translationCore-Create-BCS_.../translate/translate-kinship/01.md

13 KiB

ವಿವರಣೆ

ರಕ್ತಸಂಬಂಧ ಸೂಚಿಸುವ ಪದಗಳನ್ನು ಕುಟುಂಬದಲ್ಲಿ ಪರಸ್ಪರ ಸಂಬಂಧಿಸಿದ ಜನರ ಕೌಟುಂಬಿಕ ಸಂಬಂಧಗಳನ್ನು ವಿವರಿಸಲು ಬಳಸುತ್ತೇವೆ. ನಿರ್ದಿಷ್ಟತೆಯಲ್ಲಿ ಈ ಪದಗಳು ಭಾಷೆಯಿಂದ ಭಾಷೆಗೆ ವ್ಯಾಪಕವಾಗಿ ಬದಲಾಗುತ್ತವೆ. ಅವು (ಪಾಶ್ಚಿಮಾತ್ಯ) ವಿಭಕ್ತ ಅಥವಾ ಹತ್ತಿರದ ಕುಟುಂಬದಿಂದ (ತಂದೆ-ಮಗ, ಪತಿ-ಪತ್ನಿ) ಇತರ ಸಂಸ್ಕೃತಿಗಳಲ್ಲಿರುವಂತೆ ವಿಶಾಲ ಕುಲ ಸಂಬಂಧಗಳವರೆಗೆ ಇರುತ್ತವೆ.

ಕಾರಣ ಇದೊಂದು ಭಾಷಾಂತರ ಸಮಸ್ಯೆ

ಭಾಷೆಯ ಆಧಾರದ ಮೇಲೆ ಅನುವಾದಕರು ನಿಖರವಾದ ರಕ್ತಸಂಬಂಧವನ್ನು ನಿಯೋಜಿಸಲು ನಿರ್ದಿಷ್ಟ ಪದಗಳನ್ನು ಬಳಸಬೇಕಾಗಬಹುದು. ಕೆಲವು ಭಾಷೆಗಳಲ್ಲಿ ಒಡಹುಟ್ಟಿದವರ ಜನನ ಕ್ರಮದ ಆಧಾರದ ಮೇಲೆ ವಿಭಿನ್ನ ಪದವನ್ನು ಬಳಸಬಹುದು. ಇನ್ನು ಕೆಲವು ಕಡೆ (ತಂದೆಯ ಅಥವಾ ತಾಯಿಯ) ಕುಟುಂಬದ ಸಂಬಂಧಿ, ವಯಸ್ಸು, ವೈವಾಹಿಕ ಸ್ಥಿತಿ ಇತ್ಯಾದಿಗಳು ಪದವನ್ನು ನಿರ್ಧರಿಸಬಹುದು. ಮಾತನಾಡುತ್ತಿರುವ ಮತ್ತು/ಅಥವಾ ಸಂಬೋಧಿಸುತ್ತಿರುವವರ ಲಿಂಗದ ಆಧಾರದ ಮೇಲೆ ವಿಭಿನ್ನ ಪದಗಳನ್ನು ಬಳಸಬಹುದು. ಸರಿಯಾದ ಪದವನ್ನು ಕಂಡುಹಿಡಿಯಲು ಸತ್ಯವೇದದಲ್ಲಿರುವ ಇಬ್ಬರು ಸಂಬಂಧಿತ ಜನರ ನಡುವಿನ ನಿಖರವಾದ ಸಂಬಂಧವನ್ನು ಭಾಷಾಂತರಕಾರರು ಖಚಿತಪಡಿಸಿಕೊಳ್ಳಬೇಕಾಗಬಹುದು. ಕೆಲವೊಮ್ಮೆ ಈ ಪದಗಳನ್ನು ಸ್ಥಳೀಯರಿಗೆ ಸಹ ನೆನಪಿಟ್ಟುಕೊಳ್ಳುವುದು ಕಷ್ಟಕರವಾಗಿರುತ್ತದೆ ಮತ್ತು ಅನುವಾದಕರು ಸರಿಯಾದ ಪದವನ್ನು ಕಂಡುಹಿಡಿಯಲು ಸಮುದಾಯದ ಸಹಾಯ ಪಡೆಯಬೇಕಾಗಬಹುದು. ಇನ್ನೊಂದು ಜಟಿಲವಾದ ವಿಷಯವೆಂದರೆ, ಸತ್ಯವೇದವು ಭಾಷಾಂತರಿಸಲ್ಪಡುವ ಭಾಷೆಯಲ್ಲಿ ಸಂಬಂಧಗಳ ಬಗ್ಗೆ ಸರಿಯಾದ ಪದವನ್ನು ನಿರ್ಧರಿಸಲು ಸಾಕಷ್ಟು ಮಾಹಿತಿಯನ್ನು ಭಾಷಾಂತರಕಾರರಿಗೆ ನೀಡದಿರಬಹುದು. ಈ ಸಂದರ್ಭದಲ್ಲಿ, ಅನುವಾದಕರು ಹೆಚ್ಚು ಸಾಮಾನ್ಯ ಪದವನ್ನು ಬಳಸಬೇಕಾಗುತ್ತದೆ ಅಥವಾ ಲಭ್ಯವಿರುವ ಸೀಮಿತ ಮಾಹಿತಿಯ ಆಧಾರದ ಮೇಲೆ ತೃಪ್ತಿಕರವಾದ ಪದವನ್ನು ಆರಿಸಿಕೊಳ್ಳಬೇಕು.

