kn_tn/1CO/08/01.md

2.1 KiB

ಈಗ ನೋಡುವ ವಿಷಯ

ಕೊರಿಂಥದವರು ಆತನಿಗೆ ಕೇಳಿದ ಮುಂದಿನ ಪ್ರಶ್ನೆಗೆ ಹೋಗಲು ಪೌಲನು ಈ ಪದವನ್ನು ಬಳಸಿದ್ದಾನೆ.

ವಿಗ್ರಹಗಳಿಗೆ ನೈವೇದ್ಯ ಮಾಡಿದ ಪದಾರ್ಥಗಳು

ಅನ್ಯದೇವತೆಗಳ ಆರಾಧಕರು ಧಾನ್ಯಗಳು, ಮೀನು, ಕೋಳಿ ಅಥವಾ ಮಾಂಸವನ್ನು ತಮ್ಮ ದೇವರಿಗೆ ಕೊಡುತ್ತಾರೆ. ಯಾಜಕರು ಅದರ ಕೆಲವು ಭಾಗಗಳನ್ನು ಯಜ್ಞವೇದಿಯ ಮೇಲೆ ಸುಡುತ್ತಾರೆ. ಆರಾಧಕನಿಗೆ ಹಿಂದಿರುಗಿಸುವ ಅಥವಾ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುವ ಉಳಿದ ಭಾಗದ ಬಗ್ಗೆ ಪೌಲನು ಮಾತನಾಡುತ್ತಿದ್ದಾನೆ.

"ನಮ್ಮೆಲ್ಲರಿಗೂ ತಿಳುವಳಿಕೆಯಿದೆ" ಎಂಬದು ನಮಗೆ ಗೊತ್ತು

ಕೊರಿಂಥದವರು ಹೇಳುತ್ತಿದ್ದ ವಾಕ್ಯಾಂಶವನ್ನು ಪೌಲನು ಇಲ್ಲಿ ಹೇಳುತ್ತಿದ್ದಾನೆ.

ಉಬ್ಬಿಕೊಳ್ಳುವದು

"ಹೆಮ್ಮೆಪಡುವಂತೆ ಮಾಡುವದು" ಅಥವಾ "ತಮ್ಮ ಯೋಗ್ಯತೆಗಿಂತ ಹೆಚ್ಚಾಗಿ ತಮ್ಮ ಕುರಿತು ಆಲೋಚಿಸುವದು"

ತನಗೆ ತುಂಬಾ ಗೊತ್ತು ಎಂಬದಾಗಿ ಅಂದುಕೊಳ್ಳುವದು

"ಕೆಲವು ವಿಷಯಗಳ ಬಗ್ಗೆ ತನಗೆ ಎಲ್ಲವೂ ಗೊತ್ತು ಎಂಬದಾಗಿ ನಂಬುವದು"

ಅಂಥ ವ್ಯಕ್ತಿಯನ್ನು ಆತನು ಬಲ್ಲವನಾಗಿದ್ದಾನೆ

"ದೇವರು ಆ ವ್ಯಕ್ತಿಯನ್ನು ಬಲ್ಲವನಾಗಿದ್ದಾನೆ" (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)