translationCore-Create-BCS_.../tn_TIT.tsv

93 KiB
Raw Blame History

1ReferenceIDTagsSupportReferenceQuoteOccurrenceNote
2front:introm2jl0# ತೀತನಿಗೆ ಬರೆದ ಪತ್ರಿಕೆಯ ಪೀಠಿಕೆ\n\n## ಭಾಗ 1: ಸಾಮಾನ್ಯ ಪೀಠಿಕೆ \n\n### ತೀತನ ಪುಸ್ತಕದ ಹೊರರೇಖೆ\n\n1. ಪೌಲನು ತೀತನಿಗೆ ದೈವಭಕ್ತಿಯುಳ್ಳ ನಾಯಕರನ್ನು ನೇಮಿಸುವಂತೆ ಆಜ್ಞಾಪಿಸುತ್ತಾನೆ (1:1-16)\n2. ಜನರು ದೈವಭಕ್ತಿಯುಳ್ಳ ಜೀವನವನ್ನು ನಡೆಸಲು ತರಬೇತಿ ನೀಡಬೇಕೆಂದು ತೀತನಿಗೆ ಪೌಲನು ಆಜ್ಞಾಪಿಸುತ್ತಾನೆ (2:1-3:11)\n3. ಪೌಲನು ತನ್ನ ಮುಂದಿನ ಯೋಜನೆಗಳ ಬಗ್ಗೆ ಮತ್ತು ಅನೇಕ ವಿಶ್ವಾಸಿಗಳಿಗೆ ವಂದನೆಗಳನ್ನೂ ಹೇಳುತ್ತಾ ತನ್ನ ಮಾತುಗಳನ್ನು ಮುಕ್ತಾಯಗೊಳಿಸುತ್ತಾನೆ (3:12-15)\n\n### ತೀತನ ಪುಸ್ತಕವನ್ನು ಬರೆದವರು ಯಾರು?\n\nಪೌಲನು ತೀತನ ಪುಸ್ತಕವನ್ನು ಬರೆದನು. ಪೌಲನು ತಾರ್ಸಾ ಪಟ್ಟಣದವನು. ಅವನ ಜೀವನದ ಆದಿಭಾಗದಲ್ಲಿ ಅವನು ಸೌಲನೆಂದು ಅರಿಯಲ್ಪಟ್ಟಿದ್ದನು. ಕ್ರೈಸ್ತನಾಗುವ ಮೊದಲು ಪೌಲನು ಒಬ್ಬ ಫರಿಸಾಯನಾಗಿದ್ದನು. ಕ್ರೈಸ್ತರನ್ನು ಹಿಂಸಿಸುತ್ತಿದ್ದನು. ಆದರೆ ಅವನು ಕ್ರೈಸ್ತನಾದ ಮೇಲೆ ಜನರಿಗೆ ಯೇಸುವಿನ ಬಗ್ಗೆ ಹೇಳುತ್ತಾ ರೋಮನ್ ಸಾಮ್ರಾಜ್ಯದಲ್ಲೆಲ್ಲಾ ಅನೇಕ ಸಲ ಪ್ರಯಾಣಿಸಿದನು.\n\n### ತೀತನ ಪುಸ್ತಕದಲ್ಲಿ ಯಾವುದರ ಬಗ್ಗೆ ತಿಳಿಸಿದೆ?\n\nಪೌಲನು ಈ ಪತ್ರಿಕೆಯನ್ನು ತನ್ನ ಜೊತೆಗೆಲಸದವನಾದ ತೀತನಿಗೆ ಬರೆದನು, ತೀತನು ಕ್ರೇತಾ ದ್ವೀಪದಲ್ಲಿದ್ದ ಸಭೆಗಳ ನಾಯಕನಾಗಿ ಸೇವೆ ಸಲ್ಲಿಸುತ್ತಿದ್ದನು. ಸಭೆಯ ನಾಯಕರನ್ನು ಹೇಗೆ ಆಯ್ಕೆಮಾಡಬೇಕು ಎಂಬುದರ ಕುರಿತು ಪೌಲನು ಸೂಚನೆಗಳನ್ನು ನೀಡಿದನು. ವಿಶ್ವಾಸಿಗಳು ಪರಸ್ಪರ ಹೇಗೆ ನಡೆದುಕೊಳ್ಳಬೇಕು ಎಂಬುದರ ಬಗ್ಗೆಯೂ ಸಹ ಪೌಲನು ವಿವರಿಸಿದನು. ದೇವರಿಗೆ ಮೆಚ್ಚುಗೆಯಾಗುವಂತೆ ಜೀವನ ನಡೆಸಬೇಕು ಎಂದು ಅವನು ಅವರೆಲ್ಲರನ್ನು ಪ್ರೋತ್ಸಾಹಿಸಿದನು.\n\n### ಈ ಪುಸ್ತಕದ ಶೀರ್ಷಿಕೆಯನ್ನು ಹೇಗೆ ಭಾಷಾಂತರಿಸಬೇಕು?\n\nಭಾಷಾತರಕಾರರು ಈ ಪುಸ್ತಕದ ಶೀರ್ಷಿಕೆಯನ್ನು ಸಾಂಪ್ರದಾಯಿಕವಾಗಿ ಹೇಳುವಂತೆ **ತೀತ** ಎಂದು ಭಾಷಾಂತರಿಸಬಹುದು. ಅಥವಾ **ಪೌಲನು ತೀತನಿಗೆ ಬರೆದ ಪತ್ರ** ಅಥವಾ **ತೀತನಿಗೆ ಒಂದು ಪತ್ರ** ಎಂದು ಸ್ಪಷ್ಟವಾದ ಶೀರ್ಷಿಕೆಯನ್ನು ಆರಿಸಿಕೊಳ್ಳಬಹುದು. (ನೋಡಿರಿ: [[rc://kn/ta/man/translate/translate-names]])\n\n## ಭಾಗ 2: ಪ್ರಮುಖವಾದ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಿಕಲ್ಪನೆಗಳು\n\n### ಸಭೆಯಲ್ಲಿ ಜನರು ಯಾವ ವಿಭಿನ್ನ ಕರ್ತವ್ಯಗಳಲ್ಲಿ/ಪಾತ್ರಗಳಲ್ಲಿ ಸೇವೆ ಮಾಡಬಹುದು?\n\nತೀತನ ಪುಸ್ತಕದಲ್ಲಿ ಸಭೆಯಲ್ಲಿ ಸ್ತ್ರೀಯು ಅಥವಾ ವಿವಾಹ ವಿಚ್ಛೇದನ ಪಡೆದ ಪುರುಷನು ನಾಯಕ ಸ್ಥಾನದಲ್ಲಿ ಸೇವೆ ಮಾಡಬೇಕೋ ಬೇಡವೋ ಎಂಬುದರ ಬಗ್ಗೆ ಅನೇಕ ಬೋಧನೆಗಳಿವೆ. ವಿದ್ವಾಂಸರು ಇಂತಹ ಬೋಧನೆಗಳ ಅರ್ಥದ ಬಗ್ಗೆ ಭಿನ್ನಾಭಿಪ್ರಾಯವುಳ್ಳವರಾಗಿದ್ದಾರೆ. ಭಾಷಾಂತರ ಮಾಡುವ ಮೊದಲು ಇಂತಹ ವಿಚಾರಗಳ ಬಗ್ಗೆ ಅಧ್ಯಯನ ಮಾಡುವುದು ಉತ್ತಮ.\n\n## ಭಾಗ 3: ಭಾಷಾಂತರದ ಪ್ರಮುಖ ಸಮಸ್ಯೆಗಳು\n\n### ಏಕವಚನ ಮತ್ತು ಬಹುವಚನ **ನೀನು**\n\nಈ ಪುಸ್ತಕದಲ್ಲಿ **ನಾನು** ಎಂಬ ಪದ ಪೌಲನನ್ನು ಸೂಚಿಸುತ್ತದೆ. **ನೀನು** ಎಂಬ ಪದ ಏಕವಚನವಾಗಿದ್ದು ತೀತನನ್ನು ಸೂಚಿಸುತ್ತದೆ. ಇದು 3:15 ಅದಕ್ಕೆ ಹೊರತಾದದ್ದು ಆಗಿದೆ. (ನೋಡಿರಿ: \[\[rc://kn/ta/man/translate/figs-exclusive\]\] ಮತ್ತು \[\[rc://kn/ta/man/translate/figs-you\]\])\n\n### **ನಮ್ಮ ರಕ್ಷಕನಾದ ದೇವರು** ಎಂಬುದರ ಅರ್ಥವೇನು?\n\nಈ ಪತ್ರಿಕೆಯಲ್ಲಿ ಇದೊಂದು ಸಾಮಾನ್ಯ ಪದಗುಚ್ಛವಾಗಿದೆ. ದೇವರು ತನ್ನ ವಿರುದ್ಧ ಪಾಪಮಾಡಿದವರನ್ನು ಕ್ರಿಸ್ತನಲ್ಲಿ ಹೇಗೆ ಕ್ಷಮಿಸಿದನು ಎಂಬುದರ ಬಗ್ಗೆ ಮತ್ತು ದೇವರು ಎಲ್ಲ ಜನರಿಗೆ ನ್ಯಾಯತೀರ್ಪುಮಾಡುವಾಗ ಶಿಕ್ಷೆಯಿಂದ ಇವರನ್ನು ಕ್ಷಮಿಸುವುದರ ಮೂಲಕ ಹೇಗೆ ರಕ್ಷಿಸಿದ ಎಂಬುದನ್ನು ಓದುಗರನ್ನು ಅಲೋಚಿಸುವಂತೆ ಮಾಡಲು ಪೌಲನು ಇದರ ಮೂಲಕ ಉದ್ದೇಶಿಸಿದನು. ಇದೇ ರೀತಿಯ ಇನ್ನೊಂದು ಪದಗುಚ್ಛ ಈ ಪ್ರತಿಕೆಯಲ್ಲಿ ಬರುತ್ತದೆ, ಅದು **ನಮ್ಮ ಮಹೋನ್ನತ ದೇವರು ಮತ್ತು ರಕ್ಷಕನಾದ ಯೇಸು ಕ್ರಿಸ್ತನು** ಎಂಬುದು.
31:introc7me0# ತೀತ 01 ಸಾಮಾನ್ಯ ಟಿಪ್ಪಣಿಗಳು\n\n## ರಚನೆ ಮತ್ತು ನಮೂನೆ\n\nಪೌಲನು ಈ ಪತ್ರಿಕೆಯನ್ನು 1-4 ವಾಕ್ಯಗಳಲ್ಲಿ ಸಾಂಪ್ರಾದಾಯಿಕವಾಗಿ ಪರಿಚಯಿಸುತ್ತಾನೆ. ಪುರಾತನಕಾಲದ ಪೂರ್ವದೇಶದಲ್ಲಿ ಸಾಮಾನ್ಯವಾಗಿ ಲೇಖಕರು ಪತ್ರಗಳನ್ನು ಈ ರೀತಿ ಪ್ರಾರಂಭಿಸುತ್ತಿದ್ದರು\n\nಸಭೆಯ ಹಿರಿಯರಾಗಿ ಸೇವೆ ಸಲ್ಲಿಸಲು ಹೊಂದಿರಬೇಕಾದ ಅನೇಕ ಗುಣಲಕ್ಷಣಗಳನ್ನು ಪೌಲನು 6-9 ವಾಕ್ಯಗಳಲ್ಲಿ ಪಟ್ಟಿಮಾಡಿ ತಿಳಿಸುತ್ತಾನೆ. (ನೋಡಿರಿ: rc://kn/ta/man/translate/figs-abstractnouns) ಪೌಲನು ಇದೇ ರೀತಿಯ ಪಟ್ಟಿಯನ್ನು 1 ತಿಮೊಥೆ 3 ರಲ್ಲಿ ನೀಡುತ್ತಾನೆ.\n\n## ಈ ಅಧ್ಯಾಯದಲ್ಲಿನ ವಿಶೇಷ ಪರಿಕಲ್ಪನೆಗಳು\n\n### ಹಿರಿಯರು\n\nಸಭೆಯು ಸಭೆಯ ನಾಯಕರಿಗಾಗಿ ವಿಭಿನ್ನವಾದ ಶಿರೋನಾಮಗಳನ್ನು ಉಪಯೋಗಿಸಿದೆ. ಅಧ್ಯಕ್ಷ/ಮೇಲ್ವಿಚಾರಕ, ಹಿರಿಯ, ಸಭಾಪಾಲಕ ಮತ್ತು ಸಭಾಧ್ಯಕ್ಷ/ಬಿಷಪ್‌ ಎಂಬ ಅನೇಕ ಶಿರೋನಾಮಗಳು ಅದರಲ್ಲಿ ಒಳಗೊಂಡಿವೆ.\n\n## ಈ ಅಧ್ಯಾಯದಲ್ಲಿನ ಇತರ ಭಾಷಾಂತರ ಕ್ಲಿಷ್ಟತೆಗಳು\n\n### ಷುಡ್/ಬೇಕು, ಮೇ/ಬಹುಶಃ, ಮಸ್ಟ್/ಮಾಡಲೇ ಬೇಕು\n\nಯು.ಎಲ್.ಟಿ.ಯಲ್ಲಿ ಅಗತ್ಯಕಾರ್ಯಗಳ ಅಥವಾ ಅನಿವಾರ್ಯತೆಗಳ ಬಗ್ಗೆ ಹೇಳಲು ವಿವಿಧ ಪದಗಳನ್ನು ಬಳಸಲಾಗಿದೆ. ಈ ಕ್ರಿಯಾಪದಗಳಲ್ಲಿ ವಿವಿಧ ಹಂತದ ಬಲಪ್ರಯೋಗ ಇದೆ. ಕೆಲವು ಸೂಕ್ಷ್ಮವಾದ ವಿಭಿನ್ನತೆಗಳನ್ನು ಭಾಷಾಂತರಿಸಲು ಕಷ್ಟವಾಗಬಹುದು. ಯು.ಎಸ್.ಟಿ.ಯಲ್ಲಿ ಈ ಕ್ರಿಯಾಪದಗಳನ್ನು ಸಾಮಾನ್ಯ ರೀತಿಯಲ್ಲಿ ಭಾಷಾಂತರಿಸಬಹುದು.
