translationCore-Create-BCS_.../en_tn_57-TIT.tsv

97 KiB
Raw Blame History

1BookChapterVerseIDSupportReferenceOrigQuoteOccurrenceGLQuoteOccurrenceNote
2TITfrontintrom2jl0# ತೀತನಿಗೆ ಬರೆದ ಪತ್ರಿಕೆಯ ಪೀಠಿಕೆ

## ಭಾಗ 1: ಸಾಮಾನ್ಯ ಪೀಠಿಕೆ

### ತೀತನ ಪುಸ್ತಕದ ಹೊರರೇಖೆ

1. ಪೌಲನು ತೀತನಿಗೆ ದೈವಭಕ್ತಿಯುಳ್ಳ ನಾಯಕರನ್ನು ನೇಮಿಸುವಂತೆ ಆಜ್ಞಾಪಿಸುತ್ತಾನೆ (1:1-16)
2. ಜನರು ದೈವಭಕ್ತಿಯುಳ್ಳ ಜೀವನವನ್ನು ನಡೆಸಲು ತರಬೇತಿ ನೀಡಬೇಕೆಂದು ತೀತನಿಗೆ ಪೌಲನು ಆಜ್ಞಾಪಿಸುತ್ತಾನೆ (2:1-3:11)
3. ಪೌಲನು ತನ್ನ ಮುಂದಿನ ಯೋಜನೆಗಳ ಬಗ್ಗೆ ಮತ್ತು ಅನೇಕ ವಿಶ್ವಾಸಿಗಳಿಗೆ ವಂದನೆಗಳನ್ನೂ ಹೇಳುತ್ತಾ ತನ್ನ ಮಾತುಗಳನ್ನು ಮುಕ್ತಾಯಗೊಳಿಸುತ್ತಾನೆ (3:12-15)

### ತೀತನ ಪುಸ್ತಕವನ್ನು ಬರೆದವರು ಯಾರು?

ಪೌಲನು ತೀತನ ಪುಸ್ತಕವನ್ನು ಬರೆದನು. ಪೌಲನು ತಾರ್ಸಾ ಪಟ್ಟಣದವನು. ಅವನ ಜೀವನದ ಆದಿಭಾಗದಲ್ಲಿ ಅವನು ಸೌಲನೆಂದು ಅರಿಯಲ್ಪಟ್ಟಿದ್ದನು. ಕ್ರೈಸ್ತನಾಗುವ ಮೊದಲು ಪೌಲನು ಒಬ್ಬ ಫರಿಸಾಯನಾಗಿದ್ದನು. ಕ್ರೈಸ್ತರನ್ನು ಹಿಂಸಿಸುತ್ತಿದ್ದನು. ಆದರೆ ಅವನು ಕ್ರೈಸ್ತನಾದ ಮೇಲೆ ಜನರಿಗೆ ಯೇಸುವಿನ ಬಗ್ಗೆ ಹೇಳುತ್ತಾ ರೋಮನ್ ಸಾಮ್ರಾಜ್ಯದಲ್ಲೆಲ್ಲಾ ಅನೇಕ ಸಲ ಪ್ರಯಾಣಿಸಿದನು.

### ತೀತನ ಪುಸ್ತಕದಲ್ಲಿ ಯಾವುದರ ಬಗ್ಗೆ ತಿಳಿಸಿದೆ?

ಪೌಲನು ಈ ಪತ್ರಿಕೆಯನ್ನು ತನ್ನ ಜೊತೆಗೆಲಸದವನಾದ ತೀತನಿಗೆ ಬರೆದನು, ತೀತನು ಕ್ರೇತಾ ದ್ವೀಪದಲ್ಲಿದ್ದ ಸಭೆಗಳ ನಾಯಕನಾಗಿ ಸೇವೆ ಸಲ್ಲಿಸುತ್ತಿದ್ದನು. ಸಭೆಯ ನಾಯಕರನ್ನು ಹೇಗೆ ಆಯ್ಕೆಮಾಡಬೇಕು ಎಂಬುದರ ಕುರಿತು ಪೌಲನು ಸೂಚನೆಗಳನ್ನು ನೀಡಿದನು. ವಿಶ್ವಾಸಿಗಳು ಪರಸ್ಪರ ಹೇಗೆ ನಡೆದುಕೊಳ್ಳಬೇಕು ಎಂಬುದರ ಬಗ್ಗೆಯೂ ಸಹ ಪೌಲನು ವಿವರಿಸಿದನು. ದೇವರಿಗೆ ಮೆಚ್ಚುಗೆಯಾಗುವಂತೆ ಜೀವನ ನಡೆಸಬೇಕು ಎಂದು ಅವನು ಅವರೆಲ್ಲರನ್ನು ಪ್ರೋತ್ಸಾಹಿಸಿದನು.

### ಈ ಪುಸ್ತಕದ ಶೀರ್ಷಿಕೆಯನ್ನು ಹೇಗೆ ಭಾಷಾಂತರಿಸಬೇಕು?

ಭಾಷಾಂತರಕಾರರು ಈ ಪುಸ್ತಕದ ಶೀರ್ಷಿಕೆಯನ್ನು ಸಾಂಪ್ರದಾಯಿಕವಾಗಿ ಹೇಳುವಂತೆ **ತೀತ** ಎಂದು ಭಾಷಾಂತರಿಸಬಹುದು. ಅಥವಾ **ಪೌಲನು ತೀತನಿಗೆ ಬರೆದ ಪತ್ರ** ಅಥವಾ **ತೀತನಿಗೆ ಒಂದು ಪತ್ರ** ಎಂದು ಸ್ಪಷ್ಟವಾದ ಶೀರ್ಷಿಕೆಯನ್ನು ಆರಿಸಿಕೊಳ್ಳಬಹುದು. (ನೋಡಿರಿ: \[\[rc://kn/ta/man/translate/translate-names\]\])

## ಭಾಗ2: ಪ್ರಮುಖವಾದ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಿಕಲ್ಪನೆಗಳು

### ಸಭೆಯಲ್ಲಿ ಜನರು ಯಾವ ವಿಭಿನ್ನ ಕರ್ತವ್ಯಗಳಲ್ಲಿ/ಪಾತ್ರಗಳಲ್ಲಿ ಸೇವೆ ಮಾಡಬಹುದು?

ತೀತನ ಪುಸ್ತಕದಲ್ಲಿ ಸಭೆಯಲ್ಲಿ ಸ್ತ್ರೀಯು ಅಥವಾ ವಿವಾಹ ವಿಚ್ಛೇದನ ಪಡೆದ ಪುರುಷನು ನಾಯಕ ಸ್ಥಾನದಲ್ಲಿ ಸೇವೆ ಮಾಡಬೇಕೋ ಬೇಡವೋ ಎಂಬುದರ ಬಗ್ಗೆ ಅನೇಕ ಬೋಧನೆಗಳಿವೆ. ವಿದ್ವಾಂಸರು ಇಂತಹ ಬೋಧನೆಗಳ ಅರ್ಥದ ಬಗ್ಗೆ ಭಿನ್ನಾಭಿಪ್ರಾಯವುಳ್ಳವರಾಗಿದ್ದಾರೆ. ಭಾಷಾಂತರ ಮಾಡುವ ಮೊದಲು ಇಂತಹ ವಿಚಾರಗಳ ಬಗ್ಗೆ ಅಧ್ಯಯನ ಮಾಡುವುದು ಉತ್ತಮ.

## ಭಾಗ 3: ಭಾಷಾಂತರದ ಪ್ರಮುಖ ಸಮಸ್ಯೆಗಳು

### ಏಕವಚನ ಮತ್ತು ಬಹುವಚನ **ನೀನು**

ಈ ಪುಸ್ತಕದಲ್ಲಿ **ನಾನು** ಎಂಬ ಪದ ಪೌಲನನ್ನು ಸೂಚಿಸುತ್ತದೆ. **ನೀನು** ಎಂಬ ಪದ ಏಕವಚನವಾಗಿದ್ದು ತೀತನನ್ನು ಸೂಚಿಸುತ್ತದೆ. ಇದು 3:15 ಅದಕ್ಕೆ ಹೊರತಾದದ್ದು ಆಗಿದೆ. (ನೋಡಿರಿ: \[\[rc://en/ta/man/translate/figs-exclusive\]\] ಮತ್ತು \[\[rc://kn/ta/man/translate/figs-you\]\])

### **ನಮ್ಮ ರಕ್ಷಕನಾದ ದೇವರು** ಎಂಬುದರ ಅರ್ಥವೇನು?

ಈ ಪತ್ರಿಕೆಯಲ್ಲಿ ಇದೊಂದು ಸಾಮಾನ್ಯ ಪದಗುಚ್ಛವಾಗಿದೆ. ದೇವರು ತನ್ನ ವಿರುದ್ಧ ಪಾಪಮಾಡಿದವರನ್ನು ಕ್ರಿಸ್ತನಲ್ಲಿ ಹೇಗೆ ಕ್ಷಮಿಸಿದನು ಎಂಬುದರ ಬಗ್ಗೆ ಮತ್ತು ದೇವರು ಎಲ್ಲ ಜನರಿಗೆ ನ್ಯಾಯತೀರ್ಪುಮಾಡುವಾಗ ಶಿಕ್ಷೆಯಿಂದ ಇವರನ್ನು ಕ್ಷಮಿಸುವುದರ ಮೂಲಕ ಹೇಗೆ ರಕ್ಷಿಸಿದ ಎಂಬುದನ್ನು ಓದುಗರನ್ನು ಅಲೋಚಿಸುವಂತೆ ಮಾಡಲು ಪೌಲನು ಇದರ ಮೂಲಕ ಉದ್ದೇಶಿಸಿದನು. ಇದೇ ರೀತಿಯ ಇನ್ನೊಂದು ಪದಗುಚ್ಛ ಈ ಪ್ರತಿಕೆಯಲ್ಲಿ ಬರುತ್ತದೆ, ಅದು **ನಮ್ಮ ಮಹೋನ್ನತ ದೇವರು ಮತ್ತು ರಕ್ಷಕನಾದ ಯೇಸು ಕ್ರಿಸ್ತನು** ಎಂಬುದು.
3TIT1introc7me0# ತೀತ 01 ಸಾಮಾನ್ಯ ಟಿಪ್ಪಣಿಗಳು

## ರಚನೆ ಮತ್ತು ನಮೂನೆ

ಪೌಲನು ಈ ಪತ್ರಿಕೆಯನ್ನು 1-4 ವಾಕ್ಯಗಳಲ್ಲಿ ಸಾಂಪ್ರಾದಾಯಿಕವಾಗಿ ಪರಿಚಯಿಸುತ್ತಾನೆ. ಪುರಾತನಕಾಲದ ಪೂರ್ವದೇಶದಲ್ಲಿ ಸಾಮಾನ್ಯವಾಗಿ ಲೇಖಕರು ಪತ್ರಗಳನ್ನು ಈ ರೀತಿ ಪ್ರಾರಂಭಿಸುತ್ತಿದ್ದರು

ಸಭೆಯ ಹಿರಿಯರಾಗಿ ಸೇವೆ ಸಲ್ಲಿಸಲು ಹೊಂದಿರಬೇಕಾದ ಅನೇಕ ಗುಣಲಕ್ಷಣಗಳನ್ನು ಪೌಲನು 6-9 ವಾಕ್ಯಗಳಲ್ಲಿ ಪಟ್ಟಿಮಾಡಿ ತಿಳಿಸುತ್ತಾನೆ. (ನೋಡಿರಿ: rc://kn/ta/man/translate/figs-abstractnouns) ಪೌಲನು ಇದೇ ರೀತಿಯ ಪಟ್ಟಿಯನ್ನು 1 ತಿಮೊಥೆ 3 ರಲ್ಲಿ ನೀಡುತ್ತಾನೆ.

## ಈ ಅಧ್ಯಾಯದಲ್ಲಿನ ವಿಶೇಷ ಪರಿಕಲ್ಪನೆಗಳು

### ಹಿರಿಯರು

ಸಭೆಯು ಸಭೆಯ ನಾಯಕರಿಗಾಗಿ ವಿಭಿನ್ನವಾದ ಶಿರೋನಾಮಗಳನ್ನು ಉಪಯೋಗಿಸಿದೆ. ಅಧ್ಯಕ್ಷ/ಮೇಲ್ವಿಚಾರಕ, ಹಿರಿಯ, ಸಭಾಪಾಲಕ ಮತ್ತು ಸಭಾಧ್ಯಕ್ಷ/ಬಿಷಪ್‌ ಎಂಬ ಅನೇಕ ಶಿರೋನಾಮಗಳು ಅದರಲ್ಲಿ ಒಳಗೊಂಡಿವೆ.

