kn_tn/1CO/04/08.md

2.3 KiB

ನಿಮಗೋಸ್ಕರವೇ

"ನಿಮ್ಮ ಒಳಿತಿಗಾಗಿ"

ಶಾಸ್ತ್ರದಲ್ಲಿ ಬರೆದಿರುವದನ್ನು ಮೀರು ಹೋಗಬೇಡಿರಿ

"ಶಾಸ್ತ್ರದಲ್ಲಿ ಬರೆದಿರುವವುಗಳಿಗೆ ವಿರುದ್ಧವಾಗಿ ನಡೆದುಕೊಳ್ಳಬೇಡಿರಿ" (ಟಿಎಫ್ ಟಿ)

ನಿನಗೂ ಮತ್ತು ಇತರರಿಗೂ ನಡುವೆ ತಾರತಮ್ಯ ಮಾಡಿದವರು ಯಾರು?

ಕೊರಿಂಥದವರು ತಾವು ಪೌಲನಿಂದ ಅಥವ ಅಪೊಲ್ಲೋಸನಿಂದ ಸುವಾರ್ತೆಯನ್ನು ಕೇಳಿದ್ದಕ್ಕಾಗಿ ತಾವೇ ಉತ್ತಮವೆಂದು ಅಂದುಕೊಳ್ಳುತ್ತಿದ್ದರಿಂದ ಪೌಲನು ಅವರನ್ನು ಗದರಿಸಿದನು. "ನೀವು ಬೇರೆಯವರಿಗಿಂತ ಉನ್ನತಸ್ಥಾನದಲ್ಲಿರುವವರೇನೂ ಅಲ್ಲ." (ಆಲಂಕಾರಿಕ ಪ್ರಶ್ನೆಯನ್ನು ನೋಡಿರಿ)

ದೇವರಿಂದ ಉಚಿತವಾಗಿ ಹೊಂದದಿರುವಂಥದ್ದು ನಿನ್ನಲ್ಲಿ ಒಂದಾದರೂ ಉಂಟೋ? ನಿಮ್ಮ ಹತ್ತಿರವಿರುವದೆಲ್ಲವನ್ನೂ ದೇವರು ನಿಮಗೆ ಉಚಿತವಾಗಿ ಕೊಟ್ಟಿದ್ದಾನೆ ಎಂಬದನ್ನು ಪೌಲನು ಅವರಿಗೆ ಹೇಳಿದನು. "ನಿಮ್ಮ ಹತ್ತಿರ ಇರುವದೆಲ್ಲವೂ ದೇವರೇ ನಿಮಗೆ ಕೊಟ್ಟಿರುವದಾಗಿದೆ!" (ಆಲಂಕಾರಿಕ ಪ್ರಶ್ನೆಯನ್ನು ನೋಡಿರಿ)

ಹೊಂದಿದ ಮೇಲೆ ಹೊಂದದವರಂತೆ ನೀವು ಹಿಗ್ಗುವದು ಯಾಕೆ?

ತಾವು ಪಡೆದಿರುವವುಗಳಲ್ಲಿ ಅವರು ಹಿಗ್ಗುತ್ತಿದ್ದರಿಂದ ಪೌಲನು ಅವರನ್ನು ಗದರಿಸಿದನು. "ಹಿಗ್ಗುವ ಅಧಿಕಾರ ನಿಮಗೆ ಇಲ್ಲ" ಅಥವಾ "ಹಿಗ್ಗಲೇಬೇಡಿರಿ." (ಅಲಂಕಾರಿಕ ಪ್ರಶ್ನೆಯನ್ನು ನೋಡಿರಿ)