41:1rtc9κατὰ πίστιν1**ನಂಬಿಕೆ** ಎಂಬುದು ಭಾವವಾಚಕ ನಾಮಪದವಾಗಿದೆ. ಇವುಗಳನ್ನು ವ್ಯಕ್ತಪಡಿಸಲು ಇತರ ರೀತಿಗಳಿಗಾಗಿ ಯುಎಸ್‌ಟಿಯನ್ನು ನೋಡಿರಿ. ಜನರು ದೇವರನ್ನು ಮೆಚ್ಚಿಸುವ ರೀತಿಯಲ್ಲಿ ಜೀವಿಸಲಾಗುವಂತೆ ದೇವರ ಮತ್ತು ಕ್ರಿಸ್ತನ ಬಗ್ಗೆ ನಿಜವಾದ ಸಂದೇಶವನ್ನು ಜನರು ತಿಳಿದುಕೊಳ್ಳಬೇಕೆಂದು ಪೌಲನು ಬಯಸುತ್ತಾನೆ.
51:2r2gjπρὸ χρόνων αἰωνίων1ಅನಾದಿ ಕಾಲಗಳಿಗಿಂತ ಮುಂಚೆ
61:3b22hκαιροῖς ἰδίοις1ಸೂಕ್ತವಾದ ಸಮಯದಲ್ಲಿ
71:3abc9ἐν κηρύγματι1“ಸಂದೇಶದ ಸಾರೋಣದ ಮೂಲಕವಾಗಿ”
81:3m41uὃ ἐπιστεύθην ἐγὼ1ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು. ಪರ್ಯಾಯ ಭಾಷಾಂತರ: “ಆತನು ನನಗೆ ಒಪ್ಪಿಸಿಕೊಟ್ಟ” ಅಥವಾ “ಆತನು ನನಗೆ ಬೋಧಿಸುವ ಜವಾಬ್ದಾರಿಯನ್ನು ಕೊಟ್ಟನು” (ನೋಡಿರಿ: \[\[rc://kn/ta/man/translate/figs-activepassive\]\])
91:3dpn4τοῦ Σωτῆρος ἡμῶν Θεοῦ1ನಮ್ಮನ್ನು ರಕ್ಷಿಸುವ ದೇವರ
101:3xy18ἡμῶν1ಇದು ಪೌಲ, ತೀತ ಮತ್ತು ಎಲ್ಲಾ ಕ್ರೈಸ್ತರು ಒಳಗೊಂಡಿದೆ. (ನೋಡಿರಿ: [[rc://kn/ta/man/translate/figs-inclusive]])
111:4gu55γνησίῳ τέκνῳ1ತೀತನು ಪೌಲನ ಜೈವಿಕ **ಮಗನು** ಅಲ್ಲದಿದ್ದರೂ ಇಬ್ಬರೂ ಕ್ರಿಸ್ತನಲ್ಲಿ ಹುದುವಾದ ನಂಬಿಕೆಯ ಭಾಗಿಗಳಾಗಿದ್ದಾರೆ. ಪೌಲನು ನಂಬಿಕೆಯ ಮೂಲಕವಿರುವ ಕ್ರಿಸ್ತನೊಂದಿಗಿನ ಸಂಬಂಧವನ್ನು ಜೈವಿಕ ಸಂಬಂಧಕ್ಕಿಂತ ಹೆಚ್ಚು ಪ್ರಾಮುಖ್ಯವೆಂದು ಪರಿಗಣಿಸುತ್ತಾನೆ. ಆದ್ದರಿಂದ, ಅವರಿಬ್ಬರ ವಯಸ್ಸು ತಂದೆ ಮತ್ತು ಮಗನ ವಯಸ್ಸಿನಂತೆ ಇದ್ದರಿಂದ ಮತ್ತು ಕ್ರಿಸ್ತನಲ್ಲಿನ ನಂಬಿಕೆಯ ಭಾಗಿಗಳಾಗಿದ್ದರಿಂದ, ಪೌಲನು ತೀತನನ್ನು ತನ್ನ ಸ್ವಂತ ಮಗನೆಂದು ಪರಿಗಣಿಸುತ್ತಾನೆ. ಪೌಲನು ತೀತನನ್ನು ಕ್ರಿಸ್ತನಲ್ಲಿನ ನಂಬಿಕೆಗೆ ನಡಿಸಿದಿರಬಹುದು, ಆದ್ದರಿಂದ ಈ ಆತ್ಮಿಕ ಅರ್ಥದಲ್ಲಿ ತೀತನು ಮಗನಂತೆ ಇದ್ದಾನೆ. ಪರ್ಯಾಯ ಭಾಷಾಂತರ: “ನೀನು ನನಗೆ ಮಗನಂತೆ ಇರುವಿ” (ನೋಡಿರಿ: [[rc://kn/ta/man/translate/figs-metaphor]])
121:4s3yrΧριστοῦ Ἰησοῦ τοῦ Σωτῆρος ἡμῶν1ನಮ್ಮ ರಕ್ಷಕನಾದ ಕ್ರಿಸ್ತ ಯೇಸು
131:4xy17ἡμῶν1ಇದು ಪೌಲ, ತೀತ ಮತ್ತು ಎಲ್ಲಾ ಕ್ರೈಸ್ತರು ಒಳಗೊಂಡಿದೆ. (ನೋಡಿರಿ: [[rc://kn/ta/man/translate/figs-inclusive]])
141:5ew8hτούτου χάριν1**ಈ ಉದ್ದೇಶದಿಂದ** ಎಂಬ ಸಂಯೋಜಕ ಪದಗುಚ್ಛವು ಪೌಲನು ಕ್ರೇತದ್ವೀಪದಲ್ಲಿ ತೀತನನ್ನು ಬಿಟ್ಟುಬಂದದ್ದರ ಗುರಿಯನ್ನು (ಸಭೆಯಲ್ಲಿ ಹಿರಿಯರನ್ನು ನೇಮಿಸಲು) ಪರಿಚಯಿಸುತ್ತದೆ. ಪರ್ಯಾಯ ಭಾಷಾಂತರ: “ಇದುವೇ ಕಾರಣ” (ನೋಡಿರಿ: [[rc://kn/ta/man/translate/grammar-connect-logic-goal]])
151:5lh9bἀπέλιπόν σε ἐν Κρήτῃ1ನೀನು ಕ್ರೇತ ದ್ವೀಪದಲ್ಲೇ ಇರಬೇಕೆಂದು ನಾನು ನಿನಗೆ ಹೇಳಿದೆನು
161:5ga62ἵνα τὰ λείποντα ἐπιδιορθώσῃ1ಆದುದರಿಂದ ನೀನು ಕ್ರಮಪಡಿಸಬೇಕಾದ ಕಾರ್ಯಗಳನ್ನು ಮಾಡಿ ಮುಗಿಸಬಹುದು
171:5p56wπρεσβυτέρους1ಆದಿ ಕ್ರೈಸ್ತ ಸಭೆಯಲ್ಲಿ ಕ್ರೈಸ್ತ ಹಿರಿಯರು ವಿಶ್ವಾಸಿಗಳ ಸಂಘದವರಿಗೆ ಆತ್ಮೀಕ ನಾಯಕತ್ವವನ್ನು ನೀಡುತ್ತಿದ್ದರು. ಈ ಪದವು ನಂಬಿಕೆಯಲ್ಲಿ ಪರಿಪಕ್ವರಾಗಿರುವ ಜನರನ್ನು ಸೂಚಿಸುತ್ತದೆ.
181:6wja4Connecting Statement:0# Connecting Statement:\n\nಕ್ರೇತ ದ್ವೀಪದಲ್ಲಿನ ಎಲ್ಲಾ ಪಟ್ಟಣಗಳಲ್ಲಿ ದೀಕ್ಷೆಕೊಟ್ಟು ಹಿರಿಯರನ್ನು ನೇಮಿಸಬೇಕೆಂದು ಪೌಲನು ತೀತನಿಗೆ ಹೇಳಿದನು. ಇದರೊಂದಿಗೆ ಹಿರಿಯರಿಗೆ ಇರಬೇಕಾದ ಅರ್ಹತೆಗಳ ಬಗ್ಗೆ ತಿಳಿಸುತ್ತಾನೆ.
191:6jen8εἴ τίς ἐστιν ἀνέγκλητος & ἀνήρ1ಇದು ಹಿರಿಯರಿಗೆ ಇರಬೇಕಾದ ಸ್ವಭಾವವನ್ನು ವಿವರಿಸುವುದರ ಪ್ರಾರಂಭವಾಗಿದೆ. ತೀತನನ್ನು ಈ ಕೆಳಗೆ ಕೊಟ್ಟಿರುವ ವಿವರಣೆಗೆ ಯೋಗ್ಯರಾಗಿರುವ ಪುರುಷರನ್ನು ಆರಿಸಿಕೊಳ್ಳಬೇಕಾಗಿತ್ತು. ಪರ್ಯಾಯ ಭಾಷಾಂತರ: “ದೋಷರಹಿತರಾಗಿರುವ ಜನರನ್ನು ಆರಿಸಿಕೊಳ್ಳಬೇಕು” ಅಥವಾ “ಹಿರಿಯನು ದೋಷರಹಿತನಾಗಿರಬೇಕು.” **ದೋಷರಹಿತನು** ಆಗಿರುವುದು ಎಂದರೆ ಕೆಟ್ಟ ಕಾರ್ಯಗಳನ್ನು ಮಾಡದ ವ್ಯಕ್ತಿ ಎಂಬ ಖ್ಯಾತಿಯುಳ್ಳವನು ಆಗಿರಬೇಕು. ಪರ್ಯಾಯ ಭಾಷಾಂತರ: “ಹಿರಿಯನು ನಿಂದಾರಹಿತನಾಗಿರಬೇಕು” ಅಥವಾ “ಹಿರಿಯನು ಅಪಖ್ಯಾತಿ ಹೊಂದಿದವನಾಗಿರಬಾರದು.”