## ಈ ಅಧ್ಯಾಯದಲ್ಲಿನ ಇತರ ಭಾಷಾಂತರ ಕ್ಲಿಷ್ಟತೆಗಳು

### ಷುಡ್/ಬೇಕು, ಮೇ/ಬಹುಶಃ, ಮಸ್ಟ್/ಮಾಡಲೇ ಬೇಕು

ಯು.ಎಲ್.ಟಿ.ಯಲ್ಲಿ ಅಗತ್ಯಕಾರ್ಯಗಳ ಅಥವಾ ಅನಿವಾರ್ಯತೆಗಳ ಬಗ್ಗೆ ಹೇಳಲು ವಿವಿಧ ಪದಗಳನ್ನು ಬಳಸಲಾಗಿದೆ. ಈ ಕ್ರಿಯಾಪದಗಳಲ್ಲಿ ವಿವಿಧ ಹಂತದ ಬಲಪ್ರಯೋಗ ಇದೆ. ಕೆಲವು ಸೂಕ್ಷ್ಮವಾದ ವಿಭಿನ್ನತೆಗಳನ್ನು ಭಾಷಾಂತರಿಸಲು ಕಷ್ಟವಾಗಬಹುದು. ಯು.ಎಸ್.ಟಿ.ಯಲ್ಲಿ ಈ ಕ್ರಿಯಾಪದಗಳನ್ನು ಸಾಮಾನ್ಯ ರೀತಿಯಲ್ಲಿ ಭಾಷಾಂತರಿಸಬಹುದು.
4TIT11rtc9ಫಿಗ್ಸ್-ಭಾವವಾಚಕ ನಾಮಪದಗಳುκατὰ πίστιν1for the faith of**ನಂಬಿಕೆ** ಎಂಬುದು ಭಾವವಾಚಕ ನಾಮಪದವಾಗಿದೆ. ಇವುಗಳನ್ನು ವ್ಯಕ್ತಪಡಿಸಲು ಇತರ ರೀತಿಗಳಿಗಾಗಿ ಯುಎಸ್‌ಟಿಯನ್ನು ನೋಡಿರಿ. ಜನರು ದೇವರನ್ನು ಮೆಚ್ಚಿಸುವ ರೀತಿಯಲ್ಲಿ ಜೀವಿಸಲಾಗುವಂತೆ ದೇವರ ಮತ್ತು ಕ್ರಿಸ್ತನ ಬಗ್ಗೆ ನಿಜವಾದ ಸಂದೇಶವನ್ನು ಜನರು ತಿಳಿದುಕೊಳ್ಳಬೇಕೆಂದು ಪೌಲನು ಬಯಸುತ್ತಾನೆ.
5TIT12r2gjπρὸ χρόνων αἰωνίων1before all the ages of time**ಅನಾದಿ ಕಾಲಗಳಿಗಿಂತ ಮುಂಚೆ**
6TIT13b22hκαιροῖς ἰδίοις1At the right timeಸೂಕ್ತವಾದ ಸಮಯದಲ್ಲಿ
7TIT13abc9ἐν κηρύγματι1by the proclamation“ಸಂದೇಶದ ಸಾರೋಣದ ಮೂಲಕವಾಗಿ”
8TIT13m41uಫಿಗ್ಸ್-ಕರ್ತರಿ/ಕರ್ಮಣಿ ಪ್ರಯೋಗὃ ἐπιστεύθην ἐγὼ1he trusted me to deliverಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು. ಪರ್ಯಾಯ ಭಾಷಾಂತರ: “ಆತನು ನನಗೆ ಒಪ್ಪಿಸಿಕೊಟ್ಟ” ಅಥವಾ “ಆತನು ನನಗೆ ಬೋಧಿಸುವ ಜವಾಬ್ದಾರಿಯನ್ನು ಕೊಟ್ಟನು” (ನೋಡಿರಿ: \[\[rc://kn/ta/man/translate/figs-activepassive\]\])
9TIT13dpn4τοῦ Σωτῆρος ἡμῶν Θεοῦ1God our Saviorನಮ್ಮನ್ನು ರಕ್ಷಿಸುವ ದೇವರ
10TIT13xy18ಫಿಗ್ಸ್-ಅಂತರ್ಗತἡμῶν1ourಇದು ಪೌಲ, ತೀತ ಮತ್ತು ಎಲ್ಲಾ ಕ್ರೈಸ್ತರು ಒಳಗೊಂಡಿದೆ. (ನೋಡಿರಿ: [[rc://kn/ta/man/translate/figs-inclusive]])
11TIT14gu55ಫಿಗ್ಸ್-ರೂಪಕγνησίῳ τέκνῳ1a true sonತೀತನು ಪೌಲನ ಜೈವಿಕ **ಮಗನು** ಅಲ್ಲದಿದ್ದರೂ ಇಬ್ಬರೂ ಕ್ರಿಸ್ತನಲ್ಲಿ ಹುದುವಾದ ನಂಬಿಕೆಯ ಭಾಗಿಗಳಾಗಿದ್ದಾರೆ. ಪೌಲನು ನಂಬಿಕೆಯ ಮೂಲಕವಿರುವ ಕ್ರಿಸ್ತನೊಂದಿಗಿನ ಸಂಬಂಧವನ್ನು ಜೈವಿಕ ಸಂಬಂಧಕ್ಕಿಂತ ಹೆಚ್ಚು ಪ್ರಾಮುಖ್ಯವೆಂದು ಪರಿಗಣಿಸುತ್ತಾನೆ. ಆದ್ದರಿಂದ, ಅವರಿಬ್ಬರ ವಯಸ್ಸು ತಂದೆ ಮತ್ತು ಮಗನ ವಯಸ್ಸಿನಂತೆ ಇದ್ದರಿಂದ ಮತ್ತು ಕ್ರಿಸ್ತನಲ್ಲಿನ ನಂಬಿಕೆಯ ಭಾಗಿಗಳಾಗಿದ್ದರಿಂದ, ಪೌಲನು ತೀತನನ್ನು ತನ್ನ ಸ್ವಂತ ಮಗನೆಂದು ಪರಿಗಣಿಸುತ್ತಾನೆ. ಪೌಲನು ತೀತನನ್ನು ಕ್ರಿಸ್ತನಲ್ಲಿನ ನಂಬಿಕೆಗೆ ನಡಿಸಿದಿರಬಹುದು, ಆದ್ದರಿಂದ ಈ ಆತ್ಮಿಕ ಅರ್ಥದಲ್ಲಿ ತೀತನು ಮಗನಂತೆ ಇದ್ದಾನೆ. ಪರ್ಯಾಯ ಭಾಷಾಂತರ: “ನೀನು ನನಗೆ ಮಗನಂತೆ ಇರುವಿ” (ನೋಡಿರಿ: \[\[rc://kn/ta/man/translate/figs-metaphor\]\])
12TIT14s3yrΧριστοῦ Ἰησοῦ τοῦ Σωτῆρος ἡμῶν1Christ Jesus our Saviorನಮ್ಮ ರಕ್ಷಕನಾದ ಕ್ರಿಸ್ತ ಯೇಸು
13TIT14xy17ಫಿಗ್ಸ್-ಅಂತರ್ಗತἡμῶν1ourಇದು ಪೌಲ, ತೀತ ಮತ್ತು ಎಲ್ಲಾ ಕ್ರೈಸ್ತರು ಒಳಗೊಂಡಿದೆ. (ನೋಡಿರಿ: [[rc://kn/ta/man/translate/figs-inclusive]])
14TIT15ew8h​ವ್ಯಾಕರಣ-ಸಂಯೋಜಕ-ತಾರ್ಕಿಕ-ಗುರಿτούτου χάριν1For this purpose**ಈ ಉದ್ದೇಶದಿಂದ** ಎಂಬ ಸಂಯೋಜಕ ಪದಗುಚ್ಛವು ಪೌಲನು ಕ್ರೇತದ್ವೀಪದಲ್ಲಿ ತೀತನನ್ನು ಬಿಟ್ಟುಬಂದದ್ದರ ಗುರಿಯನ್ನು (ಸಭೆಯಲ್ಲಿ ಹಿರಿಯರನ್ನು ನೇಮಿಸಲು) ಪರಿಚಯಿಸುತ್ತದೆ. ಪರ್ಯಾಯ ಭಾಷಾಂತರ: “ಇದುವೇ ಕಾರಣ” (See: \[\[rc://kn/ta/man/translate/grammar-connect-logic-goal\]\])
15TIT15lh9bἀπέλιπόν σε ἐν Κρήτῃ1I left you in Creteನೀನು ಕ್ರೇತ ದ್ವೀಪದಲ್ಲೇ ಇರಬೇಕೆಂದು ನಾನು ನಿನಗೆ ಹೇಳಿದೆನು
16TIT15ga62ἵνα τὰ λείποντα ἐπιδιορθώσῃ1that you might set in order things not yet completeಆದುದರಿಂದ ನೀನು ಕ್ರಮಪಡಿಸಬೇಕಾದ ಕಾರ್ಯಗಳನ್ನು ಮಾಡಿ ಮುಗಿಸಬಹುದು
17TIT15p56wπρεσβυτέρους1eldersಆದಿ ಕ್ರೈಸ್ತ ಸಭೆಯಲ್ಲಿ ಕ್ರೈಸ್ತ ಹಿರಿಯರು ವಿಶ್ವಾಸಿಗಳ ಸಂಘದವರಿಗೆ ಆತ್ಮೀಕ ನಾಯಕತ್ವವನ್ನು ನೀಡುತ್ತಿದ್ದರು. ಈ ಪದವು ನಂಬಿಕೆಯಲ್ಲಿ ಪರಿಪಕ್ವರಾಗಿರುವ ಜನರನ್ನು ಸೂಚಿಸುತ್ತದೆ.
18TIT16wja40Connecting Statement:ಕ್ರೇತ ದ್ವೀಪದಲ್ಲಿನ ಎಲ್ಲಾ ಪಟ್ಟಣಗಳಲ್ಲಿ ದೀಕ್ಷೆಕೊಟ್ಟು ಹಿರಿಯರನ್ನು ನೇಮಿಸಬೇಕೆಂದು ಪೌಲನು ತೀತನಿಗೆ ಹೇಳಿದನು. ಇದರೊಂದಿಗೆ ಹಿರಿಯರಿಗೆ ಇರಬೇಕಾದ ಅರ್ಹತೆಗಳ ಬಗ್ಗೆ ತಿಳಿಸುತ್ತಾನೆ.
19TIT16jen8εἴ τίς ἐστιν ἀνέγκλητος ... ἀνήρ1An elder must be without blame, the husbandಇದು ಹಿರಿಯರಿಗೆ ಇರಬೇಕಾದ ಸ್ವಭಾವವನ್ನು ವಿವರಿಸುವುದರ ಪ್ರಾರಂಭವಾಗಿದೆ. ತೀತನನ್ನು ಈ ಕೆಳಗೆ ಕೊಟ್ಟಿರುವ ವಿವರಣೆಗೆ ಯೋಗ್ಯರಾಗಿರುವ ಪುರುಷರನ್ನು ಆರಿಸಿಕೊಳ್ಳಬೇಕಾಗಿತ್ತು. ಪರ್ಯಾಯ ಭಾಷಾಂತರ: “ದೋಷರಹಿತರಾಗಿರುವ ಜನರನ್ನು ಆರಿಸಿಕೊಳ್ಳಬೇಕು” ಅಥವಾ “ಹಿರಿಯನು ದೋಷರಹಿತನಾಗಿರಬೇಕು.” **ದೋಷರಹಿತನು** ಆಗಿರುವುದು ಎಂದರೆ ಕೆಟ್ಟ ಕಾರ್ಯಗಳನ್ನು ಮಾಡದ ವ್ಯಕ್ತಿ ಎಂಬ ಖ್ಯಾತಿಯುಳ್ಳವನು ಆಗಿರಬೇಕು. ಪರ್ಯಾಯ ಭಾಷಾಂತರ: “ಹಿರಿಯನು ನಿಂದಾರಹಿತನಾಗಿರಬೇಕು” ಅಥವಾ “ಹಿರಿಯನು ಅಪಖ್ಯಾತಿ ಹೊಂದಿದವನಾಗಿರಬಾರದು.”
