ್ತೊಬ್ಬನು ಎಡಗಡೆಯಲ್ಲೂ ಕುಳಿತುಕೊಳ್ಳುವಂತೆ ನಮಗೆ ಅನುಗ್ರಹಮಾಡಬೇಕೆಂದು ಮನವಿ ಮಾಡಿಕೊಂಡರು.
10:39 xafk ಯಾಕೋಬ ಮತ್ತು ಯೋಹಾನನು ಏನನ್ನು ಅನುಭವಿಸುತ್ತಾರೆಂದು ಯೇಸು ಹೇಳಿದನು? ಯಾಕೋಬ ಮತ್ತು ಯೋಹಾನರು ಯೇಸು ಕುಡಿಯುವ ಪಾತ್ರೆಯಲ್ಲಿ ಕುಡಿಯುವರು; ಯೇಸುವಿಗೆ ಆಗುವ ದೀಕ್ಷಾಸ್ನಾನವು ಅವರಿಗೆ ಆಗುವದು ಎಂದು ಯೇಸು ಹೇಳಿದನು.
10:40 vd45 ಯಾಕೋಬ ಮತ್ತು ಯೋಹಾನರ ಮನವಿಯನ್ನು ಯೇಸು ಅನುಗ್ರಹಿಸಿದನೇ? ಇಲ್ಲ. ನನ್ನ ಬಲಗಡೆಯಲ್ಲಾದರೂ ಎಡಗಡೆಯಲ್ಲಾದರೂ ಕುಳಿತುಕೊಳ್ಳುವಂತೆ ಅನುಗ್ರಹಮಾಡುವದು ನನ್ನದಲ್ಲವೆಂದು ಯೇಸು ಹೇಳಿದನು.
10:42 m3q4 ಅನ್ಯಜನರ ಅಧಿಪತಿಗಳು ತಮ್ಮ ಅಧೀನದಲ್ಲಿ ಇರುವವರೊಂದಿಗೆ ಹೇಗೆ ವರ್ತಿಸುತ್ತಾರೆಂದು ಯೇಸು ಹೇಳಿದನು? ಅನ್ಯಜನರ ಅಧಿಪತಿಗಳು ತಮ್ಮ ಅಧೀನದಲ್ಲಿರುವವರ ಮೇಲೆ ದೊರೆತನ ಮಾಡುವರೆಂದು ಯೇಸು ಹೇಳಿದನು.
10:43-44 yky8 ಶಿಷ್ಯರಲ್ಲಿ ದೊಡ್ಡವರಾಗಬೇಕೆಂದು ಯಾರು ಬಯಸುತ್ತಾರೋ ಅವರು ಹೇಗೆ ಜೀವಿಸಬೇಕೆಂದು ಯೇಸು ಹೇಳಿದನು? ಶಿಷ್ಯರಲ್ಲಿ ದೊಡ್ಡವರಾಗಬೇಕೆಂದು ಯಾರು ಬಯಸುತ್ತಾರೋ ಅವರು ಎಲ್ಲರಿಗೂ ಸೇವಕರಾಗಿರಬೇಕೆಂದು ಯೇಸು ಹೇಳಿದನು.
10:48 ece0 ಕುರುಡನಾಗಿದ್ದ ಬಾರ್ತಿಮಾಯನನ್ನು ಅನೇಕರು ಸುಮ್ಮನೆ ಇರುವಂತೆ ಹೇಳಿ ಗದರಿಸುತ್ತಿರುವಾಗ ಅವನು ಏನು ಮಾಡಿದನು? “ದಾವೀದ ಕುಮಾರನೇ, ನನ್ನನ್ನು ಕರುಣಿಸು!” ಎಂದು ಬಾರ್ತಿಮಾಯನು ಗಟ್ಟಿಯಾಗಿ ಕೂಗಿದನು.
10:52 rato ಕುರುಡನಾಗಿದ್ದ ಬಾರ್ತಿಮಾಯನಿಗೆ ಸ್ವಸ್ಥತೆಯನ್ನುಂಟು ಮಾಡಿದ್ದು ಯಾವುದೆಂದು ಯೇಸು ಹೇಳಿದನು? ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥ ಮಾಡಿತು ಎಂದು ಯೇಸು ಬಾರ್ತಿಮಾಯನಿಗೆ ಹೇಳಿದನು.
11:2 agr2 ಯೇಸು ತನ್ನ ಇಬ್ಬರು ಶಿಷ್ಯರಿಗೆ ಅವರಿಗೆ ಎದುರಿಗಿದ್ದ ಹಳ್ಳಿಗೆ ಏನು ಮಾಡಲು ಕಳುಹಿಸಿದನು? ಯೇಸು ಅವರನ್ನು ಯಾರೂ ಕುಳಿತಿರದ ಕತ್ತೆಮರಿಯನ್ನು ಕರೆತರಲು ಕಳುಹಿಸಿದನು.
11:5-6 u8he ಶಿಷ್ಯರು ಕತ್ತೆಮರಿಯನ್ನು ಬಿಚ್ಚಿದಾಗ ಏನಾಯಿತು? ಕೆಲವು ಜನರು, ನೀವು ಏನು ಮಾಡುತ್ತಾ ಇದ್ದೀರಿ ಎಂದು ಶಿಷ್ಯರನ್ನು ಕೇಳಿದರು, ಹಾಗಾಗಿ ಯೇಸು ಹೇಳಿದಂತೆಯೇ ಅವರು ಹೇಳಿದರು, ಮತ್ತು ಆಗ ಜನರು ಅವರನ್ನು ತೆಗೆದುಕೊಂಡು ಹೋಗಲು ಬಿಟ್ಟರು.
11:8 cgd8 ಯೇಸು ಕತ್ತೆ ಮರಿಯನ್ನು ಹತ್ತಿ ದಾರಿಯಲ್ಲಿ ಹೋಗುತ್ತಿರುವಾಗ ಜನರು ದಾರಿಯ ಮೇಲೆ ಏನನ್ನು ಹಾಸಿದರು? ಜನರು ದಾರಿಯ ಮೇಲೆ ತಮ್ಮ ಬಟ್ಟೆಗಳನ್ನು ಮತ್ತು ಹೊಲದಿಂದ ಕತ್ತರಿಸಿಕೊಂಡು ಬಂದ ಕೊಂಬೆಗಳನ್ನು ಹಾಸಿದರು.
11:10 vfq1 ಯೇಸು ಯೆರೂಸಲೇಮಿನ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಜನರು ಯಾವ ರಾಜ್ಯವು ಬರುತ್ತದೆಂದು ಕೂಗುತ್ತಿದ್ದರು? ಜನರು ತಮ್ಮ ಪಿತೃವಾದ ದಾವೀದನ ರಾಜ್ಯವು ಬರುತ್ತದೆಂದು ಕೂಗುತ್ತಿದ್ದರು.
11:11 pj8s ಯೇಸು ದೇವಾಲಯದ ಅಂಗಳಕ್ಕೆ ಸೇರಿದಾಗ ಏನು ಮಾಡಿದನು? ಯೇಸು ಸುತ್ತಲೂ ನೋಡಿದನು ಮತ್ತು ಬೇಥಾನ್ಯಕ್ಕೆ ಹೋದನು.
11:14 qg7e ಹಣ್ಣು ಇಲ್ಲದಿರುವ ಅಂಜೂರದ ಮರವನ್ನು ನೋಡಿದಾಗ ಯೇಸು ಏನು ಮಾಡಿದನು? ಯೇಸು ಅಂಜೂರದ ಮರಕ್ಕೆ, “ನಿನ್ನಿಂದ ಯಾರೂ ಎಂದಿಗೂ ಹಣ್ಣನ್ನು ತಿನ್ನುವುದಿಲ್ಲ” ಎಂದು ಹೇಳಿದನು.
11:15-16 pbr1 ಈ ಸಮಯದಲ್ಲಿ ಯೇಸು ದೇವಾಲಯದ ಅಂಗಳಕ್ಕೆ ಸೇರಿದಾಗ ಯೇಸು ಏನು ಮಾಡಿದನು? ಯೇಸು ಮಾರುತ್ತಿದ್ದವರನ್ನೂ ಮತ್ತು ಕೊಳ್ಳುತ್ತಿದ್ದವರನ್ನೂ ಹೊರಗೆ ಹಾಕಿದನು ಮತ್ತು ದೇವಾಲಯದ ಮೂಲಕ ಸರಕುಗಳನ್ನು ತೆದುಕೊಂಡು ಹೋಗಲು ಬಿಡಲಿಲ್ಲ.
11:17 dgql ಪವಿತ್ರಗ್ರಂಥದ ಪ್ರಕಾರ ದೇವಾಲಯವು ಏನಾಗಿರಬೇಕೆಂದು ಯೇಸು ಹೇಳಿದನು? ಎಲ್ಲಾ ದೇಶಗಳಿಗೂ ದೇವಾಲಯವು ಪ್ರಾರ್ಥನಾ ಮಂದಿರವಾಗಿರಬೇಕೆಂದು ಯೇಸು ಹೇಳಿದನು.
11:17 hpgp ಮುಖ್ಯ ಯಾಜಕರೂ ಶಾಸ್ತ್ರಿಗಳೂ ದೇವಾಲಯವನ್ನು ಏನು ಮಾಡಿದ್ದಾರೆಂದು ಯೇಸು ಹೇಳಿದನು? ಅವರು ದೇವಾಲಯವನು ಕಳ್ಳರ ಗವಿಯನ್ನಾಗಿ ಮಾಡಿದ್ದಾರೆಂದು ಯೇಸು ಹೇಳಿದನು.
11:18 x7nj ಮುಖ್ಯ ಯಾಜಕರೂ ಶಾಸ್ತ್ರಿಗಳೂ ಯೇಸುವಿಗೆ ಏನು ಮಾಡಬೇಕೆಂದು ಪ್ರಯತ್ನಿಸುತ್ತಿದ್ದರು? ಮುಖ್ಯ ಯಾಜಕರೂ ಮತ್ತು ಶಾಸ್ತ್ರಿಗಳೂ ಯೇಸುವನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದರು.