201:6ab70ἀνέγκλητος1**ದೋಷರಹಿತನು** ಆಗಿರುವುದು ಎಂದರೆ ಕೆಟ್ಟ ಕಾರ್ಯಗಳನ್ನು ಮಾಡದ ವ್ಯಕ್ತಿ ಎಂಬ ಖ್ಯಾತಿಯುಳ್ಳವನು ಆಗಿರಬೇಕು. ಪರ್ಯಾಯ ಭಾಷಾಂತರ: “ನಿಂದಾರಹಿತನು” ಇದನ್ನು ಸಕಾರಾತ್ಮಕವಾಗಿಯೂ ಸಹ ಹೇಳಬಹುದು: “ಒಳ್ಳೆಯ ಖ್ಯಾತಿ ಪಡೆದಿರುವ ವ್ಯಕ್ತಿ” (ನೋಡಿರಿ: [[rc://kn/ta/man/translate/figs-doublenegatives]])
211:6wd6qτέκνα & πιστά1ಸಂಭಾವ್ಯ ಅರ್ಥಗಳು 1) ಯೇಸುವಿನಲ್ಲಿ ನಂಬಿಕೆ ಇಟ್ಟಿರುವ ಮಕ್ಕಳು ಅಥವಾ 2) ನಂಬಿಕೆಗೆ ಅರ್ಹರಾದ ಮಕ್ಕಳು
221:7g2zfΘεοῦ οἰκονόμον1ಪೌಲನು ಸಭೆಯ ಕುರಿತು ದೇವರ ಮನೆಯೋ ಎಂಬಂತೆ ಮಾತನಾಡುತ್ತಾನೆ, ಮತ್ತು ಅಧ್ಯಕ್ಷನನ್ನು/ಮೇಲ್ವಿಚಾರಕನನ್ನು ಕುರಿತು ಆ ಮನೆಯನ್ನು ನಿರ್ವಹಿಸುವ ಹೊಣೆಹೊತ್ತ ಸೇವಕನೋ ಎಂಬಂತೆ ಮಾತನಾಡುತ್ತಾನೆ. (ನೋಡಿರಿ: \[\[rc://kn/ta/man/translate/figs-metaphor\]\])
231:8i549ἀλλὰ1**ಬದಲಾಗಿ** ಎಂಬ ಸಂಯೋಜಕ ಪದವು ಹಿರಿಯನು ಹೇಗಿರಬಾರದೆಂಬ ವಿಷಯಗಳ (ಪೌಲನು ಈಗಾಗಲೇ ಹೇಳಿದ್ದಾನೆ), ಮತ್ತು ಹಿರಿಯನು ಹೇಗಿರಬೇಕೆಂಬ ವಿಷಯಗಳ (ಪೌಲನು ಹೇಳಲಿರುವ) ನಡುವಿನ ವ್ಯತ್ಯಾಸವನ್ನು ಪರಿಚಯಿಸುತ್ತದೆ. (ನೋಡಿರಿ: \[\[rc://kn/ta/man/translate/grammar-connect-logic-contrast\]\])
241:8vkq1φιλάγαθον1ಒಳ್ಳೆಯದನ್ನು ಮಾಡಲು ಪ್ರೀತಿಸುವ ವ್ಯಕ್ತಿ
251:8xy11σώφρονα & ἐγκρατῆ1ಈ ಎರಡು ಪದಗಳು ಬಹುತೇಕ ಒಂದೇ ಅರ್ಥವನ್ನು ಕೊಡುತ್ತವೆ ಮತ್ತು ಉದ್ದಿಷ್ಟ ಭಾಷೆಯಲ್ಲಿ ಎರಡು ರೀತಿಯ ಪದಗಳಿಲ್ಲದಿದ್ದರೆ ಒಂದೇ ಪದವಾಗಿ ಅನುವಾದಿಸಬಹುದು. (ನೋಡಿರಿ: [[rc://kn/ta/man/translate/figs-doublet]])
261:8xy12δίκαιον, ὅσιον1ಈ ಎರಡು ಪದಗಳು ಬಹುತೇಕ ಒಂದೇ ಅರ್ಥವನ್ನು ಕೊಡುತ್ತವೆ ಮತ್ತು ಉದ್ದಿಷ್ಟ ಭಾಷೆಯಲ್ಲಿ ಎರಡು ರೀತಿಯ ಪದಗಳಿಲ್ಲದಿದ್ದರೆ ಒಂದೇ ಪದವಾಗಿ ಅನುವಾದಿಸಬಹುದು. (ನೋಡಿರಿ: [[rc://kn/ta/man/translate/figs-doublet]])
271:9xy10κατὰ τὴν διδαχὴν1“ನಾವು ಅವನಿಗೆ ಬೋಧಿಸಿದ ವಿಷಯಗಳಿಗೆ ಅನುಸಾರವಾಗಿರುವ”
281:9pzi1τῇ διδασκαλίᾳ τῇ ὑγιαινούσῃ1**ಸ್ವಸ್ಥ** ಎಂದು ಭಾಷಾಂತರಿಸಲ್ಪಟ್ಟಿರುವ ಗ್ರೀಕ್ ಪದವು ಸಾಮಾನ್ಯವಾಗಿ ದೈಹಿಕ ಆರೋಗ್ಯದ ಬಗ್ಗೆ ಸೂಚಿಸುತ್ತದೆ. ಪೌಲನು ಈ ಬೋಧನೆಯನ್ನು ನಂಬುವವರಿಗೆ ಅದು ಆತ್ಮಿಕವಾಗಿ ಅನಾರೋಗ್ಯವನ್ನು ಉಂಟುಮಾಡುವುದಕ್ಕೆ ಬದಲಾಗಿ ಆತ್ಮಿಕವಾಗಿ ಆರೋಗ್ಯವನ್ನು ಉಂಟುಮಾಡುತ್ತದೆಯೋ ಎಂಬಂತೆ ಮಾತನಾಡುತ್ತಾನೆ.
291:9abcjἵνα1**ಆದ್ದರಿಂದ** ಎಂಬ ಸಂಯೋಜಿಸುವ ಪದಗಳು ಕಾರಣ-ಫಲಿತಾಂಶದ ಸಂಬಂಧಾರ್ಥಕವನ್ನು ಸೂಚಿಸುತ್ತದೆ. ಕಾರಣವೇನಂದರೆ (ಹಿರಿಯರು ಇತರರಿಗೆ ಸಹಾಯ ಮಾಡಬಹುದು) ಹಿರಿಯರು ವಿಶ್ವಾಸಯೋಗ್ಯವಾದ ಸಂದೇಶವನ್ನು ಬಿಗಿಯಾಗಿ ಹಿಡಿದಿಟ್ಟುಕೊಳ್ಳಬಹುದು, ಮತ್ತು ಇದರ ಫಲಿತಾಂಶವೇನಂದರೆ ಹಿರಿಯನು ಇತರರನ್ನು ಪ್ರೋತ್ಸಾಹಿಸಲು ಮತ್ತು ಅವನನ್ನು ವಿರೋಧಿಸುವವರನ್ನು ಗದರಿಸಲು ಸಾಧ್ಯವಾಗುತ್ತದೆ. ನಿಮ್ಮ ಭಾಷೆಯಲ್ಲಿ ಇದು ಹೆಚ್ಚು ಸ್ಪಷ್ಟವಾಗಿದ್ದರೆ, ನೀವು ಈ ನುಡಿಗಟ್ಟುಗಳ ಕ್ರಮವನ್ನು ಹಿಂದುಮುಂದಾಗಿಸಬಹುದು, ಅವುಗಳನ್ನು “ಏಕೆಂದರೆ” ಎಂಬುದರೊಂದಿಗೆ ಸಂಯೋಜಿಸಬಹುದು. (ನೋಡಿರಿ: [[rc://kn/ta/man/translate/grammar-connect-logic-goal]])
301:10xsq9Connecting Statement:0# Connecting Statement:\n\nದೇವರ ವಾಕ್ಯವನ್ನು ವಿರೋಧಿಸುವವರ ನಿಮಿತ್ತವಾಗಿ ಪೌಲನು ತೀತನಿಗೆ ದೇವರ ವಾಕ್ಯವನ್ನು ಬೋಧಿಸಲು ಅನೇಕ ಕಾರಣಗಳನ್ನು ನೀಡುತ್ತಾನೆ ಮತ್ತು ಸುಳ್ಳು ಬೋಧಕರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ತಿಳಿಸುತ್ತಾನೆ.
311:10w9kkἀνυπότακτοι1ಸುವಾರ್ತಾ ಸಂದೇಶಕ್ಕೆ ವಿಧೇಯರಾಗದ ತಿರುಗಿಬೀಳುವಂಥ ಜನರಿದ್ದಾರೆ. ಇದಲ್ಲಿರುವ **ಟೊಳ್ಳು** ಎಂಬುದು ನಿಷ್ಪ್ರಯೋಜಕತನದ ಒಂದು ರೂಪಕವಾಗಿದೆ, ಮತ್ತು **ಟೊಳ್ಳು ಮಾತಿನವರು** ನಿಷ್ಪ್ರಯೋಜಕವಾದ ಅಥವಾ ಮೂರ್ಖತನದ ವಿಷಯಗಳನ್ನು ಹೇಳುವಂಥ ಜನರಾಗಿದ್ದಾರೆ. ಪರ್ಯಾಯ ಭಾಷಾಂತರ: “ವಿಧೇಯರಾಗಲು ನಿರಾಕರಿಸುವಂಥ ಮತ್ತು ನಿಷ್ಪ್ರಯೋಜಕವಾದ ವಿಷಯಗಳನ್ನು ಹೇಳುವಂಥ ಜನರು” (ನೋಡಿರಿ: \[\[rc://kn/ta/man/translate/figs-metaphor\]\])
321:10ga6nματαιολόγοι, καὶ φρεναπάται1ಪೌಲನು ಬೋಧಿಸುವ ಸತ್ಯ ಸುವಾರ್ತೆಯನ್ನು ಬಿಟ್ಟು ಬೇರೆ ಯಾವುದನ್ನಾದರೂ ನಂಬುವಂತೆ ಜನರನ್ನು ಮನವೊಲಿಸಲು ಸಕ್ರಿಯವಾಗಿ ಪ್ರಯತ್ನಿಸುತ್ತಿರುವ ಜನರ ಬಗ್ಗೆ ಈ ಪದಗುಚ್ಛವು ವಿವರಿಸುತ್ತದೆ. ಪರ್ಯಾಯ ಭಾಷಾಂತರ: “ಸತ್ಯವಲ್ಲದ ವಿಷಯಗಳನ್ನು ನಂಬುವಂತೆ ಇತರರನ್ನು ಮನವೊಲಿಸುವ ಜನರು”
331:10abcdματαιολόγοι, καὶ φρεναπάται1**ಟೊಳ್ಳು ಮಾತಿನವರು** ಮತ್ತು **ವಂಚಕರು** ಎಂಬ ಇವೆರಡೂ ಪದಗಳು ಒಬ್ಬರನ್ನೇ ಸೂಚಿಸುತ್ತವೆ. ಅವರು ಸುಳ್ಳಾದ, ನಿಷ್ಪ್ರಯೋಜಕವಾದ ವಿಷಯಗಳನ್ನು ಬೋಧಿಸುತ್ತಾರೆ ಮತ್ತು ಜನರು ತಮ್ಮನ್ನು ನಂಬಬೇಕೆಂದು ಅವರು ಬಯಸುತ್ತಾರೆ. (ನೋಡಿರಿ: [[rc://kn/ta/man/translate/figs-hendiadys]])
341:10pu74οἱ ἐκ τῆς περιτομῆς1ಇದು ಕ್ರಿಸ್ತನನ್ನು ಹಿಂಬಾಲಿಸಲು ಪುರುಷರು ಸುನ್ನತಿ ಮಾಡಿಸಿಕೊಳ್ಳಬೇಕೆಂದು ಬೋಧಿಸುವಂಥ ಯೆಹೂದ್ಯ ಕ್ರೈಸ್ತರನ್ನು ಸೂಚಿಸುತ್ತದೆ. ಇದು ತಪ್ಪಾದ ಬೋಧನೆಯಾಗಿದೆ. (ನೋಡಿರಿ: [[rc://*/ta/man/translate/figs-metonymy]])
351:11tw4eἃ μὴ δεῖ1ಕ್ರಿಸ್ತನ ಮತ್ತು ಧರ್ಮಶಾಸ್ತ್ರದ ಕುರಿತು ಈ ರೀತಿ ಬೋಧಿಸುವುದು ಸರಿಯಲ್ಲ ಏಕೆಂದರೆ ಅವು ನಿಜವಾದವುಗಳಲ್ಲ.
361:11at7cαἰσχροῦ κέρδους χάριν1ಇದು ಅಗೌರವವಾದ ಕಾರ್ಯಗಳನ್ನು ಮಾಡಿ ಲಾಭ ಪಡೆಯುತ್ತಿರುವ ಜನರ ಕುರಿತಾಗಿ ಮಾತನಾಡುತ್ತದೆ.
371:11aqi5ὅλους οἴκους ἀνατρέπουσιν1**ಅವರು ಇಡೀ ಮನೆಯವರನ್ನು ಹಾಳು ಮಾಡುತ್ತಿದ್ದಾರೆ**. ಅವರು ಕುಟುಂಬಗಳನ್ನು ಸತ್ಯದಿಂದ ದೂರಮಾಡುತ್ತಿದ್ದಾರೆ ಮತ್ತು ಅವರ ನಂಬಿಕೆಯನ್ನು ಹಾಳುಮಾಡುತ್ತಿದ್ದಾರೆ ಎಂಬುದು ಸಮಸ್ಯೆಯಾಗಿತ್ತು.