20TIT16ab70ಫಿಗ್ಸ್-ದ್ವಿ ನಕರಾತ್ಮಕἀνέγκλητος1blameless**ದೋಷರಹಿತನು** ಆಗಿರುವುದು ಎಂದರೆ ಕೆಟ್ಟ ಕಾರ್ಯಗಳನ್ನು ಮಾಡದ ವ್ಯಕ್ತಿ ಎಂಬ ಖ್ಯಾತಿಯುಳ್ಳವನು ಆಗಿರಬೇಕು. ಪರ್ಯಾಯ ಭಾಷಾಂತರ: “ನಿಂದಾರಹಿತನು” ಇದನ್ನು ಸಕಾರಾತ್ಮಕವಾಗಿಯೂ ಸಹ ಹೇಳಬಹುದು: “ಒಳ್ಳೆಯ ಖ್ಯಾತಿ ಪಡೆದಿರುವ ವ್ಯಕ್ತಿ” (ನೋಡಿರಿ: [[rc://kn/ta/man/translate/figs-doublenegatives]])
21TIT16wd6qτέκνα ... πιστά1faithful childrenಸಂಭಾವ್ಯ ಅರ್ಥಗಳು 1) ಯೇಸುವಿನಲ್ಲಿ ನಂಬಿಕೆ ಇಟ್ಟಿರುವ ಮಕ್ಕಳು ಅಥವಾ 2) ನಂಬಿಕೆಗೆ ಅರ್ಹರಾದ ಮಕ್ಕಳು
22TIT17g2zfಫಿಗ್ಸ್-ರೂಪಕΘεοῦ οἰκονόμον1God's household managerಪೌಲನು ಸಭೆಯ ಕುರಿತು ದೇವರ ಮನೆಯೋ ಎಂಬಂತೆ ಮಾತನಾಡುತ್ತಾನೆ, ಮತ್ತು ಅಧ್ಯಕ್ಷನನ್ನು/ಮೇಲ್ವಿಚಾರಕನನ್ನು ಕುರಿತು ಆ ಮನೆಯನ್ನು ನಿರ್ವಹಿಸುವ ಹೊಣೆಹೊತ್ತ ಸೇವಕನೋ ಎಂಬಂತೆ ಮಾತನಾಡುತ್ತಾನೆ. (ನೋಡಿರಿ: \[\[rc://kn/ta/man/translate/figs-metaphor\]\])
23TIT18i549​ವ್ಯಾಕರಣ-ಸಂಯೋಜಕ-ತಾರ್ಕಿಕ-ಗುರಿἀλλὰ1Instead**ಬದಲಾಗಿ** ಎಂಬ ಸಂಯೋಜಕ ಪದವು ಹಿರಿಯನು ಹೇಗಿರಬಾರದೆಂಬ ವಿಷಯಗಳ (ಪೌಲನು ಈಗಾಗಲೇ ಹೇಳಿದ್ದಾನೆ), ಮತ್ತು ಹಿರಿಯನು ಹೇಗಿರಬೇಕೆಂಬ ವಿಷಯಗಳ (ಪೌಲನು ಹೇಳಲಿರುವ) ನಡುವಿನ ವ್ಯತ್ಯಾಸವನ್ನು ಪರಿಚಯಿಸುತ್ತದೆ. (ನೋಡಿರಿ: \[\[rc://kn/ta/man/translate/grammar-connect-logic-contrast\]\])
24TIT18vkq1φιλάγαθον1a friend of what is goodಒಳ್ಳೆಯದನ್ನು ಮಾಡಲು ಪ್ರೀತಿಸುವ ವ್ಯಕ್ತಿ
25TIT18xy11ಫಿಗ್ಸ್-ದ್ವಿರುಕ್ತಿσώφρονα…ἐγκρατῆ1sensible…self-controlledಈ ಎರಡು ಪದಗಳು ಬಹುತೇಕ ಒಂದೇ ಅರ್ಥವನ್ನು ಕೊಡುತ್ತವೆ ಮತ್ತು ಉದ್ದಿಷ್ಟ ಭಾಷೆಯಲ್ಲಿ ಎರಡು ರೀತಿಯ ಪದಗಳಿಲ್ಲದಿದ್ದರೆ ಒಂದೇ ಪದವಾಗಿ ಅನುವಾದಿಸಬಹುದು. (ನೋಡಿರಿ: [[rc://kn/ta/man/translate/figs-doublet]])
26TIT18xy12ಫಿಗ್ಸ್-ದ್ವಿರುಕ್ತಿδίκαιον, ὅσιον1righteous, holyಈ ಎರಡು ಪದಗಳು ಬಹುತೇಕ ಒಂದೇ ಅರ್ಥವನ್ನು ಕೊಡುತ್ತವೆ ಮತ್ತು ಉದ್ದಿಷ್ಟ ಭಾಷೆಯಲ್ಲಿ ಎರಡು ರೀತಿಯ ಪದಗಳಿಲ್ಲದಿದ್ದರೆ ಒಂದೇ ಪದವಾಗಿ ಅನುವಾದಿಸಬಹುದು. (ನೋಡಿರಿ: [[rc://kn/ta/man/translate/figs-doublet]])
27TIT19xy10κατὰ τὴν διδαχὴν1that is in accordance with the teaching“ನಾವು ಅವನಿಗೆ ಬೋಧಿಸಿದ ವಿಷಯಗಳಿಗೆ ಅನುಸಾರವಾಗಿರುವ”
28TIT19pzi1τῇ διδασκαλίᾳ τῇ ὑγιαινούσῃ1good teaching**ಸ್ವಸ್ಥ** ಎಂದು ಭಾಷಾಂತರಿಸಲ್ಪಟ್ಟಿರುವ ಗ್ರೀಕ್ ಪದವು ಸಾಮಾನ್ಯವಾಗಿ ದೈಹಿಕ ಆರೋಗ್ಯದ ಬಗ್ಗೆ ಸೂಚಿಸುತ್ತದೆ. ಪೌಲನು ಈ ಬೋಧನೆಯನ್ನು ನಂಬುವವರಿಗೆ ಅದು ಆತ್ಮಿಕವಾಗಿ ಅನಾರೋಗ್ಯವನ್ನು ಉಂಟುಮಾಡುವುದಕ್ಕೆ ಬದಲಾಗಿ ಆತ್ಮಿಕವಾಗಿ ಆರೋಗ್ಯವನ್ನು ಉಂಟುಮಾಡುತ್ತದೆಯೋ ಎಂಬಂತೆ ಮಾತನಾಡುತ್ತಾನೆ.
29TIT19abcjವ್ಯಾಕರಣ-ಸಂಯೋಜಕ-ತಾರ್ಕಿಕ-ಗುರಿἵνα1so that**ಆದ್ದರಿಂದ** ಎಂಬ ಸಂಯೋಜಿಸುವ ಪದಗಳು ಕಾರಣ-ಫಲಿತಾಂಶದ ಸಂಬಂಧಾರ್ಥಕವನ್ನು ಸೂಚಿಸುತ್ತದೆ. ಕಾರಣವೇನಂದರೆ (ಹಿರಿಯರು ಇತರರಿಗೆ ಸಹಾಯ ಮಾಡಬಹುದು) ಹಿರಿಯರು ವಿಶ್ವಾಸಯೋಗ್ಯವಾದ ಸಂದೇಶವನ್ನು ಬಿಗಿಯಾಗಿ ಹಿಡಿದಿಟ್ಟುಕೊಳ್ಳಬಹುದು, ಮತ್ತು ಇದರ ಫಲಿತಾಂಶವೇನಂದರೆ ಹಿರಿಯನು ಇತರರನ್ನು ಪ್ರೋತ್ಸಾಹಿಸಲು ಮತ್ತು ಅವನನ್ನು ವಿರೋಧಿಸುವವರನ್ನು ಗದರಿಸಲು ಸಾಧ್ಯವಾಗುತ್ತದೆ. ನಿಮ್ಮ ಭಾಷೆಯಲ್ಲಿ ಇದು ಹೆಚ್ಚು ಸ್ಪಷ್ಟವಾಗಿದ್ದರೆ, ನೀವು ಈ ನುಡಿಗಟ್ಟುಗಳ ಕ್ರಮವನ್ನು ಹಿಂದುಮುಂದಾಗಿಸಬಹುದು, ಅವುಗಳನ್ನು “ಏಕೆಂದರೆ” ಎಂಬುದರೊಂದಿಗೆ ಸಂಯೋಜಿಸಬಹುದು. (ನೋಡಿರಿ: [[rc://kn/ta/man/translate/grammar-connect-logic-goal]])
30TIT110xsq90Connecting Statement:ದೇವರ ವಾಕ್ಯವನ್ನು ವಿರೋಧಿಸುವವರ ನಿಮಿತ್ತವಾಗಿ ಪೌಲನು ತೀತನಿಗೆ ದೇವರ ವಾಕ್ಯವನ್ನು ಬೋಧಿಸಲು ಅನೇಕ ಕಾರಣಗಳನ್ನು ನೀಡುತ್ತಾನೆ ಮತ್ತು ಸುಳ್ಳು ಬೋಧಕರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ತಿಳಿಸುತ್ತಾನೆ.
31TIT110w9kkἀνυπότακτοι1rebellious peopleಸುವಾರ್ತಾ ಸಂದೇಶಕ್ಕೆ ವಿಧೇಯರಾಗದ ತಿರುಗಿಬೀಳುವಂಥ ಜನರಿದ್ದಾರೆ. ಇದಲ್ಲಿರುವ **ಟೊಳ್ಳು** ಎಂಬುದು ನಿಷ್ಪ್ರಯೋಜಕತನದ ಒಂದು ರೂಪಕವಾಗಿದೆ, ಮತ್ತು **ಟೊಳ್ಳು ಮಾತಿನವರು** ನಿಷ್ಪ್ರಯೋಜಕವಾದ ಅಥವಾ ಮೂರ್ಖತನದ ವಿಷಯಗಳನ್ನು ಹೇಳುವಂಥ ಜನರಾಗಿದ್ದಾರೆ. ಪರ್ಯಾಯ ಭಾಷಾಂತರ: “ವಿಧೇಯರಾಗಲು ನಿರಾಕರಿಸುವಂಥ ಮತ್ತು ನಿಷ್ಪ್ರಯೋಜಕವಾದ ವಿಷಯಗಳನ್ನು ಹೇಳುವಂಥ ಜನರು” (ನೋಡಿರಿ: \[\[rc://kn/ta/man/translate/figs-metaphor\]\])
32TIT110ga6nματαιολόγοι, καὶ φρεναπάται1empty talkers and deceiversಪೌಲನು ಬೋಧಿಸುವ ಸತ್ಯ ಸುವಾರ್ತೆಯನ್ನು ಬಿಟ್ಟು ಬೇರೆ ಯಾವುದನ್ನಾದರೂ ನಂಬುವಂತೆ ಜನರನ್ನು ಮನವೊಲಿಸಲು ಸಕ್ರಿಯವಾಗಿ ಪ್ರಯತ್ನಿಸುತ್ತಿರುವ ಜನರ ಬಗ್ಗೆ ಈ ಪದಗುಚ್ಛವು ವಿವರಿಸುತ್ತದೆ. ಪರ್ಯಾಯ ಭಾಷಾಂತರ: “ಸತ್ಯವಲ್ಲದ ವಿಷಯಗಳನ್ನು ನಂಬುವಂತೆ ಇತರರನ್ನು ಮನವೊಲಿಸುವ ಜನರು”
33TIT110abcdಫಿಗ್ಸ್-ದ್ವಿಪದಾಲಂಕಾರματαιολόγοι, καὶ φρεναπάται1empty talkers and deceivers**ಟೊಳ್ಳು ಮಾತಿನವರು** ಮತ್ತು **ವಂಚಕರು** ಎಂಬ ಇವೆರಡೂ ಪದಗಳು ಒಬ್ಬರನ್ನೇ ಸೂಚಿಸುತ್ತವೆ. ಅವರು ಸುಳ್ಳಾದ, ನಿಷ್ಪ್ರಯೋಜಕವಾದ ವಿಷಯಗಳನ್ನು ಬೋಧಿಸುತ್ತಾರೆ ಮತ್ತು ಜನರು ತಮ್ಮನ್ನು ನಂಬಬೇಕೆಂದು ಅವರು ಬಯಸುತ್ತಾರೆ. (ನೋಡಿರಿ: [[rc://kn/ta/man/translate/figs-hendiadys]])
