kn_tn/1CO/04/19.md

1.8 KiB

ನಾನು ನಿಮ್ಮ ಬಳಿಗೆ ಬರುತ್ತೇನೆ

"ನಾನು ನಿಮ್ಮನ್ನು ಸಂಧಿಸುತ್ತೇನೆ."

ಮಾತಿನಲ್ಲಿ ಇಲ್ಲ

"ಮಾತುಗಳ ಮೂಲಕ ಉಂಟಾಗಿರುವದಲ್ಲ" ಅಥವಾ "ನೀವು ಹೇಳುವದರ ಕುರಿತಾಗಿ ಇದು ತಿಳಿಸುವಂಥದ್ದಲ್ಲ" (ಯುಡಿಬಿ)

ನಿಮಗೆ ಏನು ಬೇಕು?

ಪೌಲನು ಕೊರಿಂಥದವರು ಮಾಡಿದ ತಪ್ಪುಗಳಿಗಾಗಿ ಅವರನ್ನು ಗದರಿಸುತ್ತಾ ಕಡೆಯದಾಗಿ ಅವರೊಂದಿಗೆ ಮನವಿಯನ್ನು ಮಾಡಿಕೊಳ್ಳುತ್ತಿದ್ದಾನೆ. "ಈಗ ಏನಾಗಬೇಕೆಂದು ನೀವೇ ನನಗೆ ಹೇಳಿರಿ." (ಆಲಂಕಾರಿಕ ಪ್ರಶ್ನೆಯನ್ನು ನೋಡಿರಿ)

ಬೆತ್ತ ತೆಗೆದುಕೊಂಡು ನಿಮ್ಮ ಬಳಿಗೆ ಬರಲೋ? ಪ್ರೀತಿಯಿಂದಲೂ ಸೌಮ್ಯಭಾವದಿಂದಲೂ ಕೂಡಿದವನಾಗಿ ಬರಲೋ?

ಪೌಲನು ಕೊರಿಂಥದವರಿಗೆ ನಿಮ್ಮ ಬಳಿಗೆ ಬರುವಾಗ ಎರಡರಲ್ಲಿ ಯಾವುದನ್ನು ತೆಗೆದುಕೊಂಡು ಬರಲಿ ಎಂಬ ಆಯ್ಕೆಯನ್ನು ಕೊಟ್ಟಿದ್ದಾನೆ. "ನಾನು ನಿಮ್ಮ ಬಳಿಗೆ ಬಂದು ನಿಮಗೆ ಗಂಭೀರವಾಗಿ ಕಲಿಸಿಕೊಡಬೇಕೋ ಅಥವಾ ಸೌಮ್ಯಭಾವದಿಂದ, ಪ್ರೀತಿಯಿಂದ ನಡೆದುಕೊಳ್ಳಬೇಕೋ." (ಆಲಂಕಾರಿಕ ಪ್ರಶ್ನೆ ನೋಡಿರಿ)

ಸೌಮ್ಯಭಾವ

"ಒಳ್ಳೇತನ" ಅಥವಾ "ಮೃದುತ್ವ"