381:12tr1jτις ἐξ αὐτῶν ἴδιος αὐτῶν προφήτης1ಸ್ವತಃ ಕ್ರೇತ ದ್ವೀಪದ ಜನರೇ ಪ್ರವಾದಿಯೆಂದು ಪರಿಗಣಿಸಿರುವ
391:12h3jbκακὰ θηρία1ಈ ರೂಪಕವು ಕ್ರೇತ ದ್ವೀಪದ ಜನರನ್ನು ಅಪಾಯಕಾರಿಯಾದ ಕಾಡು ಮೃಗಗಳಿಗೆ ಹೋಲಿಸುತ್ತದೆ. ಪರ್ಯಾಯ ಭಾಷಾಂತರ: “ಕಾಡು ಪ್ರಾಣಿಗಳಂತೆ ಅಪಾಯಕಾರಿಯಾದವರು” (ನೋಡಿರಿ: [[rc://kn/ta/man/translate/figs-metaphor]])
401:12xyz1γαστέρες ἀργαί1ಯಾವಾಗಲೂ ತಿನ್ನುವಂಥ ವ್ಯಕ್ತಿಯನ್ನು ಸೂಚಿಸಲು ಆಹಾರವನ್ನು ಶೇಖರಿಸಿಡುವಂಥ ದೇಹದ ಅಂಗವನ್ನು ಬಳಸಲಾಗಿದೆ. ಪರ್ಯಾಯ ಭಾಷಾಂತರ: “ಸೋಮಾರಿಯಾದ ಹೊಟ್ಟೆಬಾಕ” (ನೋಡಿರಿ: [[rc://kn/ta/man/translate/figs-synecdoche]])
411:13fif8δι’ ἣν αἰτίαν ἔλεγχε αὐτοὺς ἀποτόμως1ಆದಕಾರಣ ನೀನು ಕ್ರೇತ ದ್ವೀಪದ ಜನರನ್ನು ತಿದ್ದುವಾಗ, ನೀವು ಹೇಳುವುದನ್ನು ಅವರು ಅರ್ಥಮಾಡಿಕೊಳ್ಳುವಂತೆ ತೀಕ್ಷ್ಣವಾದ ಪದಗಳನ್ನು ಬಳಸಬೇಕು
421:13xyz2ἐν τῇ πίστει1ಇದರಲ್ಲಿ **ನಂಬಿಕೆ** ಎಂಬ ಭಾವವಾಚಕ ನಾಮಪದವು ಜನರು ದೇವರ ಬಗ್ಗೆ ನಂಬುವಂಥ ವಿಷಯಗಳನ್ನು ಪ್ರತಿನಿಧಿಸುತ್ತದೆ. ಪರ್ಯಾಯ ಭಾಷಾಂತರ: “ಅವರು ದೇವರ ಬಗ್ಗೆ ನಂಬುವಂಥದ್ದರಲ್ಲಿ” (ನೋಡಿರಿ: [[rc://kn/ta/man/translate/figs-abstractnouns]])
431:13abckδι’ ἣν αἰτίαν1**ಈ ಕಾರಣದಿಂದ** ಎಂಬ ಸಂಯೋಜಕ ಪದಗಳು ಕಾರಣ-ಫಲಿತಾಂಶದ ಸಂಬಂಧಾರ್ಥಕವನ್ನು ಸೂಚಿಸುತ್ತದೆ. ಕ್ರೇತದವನಾದ ಪ್ರವಾದಿಯು ತನ್ನ ಜನರ ಬಗ್ಗೆ ಹೇಳಿದ್ದಂಥ ಸಂಗತಿಯು ನಿಜವೇ ಆಗಿದೆ ಎಂಬುದು ಕಾರಣವಾಗಿದೆ (ಅವರು ಸುಳ್ಳುಗಾರರು, ದುಷ್ಟರು ಮತ್ತು ಸೋಮಾರಿಗಳು), ಮತ್ತು ತೀತನು ಅವರನ್ನು ಕಠಿಣವಾಗಿ ಗದರಿಸಬೇಕು (ನೋಡಿರಿ: [[rc://kn/ta/man/translate/grammar-connect-logic-result]])
441:13je3rἵνα ὑγιαίνωσιν ἐν τῇ πίστει1[ತೀತ 1:9](../01/09/pzi1) ರಲ್ಲಿ **ಸ್ವಸ್ಥ** ಎಂಬುದರ ಕುರಿತಾದ ಟಿಪ್ಪಣಿಯನ್ನು ನೋಡಿರಿ. ಪರ್ಯಾಯ ಭಾಷಾಂತರ: “ಆದ್ದರಿಂದ ಅವರು ಸ್ವಸ್ಥವಾದ ನಂಬಿಕೆ ಉಳ್ಳವರಾಗುತ್ತಾರೆ” ಅಥವಾ “ಆದ್ದರಿಂದ ಅವರ ನಂಬಿಕೆಯು ನಿಜವಾದದ್ದು ಆಗಬಹುದು” ಅಥವಾ “ಆದ್ದರಿಂದ ಅವರು ದೇವರ ಕುರಿತಾದ ಸತ್ಯವನ್ನು ಮಾತ್ರ ನಂಬುತ್ತಾರೆ”
451:13abclἵνα1**ಅದರಿಂದ** ಎಂಬ ಸಂಯೋಜಕ ಪದವು ಕಾರಣ-ಫಲಿತಾಂಶದ ಸಂಬಂಧಾರ್ಥಕವನ್ನು ಸೂಚಿಸುತ್ತದೆ. ಹಿರಿಯನು ಕ್ರೇತದವರನ್ನು ಕಠಿಣವಾಗಿ ಖಂಡಿಸಬೇಕು ಎಂಬುದು ಕಾರಣವಾಗಿದೆ, ಮತ್ತು ಕ್ರೇತದವರು ನಂಬಿಕೆಯಲ್ಲಿ ಸ್ವಸ್ಥರಾಗುತ್ತಾರೆ ಎಂಬುದು ಫಲಿತಾಂಶವಾಗಿದೆ. (ನೋಡಿರಿ: [[rc://kn/ta/man/translate/grammar-connect-logic-result]])
461:14abcmμὴ1**ಕೊಡದಿರಲಿ/ಬಾರದು** ಎಂಬ ಸಂಯೋಜಕ ಪದವು ಹೊರತುಪಡಿಸುವಿಕೆಯ ಉಪವಾಕ್ಯವನ್ನು ಸೂಚಿಸುತ್ತದೆ. ತೀತನು ಯೆಹೂದ್ಯರ ಕಟ್ಟುಕಥಗಳಿಗೆ ಅಥವಾ ಸತ್ಯವನ್ನು ಹಿಂಬಾಲಿಸದ ಮನುಷ್ಯರ ಆಜ್ಞೆಗಳಿಗೆ ಗಮನವನ್ನು ಕೊಡಲೇಬಾರದು. (ನೋಡಿರಿ: [[rc://kn/ta/man/translate/grammar-connect-logic-contrast]])
471:14p28iἸουδαϊκοῖς μύθοις1ಇದು ಯೆಹೂದ್ಯರ ಸುಳ್ಳು ಬೋಧನೆಗಳನ್ನು ಕುರಿತು ಹೇಳುತ್ತದೆ.
481:15abcnδὲ1**ಆದರೆ** ಎಂಬ ಸಂಯೋಜಕ ಪದವು ಶುದ್ಧರಾಗಿರುವ ಜನರ ಹಾಗೂ ಅಶುದ್ಧರಾಗಿರುವ ಮತ್ತು ನಂಬಿಕೆಯಿಲ್ಲದ ಜನರ ನಡುವಿನ ಭಿನ್ನತೆಯನ್ನು ಸೂಚಿಸುತ್ತದೆ. (ನೋಡಿರಿ: [[rc://kn/ta/man/translate/grammar-connect-logic-contrast]])
491:15nx42τοῖς καθαροῖς1ದೇವರಿಗೆ ಮೆಚ್ಚಿಗೆ ಉಳ್ಳವರಾಗಿರುವವರಿಗೆ
501:16abcoδὲ1**ಆದರೆ** ಎಂಬ ಸಂಯೋಜಕ ಪದವು ಅಶುದ್ಧರಾದ ಈ ಜನರು ಹೇಳುವಂಥದ್ದಕ್ಕೂ (ಅವರು ದೇವರನ್ನು ತಿಳಿದವರು) ಮತ್ತು ಅವರ ಕಾರ್ಯಗಳು ಏನು ತೋರಿಸುತ್ತವೆ (ಅವರು ದೇವರನ್ನು ತಿಳಿದವರಲ್ಲ) ಎಂಬುದಕ್ಕೂ ನಡುವೆಯಿರುವ ಭಿನ್ನತೆಯನ್ನು ಸೂಚಿಸುತ್ತದೆ. (ನೋಡಿರಿ: [[rc://kn/ta/man/translate/grammar-connect-logic-contrast]])
511:16i3l2τοῖς & ἔργοις ἀρνοῦνται1ಅವರು ಜೀವಿಸುವ ರೀತಿಯು ಅವರು ಆತನನ್ನು ತಿಳಿದವರಲ್ಲವೆಂದು ಸಾಬೀತುಪಡಿಸುತ್ತದೆ
521:16ja47βδελυκτοὶ ὄντες1ಅವರು ಅಸಹ್ಯರು ಆಗಿದ್ದಾರೆ
532:introh3il0# ತೀತ ಭಾಗ 2 ಸಾಮಾನ್ಯ ಟಿಪ್ಪಣಿಗಳು\n\n## ಈ ಅಧ್ಯಾಯದಲ್ಲಿನ ವಿಶೇಷ ಪರಿಕಲ್ಪನೆಗಳು\n\n### ಲಿಂಗತ್ವದ ಪಾತ್ರಗಳು\n\nಈ ಅಧ್ಯಾಯವನ್ನು ಐತಿಹಾಸಿಕವಾದ ಮತ್ತು ಸಾಂಸ್ಕೃತಿಕವಾದ ಹಿನ್ನೆಲೆಯಿಂದ ಹೇಗೆ ಅರ್ಥಮಾಡಿಕೊಳ್ಳಬೇಕು ಎಂಬ ವಿಷಯದಲ್ಲಿ ವಿದ್ವಾಂಸರು ಭಿನ್ನಾಭಿಪ್ರಾಯವುಳ್ಳವರಾಗಿದ್ದಾರೆ. ಕೆಲವು ವಿದ್ವಾಂಸರು ಪುರುಷರು ಮತ್ತು ಸ್ತ್ರೀಯರು ಎಲ್ಲಾ ವಿಷಯಗಳಲ್ಲಿ ಸಮಾನರಾಗಿದ್ದಾರೆ ಎಂದು ನಂಬುತ್ತಾರೆ. ಬೇರೆ ಕೆಲವು ವಿದ್ವಾಂಸರು ಮದುವೆಯಲ್ಲಿ ಮತ್ತು ಸಭೆಗಳಲ್ಲಿ ಸೇವೆಮಾಡಲು, ವಿಶಿಷ್ಟವಾದ, ವಿಭಿನ್ನವಾದ ಜವಾಬ್ದಾರಿಯನ್ನು ನಿರ್ವಹಿಸಲು ಪುರುಷ ಮತ್ತು ಮಹಿಳೆಯರನ್ನು ದೇವರು ಸೃಷ್ಠಿಸಿದನು ಎಂದು ನಂಬುತ್ತಾರೆ. ಭಾಷಾಂತರಗಾರರು ತಾವು ಈ ವಿಚಾರವನ್ನು ಅರ್ಥಮಾಡಿಕೊಳ್ಳುವ ರೀತಿಯು ಈ ವಾಕ್ಯಭಾಗವನ್ನು ಭಾಷಾಂತರ ಮಾಡುವುದರ ಮೇಲೆ ಪರಿಣಾಮ ಬೀರದಂತೆ ಎಚ್ಚರಿಕೆ ವಹಿಸಬೇಕು.\n\n### ದಾಸತ್ವ\n\nಪೌಲನು ಈ ಅಧ್ಯಾಯದಲ್ಲಿ ದಾಸತ್ವವು ಒಳ್ಳೆಯದೋ, ಕೆಟ್ಟದೋ ಎಂಬುದರ ಬಗ್ಗೆ ಬರೆಯುತ್ತಿಲ್ಲ. ಆದರೆ ಆಳುಗಳು ತಮ್ಮ ಯಜಮಾನರು ನಂಬಿಗಸ್ತರಾಗಿ ಸೇವೆ ಸಲ್ಲಿಸಬೇಕು ಎಂದು ತಿಳಿಸಿದ್ದಾನೆ. ಪ್ರತಿಯೊಬ್ಬ ವಿಶ್ವಾಸಿಯೂ ಎಲ್ಲಾ ಸಂದರ್ಭದಲ್ಲೂ ಭಕ್ತಿಯುಳ್ಳವರಾಗಿರಬೇಕು ಮತ್ತು ಸರಿಯಾಗಿ ಜೀವಿಸಬೇಕು ಎಂದು ಬೋಧಿಸುತ್ತಾನೆ.