11:20 geb7 ಯೇಸು ನುಡಿದಂತ ಅಂಜೂರದ ಮರಕ್ಕೆ ಏನಾಯಿತು? ಯೇಸು ನುಡಿದಂತ ಅಂಜೂರದ ಮರವು ಬೇರು ಸಮೇತ ಒಣಗಿ ಹೋಗಿತ್ತು.
11:24 okwn ಪ್ರಾರ್ಥನೆಯಲ್ಲಿ ನಾವು ಕೇಳುವ ಪ್ರತಿಯೊಂದಕ್ಕೂ ಏನಾಗುತ್ತದೆಂದು ಯೇಸು ಹೇಳಿದನು? ಪ್ರಾರ್ಥನೆಯಲ್ಲಿ ನಾವು ಬೇಡಿಕೊಳ್ಳುವ ಎಲ್ಲವು ಸಿಕ್ಕಿದೆ, ಮತ್ತು ಅದು ನಮ್ಮದಾಗಿರುತ್ತದೆ ಎಂದು ಯೇಸು ಹೇಳಿದನು.
11:25 udpr ಪರಲೋಕದಲ್ಲಿರುವ ನಮ್ಮ ತಂದೆಯು ಸಹ ನಿಮ್ಮ ತಪ್ಪುಗಳನ್ನು ಕ್ಷಮಿಸುವಂತೆ ನಾವು ಏನು ಮಾಡಬೇಕೆಂದು ಯೇಸು ಹೇಳಿದನು? ಯಾರ ಮೇಲೆ ಏನಾದರೂ ವಿರೋಧವಿದ್ದರೆ ಅದನ್ನು ಕ್ಷಮಿಸಿರಿ ಆಗ ಪರಲೋಕದಲ್ಲಿರುವ ತಂದೆಯು ಸಹ ನಮ್ಮ ತಪ್ಪುಗಳನ್ನು ಕ್ಷಮಿಸುವನು ಎಂದು ಯೇಸು ಹೇಳಿದನು.
11:27-28 y3u8 ದೇವಾಲಯದಲ್ಲಿ, ಮುಖ್ಯ ಯಾಜಕರು, ಶಾಸ್ತ್ರಿಗಳು, ಮತ್ತು ಹಿರಿಯರು ಯೇಸುವಿನಿಂದ ಏನನ್ನು ತಿಳಿದುಕೊಳ್ಳಲು ಬಯಸಿದ್ದರು? ಆತನು ಮಾಡುತ್ತಿದ್ದ ಕೆಲಸಗಳನ್ನು ಯಾವ ಅಧಿಕಾರದಿಂದ ಮಾಡುತ್ತಿದ್ದಾನೆಂದು ತಿಳಿದುಕೊಳ್ಳಲು ಬಯಸಿದ್ದರು.
11:29-30 cdce ಮುಖ್ಯ ಯಾಜಕರು, ಶಾಸ್ತ್ರಿಗಳು, ಮತ್ತು ಹಿರಿಯರನ್ನು ಯೇಸು ಯಾವ ಪ್ರಶ್ನೆಯನ್ನು ಕೇಳಿದನು? ಯೋಹಾನನಿಗೆ ದೀಕ್ಷಾಸ್ನಾನ ಮಾಡಿಸುವ ಅಧಿಕಾರವು ಪರಲೋಕದಿಂದಲೋ ಅಥವಾ ಮನುಷ್ಯರಿಂದಲೋ ಬಂದಿತೋ ಎಂದು ಯೇಸು ಅವರನ್ನು ಕೇಳಿದನು.
11:31 qfb1 ಯೋಹಾನನ ದೀಕ್ಷಾಸ್ನಾನವು ಪರಲೋಕದಿಂದ ಬಂದದ್ದು ಎಂದು ಉತ್ತರಿಸಲು ಮುಖ್ಯ ಯಾಜಕರು, ಶಾಸ್ತ್ರಿಗಳು, ಮತ್ತು ಹಿರಿಯರಿಗೆ ಏಕೆ ಇಷ್ಟವಿರಲಿಲ್ಲ? ಯಾಕೆಂದರೆ ಯೋಹಾನನನ್ನು ಅವರು ಏಕೆ ನಂಬಲಿಲ್ಲವೆಂದು ಯೇಸು ಕೇಳುತ್ತಾನೆಂದು ಈ ಉತ್ತರವನ್ನು ಕೊಡಲು ಅವರಿಗೆ ಇಷ್ಟವಿರಲಿಲ್ಲ.
11:32 zg5i ಯೋಹಾನನ ದೀಕ್ಷಾಸ್ನಾನವು ಮನುಷ್ಯರಿಂದ ಬಂದದ್ದು ಎಂದು ಮುಖ್ಯ ಯಾಜಕರು, ಶಾಸ್ತ್ರಿಗಳು, ಮತ್ತು ಹಿರಿಯರಿಗೆ ಉತ್ತರಿಸಲು ಏಕೆ ಇಷ್ಟವಿರಲಿಲ್ಲ? ಅವರಿಗೆ ಈ ಉತ್ತರವನ್ನು ಕೊಡಲು ಇಷ್ಟವಿರಲಿಲ್ಲ ಯಾಕೆಂದರೆ ಅವರು ಜನರಿಗೆ ಹೆದರಿದರು, ಜನರೆಲ್ಲರು ಯೋಹಾನನನ್ನು ಪ್ರವಾದಿಯೆಂದು ನಂಬಿದ್ದರು.
12:1 k9g4 ದ್ರಾಕ್ಷೇ ತೋಟವನ್ನು ಬೆಳೆಸಿ ಅದನ್ನು ವಾರಕ್ಕೆ ಕೊಟ್ಟ ನಂತರ, ಯಜಮಾನನು ಏನು ಮಾಡಿದನು? ದ್ರಾಕ್ಷೇ ತೋಟವನ್ನು ಬೆಳೆಸಿ ಅದನ್ನು ವಾರಕ್ಕೆಕೊಟ್ಟ ನಂತರ, ಯಜಮಾನನು ಬೇರೆ ದೇಶಕ್ಕೆ ಹೋದನು.
12:5 qm75 ದ್ರಾಕ್ಷೇ ತೋಟದ ಫಲವನ್ನು ತೆಗೆದುಕೊಳ್ಳಲು ಯಜಮಾನನು ಕಳುಹಿಸಿದ ಅನೇಕ ಸೇವಕರಿಗೆ ದ್ರಾಕ್ಷೇ ತೋಟಗಾರರು ಏನು ಮಾಡಿದರು? ದ್ರಾಕ್ಷೇ ತೋಟಗಾರರು ಕೆಲವರಿಗೆ ಹೊಡೆದರು ಮತ್ತು ಅನೇಕ ಸೇವಕರುಗಳನ್ನು ಕೊಂದರು.
12:6 p7p2 ಯಜಮಾನನು ಕೊನೆಯದಾಗಿ ದ್ರಾಕ್ಷೇ ತೋಟಗಾರರ ಹತ್ತಿರ ಯಾರನ್ನು ಕಳುಹಿಸಿದನು? ಯಜಮಾನನು ಕೊನೆಯದಾಗಿ ತನ್ನ ಪ್ರಿಯ ಮಗನನ್ನು ಕಳುಹಿಸಿದನು.
12:8 abgx ಯಜಮಾನನು ಕೊನೆಯದಾಗಿ ಕಳುಹಿಸಿದವನಿಗೆ ದ್ರಾಕ್ಷೇ ತೋಟಗಾರರು ಏನು ಮಾಡಿದರು? ದ್ರಾಕ್ಷೇ ತೋಟಗಾರರು ಆತನನ್ನು ಬಂಧಿಸಿ, ಕೊಂದು, ದ್ರಾಕ್ಷೇ ತೋಟದಿಂದ ಹೊರಗೆ ಹಾಕಿದರು.
12:9 bpsj ದ್ರಾಕ್ಷೇ ತೋಟಗಾರರಿಗೆ ದ್ರಾಕ್ಷೇತೋಟದ ಯಜಮಾನನು ಏನು ಮಾಡುತ್ತಾನೆ? ದ್ರಾಕ್ಷೇ ತೋಟದ ಯಜಮಾನನು ಬಂದು ದ್ರಾಕ್ಷೇ ತೋಟಗಾರರನ್ನು ನಾಶಮಾಡುವನು ಮತ್ತು ದ್ರಾಕ್ಷೇ ತೋಟವನ್ನು ಬೇರೆಯವರಿಗೆ ಕೊಡುವನು.
12:10 c54c ಪವಿತ್ರಗ್ರಂಥದಲ್ಲಿ, ಕಟ್ಟುವವರು ಬೇಡವೆಂದು ಬಿಟ್ಟ ಕಲ್ಲಿಗೆ ಏನಾಗುತ್ತದೆ? ಕಟ್ಟುವವರು ಬೇಡವೆಂದು ಬಿಟ್ಟ ಕಲ್ಲು ಮೂಲೆಗಲ್ಲಾಯಿತು.
12:14 n5ve ಫರಿಸಾಯರು ಮತ್ತು ಕೆಲವು ಹೆರೋದ್ಯರು ಯೇಸುವಿಗೆ ಯಾವ ಪ್ರಶ್ನೆಯನ್ನು ಕೇಳಿದರು? ಕೈಸರನಿಗೆ ತೆರಿಗೆಯನ್ನು ಕಟ್ಟುವುದು ನ್ಯಾಯವೋ ಅಥವಾ ಇಲ್ಲವೋ ಎಂದು ಅವರು ಆತನನ್ನು ಕೇಳಿದರು.
12:17 z3xo ಅವರ ಪ್ರಶ್ನೆಗೆ ಯೇಸು ಹೇಗೆ ಉತ್ತರಿಸಿದನು? ಯೇಸು ಅವರಿಗೆ ಕೈಸರನದನ್ನು ಕೈಸರನಿಗೆ ಕೊಡಿರಿ ಮತ್ತು ದೇವರದನ್ನು ದೇವರಿಗೆ ಕೊಡಿರಿ ಎಂದು ಹೇಳಿದನು.