34TIT110pu74ಫಿಗ್ಸ್-ಲಾಕ್ಷಣಿಕ ಪ್ರಯೋಗοἱ ἐκ τῆς περιτομῆς1those of the circumcisionಇದು ಕ್ರಿಸ್ತನನ್ನು ಹಿಂಬಾಲಿಸಲು ಪುರುಷರು ಸುನ್ನತಿ ಮಾಡಿಸಿಕೊಳ್ಳಬೇಕೆಂದು ಬೋಧಿಸುವಂಥ ಯೆಹೂದ್ಯ ಕ್ರೈಸ್ತರನ್ನು ಸೂಚಿಸುತ್ತದೆ. ಇದು ತಪ್ಪಾದ ಬೋಧನೆಯಾಗಿದೆ. (ನೋಡಿರಿ: \[\[rc://kn/ta/man/translate/figs-metonymy\]\])
35TIT111tw4eἃ μὴ δεῖ1what they should not teachಕ್ರಿಸ್ತನ ಮತ್ತು ಧರ್ಮಶಾಸ್ತ್ರದ ಕುರಿತು ಈ ರೀತಿ ಬೋಧಿಸುವುದು ಸರಿಯಲ್ಲ ಏಕೆಂದರೆ ಅವು ನಿಜವಾದವುಗಳಲ್ಲ.
36TIT111at7cαἰσχροῦ κέρδους χάριν1for shameful profitಇದು ಅಗೌರವವಾದ ಕಾರ್ಯಗಳನ್ನು ಮಾಡಿ ಲಾಭ ಪಡೆಯುತ್ತಿರುವ ಜನರ ಕುರಿತಾಗಿ ಮಾತನಾಡುತ್ತದೆ.
37TIT111aqi5ὅλους οἴκους ἀνατρέπουσιν1are upsetting whole families**ಅವರು ಇಡೀ ಮನೆಯವರನ್ನು ಹಾಳು ಮಾಡುತ್ತಿದ್ದಾರೆ**. ಅವರು ಕುಟುಂಬಗಳನ್ನು ಸತ್ಯದಿಂದ ದೂರಮಾಡುತ್ತಿದ್ದಾರೆ ಮತ್ತು ಅವರ ನಂಬಿಕೆಯನ್ನು ಹಾಳುಮಾಡುತ್ತಿದ್ದಾರೆ ಎಂಬುದು ಸಮಸ್ಯೆಯಾಗಿತ್ತು.
38TIT112tr1j​ಫಿಗ್ಸ್-ಭಾವವಾಚಕ ನಾಮಪದಗಳುτις ἐξ αὐτῶν ἴδιος αὐτῶν προφήτης1One of their own prophetsಸ್ವತಃ ಕ್ರೇತ ದ್ವೀಪದ ಜನರೇ ಪ್ರವಾದಿಯೆಂದು ಪರಿಗಣಿಸಿರುವ
39TIT112h3jbಫಿಗ್ಸ್-ರೂಪಕκακὰ θηρία1evil beastsಈ ರೂಪಕವು ಕ್ರೇತ ದ್ವೀಪದ ಜನರನ್ನು ಅಪಾಯಕಾರಿಯಾದ ಕಾಡು ಮೃಗಗಳಿಗೆ ಹೋಲಿಸುತ್ತದೆ. ಪರ್ಯಾಯ ಭಾಷಾಂತರ: “ಕಾಡು ಪ್ರಾಣಿಗಳಂತೆ ಅಪಾಯಕಾರಿಯಾದವರು” (ನೋಡಿರಿ: \[\[rc://kn/ta/man/translate/figs-metaphor\]\])
40TIT112xyz1ಫಿಗ್ಸ್-ಉಪಲಕ್ಷಣಾಲಂಕಾರγαστέρες ἀργαί1lazy belliesಯಾವಾಗಲೂ ತಿನ್ನುವಂಥ ವ್ಯಕ್ತಿಯನ್ನು ಸೂಚಿಸಲು ಆಹಾರವನ್ನು ಶೇಖರಿಸಿಡುವಂಥ ದೇಹದ ಅಂಗವನ್ನು ಬಳಸಲಾಗಿದೆ. ಪರ್ಯಾಯ ಭಾಷಾಂತರ: “ಸೋಮಾರಿಯಾದ ಹೊಟ್ಟೆಬಾಕ” (ನೋಡಿರಿ: [[rc://kn/ta/man/translate/figs-synecdoche]])
41TIT113xyz2ಫಿಗ್ಸ್-ಭಾವವಾಚಕ ನಾಮಪದಗಳುἐν τῇ πίστει1in the faithಇದರಲ್ಲಿ **ನಂಬಿಕೆ** ಎಂಬ ಭಾವವಾಚಕ ನಾಮಪದವು ಜನರು ದೇವರ ಬಗ್ಗೆ ನಂಬುವಂಥ ವಿಷಯಗಳನ್ನು ಪ್ರತಿನಿಧಿಸುತ್ತದೆ. ಪರ್ಯಾಯ ಭಾಷಾಂತರ: “ಅವರು ದೇವರ ಬಗ್ಗೆ ನಂಬುವಂಥದ್ದರಲ್ಲಿ” (ನೋಡಿರಿ: [[rc://kn/ta/man/translate/figs-abstractnouns]])
42TIT113abckವ್ಯಾಕರಣ-ಸಂಯೋಜಕ-ತಾರ್ಕಿಕ-ಪರಿಣಾಮδι’ ἣν αἰτίαν1For this reason**ಈ ಕಾರಣದಿಂದ** ಎಂಬ ಸಂಯೋಜಕ ಪದಗಳು ಕಾರಣ-ಫಲಿತಾಂಶದ ಸಂಬಂಧಾರ್ಥಕವನ್ನು ಸೂಚಿಸುತ್ತದೆ. ಕ್ರೇತದವನಾದ ಪ್ರವಾದಿಯು ತನ್ನ ಜನರ ಬಗ್ಗೆ ಹೇಳಿದ್ದಂಥ ಸಂಗತಿಯು ನಿಜವೇ ಆಗಿದೆ ಎಂಬುದು ಕಾರಣವಾಗಿದೆ (ಅವರು ಸುಳ್ಳುಗಾರರು, ದುಷ್ಟರು ಮತ್ತು ಸೋಮಾರಿಗಳು), ಮತ್ತು ತೀತನು ಅವರನ್ನು ಕಠಿಣವಾಗಿ ಗದರಿಸಬೇಕು (ನೋಡಿರಿ: [[rc://kn/ta/man/translate/grammar-connect-logic-result]])
43TIT113je3rἵνα ὑγιαίνωσιν ἐν τῇ πίστει1so that they may be sound in the faith[ತೀತ 1:9](../01/09/pzi1) ರಲ್ಲಿ **ಸ್ವಸ್ಥ** ಎಂಬುದರ ಕುರಿತಾದ ಟಿಪ್ಪಣಿಯನ್ನು ನೋಡಿರಿ. ಪರ್ಯಾಯ ಭಾಷಾಂತರ: “ಆದ್ದರಿಂದ ಅವರು ಸ್ವಸ್ಥವಾದ ನಂಬಿಕೆ ಉಳ್ಳವರಾಗುತ್ತಾರೆ” ಅಥವಾ “ಆದ್ದರಿಂದ ಅವರ ನಂಬಿಕೆಯು ನಿಜವಾದದ್ದು ಆಗಬಹುದು” ಅಥವಾ “ಆದ್ದರಿಂದ ಅವರು ದೇವರ ಕುರಿತಾದ ಸತ್ಯವನ್ನು ಮಾತ್ರ ನಂಬುತ್ತಾರೆ”
44TIT113abclವ್ಯಾಕರಣ-ಸಂಯೋಜಕ-ತಾರ್ಕಿಕ-ಪರಿಣಾಮἵνα1so that**ಅದರಿಂದ** ಎಂಬ ಸಂಯೋಜಕ ಪದವು ಕಾರಣ-ಫಲಿತಾಂಶದ ಸಂಬಂಧಾರ್ಥಕವನ್ನು ಸೂಚಿಸುತ್ತದೆ. ಹಿರಿಯನು ಕ್ರೇತದವರನ್ನು ಕಠಿಣವಾಗಿ ಖಂಡಿಸಬೇಕು ಎಂಬುದು ಕಾರಣವಾಗಿದೆ, ಮತ್ತು ಕ್ರೇತದವರು ನಂಬಿಕೆಯಲ್ಲಿ ಸ್ವಸ್ಥರಾಗುತ್ತಾರೆ ಎಂಬುದು ಫಲಿತಾಂಶವಾಗಿದೆ. (ನೋಡಿರಿ: [[rc://kn/ta/man/translate/grammar-connect-logic-result]])
45TIT114abcmವ್ಯಾಕರಣ-ಸಂಯೋಜಕ-ತಾರ್ಕಿಕ-ಭಿನ್ನತೆμὴ1not**ಕೊಡದಿರಲಿ/ಬಾರದು** ಎಂಬ ಸಂಯೋಜಕ ಪದವು ಹೊರತುಪಡಿಸುವಿಕೆಯ ಉಪವಾಕ್ಯವನ್ನು ಸೂಚಿಸುತ್ತದೆ. ತೀತನು ಯೆಹೂದ್ಯರ ಕಟ್ಟುಕಥಗಳಿಗೆ ಅಥವಾ ಸತ್ಯವನ್ನು ಹಿಂಬಾಲಿಸದ ಮನುಷ್ಯರ ಆಜ್ಞೆಗಳಿಗೆ ಗಮನವನ್ನು ಕೊಡಲೇಬಾರದು. (ನೋಡಿರಿ: [[rc://kn/ta/man/translate/grammar-connect-logic-contrast]])
46TIT114p28iἸουδαϊκοῖς μύθοις1Jewish mythsಇದು ಯೆಹೂದ್ಯರ ಸುಳ್ಳು ಬೋಧನೆಗಳನ್ನು ಕುರಿತು ಹೇಳುತ್ತದೆ.
47TIT115abcnವ್ಯಾಕರಣ-ಸಂಯೋಜಕ-ತಾರ್ಕಿಕ-ಭಿನ್ನತೆδὲ1But**ಆದರೆ** ಎಂಬ ಸಂಯೋಜಕ ಪದವು ಶುದ್ಧರಾಗಿರುವ ಜನರ ಹಾಗೂ ಅಶುದ್ಧರಾಗಿರುವ ಮತ್ತು ನಂಬಿಕೆಯಿಲ್ಲದ ಜನರ ನಡುವಿನ ಭಿನ್ನತೆಯನ್ನು ಸೂಚಿಸುತ್ತದೆ. (ನೋಡಿರಿ: [[rc://kn/ta/man/translate/grammar-connect-logic-contrast]])
48TIT116abcoವ್ಯಾಕರಣ-ಸಂಯೋಜಕ-ತಾರ್ಕಿಕ-ಭಿನ್ನತೆδὲ1but**ಆದರೆ** ಎಂಬ ಸಂಯೋಜಕ ಪದವು ಅಶುದ್ಧರಾದ ಈ ಜನರು ಹೇಳುವಂಥದ್ದಕ್ಕೂ (ಅವರು ದೇವರನ್ನು ತಿಳಿದವರು) ಮತ್ತು ಅವರ ಕಾರ್ಯಗಳು ಏನು ತೋರಿಸುತ್ತವೆ (ಅವರು ದೇವರನ್ನು ತಿಳಿದವರಲ್ಲ) ಎಂಬುದಕ್ಕೂ ನಡುವೆಯಿರುವ ಭಿನ್ನತೆಯನ್ನು ಸೂಚಿಸುತ್ತದೆ. (ನೋಡಿರಿ: [[rc://kn/ta/man/translate/grammar-connect-logic-contrast]])
49TIT116i3l2τοῖς ... ἔργοις ἀρνοῦνται1they deny him by their actionsಅವರು ಜೀವಿಸುವ ರೀತಿಯು ಅವರು ಆತನನ್ನು ತಿಳಿದವರಲ್ಲವೆಂದು ಸಾಬೀತುಪಡಿಸುತ್ತದೆ
50TIT116ja47βδελυκτοὶ ὄντες1They are detestableಅವರು ಅಸಹ್ಯರು ಆಗಿದ್ದಾರೆ
51TIT2introh3il0# ತೀತ ಭಾಗ 2 ಸಾಮಾನ್ಯ ಟಿಪ್ಪಣಿಗಳು