ಕೆಲವೊಮ್ಮೆ ರಕ್ತಸಂಬಂಧ ಪದಗಳಂತೆ ತೋರುವ ಪದಗಳನ್ನು ರಕ್ತಸಂಬಂಧವಿಲ್ಲದ ಜನರಿಗೆ ಬಳಸಲಾಗುತ್ತದೆ. ಉದಾಹರಣೆಗೆ, ವಯಸ್ಸಾದ ವ್ಯಕ್ತಿಯು ತನಗಿಂತ ಕಿರಿಯ ವಯಸ್ಸಿನ ಪುರುಷ ಅಥವಾ ಮಹಿಳೆಯನ್ನು "ನನ್ನ ಮಗ" ಅಥವಾ "ನನ್ನ ಮಗಳು" ಎಂದು ಉಲ್ಲೇಖಿಸಬಹುದು.

ಬೈಬಲಿನಿಂದ ಉದಾಹರಣೆಗಳು

ಯೆಹೋವನು ಕಾಯಿನನನ್ನು, "ನಿನ್ನ ತಮ್ಮನಾದ ಹೇಬೆಲನು ಎಲ್ಲಿ?" ಎಂದು ಕೇಳಲು ಅವನು, "ನಾನರಿಯೆ. ನನ್ನ ತಮ್ಮನನ್ನು ಕಾಯುವವನು ನಾನೋ? ಎಂದು ಉತ್ತರಕೊಟ್ಟನು.” (Genesis 4:9 ULT)

ಹೇಬೆಲನು ಕಾಯಿನನ ಕಿರಿಯ ಸಹೋದರನಾಗಿದ್ದನು.

ಹೀಗಿರುವದರಿಂದ ಯಾಕೋಬನು ರಾಹೇಲಳನ್ನೂ ಲೇಯಳನ್ನೂ ತಾನು ಆಡುಕುರಿಗಳನ್ನು ಮೇಯಿಸುತ್ತಿದ್ದ ಅಡವಿಗೆ ಕರಸಿಕೊಂಡು ಅವರಿಗೆ ಹೇಳಿದ್ದೇನಂದರೆ, "ನಿಮ್ಮ ತಂದೆಯ ಮುಖಭಾವವು ನನ್ನ ವಿಷಯದಲ್ಲಿ ಮೊದಲಿದ್ದಂತೆ ಇಲ್ಲವೆಂದು ತೋರಬಂತು, ಆದರೂ ನನ್ನ ತಂದೆಯ ದೇವರು ನನ್ನೊಂದಿಗೆ ಇದ್ದಾನೆ." (Genesis 31:4-5 ULT)

ಯಾಕೋಬನು ಇಲ್ಲಿ ತನ್ನ ಮಾವನನ್ನು ಉಲ್ಲೇಖಿಸುತ್ತಿದ್ದಾನೆ. ಕೆಲವು ಭಾಷೆಗಳಲ್ಲಿ ಮಾವನಿಗೆ ಒಂದು ನಿರ್ದಿಷ್ಟ ಪದವಿರಬಹುದು, ಆದಾಗ್ಯೂ ಈ ಸಂದರ್ಭದಲ್ಲಿ ನಿಮ್ಮ ತಂದೆ ಎಂಬ ಪದವನ್ನು ಉಳಿಸಿಕೊಳ್ಳುವುದು ಉತ್ತಮ ಏಕೆಂದರೆ ಲಾಬಾನನಿಂದ ತನ್ನನ್ನು ದೂರವಿಡಲು ಯಾಕೋಬನು ಅದನ್ನು ಬಳಸುತ್ತಿರಬಹುದು.