12:18 jy15 ಸದ್ದುಕಾಯರು ಯಾವುದರಲ್ಲಿ ನಂಬಿಕೆ ಇಡಲಿಲ್ಲ? ಸದ್ದುಕಾಯರು ಪುನರುತ್ಥಾನದಲ್ಲಿ ನಂಬಿಕೆ ಇಡಲಿಲ್ಲ.
12:22 nmuk ಸದ್ದುಕಾಯರು ಹೇಳಿದ ಕಥೆಯಲ್ಲಿ, ಒಬ್ಬ ಹೆಂಗಸಿಗೆ ಎಷ್ಟು ಜನ ಗಂಡಂದಿರು ಇದ್ದರು? ಅ ಹೆಂಗಸಿಗೆ ಏಳು ಜನ ಗಂಡಂದಿರು ಇದ್ದರು.
12:23 fehv ಆ ಹೆಂಗಸಿನ ಬಗ್ಗೆ ಸದ್ದುಕಾಯರು ಯೇಸುವನ್ನು ಯಾವ ಪ್ರಶ್ನೆ ಕೇಳಿದರು? ಪುನರುತ್ಥಾನದಲ್ಲಿ ಯಾವ ಪುರುಷನು ಆ ಹೆಂಗಸಿನ ಗಂಡನಾಗಿರುವನು ಎಂದು ಅವರು ಕೇಳಿದರು?
12:24 bs3e ಸದ್ದುಕಾಯರ ತಪ್ಪಿಗಾಗಿ ಯೇಸು ಯಾವ ಕಾರಣವನ್ನು ಕೊಟ್ಟನು? ಸದ್ದುಕಾಯರಿಗೆ ಪವಿತ್ರಗ್ರಂಥವಾಗಲಿ ಅಥವಾ ದೇವರ ಶಕ್ತಿಯಾಗಲಿ ತಿಳಿದಿಲ್ಲವೆಂದು ಯೇಸು ಹೇಳಿದನು.
12:25 ks2q ಆ ಹೆಂಗಸಿನ ಬಗ್ಗೆ ಯೇಸು ಸದ್ದುಕಾಯರಿಗೆ ಯಾವ ಉತ್ತರವನ್ನು ಕೊಟ್ಟನು? ಪುನರುತ್ಥಾನದಲ್ಲಿ, ಪುರುಷನು ಮತ್ತು ಸ್ತ್ರೀಯು ಮದುವೆ ಆಗುವುದಿಲ್ಲ, ಆದರೆ ದೇವದೂತರ ಹಾಗೆ ಇರುವರೆಂದು ಯೇಸು ಹೇಳಿದನು.
12:26-27 ete1 ಪುನರುತ್ಥಾನವಿದೆ ಎಂದು ಪವಿತ್ರಗಂಥದ ಮೂಲಕ ಯೇಸು ಹೇಗೆ ತೋರಿಸಿದನು? ಯೇಸು ಮೋಶೆಯ ಪುಸ್ತಕದಿಂದ ಉಲ್ಲೇಖಿಸಿದನು, ಅದರಲ್ಲಿ ದೇವರು ಹೀಗೆ ಹೇಳುತ್ತಾನೆ ಆತನು ಅಬ್ರಹಾಮನ, ಇಸಾಕನ, ಮತ್ತು ಯಾಕೋಬನ ದೇವರೆಂದೂ ಹೇಳಿದನು-ಹಾಗಾದರೆ ಅವರೆಲ್ಲರೂ ಜೀವಂತವಾಗಿರಬೇಕು.
12:29-30 tzeh ಯಾವ ಆಜ್ಞೆಯು ಅತಿ ಮುಖ್ಯವಾದದೆಂದು ಯೇಸು ಹೇಳಿದನು? ಯೇಸು ಕರ್ತನಾದ ನಿಮ್ಮ ದೇವರನ್ನು ಪೂರ್ಣ ಹೃದಯದಿಂದಲೂ, ಪ್ರಾಣದಿಂದಲೂ, ಮನಸ್ಸಿನಿಂದಲೂ, ಬಲದಿಂದಲೂ ಪ್ರೀತಿಸಬೇಕು ಎಂಬುದು ಅತಿ ಮುಖ್ಯವಾದ ಆಜ್ಞೆ ಎಂದು ಹೇಳಿದನು.
12:31 mh0y ಎರಡನೆಯ ಆಜ್ಞೆ ಯಾವುದೆಂದು ಯೇಸು ಹೇಳಿದನು? ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸು ಎಂಬುದು ಎರಡನೆಯ ಆಜ್ಞೆ ಎಂದು ಯೇಸು ಹೇಳಿದನು.
12:35-37 qo6t ದಾವೀದನ ಬಗ್ಗೆ ಶಾಸ್ತ್ರಿಗಳ ಹತ್ತಿರ ಯೇಸು ಯಾವ ಪ್ರಶ್ನೆಯನ್ನು ಕೇಳಿದನು? ಕ್ರಿಸ್ತನು ದಾವೀದನ ಮಗನಾಗಿರುವುದರಿಂದ ದಾವೀದನು ಕ್ರಿಸ್ತನನ್ನು ಕರ್ತನು ಎಂದು ಹೇಗೆ ಕರೆಯಬಹುದೆಂದು ಯೇಸು ಕೇಳಿದನು.
12:38-40 ndcc ಶಾಸ್ತ್ರಿಗಳ ಬಗ್ಗೆ ಯಾವ ವಿಷಯದಲ್ಲಿ ಎಚ್ಚರಿಕೆಯಿಂದ ಇರಬೇಕೆಂದು ಯೇಸು ಜನರಿಗೆ ಹೇಳಿದನು? ಶಾಸ್ತ್ರಿಗಳು ಜನರಿಂದ ಗೌರವವನ್ನು ಪಡೆಯಲು ಬಯಸುತ್ತಾರೆ, ಆದರೆ ವಿಧವೆಯರ ಮನೆಗಳನ್ನು ನುಂಗಿಹಾಕುತ್ತಾರೆ ಮತ್ತು ಜನರು ನೋಡಲೆಂದು ಉದ್ದವಾದ ಪ್ರಾರ್ಥನೆಗಳನ್ನು ಮಾಡುತ್ತಾರೆ ಎಂದು ಯೇಸು ಹೇಳಿದನು.
12:44 vxj4 ಬೊಕ್ಕಸದಲ್ಲಿ ಹಾಕಿದವರೆಲ್ಲರಲ್ಲಿ ಬಡ ವಿಧವೆಯು ಎಲ್ಲರಿಗಿಂತಲೂ ಹೆಚ್ಚು ಕಾಣಿಕೆ ಹಾಕಿದ್ದಾಳೆಂದು ಯೇಸು ಯಾಕೆ ಹೇಳಿದನು? ಯೇಸು ಆಕೆ ಹೆಚ್ಚು ಹಾಕಿದ್ದಾಳೆಂದು ಹೇಳಿದನು ಯಾಕೆಂದರೆ ಎಲ್ಲರು ತಮಗೆ ಸಾಕಾಗಿ ವಿುಕ್ಕದ್ದರಲ್ಲಿ ಹಾಕಿದರು; ಈಕೆ ತನ್ನ ಬಡತನದಲ್ಲಿಯೂ ತನಗಿದ್ದದ್ದನ್ನೆಲ್ಲಾ ಕೊಟ್ಟಳು ಎಂದನು.
13:2 a889 ದೇವಾಲಯದ ಸುಂದರವಾದ ಕಲ್ಲುಗಳಿಗೆ ಮತ್ತು ಕಟ್ಟಡಗಳಿಗೆ ಏನಾಗುತ್ತದೆ ಎಂದು ಯೇಸು ಹೇಳಿದನು? ಯೇಸು ಕಲ್ಲಿನ ಮೇಲೆ ಕಲ್ಲು ನಿಲ್ಲುವುದಿಲ್ಲವೆಂದು ಹೇಳಿದನು.
13:4 et3p ಆಗ ಶಿಷ್ಯರು ಯೇಸುವನ್ನು ಯಾವ ಪ್ರಶ್ನೆಯನ್ನು ಕೇಳಿದರು? ಶಿಷ್ಯರು ಯೇಸುವಿಗೆ ಈ ಸಂಗತಿಗಳು ಯಾವಾಗ ನಡೆಯುತ್ತವೆ, ಮತ್ತು ಅದರ ಸೂಚನೆಗಳು ಯಾವುವು ಎಂದು ಕೇಳಿದರು.
13:5-6 znvi ಯಾವುದರ ಬಗ್ಗೆ ಶಿಷ್ಯರು ಎಚ್ಚರಿಕೆಯಿಂದ ಇರಬೇಕೆಂದು ಯೇಸು ಹೇಳಿದನು? ಯೇಸು ಶಿಷ್ಯರಿಗೆ ಯಾರೊಬ್ಬರಾಗಲಿ ಅವರನ್ನು ಮೋಸಗೊಳಿಸದಂತೆ ಎಚ್ಚರಿಕೆಯಿಂದ ಇರಬೇಕೆಂದು ಹೇಳಿದನು.
13:7-8 umt6 ಪ್ರಸವ ವೇದನೆಯ ಪ್ರಾರಂಭವು ಹೇಗಿರುತ್ತದೆ ಎಂದು ಯೇಸು ಹೇಳಿದನು? ಯೇಸು ಪ್ರಸವ ವೇದನೆಯ ಪ್ರಾರಂಭವು ಯುದ್ದಗಳು, ಯುದ್ದಗಳಾಗುವವೆಂಬ ಸುದ್ದಿಯು, ಭೂಕಂಪಗಳು, ಮತ್ತು ಬರಗಾಲಗಳು ಆಗಿರುತ್ತವೆಂದು ಹೇಳಿದನು.