## ಈ ಅಧ್ಯಾಯದಲ್ಲಿನ ವಿಶೇಷ ಪರಿಕಲ್ಪನೆಗಳು

### ಲಿಂಗತ್ವದ ಪಾತ್ರಗಳು

ಈ ಅಧ್ಯಾಯವನ್ನು ಐತಿಹಾಸಿಕವಾದ ಮತ್ತು ಸಾಂಸ್ಕೃತಿಕವಾದ ಹಿನ್ನೆಲೆಯಿಂದ ಹೇಗೆ ಅರ್ಥಮಾಡಿಕೊಳ್ಳಬೇಕು ಎಂಬ ವಿಷಯದಲ್ಲಿ ವಿದ್ವಾಂಸರು ಭಿನ್ನಾಭಿಪ್ರಾಯವುಳ್ಳವರಾಗಿದ್ದಾರೆ. ಕೆಲವು ವಿದ್ವಾಂಸರು ಪುರುಷರು ಮತ್ತು ಸ್ತ್ರೀಯರು ಎಲ್ಲಾ ವಿಷಯಗಳಲ್ಲಿ ಸಮಾನರಾಗಿದ್ದಾರೆ ಎಂದು ನಂಬುತ್ತಾರೆ. ಬೇರೆ ಕೆಲವು ವಿದ್ವಾಂಸರು ಮದುವೆಯಲ್ಲಿ ಮತ್ತು ಸಭೆಗಳಲ್ಲಿ ಸೇವೆಮಾಡಲು, ವಿಶಿಷ್ಟವಾದ, ವಿಭಿನ್ನವಾದ ಜವಾಬ್ದಾರಿಯನ್ನು ನಿರ್ವಹಿಸಲು ಪುರುಷ ಮತ್ತು ಮಹಿಳೆಯರನ್ನು ದೇವರು ಸೃಷ್ಠಿಸಿದನು ಎಂದು ನಂಬುತ್ತಾರೆ. ಭಾಷಾಂತರಗಾರರು ತಾವು ಈ ವಿಚಾರವನ್ನು ಅರ್ಥಮಾಡಿಕೊಳ್ಳುವ ರೀತಿಯು ಈ ವಾಕ್ಯಭಾಗವನ್ನು ಭಾಷಾಂತರ ಮಾಡುವುದರ ಮೇಲೆ ಪರಿಣಾಮ ಬೀರದಂತೆ ಎಚ್ಚರಿಕೆ ವಹಿಸಬೇಕು.

