kn_tn/1CO/09/03.md

2.1 KiB

ತಿನ್ನುವ ಮತ್ತು ಕುಡಿಯುವ ಅಧಿಕಾರವು ನಮಗಿದೆಯೇ?

"ಸಭೆಯಿಂದ ತಿನ್ನಲು ಮತ್ತು ಕುಡಿಯಲು ಬೇಕಾದ ಪದಾರ್ಥಗಳನ್ನು ಪಡೆಯುವ ಸಂಪೂರ್ಣ ಅಧಿಕಾರ ನಮಗಿದೆ." (ಆಲಂಕಾರಿಕ ಪ್ರಶ್ನೆ ನೋಡಿರಿ)

ನಾವು

ಪೌಲ ಮತು ಬಾರ್ನಬನನ್ನು ಸೂಚಿಸುತ್ತದೆ (ಒಳಗೊಂಡಿರುವದನ್ನು ನೋಡಿರಿ).

ಉಳಿದ ಅಪೊಸ್ತಲರಂತೆ ಮತ್ತು ಕರ್ತನಲ್ಲಿ ಸಹೋದರರಾಗಿರುವವರಂತೆ ಹಾಗೂ ಕೇಫನಂತೆ, ವಿಶ್ವಾಸಿಯಾಗಿರುವಾಕೆಯನ್ನು ಹೆಂಡತಿಯನ್ನಾಗಿ ತೆಗೆದುಕೊಳ್ಳಲು ನಮಗೆ ಅಧಿಕಾರವಿಲ್ಲವೇ?

"ಒಂದುವೇಳೆ ನಮಗೆ ನಂಬಿಕೆಯಲ್ಲಿರುವ ಹೆಂಡತಿಯರಿರುವದಾದರೆ, ಅವರನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವ ಅಧಿಕಾರವು ನಮಗಿದೆ ಯಾಕೆಂದರೆ ಉಳಿದ ಅಪೊಸ್ತಲರು ಹೀಗೆಯೇ ಮಾಡುವವರಾಗಿದ್ದಾರೆ, ಕರ್ತನ ಸಹೋದರರು ಮತ್ತು ಕೇಫನು ಹೀಗೆಯೇ ಮಾಡುತ್ತಾನೆ." (ಆಲಂಕಾರಿಕ ಪ್ರಶ್ನೆ ನೋಡಿರಿ)

ಅಥವಾ ಬಾರ್ನಬನು ಮತ್ತು ನಾನು ಮಾತ್ರವೇ ಕಲಸ ಮಾಡಬೇಕೇ?

"ಬಾರ್ನಬನಿಗೂ ಮತ್ತು ನನಗೂ ಕೆಲಸ ಮಾಡದೆಯೇ ಇರುವ ಅಧಿಕಾರವಿದೆ." ಅಥವಾ "ಆದರೆ ಹಣ ಸಂಪಾದಿಸುವದಕ್ಕಾಗಿ ನಾನು ಮತ್ತು ಬಾರ್ನಬನು ದುಡಿಯಬೇಕೆಂದು ನೀವು ಬಯಸುತ್ತೀರಿ." (ಆಲಂಕಾರಿಕ ಪ್ರಶ್ನೆ ನೋಡಿರಿ)