13:9 arqh ಶಿಷ್ಯರಿಗೆ ಏನಾಗುತ್ತದೆ ಎಂದು ಯೇಸು ಹೇಳಿದನು? ಯೇಸು ಶಿಷ್ಯರಿಗೆ ನ್ಯಾಯವಿಚಾರಣೆಯ ಸಭೆಗಳಿಗೆ ಎಳಕೊಂಡು ಹೋಗುವರು; ಸಭಾಮಂದಿರಗಳಲ್ಲಿ ಹೊಡೆಯುವರು; ಮತ್ತು ಅಧಿಪತಿಗಳ ಮುಂದೆಯೂ ಅರಸುಗಳ ಮುಂದೆಯೂ ಸಾಕ್ಷಿಗಳಾಗಿ ನಿಲ್ಲಿಸುವರು ಎಂದು ಹೇಳಿದನು.
13:10 p9a0 ಮೊದಲು ಏನಾಗುತ್ತದೆಂದು ಯೇಸು ಹೇಳಿದನು? ಮೊದಲು ಸಕಲ ದೇಶಗಳಿಗೆ ಸುವಾರ್ತೆಯು ಸಾರಲ್ಪಡಬೇಕು ಎಂದು ಯೇಸು ಹೇಳಿದನು.
13:12 zlct ಕುಟುಂಬದ ಸದಸ್ಯರುಗಳ ಮಧ್ಯದಲ್ಲಿ ಏನಾಗುತ್ತದೆ ಎಂದು ಯೇಸು ಹೇಳಿದನು? ಯೇಸು ಕುಟುಂಬದ ಸದಸ್ಯನು ಕುಟುಂಬದ ಮತ್ತೊಬ್ಬ ಸದಸ್ಯನನ್ನು ಮರಣಕ್ಕೆ ಒಪ್ಪಿಸಿಕೊಡುವರು ಎಂದು ಯೇಸು ಹೇಳಿದನು.
13:13 trz5 ಯಾರು ರಕ್ಷಣೆ ಹೊಂದುವರು ಎಂದು ಯೇಸು ಹೇಳಿದನು? ಕೊನೆಯವರೆಗೂ ತಾಳಿಕೊಳ್ಳುವವನು ರಕ್ಷಣೆ ಹೊಂದುವನು ಎಂದು ಯೇಸು ಹೇಳಿದನು.
13:14 a194 ಯೂದಾಯದಲ್ಲಿ ಇರುವವರು ಹಾಳುಮಾಡುವ ಅಸಹ್ಯ ವಸ್ತುವನ್ನು ಕಾಣುವಾಗ ಏನು ಮಾಡಬೇಕು ಎಂದು ಯೇಸು ಹೇಳಿದನು? ಯೂದಾಯದಲ್ಲಿ ಇರುವವರು ಹಾಳುಮಾಡುವ ಅಸಹ್ಯ ವಸ್ತುವನ್ನು ಕಾಣುವಾಗ ಬೆಟ್ಟಗಳಿಗೆ ಓಡಿಹೋಗಬೇಕು ಎಂದು ಯೇಸು ಹೇಳಿದನು.
13:20 pgpi ಆರಿಸಲ್ಪಟ್ಟವರ ರಕ್ಷಣೆ ಹೊಂದುವುದಕ್ಕಾಗಿ ಕರ್ತನು ಏನು ಮಾಡುತ್ತಾನೆ ಯೇಸು ಹೇಳಿದನು? ಆರಿಸಲ್ಪಟ್ಟವರಿಗೋಸ್ಕರ ಕರ್ತನು ಸಂಕಟದ ದಿನಗಳನ್ನು ಕಡಿಮೆ ಮಾಡುವನು ಎಂದು ಯೇಸು ಹೇಳಿದನು.
13:22 zmok ಜನರನ್ನು ಮೋಸಗೊಳಿಸಲು ಯಾರು ಎದ್ದು ಬರುವರೆಂದು ಯೇಸು ಹೇಳಿದನು? ಸುಳ್ಳು ಕ್ರಿಸ್ತರೂ ಸುಳ್ಳು ಪ್ರವಾದಿಗಳೂ ಜನರನ್ನು ಮೋಸಗೊಳಿಸಲು ಎದ್ದೇಳುವರು ಎಂದು ಯೇಸು ಹೇಳಿದನು.
13:24-25 mxj5 ಆ ದಿನಗಳಲ್ಲಿ ಆಗುವ ಸಂಕಟಗಳ ನಂತರ ಬೆಳಕುಗಳಿಗೂ ಮತ್ತು ಪರಲೋಕದಲ್ಲಿರುವ ಶಕ್ತಿಗೂ ಏನಾಗುತ್ತದೆ? ಸೂರ್ಯ ಚಂದ್ರರು ಕತ್ತಲಾಗುವರು, ನಕ್ಷತ್ರಗಳು ಆಕಾಶದಿಂದ ಕೆಳಗೆ ಬೀಳುವವು. ಪರಲೋಕದಲ್ಲಿರುವ ಶಕ್ತಿಗಳು ನಡುಗುವವು.
13:26 ctur ಮೋಡಗಳಲ್ಲಿ ಜನರು ಏನನ್ನು ನೋಡುವರು? ಮನುಷ್ಯ ಕುಮಾರನು ಮಹಾ ಶಕ್ತಿ ಮತ್ತು ಮಹಿಮೆಯಿಂದ ಮೋಡಗಳಲ್ಲಿ ಬರುವುದನ್ನು ಅವರು ನೋಡುವರು.
13:27 kyem ಮನುಷ್ಯ ಕುಮಾರನು ಬರುವಾಗ ಏನು ಮಾಡುವನು? ಆಗ ಮನುಷ್ಯಕುಮಾರನು ಭೂಮಿಯ ಮತ್ತು ಆಕಾಶದ ಕಟ್ಟಕಡೆಯಿಂದ ತಾನು ಆರಿಸಿಕೊಂಡವರನ್ನು ಒಟ್ಟುಗೂಡಿಸುವನು.
13:30 zo90 ಈ ಎಲ್ಲಾ ಸಂಗತಿಗಳು ಆಗುವವರೆಗೂ ಯಾವುದು ಅಳಿದು ಹೋಗುವುದಿಲ್ಲವೆಂದು ಯೇಸು ಹೇಳಿದನು? ಈ ಎಲ್ಲಾ ಸಂಗತಿಗಳು ಆಗುವವರೆಗೂ ಈ ಸಂತತಿಯು ಅಳಿದು ಹೋಗುವುದಿಲ್ಲವೆಂದು ಯೇಸು ಹೇಳಿದನು.
13:31 oxg8 ಯಾವುದು ಅಳಿದು ಹೋಗುವುದಿಲ್ಲವೆಂದು ಯೇಸು ಹೇಳಿದನು? ತನ್ನ ವಾಕ್ಯಗಳು ಅಳಿದು ಹೋಗುವುದಿಲ್ಲವೆಂದು ಯೇಸು ಹೇಳಿದನು.
13:32 pmdn ಇವೆಲ್ಲವೂ ಯಾವಾಗ ಆಗುತ್ತದೆಂದು ಯೇಸು ಹೇಳಿದನು? ಯೇಸು ತಂದೆಯ ಹೊರತು ಮತ್ತಾರಿಗೂ ಆ ದಿನದ ಅಥವಾ ಗಳಿಗೆಯ ಬಗ್ಗೆ ತಿಳಿಯದು ಅಂದನು.
13:33 mck3 ಆ ಕಾಲವು ಯಾವಾಗ ಬರುವುದು ಎಂಬುದರ ಬಗ್ಗೆ ಯೇಸು ಶಿಷ್ಯರಿಗೆ ಯಾವ ಆಜ್ಞೆಯನ್ನು ಕೊಟ್ಟನು? ಯೇಸು ತನ್ನ ಶಿಷ್ಯರಿಗೆ ಎಚ್ಚರಿಕೆಯಾಗಿರಿ, ಜಾಗರೂಕರಾಗಿರಿ, ಮತ್ತು ಪ್ರಾರ್ಥಿಸಿರಿ ಎಂದು ಹೇಳಿದನು.
13:35 zfgp ಯೇಸು ತನ್ನ ಬರೋಣದ ಬಗ್ಗೆ ತನ್ನ ಶಿಷ್ಯರಿಗೆ ಯಾವ ಆಜ್ಞೆಯನ್ನು ಕೊಟ್ಟನು? ಯೇಸು ತನ್ನ ಬರೋಣವನ್ನು ಎದುರುನೋಡುತ್ತಿರುವಾಗ ಎಚ್ಚರಿಕೆಯಿಂದ ಇರಬೇಕೆಂದು ತನ್ನ ಶಿಷ್ಯರಿಗೆ ಹೇಳಿದನು.
13:37 c6rm ಯೇಸು ತನ್ನ ಬರೋಣದ ಬಗ್ಗೆ ತನ್ನ ಶಿಷ್ಯರಿಗೆ ಯಾವ ಆಜ್ಞೆಯನ್ನು ಕೊಟ್ಟನು? ಯೇಸು ತನ್ನ ಶಿಷ್ಯರಿಗೆ ಎಚ್ಚರಿಕೆಯಿಂದಿರಿ ಮತ್ತು ಜಾಗರೂಕರಾಗಿರಿ ಎಂದು ಹೇಳಿದನು.
14:1 l7mb ಮುಖ್ಯ ಯಾಜಕರು ಮತ್ತು ಶಾಸ್ತ್ರಿಗಳು ಯಾವ ಸಂಗತಿಯನ್ನು ಹೇಗೆ ಮಾಡಬೇಕೆಂದು ಯೋಚಿಸುತ್ತಿದ್ದರು? ಅವರು ಯೇಸುವನ್ನು ಉಪಾಯವಾಗಿ ಸೆರೆ ಹಿಡಿದು ಆತನನ್ನು ಕೊಲ್ಲುವುದರ ಬಗ್ಗೆ ಯೋಚಿಸುತ್ತಿದ್ದರು.