### ದಾಸತ್ವ

ಪೌಲನು ಈ ಅಧ್ಯಾಯದಲ್ಲಿ ದಾಸತ್ವವು ಒಳ್ಳೆಯದೋ, ಕೆಟ್ಟದೋ ಎಂಬುದರ ಬಗ್ಗೆ ಬರೆಯುತ್ತಿಲ್ಲ. ಆದರೆ ಆಳುಗಳು ತಮ್ಮ ಯಜಮಾನರು ನಂಬಿಗಸ್ತರಾಗಿ ಸೇವೆ ಸಲ್ಲಿಸಬೇಕು ಎಂದು ತಿಳಿಸಿದ್ದಾನೆ. ಪ್ರತಿಯೊಬ್ಬ ವಿಶ್ವಾಸಿಯೂ ಎಲ್ಲಾ ಸಂದರ್ಭದಲ್ಲೂ ಭಕ್ತಿಯುಳ್ಳವರಾಗಿರಬೇಕು ಮತ್ತು ಸರಿಯಾಗಿ ಜೀವಿಸಬೇಕು ಎಂದು ಬೋಧಿಸುತ್ತಾನೆ.
52TIT21lfu10Connecting Statement:ದೇವರ ವಾಕ್ಯವನ್ನು ಏಕೆ ಬೋಧಿಸಬೇಕು ಎಂಬುದಕ್ಕೆ ಕಾರಣಗಳನ್ನು ಹೇಳಿ ವಿವರಿಸುವುದನ್ನು ಪೌಲನು ಮುಂದುವರೆಸುತ್ತಾನೆ, ಮತ್ತು ವೃದ್ಧರು ಮತ್ತು ವೃದ್ಧೆಯರು, ಯುವಕರು, ದಾಸರು ಅಥವಾ ಸೇವಕರು ವಿಶ್ವಾಸಿಗಳಂತೆ ಹೇಗೆ ಜೀವಿಸಬೇಕು ಎಂದು ವಿವರಿಸುತ್ತಾನೆ.
53TIT21tpi2ಫಿಗ್ಸ್-ಸ್ಪಷ್ಟಪಡಿಸುವಿಕೆσὺ δὲ λάλει ἃ πρέπει1But you, speak what fitsಇಲ್ಲಿ **ನೀನು** ಎಂಬುದು ಏಕವಚನವಾಗಿದ್ದು ತೀತನನ್ನು ಸೂಚಿಸುತ್ತದೆ.ಯುಎಸ್‌ಟಿಯಲ್ಲಿರುವಂತೆ “ತೀತ” ಎಂದು ಹೆಸರನ್ನು ಸೇರಿಸುವುದು ಸಹಾಯಕವಾಗಿದ್ದರೆ, ನೀವು ಇಲ್ಲಿ ಅದನ್ನು ಸೇರಿಸಬಹುದು (ನೋಡಿರಿ: \[\[rc://kn/ta/man/translate/figs-explicit\]\])
54TIT22xyz3ಫಿಗ್ಸ್-ಪದಲೋಪπρεσβύτας…εἶναι1Older men are to beಗ್ರೀಕ್ ಭಾಷೆಯಲ್ಲಿ **ಆಗಿರು** ಎಂಬ ಪದವು ಇಲ್ಲ, ಆದರೆ **ವೃದ್ಧರು ಹೀಗಿರಬೇಕು** ಎಂಬುದಾಗಿ ಮಾತ್ರವಿದೆ. ಹಿಂದಿನ ವಚನದಲ್ಲಿರುವ **ಉಪದೇಶಮಾಡು** ಎಂಬ ಪದದ ಕಲ್ಪನೆಯಿಂದ **ಬೋಧಿಸು** ಅಥವಾ **ಪ್ರಬೋಧಿಸು** ಎಂಬಂಥ ವಿಷಯವನ್ನು ಊಹಿಸಿಕೊಂಡು ನಾವು ಇಲ್ಲಿ ಕ್ರಿಯಾಪದವನ್ನು ಪೂರೈಸಬೇಕಾಗಿದೆ. ಪರ್ಯಾಯ ಭಾಷಾಂತರ: “ವೃದ್ಧರಿಗೆ ಹೀಗಿರಬೇಕೆಂದು ಬೋಧಿಸು” (ನೋಡಿರಿ: [[rc://kn/ta/man/translate/figs-ellipsis]])
55TIT22xy13ಫಿಗ್ಸ್-ದ್ವಿರುಕ್ತಿνηφαλίους…σεμνούς, σώφρονας1temperate, dignified, sensibleಈ ಮೂರು ಪದಗಳು ನಿಕಟವಾದ ಅರ್ಥವುಳ್ಳವುಗಳಾಗಿವೆ ಮತ್ತು ಉದ್ದಿಷ್ಟ ಭಾಷೆಯಲ್ಲಿ ಮೂರು ಪ್ರತ್ಯೇಕ ಪದಗಳಿಲ್ಲದಿದ್ದರೆ ಒಂದು ಅಥವಾ ಎರಡು ಪದಗಳಾಗಿ ಸೇರಿಸಬಹುದು. (ನೋಡಿರಿ: [[rc://kn/ta/man/translate/figs-doublet]])
56TIT22xc6tνηφαλίους εἶναι1to be temperateಸ್ವಸ್ಥಚಿತ್ತರು ಅಥವಾ ಆತ್ಮಸಂಯಮವುಳ್ಳವರು
57TIT22y3j2εἶναι ... σώφρονας1to be ... sensibleತಮ್ಮ ಆಶೆಗಳನ್ನು ನಿಗ್ರಹಿಸಲು
58TIT22m14yಫಿಗ್ಸ್-ಭಾವವಾಚಕ ನಾಮಪದಗಳುὑγιαίνοντας τῇ πίστει, τῇ ἀγάπῃ, τῇ ὑπομονῇ1sound in faith, in love, and in perseveranceನಿಮ್ಮ ಭಾಷೆಯಲ್ಲಿ ಹೆಚ್ಚು ಸ್ಪಷ್ಟವಾಗಿರುತ್ತದೆ ಅನ್ನಿಸುವುದಾದರೆ **ನಂಬಿಕೆ** ಎಂಬ ಭಾವವಾಚಕ ನಾಮಪದವನ್ನು ಕ್ರಿಯಾಪದವಾಗಿ ಉಲ್ಲೇಖಿಸಬಹುದು. ಪರ್ಯಾಯ ಭಾಷಾಂತರ: “ದೇವರ ಕುರಿತಾದ ನಿಜವಾದ ಬೋಧನೆಗಳನ್ನು ದೃಢವಾಗಿ ನಂಬಿರಿ” (ನೋಡಿರಿ: \[\[rc://kn/ta/man/translate/figs-abstractnouns\]\])
59TIT22z14yಫಿಗ್ಸ್-ಭಾವವಾಚಕ ನಾಮಪದಗಳುτῇ ἀγάπῃ1in loveನಿಮ್ಮ ಭಾಷೆಯಲ್ಲಿ **ಪ್ರೀತಿ** ಎಂಬ ಭಾವವಾಚಕ ನಾಮಪದವನ್ನು ಕ್ರಿಯಾಪದವಾಗಿ ಬಳಸುವುದು ಸ್ಪಷ್ಟವಾಗಿರುವುದಾದರೆ ನೀವು ಹಾಗೆ ಬಳಸಬಹುದು. ಪರ್ಯಾಯ ಭಾಷಾಂತರ: “ಇತರರನ್ನು ನಿಜವಾಗಿಯೂ ಪ್ರೀತಿಸು” (ನೋಡಿರಿ: [[rc://kn/ta/man/translate/figs-abstractnouns]])
60TIT22a14yಫಿಗ್ಸ್-ಭಾವವಾಚಕ ನಾಮಪದಗಳುτῇ ὑπομονῇ1and in perseveranceನಿಮ್ಮ ಭಾಷೆಯಲ್ಲಿ **ತಾಳ್ಮೆ** ಎಂಬ ಭಾವವಾಚಕ ನಾಮಪದವನ್ನು ಕ್ರಿಯಾಪದವಾಗಿ ಬಳಸುವುದು ಸ್ಪಷ್ಟವಾಗಿರುವುದಾದರೆ ನೀವು ಹಾಗೆ ಬಳಸಬಹುದು. ಪರ್ಯಾಯ ಭಾಷಾಂತರ: “ಕಷ್ಟವಾದಾಗ್ಯೂ ನಿರಂತರವಾಗಿ ದೇವರನ್ನು ಸೇವಿಸಬೇಕು” (ನೋಡಿರಿ: [[rc://kn/ta/man/translate/figs-abstractnouns]])
61TIT23gl8e​ಫಿಗ್ಸ್‌-ಪದಲೋಪπρεσβύτιδας ὡσαύτως ἐν καταστήματι1Teach older women likewiseಗ್ರೀಕ್ ಭಾಷೆಯಲ್ಲಿ **ಆಗಿರಬೇಕು** ಎಂಬುದು ಇಲ್ಲ, ಆದರೆ **ಹಾಗೆಯೇ ವೃದ್ಧೆಯರು** ಎಂಬುದಾಗಿ ಮಾತ್ರವಿದೆ. ಹಿಂದಿನ ಎರಡು ವಚನಗಳಿಂದ ನಾವು ಕ್ರಿಯಾಪದದ ಕಲ್ಪನೆಯನ್ನು ತೆಗೆದುಕೊಂಡು ಮತ್ತು **ಬೋಧಿಸು** ಅಥವಾ **ಪ್ರಬೋಧಿಸು** ಎಂಬಂತಹ ಕ್ರಿಯಾಪದಗಳನ್ನು ಇಲ್ಲಿಗೆ ಆಳವಡಿಸುವುದನ್ನು ಮುಂದುವರಿಸಬೇಕು. ಪರ್ಯಾಯ ಭಾಷಾಂತರ: “ಅದೇ ರೀತಿಯಲ್ಲಿ, ವೃದ್ಧೆಯರಿಗೆ ಬೋಧಿಸು” ಅಥವಾ “ವೃದ್ಧೆಯರಿಗೂ ಸಹ ಬೋಧಿಸು” (ನೋಡಿರಿ: \[\[rc://kn/ta/man/translate/figs-ellipsis\]\])
62TIT23v9cpδιαβόλους1slanderersಈ ಪದವು ಇತರ ಜನರ ಬಗ್ಗೆ ನಿಜವಾದ ಅಥವಾ ನಿಜವಲ್ಲದ ಕೆಟ್ಟ ವಿಷಯವನ್ನು ಹೇಳುವಂಥ ಜನರನ್ನು ಸೂಚಿಸುತ್ತದೆ.
63TIT23g9reಫಿಗ್ಸ್-ರೂಪಕοἴνῳ πολλῷ δεδουλωμένας1or being slaves to much wineತಮ್ಮನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲಾಗದ ಮತ್ತು ತುಂಬಾ ಮದ್ಯಪಾನ ಮಾಡುವ ಜನರನ್ನು ಮದ್ಯಕ್ಕೆ ಗುಲಾಮರಾಗಿದ್ದಾರೆ ಎಂದು ಹೇಳಲಾಗಿದೆ. ಪರ್ಯಾಯ ಭಾಷಾಂತರ: “ಅಥವಾ ಮದ್ಯಪಾನದ ಮೇಲಿರುವ ಅವರ ವ್ಯಾಮೋಹದಿಂದ ನಿಯಂತ್ರಿಸಲ್ಪಡುವುದು” ಅಥವಾ “ಅಥವಾ ಮದ್ಯ ವ್ಯಸನಿಯಾಗಿರುವುದು” (ನೋಡಿರಿ: \[\[rc://kn/ta/man/translate/figs-metaphor\]\]
64TIT24abc5φιλάνδρους1lovers of their husbands“ತಮ್ಮ ಸ್ವಂತ ಗಂಡಂದಿರನ್ನು ಪ್ರೀತಿಸುವವರು”
65TIT24abcaφιλοτέκνους1and lovers of their children“ತಮ್ಮ ಸ್ವಂತ ಮಕ್ಕಳ ಪ್ರೀತಿಸುವವರು”
66TIT25abcbὑποτασσομένας τοῖς ἰδίοις ἀνδράσιν1and subject to their own husbands“ಮತ್ತು ತಮ್ಮ ಸ್ವಂತ ಗಂಡಂದಿರಿಗೆ ಅಧೀನರಾಗಲು”
67TIT26i3hvὡσαύτως1In the same wayವೃದ್ಧರನ್ನು ತರಬೇತಿಗೊಳಿಸಿದಂತೆಯೇ ಯೌವನಸ್ಥರನ್ನು ಸಹ ತೀತನು ತರಬೇತಿಗೊಳಿಸಬೇಕಾಗಿತ್ತು.
68TIT27ym6xτύπον καλῶν ἔργων1an example of good worksಒಳ್ಳೆಯ ಮತ್ತು ಸರಿಯಾದ ಕಾರ್ಯಗಳನ್ನು ಮಾಡುವಂಥವನ ಮಾದರಿಯಾಗಿ
69TIT28xy14ὑγιῆ1uncorrupted…sound​ಈ ಪದವು 2:7 ರಲ್ಲಿರುವ **ಭ್ರಷ್ಟಗೊಳಿಸದಿರುವಿಕೆ** ಎಂಬ ಪದದ ಅದೇ ಮೂಲ ಅರ್ಥವುಳ್ಳದಾಗಿದೆ. 2:7 ರಲ್ಲಿ, ಪೌಲನು ಇದನ್ನು ನಕರಾತ್ಮಕವಾದ ಅರ್ಥದಲ್ಲಿ ಹೇಳುತ್ತಾನೆ: **ಭ್ರಷ್ಟಗೊಳಿಸದಿರುವಿಕೆ**, ಅಂದರೆ, **ತಪ್ಪಿಲ್ಲದ**, ಮತ್ತು 2:8 ರಲ್ಲಿ ಅವನು ಇದನ್ನು ಸಕಾರಾತ್ಮಕವಾದ ಅರ್ಥದಲ್ಲಿ ಹೇಳುತ್ತಾನೆ: **ಸ್ವಸ್ಥ, ಆರೋಗ್ಯಕರ**, ಅಂದರೆ **ಸರಿಯಾದ**. ಇವೆರಡೂ ಪದಗಳು ತೀತನ ಬೋಧನೆಯ ಬಗ್ಗೆ ಸೂಚಿಸುತ್ತವೆ. ಉದ್ದಿಷ್ಟ ಭಾಷೆಯಲ್ಲಿ ಸಕರಾತ್ಮಕವಾದ ಅಥವಾ ನಕರಾತ್ಮಕವಾದ ಪದಗಳನ್ನು ಉಪಯೋಗಿಸಿರಿ, ಅಥವಾ ಎರಡು ಪದಗಳನ್ನು ಬಳಸುವುದು ಕಷ್ಟಕರವಾಗಿದ್ದರೆ ಈ ಅರ್ಥವನ್ನು ಕೊಡುವ ಒಂದೇ ಪದವನ್ನು ಉಪಯೋಗಿಸಿರಿ.
70TIT28xy15ಫಿಗ್ಸ್-ಅಂತರ್ಗತἡμῶν1usಇದು ಪೌಲ, ತೀತ ಮತ್ತು ಎಲ್ಲಾ ಕ್ರೈಸ್ತರನ್ನು ಒಳಗೊಂಡಿದೆ. (See: [[rc://kn/ta/man/translate/figs-inclusive]])