ಮೋಶೆ ತನ್ನ ಮಾವನಾಗಿರುವ ವಿುದ್ಯಾನ್ಯರ ಆಚಾರ್ಯನಾದ ಇತ್ರೋನನ ಮಂದೆಯನ್ನು ಮೇಯಿಸುತ್ತಿರುವಾಗ (Exodus3:1a ULT)

ಹಿಂದಿನ ನಿದರ್ಶನಕ್ಕಿಂತ ಭಿನ್ನವಾಗಿ ನಿಮ್ಮ ಭಾಷೆಯಲ್ಲಿ ಮಾವನಿಗೆ ಬೇರೆ ಪದವಿದ್ದರೆ, ಅದನ್ನು ಬಳಸಲು ಇದು ಉತ್ತಮ ಸ್ಥಳವಾಗಿದೆ.

ಕೂಸಿಗೆ ಏನಾಗುವದೆಂದು ತಿಳುಕೊಳ್ಳುವದಕ್ಕೆ ಅದರ ಅಕ್ಕ ಸ್ವಲ್ಪ ದೂರದಲ್ಲಿ ನಿಂತುಕೊಂಡಳು. (Exodus 2:4 ULT)

ನಮಗೆ ಮೋಶೆಯ ಅಕ್ಕ ಮಿರಿಯಮ್ ಎಂದು ಈ ಸಂದರ್ಭದಿಂದ ತಿಳಿದು ಬರುತ್ತದೆ. ಕೆಲವು ಭಾಷೆಗಳಲ್ಲಿ ಇದಕ್ಕೆ ನಿರ್ದಿಷ್ಟ ಪದ ಬೇಕಾಗಬಹುದು. ಇತರರಲ್ಲಿ, ಕಿರಿಯ ಒಡಹುಟ್ಟಿದವನು ತನ್ನ ಸಹೋದರಿಯನ್ನು ಸಂಬೋಧಿಸುವಾಗ ಮತ್ತು/ಅಥವಾ ಉಲ್ಲೇಖಿಸುತ್ತಿರುವಾಗ ಮಾತ್ರ ಅಕ್ಕ ಎಂಬ ಪದವನ್ನು ಬಳಸಬಹುದು.

ನೊವೊವಿುಯು ಮೋವಾಬ್ ದೇಶದಿಂದ ಸ್ವದೇಶಕ್ಕೆ ಹೋಗಬೇಕೆಂದು ಸೊಸೆಯರೊಡನೆ ಹೊರಟಳು. (Ruth 1:6a ULT)

ಒರ್ಫಾ ಮತ್ತು ರೂತಳು ನೊವೊವಿುಯ ಸೊಸೆಯಂದಿರು.

ನೊವೊವಿುಯು ರೂತಳಿಗೆ, "ಇಗೋ, ನಿನ್ನ ಓರಗಿತ್ತಿಯು ತಿರಿಗಿ ತನ್ನ ಜನರ ಬಳಿಗೂ ದೇವತೆಗಳ ಬಳಿಗೂ ಹೋಗುತ್ತಾಳೆ." (Ruth 1:15 ULT)

ಓರ್ಫಾ ರೂತಳ ಗಂಡನ ಸಹೋದರನ ಹೆಂಡತಿ. ಅವಳು ರೂತಳ ಗಂಡನ ಸಹೋದರಿಯಾಗಿದ್ದಿದ್ದರೆ ನಿಮ್ಮ ಭಾಷೆಯಲ್ಲಿ ಇದಕ್ಕೆ ವಿಭಿನ್ನ ಪದವಿದ್ದಿರಬಹುದು.