14:2 ezqi ಮುಖ್ಯ ಯಾಜಕರು ಮತ್ತು ಶಾಸ್ತ್ರಿಗಳು ಹುಳಿಯಿಲ್ಲದ ರೊಟ್ಟಿಯ ಹಬ್ಬದಂದು ಅದನ್ನು ಮಾಡಲು ಯಾಕೆ ಇಚ್ಚಿಸಲಿಲ್ಲ? ಜನರ ಮಧ್ಯದಲ್ಲಿ ಗದ್ದಲ ಆಗಬಹುದೆಂದು ಅವರು ಚಿಂತಿಸುತ್ತಿದ್ದರು.
14:3 lyx4 ಕುಷ್ಟರೋಗಿಯಾಗಿದ್ದ ಸೀಮೋನನ ಮನೆಯಲ್ಲಿ ಹೆಂಗಸು ಯೇಸುವಿಗೆ ಏನು ಮಾಡಿದಳು? ಒಬ್ಬ ಹೆಂಗಸು ಬಹು ಬೆಲೆಯುಳ್ಳ ಅಚ್ಚ ಜಟಾಮಾಂಸಿ ತೈಲದ ಭರಣಿಯನ್ನು ಒಡೆದು ಯೇಸುವಿನ ತಲೆಯ ಮೇಲೆ ಸುರಿದಳು.
14:5 tn7q ಕೆಲವರು ಆ ಹೆಂಗಸನ್ನು ಯಾಕೆ ಗದರಿಸುತ್ತಿದ್ದರು? ಆ ಹೆಂಗಸು ಸುಗಂಧತೈಲವನ್ನು ಮಾರಿ, ಅದರಿಂದ ಬಂದ ಹಣವನ್ನು ಬಡವರಿಗೆ ಕೊಡಬಹುದಿತ್ತಲ್ಲವೇ ಎಂದು ಕೆಲವರು ಆ ಹೆಂಗಸನ್ನು ಗದರಿಸುತ್ತಿದ್ದರು.
14:8 rqmp ಆ ಹೆಂಗಸು ತನಗೆ ಏನು ಮಾಡಿದಳೆಂದು ಯೇಸು ಹೇಳಿದನು? ಯೇಸು ಈ ಹೆಂಗಸು ಉತ್ತರಕ್ರಿಯೆಗೋಸ್ಕರ ತನ್ನ ದೇಹಕ್ಕೆ ಈ ತೈಲವನ್ನು ಹಚ್ಚಿದ್ದಾಳೆ ಎಂದನು.
14:9 s2sy ಆ ಹೆಂಗಸು ಏನು ಮಾಡಿದಳೋ ಅದಕ್ಕೆ ಯೇಸು ಯಾವ ವಾಗ್ದಾನವನ್ನು ಮಾಡಿದನು? ಲೋಕದಲ್ಲಿ ಎಲ್ಲೆಲ್ಲಿ ಸುವಾರ್ತೆಯು ಸಾರಲ್ಪಡುವುದೋ ಅಲ್ಲೆಲ್ಲಾ ಈ ಹೆಂಗಸು ಏನು ಮಾಡಿದಳೋ ಅದನ್ನು ಅವಳ ನೆನಪಿಗಾಗಿ ಹೇಳಲ್ಪಡುವುದೆಂದು ಯೇಸು ವಾಗ್ದಾನ ಮಾಡಿದನು.
14:10 rueu ಮುಖ್ಯ ಯಾಜಕರ ಬಳಿಗೆ ಇಸ್ಕರಿಯೋತ ಯೂದನು ಯಾಕೆ ಹೋದನು? ಇಸ್ಕರಿಯೋತ ಯೂದನು ಯೇಸುವನ್ನು ಅವರಿಗೆ ಹಿಡಿದುಕೊಡಲು ಮುಖ್ಯ ಯಾಜಕರ ಬಳಿಗೆ ಹೋದನು.
14:12-15 glcb ಅವರೆಲ್ಲರೂ ಪಸ್ಕ ಹಬ್ಬದ ಊಟವನ್ನು ಮಾಡಲು ಶಿಷ್ಯರು ಹೇಗೆ ಸ್ಥಳವನ್ನು ಕಂಡುಹಿಡಿದರು? ಯೇಸು ಅವರಿಗೆ ಪಟ್ಟಣದ ಒಳಗೆ ಹೋಗಿ ಅಲ್ಲಿ ಒಬ್ಬ ಮನುಷ್ಯನು ನೀರಿನ ಕೊಡವನ್ನು ಹೊತ್ತುಕೊಂಡು ಹೋಗುತ್ತಿರುವನು ಅವನನ್ನು ಹಿಂಬಾಲಿಸಿರಿ, ಮತ್ತು ಅವನನ್ನು ಪಸ್ಕದ ಊಟವನ್ನು ಮಾಡಲು ಉಪಯೋಗ ಆಗುವ ಅಥಿತಿಯ ಕೋಣೆಯು ಎಲ್ಲಿದೆ ಎಂದು ಅವನನ್ನು ಕೇಳಿರಿ ಅಂದನು.
14:18 kkmc ಅವರು ಮೇಜಿನ ಮೇಲೆ ಒರಗಿಕೊಂಡು ಊಟ ಮಾಡುತ್ತಿರುವಾಗ ಯೇಸು ಏನು ಹೇಳಿದನು? ಯೇಸು ನನ್ನ ಜೊತೆ ಊಟ ಮಾಡುತ್ತಿರುವ ಶಿಷ್ಯರಲ್ಲಿ ಒಬ್ಬನು ತನ್ನನ್ನು ಹಿಡಿದುಕೊಡುವನು ಎಂದು ಹೇಳಿದನು.
14:20 grhr ಯೇಸು ಯಾವ ಶಿಷ್ಯನು ತನ್ನನ್ನು ಹಿಡಿದುಕೊಡುತ್ತಾನೆ ಎಂದು ಹೇಳಿದನು? ಯೇಸು ತನ್ನೊಂದಿಗೆ ಊಟದ ಬಟ್ಟಲಿನ ಒಳಗೆ ಕೈ ಅದ್ದುವ ಶಿಷ್ಯನೇ ತನ್ನನ್ನು ಹಿಡಿದುಕೊಡುವನೆಂದು ಹೇಳಿದನು.
14:21 lk7c ಯೇಸುವಿಗೆ ದ್ರೋಹ ಮಾಡಿದ ಶಿಷ್ಯನ ಗತಿಯ ಬಗ್ಗೆ ಯೇಸು ಏನು ಹೇಳಿದನು? ಯೇಸು ಆ ಮನುಷ್ಯನು ಹುಟ್ಟದಿದ್ದರೆ ಅವನಿಗೆ ಒಳ್ಳೇದಾಗಿತ್ತು ಎಂದು ಹೇಳಿದನು.
14:22 jok6 ಯೇಸು ಶಿಷ್ಯರಿಗೆ ಮುರಿದ ರೊಟ್ಟಿಯನ್ನು ಕೊಟ್ಟಾಗ ಏನು ಹೇಳಿದನು? ಯೇಸು, “ಇದನ್ನು ತೆಗೆದುಕೊಳ್ಳಿರಿ. ಇದು ನನ್ನ ದೇಹ.” ಎಂದು ಹೇಳಿದನು.
14:24 apk9 ಯೇಸು ಶಿಷ್ಯರಿಗೆ ಪಾತ್ರೆಯನ್ನು ಕೊಟ್ಟಾಗ ಏನು ಹೇಳಿದನು? ಯೇಸು, “ಇದು ನನ್ನ ಒಡಂಬಡಿಕೆಯ ರಕ್ತ, ಅನೇಕರಿಗೋಸ್ಕರ ಸುರಿಸಲ್ಪಡುವ ರಕ್ತ” ಎಂದು ಹೇಳಿದನು.
14:25 r9so ಯೇಸು ತಿರುಗಿ ಯಾವಾಗ ದ್ರಾಕ್ಷಾರಸವನ್ನು ಕುಡಿಯುತ್ತೇನೆಂದು ಹೇಳಿದನು? ಯೇಸು ತಾನು ದೇವರ ರಾಜ್ಯದಲ್ಲಿ ಹೊಸದಾಗಿ ತಿರುಗಿ ದ್ರಾಕ್ಷಾರಸವನ್ನು ಕುಡಿಯುವೆನು ಎಂದು ಹೇಳಿದನು.
14:27 yns3 ಆಲಿವ್ ಮರದ ಗುಡ್ಡದಲ್ಲಿ, ಯೇಸು ತನ್ನ ಶಿಷ್ಯರ ಬಗ್ಗೆ ಏನೆಂದು ಮುಂತಿಳಿಸಿದನು? ಶಿಷ್ಯರೆಲ್ಲರೂ ತನ್ನ ನಿಮಿತ್ತವಾಗಿ ತನ್ನನ್ನು ಬಿಟ್ಟುಹೋಗುತ್ತಾರೆಂದು ಯೇಸು ಮುಂತಿಳಿಸಿದನು.
14:30 gvoq ಪೇತ್ರನು ತಾನು ಎಂದಿಗೂ ಬಿಟ್ಟುಹೋಗುವುದಿಲ್ಲ ಎಂದು ಹೇಳಿದಾಗ ಯೇಸು ಪೇತ್ರನಿಗೆ ಏನೆಂದು ಹೇಳಿದನು? ಯೇಸು ಪೇತ್ರನಿಗೆ ಕೋಳಿಯು ಎರಡು ಸಾರಿ ಕೂಗುವ ಮುಂಚೆ, ಪೇತ್ರನು ಯೇಸುವನ್ನು ಮೂರು ಸಾರಿ ಅಲ್ಲಗಳೆಯುತ್ತಾನೆಂದು ಹೇಳಿದನು.
14:32-34 v9za ಯೇಸು ತಾನು ಪ್ರಾರ್ಥಿಸುತ್ತಿರುವಾಗ ತನ್ನ ಮೂವರು ಶಿಷ್ಯರಿಗೆ ಏನೆಂದು ಹೇಳಿದನು? ಯೇಸು ಅವರಿಗೆ ಅಲ್ಲೇ ಇದ್ದುಕೊಂಡು ಎಚ್ಚರವಾಗಿರಿ ಎಂದು ಹೇಳಿದನು.