71TIT29xyz5ಫಿಗ್ಸ್-ಪದಲೋಪδούλους ἰδίοις δεσπόταις ὑποτάσσεσθαι1Slaves are to be subject to their mastersಗ್ರೀಕ್ ಭಾಷೆಯಲ್ಲಿ **ಆಗಿರು** ಎಂಬ ಪದವು ಇಲ್ಲ, ಆದರೆ **ದಾಸರು ತಮ್ಮ ಸ್ವಂತ ಯಜಮಾನರಿಗೆ** ಎಂಬುದಾಗಿ ಮಾತ್ರವಿದೆ. ನಾವು 6 ನೇ ವಚನದಿಂದ ಕ್ರಿಯಾಪದ ಕಲ್ಪನೆಯನ್ನು ಊಹಿಸಿಕೊಂಡು **ಪ್ರಚೋದಿಸು** ಅಥವಾ **ಪ್ರಬೋಧಿಸು** ಎಂಬಂಥ ಪದಗಳನ್ನು ಇಲ್ಲಿಗೆ ಸೇರಿಸಬೇಕು, ಪರ್ಯಾಯ ಭಾಷಾಂತರ: “ದಾಸರು ತಮ್ಮ ಯಜಮಾನರಿಗೆ ಅಧೀನರಾಗಿರುವಂತೆ ಅವರಿಗೆ ಬೋಧಿಸು” (ನೋಡಿರಿ: [[rc://kn/ta/man/translate/figs-ellipsis]])
72TIT29ntp7ἰδίοις δεσπόταις1their mastersಅವರ ಸ್ವಂತ ಯಜಮಾನರು
73TIT29abccὑποτάσσεσθαι1are to be subject“ವಿಧೇಯರಾಗಬೇಕು”
74TIT29if6vἐν πᾶσιν1in everythingಎಲ್ಲಾ ಸನ್ನಿವೇಶಗಳಲ್ಲೂ ಅಥವಾ ಯಾವಾಗಲೂ
75TIT210abc6μὴ νοσφιζομένους1not to steal“ತಮ್ಮ ಯಜಮಾನರಿಂದ ಕದಿಯಬಾರದು”
76TIT210t87jπᾶσαν πίστιν ἐνδεικνυμένους ἀγαθήν1demonstrate all good faithಅವರು ತಮ್ಮ ಯಜಮಾನರ ನಂಬಿಕೆಗೆ ಅರ್ಹರಾಗಿದ್ದಾರೆ ಎಂದು ತೋರಿಸಲು
77TIT210h2n6ἐν πᾶσιν1in every wayಅವರು ಮಾಡುವ ಎಲ್ಲಾದರಲ್ಲಿಯೂ
78TIT210xy16ಫಿಗ್ಸ್-ಅಂತರ್ಗತἡμῶν1ourಇದರಲ್ಲಿರುವ **ನಮ್ಮ** ಎಂಬ ಪದವು ಪೌಲ, ತೀತ ಮತ್ತು ಎಲ್ಲಾ ಕ್ರೈಸ್ತರನ್ನು ಒಳಗೊಂಡಿದೆ (ನೋಡಿರಿ: [[rc://kn/ta/man/translate/figs-inclusive]])
79TIT210pn93τὴν τοῦ Σωτῆρος ἡμῶν Θεοῦ1God our Saviorನಮ್ಮನ್ನು ರಕ್ಷಿಸುವ ನಮ್ಮ ದೇವರು
80TIT211y44u0Connecting Statement:ಯೇಸುವಿನ ಅಗಮನವನ್ನು ನಿರೀಕ್ಷಿಸುವಂತೆ ಮತ್ತು ಯೇಸುವಿನ ಮೂಲಕ ದೊರಕಿರುವ ತನ್ನ ಅಧಿಕಾರವನ್ನು ನೆನಪಿಸಿಕೊಳ್ಳುವಂತೆ ಪೌಲನು ತೀತನನ್ನು ಪ್ರೋತ್ಸಾಹಿಸುತ್ತಾನೆ.
81TIT211gp2zಫಿಗ್ಸ್-ಮಾನವೀಕರಣἐπεφάνη ... ἡ χάρις τοῦ Θεοῦ1the grace of God has appearedಪೌಲನು ದೇವರ ಕೃಪೆಯ ಬಗ್ಗೆ ಮಾತನಾಡುವಾಗ ಒಬ್ಬ ವ್ಯಕ್ತಿಯು ಬಂದಿದ್ದಾನೋ ಎಂಬಂತೆ ಮಾತನಾಡುತ್ತಾನೆ. ಇದನ್ನು ಬೇರೆ ರೀತಿಯಲ್ಲಿ ವ್ಯಕ್ತಪಡಿಸುವುದಕ್ಕಾಗಿ ಯುಎಸ್‌ಟಿಯನ್ನು ನೋಡಿರಿ. ಪರ್ಯಾಯ ಭಾಷಾಂತರ: “ದೇವರು ಈಗ ತನ್ನ ಕೃಪೆಯನ್ನು ದಯಪಾಲಿಸುತ್ತಿದ್ದಾನೆ” (ನೋಡಿರಿ: \[\[rc://kn/ta/man/translate/figs-personification\]\])
82TIT212qy8kಫಿಗ್ಸ್-ಮಾನವೀಕರಣπαιδεύουσα ἡμᾶς1trains usಪೌಲನು ದೇವರ ಕೃಪೆಯ (ತೀತ 2:11) ಕುರಿತು ಮಾತನಾಡುವಾಗ ಅದನ್ನು ಪರಿಶುದ್ದ ಜೀವನವನ್ನು ನಡೆಸಬೇಕೆಂದು ತರಬೇತಿ ಕೊಡುವಂಥ ಒಬ್ಬ ವ್ಯಕ್ತಿಯೋ ಎಂಬಂತೆ ಮಾತನಾಡುತ್ತಿದ್ದಾನೆ. ಪರ್ಯಾಯ ಭಾಷಾಂತರ: “ಅದರಿಂದ ದೇವರು ನಮ್ಮನ್ನು ತರಬೇತಿಗೊಳಿಸುತ್ತಾನೆ” (ನೋಡಿರಿ: \[\[rc:/kn/ta/man/translate/figs-personification\]\])
83TIT212abceಫಿಗ್ಸ್-ಅಂತರ್ಗತἡμᾶς1usಇದು ಪೌಲ, ತೀತ ಮತ್ತು ಎಲ್ಲಾ ಕ್ರೈಸ್ತರನ್ನು ಒಳಗೊಂಡಿದೆ. (ನೋಡಿರಿ: [[rc://kn/ta/man/translate/figs-inclusive]])
84TIT212lxb3παιδεύουσα ἡμᾶς, ἵνα ἀρνησάμενοι τὴν ἀσέβειαν1trains us to reject godlessnessದೇವರನ್ನು ಅಗೌರವಿಸುವಂಥ ವಿಷಯಗಳು
85TIT212xy19ἀσέβειαν…εὐσεβῶς1godlessness…godly wayಈ ಪದಗಳು ವಿರೋಧಭಾಸವಾದವುಗಳಾಗಿವೆ, ಅಂದರೆ ಅನುಕ್ರಮವಾಗಿ **ದೇವರನ್ನು ಅಗೌರವಿಸುವ** ಮತ್ತು **ದೇವರನ್ನು ಗೌರವಿಸುವ** ಎಂಬ ಅರ್ಥವುಳ್ಳವುಗಳಾಗಿವೆ.
86TIT213rz93προσδεχόμενοι1we look forward to receiving***ಸ್ವಾಗತಿಸಲು ಕಾಯುತ್ತಿರುವ***
87TIT213xyz7ಫಿಗ್ಸ್-ದ್ವಿಪದಾಲಂಕಾರτοῦ μεγάλου Θεοῦ καὶ Σωτῆρος ἡμῶν, Ἰησοῦ Χριστοῦ1our great God and Savior Jesus Christ**ನಮ್ಮ ಮಹೋನ್ನತನಾದ ದೇವರು** ಮತ್ತು **ರಕ್ಷಕನು** ಎಂಬ ಈ ಎರಡು ಪದಗುಚ್ಛಗಳು ಒಬ್ಬ ವ್ಯಕ್ತಿಯನ್ನೇ ಅಂದರೆ ಯೇಸುಕ್ರಿಸ್ತನನ್ನೇ ಸೂಚಿಸುತ್ತವೆ. ಪರ್ಯಾಯ ಭಾಷಾಂತರ: “ನಮ್ಮ ಮಹೋನ್ನತನಾದ ದೇವರು ಮತ್ತು ರಕ್ಷಕನಾದ ಯೇಸು ಕ್ರಿಸ್ತನು” (ನೋಡಿರಿ: [[rc://kn/ta/man/translate/figs-hendiadys]])
88TIT213abcfಫಿಗ್ಸ್-ದ್ವಿಪದಾಲಂಕಾರτὴν μακαρίαν ἐλπίδα, καὶ ἐπιφάνειαν τῆς δόξης1the blessed hope and appearing of the glory**ಭಾಗ್ಯಕರವಾದ ನಿರೀಕ್ಷೆ** ಮತ್ತು **ಮಹಿಮೆಯು ಪ್ರತ್ಯಕ್ಷವಾಗುವುದು** ಎಂಬ ಇವೆರಡೂ ಒಂದೇ ಸಂಗತಿಯನ್ನು ಸೂಚಿಸುತ್ತವೆ. ಇದನ್ನು ಸ್ಪಷ್ಟವಾಗಿ ತೋರಿಸಬಹುದು. ಪರ್ಯಾಯ ಭಾಷಾಂತರ: “ನಾವು ಭಾಗ್ಯಕರವಾದ ಮತ್ತು ಮಹಿಮಾನ್ವಿತವಾದ ಪ್ರತ್ಯಕ್ಷತೆಗಾಗಿ ಹಾತೊರೆಯುತ್ತಿದ್ದೇವೆ” (ನೋಡಿರಿ: [[rc://kn/ta/man/translate/figs-hendiadys]])
89TIT213xyz6ಫಿಗ್ಸ್-ಲಕ್ಷಣಾಲಂಕಾರτὴν μακαρίαν ἐλπίδα1the blessed hopeಇದರಲ್ಲಿ, ನಾವು ಯಾವುದನ್ನು ನಿರೀಕ್ಷಿಸುತ್ತಿದ್ದೇವೋ ಅದು \*\*ಭಾಗ್ಯಕರ\*\* ಆಗಿದೆ, ಅದು ಯಾವುದೆಂದರೆ ಯೇಸುಕ್ರಿಸ್ತನ ಪುನರಾಗಮನವಾಗಿದೆ. ಪರ್ಯಾಯ ಭಾಷಾಂತರ: “ನಾವು ನಿರೀಕ್ಷಿಸುತ್ತಿರುವ ಅದ್ಭುತಕರವಾದ ಸಂಗತಿ” (ನೋಡಿರಿ: \[\[rc://en/ta/man/translate/figs-metonymy\]\])
90TIT214xy20ಫಿಗ್ಸ್-ಅಂತರ್ಗತἡμῶν1usಇದು ಪೌಲ, ತೀತ ಮತ್ತು ಎಲ್ಲಾ ಕ್ರೈಸ್ತರನ್ನು ಒಳಗೊಂಡಿದೆ. (See: [[rc://en/ta/man/translate/figs-inclusive]])
91TIT214gxe7ಫಿಗ್ಸ್-ರೂಪಕλυτρώσηται ἡμᾶς ἀπὸ πάσης ἀνομίας1to redeem us from all lawlessnessಯೇಸು ದಾಸರನ್ನು ಅವರ ದುಷ್ಟ ಯಜಮಾನನಿಂದ ಬಿಡುಗಡೆ ಮಾಡುತ್ತಿದ್ದಾನೋ ಎಂಬಂತೆ ಪೌಲನು ಯೇಸುವಿನ ಬಗ್ಗೆ ಹೇಳುತ್ತಾನೆ. (ನೋಡಿರಿ: \[\[rc://kn/ta/man/translate/figs-metaphor\]\])
92TIT214fjy1λαὸν περιούσιον1a special peopleಆತನು ಅತ್ಯಮೂಲ್ಯವಾದ ಸಂಪತ್ತಿನಂತೆ ಶೇಖರಿಸಿಡುವ ಜನರ ಗುಂಪು
93TIT214ii18ζηλωτὴν1are eagerಮಾಡಲು ಅತ್ಯಾಸಕ್ತಿಯುಳ್ಳವರು
94TIT214xy21figs-inclusiveἡμᾶς1usThis includes Paul, Titus, and all Christians. (See: [[rc://en/ta/man/translate/figs-inclusive]])
95TIT215abc7παρακάλει1exhort“encourage them to do these things”
96TIT215h15yμηδείς ... περιφρονείτω1Let no oneನಿನ್ನನ್ನು ತಿರಸ್ಕರಿಸಲು ಯಾರಿಗೂ ಅನುವು ಮಾಡಿಕೊಡಬೇಡ
97TIT215xy22figs-doublenegativesμηδείς σου περιφρονείτω1Let no one disregard youThis can be stated positively: “Make sure that everyone listens to you” (See: [[rc://en/ta/man/translate/figs-doublenegatives]])
98TIT3introzh6x0# ತೀತ 03 ಸಾಮಾನ್ಯ ಟಿಪ್ಪಣಿಗಳು