542:1lfu1Connecting Statement:0# Connecting Statement:\n\nದೇವರ ವಾಕ್ಯವನ್ನು ಏಕೆ ಬೋಧಿಸಬೇಕು ಎಂಬುದಕ್ಕೆ ಕಾರಣಗಳನ್ನು ಹೇಳಿ ವಿವರಿಸುವುದನ್ನು ಪೌಲನು ಮುಂದುವರೆಸುತ್ತಾನೆ, ಮತ್ತು ವೃದ್ಧರು ಮತ್ತು ವೃದ್ಧೆಯರು, ಯುವಕರು, ದಾಸರು ಅಥವಾ ಸೇವಕರು ವಿಶ್ವಾಸಿಗಳಂತೆ ಹೇಗೆ ಜೀವಿಸಬೇಕು ಎಂದು ವಿವರಿಸುತ್ತಾನೆ.
552:1tpi2σὺ δὲ λάλει ἃ πρέπει1ಇಲ್ಲಿ **ನೀನು** ಎಂಬುದು ಏಕವಚನವಾಗಿದ್ದು ತೀತನನ್ನು ಸೂಚಿಸುತ್ತದೆ.ಯುಎಸ್‌ಟಿಯಲ್ಲಿರುವಂತೆ “ತೀತ” ಎಂದು ಹೆಸರನ್ನು ಸೇರಿಸುವುದು ಸಹಾಯಕವಾಗಿದ್ದರೆ, ನೀವು ಇಲ್ಲಿ ಅದನ್ನು ಸೇರಿಸಬಹುದು ([[rc://kn/ta/man/translate/figs-explicit]])
562:2xyz3πρεσβύτας & εἶναι1ಗ್ರೀಕ್ ಭಾಷೆಯಲ್ಲಿ **ಆಗಿರು** ಎಂಬ ಪದವು ಇಲ್ಲ, ಆದರೆ **ವೃದ್ಧರು ಹೀಗಿರಬೇಕು** ಎಂಬುದಾಗಿ ಮಾತ್ರವಿದೆ. ಹಿಂದಿನ ವಚನದಲ್ಲಿರುವ **ಉಪದೇಶಮಾಡು** ಎಂಬ ಪದದ ಕಲ್ಪನೆಯಿಂದ **ಬೋಧಿಸು** ಅಥವಾ **ಪ್ರಬೋಧಿಸು** ಎಂಬಂಥ ವಿಷಯವನ್ನು ಊಹಿಸಿಕೊಂಡು ನಾವು ಇಲ್ಲಿ ಕ್ರಿಯಾಪದವನ್ನು ಪೂರೈಸಬೇಕಾಗಿದೆ. ಪರ್ಯಾಯ ಭಾಷಾಂತರ: “ವೃದ್ಧರಿಗೆ ಹೀಗಿರಬೇಕೆಂದು ಬೋಧಿಸು” (ನೋಡಿರಿ: [[rc://kn/ta/man/translate/figs-ellipsis]])
572:2xy13νηφαλίους & σεμνούς, σώφρονας1ಈ ಮೂರು ಪದಗಳು ನಿಕಟವಾದ ಅರ್ಥವುಳ್ಳವುಗಳಾಗಿವೆ ಮತ್ತು ಉದ್ದಿಷ್ಟ ಭಾಷೆಯಲ್ಲಿ ಮೂರು ಪ್ರತ್ಯೇಕ ಪದಗಳಿಲ್ಲದಿದ್ದರೆ ಒಂದು ಅಥವಾ ಎರಡು ಪದಗಳಾಗಿ ಸೇರಿಸಬಹುದು. (ನೋಡಿರಿ: [[rc://kn/ta/man/translate/figs-doublet]])
582:2xc6tνηφαλίους εἶναι1ಸ್ವಸ್ಥಚಿತ್ತರು ಅಥವಾ ಆತ್ಮಸಂಯಮವುಳ್ಳವರು
592:2y3j2εἶναι & σώφρονας1ತಮ್ಮ ಆಶೆಗಳನ್ನು ನಿಗ್ರಹಿಸಲು
602:2m14yὑγιαίνοντας τῇ πίστει, τῇ ἀγάπῃ, τῇ ὑπομονῇ1ನಿಮ್ಮ ಭಾಷೆಯಲ್ಲಿ ಹೆಚ್ಚು ಸ್ಪಷ್ಟವಾಗಿರುತ್ತದೆ ಅನ್ನಿಸುವುದಾದರೆ **ನಂಬಿಕೆ** ಎಂಬ ಭಾವವಾಚಕ ನಾಮಪದವನ್ನು ಕ್ರಿಯಾಪದವಾಗಿ ಉಲ್ಲೇಖಿಸಬಹುದು. ಪರ್ಯಾಯ ಭಾಷಾಂತರ: “ದೇವರ ಕುರಿತಾದ ನಿಜವಾದ ಬೋಧನೆಗಳನ್ನು ದೃಢವಾಗಿ ನಂಬಿರಿ” (ನೋಡಿರಿ:[[rc://kn/ta/man/translate/figs-abstractnouns]])
612:2z14yτῇ ἀγάπῃ1ನಿಮ್ಮ ಭಾಷೆಯಲ್ಲಿ **ಪ್ರೀತಿ** ಎಂಬ ಭಾವವಾಚಕ ನಾಮಪದವನ್ನು ಕ್ರಿಯಾಪದವಾಗಿ ಬಳಸುವುದು ಸ್ಪಷ್ಟವಾಗಿರುವುದಾದರೆ ನೀವು ಹಾಗೆ ಬಳಸಬಹುದು. ಪರ್ಯಾಯ ಭಾಷಾಂತರ: “ಇತರರನ್ನು ನಿಜವಾಗಿಯೂ ಪ್ರೀತಿಸು” (ನೋಡಿರಿ: [[rc://kn/ta/man/translate/figs-abstractnouns]])
622:2a14yτῇ ὑπομονῇ1ನಿಮ್ಮ ಭಾಷೆಯಲ್ಲಿ **ತಾಳ್ಮೆ** ಎಂಬ ಭಾವವಾಚಕ ನಾಮಪದವನ್ನು ಕ್ರಿಯಾಪದವಾಗಿ ಬಳಸುವುದು ಸ್ಪಷ್ಟವಾಗಿರುವುದಾದರೆ ನೀವು ಹಾಗೆ ಬಳಸಬಹುದು. ಪರ್ಯಾಯ ಭಾಷಾಂತರ: “ಕಷ್ಟವಾದಾಗ್ಯೂ ನಿರಂತರವಾಗಿ ದೇವರನ್ನು ಸೇವಿಸಬೇಕು” (ನೋಡಿರಿ: [[rc://kn/ta/man/translate/figs-abstractnouns]])
632:3gl8eπρεσβύτιδας ὡσαύτως ἐν καταστήματι1ಗ್ರೀಕ್ ಭಾಷೆಯಲ್ಲಿ **ಆಗಿರಬೇಕು** ಎಂಬುದು ಇಲ್ಲ, ಆದರೆ **ಹಾಗೆಯೇ ವೃದ್ಧೆಯರು** ಎಂಬುದಾಗಿ ಮಾತ್ರವಿದೆ. ಹಿಂದಿನ ಎರಡು ವಚನಗಳಿಂದ ನಾವು ಕ್ರಿಯಾಪದದ ಕಲ್ಪನೆಯನ್ನು ತೆಗೆದುಕೊಂಡು ಮತ್ತು **ಬೋಧಿಸು** ಅಥವಾ **ಪ್ರಬೋಧಿಸು** ಎಂಬಂತಹ ಕ್ರಿಯಾಪದಗಳನ್ನು ಇಲ್ಲಿಗೆ ಆಳವಡಿಸುವುದನ್ನು ಮುಂದುವರಿಸಬೇಕು. ಪರ್ಯಾಯ ಭಾಷಾಂತರ: “ಅದೇ ರೀತಿಯಲ್ಲಿ, ವೃದ್ಧೆಯರಿಗೆ ಬೋಧಿಸು” ಅಥವಾ “ವೃದ್ಧೆಯರಿಗೂ ಸಹ ಬೋಧಿಸು” (ನೋಡಿರಿ: \[\[rc://kn/ta/man/translate/figs-ellipsis\]\])
642:3v9cpδιαβόλους1ಈ ಪದವು ಇತರ ಜನರ ಬಗ್ಗೆ ನಿಜವಾದ ಅಥವಾ ನಿಜವಲ್ಲದ ಕೆಟ್ಟ ವಿಷಯವನ್ನು ಹೇಳುವಂಥ ಜನರನ್ನು ಸೂಚಿಸುತ್ತದೆ.
652:3g9reοἴνῳ πολλῷ δεδουλωμένας1ತಮ್ಮನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲಾಗದ ಮತ್ತು ತುಂಬಾ ಮದ್ಯಪಾನ ಮಾಡುವ ಜನರನ್ನು ಮದ್ಯಕ್ಕೆ ಗುಲಾಮರಾಗಿದ್ದಾರೆ ಎಂದು ಹೇಳಲಾಗಿದೆ. ಪರ್ಯಾಯ ಭಾಷಾಂತರ: “ಅಥವಾ ಮದ್ಯಪಾನದ ಮೇಲಿರುವ ಅವರ ವ್ಯಾಮೋಹದಿಂದ ನಿಯಂತ್ರಿಸಲ್ಪಡುವುದು” ಅಥವಾ “ಅಥವಾ ಮದ್ಯ ವ್ಯಸನಿಯಾಗಿರುವುದು” (ನೋಡಿರಿ: [[rc://kn/ta/man/translate/figs-metaphor]])
662:4abc5φιλάνδρους1“ತಮ್ಮ ಸ್ವಂತ ಗಂಡಂದಿರನ್ನು ಪ್ರೀತಿಸುವವರು”
672:4abcaφιλοτέκνους1“ತಮ್ಮ ಸ್ವಂತ ಮಕ್ಕಳ ಪ್ರೀತಿಸುವವರು”
682:5abcbὑποτασσομένας τοῖς ἰδίοις ἀνδράσιν1“ಮತ್ತು ತಮ್ಮ ಸ್ವಂತ ಗಂಡಂದಿರಿಗೆ ಅಧೀನರಾಗಲು”
692:6i3hvὡσαύτως1ವೃದ್ಧರನ್ನು ತರಬೇತಿಗೊಳಿಸಿದಂತೆಯೇ ಯೌವನಸ್ಥರನ್ನು ಸಹ ತೀತನು ತರಬೇತಿಗೊಳಿಸಬೇಕಾಗಿತ್ತು.
702:7ym6xτύπον καλῶν ἔργων1ಒಳ್ಳೆಯ ಮತ್ತು ಸರಿಯಾದ ಕಾರ್ಯಗಳನ್ನು ಮಾಡುವಂಥವನ ಮಾದರಿಯಾಗಿ
712:8xy14ὑγιῆ1ಈ ಪದವು 2:7 ರಲ್ಲಿರುವ **ಭ್ರಷ್ಟಗೊಳಿಸದಿರುವಿಕೆ** ಎಂಬ ಪದದ ಅದೇ ಮೂಲ ಅರ್ಥವುಳ್ಳದಾಗಿದೆ. 2:7 ರಲ್ಲಿ, ಪೌಲನು ಇದನ್ನು ನಕರಾತ್ಮಕವಾದ ಅರ್ಥದಲ್ಲಿ ಹೇಳುತ್ತಾನೆ: **ಭ್ರಷ್ಟಗೊಳಿಸದಿರುವಿಕೆ**, ಅಂದರೆ, **ತಪ್ಪಿಲ್ಲದ**, ಮತ್ತು 2:8 ರಲ್ಲಿ ಅವನು ಇದನ್ನು ಸಕಾರಾತ್ಮಕವಾದ ಅರ್ಥದಲ್ಲಿ ಹೇಳುತ್ತಾನೆ: **ಸ್ವಸ್ಥ, ಆರೋಗ್ಯಕರ**, ಅಂದರೆ **ಸರಿಯಾದ**. ಇವೆರಡೂ ಪದಗಳು ತೀತನ ಬೋಧನೆಯ ಬಗ್ಗೆ ಸೂಚಿಸುತ್ತವೆ. ಉದ್ದಿಷ್ಟ ಭಾಷೆಯಲ್ಲಿ ಸಕರಾತ್ಮಕವಾದ ಅಥವಾ ನಕರಾತ್ಮಕವಾದ ಪದಗಳನ್ನು ಉಪಯೋಗಿಸಿರಿ, ಅಥವಾ ಎರಡು ಪದಗಳನ್ನು ಬಳಸುವುದು ಕಷ್ಟಕರವಾಗಿದ್ದರೆ ಈ ಅರ್ಥವನ್ನು ಕೊಡುವ ಒಂದೇ ಪದವನ್ನು ಉಪಯೋಗಿಸಿರಿ.