14:35 uvgs ಯೇಸು ಯಾವುದಕ್ಕಾಗಿ ಪ್ರಾರ್ಥಿಸಿದನು? ಆ ಗಳಿಗೆಯು ತನ್ನಿಂದ ಬಿಟ್ಟುಹೋಗುವಂತೆ ಯೇಸು ಪ್ರಾರ್ಥಿಸಿದನು.
14:36 u792 ತಂದೆಗೆ ತಾನು ಮಾಡಿದ ಪ್ರಾರ್ಥನೆಗೆ ಉತ್ತರವಾಗಿ ಏನನ್ನು ಸ್ವೀಕರಿಸಲು ಯೇಸು ಬಯಸಿದನು? ಯೇಸು ತನ್ನ ಕುರಿತು ತಂದೆಯ ಚಿತ್ತವು ಏನಾಗಿದೆಯೋ ಅದನ್ನು ಸ್ವೀಕರಿಸಲು ಬಯಸಿದನು.
14:37 vaa4 ಯೇಸು ಮೂವರು ಜನ ಶಿಷ್ಯರ ಬಳಿಗೆ ಹಿಂತಿರುಗಿದಾಗ ಏನನ್ನು ಕಂಡನು? ಮೂವರು ಜನ ಶಿಷ್ಯರು ನಿದ್ರೆಮಾಡುತ್ತಿರುವುದನ್ನು ಯೇಸು ನೋಡಿದನು.
14:40 tadu ಎರಡನೆಯ ಸಾರಿ ಪ್ರಾರ್ಥನೆ ಮಾಡಿ ಹಿಂತಿರುಗಿದಾಗ ಯೇಸು ಏನನ್ನು ನೋಡಿದನು? ಮೂವರು ಜನ ಶಿಷ್ಯರು ನಿದ್ರೆಮಾಡುತ್ತಿರುವುದನ್ನು ಯೇಸು ನೋಡಿದನು.
14:41 yc6c ಮೂರನೆಯ ಸಾರಿ ಪ್ರಾರ್ಥನೆ ಮಾಡಿ ಹಿಂತಿರುಗಿದಾಗ ಯೇಸು ಏನನ್ನು ನೋಡಿದನು? ಮೂವರು ಜನ ಶಿಷ್ಯರು ನಿದ್ರೆಮಾಡುತ್ತಿರುವುದನ್ನು ಯೇಸು ನೋಡಿದನು.
14:44-45 xku4 ಯೇಸು ಯಾವ ವ್ಯಕ್ತಿ ಎಂದು ಕಾವಲುಗಾರರಿಗೆ ತೋರಿಸಲು ಯೂದನು ಯಾವ ಸೂಚನೆಯನ್ನು ಕೊಟ್ಟನು? ಯೇಸು ಯಾವ ವ್ಯಕ್ತಿ ಎಂದು ತೋರಿಸಲು ಯೂದನು ಯೇಸುವಿಗೆ ಮುದ್ದಿಟ್ಟನು.
14:48-49 afwa ಪವಿತ್ರಗ್ರಂಥದ ಮಾತು ನೆರವೇರುವಂತೆ ಯೇಸುವನ್ನು ಬಂಧಿಸಿದಾಗ ಏನು ಮಾಡಲಾಯಿತು ಎಂದು ಯೇಸು ಹೇಳಿದನು? ಯೇಸುವನ್ನು ಕಳ್ಳನಂತೆ ಕತ್ತಿ ಮತ್ತು ಕೋಲುಗಳಿಂದ ಹಿಡಿಯಲು ಬಂದಿದ್ದರಿಂದ ಪವಿತ್ರಗ್ರಂಥದ ವಾಕ್ಯವು ನೆರವೇರಿತು ಎಂದು ಯೇಸು ಹೇಳಿದನು.
14:50 v5q7 ಯೇಸುವು ಬಂಧಿತನಾದಾಗ ಆತನ ಜೊತೆಯಲ್ಲಿ ಇದ್ದವರು ಏನು ಮಾಡಿದರು? ಯೇಸುವಿನೊಂದಿಗೆ ಇದ್ದವರು ಆತನನ್ನು ಬಿಟ್ಟು ಓಡಿಹೋದರು.
14:51-52 xj5b ಯೇಸು ಬಂಧಿತನಾದಾಗ ಯೇಸುವನ್ನು ಹಿಂಬಾಲಿಸುತ್ತಿದ್ದ ಯೌವನಸ್ಥನು ಏನು ಮಾಡಿದನು? ಆ ಯೌವನಸ್ಥನು ತನ್ನ ನಾರುಮಡಿಯನ್ನು ಅಲ್ಲೇ ಬಿಟ್ಟು ಬರೀ ಮೈಲಿ ಓಡಿಹೋದನು.
14:53-54 mcjr ಯೇಸುವನ್ನು ಮಹಾಯಾಜಕನ ಬಳಿಗೆ ಕರೆದುಕೊಂಡು ಹೋದಾಗ ಪೇತ್ರನು ಎಲ್ಲಿ ಇದ್ದನು? ಬೆಂಕಿ ಕಾಯಿಸಿಕೊಳ್ಳಲು ಪೇತ್ರನು ಬೆಂಕಿಯ ಬಳಿ ಕಾವಲುಗಾರರ ಮಧ್ಯದಲ್ಲಿ ಕುಳಿತುಕೊಂಡಿದ್ದನು.
14:55-56 k3gb ಯೇಸು ನ್ಯಾಯಸ್ಥಾನಕ್ಕೆ ಒಪ್ಪಿಸಿದಾಗ ಆತನ ವಿರುದ್ದ ಹೇಳಿದ್ದ ಸಾಕ್ಷಿಯಲ್ಲಿ ಏನು ತಪ್ಪಾಗಿತ್ತು? ಯೇಸುವಿನ ವಿರುದ್ದ ಹೇಳಿದ್ದ ಸಾಕ್ಷಿಯು ತಪ್ಪಾಗಿತ್ತು ಮತ್ತು‌ ಅವು ಒಂದಕ್ಕೊಂದು ಸರಿಬೀಳಲಿಲ್ಲ.
14:61 g1ev ಯೇಸು ಯಾರೆಂದು ಕೇಳಲು ಮಹಾಯಾಜಕನು ಯೇಸುವಿಗೆ ಯಾವ ಪ್ರಶ್ನೆಯನ್ನು ಕೇಳಿದನು? ಮಹಾಯಾಜಕನು ಯೇಸುವಿಗೆ ನೀನು ಸ್ತುತ್ಯ ದೇವರ ಮಗನಾದ ಕ್ರಿಸ್ತನೋ ಎಂದು ಕೇಳಿದನು.
14:62 rabu ಮಹಾಯಾಜಕನ ಪ್ರಶ್ನೆಗೆ ಯೇಸು ಏನೆಂದು ಉತ್ತರಿಸಿದನು? ಯೇಸು, “ನಾನೇ” ಎಂದು ಹೇಳಿ ಉತ್ತರಿಸಿದನು.
14:64 xher ಯೇಸುವಿನ ಉತ್ತರವನ್ನು ಕೇಳಿಸಿಕೊಂಡು ಮಹಾಯಾಜಕನು ಯೇಸು ಯಾವ ವಿಷಯದಲ್ಲಿ ತಪ್ಪಿತಸ್ಥನೆಂದು ಹೇಳಿದನು? ದೇವದೂಷಣೆಯ ಬಗ್ಗೆ ಯೇಸು ತಪ್ಪಿತಸ್ಥನೆಂದು ಮಹಾಯಾಜಕನು ಹೇಳಿದನು.
14:65 if4h ಯೇಸುವಿಗೆ ಮರಣದಂಡನೆಯನ್ನು ವಿಧಿಸಿದ ಮೇಲೆ ಅವರು ಯೇಸುವಿಗೆ ಏನು ಮಾಡಿದರು? ಅವರು ಆತನ ಮೇಲೆ ಉಗುಳಿದರು, ಆತನಿಗೆ ಗುದಿದ್ದರು, ಮತ್ತು ಆತನನ್ನು ಹೊಡೆದರು.
14:66-68 tjt2 ಪೇತ್ರನು ಯೇಸುವಿನೊಂದಿಗೆ ಇದ್ದನು ಎಂದು ಹೇಳಿದ ದಾಸಿಗೆ ಪೇತ್ರನು ಕೊಟ್ಟ ಉತ್ತರವೇನಾಗಿತ್ತು? ಆ ದಾಸಿಯು ಯಾವುದರ ಬಗ್ಗೆ ಮಾತನಾಡುತ್ತಿದ್ದಾಳೆ ಎಂದು ನನಗೆ ಅರ್ಥವಾಗಿಲ್ಲ ಅಥವಾ ಅವನಿಗೆ ತಿಳಿದಿಲ್ಲವೆಂದು ಪೇತ್ರನು ಹೇಳಿದನು.
14:71 orue ಯೇಸುವಿನ ಶಿಷ್ಯರಲ್ಲಿ ಇವನೂ ಒಬ್ಬನಾಗಿದ್ದನು ಎಂದು ಮೂರನೆಯ ಬಾರಿ ಅವನನ್ನು ಕೇಳಿದಾಗ ಪೇತ್ರನ ಪ್ರತಿಕ್ರಿಯೆಯು ಏನಾಗಿತ್ತು? ಯೇಸುವನ್ನು ತಾನು ಅರಿಯನೆಂದು ಆಣೆ ಮಾಡುತ್ತಾ ಪೇತ್ರನು ತನ್ನನ್ನು ತಾನು ಶಪಿಸಿಕೊಳ್ಳುವುದಕ್ಕೂ ಪ್ರಾರಂಭಿಸಿದನು.
14:72 dgcn ಪೇತ್ರನು ಮೂರನೆಯ ಸಾರಿ ಉತ್ತರಿಸಿದ ನಂತರ ಏನಾಯಿತು? ಪೇತ್ರನು ಮೂರನೆಯ ಸಾರಿ ಉತ್ತರಿಸಿದ ನಂತರ, ಕೋಳಿಯು ಎರಡನೆಯ ಸಾರಿ ಕೂಗಿತು.
