kn_tn/1CO/07/05.md

2.8 KiB

ಲೈಂಗಿಕ ವಿಷಯದಲ್ಲಿ ಒಬ್ಬರನ್ನೊಬ್ಬರು ವಂಚಿಸಿಕೊಳ್ಳಬೇಡಿರಿ

"ನಿಮ್ಮ ಸಹಕಾರಿಯನ್ನು ಲೈಂಗಿಕವಾಗಿ ಸಂತೃಪ್ತಿಪಡಿಸಲು ನಿರಾಕರಿಸಬೇಡಿರಿ"

ಪ್ರಾರ್ಥನೆಗೆ ಮನಸ್ಸು ಕೊಡುವವರಾಗಿರಬೇಕು

ಆಳವಾದ ಪ್ರಾರ್ಥನೆಗೆ ಮನಸ್ಸು ಕೊಡುವದಕ್ಕಾಗಿ ಲೈಂಗಿಕತೆಯಿಲ್ಲದೆ ಕೆಲವು ದಿವಸ ಇರಲು ಅವರು ಒಟ್ಟಾಗಿ ತೀರ್ಮಾನಿಸಬಹುದು; ಯೆಹೂದ್ಯರಲ್ಲಿ ಇದು ೧

೨ ವಾರಗಳವರೆಗೆ ಇರುತ್ತದೆ.

ನಿಮ್ಮನ್ನು ಒಪ್ಪಿಸಿಕೊಡಿರಿ

"ನಿಮ್ಮನ್ನು ನೀವು ಸಮರ್ಪಿಸಿರಿ"

ಮತ್ತೆ ಕೂಡಿಕೊಳ್ಳಿರಿ

ಲೈಂಗಿಕ ಚಟುವಟಿಕೆಗಳಿಗೆ ಮರಳಿರಿ

ನಿಮಗೆ ದಮೆಯಿಲ್ಲದ ಕಾರಣ

"ಯಾಕೆಂದರೆ ಕೆಲವು ದಿವಸಗಳ ನಂತರ, ನಿಮ್ಮ ಲೈಂಗಿಕ ಬಯಕೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಕಷ್ಟಕರವಾಗುತ್ತದೆ"

ಹೀಗೆ ಮಾಡಬೇಕೆಂದು ನಾನು ಹೇಳುತ್ತಿರುವದು ಹಿತೋಪದೇಶವೇ ಹೊರತು ಆಜ್ಞೆಯಲ್ಲ

ಪ್ರಾರ್ಥನೆಗಾಗಿ ಲೈಂಗಿಕ ಕಾರ್ಯಗಳಿಂದ ಸ್ವಲ್ಪ ಸಮಯ ದೂರವಿರಬೇಕು, ಆದರೆ ಇದು ವಿಶೇಷ ಸಂದರ್ಭಗಳಿಗೆ ಮಾತ್ರವೇ ಹೊರತು ಸತತವಾಗಿ ಮುಂದುವರೆಯುವ ಅವಶ್ಯಕತೆಯಿಲ್ಲ ಎಂದು ಪೌಲನು ಕೊರಿಂಥದವರಿಗೆ ಹೇಳಿದ್ದಾನೆ.

ನಾನಿರುವಂತೆಯೇ

ಮದುವೆಯಾಗದೆ ಇರುವದು (ಹಿಂದೆ ಮದುವೆಯಾಗಿರಬಹುದು ಅಥವಾ ಮದುವೆಯೇ ಆಗದಿರಬಹುದು), ಪೌಲನು ಇರುವಂತೆ.

ಆದರೆ ಪ್ರತಿಯೊಬ್ಬನಿಗೂ ದೇವರಿಂದ ವಿಧವಿಧವಾದ ವರಗಳು ಕೊಡಲ್ಪಟ್ಟಿರುತ್ತವೆ, ಒಬ್ಬನಿಗೆ ಒಂದು ವಿಧ ಮತ್ತೊಬ್ಬನಿಗೆ ಇನ್ನೊಂದು ವಿಧ

"ದೇವರು ಒಬ್ಬ ವ್ಯಕ್ತಿಗೆ ಒಂದು ರೀತಿಯ ಸಾಮರ್ಥ್ಯ ಮತ್ತೊಬ್ಬ ವ್ಯಕ್ತಿಗೆ ಮತ್ತೊಂದು ರೀತಿಯ ಸಾಮರ್ಥ್ಯವನ್ನು ಕೊಡುತ್ತಾನೆ."