722:8xy15ἡμῶν1ಇದು ಪೌಲ, ತೀತ ಮತ್ತು ಎಲ್ಲಾ ಕ್ರೈಸ್ತರನ್ನು ಒಳಗೊಂಡಿದೆ. (See: [[rc://kn/ta/man/translate/figs-inclusive]])
732:9xyz5δούλους ἰδίοις δεσπόταις ὑποτάσσεσθαι1ಗ್ರೀಕ್ ಭಾಷೆಯಲ್ಲಿ **ಆಗಿರು** ಎಂಬ ಪದವು ಇಲ್ಲ, ಆದರೆ **ದಾಸರು ತಮ್ಮ ಸ್ವಂತ ಯಜಮಾನರಿಗೆ** ಎಂಬುದಾಗಿ ಮಾತ್ರವಿದೆ. ನಾವು 6 ನೇ ವಚನದಿಂದ ಕ್ರಿಯಾಪದ ಕಲ್ಪನೆಯನ್ನು ಊಹಿಸಿಕೊಂಡು **ಪ್ರಚೋದಿಸು** ಅಥವಾ **ಪ್ರಬೋಧಿಸು** ಎಂಬಂಥ ಪದಗಳನ್ನು ಇಲ್ಲಿಗೆ ಸೇರಿಸಬೇಕು, ಪರ್ಯಾಯ ಭಾಷಾಂತರ: “ದಾಸರು ತಮ್ಮ ಯಜಮಾನರಿಗೆ ಅಧೀನರಾಗಿರುವಂತೆ ಅವರಿಗೆ ಬೋಧಿಸು” (ನೋಡಿರಿ: [[rc://kn/ta/man/translate/figs-ellipsis]])
742:9ntp7ἰδίοις δεσπόταις1ಅವರ ಸ್ವಂತ ಯಜಮಾನರು
752:9abccὑποτάσσεσθαι1“ವಿಧೇಯರಾಗಬೇಕು”
762:9if6vἐν πᾶσιν1ಎಲ್ಲಾ ಸನ್ನಿವೇಶಗಳಲ್ಲೂ ಅಥವಾ ಯಾವಾಗಲೂ
772:10abc6μὴ νοσφιζομένους1“ತಮ್ಮ ಯಜಮಾನರಿಂದ ಕದಿಯಬಾರದು”
782:10t87jπᾶσαν πίστιν ἐνδεικνυμένους ἀγαθήν1ಅವರು ತಮ್ಮ ಯಜಮಾನರ ನಂಬಿಕೆಗೆ ಅರ್ಹರಾಗಿದ್ದಾರೆ ಎಂದು ತೋರಿಸಲು
792:10h2n6ἐν πᾶσιν1ಅವರು ಮಾಡುವ ಎಲ್ಲಾದರಲ್ಲಿಯೂ
802:10xy16ἡμῶν1ಇದರಲ್ಲಿರುವ **ನಮ್ಮ** ಎಂಬ ಪದವು ಪೌಲ, ತೀತ ಮತ್ತು ಎಲ್ಲಾ ಕ್ರೈಸ್ತರನ್ನು ಒಳಗೊಂಡಿದೆ (ನೋಡಿರಿ: [[rc://kn/ta/man/translate/figs-inclusive]])
812:10pn93τὴν τοῦ Σωτῆρος ἡμῶν Θεοῦ1ನಮ್ಮನ್ನು ರಕ್ಷಿಸುವ ನಮ್ಮ ದೇವರು
822:11y44uConnecting Statement:0# Connecting Statement:\n\nಯೇಸುವಿನ ಅಗಮನವನ್ನು ನಿರೀಕ್ಷಿಸುವಂತೆ ಮತ್ತು ಯೇಸುವಿನ ಮೂಲಕ ದೊರಕಿರುವ ತನ್ನ ಅಧಿಕಾರವನ್ನು ನೆನಪಿಸಿಕೊಳ್ಳುವಂತೆ ಪೌಲನು ತೀತನನ್ನು ಪ್ರೋತ್ಸಾಹಿಸುತ್ತಾನೆ.
832:11gp2zἐπεφάνη & ἡ χάρις τοῦ Θεοῦ1ಪೌಲನು ದೇವರ ಕೃಪೆಯ ಬಗ್ಗೆ ಮಾತನಾಡುವಾಗ ಒಬ್ಬ ವ್ಯಕ್ತಿಯು ಬಂದಿದ್ದಾನೋ ಎಂಬಂತೆ ಮಾತನಾಡುತ್ತಾನೆ. ಇದನ್ನು ಬೇರೆ ರೀತಿಯಲ್ಲಿ ವ್ಯಕ್ತಪಡಿಸುವುದಕ್ಕಾಗಿ ಯುಎಸ್‌ಟಿಯನ್ನು ನೋಡಿರಿ. ಪರ್ಯಾಯ ಭಾಷಾಂತರ: “ದೇವರು ಈಗ ತನ್ನ ಕೃಪೆಯನ್ನು ದಯಪಾಲಿಸುತ್ತಿದ್ದಾನೆ” (ನೋಡಿರಿ: \[\[rc://kn/ta/man/translate/figs-personification\]\])
842:12qy8kπαιδεύουσα ἡμᾶς1ಪೌಲನು ದೇವರ ಕೃಪೆಯ (ತೀತ 2:11) ಕುರಿತು ಮಾತನಾಡುವಾಗ ಅದನ್ನು ಪರಿಶುದ್ದ ಜೀವನವನ್ನು ನಡೆಸಬೇಕೆಂದು ತರಬೇತಿ ಕೊಡುವಂಥ ಒಬ್ಬ ವ್ಯಕ್ತಿಯೋ ಎಂಬಂತೆ ಮಾತನಾಡುತ್ತಿದ್ದಾನೆ. ಪರ್ಯಾಯ ಭಾಷಾಂತರ: “ಅದರಿಂದ ದೇವರು ನಮ್ಮನ್ನು ತರಬೇತಿಗೊಳಿಸುತ್ತಾನೆ” (ನೋಡಿರಿ:[[rc://kn/ta/man/translate/figs-personification]])
852:12abceἡμᾶς1ಇದು ಪೌಲ, ತೀತ ಮತ್ತು ಎಲ್ಲಾ ಕ್ರೈಸ್ತರನ್ನು ಒಳಗೊಂಡಿದೆ. (ನೋಡಿರಿ: [[rc://kn/ta/man/translate/figs-inclusive]])
862:12lxb3παιδεύουσα ἡμᾶς, ἵνα ἀρνησάμενοι τὴν ἀσέβειαν1ದೇವರನ್ನು ಅಗೌರವಿಸುವಂಥ ವಿಷಯಗಳು
872:12xy19ἀσέβειαν & εὐσεβῶς1ಈ ಪದಗಳು ವಿರೋಧಭಾಸವಾದವುಗಳಾಗಿವೆ, ಅಂದರೆ ಅನುಕ್ರಮವಾಗಿ **ದೇವರನ್ನು ಅಗೌರವಿಸುವ** ಮತ್ತು **ದೇವರನ್ನು ಗೌರವಿಸುವ** ಎಂಬ ಅರ್ಥವುಳ್ಳವುಗಳಾಗಿವೆ.
882:13rz93προσδεχόμενοι1***ಸ್ವಾಗತಿಸಲು ಕಾಯುತ್ತಿರುವ***
892:13xyz7τοῦ μεγάλου Θεοῦ καὶ Σωτῆρος ἡμῶν, Ἰησοῦ Χριστοῦ1**ನಮ್ಮ ಮಹೋನ್ನತನಾದ ದೇವರು** ಮತ್ತು **ರಕ್ಷಕನು** ಎಂಬ ಈ ಎರಡು ಪದಗುಚ್ಛಗಳು ಒಬ್ಬ ವ್ಯಕ್ತಿಯನ್ನೇ ಅಂದರೆ ಯೇಸುಕ್ರಿಸ್ತನನ್ನೇ ಸೂಚಿಸುತ್ತವೆ. ಪರ್ಯಾಯ ಭಾಷಾಂತರ: “ನಮ್ಮ ಮಹೋನ್ನತನಾದ ದೇವರು ಮತ್ತು ರಕ್ಷಕನಾದ ಯೇಸು ಕ್ರಿಸ್ತನು” (ನೋಡಿರಿ: [[rc://kn/ta/man/translate/figs-hendiadys]])
902:13abcfτὴν μακαρίαν ἐλπίδα, καὶ ἐπιφάνειαν τῆς δόξης1**ಭಾಗ್ಯಕರವಾದ ನಿರೀಕ್ಷೆ** ಮತ್ತು **ಮಹಿಮೆಯು ಪ್ರತ್ಯಕ್ಷವಾಗುವುದು** ಎಂಬ ಇವೆರಡೂ ಒಂದೇ ಸಂಗತಿಯನ್ನು ಸೂಚಿಸುತ್ತವೆ. ಇದನ್ನು ಸ್ಪಷ್ಟವಾಗಿ ತೋರಿಸಬಹುದು. ಪರ್ಯಾಯ ಭಾಷಾಂತರ: “ನಾವು ಭಾಗ್ಯಕರವಾದ ಮತ್ತು ಮಹಿಮಾನ್ವಿತವಾದ ಪ್ರತ್ಯಕ್ಷತೆಗಾಗಿ ಹಾತೊರೆಯುತ್ತಿದ್ದೇವೆ” (ನೋಡಿರಿ: [[rc://kn/ta/man/translate/figs-hendiadys]])
912:13xyz6τὴν μακαρίαν ἐλπίδα1ಇದರಲ್ಲಿ, ನಾವು ಯಾವುದನ್ನು ನಿರೀಕ್ಷಿಸುತ್ತಿದ್ದೇವೋ ಅದು **ಭಾಗ್ಯಕರ** ಆಗಿದೆ, ಅದು ಯಾವುದೆಂದರೆ ಯೇಸುಕ್ರಿಸ್ತನ ಪುನರಾಗಮನವಾಗಿದೆ. ಪರ್ಯಾಯ ಭಾಷಾಂತರ: “ನಾವು ನಿರೀಕ್ಷಿಸುತ್ತಿರುವ ಅದ್ಭುತಕರವಾದ ಸಂಗತಿ” (ನೋಡಿರಿ: \[\[rc://kn/ta/man/translate/figs-metonymy\]\])
922:14xy20ἡμῶν1ಇದು ಪೌಲ, ತೀತ ಮತ್ತು ಎಲ್ಲಾ ಕ್ರೈಸ್ತರನ್ನು ಒಳಗೊಂಡಿದೆ. (ನೋಡಿರಿ: [[rc://kn/ta/man/translate/figs-inclusive]])
932:14gxe7λυτρώσηται ἡμᾶς ἀπὸ πάσης ἀνομίας1ಯೇಸು ದಾಸರನ್ನು ಅವರ ದುಷ್ಟ ಯಜಮಾನನಿಂದ ಬಿಡುಗಡೆ ಮಾಡುತ್ತಿದ್ದಾನೋ ಎಂಬಂತೆ ಪೌಲನು ಯೇಸುವಿನ ಬಗ್ಗೆ ಹೇಳುತ್ತಾನೆ. (ನೋಡಿರಿ: [[rc://*/ta/man/translate/figs-metaphor]])
942:14fjy1λαὸν περιούσιον1ಆತನು ಅತ್ಯಮೂಲ್ಯವಾದ ಸಂಪತ್ತಿನಂತೆ ಶೇಖರಿಸಿಡುವ ಜನರ ಗುಂಪು
952:14ii18ζηλωτὴν1ಮಾಡಲು ಅತ್ಯಾಸಕ್ತಿಯುಳ್ಳವರು
962:14xy21ἡμᾶς1ಇದು ಪೌಲ, ತೀತ ಮತ್ತು ಎಲ್ಲಾ ಕ್ರೈಸ್ತರನ್ನು ಒಳಗೊಂಡಿದೆ. (ನೋಡಿರಿ: \[\[rc://kn/ta/man/translate/figs-inclusive\]\])
972:15abc7παρακάλει1“ಈ ಕಾರ್ಯಗಳನ್ನು ಮಾಡಲು ಅವರನ್ನು ಪ್ರೋತ್ಸಾಹಿಸು”
982:15h15yμηδείς & περιφρονείτω1ನಿನ್ನನ್ನು ತಿರಸ್ಕರಿಸಲು ಯಾರಿಗೂ ಅನುವು ಮಾಡಿಕೊಡಬೇಡ
992:15xy22μηδείς σου περιφρονείτω1ಇದನ್ನು ಸಕಾರಾತ್ಮಕವಾಗಿಯೂ ಹೇಳಬಹುದು: “ಎಲ್ಲರೂ ನಿನ್ನ ಮಾತನ್ನು ಕೇಳುವಂತೆ ನೋಡಿಕೋ” (ನೋಡಿರಿ: \[\[rc://kn/ta/man/translate/figs-doublenegatives\]\])
1003:introzh6x0# ತೀತ 03 ಸಾಮಾನ್ಯ ಟಿಪ್ಪಣಿಗಳು\n\n## ರಚನೆ ಮತ್ತು ನಮೂನೆ\n\nಈ ಅಧ್ಯಾಯದಲ್ಲಿ ಪೌಲನು ತೀತನಿಗೆ ವೈಯಕ್ತಿಕವಾದ ಕೆಲವು ಸೂಚನೆಗಳನ್ನು ನೀಡಿದ್ದಾನೆ.\n\n15 ನೇ ವಾಕ್ಯದೊಂದಿಗೆ ಈ ಪತ್ರಿಕೆಯು ಸಾಂಪ್ರದಾಯಕವಾಗಿ ಮುಕ್ತಾಯವಾಗುತ್ತದೆ. ಪುರಾತನ ಕಾಲದ ಪೂರ್ವದೇಶದಲ್ಲಿ ಬಳಸುತ್ತಿದ್ದ ಸಾಮಾನ್ಯ ರೀತಿಯಲ್ಲಿ ಈ ಪತ್ರವನ್ನು ಮುಕ್ತಾಯಗೊಳಿಸಲಾಗಿದೆ.\n\n## ಈ ಅಧ್ಯಾಯದಲ್ಲಿನ ವಿಶೇಷ ಪರಿಕಲ್ಪನೆಗಳು\n\n### ವಂಶಾವಳಿಗಳು\n\nವಶಾವಳಿಗಳು (ವಚನ 9) ಎಂದರೆ ಇದರಲ್ಲಿ ಬರುವ ವ್ಯಕ್ತಿಯೊಬ್ಬನ ಪೂರ್ವಿಕರ ಪಟ್ಟಿ ಅಥವಾ ಅವನ ಸಂತತಿಯವರ ಪಟ್ಟಿ, ಮತ್ತು ಒಬ್ಬ ವ್ಯಕ್ತಿಯು ಯಾವ ಕುಲದಿಂದ ಮತ್ತು ಕುಟುಂಬದಿಂದ ಬಂದವನು ಎಂದು ತೋರಿಸುತ್ತದೆ. ಉದಾಹರಣೆಗೆ ಯಾಜಕರು ಲೇವಿಯರ ಕುಲದಿಂದ ಮತ್ತು ಆರೋನನ ಕುಟುಂಬದಿಂದ ಬಂದವರಾಗಿದ್ದಾರೆ. ಈ ಪಟ್ಟಿಗಳಲ್ಲಿ ಕೆಲವೊಂದು ಪಟ್ಟಿಗಳು ಪೂರ್ವಿಕರ ಮತ್ತು ಆತ್ಮಿಕ ಜೀವಿಗಳ ಕಥೆಗಳನ್ನು ಒಳಗೊಂಡಿವೆ. ಕಾರ್ಯಗಳು ಎಲ್ಲಿಂದ ಬಂದವು ಮತ್ತು ಬೇರೆ ಬೇರೆ ಜನರು ಎಷ್ಟು ಪ್ರಾಮುಖ್ಯವುಳ್ಳವರಾಗಿದ್ದಾರೆ ಎಂಬುದರ ಬಗ್ಗೆ ವಾದಿಸಲು ಈ ಪಟ್ಟಿಗಳನ್ನು ಮತ್ತು ಕಥೆಗಳನ್ನು ಉಪಯೋಗಿಸುತ್ತಿದ್ದರು.