ಆಗ ಬೋವಜನು ರೂತಳಿಗೆ, "ನನ್ನ ಮಗಳೇ, ಕೇಳು” (Ruth 2:8a ULT)

ಬೋವಜನು ರೂತಳ ತಂದೆಯಲ್ಲ; ಅವನು ತನಗಿಂತ ಕಿರಿಯ ಮಹಿಳೆಯನ್ನು ಉದ್ದೇಶಿಸಿ ಮಾತನಾಡಲು ಈ ಪದವನ್ನು ಬಳಸುತ್ತಿದ್ದಾನೆ.

ಮತ್ತು ನಿನ್ನ ಬಂಧುವಾದ ಎಲಿಸಬೇತಳಿದ್ದಾಳಲ್ಲಾ, ಆಕೆ ಸಹ ಮುಪ್ಪಿನವಳಾದರೂ ಗರ್ಭಿಣಿಯಾಗಿದ್ದಾಳೆ; ಆಕೆಯ ಗರ್ಭದಲ್ಲಿ ಗಂಡುಮಗುವದೆ; ಬಂಜೆಯೆನಿಸಿಕೊಂಡಿದ್ದ ಆಕೆಗೆ ಇದೇ ಆರನೆಯ ತಿಂಗಳು. (Luke 1:36 ULT)

KJV ಇದನ್ನು ಸೋದರ ಸಂಬಂಧಿ ಎಂದು ಅನುವಾದಿಸಿದ್ದರಿಂದ, ಈ ಪದವು ಕೇವಲ ಸಂಬಂಧಿತ ಮಹಿಳೆ ಎಂದರ್ಥ ನೀಡುತ್ತದೆ.

ಅನುವಾದ ತಂತ್ರಗಳು

(1) ನಿರ್ದಿಷ್ಟಪಡಿಸಿದ ನಿಖರವಾದ ಸಂಬಂಧವನ್ನು ಕಂಡುಹಿಡಿಯಿರಿ ಮತ್ತು ನಿಮ್ಮ ಭಾಷೆಯಲ್ಲಿ ಬಳಸುವ ಪದವನ್ನು ಬಳಸಿಕೊಂಡು ಅನುವಾದಿಸಿರಿ.

(2) ನಿಮ್ಮ ಭಾಷೆಯಷ್ಟು ಸ್ಪಷ್ಟವಾಗಿ ಸಂಬಂಧವನ್ನು ವಾಕ್ಯಭಾಗ ನಿರ್ದಿಷ್ಟಪಡಿಸದಿದ್ದರೆ, ಈ ಎರಡೂ:

(a) ಹೆಚ್ಚು ಸಾಮಾನ್ಯ ಪದವನ್ನೇ ಇತ್ಯರ್ಥಪಡಿಸಿ.

(b) ನಿಮ್ಮ ಭಾಷೆಗೆ ಅಗತ್ಯವಿದ್ದರೆ, ಹೆಚ್ಚು ಸರಿಯಾಗಿರಬಹುದಾದ ನಿರ್ದಿಷ್ಟ ಪದವನ್ನು ಆಯ್ಕೆ ಮಾಡಿ ಬಳಸಿ.

ಅನ್ವಯಿಸಲಾದ ಅನುವಾದ ತಂತ್ರಗಳು

ಇದು ಇಂಗ್ಲಿಷಿನ ಸಮಸ್ಯೆಯಲ್ಲ, ಆದ್ದರಿಂದ ಈ ಕೆಳಗಿನ ದೃಷ್ಟಾಂತಗಳು ಇತರ ಭಾಷೆಗಳ ಮೇಲೆ ಚಿತ್ರಿಸಿವೆ.

ಕೊರಿಯನ್ ಭಾಷೆಯಲ್ಲಿ, ಸಹೋದರ ಮತ್ತು ಸಹೋದರಿಗೆ ಹಲವಾರು ಪದಗಳಿವೆ, ಅವುಗಳ ಬಳಕೆಯು ಮಾತನಾಡುತ್ತಿರುವ ವ್ಯಕ್ತಿಯ (ಅಥವಾ ಉಲ್ಲೇಖಿತನ) ಲಿಂಗ ಮತ್ತು ಜನನ ಕ್ರಮವನ್ನು ಅವಲಂಬಿಸಿರುತ್ತದೆ. ಇದರ ಉದಾಹರಣೆಗಳನ್ನು biblegateway.com ಕೊರಿಯನ್ ಲಿವಿಂಗ್ ಬೈಬಲ್ ನಲ್ಲಿ ಕಾಣಬಹುದು.