14:72 wesn ಕೋಳಿಯು ಕೂಗಿದ್ದನ್ನು ಕೇಳಿಸಿಕೊಂಡ ನಂತರ ಪೇತ್ರನು ಏನು ಮಾಡಿದನು? ಕೋಳಿಯು ಕೂಗಿದ್ದನ್ನು ಕೇಳಿಸಿಕೊಂಡ ನಂತರ, ಪೇತ್ರನು ವ್ಯಥೆಪಟ್ಟು ಅತ್ತನು.
15:1 myuo ಬೆಳಗಾದ ಕೂಡಲೇ ಮುಖ್ಯ ಯಾಜಕರು ಯೇಸುವಿಗೆ ಏನು ಮಾಡಿದರು? ಬೆಳಗಾದ ಕೂಡಲೇ, ಅವರು ಯೇಸುವನ್ನು ಕಟ್ಟಿ ಆತನನ್ನು ಪಿಲಾತನಿಗೆ ಒಪ್ಪಿಸಿದರು.
15:5 w0fh ಮುಖ್ಯ ಯಾಜಕರು ಯೇಸುವಿನ ವಿರುದ್ದ ಅನೇಕ ಆರೋಪಗಳನ್ನು ಮಾಡುತ್ತಿದ್ದಾಗ, ಯೇಸುವಿನ ಬಗ್ಗೆ ಪಿಲಾತನಿಗೆ ಏನು ಆಶ್ಚರ್ಯವೆನಿಸಿತು? ಯೇಸು ಏನೂ ಉತ್ತರ ಕೊಡದೇ ಇದ್ದುದ್ದಕ್ಕೆ ಪಿಲಾತನಿಗೆ ಆಶ್ಚರ್ಯವಾಯಿತು.
15:6 juii ಸಾಮಾನ್ಯವಾಗಿ ಹಬ್ಬದ ಸಮಯಯಲ್ಲಿ ಪಿಲಾತನು ಜನರಿಗೆ ಏನು ಮಾಡುತ್ತಿದ್ದನು? ಸಾಮಾನ್ಯವಾಗಿ ಹಬ್ಬದ ಸಮಯಯಲ್ಲಿ ಪಿಲಾತನು ಜನರು ಯಾವ ಖೈದಿಯನ್ನು ಬಿಟ್ಟುಕೊಡಬೇಕೆಂದು ಕೇಳಿಕೊಳ್ಳುತ್ತಿದ್ದರೋ ಅವನನ್ನು ಬಿಟ್ಟುಕೊಡುತ್ತಿದ್ದನು.
15:10 c38r ಯೇಸುವನ್ನು ಜನರಿಗೆ ಬಿಟ್ಟುಕೊಡಲು ಯಾಕೆ ಬಯಸಿದನು? ಪಿಲಾತನಿಗೆ ಮಹಾಯಾಜಕರು ಹೊಟ್ಟೇಕಿಚ್ಚಿನಿಂದ ಯೇಸುವನ್ನು ತನಗೆ ಒಪ್ಪಿಸಿಕೊಟ್ಟಿದ್ದಾರೆಂದು ತಿಳಿದಿತ್ತು.
15:11 cjv6 ಜನರ ಗುಂಪು ಯಾರನ್ನು ಬಿಟ್ಟುಕೊಡಬೇಕೆಂದು ಕೂಗಿತು? ಜನರ ಗುಂಪು ಬರ್ಬನನ್ನು ಬಿಟ್ಟುಕೊಡಬೇಕೆಂದು ಕೂಗಿತು.
15:12-13 v1o8 ಯೆಹೂದ್ಯರ ಅರಸನಿಗೆ ಏನು ಮಾಡಬೇಕೆಂದು ಜನರ ಗುಂಪು ಹೇಳಿತು? ಯೆಹೂದ್ಯರ ಅರಸನನ್ನು ಶಿಲುಬೆಗೆ ಹಾಕಿಸಬೇಕೆಂದು ಜನರ ಗುಂಪು ಹೇಳಿತು.
15:17 hku5 ಸೈನಿಕರ ಗುಂಪು ಯೇಸುವನ್ನು ಹೇಗೆ ಉಡಿಸಿದರು? ಸೈನಿಕರು ಯೇಸುವಿನ ಮೇಲೆ ಕೆಂಪು ಒಲ್ಲಿಯನ್ನು ಹೊದಿಸಿದರು ಮತ್ತು ಮುಳ್ಳಿನ ಕಿರೀಟವನ್ನು ಹೆಣೆದು ಆತನಿಗಿಟ್ಟರು.
15:21 vt0v ಯೇಸುವಿನ ಶಿಲುಬೆಯನ್ನು ಯಾರು ಹೊತ್ತರು? ದಾರಿಹೋಕನಾದ, ಕುರೇನೆ ಪಟ್ಟಣದ ಸೀಮೋನನ್ನು ಯೇಸುವಿನ ಶಿಲುಬೆಯನ್ನು ಹೊರುವಂತೆ ಬಲವಂತ ಮಾಡಿದರು.
15:22 ekh7 ಯೇಸುವನ್ನು ಶಿಲುಬೆಗೆ ಹಾಕಲು ಸೈನಿಕರು ಆತನನ್ನು ಕರೆದುಕೊಂಡು ಬಂದ ಸ್ಥಳದ ಹೆಸರೇನು? ಸ್ಥಳದ ಹೆಸರು ಗೊಲ್ಗತ್ತಾ ಎಂದು, ಅಂದರೆ ಕಪಾಲಸ್ಥಳ.
15:24 osm6 ಯೇಸುವಿನ ಉಡುಪುಗಳನ್ನು ಸೈನಿಕರು ಏನು ಮಾಡಿದರು? ಸೈನಿಕರು ಯೇಸುವಿನ ಉಡುಪುಗಳಿಗಾಗಿ ಚೀಟು ಹಾಕಿದರು.
15:26 pb4n ಸೈನಿಕರು ಯೇಸುವಿನ ವಿರುದ್ದ ಸೂಚಕಫಲಕದಲ್ಲಿ ಏನೆಂದು ಬರೆದರು? ಸೈನಿಕರು, “ಯೆಹೂದ್ಯರ ಅರಸನು”ಎಂಬ ಸೂಚಕಫಲಕದಲ್ಲಿ ಬರೆದರು.
15:29-30 dh4r ಹಾದು ಹೋಗುತ್ತಿರುವವರು ಯೇಸುವಿಗೆ ಏನು ಮಾಡುವಂತೆ ಸವಾಲು ಹಾಕಿದರು? ಹಾದು ಹೋಗುತ್ತಿರುವವರು ಯೇಸುವಿಗೆ ನಿನ್ನನ್ನು ನೀನು ರಕ್ಷಿಸಿಕೋ ಮತ್ತು ಶಿಲುಬೆಯಿಂದ ಕೆಳಗೆ ಇಳಿದು ಬಾ ಎಂದು ಸವಾಲು ಹಾಕಿದರು.
15:31-32 o4cc ಅವರುಗಳು ನಂಬುವಂತೆ ಯೇಸು ಏನು ಮಾಡಬೇಕು ಎಂದು ಮುಖ್ಯ ಯಾಜಕರು ಹೇಳಿದರು? ಅವರುಗಳು ನಂಬುವಂತೆ ಯೇಸು ಶಿಲುಬೆಯಿಂದ ಕೆಳಗೆ ಇಳಿದು ಬರಬೇಕೆಂದು ಮುಖ್ಯ ಯಾಜಕರು ಹೇಳಿದರು.
15:32 wdk2 ಯೇಸುವನ್ನು ಅಣಕಿಸುತ್ತಾ ಮುಖ್ಯ ಯಾಜಕರು ಯೇಸುವಿಗೆ ಯಾವ ಬಿರುದುಗಳನ್ನು ಉಪಯೋಗಿಸಿದರು? ಮುಖ್ಯ ಯಾಜಕರು ಯೇಸುವನ್ನು ಕ್ರಿಸ್ತನೆಂದು ಮತ್ತು ಇಸ್ರಾಯೇಲಿನ ಅರಸನು ಎಂದು ಕರೆದರು.
15:33 ppto ಆರು ಗಂಟೆಗೆ ಏನಾಯಿತು? ಆರು ಗಂಟೆಗೆ, ದೇಶದ ಮೇಲೆಲ್ಲಾ ಕತ್ತಲೆ ಕವಿಯಿತು.
15:34 t3wi ಒಂಬತ್ತು ಘಂಟೆಯ ಸಮಯದಲ್ಲಿ ಯೇಸು ಏನೆಂದು ಕೂಗಿದನು? ಯೇಸು, “ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನನ್ನು ಕೈಬಿಟ್ಟಿದ್ದೀ” ಎಂದು ಕೂಗಿದನು.
15:37 x92v ಯೇಸು ಸಾಯುವ ಮೊದಲು ಏನು ಮಾಡಿದನು? ಯೇಸು ಸಾಯುವ ಮೊದಲು ಮಹಾಶಬ್ದದಿಂದ ಕೂಗಿದನು.
15:38 jdq8 ಯೇಸು ಮರಣ ಹೊಂದಿದಾಗ ದೇವಾಲಯದಲ್ಲಿ ಏನಾಯಿತು? ಯೇಸು ಮರಣ ಹೊಂದಿದಾಗ ದೇವಾಲಯದ ಪರದೆಯು ಮೇಲಿನಿಂದ ಕೆಳಗಿನವರೆಗೂ ಎರಡು ಭಾಗವಾಗಿ ಹರಿದು ಹೋಯಿತು.
15:39 tf5m ಯೇಸು ಹೇಗೆ ಸತ್ತನು ಎಂದು ನೋಡಿದಾಗ ಶತಾಧಿಪತಿಯು ಏನು ಮಾಡಿದನು? ಶತಾಧಿಪತಿಯು ನಿಜವಾಗಲೂ ಈ ಮನುಷ್ಯನು ದೇವರ ಮಗನು ಎಂದು ಸಾಕ್ಷಿ ಹೇಳಿದನು.
