kn_tn/1CO/03/03.md

3.2 KiB

ಇನ್ನೂ ಶರೀರಾಧೀನ ಸ್ವಭಾವವುಳ್ಳವರಾಗಿದ್ದೀರಿ

ಪಾಪಮಯ ಅಥವಾ ಲೋಕದ ಬಯಕೆಗಳಿಗನುಸಾರವಾಗಿ ನಡೆದುಕೊಳ್ಳುತ್ತಿದ್ದೀರಿ.

ನೀವು ಶರೀರಾಧೀನ ಸ್ವಭಾವವುಳ್ಳವರಾಗಿ ನಡೆಯುತ್ತಿದ್ದೀರೋ

ಪೌಲನು ಕೊರಿಂಥದವರನ್ನು ಅವರ ಪಾಪಮಯವಾದ ಸ್ವಭಾವಗಳಿಗಾಗಿ ಗದರಿಸಿದನು. "ನೀವು ನಿಮ್ಮ ಪಾಪಮಯವಾದ ಸ್ವಭಾವಗಳಿಗನುಸಾರವಾಗಿ ನಡೆಯುತ್ತಿದ್ದೀರಿ." (ರೂಪಕಾಲಂಕಾರ ಪ್ರಶ್ನೆಯನ್ನು ನೋಡಿರಿ)

ನೀವು ಕೇವಲ ನರಪ್ರಾಣಿಗಳಂತೆ ನಡೆಯುತ್ತೀರಲ್ಲವೇ? ಮಾನವರ ಗುಣಮಟ್ಟಗಳಿಗನುಸಾರವಾಗಿ ಜೀವಿಸುತ್ತಿದ್ದ ಕೊರಿಂಥದವರನ್ನು ಪೌಲನು ಗದರಿಸುತ್ತಿದ್ದಾನೆ." (ಆಲಂಕಾರಿಕ ಪ್ರಶ್ನೆಯನ್ನು ನೋಡಿರಿ)

ನೀವು ನರಪ್ರಾಣಿಗಳಂತೆ ಜೀವಿಸುತ್ತೀರಲ್ಲವೇ?

ಪವಿತ್ರಾತ್ಮನಿಲ್ಲದ ಜನರ ಹಾಗೆ ಅವರು ಜೀವಿಸುತ್ತಿದ್ದರಿಂದ ಪೌಲನು ಅವರನ್ನು ಗದರಿಸಿದನು. (ಆಲಂಕಾರಿಕ ಪ್ರಶ್ನೆಯನ್ನು ನೋಡಿರಿ)

ಅಪೊಲ್ಲೋಸನು ಯಾರು? ಪೌಲನು ಯಾರು?

ಪೌಲನು ತಾನು ಮತ್ತು ಅಪೊಲ್ಲೋಸನು ಸುವಾರ್ತೆಯ ಮೂಲ ವ್ಯಕ್ತಿಗಳಲ್ಲ ಆದ್ದರಿಂದ ಜನರ ಹಿಂದೆ ಗುಂಪುಗಳಾಗಿ ಹೋಗಬಾರದು ಎಂದು ಹೇಳುತ್ತಿದ್ದಾನೆ. "ಅಪೊಲ್ಲೋಸನು ಅಥವಾ ಪೌಲನನ್ನು ಹಿಂಬಾಲಿಸಲು ಗುಂಪುಗಳನ್ನು ಮಾಡಿಕೊಳ್ಳುವದು ತಪ್ಪು!" (ಆಲಂಕಾರಿಕ ಪ್ರಶ್ನೆಯನ್ನು ನೋಡಿರಿ)

ಅವರು ಸೇವಕರು, ಅವರ ಮೂಲಕ ನೀವು ನಂಬುವವರಾದಿರಿ

ತಾನು ಮತ್ತು ಅಪೊಲ್ಲೋಸನು ದೇವರ ಸೇವಕರು ಎಂದು ಹೇಳುವದರ ಮೂಲಕ ಪೌಲನು ತನ್ನ ಪ್ರಶ್ನೆಗೆ ತಾನೇ ಉತ್ತರವನ್ನು ಕೊಟ್ಟಿದ್ದಾನೆ. "ಪೌಲ ಮತ್ತು ಅಪೊಲ್ಲೋಸನ ಬೋಧನೆಯ ಮೂಲಕವಾಗಿ ನೀವು ಸುವಾರ್ತೆಯನ್ನು ನಂಬುವವರಾದಿರಿ."

ಇವರಲ್ಲಿ ಒಬ್ಬೊಬ್ಬನಿಗೆ ಕರ್ತನು ಜವಾಬ್ದಾರಿಕೆಗಳನ್ನು ಒಪ್ಪಿಸಿದ್ದಾನೆ

"ಕರ್ತನು ಪೌಲನಿಗೆ ಮತ್ತು ಅಪೊಲ್ಲೋಸನಿಗೆ ಜವಾಬ್ದಾರಿಕೆಯನ್ನು ಕೊಟ್ಟಿದ್ದಾನೆ."