ಆದಿಕಾಂಡ 30:1 ರಾಹೇಲಳು ತನ್ನ "eonni" ಬಗ್ಗೆ ಅಸೂಯೆ ಪಡುತ್ತಾಳೆ, ಇದು ಒಬ್ಬ ಮಹಿಳೆ ತನ್ನ ಅಕ್ಕನಿಗೆ ಬಳಸುವ ಪದವಾಗಿದೆ.

ಆದಿಕಾಂಡ 34:31 ಸಿಮಿಯೋನ್ ಮತ್ತು ಲೇವಿ, ದೀನಾಳನ್ನು "nui" ಎಂದು ಉಲ್ಲೇಖಿಸುತ್ತಾರೆ, ಇದು ಸಹೋದರಿಗೆ ಉಪಯೋಗಿಸುವ ಸಾಮಾನ್ಯ ಪದವಾಗಿದೆ.

ಆದಿಕಾಂಡ 37:16 ಯೋಸೇಫನು ತನ್ನ ಸಹೋದರರನ್ನು "hyeong" ಎಂದು ಉಲ್ಲೇಖಿಸುತ್ತಾನೆ, ಇದು ಒಬ್ಬ ಮನುಷ್ಯನು ತನ್ನ ಅಣ್ಣನಿಗೆ (ಅಣ್ಣಂದಿರಿಗೆ) ಬಳಸುವ ಪದವಾಗಿದೆ.

ಆದಿಕಾಂಡ 45:12 ಯೋಸೇಫನು ಬೆನ್ಯಾಮೀನನನ್ನು "dongsaeng" ಎಂದು ಉಲ್ಲೇಖಿಸುತ್ತಾನೆ, ಅಂದರೆ ಒಡಹುಟ್ಟಿದವನು ಎಂದರ್ಥ, ಸಾಮಾನ್ಯವಾಗಿ ಚಿಕ್ಕವನು.

ರಷ್ಯನ್ ಭಾಷೆಯಲ್ಲಿ, in-law ಪದಗಳು ಕ್ಲಿಷ್ಟಕರವಾಗಿವೆ. ಉದಾಹರಣೆಗೆ, "nevéstka" ಎಂಬುದು ಸಹೋದರನ (ಅಥವಾ ಮೈದುನನ) ಹೆಂಡತಿಗೆ ಬಳಸುವ ಪದವಾಗಿದೆ; ಒಬ್ಬ ಮಹಿಳೆ ತನ್ನ ಸೊಸೆಗೆ ಅದೇ ಪದವನ್ನು ಬಳಸುತ್ತಾಳೆ, ಆದರೆ ಅವಳ ಪತಿ ಅದೇ ಸೊಸೆಯನ್ನು "snoxá" ಎಂದು ಕರೆಯುತ್ತಾನೆ. ರಷ್ಯನ್ ಸಿನೋಡ್ ಆವೃತ್ತಿಯಿಂದ ಉದಾಹರಣೆಗಳು.

ಆದಿಕಾಂಡ 38:25 ತಾಮರಳು ತನ್ನ ಮಾವ ಯೆಹೂದನಿಗೆ ಒಂದು ಸಂದೇಶವನ್ನು ಕಳುಹಿಸುತ್ತಾಳೆ. ಬಳಸಲಾದ ಪದವು "svekor" ಆಗಿದೆ. ಇದನ್ನು ಒಬ್ಬ ಮಹಿಳೆಯ ಗಂಡನ ತಂದೆಗೆ ಬಳಸಲಾಗುತ್ತದೆ.

ವಿಮೋಚನಕಾಂಡ 3:1 ಮೋಶೆಯು ತನ್ನ ಮಾವನ ಹಿಂಡನ್ನು ನೋಡುತ್ತಿದ್ದಾನೆ. ಬಳಸಿದ ಪದವು "test" ಆಗಿದೆ. ಇದನ್ನು ಒಬ್ಬ ಪುರುಷನ ಹೆಂಡತಿಯ ತಂದೆಗೆ ಬಳಸಲಾಗುತ್ತದೆ.