kn_tn/1CO/07/01.md

1.9 KiB

ಈಗ

ಪೌಲನು ತನ್ನ ಬೋಧನೆಯಲ್ಲಿ ಹೊಸ ವಿಷಯವನ್ನು ಸೇರಿಸುತ್ತಿದ್ದಾನೆ.

ನೀವು ನನಗೆ ಬರೆದಿರುವ ಸಂಗತಿಗಳ ಕುರಿತು

ಕೆಲವು ಪ್ರಶ್ನೆಗಳಿಗೆ ಉತ್ತರವನ್ನು ಕೊಡುವಂತೆ ಕೊರಿಂಥದವರು ಪೌಲನಿಗೆ ಪತ್ರವನ್ನು ಬರೆದಿದ್ದರು.

ಒಬ್ಬ ಮನುಷ್ಯನಿಗೆ

ಈ ಬಳಕೆಯಲ್ಲಿ ಮದುವೆಯಾಗಿರುವ ಪುರುಷರು ಅಥವಾ ಗಂಡನು

ಒಳ್ಳೇದು

"ಸರಿಯಾದದ್ದು ಮತ್ತು ಅಂಗೀಕೃತವಾದದ್ದು"

ಪುರುಷನು ತನ್ನ ಹೆಂಡತಿಯೊಂದಿಗೆ ಮಲಗಿಕೊಳ್ಳದಿರುವ ಸಮಯಗಳು ಒಳ್ಳೆಯವುಗಳಾಗಿರುತ್ತವೆ

"ಪುರುಷನು ತನ್ನ ಹೆಂಡತಿಯೊಂದಿಗೆ ಲೈಂಗಿಕ ಸಂಬಂಧವಿಲ್ಲದವನಾಗಿಯೇ ಇರುವದು ಒಳ್ಳೆಯದಾಗಿದೆಯೇ."

ಆದರೆ ಜಾರತ್ವವು ಪ್ರಬಲವಾಗಿರುವದರಿಂದ

"ಆದರೆ ಜನರು ಲೈಂಗಿಕ ಪಾಪವನ್ನು ಮಾಡುವಂತ ಶೋಧನೆಗಳಿಗೆ ಒಳಗಾಗುತ್ತಾರೆ."

ಪ್ರತಿಯೊಬ್ಬನಿಗೆ ಸ್ವಂತ ಹೆಂಡತಿಯು ಇರಲಿ, ಪ್ರತಿಯೊಬ್ಬಳಿಗೆ ಸ್ವಂತ ಗಂಡನು ಇರಲಿ

ಬಹುಪತ್ನಿತ್ವ ಸಂಪ್ರದಾಯಗಳನ್ನು ಬಗೆಹರಿಸಿಕೊಳ್ಳುವದಕ್ಕಾಗಿ "ಪ್ರತಿಯೊಬ್ಬನಿಗೂ ಒಬ್ಬಳೇ ಹೆಂಡತಿ ಇರಬೇಕು ಮತ್ತು ಪ್ರತಿಯೊಬ್ಬಳಿಗೂ ಒಬ್ಬನೇ ಗಂಡನಿರಬೇಕು."