kn_tn/1CO/10/14.md

2.2 KiB

ವಿಗ್ರಹಾರಾಧನೆಯಿಂದ ದೂರ ಓಡಿಹೋಗಿರಿ

"ವಿವೇಕಪೂರ್ವಕರಾಗಿಯೇ ವಿಗ್ರಹಾರಾಧನೆಯಿಂದ ದೂರ ಇರಿ" (ರೂಪಕಾಲಂಕಾರವನ್ನು ನೋಡಿರಿ)

ಆಶೀರ್ವಾದದ ಪಾತ್ರೆ

ಕರ್ತನ ಮೇಜಿನ ಸಂಸ್ಕಾರದ ಸಮಯದಲ್ಲಿ ದ್ರಾಕ್ಷಾರಸದಿಂದ ತುಂಬಿರುವ ಪಾತ್ರೆಯನ್ನು ವಿವರಿಸುವದಕ್ಕಾಗಿ ಪೌಲನು ಈ ಭಾವನೆಯನ್ನು ಉಪಯೋಗಿಸಿದ್ದಾನೆ.

ಕ್ರಿಸ್ತನ ರಕ್ತದಲ್ಲಿ ಪಾಲುಗಾರರಾಗಿದ್ದೇವೆಂಬದನ್ನು ಇದು ಸೂಚಿಸುವದಿಲ್ಲವೇ?

ನಾವು ಪಾಲುಗಾರರಾಗುವ ಪಾನಪಾತ್ರೆಯು ಕ್ರಿಸ್ತನ ರಕ್ತದಲ್ಲಿ ಪಾಲುಗಾರರಾಗುವದನ್ನು ಪ್ರತಿನಿಧಿಸುತ್ತದೆ. "ನಾವು ಕ್ರಿಸ್ತನ ರಕ್ತದಲ್ಲಿ ಪಾಲುಗಾರರಾಗುತ್ತೇವೆ" (ಯುಡಿಬಿ; ಆಲಂಕಾರಿಕ ಪ್ರಶ್ನೆ ನೋಡಿರಿ)

ನಾವು ಮುರಿಯುವ ರೊಟ್ಟಿ, ಕ್ರಿಸ್ತನ ಶರೀರದಲ್ಲಿ ಪಾಲುಗಾರರಾಗುವದನ್ನು ಸೂಚಿಸುವದಿಲ್ಲವೇ?

"ರೊಟ್ಟಿಯಲ್ಲಿ ಪಾಲುಗಾರರಾಗುವಾಗ ನಾವು ಕ್ರಿಸ್ತನ ದೇಹದಲ್ಲಿ ಪಾಲುಗಾರರಾಗುತ್ತೇವೆ" (ಯುಡಿಬಿ; ಆಲಂಕಾರಿಕ ಪ್ರಶ್ನೆ ನೋಡಿರಿ)

ಪಾಲುಗಾರರಾಗುವದು

"ಭಾಗಿಯಾಗುವುದು" ಅಥವಾ "ಇತರರೊಂದಿಗೆ ಸಮಾನವಾಗಿ ಪಾಲುತೆಗೆದುಕೊಳ್ಳುವುದು"

ರೊಟ್ಟಿಯ ತುಂಡು

ತಿನ್ನುವದಕ್ಕಿಂತ ಮೊದಲು ಚೂರುಗಳಾಗಿ ಮುರಿಯುವ ಅಥವಾ ಚೂರುಚೂರು ಮಾಡುವ ಬೇಯಿಸಿದ ರೊಟ್ಟಿ.