1013:1y9trConnecting Statement:0# Connecting Statement:\n\nಕ್ರೇತ ದ್ವೀಪದಲ್ಲಿನ ವೃದ್ಧರಿಗೆ ಮತ್ತು ಅವನ ಸುಪರ್ದಿನಲ್ಲಿದ್ದ ಜನರಿಗೆ ಯಾವ ರೀತಿ ಬೋಧಿಸಬೇಕು ಎಂಬ ಸೂಚನೆಗಳನ್ನು ಪೌಲನು ತೀತನಿಗೆ ಕೊಡುವುದನ್ನು ಮುಂದುವರಿಸುತ್ತಾನೆ.
1023:1w3fyἀρχαῖς, ἐξουσίαις, ὑποτάσσεσθαι, πειθαρχεῖν1ರಾಜಕೀಯ ಆಡಳಿತಗಾರರು ಮತ್ತು ಸರ್ಕಾರಿ ಅಧಿಕಾರಿಗಳು ಹೇಳುವಂಥದ್ದನ್ನು ಮಾಡುವುದರ ಮೂಲಕ ಅವರಿಗೆ ವಿಧೇಯರಾಗಬೇಕು
1033:1xy25ὑποτάσσεσθαι, πειθαρχεῖν1ಈ ಪದಗಳಿಗೆ ಸಮಾನವಾದ ಅರ್ಥವಿದೆ ಮತ್ತು ಈ ಎರಡೂ ಪದಗಳು ನಿಮಗೆ ಯಾರಾದರೂ ಏನನ್ನಾದರೂ ಮಾಡಲು ಹೇಳಿದರೆ ಅದನ್ನು ಮಾಡಬೇಕೆಂದು ಸೂಚಿಸುತ್ತದೆ. ಉದ್ದಿಷ್ಟ ಭಾಷೆಯಲ್ಲಿ ಇದಕ್ಕೆ ಕೇವಲ ಒಂದೇ ಒಂದು ಪದ ಇರುವುದಾದರೆ, ಆ ಪದವನ್ನು ಬಳಸಿರಿ (ನೋಡಿರಿ: [[rc://*/ta/man/translate/figs-doublet]])
1043:1wa9xἀρχαῖς ἐξουσίαις1ಈ ಪದಗಳಿಗೆ ಸಮಾನವಾದ ಅರ್ಥವಿದೆ ಮತ್ತು ಈ ಪದಗಳು ಸರ್ಕಾರದಲ್ಲಿರುವ ಅಧಿಕಾರಿಗಳನ್ನು ಸೂಚಿಸುತ್ತವೆ. ಉದ್ದಿಷ್ಟ ಭಾಷೆಯಲ್ಲಿ ಇದಕ್ಕೆ ಕೇವಲ ಒಂದೇ ಒಂದು ಪದ ಇರುವುದಾದರೆ, ಆ ಪದವನ್ನು ಬಳಸಿರಿ (ನೋಡಿರಿ: \[\[rc://kn/ta/man/translate/figs-doublet\]\])
1053:1in7uπρὸς πᾶν ἔργον ἀγαθὸν ἑτοίμους εἶναι1ಅವಕಾಶ ಇರುವಾಗಲ್ಲೆಲ್ಲಾ ಸತ್ಕಾರ್ಯಗಳನ್ನು ಮಾಡಲು ಸಿದ್ಧರಾಗಿರಿ
1063:2lug7βλασφημεῖν1ಕೆಟ್ಟದ್ದಾಗಿ ಮಾತನಾಡುವುದು
1073:2abcxἀμάχους εἶναι1ಇದನ್ನು ಸಕಾರಾತ್ಮಕವಾಗಿಯೂ ಹೇಳಬಹುದು: “ಸಮಾಧಾನದಿಂದಿರಲು” (ನೋಡಿರಿ: [rc://kn/ta/man/translate/figs-doublenegatives]])
1083:3m9zdγάρ ποτε καὶ ἡμεῖς1ಏಕೆಂದರೆ ನಾವು ಕೂಡ ಒಂದು ಕಾಲದಲ್ಲಿ ಆಗಿದ್ದೇವು
1093:3xy27πλανώμενοι, δουλεύοντες ἐπιθυμίαις καὶ ἡδοναῖς ποικίλαις1ಇದನ್ನು ಕರ್ತರಿ ಪ್ರಯೋಗದಲ್ಲಿ ಭಾಷಾಂತರಿಸಬಹುದು. ಪರ್ಯಾಯ ಭಾಷಾಂತರ: “ನಾನಾ ವಿಧವಾದ ದುರಾಶೆಗಳು ಮತ್ತು ಭೋಗಗಳು ನಮಗೆ ಸುಳ್ಳು ಹೇಳಿ ನಮ್ಮನ್ನು ದಾರಿ ತಪ್ಪಿಸಿದವು” (ನೋಡಿರಿ: \[\[rc://kn/ta/man/translate/figs-activepassive\]\])
1103:3y5lpστυγητοί1ಇತರರು ನಮ್ಮನ್ನು ಹಗೆ ಮಾಡುವಂತೆ ಮಾಡಿದ್ದೇವೆ
1113:4xy28δὲ1ಜನರು ಇರುವಂಥ ಕೆಟ್ಟ ಮಾರ್ಗಕ್ಕೂ (1-3 ವಚನಗಳು) ಮತ್ತು ದೇವರ ಒಳ್ಳೆಯತನಕ್ಕೂ (4-7 ವಚನಗಳು) ನಡುವೆಯಿರುವ ವ್ಯತ್ಯಾಸವನ್ನು ಇಲ್ಲಿ ತೋರಿಸಬೇಕಾದದ್ದು ಮುಖ್ಯವಾಗಿದೆ (ನೋಡಿರಿ: \[\[rc://kn/ta/man/translate/grammar-connect-logic-contrast\]\])
1123:4ba5aὅτε & ἡ χρηστότης καὶ ἡ φιλανθρωπία ἐπεφάνη τοῦ Σωτῆρος ἡμῶν, Θεοῦ1ಪೌಲನು ದೇವರ ದಯೆ ಮತ್ತು ಪ್ರೀತಿಯ ಬಗ್ಗೆ ಮಾತನಾಡುತ್ತಾ ಅವುಗಳನ್ನು ನಮ್ಮ ಕಣ್ಣಿಗೆ ಕಾಣಿಸುವಂಥ ಜನರಂತೆ ವರ್ಣಿಸಿದ್ದಾನೆ. ಪರ್ಯಾಯ ಭಾಷಾಂತರ: “ನಮ್ಮ ರಕ್ಷಕನಾದ ದೇವರು ತನ್ನ ದಯೆಯನ್ನು ಮತ್ತು ಜನರ ಮೇಲಿನ ಪ್ರೀತಿಯನ್ನು ನಮಗೆ ತೋರಿಸಿದಾಗ” (ನೋಡಿರಿ: [[rc://kn/ta/man/translate/figs-personification]])
1133:4abcgὅτε & ἡ χρηστότης καὶ ἡ φιλανθρωπία ἐπεφάνη τοῦ Σωτῆρος ἡμῶν, Θεοῦ1ಭಾವಸೂಚಕ ನಾಮಪದಗಳಾದ **ದಯೆ** ಮತ್ತು **ಪ್ರೀತಿ** ಎಂಬುವುಗಳನ್ನು ವಿಶೇಷಣಗಳಾಗಿ ಹೇಳಬಹುದು. ಪರ್ಯಾಯ ಭಾಷಾಂತರ: “ನಮ್ಮನ್ನು ರಕ್ಷಿಸುವ ದೇವರು ಮಾನವಕುಲಕ್ಕೆ ಆತನು ಎಷ್ಟು ದಯಾಮಯಿಯು ಮತ್ತು ಪ್ರೀತಿಯುಳ್ಳವನು ಆಗಿದ್ದಾನೆ ಎಂದು ತೋರಿಸಿದಾಗ” (ನೋಡಿರಿ: [[rc://kn/ta/man/translate/figs-abstractnouns]])
1143:4abchἡμῶν1ಇದು ಪೌಲ, ತೀತ ಮತ್ತು ಎಲ್ಲಾ ಕ್ರೈಸ್ತರನ್ನು ಒಳಗೊಂಡಿದೆ. (See: [[rc://*/ta/man/translate/figs-inclusive]])
1153:5n4ugκατὰ τὸ αὐτοῦ ἔλεος1ಏಕೆಂದರೆ ಆತನು ನಮ್ಮ ಮೇಲೆ ಕರುಣೆಯನ್ನು ಇಟ್ಟಿರುವುದರಿಂದ
1163:5k1a6λουτροῦ παλινγενεσίας1ಪೌಲನು ಇಲ್ಲಿ ಎರಡು ರೂಪಕಗಳನ್ನು ಸಂಯೋಜಿಸುತ್ತಾನೆ. ಅವನು ದೇವರು ಪಾಪಿಗಳನ್ನು ಮನ್ನಿಸಿದಂಥ ಆತನ ಕ್ಷಮಾಪಣೆಯ ಬಗ್ಗೆ ಮಾತನಾಡುವಾಗ ಅತನು ಅವರನ್ನು ಅವರ ಪಾಪದಿಂದ ದೈಹಿಕವಾಗಿ ತೊಳೆದು ಶುದ್ಧೀಕರಿಸುತ್ತಿದ್ದಾನೋ ಎಂಬಂತೆ ಮಾತನಾಡುತ್ತಿದ್ದಾನೆ. ಅವರು ಪುರ್ನಜನ್ಮ ಪಡೆದವರಂತೆ ದೇವರಿಗೆ ಪ್ರತಿಕ್ರಿಯಾಶೀಲರಾಗಿರುವ ಪಾಪಿಗಳ ಬಗ್ಗೆಯೂ ಅವನು ಮಾತನಾಡುತ್ತಿದ್ದಾನೆ. (ನೋಡಿರಿ: [[rc://*/ta/man/translate/figs-metaphor]])
1173:6xy24ἡμᾶς1ಇದು ಪೌಲ, ತೀತ ಮತ್ತು ಎಲ್ಲಾ ಕ್ರೈಸ್ತರನ್ನು ಒಳಗೊಂಡಿದೆ. (ನೋಡಿರಿ: [[rc://kn/ta/man/translate/figs-inclusive]])
1183:6q9zeδιὰ Ἰησοῦ Χριστοῦ τοῦ Σωτῆρος ἡμῶν1ಯೇಸು ಕ್ರಿಸ್ತನು ನಮ್ಮನ್ನು ರಕ್ಷಿಸಿದಾಗ
1193:6xy23ἡμῶν1ಇದು ಪೌಲ, ತೀತ ಮತ್ತು ಎಲ್ಲಾ ಕ್ರೈಸ್ತರನ್ನು ಒಳಗೊಂಡಿದೆ. (ನೋಡಿರಿ: [[rc://kn/ta/man/translate/figs-inclusive]])
1203:9tzh9Connecting Statement:0# Connecting Statement:\n\nತೀತನನ್ನು ಏನನ್ನು ದೂರವಿಡಬೇಕು ಮತ್ತು ವಿಶ್ವಾಸಿಗಳ ಮಧ್ಯೆ ವಿವಾದವನ್ನು ಉಂಟುಮಾಡುವವರೊಂದಿಗೆ ಹೇಗೆ ವರ್ತಿಸಬೇಕು ಎಂದು ಪೌಲನು ವಿವರಿಸುತ್ತಾನೆ.
