kn_tn/1CO/04/14.md

1.8 KiB

ನಿಮ್ಮನ್ನು ನಾಚಿಕೆಪಡಿಸುವದಕ್ಕಾಗಿ ಬರೆಯದೆ, ತಿದ್ದುವದಕ್ಕಾಗಿಯೇ ಬರೆದಿದ್ದೇನೆ

"ನಿಮ್ಮನ್ನು ನಾಚಿಕೆಪಡಿಸುವದು ನನ್ನ ಉದ್ದೇಶವಲ್ಲ" ಅಥವಾ "ನಿಮ್ಮನ್ನು ನಾಚಿಕೆಪಡಿಸಲು ನಾನು ಪ್ರಯತ್ನಿಸುತ್ತಿಲ್ಲ ಬದಲಾಗಿ ನಿಮ್ಮನ್ನು ತಿದ್ದಬೇಕೆಂದು ಬಯಸುತ್ತಿದ್ದೇನೆ." (ಯುಡಿಬಿ)

ಹತ್ತು ಸಾವಿರ ಮಂದಿ ಉಪಾಧ್ಯಾಯರು

ಒಬ್ಬನೇ ಆತ್ಮೀಕ ತಂದೆಯ ಪ್ರಾಮುಖ್ಯತೆಯನ್ನು ತೋರಿಸುವದಕ್ಕಾಗಿ ಅವನಿಗೆ ಮಾರ್ಗದರ್ಶನವನ್ನು ಕೊಡುತ್ತಿರುವ ಜನರ ಸಂಖ್ಯೆಯನ್ನು ಅತಿಯಾದ ರೀತಿಯಲ್ಲಿ ಹೇಳಿದ್ದಾನೆ. (ಹೈಪರ್ ಬೋಲ್ ನೋಡಿರಿ)

ಮಕ್ಕಳು....ತಂದೆ

ಯಾಕೆಂದರೆ ಪೌಲನೇ ಅವರನ್ನು ಕ್ರಿಸ್ತನ ಕಡೆಗೆ ನಡೆಸಿದ್ದನು, ಅವನು ಕೊರಿಂಥದವರಿಗೆ ತಂದೆಯಂತಿದ್ದಾನೆ. (ರೂಪಕಾಲಂಕಾರವನ್ನು ನೋಡಿರಿ)

ಬುದ್ದಿಹೇಳುವದು

"ಬೆಳವಣಿಗೆ ಕಾಣುವದು" ಅಥವಾ "ಉತ್ತಮರಾಗುವದು"

ಬೇಡಿಕೊಳ್ಳುತ್ತೇನೆ

"ಬಲವಾಗಿ ಪ್ರೋತ್ಸಾಹಪಡಿಸುತ್ತೇನೆ" ಅಥವಾ "ಬಲವಾಗಿ ಶಿಫಾರಸ್ಸು ಮಾಡುತ್ತೇನೆ"