15:42 mthb ಯೇಸುವು ಯಾವ ದಿನದಲ್ಲಿ ಸತ್ತನು? ಯೇಸು ಸಬ್ಬತ್‌ ದಿನದ ಹಿಂದಿನ ದಿನ ಸತ್ತನು.
15:43-46 yusf ಯೇಸು ಸತ್ತ ನಂತರ ಅರಿಮಥಾಯದ ಯೋಸೇಫನು ಏನು ಮಾಡಿದನು? ಅರಿಮಥಾಯದ ಯೋಸೇಫನು ಶಿಲುಬೆಯಿಂದ ಯೇಸುವನ್ನು ಕೆಳಗೆ ಇಳಿಸಿದನು, ಆತನನ್ನು ನಾರುಮಡಿಯಲ್ಲಿ ಸುತ್ತಿದನು, ಮತ್ತು ಸಮಾಧಿಯಲ್ಲಿಟ್ಟನು, ಸಮಾಧಿಯ ಬಾಗಿಲಿಗೆ ಕಲ್ಲನ್ನು ಉರುಳಿಸಿದನು.
16:1-2 l3lc ಯೇಸುವಿನ ದೇಹಕ್ಕೆ ಸುಗಂಧ ತೈಲವನ್ನು ಹಚ್ಚಲು ಸ್ತ್ರೀಯರು ಯಾವಾಗ ಹೋದರು? ಸೂರ್ಯನು ಹುಟ್ಟುವ ಮೊದಲೇ, ವಾರದ ಮೊದಲನೆಯ ದಿನದಲ್ಲಿ ಆ ಹೆಂಗಸು ಸಮಾಧಿಯ ಬಳಿಗೆ ಹೋದಳು.
16:4 b2oz ಸಮಾಧಿಯ ಬಾಗಿಲನ್ನು ತುಂಬಾ ದೊಡ್ಡ ಕಲ್ಲಿನಿಂದ ಮುಚ್ಚಿಡಲಾಗಿತ್ತು. ಆದರೆ ಆ ಸ್ತ್ರೀಯರು ಸಮಾಧಿಯೊಳಗೆ ಹೇಗೆ ಪ್ರವೇಶಿಸಿದರು? ಸಮಾಧಿಯ ಪ್ರವೇಶ ದ್ವಾರದಿಂದ ಯಾರೋ ತುಂಬಾ ದೊಡ್ಡ ಕಲ್ಲನ್ನು ಉರುಳಿಸಿದ್ದರು.
16:5 habp ಆ ಸ್ತ್ರೀಯರು ಸಮಾಧಿಯ ಒಳಗೆ ಪ್ರವೇಶಿಸಿದಾಗ ಏನನ್ನು ನೋಡಿದರು? ಒಬ್ಬ ಯೌವನಸ್ಥನು ಬಿಳಿಯ ಬಟ್ಟೆಯನ್ನು ಹಾಕಿಕೊಂಡು ಬಲಗಡೆಯಲ್ಲಿ ಕುಳಿತುಕೊಂಡಿರುವುದನ್ನು ಆ ಸ್ತ್ರೀಯರು ನೋಡಿದರು.
16:6 nvic ಆ ಯೌವನಸ್ಥನು ಯೇಸುವಿನ ಬಗ್ಗೆ ಏನು ಹೇಳಿದನು? ಆ ಯೌವನಸ್ಥನು ಯೇಸು ಎದ್ದಿದ್ದಾನೆ, ಮತ್ತು ಆತನು ಇಲ್ಲಿ ಇಲ್ಲ ಎಂದು ಹೇಳಿದನು.
16:7 iqwx ಶಿಷ್ಯರು ಯೇಸುವನ್ನು ಎಲ್ಲಿ ಭೇಟಿಯಾಗುತ್ತರೆಂದು ಆ ಯೌವನಸ್ಥನು ಹೇಳಿದನು? ಶಿಷ್ಯರು ಯೇಸುವನ್ನು ಗಲಿಲಾಯದಲ್ಲಿ ಭೇಟಿಯಾಗುತ್ತರೆಂದು ಆ ಯೌವನಸ್ಥನು ಹೇಳಿದನು.
16:9 mgj4 ಯೇಸು ತನ್ನ ಪುನರುತ್ಥಾನದ ನಂತರ ಮೊದಲಿಗೆ ಯಾರಿಗೆ ಕಾಣಿಸಿಕೊಂಡನು? ಮೊದಲಿಗೆ ಯೇಸು ಮಗ್ದಲದ ಮರಿಯಳಿಗೆ ಕಾಣಿಸಿಕೊಂಡನು.
16:11 ge9j ಯೇಸುವು ಬದುಕಿರುವುದನ್ನು ಆಕೆ ನೋಡಿದ್ದಾಗಿ ಮರಿಯಳು ಹೇಳಿದಾಗ ಯೇಸುವಿನ ಶಿಷ್ಯರು ಹೇಗೆ ಪ್ರತಿಕ್ರಿಯಿಸಿದರು? ಶಿಷ್ಯರು ನಂಬಲಿಲ್ಲ.
16:13 bhrb ಇನ್ನೂ ಇಬ್ಬರು ಜನರು ಯೇಸು ಬದುಕಿರುವುದನ್ನು ನೋಡಿದ್ದೇವೆಂದು ಹೇಳಿದಾಗ ಯೇಸುವಿನ ಶಿಷ್ಯರ ಪ್ರತಿಕ್ರಿಯೆ ಹೇಗಿತ್ತು? ಶಿಷ್ಯರು ನಂಬಲಿಲ್ಲ.
16:14 f1b4 ಯೇಸು ಶಿಷ್ಯರಿಗೆ ಕಾಣಿಸಿಕೊಂಡಾಗ, ಅವರ ಅಪನಂಬಿಕೆಯ ಬಗ್ಗೆ ಆತನು ಏನು ಹೇಳಿದನು? ಅವರ ಅಪನಂಬಿಕೆಯ ನಿಮಿತ್ತ ಯೇಸು ಶಿಷ್ಯರನ್ನು ಗದರಿಸಿದನು.
16:15 zvc5 ಯೇಸು ಶಿಷ್ಯರಿಗೆ ಯಾವ ಆಜ್ಞೆಯನ್ನು ಕೊಟ್ಟನು? ಯೇಸು ಶಿಷ್ಯರಿಗೆ ಲೋಕದಲ್ಲೆಡೆ ಹೋಗಿ ಸುವಾರ್ತೆಯನ್ನು ಸಾರಿರಿ ಎಂದು ಯೇಸು ಆಜ್ಞಾಪಿಸಿದನು.
16:16 p7ix ಯಾರು ರಕ್ಷಣೆ ಹೊಂದುವರು ಎಂದು ಯೇಸು ಹೇಳಿದನು? ಯಾರು ನಂಬಿ ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಾರೋ ಅವರು ರಕ್ಷಣೆ ಹೊಂದುವರು ಎಂದು ಯೇಸು ಹೇಳಿದನು.
16:16 u11w ಯಾರು ದಂಡನಾ ತೀರ್ಪಿಗೆ ಗುರಿಯಾಗುವರು ಎಂದು ಯೇಸು ಹೇಳಿದನು? ಯಾರು ನಂಬುವುದಿಲ್ಲವೋ ಅವರು ದಂಡನಾ ತೀರ್ಪಿಗೆ ಗುರಿಯಾಗುವರು ಎಂದು ಯೇಸು ಹೇಳಿದನು.
16:17-18 l58h ನಂಬುವವರಿಗೆ ಯಾವ ಸೂಚಕಕಾರ್ಯಗಳು ಜೊತೆಯಾಗಿ ಬರುತ್ತವೆ ಎಂದು ಯೇಸು ಹೇಳಿದನು? ಯಾರು ನಂಬುತ್ತರೋ ಅವರು ದೆವ್ವಗಳನ್ನು ಬಿಡಿಸುತ್ತಾರೆ, ಹೊಸ ಭಾಷೆಗಳಲ್ಲಿ ಮಾತನಾಡುವರು, ವಿಷಪದಾರ್ಥವನ್ನೇನಾದರೂ ಕುಡಿದರೂ ಅವರಿಗೆ ಯಾವ ಕೇಡೂ ಆಗುವದಿಲ್ಲ, ಮತ್ತು ಇತರರನ್ನು ಸ್ವಸ್ಥ ಮಾಡುವರು ಎಂದು ಯೇಸು ಹೇಳಿದನು.
16:19 bac6 ಶಿಷ್ಯರೊಂದಿಗೆ ಮಾತನಾಡಿದ ನಂತರ ಯೇಸುವಿಗೆ ಏನಾಯಿತು? ಶಿಷ್ಯರೊಂದಿಗೆ ಮಾತನಾಡಿದ ನಂತರ, ಯೇಸು ಪರಲೋಕಕ್ಕೆ ಎತ್ತಲ್ಪಟ್ಟನು ಮತ್ತು ದೇವರ ಬಲಗಡೆಯಲ್ಲಿ ಕುಳಿತುಕೊಂಡನು.
16:20 wd92 ಅನಂತರ ಶಿಷ್ಯರು ಏನು ಮಾಡಿದರು? ಅನಂತರ ಶಿಷ್ಯರು ಅಲ್ಲಿಂದ ಎಲ್ಲಾ ಕಡೆಗೂ ಹೋಗಿ ಸುವಾರ್ತೆ ಸಾರಿದರು.
16:20 f45x ಆಗ ಕರ್ತನು ಏನು ಮಾಡಿದನು? ಆಗ ಕರ್ತನು ಶಿಷ್ಯರೊಂದಿಗೆ ಕೆಲಸ ಮಾಡಿದನು ಮತ್ತು ವಾಕ್ಯವನ್ನು ಅನೇಕ ಅದ್ಬುತ ಸೂಚಕಕಾರ್ಯಗಳಿಂದ ದೃಢಪಡಿಸಿದನು.