1213:9xnf9μωρὰς ζητήσεις1ಪ್ರಾಮುಖ್ಯ ಇಲ್ಲದಿರುವ ವಿಷಯಗಳ ಕುರಿತಾದ ವಾದ ವಿವಾದಗಳನ್ನು
1223:9qk66γενεαλογίας1ಇದು ಕೌಟುಂಬಿಕ ಬಾಂಧವ್ಯದ ಸಂಬಂಧಗಳ ಕುರಿತಾದ ಅಧ್ಯಯನವಾಗಿದೆ. ತೀತನ ಪತ್ರಿಕೆಯ ಪೀಠಿಕೆಯನ್ನು ನೋಡಿರಿ.
1233:9xu7fἔρεις1ವಾದ ವಿವಾದಗಳು ಅಥವಾ ಕಚ್ಚಾಟಗಳು
1243:9ky3nνομικὰς1ಮೋಶೆಯ ಧರ್ಮಶಾಸ್ತ್ರದ ಕುರಿತಾದ
1253:10x3fhἄνθρωπον & παραιτοῦ1ಭಿನ್ನಭೇದಗಳನ್ನು ಉಂಟುಮಾಡುವ ವ್ಯಕ್ತಿಯಿಂದ ದೂರವಿರು
1263:10xzx1μετὰ μίαν καὶ δευτέραν νουθεσίαν1ಒಬ್ಬ ವ್ಯಕ್ತಿಯನ್ನು ಒಂದು ಅಥವಾ ಎರಡುಸಲ ಎಚ್ಚರಿಸಿದ ನಂತರ
1273:11r7pcὁ τοιοῦτος1ಅಂತಹ ವ್ಯಕ್ತಿ
1283:11inh5ἐξέστραπται1ತಪ್ಪಾದ ಕಾರ್ಯಗಳನ್ನು ಮಾಡಲು ನಿರ್ಧರಿಸುವ ವ್ಯಕ್ತಿಯ ಬಗ್ಗೆ ಪೌಲನು ಮಾತನಾಡುವಾಗ, ಆ ವ್ಯಕ್ತಿಯು ತಪ್ಪಾದ ಹಾದಿಯಲ್ಲಿ ನಡೆಯುವುದಕ್ಕಾಗಿ ಸರಿಯಾದ ಮಾರ್ಗವನ್ನು ತೊರೆದುಬಿಟ್ಟಂಥವನಾಗಿದ್ದಾನೆ ಎಂಬಂತೆ ಮಾತನಾಡುತ್ತಾನೆ. (ನೋಡಿರಿ: \[\[rc://kn/ta/man/translate/figs-metaphor\]\])
1293:11p81kὢν αὐτοκατάκριτος1ತನ್ನ ಮೇಲೆಯೇ ನ್ಯಾಯತೀರ್ಪನ್ನು ಬರಮಾಡಿಕೊಳ್ಳುತ್ತಿದ್ದಾನೆ
1303:12z7i4Connecting Statement:0# Connecting Statement:\n\nಕ್ರೇತಾ ದ್ವೀಪದಲ್ಲಿ ಹಿರಿಯರನ್ನು ನೇಮಿಸಿದ ನಂತರ ಏನು ಮಾಡಬೇಕು ಎಂದು ತೀತನಿಗೆ ಹೇಳುತ್ತಾ ಮತ್ತು ಅವನೊಂದಿಗಿದ್ದ ಎಲ್ಲರಿಗೂ ವಂದನೆಗಳನ್ನು ಹೇಳುತ್ತಾ ಈ ಪತ್ರಿಕೆಯನ್ನು ಪೌಲನು ಮುಕ್ತಾಯಗಳಿಸುತ್ತಾನೆ.
1313:12mba6ὅταν πέμψω1ನಾನು ಕಳುಹಿಸಿದ ಮೇಲೆ
1323:12knt1σπούδασον ἐλθεῖν1ಬೇಗ ಬಾ
1333:12xy30σπούδασον1ಈ ಕ್ರಿಯಾಪದವು ಏಕವಚನದಲ್ಲಿದೆ, ಇದು ತೀತನನ್ನು ಮಾತ್ರ ಸಂಬೋಧಿಸುವಂಥದ್ದಾಗಿದೆ. ಬಹುಶಃ ತೀತನ ಸ್ಥಾನವನ್ನು ವಹಿಸಿಕೊಳ್ಳುವುದಕ್ಕಾಗಿ ಅರ್ತೆಮನ್ನಾಗಲಿ ಅಥವಾ ತುಖಿಕನ್ನಾಗಲಿ ಕ್ರೇತದಲ್ಲಿಯೇ ಇರಬೇಕು.
1343:12gdw9παραχειμάσαι1ಚಳಿಗಾಲದಲ್ಲಿ ಉಳಿದುಕೊಳ್ಳಲು
1353:13a46fΖηνᾶν1ಇವುಗಳು ವ್ಯಕ್ತಿಗಳ ಹೆಸರುಗಳಾಗಿವೆ (ನೋಡಿರಿ: \[\[rc://kn/ta/man/translate/translate-names\]\])
1363:13j496σπουδαίως πρόπεμψο1ಕಳುಹಿಸುವದರಲ್ಲಿ ತಡಮಾಡಬೇಡ
1373:13s757καὶ Ἀπολλῶν1ಮತ್ತೂ ಅಪೋಲ್ಲೋಸನನ್ನು ಸಹ
1383:13xy31ἵνα μηδὲν αὐτοῖς λείπῃ1ಇದನ್ನು ಸಕಾರಾತ್ಮಕವಾಗಿಯೂ ಹೇಳಬಹುದು: “ಇದರಿಂದಾಗಿ ಅವರಿಗೆ ಅಗತ್ಯವಿರುವ ಎಲ್ಲವು ಅವರಿಗೆ ಇರುತ್ತದೆ” (ನೋಡಿರಿ: [[rc://kn/ta/man/translate/figs-doublenegatives]])
1393:14v7wgConnecting Statement:0# Connecting Statement:\n\nಎಲ್ಲಾ ವಿಶ್ವಾಸಿಗಳು ಅಗತ್ಯವಿರುವವರಿಗೆ ಒದಗಿಸುವುದು ಮುಖ್ಯ ಎಂದು ಪೌಲನು ವಿವರಿಸುತ್ತಾನೆ.
1403:14fw98οἱ ἡμέτεροι1ಪೌಲನು ಕ್ರೇತದಲ್ಲಿರುವ ವಿಶ್ವಾಸಿಗಳನ್ನು ಸೂಚಿಸುತ್ತಿದ್ದಾನೆ. ಪರ್ಯಾಯ ಭಾಷಾಂತರ: “ನಮ್ಮ ಸ್ವಂತ ಜನರು”
1413:14xy33οἱ ἡμέτεροι1ಇದರಲ್ಲಿರುವ **ನಮ್ಮ** ಎಂಬ ಪದವು ಪೌಲನನ್ನು ಮತ್ತು ತೀತನನ್ನು ಒಳಗೊಂಡಿದೆ. ಪದದ ರೂಪವು ದ್ವಿವಚನವಾಗಿ ಅಥವಾ ಅಂತರ್ಗತವಾಗಿ ಇರಬೇಕು.
1423:14tn24εἰς τὰς ἀναγκαίας χρείας1ಅದು ಅತ್ಯಗತ್ಯವಾದ ವಸ್ತುಗಳ ಕೊರತೆಯಿರುವ ಜನರಿಗೆ ಸಹಾಯ ಮಾಡಲು ಶಕ್ತರನ್ನಾಗಿಸುತ್ತದೆ
1433:14xy32ἵνα μὴ ὦσιν ἄκαρποι1ಇದನ್ನು ಸಕಾರಾತ್ಮಕವಾಗಿಯೂ ಹೇಳಬಹುದು: “ಹೀಗೆ ಅವರು ಫಲವನ್ನು ಕೊಡುವವರಾಗುತ್ತಾರೆ” ಅಥವಾ “ಹೀಗೆ ಅವರು ಫಲಪ್ರದರಾಗುತ್ತಾರೆ” (ನೋಡಿರಿ: [[rc://kn/ta/man/translate/figs-doublenegatives]])
1443:15j3y2General Information:0# General Information:\n\nತೀತನಿಗೆ ಬರೆದ ಪತ್ರವನ್ನು ಪೌಲನು ಮುಕ್ತಾಯಗೊಳಿಸುತ್ತಾನೆ
1453:15abciἀσπάζονταί σε1ಇದರಲ್ಲಿರುವ **ನೀನು** ಎಂಬುದು ಏಕವಚನವಾಗಿದೆ, ಇದು ತೀತನಿಗೆ ಮಾಡುವ ವೈಯಕ್ತಿಕ ವಂದನೆಯಾಗಿದೆ.
1463:15kx83ἡ χάρις μετὰ πάντων ὑμῶν1ಇದು ಸಾಮಾನ್ಯವಾಗಿ ಮಾಡುವ ಕ್ರಿಸ್ತೀಯ ವಂದನೆಯಾಗಿತ್ತು. ಪರ್ಯಾಯ ಭಾಷಾಂತರ: “ದೇವರ ಕೃಪೆಯು ನಿಮ್ಮೊಂದಿಗೆ ಇರಲಿ” ಅಥವಾ “ದೇವರು ನಿಮ್ಮೆಲ್ಲರಿಗೂ ಕೃಪೆ ತೋರಲಿ ಎಂದು ನಾನು ಬೇಡಿಕೊಳ್ಳುತ್ತೇನೆ”
1473:15xy34ὑμῶν1ಇದರಲ್ಲಿರುವ **ನೀವು** ಎಂಬ ಪದವು ಬಹುವಚನವಾಗಿದೆ. ಈ ಆಶೀರ್ವಾದವು ತೀತನಿಗೂ ಮತ್ತು ಕ್ರೇತದಲ್ಲಿರುವ ಎಲ್ಲ ವಿಶ್ವಾಸಿಗಳಿಗೂ ಇರುವಂಥದ್ದಾಗಿದೆ.
1483:15xy35ἡμᾶς1ಇದರಲ್ಲಿರುವ **ನಮ್ಮನ್ನು** ಎಂಬ ಪದವು ಬಹುಶಃ ಪ್ರತ್ಯೇಕವಾಗಿ ಪೌಲ ಮತ್ತು ಅವನೊಂದಿಗಿರುವ ಕ್ರೈಸ್ತರ ಗುಂಪನ್ನು ಸೂಚಿಸುತ್ತದೆ. ಪೌಲನು ಈ ಗುಂಪಿನಿಂದ ಕ್ರೇತದಲ್ಲಿ ತೀತನೊಂದಿಗೆ ಇರುವ ಕ್ರೈಸ್ತರ ಗುಂಪಿಗೆ ವಂದನೆಗಳನ್ನು ತಿಳಿಸುತ್ತಿದ್ದಾನೆ.