## ರಚನೆ ಮತ್ತು ನಮೂನೆ

ಈ ಅಧ್ಯಾಯದಲ್ಲಿ ಪೌಲನು ತೀತನಿಗೆ ವೈಯಕ್ತಿಕವಾದ ಕೆಲವು ಸೂಚನೆಗಳನ್ನು ನೀಡಿದ್ದಾನೆ.

15 ನೇ ವಾಕ್ಯದೊಂದಿಗೆ ಈ ಪತ್ರಿಕೆಯು ಸಾಂಪ್ರದಾಯಕವಾಗಿ ಮುಕ್ತಾಯವಾಗುತ್ತದೆ. ಪುರಾತನ ಕಾಲದ ಪೂರ್ವದೇಶದಲ್ಲಿ ಬಳಸುತ್ತಿದ್ದ ಸಾಮಾನ್ಯ ರೀತಿಯಲ್ಲಿ ಈ ಪತ್ರವನ್ನು ಮುಕ್ತಾಯಗೊಳಿಸಲಾಗಿದೆ.

## ಈ ಅಧ್ಯಾಯದಲ್ಲಿನ ವಿಶೇಷ ಪರಿಕಲ್ಪನೆಗಳು

### ವಂಶಾವಳಿಗಳು

ವಂಶಾವಳಿಗಳು (ವಚನ 9) ಎಂದರೆ ಇದರಲ್ಲಿ ಬರುವ ವ್ಯಕ್ತಿಯೊಬ್ಬನ ಪೂರ್ವಿಕರ ಪಟ್ಟಿ ಅಥವಾ ಅವನ ಸಂತತಿಯವರ ಪಟ್ಟಿ, ಮತ್ತು ಒಬ್ಬ ವ್ಯಕ್ತಿಯು ಯಾವ ಕುಲದಿಂದ ಮತ್ತು ಕುಟುಂಬದಿಂದ ಬಂದವನು ಎಂದು ತೋರಿಸುತ್ತದೆ. ಉದಾಹರಣೆಗೆ ಯಾಜಕರು ಲೇವಿಯರ ಕುಲದಿಂದ ಮತ್ತು ಆರೋನನ ಕುಟುಂಬದಿಂದ ಬಂದವರಾಗಿದ್ದಾರೆ. ಈ ಪಟ್ಟಿಗಳಲ್ಲಿ ಕೆಲವೊಂದು ಪಟ್ಟಿಗಳು ಪೂರ್ವಿಕರ ಮತ್ತು ಆತ್ಮಿಕ ಜೀವಿಗಳ ಕಥೆಗಳನ್ನು ಒಳಗೊಂಡಿವೆ. ಕಾರ್ಯಗಳು ಎಲ್ಲಿಂದ ಬಂದವು ಮತ್ತು ಬೇರೆ ಬೇರೆ ಜನರು ಎಷ್ಟು ಪ್ರಾಮುಖ್ಯವುಳ್ಳವರಾಗಿದ್ದಾರೆ ಎಂಬುದರ ಬಗ್ಗೆ ವಾದಿಸಲು ಈ ಪಟ್ಟಿಗಳನ್ನು ಮತ್ತು ಕಥೆಗಳನ್ನು ಉಪಯೋಗಿಸುತ್ತಿದ್ದರು.
99TIT31y9tr​ಫಿಗ್ಸ್-ಭಾವವಾಚಕ ನಾಮಪದಗಳು0Connecting Statement:ಕ್ರೇತ ದ್ವೀಪದಲ್ಲಿನ ವೃದ್ಧರಿಗೆ ಮತ್ತು ಅವನ ಸುಪರ್ದಿನಲ್ಲಿದ್ದ ಜನರಿಗೆ ಯಾವ ರೀತಿ ಬೋಧಿಸಬೇಕು ಎಂಬ ಸೂಚನೆಗಳನ್ನು ಪೌಲನು ತೀತನಿಗೆ ಕೊಡುವುದನ್ನು ಮುಂದುವರಿಸುತ್ತಾನೆ.
100TIT31w3fyἀρχαῖς, ἐξουσίαις, ὑποτάσσεσθαι, πειθαρχεῖν1submit to rulers and authorities, to obey themರಾಜಕೀಯ ಆಡಳಿತಗಾರರು ಮತ್ತು ಸರ್ಕಾರಿ ಅಧಿಕಾರಿಗಳು ಹೇಳುವಂಥದ್ದನ್ನು ಮಾಡುವುದರ ಮೂಲಕ ಅವರಿಗೆ ವಿಧೇಯರಾಗಬೇಕು
101TIT31xy25figs-doubletὑποτάσσεσθαι, πειθαρχεῖν1to submit…to obeyThese words have similar meanings and both refer to doing what someone tells you to do. If the target language has only one term for this, then just use that term (See: [[rc://en/ta/man/translate/figs-doublet]])
102TIT31wa9x​ಫಿಗ್ಸ್-ದ್ವಿರುಕ್ತಿἀρχαῖς ἐξουσίαις1rulers and authoritiesಈ ಪದಗಳಿಗೆ ಸಮಾನವಾದ ಅರ್ಥವಿದೆ ಮತ್ತು ಈ ಪದಗಳು ಸರ್ಕಾರದಲ್ಲಿರುವ ಅಧಿಕಾರಿಗಳನ್ನು ಸೂಚಿಸುತ್ತವೆ. ಉದ್ದಿಷ್ಟ ಭಾಷೆಯಲ್ಲಿ ಇದಕ್ಕೆ ಕೇವಲ ಒಂದೇ ಒಂದು ಪದ ಇರುವುದಾದರೆ, ಆ ಪದವನ್ನು ಬಳಸಿರಿ (ನೋಡಿರಿ: \[\[rc://kn/ta/man/translate/figs-doublet\]\])
103TIT31in7uπρὸς πᾶν ἔργον ἀγαθὸν ἑτοίμους εἶναι1be ready for every good workಅವಕಾಶ ಇರುವಾಗಲ್ಲೆಲ್ಲಾ ಸತ್ಕಾರ್ಯಗಳನ್ನು ಮಾಡಲು ಸಿದ್ಧರಾಗಿರಿ
104TIT32lug7βλασφημεῖν1to revileಕೆಟ್ಟದ್ದಾಗಿ ಮಾತನಾಡುವುದು
105TIT32abc8figs-doublenegativesἀμάχους εἶναι1to avoid quarrelingThis can be stated positively: “to be peaceful” (See: [[rc://en/ta/man/translate/figs-doublenegatives]])
106TIT33m9zdγάρ ποτε καὶ ἡμεῖς1For once we ourselvesಏಕೆಂದರೆ ನಾವು ಕೂಡ ಒಂದು ಕಾಲದಲ್ಲಿ ಆಗಿದ್ದೇವು
107TIT33xy27figs-activepassiveπλανώμενοι, δουλεύοντες ἐπιθυμίαις καὶ ἡδοναῖς ποικίλαις1We were led astray and enslaved by various passions and pleasuresThis can be translated in active form. Alternate translation: “Various passions and pleasures had lied to us and so led us astray” (See: [[rc://en/ta/man/translate/figs-activepassive]])
108TIT33y5lpστυγητοί1We were detestableಇತರರು ನಮ್ಮನ್ನು ಹಗೆ ಮಾಡುವಂತೆ ಮಾಡಿದ್ದೇವೆ
109TIT34xy28grammar-connect-logic-contrastδὲ1ButIt is important to mark the contrast here between the evil way that people are (verses 1-3) and the goodness of God (verses 4-7) (See: [[rc://en/ta/man/translate/grammar-connect-logic-contrast]])
110TIT34ba5aಫಿಗ್ಸ್-ಮಾನವೀಕರಣὅτε ... ἡ χρηστότης καὶ ἡ φιλανθρωπία ἐπεφάνη τοῦ Σωτῆρος ἡμῶν, Θεοῦ1when the kindness of God our Savior and his love for mankind appearedಪೌಲನು ದೇವರ ದಯೆ ಮತ್ತು ಪ್ರೀತಿಯ ಬಗ್ಗೆ ಮಾತನಾಡುತ್ತಾ ಅವುಗಳನ್ನು ನಮ್ಮ ಕಣ್ಣಿಗೆ ಕಾಣಿಸುವಂಥ ಜನರಂತೆ ವರ್ಣಿಸಿದ್ದಾನೆ. ಪರ್ಯಾಯ ಭಾಷಾಂತರ: “ನಮ್ಮ ರಕ್ಷಕನಾದ ದೇವರು ತನ್ನ ದಯೆಯನ್ನು ಮತ್ತು ಜನರ ಮೇಲಿನ ಪ್ರೀತಿಯನ್ನು ನಮಗೆ ತೋರಿಸಿದಾಗ” (ನೋಡಿರಿ: \[\[rc://Kn/ta/man/translate/figs-personification\]\])
111TIT34abcgfigs-abstractnounsὅτε…ἡ χρηστότης καὶ ἡ φιλανθρωπία ἐπεφάνη τοῦ Σωτῆρος ἡμῶν, Θεοῦ1when the kindness of God our Savior and his love for mankind appearedThe abstract nouns **kindness** and **love** can be stated as adjectives. Alternate translation: “when God, who saves us, showed how kind and loving he would be to mankind” (See: [[rc://en/ta/man/translate/figs-abstractnouns]])
112TIT34abchfigs-inclusiveἡμῶν1ourThis includes Paul, Titus, and all Christians. (See: [[rc://en/ta/man/translate/figs-inclusive]])
113TIT35n4ugκατὰ τὸ αὐτοῦ ἔλεος1by his mercyಏಕೆಂದರೆ ಆತನು ನಮ್ಮ ಮೇಲೆ ಕರುಣೆಯನ್ನು ಇಟ್ಟಿರುವುದರಿಂದ
114TIT35k1a6ಫಿಗ್ಸ್-ರೂಪಕλουτροῦ παλινγενεσίας1washing of new birthಪೌಲನು ಇಲ್ಲಿ ಎರಡು ರೂಪಕಗಳನ್ನು ಸಂಯೋಜಿಸುತ್ತಾನೆ. ಅವನು ದೇವರು ಪಾಪಿಗಳನ್ನು ಮನ್ನಿಸಿದಂಥ ಆತನ ಕ್ಷಮಾಪಣೆಯ ಬಗ್ಗೆ ಮಾತನಾಡುವಾಗ ಅತನು ಅವರನ್ನು ಅವರ ಪಾಪದಿಂದ ದೈಹಿಕವಾಗಿ ತೊಳೆದು ಶುದ್ಧೀಕರಿಸುತ್ತಿದ್ದಾನೋ ಎಂಬಂತೆ ಮಾತನಾಡುತ್ತಿದ್ದಾನೆ. ಅವರು ಪುರ್ನಜನ್ಮ ಪಡೆದವರಂತೆ ದೇವರಿಗೆ ಪ್ರತಿಕ್ರಿಯಾಶೀಲರಾಗಿರುವ ಪಾಪಿಗಳ ಬಗ್ಗೆಯೂ ಅವನು ಮಾತನಾಡುತ್ತಿದ್ದಾನೆ. (ನೋಡಿರಿ: \[\[rc://Kn/ta/man/translate/figs-metaphor\]\])
115TIT36xy24figs-inclusiveἡμᾶς1usThis includes Paul, Titus, and all Christians. (See: [[rc://en/ta/man/translate/figs-inclusive]])
116TIT36q9zeδιὰ Ἰησοῦ Χριστοῦ τοῦ Σωτῆρος ἡμῶν1through our Savior Jesus Christಯೇಸು ಕ್ರಿಸ್ತನು ನಮ್ಮನ್ನು ರಕ್ಷಿಸಿದಾಗ
117TIT36xy23figs-inclusiveἡμῶν1ourThis includes Paul, Titus, and all Christians. (See: [[rc://en/ta/man/translate/figs-inclusive]])
118TIT37q1cmಫಿಗ್ಸ್-ರೂಪಕκληρονόμοι γενηθῶμεν κατ’ ἐλπίδα ζωῆς αἰωνίου1we might become heirs with the certain hope of eternal lifeನಿತ್ಯ ಜೀವಕ್ಕೆ ಬಾಧ್ಯರಾಗುವಂತೆ ಮಾಡಿ ಅದು ನಮ್ಮಕುಟುಂಬದ ಆಸ್ತಿಯಂತೆಯೂ , ಎಲ್ಲಾ ಹಕ್ಕುಗಳ ಬಾಧ್ಯತೆಯನ್ನು ಪಡೆದು ಕೊಳ್ಳುವಂತೆ ವಾಗ್ದಾನಮಾಡಿ ತಿಳಿಸಿದ್ದಾನೆ " (ನೋಡಿ: \[\[rc://kn/ta/man/translate/figs-metaphor\]\])
119TIT38j8mdὁ λόγος1This message[ತೀತ 3:7](../03/07.ಎಂಡಿ).ರಲ್ಲಿ ಹೇಳಿರುವಂತೆ ದೇವರನ್ನು ನಂಬಿಕೆಯಿಂದ ಸೇವಿಸುವವರನ್ನು ಯೇಸುವಿನ ಮೂಲಕ ಪವಿತ್ರಾತ್ಮನನ್ನು ಸುರಿಸಿ ಆಶೀರ್ವದಿಸುವನು
120TIT38xy29τούτων1these thingsThis refers to the teachings that Paul has talked about in verses 1-7. Alternate translation: “these teachings that I have just talked about”
121TIT38kqm6φροντίζωσιν καλῶν ἔργων προΐστασθαι1may be careful to engage themselves in good worksಸತ್ಕಾರ್ಯಗಳನ್ನು ಮಾಡಲು ಜಾಗರೂಕರಾಗಿ ಸಿದ್ಧರಿರಬೇಕು
122TIT39tzh90Connecting Statement:ತೀತನನ್ನು ಏನನ್ನು ದೂರವಿಡಬೇಕು ಮತ್ತು ವಿಶ್ವಾಸಿಗಳ ಮಧ್ಯೆ ವಿವಾದವನ್ನು ಉಂಟುಮಾಡುವವರೊಂದಿಗೆ ಹೇಗೆ ವರ್ತಿಸಬೇಕು ಎಂದು ಪೌಲನು ವಿವರಿಸುತ್ತಾನೆ.
123TIT39xnf9μωρὰς ζητήσεις1foolish debatesಪ್ರಾಮುಖ್ಯ ಇಲ್ಲದಿರುವ ವಿಷಯಗಳ ಕುರಿತಾದ ವಾದ ವಿವಾದಗಳನ್ನು
124TIT39qk66γενεαλογίας1genealogiesಇದು ಕೌಟುಂಬಿಕ ಬಾಂಧವ್ಯದ ಸಂಬಂಧಗಳ ಕುರಿತಾದ ಅಧ್ಯಯನವಾಗಿದೆ. ತೀತನ ಪತ್ರಿಕೆಯ ಪೀಠಿಕೆಯನ್ನು ನೋಡಿರಿ.
125TIT39xu7fἔρεις1strifeವಾದ ವಿವಾದಗಳು ಅಥವಾ ಕಚ್ಚಾಟಗಳು
126TIT39ky3nνομικὰς1the lawಮೋಶೆಯ ಧರ್ಮಶಾಸ್ತ್ರದ ಕುರಿತಾದ
127TIT310x3fhἄνθρωπον ... παραιτοῦ1Reject anyoneಭಿನ್ನಭೇದಗಳನ್ನು ಉಂಟುಮಾಡುವ ವ್ಯಕ್ತಿಯಿಂದ ದೂರವಿರು
128TIT310xzx1μετὰ μίαν καὶ δευτέραν νουθεσίαν1after one or two warningsಒಬ್ಬ ವ್ಯಕ್ತಿಯನ್ನು ಒಂದು ಅಥವಾ ಎರಡುಸಲ ಎಚ್ಚರಿಸಿದ ನಂತರ
129TIT311r7pcὁ τοιοῦτος1such a personಅಂತಹ ವ್ಯಕ್ತಿ
130TIT311inh5ಫಿಗ್ಸ್-ರೂಪಕἐξέστραπται1has turned from the right wayತಪ್ಪಾದ ಕಾರ್ಯಗಳನ್ನು ಮಾಡಲು ನಿರ್ಧರಿಸುವ ವ್ಯಕ್ತಿಯ ಬಗ್ಗೆ ಪೌಲನು ಮಾತನಾಡುವಾಗ, ಆ ವ್ಯಕ್ತಿಯು ತಪ್ಪಾದ ಹಾದಿಯಲ್ಲಿ ನಡೆಯುವುದಕ್ಕಾಗಿ ಸರಿಯಾದ ಮಾರ್ಗವನ್ನು ತೊರೆದುಬಿಟ್ಟಂಥವನಾಗಿದ್ದಾನೆ ಎಂಬಂತೆ ಮಾತನಾಡುತ್ತಾನೆ. (ನೋಡಿರಿ: \[\[rc://kn/ta/man/translate/figs-metaphor\]\])
131TIT311p81kὢν αὐτοκατάκριτος1condemns himselfತನ್ನ ಮೇಲೆಯೇ ನ್ಯಾಯತೀರ್ಪನ್ನು ಬರಮಾಡಿಕೊಳ್ಳುತ್ತಿದ್ದಾನೆ
132TIT312z7i40Connecting Statement:ಕ್ರೇತಾ ದ್ವೀಪದಲ್ಲಿ ಹಿರಿಯರನ್ನು ನೇಮಿಸಿದ ನಂತರ ಏನು ಮಾಡಬೇಕು ಎಂದು ತೀತನಿಗೆ ಹೇಳುತ್ತಾ ಮತ್ತು ಅವನೊಂದಿಗಿದ್ದ ಎಲ್ಲರಿಗೂ ವಂದನೆಗಳನ್ನು ಹೇಳುತ್ತಾ ಈ ಪತ್ರಿಕೆಯನ್ನು ಪೌಲನು ಮುಕ್ತಾಯಗಳಿಸುತ್ತಾನೆ.
133TIT312mba6ὅταν πέμψω1When I sendನಾನು ಕಳುಹಿಸಿದ ಮೇಲೆ
134TIT312knt1σπούδασον ἐλθεῖν1hurry and comeಬೇಗ ಬಾ
135TIT312xy30σπούδασον1hurryThe verb is singular, directed at Titus alone. Artemas or Tychicus would stay in Crete, probably to take Titus place.
136TIT312gdw9παραχειμάσαι1spend the winterಚಳಿಗಾಲದಲ್ಲಿ ಉಳಿದುಕೊಳ್ಳಲು
137TIT313a46fಭಾಷಾಂತರ-ಹೆಸರುಗಳುΖηνᾶν1Zenasಇವುಗಳು ವ್ಯಕ್ತಿಗಳ ಹೆಸರುಗಳಾಗಿವೆ (ನೋಡಿರಿ: \[\[rc://kn/ta/man/translate/translate-names\]\])
138TIT313j496σπουδαίως πρόπεμψο1Do everything you can to sendಕಳುಹಿಸುವದರಲ್ಲಿ ತಡಮಾಡಬೇಡ
139TIT313s757καὶ Ἀπολλῶν1and Apollosಮತ್ತೂ ಅಪೋಲ್ಲೋಸನನ್ನು ಸಹ
140TIT313xy31figs-doublenegativesἵνα μηδὲν αὐτοῖς λείπῃ1so that they lack nothingThis can be stated positively: “so that they have everything that they need” (See: [[rc://en/ta/man/translate/figs-doublenegatives]])
141TIT314v7wg0Connecting Statement:ಎಲ್ಲಾ ವಿಶ್ವಾಸಿಗಳು ಅಗತ್ಯವಿರುವವರಿಗೆ ಒದಗಿಸುವುದು ಮುಖ್ಯ ಎಂದು ಪೌಲನು ವಿವರಿಸುತ್ತಾನೆ.
142TIT314fw98οἱ ἡμέτεροι1Our peopleಪೌಲನು ಕ್ರೇತದಲ್ಲಿರುವ ವಿಶ್ವಾಸಿಗಳನ್ನು ಸೂಚಿಸುತ್ತಿದ್ದಾನೆ. ಪರ್ಯಾಯ ಭಾಷಾಂತರ: “ನಮ್ಮ ಸ್ವಂತ ಜನರು”
143TIT314xy33figs-inclusiveοἱ ἡμέτεροι1our ownHere **our** includes Paul and Titus. The form should be either dual or inclusive.
144TIT314tn24εἰς τὰς ἀναγκαίας χρείας1that provide for urgent needsಅದು ಅತ್ಯಗತ್ಯವಾದ ವಸ್ತುಗಳ ಕೊರತೆಯಿರುವ ಜನರಿಗೆ ಸಹಾಯ ಮಾಡಲು ಶಕ್ತರನ್ನಾಗಿಸುತ್ತದೆ
145TIT314xy32figs-doublenegativesἵνα μὴ ὦσιν ἄκαρποι1in order not to be unfruitfulThis can be stated positively: “in this way they will be fruitful” or “in this way they will be productive” (See: [[rc://en/ta/man/translate/figs-doublenegatives]])
146TIT315j3y20General Information:Paul ends his letter to Titus.
147TIT315k1saοἱ μετ’ ἐμοῦ πάντες1All those who are with me“All the people who are with me” or “all of the believers who are here with me”
148TIT315abciἀσπάζονταί σε1greet youHere **you** is singularthis is a personal greeting to Titus.
149TIT315kx83ἡ χάρις μετὰ πάντων ὑμῶν1Grace be with all of youThis was a common Christian greeting. Alternate translation: “May Gods grace be with you” or “I ask that God will be gracious to all of you”
150TIT315xy34ὑμῶν1youHere **you** is plural. This blessing is for Titus and all of the believers there in Crete.
151TIT315f4vcτοὺς φιλοῦντας ἡμᾶς ἐν πίστει1those who love us in faithPossible meanings are (1) “the believers who love us” or (2) “the believers who love us because we share the same belief”.
152TIT315xy35figs-inclusiveἡμᾶς1usHere **us** is probably exclusive and refers to Paul and the group of Christians with him. Paul is sending greetings from this group to the group of Christians that is with Titus on Crete.